Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    actor shreedhar: ಅದ್ಯಾಕೆ ಹೀಗೆ ಕಾಡಿಸಿತೋ ಬದುಕು?

    dino morea: ಹೂಳೆತ್ತೋ ದಂಧೆಯಲ್ಲಿ ಡಿನೋ ಮೋರೆಯಾ ಹೆಸರು!

    Facebook Twitter Instagram
    Monday, June 2
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » dino morea: ಹೂಳೆತ್ತೋ ದಂಧೆಯಲ್ಲಿ ಡಿನೋ ಮೋರೆಯಾ ಹೆಸರು!
    ಸೌತ್ ಜೋನ್

    dino morea: ಹೂಳೆತ್ತೋ ದಂಧೆಯಲ್ಲಿ ಡಿನೋ ಮೋರೆಯಾ ಹೆಸರು!

    By Santhosh Bagilagadde27/05/2025
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಈಗೊಂದು ದಶಕದ ಹಿಂದೆ ಮೋಹಕ ತಾರೆ ರಮ್ಯಾ ಜೂಲಿ ಅಂತೊಂದು ಸಿನಿಮಾದಲ್ಲಿ ನಟಿದ್ದರಲ್ಲಾ? ಅದರಲ್ಲಿ ನಾಯಕನಾಗಿ ಮಿಂಚಿದ್ದಾತ ಡಿನೋ ಮೋರೆಯಾ. ಆ ಕಾಲಕ್ಕೆ ಮೋಹಕವಾಗಿಯೇ ಕಾಣಿಸುತ್ತಿದ್ದ ಡಿನೋ ಮತ್ತು ರಮ್ಯಾ ಜೋಡಿ ಒಂದಷ್ಟು ಗಮನ ಸೆಳೆದಿತ್ತು. ಆ ಸಿನಿಮಾ ಸಾಧಾರಣ ಗೆಲುವು ಕಂಡಾದ ಬಳಿಕ ಮತ್ತೆಂದೂ ಡಿನೋ ಕನ್ನಡದತ್ತ ಮುಖ ಹಾಕಿರಲಿಲ್ಲ. ಹಾಗಂತ ಆತ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಆ ಬಳಿಕ ಡಿನೋ ಹೇಳಿಕೊಳ್ಳುವಂಥಾ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಹೀಗೆ ಒಂದಷ್ಟು ಮಿಂಚಿ ಮರೆಯಾದ ಬಳಿಕ ಡಿನೋನಂಥಾ ನಟರು ಮತ್ಯಾವುದೋ ವ್ಯವಹಾರಗಳಲ್ಲಿ ಬ್ಯುಸಿಯಾಗೋದಿದೆ. ಡಿನೋ ಕೂಡಾ ಅಂಥಾದ್ದೇ ಬ್ಯುಸಿನೆಸ್ಸುಗಳಲ್ಲಿ ತೊಡಗಿಸಿಕೊಂಡಿದ್ದ. ಇದೀಗ ಆ ಹಾದಿಯಲ್ಲಿ ಡಿನೋ ಮುಗ್ಗರಿಸಿದ್ದಾನೆ!

    ಸಿನಿಮಾ ರಂಗದಲ್ಲಿ ಮಿಂಚಿ, ಅವಕಾಶ ವಂಚಿತರಾದ ನಟರನೇಕರು ನಾನಾ ದಂಧೆಗಳಲ್ಲಿ ತೊಡಗಿಸಿಕೊಂಡ ಉದಾಹರಣೆಗಳಿದ್ದಾವೆ. ಇದೀಗ ತನ್ನ ಪಾಡಿಗೆ ತಾನು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಡಿನೋನ ಹೆಸರು ಬಹುಕೋಟಿ ಅವ್ಯವಹಾರವೊಂದರಲ್ಲಿ ತಳುಕು ಹಾಕಿಕೊಂಡಿದೆ. ಈ ಸಂಬಂಧವಾಗಿ ಆತ ಪೊಲೀಸ್ ತನಿಖೆಯನ್ನೂ ಕೂಡ ಎದುರಿಸುವಂತಾಗಿದೆ. ಹೀಗೆ ಡಿನೋ ತಗುಲಿಕೊಂಡಿರೋದು ಮಿಥಿ ನದಿಯ ಹೂಳೆತ್ತುವ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ. ಈ ಸಂಬಂಧವಾಗಿ ಮುಂಬೈ ಪೊಲೀಸರು ಡಿನೋನನ್ನು ಬಂಧಿಸಿ ಗಂಟೆಗಟ್ಟಲೆ ನಾನಾ ದಿಕ್ಕುಗಳಲ್ಲಿ ವಿಚಾರಣೆ ನಡೆಸಿದ್ದಾರೆ.

    ಮಿಥಿ ನದಿಯ ಹೂಳೆತ್ತುವ ಕಾಮಗಾರಿಯನ್ನು ಮುಂಬೈ ಮಹಾ ನಗರ ಪಾಲಿಕೆ ಆರಂಭಿಸಿತ್ತು. ಇದರ ಟೆಂಡರ್ ಅನ್ನು ಕೇರಳದ ಕೊಚ್ಚಿ ಮೂಲದ ಕಂಪೆನಿಯೊಂದರಿಂದ ಯಂತ್ರೋಪಕರಣಗಳನ್ನು ಖರೀದಿಸಿತ್ತು. ಆ ಸಂಸ್ಥೆಯ ಮುಖ್ಯಸ್ಥನಾಗಿರುವಾತ ಕೇತನ್ ಕದಮ್. ಈ ಬೃಹತ್ ಮೊತ್ತದ ಕಾಮಗಾರಿಯಲ್ಲಿ ಕೇತನ್ ಹೆಚ್ಚು ಬಿಲ್ ಮಾಡುವ ಮೂಲಕ ಕಾಸು ಗುಂಜಿಕೊಂಡಿದ್ದಾನೆಂಬ ಆರೋಪ ಕೇಳಿ ಬಂದಿದೆ. ಅದೇನು ಸಣ್ಣ ಮೊತ್ತದ ಅವ್ಯವಹಾರವಲ್ಲ. ಅದರ ಬಾಬತ್ತು ಭರ್ತಿ ಅರವತೈದು ಕೋಟಿ. ಇಷ್ಟು ಮೊತ್ತದ ಕಾಸನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇತನ್ ಮೇಲಿದೆ.

    ಇಂಥಾ ಕೇತನ್ ಕದಮ್ ನ ಸಂಪೂರ್ಣ ಸಂಪರ್ಕಗಳ ಮೇಲೆ ಮುಂಬೈ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಹೊತ್ತಿನಲ್ಲಿ ಕೇತನ್ ಅತೀ ಹೆಚ್ಚು ಬಾರಿ ಡಿನೋ ಜೊತೆ ಫೋನ್ ಸಂಭಾಷಣೆ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದೇನೇ ಸ್ನೇಹವಿದ್ದರೂ ಅಷ್ಟೊಂದು ಸಲ ಕದಮ್ ಡಿನೋ ಜೊಲತೆ ಏಕೆ ಮಾತಾಡಿದ್ದ? ಮಿಥಿ ನದಿಯ ಹೂಳೆತ್ತುವ ವಿಚಾರದಲ್ಲಿ ಡಿನೋ ಜೊತೆ ಕದಮ್ ಪಾಲುದಾರಿಕೆ ವ್ಯವಹಾರ ನಡೆಸಿದ್ದನಾ? ಆ ಕುರಿತಾದ ಕೊಡು ಕೊಳ್ಳುವಿಕೆಯ ವಿಕಚಾರವಾಗಿ ಸಂಭಾಷಣೆ ನಡೆದಿತ್ತಾ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ಪೊಲೀಸರು ಡಿನೋನನ್ನು ವಿಚಾರಣೆಗೊಳಪಡಿಸಿದ್ದಾರೆ. ಒಂದು ವೇಳೆ ಈ ಹಗರಣದಲ್ಲಿ ಭಾಗಿಯಾಗಿದ್ದರೆ ಡಿನೋ ಜೈಲುವಾಸಿಯಾಗೋದು ಖಚಿತ!

    #bollywoodactor #bombaypolice #dinomoreya #mithiriverscam
    Share. Facebook Twitter LinkedIn WhatsApp Telegram Email
    Previous Articlerashmika mandanna: ಇದು ಕಿರಿಕ್ ಹುಡುಗಿಯ ಹೊಸಾ ಹೆಜ್ಜೆ!
    Next Article actor shreedhar: ಅದ್ಯಾಕೆ ಹೀಗೆ ಕಾಡಿಸಿತೋ ಬದುಕು?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/2025

    actor shreedhar: ಅದ್ಯಾಕೆ ಹೀಗೆ ಕಾಡಿಸಿತೋ ಬದುಕು?

    27/05/2025

    rashmika mandanna: ಇದು ಕಿರಿಕ್ ಹುಡುಗಿಯ ಹೊಸಾ ಹೆಜ್ಜೆ!

    27/05/2025
    Search
    Category
    • OTT (3)
    • Uncategorized (10)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (19)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (48)
    • ಸೌತ್ ಜೋನ್ (84)
    • ಸ್ಪಾಟ್ ಲೈಟ್ (156)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (9)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/202510 Views

    madenur manu controversy: ರಿಯಾಲಿಟಿ ಶೋಗಳ ಅಕರಾಳ ವಿಕರಾಳ ಅಂತರಾಳ!

    24/05/20259 Views

    sreeleela: ಪುಷ್ಪ2 ನಂತರ ಬದಲಾಯ್ತೇ ಶ್ರೀಲೀಲಾ ವರಸೆ?

    10/05/20259 Views

    supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

    28/05/20238 Views
    Don't Miss
    ಸ್ಪಾಟ್ ಲೈಟ್ 30/05/2025

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಇದೀಗ ದಿಲ್ ದಾರ್ ಎಂಬ ಸಿನಿಮಾ ಮೂಲಕ ಭಿನ್ನ ಬಗೆಯ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು…

    actor shreedhar: ಅದ್ಯಾಕೆ ಹೀಗೆ ಕಾಡಿಸಿತೋ ಬದುಕು?

    dino morea: ಹೂಳೆತ್ತೋ ದಂಧೆಯಲ್ಲಿ ಡಿನೋ ಮೋರೆಯಾ ಹೆಸರು!

    rashmika mandanna: ಇದು ಕಿರಿಕ್ ಹುಡುಗಿಯ ಹೊಸಾ ಹೆಜ್ಜೆ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.