ಒಂದೇ ಒಂದು ಸಿನಿಮಾ ಮೂಲಕ ಒಂದಿಡೀ ಕರ್ನಾಟಕವನ್ನೇ ಆವರಿಸಿಕೊಂಡಿದ್ದಾಕೆ (rashmika mandanna) ರಶ್ಮಿಕಾ ಮಂದಣ್ಣ. ನಮ್ಮ (rakshith shetty)  ರಕ್ಷಿತ್ ಶೆಟ್ಟರು ತಮ್ಮ (kirik party) ಕಿಕಿರಿಕ್ ಪಾರ್ಟಿ ಚಿತ್ರದಲ್ಲಿ ಈ ಹುಡುಗಿಯನ್ನು ನಾಯಕಿನನ್ನಾಗಿಸಿದ್ದೇ, ಆ ಚಿತ್ರವೂ ಗೆದ್ದಿತ್ತು. ಅವರಿಬ್ಬರ ನಡುವೆ ಪ್ರೀತಿಯೂ ಮೊಳೆತುಕೊಂಡಿತ್ತು. ಆ ನಂತರ ಎಲ್ಲವನ್ನೂ ಕಳಚಿಕೊಂಡಂತೆ ತೆಲುಗಿಗೆ ಹಾರಿದ್ದ (rashmika mandanna) ರಶ್ಮಿಕಾ, ಬಳಿಕ ತಮಿಳಿಗೆ ಹೋಗಿ, ಬಾಲಿವುಡ್ಡಿಗೂ (bollywood) ಹಾರಿ ಇದೀಗ ಏಕಾಏಕಿ ಹಿಮಾಲಯದತ್ತ ಮುಖ ಮಾಡಿ ನಿಂತಂತಿದ್ದಾಳೆ. ಒಂದು ಹಂತದಲ್ಲಿ ಎಲ್ಲವನ್ನೂ ಲೈಟ್ ಆಗಿ ತೆಗೆದುಕೊಂಡು ಪದೇ ಪದೆ ವಿವಾದಳನ್ನು ಮೈ ಮೇಲೆಳೆದುಕೊಳ್ಳುತ್ತಿದ್ದಾಕೆ ರಶ್ಮಿಕಾ. ಇದೀಗ ಇದ್ದಕ್ಕಿಂದಂತೆ ಆಕೆಯ ಮಾತುಗಳಲ್ಲಿ ಪ್ರೌಢಿಮೆ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿ ಒಂದು ಬಗೆಯ ವೈರಾಗ್ಯ, ಅಧ್ಯಾತ್ಮದ ಸೆಳೆತಗಳೆಲ್ಲವೂ ನಿಚ್ಛಳವಾಗಿಯೇ ಗೋಚರಿಸಲಾರಂಭಿಸಿವೆ!

ಬದುಕಿನ ಯಾವ್ಯಾವ ತಿರುವುಗಳಲ್ಲಿ, ಎಂತೆಂಥಾ ಭಾವಗಳು ಎದೆತಬ್ಬುತ್ತವೋ… ಹೇಳಲು ಬರುವುದಿಲ್ಲ. ಒಮ್ಮೊಮ್ಮೆ ಕಾಡುವ ಬಡತನ ಮಾತ್ರವಲ್ಲ; ಸುತ್ತ ಕಾಲುಮುರಿದು ಬಿದ್ದಂತಿರುವ ಶ್ರೀಮಂತಿಕೆ, ಹೆಸರು, ಖ್ಯಾತಿಯೂ ವೈರಾಗ್ಯದ ಸೆಳೆತಕ್ಕೆ ಗುರಿ ಮಾಡಿಬಿಡಬಹುದು. ಹೀಗೆ ಖ್ಯಾತಿಯ ಉತ್ತುಂಗಕ್ಕೇರಿ ಅಧ್ಯಾತ್ಮದ ಸೆಳೆತಕ್ಕೆ ಬಿದ್ದ, ಸನ್ಯಾಸ ಮಾರ್ಗದಲ್ಲಿ ಹೊರಟುಬಿಟ್ಟ ಅನೇಕ ಉದಾಹರಣೆಗಳಿದ್ದಾವೆ. ಸದ್ಯಕ್ಕೆ ರಶ್ಮಿಕಾ ಕೂಡಾ ಆ ಸ್ಟೇಜಿನಲ್ಲಿದ್ದಾಳೆ ಅಂದರೆ ಅದು ಖಂಡಿತವಾಗಿಯೂ ಉತ್ಪ್ರೇಕ್ಷೆಯಾಗಿ ಬಿಡುತ್ತದೆ. ಸದ್ಯದ ಮಟ್ಟಿಗೆ ಅಧ್ಯಾತ್ಮವೆಂಬುದು ರಶ್ಮಿಕಾಳನ್ನು ಆ ಉತ್ತುಂಗಕ್ಕೇರಿಸುತ್ತೆಂದು ಕೊಂಡರೆ ಅದಕ್ಕಿಂತಲೂ ಮೂರ್ಖತನ ಬೇರೊಂದಿಲ್ಲ.

ಆದರೆ, ರಶ್ಮಿಕಾ ಮಂದಣ್ಣ ಸದ್ಯದ ಪರಿಸ್ಥಿತಿಯಲ್ಲಿ ಡಿಸ್ಟರ್ಬ್ ಆಗಿರೋದಂತೂ ಸತ್ಯ. ಹಾಗೆ ನೋಡಿದರೆ, ರಕ್ಷಿತ್ ಶೆಟ್ಟಿ ಜೊತೆಗಿನ ರಿರೇಷನ್ ಶಿಪ್ ಕಡಿದುಕೊಂಡ ನಂತರ ಆಕೆಯ ಮೇಲಾಗಿರೋ ಪ್ರಹಾರಗಳು ಸಾಮಾನ್ಯದ್ದೇನಲ್ಲ. ಸೆಲೆಬ್ರಿಟಿಗಳಿಗೆ ಅದೆಲ್ಲ ಮಾಮೂಲು ಅಂದುಕೊಂಡರೂ, ತೀರಾ ವೈಯಕ್ತಿಕ ಪ್ರಹಾರಗಳನ್ನ ಅರಗಿಸಿಕೊಳ್ಳುವುದು ಸಲೀಸಿನ ಸಂಗತಿಯೇನಲ್ಲ. ಅದರಲ್ಲಿಯೂ ವಿನಾ ಕಾರಣ ಮನೆಮಂದಿಯನ್ನೆಲ್ಲ ಎಳೆದು ತಂದು ಅಪಪ್ರಚಾರ ನಡೆಸಿದರಂತೂ ಎಂಥಾ ಗಟ್ಟಿಗರಾದರೂ ಅದುರಿ ಬಿಡುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಕೂಡಾ ಅದೆಲ್ಲದರಿಂದಾಗಿ ಮಾನಸಿಕವಾಗಿ ಒಂದಷ್ಟು ಕುಗ್ಗಿ ಹೋದಂತಿದೆ. ಕೆಲ ಸಂದರ್ಶನಗಳಲ್ಲಿ ಅದು ದಟ್ಟವಾಗಿಯೇ ಕಾಣಿಸುತ್ತಿದೆ.

ತೆಲುಗು ಚಿತ್ರರಂಗಕ್ಕೆ ಅಡಿಯಿರಿಸಿದ ನಂತರ ರಶ್ಮಿಕಾ ಒಂದಿಡೀ ಚಿತ್ರರಂಗವನ್ನೇ ಆವರಿಸಿಕೊಂಡಿದ್ದಳು. ಆ ಹಠಾತ್ ಯಶದ ಅಮಲನ್ನು ಸರಿದೂಗಿಸಿಕೊಳ್ಳುವ ಸಾಮರ್ಥ ಈ ಹುಡುಗಿಗಿರಲಿಲ್ಲ. ಯಾರಾದರೂ ಅನುಭವಿ ಮೆಂಟರ್‍ಗಳನ್ನು ನೇಮಿಸಿಕೊಂಡು, ಒಂದು ಪರಿಸ್ಥಿತಿಯನ್ನು ಸಾರ್ವಜನಿಕವಾಗಿ ನಿಭಾಯಿಸೋ ಕಲೆ ಸಿದ್ಧಿಸಿಕೊಂಡಿದ್ದರೆ ರಶ್ಮಿಕಾಗೆ ಇಂಥಾ ಪರಿಸ್ಥಿತಿ ಬರುತ್ತಿರಲಿಲ್ಲ. ವಿವಾದವೊಂದಕ್ಕೆ ಪ್ರತಿಕ್ರಿಯಿಸಿ ಮತ್ತೊಂದು ವಿವಾದವೆಬ್ಬಿಸುವ ಮೂಲಕ ಆಕೆಯ ನೆಮ್ಮದಿ ಕೆಟ್ಟು ನಿಂತಿದೆ. ಅದು ರಶ್ಮಿಕಾಳ ಎಳಸುತನದ ಪ್ರಭಾವ. ಈಗಂತೂ ವೃತ್ತಿ ಬದುಕಿನ ವಿಚಾರದಲ್ಲಿಯೂ ಆಕೆಯ ಮುಂದೆ ಸವಾಲುಗಳಿದ್ದಾವೆ. ತೀವ್ರವಾದ ಸ್ಪರ್ಧೆ ಒಡ್ಡುವ ನಟಿಯರು ಹುಟ್ಟಿಕೊಂಡಿದ್ದಾರೆ. ಇದೆಲ್ಲವೂ ರಶ್ಮಿಕಾಳನ್ನು ಕೊಂಚ ಆಧ್ಯಾತ್ಮದತ್ತ ಗಮನ ಹರಿಸುವಂತೆ ಮಾಡಿದ್ದರೂ ಅಚ್ಚರಿಯೇನಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!