ನ್ಸ್ ಅಂಡ್ ರೋಸಸ್ (guns and roses movie) ಚಿತ್ರದ ಮೂಲಕ ಅಜಾನುಬಾಹು ಅರ್ಜುನ್ (arjun) ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಟೀಸರ್ ನಲ್ಲಿ ಅರ್ಜುನ್ ಪಾತ್ರ ಕಂಡವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದ ಹಿರಿಯ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ (nanda loves nanditha) ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಬಾಲನಟನಾಗಿ ಬಣ್ಣ ಹಚ್ಚಿದ್ದವರು. ಆ ಬಳಿಕ ತಂದೆಯ ಆಣತಿಯಂತೆ ಓದಿನ ಕಡೆ ಗಮನ ಹರಿಸಿದ್ದ ಅರ್ಜುನ್ ಹಲವು ರೀತಿಯಲ್ಲಿ ತಾಲೀಮು ನಡೆಸಿ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡು (guns and roses) ಗನ್ಸ್ ಅಂಡ್ ರೋಸಸ್ ಮೂಲಕ ನಾಯಕ ನಟನಾಗಿದ್ದಾರೆ. ಅಂದಹಾಗೆ, ಈ ಚಿತ್ರ ಜನವರಿ 3ರಂದು ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ತಂದೆಯೇ ಸಿನಿಮಾ ಕ್ಷೇತ್ರದಲ್ಲಿ ಇದ್ದದ್ದರಿಂದ ಆರಂಭದಿಂದಲೂ ಅರ್ಜುನ್ ಪಾಲಿಗೆ ಸಿನಿಮಾ ವಾತಾವರಣ ಸಿಕ್ಕಿತ್ತು. ಸಿನಿಮಾ ಮಂದಿಯ ಸಂಗ, ಶೂಟಿಂಗ್ ಸ್ಪಾಟುಗಳೆಲ್ಲವೂ ಬದುಕಿನ ಭಾಗವಾಗಿತ್ತು. ಈ ಎಲ್ಲ ಕಾರಣಗಳಿಂದ ಸಿನಿಮಾದೆಡೆಗಿನ ಬೆರಗು ಅರ್ಜುನ್ ರೊಳಗೆ ಬಲವಾಗುತ್ತಾ ಸಾಗಿತ್ತು. ತೀರಾ ಎಳೇ ವಯಸ್ಸಿನಿಂದಲೇ ನಟನಾಗುವ ಕನಸು ಅಪ್ರಜ್ಞಾಪೂರ್ವಕವಾಗಿ ಚಿಗುರಲಾರಂಭಿಸಿತ್ತು. ಅದು ಒಂದು ಹಂತಕ್ಕೆ ಸಾಕಾರಗೊಂಡಿದ್ದು ನಂದ ಲವ್ಸ್ ನಂದಿತಾ ಚಿತ್ರದ ಮೂಲಕ. ಆ ಚಿತ್ರಕ್ಕೆ ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದರು. ಅದರಲ್ಲಿ ನಾಯಕ ಲೂಸ್ ಮಾದ ಯೋಗಿಯ ಎಳವೆಯ ಪಾತ್ರ ಅರ್ಜುನ್ ಗೆ ಒಲಿದು ಬಂದಿತ್ತು. ಆ ಮೂಲಕ ಒಂದಷ್ಟು ಮೆಚ್ಚುಗೆಯನ್ನೂ ಕೂಡಾ ಅರ್ಜುನ್ ಗಳಿಸಿಕೊಂಡಿದ್ದರು. ಆ ನಂತರ ಅಜಯ್ ಕುಮಾರ್ ಓದಿನತ್ತ ಮಾತ್ರ ಗಮನ ಹರಿಸುವಂತೆ ಮಗನಿಗೆ ತಾಕೀತು ಮಾಡಿದ್ದರು.

ಈ ನಡುವೆ ಓದೆಲ್ಲ ಮುಗಿಸಿಕೊಂಡ ಮೇಲೂ ನಾಯಕನಾಗಿ ಬಿಡುವ ವಿಪುಲ ಅವಕಾಶಗಳು ಅರ್ಜುನ್ ಪಾಲಿಗಿದ್ದವು. ಆದರೆ, ತಂದೆ ಅಜಯ್ ಮಾತ್ರ ನಟನಾಗಲು ಬೇಕಾದ ಎಲ್ಲ ದಿಕ್ಕಿನಲ್ಲಿಯೂ ಪಳಗಿಕೊಂಡ ನಂತರವಷ್ಟೇ ನಾಯಕನಾಗಲು ಪ್ರಯತ್ನಿಸಬೇಕೆಂದು ಕಟ್ಟುನಿಟ್ಟಾಗಿ ತಾಕೀತು ಮಾಡಿದ್‌ದರಂತೆ. ಅದನ್ನು ಚಾಚೂತಪ್ಪದೆ ಪಾಲಿಸಿದ್ದ ಅರ್ಜುನ್, ಸಿನಿಮಾ ತರಬೇತಿಗೆ ಸೇರಿಕೊಂಡು ಮಾರ್ಷಲ್ ಆರ್ಟ್ಸ್, ಡ್ಯಾನ್ಸ್, ಫೈಟ್, ನಟನೆ ಸೇರಿದಂತೆ ಎಲ್ಲ ತರಬೇತಿಯನ್ನೂ ಪಡೆದುಕೊಂಡಿದ್ದರು. ಆ ನಂತರವೇ ನಾಯಕನಾಗಲು ಪ್ರಯತ್ನಿಸಲಾರಂಭಿಸಿದ್ದ ಅವರಿಗೆ ಗನ್ಸ್ ಅಂಡ್ ರೋಸಸ್ ಮೂಲಕ ಅದು ಕೈಗೂಡಿದೆ.

ಗನ್ಸ್ ಅಂಡ್ ರೋಸಸ್ ಚಿತ್ರದಲ್ಲಿ ಅರ್ಜುನ್ ಗೆ ಸಿಕ್ಕಿರೋ ಪಾತ್ರ ಅಕ್ಷರಶಃ ಸವಾಲಿನದ್ದು. ಕಡಿಮೆ ಮಾತಿಗೆ, ಆಕ್ಟೀವ್ ಆಗಿರುವ ಆ ಪಾತ್ರಕ್ಕೆ ಹಲವು ಶೇಡುಗಳಿವೆ. ಈ ಮೂಲಕವೇ ಸದರಿ ಸಮಾಜದ ಕಠೋರ ವಾಸ್ತವಕ್ಕೆ ಕನ್ನಡಿ ಹಿಡಿದು, ಯುವ ಸದಮುದಾಯವನ್ನು ಸರಿದಿಕ್ಕಿನತ್ತ ಚಲಿಸುವಂತೆ ಪ್ರೇರೇಪಿಸುವ ಈ ಪಾತ್ರ ಅರ್ಜುನ್ ಪಾಲಿಗೆ ಖುಷಿ ಕೊಟ್ಟಿದೆ. ಈಗಾಗಲೇ ಪರಭಾಷಾ ಚಿತ್ರರಂಗದ ವಿತರಕರನೇಕರು ಅರ್ಜುನ್ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಎಲ್ಲ ಭಾಷೆಗಳ ಪ್ರೇಕ್ಷಕರಿಗೂ ಹಿಡಿಸುವಂತೆ ನಟಿಸಿದ್ದಾರೆಂಬ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಂದಹಾಗೆ, ಈ ಸಿನಿಮಾ ಪ್ಯಾನಿಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳಲಿದೆ.

ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಹೆಚ್.ಆರ್ ನಟರಾಜ್ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಙ್ರಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ ೩ರಂದು ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!