ಅರ್ಜುನ್ ರೆಡ್ಡಿ ಅಂತೊಂದು ಸಿನಿಮಾ ಸೂಪರ್ ಹಿಟ್ಟಾದದ್ದೇ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿದ್ದವನು ವಿಜಯ್ ದೇವರಕೊಂಡ. ಅದಾದ ನಂತರದಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಈತನಿಗೆ ಜೊತೆಯಾಗಿದ್ದಳು. ಆಕೆಯ ಜೊತೆಗೂ ಒಂದೆರಡು ಸಿನಿಮಾಗಳು ಬಂದವು. ಆದರೆ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅಭಿನವ ಅರ್ಜುನ್ ರೆಡ್ಡಿಯ ನಸೀಬು ಖುಲ್ಲಂಖುಲ್ಲಾ ಖರಾಬಾಗುತ್ತಾ ಸಾಗಿತ್ತು. ಆ ನಂತರದಲ್ಲಿ ಈತ ಸದ್ದು ಮಾಡಿದ್ದ ರಶ್ಮಿಕಾ ಜೊತೆಗಿನ ರೂಮರುಗಳ ಮೂಲಕವಷ್ಟೆ. ಇತ್ತೀಚೆಗಂತೂ ಅವರಿಬ್ಬರ ಎಂಗೇಜ್ಮೆಂಟ್ ನಡೆದು ಹೋಗಿದೆ ಎಂಬ ಸುದ್ದಿ ಟ್ರೆಂಡಿಂಗಿನಲ್ಲಿದೆ. ಈ ನಡುವೆ ದೇವರಕೊಂಡನ ಹೊಸಾ ಸಿನಿಮಾವೊಂದಕ್ಕೆ ಚಾಲನೆ ಸಿಕ್ಕಿದೆ.
ವಿಜಯ್ ದೇವರಕೊಂಡನ ಹೊಸಾ ಚಿತ್ರಕ್ಕೆ ರೌಡಿ ಜನಾರ್ಧನ್ ಅಂತ ಹೆಸರಿಡಲಾಗಿದೆ. ಈ ಚಿತ್ರಕ್ಕೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ದಿಲ್ ರಾಜು ನಿರ್ಮಾಣ ಮಾಡಿರುವ ಈ ಸಿನಿಮಾದ ಟೈಟಲ್ಲಿನ ಬಗ್ಗೆ ಆರಂಭದಲ್ಲಿಯೇ ಅಪಸ್ವರಗಳು ಕೇಳಿ ಬರಲಾರಂಭಿಸಿವೆ. ಬೇರೆಲ್ಲರ ಕಥೆ ಹಾಗಿರಲಿ; ಖುದ್ದು ದೇವರಕೊಡನ ಅಭಿಮಾನಿಕಗಳೇ ಈ ಟೈಟಲ್ಲು ಕಂಡು ನಿರಾಸೆಗೀಡಾಗಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿ ಮಹಾನಟಿ ಕೀರ್ತಿ ಸುರಶ್ ಮತ್ತು ದೇವರಕೊಂಡ ಒಟ್ಟಾಗಿ ನಟಿಸಲು ಮುಂದಾಗಿzದ್ದಾಎ. ಒಂದು ವೇಳೆ ದೇವರಕೊಂ ಬಚಾವಾದರ ಕೀರ್ತಿಯ ನಸೀಬಿನ ಬಲದಿಂದ ಆತ್ರ ಎಂಬಂಥಾ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.
ಅಷ್ಟಕ್ಕೂ ವಿಜಯ್ ದೇವರಕೊಂಡನ ಸಿನಿಮಾಗಳ ಮೇಲಿನ ಕ್ರೇಜ್ ಬಹುತೇಕ ಇಳಿಕೆ ಕಂಡಿದೆ. ಅದೆಂಥಾದ್ದೇ ಸೂಪರ್ ಸ್ಟಾರ್ ಆದರೂ ಕೂಡಾ ಸಾ,ಲು ಸಾಲಾಗಿ ಒಂದೆರಡು ಸಿನಿಮಾಗಳು ಸೋಲು ಕಂಡರೂ ಮಾರ್ಕೆಟ್ಟು ಅದುಜರಿ ಬಿಡುತ್ತೆ. ಹಾಗಿರುವಾಗ, ಸರಣಿಯೋಪಾದಿಕಯಲ್ಲಿ ದೇವರಕೊಂಡನ ಆರೇಳು ಸಿನಿಮಾಗಳು ಸೋತು ಸುಣ್ಣವಾಗಿವೆ. ಹಾಗಿದ್ದ ಮೇಲೆ ಕ್ರೇಜ್ ಹಾಳಗದಿರಲು ಸಾಧ್ಯವೇ ಇಲ್ಲ. ಇಂಥಾ ಸೋಲುಗಳ ಶೂಲದಲ್ಲಿ ಸಿಕ್ಕು ಕಂಗಾಲಾಗಿರುವ ದೇವರಕೊಂಡನನ್ನು ನಂಬಿ ದಿಲ್ ರಾಜು ಕಾಸು ಹೂಡುವ ಧೈರ್ಯ ಮಾಡಿದ್ದಾರೆ. ಈ ಸಿನಿಮಾ ಗೆದ್ದರೆ ಮಾತ್ರವೇ ದೇವರಕೊಂಡ ಫಾರ್ಮಲ್ಲಿ ಉಳಿಯುವ ಅವಕಾಶ ಸಿಗಬಹುದು!