ಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ, ಅದರ ಪಾತ್ರಗಳನ್ನು ತಮ್ಮ ನಡುವಿನ ಜೊತೆಗಾರರೆಂಬಂತೆ ಭಾವಿಸಿಕೊಂಡಂತಿದ್ದರು. ಅಂಥಾದ್ದೊಂದು ಧಾರಾವಾಹಿಯ ನಾಯಕಿಯಾಗಿ, ಸಾದಾ ಸೀದ ಹುಡುಗಿಯಾಗಿ ನಟಿಸಿದ್ದ ವೈಷ್ಣವಿ (vaishnavi) ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನೂ ತನ್ನದಾಗಿಸಿಕೊಂಡಿದ್ದಳು. ತೀರಾ ಇತ್ತೀಚಿನವರೆಗೂ ಆಕೆಯ ನಿಜವಾದ ಹೆಸರೇ ಅಭಿಮಾನಿಗಳ ಪಾಲಿಗೆ ಅಪರಿಚಿತವಾಗಿತ್ತು. ಯಾಕೆಂದರೆ, ಆಕೆ ಎಲ್ಲರ ಪಾಲಿಗೆ ಅಗ್ನಿಸಾಕ್ಷಿಯ (agnisakshi sannidhi) ಸನ್ನಿಧಿಯಾಗಿ ಆಪ್ತಳಾಗಿದ್ದಳು!

ಇಂಥಾ ವೈಷ್ಣವಿ ಚಿತ್ರರಂಗಕ್ಕೆ ನಾಯಕಿಯಾಗಿ ಕಾಲಿಟ್ಟಾಗ ದೊಡ್ಡ ಮಟ್ಟದ ಗೆಲುವು ಕೈ ಹಿಡಿಯಬಹುದೆಂದೇ ಅನೇಕರು ಭಾವಿಸಿದ್ದದ್ದು ಸುಳ್ಳಲ್ಲ. ಅದಕ್ಕೆ ಸರಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅವತರಿಸಿದ್ದ ಆಕೆಗೇಕೋ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಕೈ ಹಿಡಿಯಲಿಲ್ಲ. ಅದು ಸಿನಿಮಾ ವಿಚಾರದಲ್ಲಿ ವೈಷ್ಣವಿಗೆ ಎದುರಾದ ಸೋಲಾ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಸಿಗುವುದಿಲ್ಲ. ವಷ್ಣವಿಯ ಮುಂದೆ ಅದೃಷ್ಟ ಪರೀಕ್ಷೆಗೆ ಇನ್ನೊಂದಷ್ಟು ಅವಕಾಶಗಳು ಇದ್ದಂತಿದೆ. ವಾತಾವರಣ ಹೀಗಿರುವಾಗಲೇ ಆಕೆ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾಳೆ; ಸೀತಾ ರಾಮ ಎಂಬ ಹೊಸಾ ಬಗೆಯ ಕಥನವನ್ನೊಳಗೊಂಡಿರುವ ಧಾರಾವಾಹಿಯ ಮೂಲಕ…

ಅಂದಹಾಗೆ, ಸೀತಾರಾಮ ಧಾರಾವಾಹಿ ಇದೇ ಜೂನ್ 17ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಟಿಆರ್‍ಪಿಯಲ್ಲಿ ಮುಂಚೂಣಿಯಲ್ಲಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿಯೇ ಸೀತಾರಾಮ ಪ್ರೇಕ್ಷಕರ ಮುಂದೆ ಬರಲಿದೆ. ಈ ಹಿಂದೆ ಮಂಗಳಗೌರಿ ಮದುವೆ ಧಾರಾವಾಹಿಯ ನಾಯಕನಾಗಿದ್ದ ಗಗನ್ ಈ ಧಾರಾವಾಹಿಯ ನಾಯಕ. ನಾಯಕಿಯಾಗಿ ವೈಷ್ಣವಿ ಸಾಥ್ ಕೊಟ್ಟಿದ್ದಾಳೆ. ಗಗನ್ ಮಂಗಳಗೌರಿ ಧಾರಾವಾಹಿಯಲ್ಲಿ ಚೆಂದಗೆ ನಟಿಸಿದ್ದನಾದರೂ ಕಮಂಗಿ ನಿರ್ದೇಶಕನ ಹುಚ್ಚಾಟಕ್ಕೆ ಸಿಕ್ಕು ಆ ಸೀರಿಯಲ್ಲು ಮರ್ಯಾದೆ ಕಳೆದುಕೊಂಡಿತ್ತು. ಟಿಆರ್‍ಪಿ ಹುಚ್ಚಿಗೆ ಬಿದ್ದು ಆಡಿದ ಆಟಗಳಿಂದಾಗಿ ಮಧ್ಯದಲ್ಲೇ ಗಗನ್ ಎದ್ದು ನಡೆದಿದ್ದ. ಆ ಬಳಿಕ ಸುದೀಘ ಕಾಲ ಮರೆಯಾಗಿದ್ದ ಗಗನ್ ಈಗ ರಾಮನಾಗಿ ಮರಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿ ಬೇರೆ ತೆರೆನಾದ ಕಥೆಗಳಿಗೆ ಮಣೆ ಹಾಕುತ್ತಿದೆ. ಅತ್ತೆ ಸೊಸೆ ಜಗಳ, ಜುಟ್ಟಿನ ಕಾಳಗದ ಹೊರತಾಗಿ ಭಿನ್ನ ಪಥದಲ್ಲಿ ಹೆಜ್ಜೆ ಇಡುತ್ತಿದೆ. ಭೂಮಿಗೆ ಬಂದ ಭಗವಂತ, ಅಮೃತಧಾರೆಯಂಥಾ ಸೀರಿಯಲ್ಲುಗಳು ಆ ಬದಲಾವಣೆಗೆ ಉದಾಹರಣೆಯಾಗಿ ನಿಲ್ಲುತ್ತವೆ. ಸೀತಾರಾಮ ಧಾರಾವಾಹಿ ಕೂಡಾ ವಿಶಿಷ್ಟ ಕಥೆಯನ್ನೊಳಗೊಂಡಿರುವ ಲಕ್ಷಣಗಳು ದಟ್ಟವಾಗಿಯೇ ಗೋಚರಿಸುತ್ತಿವೆ. ವೈಷ್ಣವಿ ಪಾಲಿಗೂ ಕೂಡಾ ಈ ಧಾರಾವಾಹಿ ಬಹುಮುಖ್ಯ. ಯಾಕೆಂದರೆ, ಬಿಗ್‍ಬಾಸಿಗೆ ಹೋಗಿ ಬಂದರೂ ಹಿರಿತೆರೆಯಲ್ಲಿ ಆಕೆಗೆ ನೆಲೆಕಂಡುಕೊಳ್ಳುವ ಅವಕಾಶಗಳು ಸಿಕ್ಕಿರಲಿಲ್ಲ. ಇದೀಗ ಆಕೆ ಸೀತೆಯಾಗಿ ಮತ್ತೆ ಸೀರಿಯಲ್ ಲೋಕಕ್ಕೆ ಮರಳಿದ್ದಾಳೆ. ಮುಂದೇನಾಗುತ್ತದೆಂಬುದಕ್ಕೆ ಕಾಲವೇ ಉತ್ತರಿಸಲಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!