Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

    deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

    Facebook Twitter Instagram
    Monday, June 30
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » ilayaraja biopic: ಇಳಯರಾಜಾ ಬಯೋಪಿಕ್‍ಗೆ ಭರ್ಜರಿ ತಯಾರಿ!
    ಸೌತ್ ಜೋನ್

    ilayaraja biopic: ಇಳಯರಾಜಾ ಬಯೋಪಿಕ್‍ಗೆ ಭರ್ಜರಿ ತಯಾರಿ!

    By Santhosh Bagilagadde24/03/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ತನ್ನ ಮಾಂತ್ರಿಕ ಸಂಗೀತ ಹಾಗೂ ಹಾಡುಗಳ ಮೂಲಕ ತಲೆಮಾರುಗಳಾಚೆಗೂ ತಣ್ಣಗೆ ಪ್ರವಹಿಸುತ್ತಾ ಬಂದಿರುವವರು (ilayaraja) ಇಳಯರಾಜ. ಸಂಗೀತವನ್ನು ಬಿಟ್ಟು ಬೇರೇನನ್ನೂ ಧ್ಯಾನಿಸದ ಅಚಲ ಮನಃಸ್ಥಿತಿ ಮತ್ತು ಅದೆಂಥಾದ್ದೇ ಸವಾಲುಗಳು ಎದುರಾದರೂ ಸ್ವರಗಳ ಸಾಂಗತ್ಯದಿಂದಲೇ ಎದುರುಗೊಂಡು, ಜೈಸಿಕೊಳ್ಳುವ ಛಾತಿಗೆ ಸಜೀವ ಉದಾಹರಣೆಯಂತಿರುವವರು ಇಳಯರಾಜ. ಈವತ್ತಿಗೆ ಸಂಗೀತ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಎತ್ತುವಳಿ ರಾಜರೇ ಪಿತಗುಡುತ್ತಿದ್ದಾರೆ. ಎರಡು ಬೀಜಗಳ ಹೊರತಾಗಿ ಸ್ವಂತದೆನ್ನುವುದೇನೂ ಇಲ್ಲದ, ನಡುಬಗ್ಗಿಸಿ ಕೂತು ಕೆಲಸ ಮಾಡಲೊಲ್ಲದ, ಯಾರದ್ದೋ ಶ್ರಮ, ಪ್ರತಿಭೆಗೆ ಅಪ್ಪ ಅನ್ನಿಸಿಕೊಳ್ಳೋ ಖಯಾಲಿಯ ನಕಲಿವೀರ ಕುನ್ನಿಗಳೇ ಎಲ್ಲೆಡೆ ಊಳಿಡುತ್ತಿರುವ ಕಾಲಮಾನವಿದು. ಇಂಥಾ ಕಾಲಘಟ್ಟದಲ್ಲೆ ಸ್ವಂತಿಕೆಯನ್ನು ಕಸುವಾಗಿಸಿಕೊಂಡು ಅಕ್ಷರಶಃ ಸಂಗೀತ ಕ್ಷೇತ್ರದ ಸಂತನಂತೆ ಕಾಣಿಸುವವರು ಇಳಯರಾಜ!

    ಹಾಗೆ ನೋಡಿದರೆ, ಇಳಯರಾಜ ಅವರಂಥಾ ಮೇರು ಸಂಗೀತ ನಿರ್ದೇಶಕನ ಜೀವನಗಾಥೆ ಅದ್ಯಾವತ್ತೋ ದೃಷ್ಯರೂಪ ಧರಿಸಬೇಕಿತ್ತು. ತಮಿಳುನಾಡಿನಲ್ಲಿ ಹುಟ್ಟಿ ಬೆಳೆದರೂ, ದೇಶಾದ್ಯಂತ ಜನಜನಿತರಾಗಿರುವ ಇಳಯರಾಜಾರ ಖ್ಯಾತಿ ಮತ್ತು ಅವರ ಸಾಧನೆಯ ಮಜಲುಗಳನ್ನು ಏಕಾಏಕಿ ಪದಗಳಲ್ಲಿ ಹಿಡಿದಿಡುವುದು ತ್ರಾಸದಾಯಕ ಸಂಗತಿ. ಹಾಗಿರುವಾಗ, ಅದೆಲ್ಲವನ್ನೂ ಒಂದು ಫ್ರೇಮಿಗೆ ಒಗ್ಗಿಸಿ, ನಿಗಧಿತ ಸಮಯದಲ್ಲಿ ದೃಷ್ಯೀಕರಿಸೋದು ಕೂಡಾ ಸವಾಲಿನ ವಿಚಾರವೇ. ಇದೆಲ್ಲದರಾಚೆಗೆ, ಸಂಗೀತ ಕ್ಷೇತ್ರದ ಈ ಧ್ರುವತಾರೆಯ ಬಯೋಪಿಕ್ ಗಾಗಿ ಅದೆಷ್ಟೋ ಮಂದಿ ಕಾದು ಕೂತಿದ್ದರು. ಅಂಥಾ ಆಕಾಂಕ್ಷೆಗಳೆಲ್ಲವೂ ಸಾಕಾರಗೊಳ್ಳುವ ಕ್ಷಣಗಳೀಗ ಹತ್ತಿರಾಗಿವೆ…

    ಈ ಹಿಂದೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಅರುಣ್ ಮಾದೇಶ್ವರನ್ ಸಾರಥ್ಯದಲ್ಲಿ ಇಳಯರಾಜಾ ಬಯೋಪಿಕ್ ಮೂಡಿ ಬರಲಿದೆ. ಧನುಷ್ ಇಲ್ಲಿ ಇಳಯರಾಜಾ ಪಾತ್ರವನ್ನು ಆವಾಹಿಸಿಕೊಳ್ಳಲಿದ್ದಾರೆ. ಈ ವಿಚಾರ ಈಗಾಗಲೇ ಜಾಹೀರಾಗಿದೆ. ಇದರಲ್ಲಿ ಕಮಲ್ ಹಾಸನ್, ರಜನೀಕಾಂತ್ ಸೇರಿದಂತೆ ಘಟಾನುಘಟಿ ನಟನಟಿಯರು ಭಾಗಿಯಾಗಲಿದ್ದಾರೆಂಬ ವಿಚಾರವೂ ಇತ್ತೀಚೆಗೆ ಹೊರಬಿದ್ದಿದೆ. ಹೊಸಾ ವಿಚಾರವೆಂದರೆ, ಕಮಲ್ ಹಾಸನ್ ಅವರು ಈ ಚಿತ್ರದ ಸ್ಕ್ರೀನ್ ಪ್ಲೇ ಸಿದ್ಧಪಡಿಸಲಿದ್ದಾರೆ. ಅಲ್ಲಿಗೆ, ಇಳಯರಾಜಾ ಬಯೋಪಿಕ್ ಹೊಸಾ ಬಗೆಯಲ್ಲಿ ಮೂಡಿಬರಲಿರೋದು ಖಾತರಿಯಾದಂತಾಗಿದೆ!

    ತಮಿಳು, ಕನ್ನಡ, ಹಿಂದಿ, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರಕ್ಕಾಗಿ ಇದೀಗ ಭರದಿಂದ ತಯಾರಿಗಳು ನಡೆಯುತ್ತಿವೆ. ಧನುಷ್ ಪಾಲಿಗಂತೂ ಇದೊಂದು ಥ್ರಿಲ್ಲಿಂಗ್ ಪ್ರಾಜೆಕ್ಟ್. ಯಾಕೆಂದರೆ, ಆತ ಇಳಯರಾಜಾ ಮತ್ತು ರಜನೀಕಾಂತ್ ಜೀವನಗಾಥೆಗಳಲ್ಲಿ ನಟಿಸಬೇಕೆಂಬ ಬಹುಕಾಲದ ಬಯಕೆ ಹೊಂದಿದ್ದರಂತೆ. ಹಾಗೆ ಬಯಸಿದ ಪಾತ್ರವೇ ಸಿಕ್ಕಿದ ಖುಷಿಯಲ್ಲಿರುವ ಧನುಷ್, ಇದೀಗ ಇಳಯರಾಜಾ ಪಾತ್ರವಾಗಿಮ ಪರಕಾಯ ಪ್ರವೇಶ ಮಾಡಲು ತಯಾರಿ ನಡೆಸುತ್ತಿದ್ದಾರೆ. ಕಮಲ್ ಹಾಸನ್ ಕೂಡಾ ಸ್ಕ್ರೀನ್ ಪ್ಲೇ ರಚಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಇಷ್ಟರಲ್ಲಿಯೇ ಈ ಬಯೋಪಿಕ್ ಬಗೆಗಿನ ಮತ್ತೊಂದಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಪ್ರೇಕ್ಷಕರನ್ನು ಚಕಿತಗೊಳಿಸಲಿವೆ.

    ilayaraja_biopic_kamalhassan_cinishodha
    Share. Facebook Twitter LinkedIn WhatsApp Telegram Email
    Previous ArticleManjummel Boys: ಮಂಜುಮ್ಮೆಲ್ ಬಾಯ್ಸ್ ಬಾಚಿಕೊಂಡಿದ್ದೆಷ್ಟು?
    Next Article pooja hegde: ತೆಲುಗು ಚಿತ್ರರಂಗಕ್ಕೆ ವಿದಾಯ ಹೇಳ್ತಾಳಾ ಮಂಗಳೂರು ಹುಡುಗಿ?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    allu arjun: ಪ್ಯಾನಿಂಡಿಯಾ ಪ್ರಾಜೆಕ್ಟು ಪಲ್ಟಿ ಹೊಡೆದದ್ದೇಕೆ?

    18/06/2025

    samyuktha menon: ಗಾಳಿಪಟ2 ಹುಡುಗಿ ಮುಂದೆ ಪ್ಯಾನಿಂಡಿಯಾ ಅವಕಾಶ!

    18/06/2025

    Nandamuri Balakrishna: ಬೆಚ್ಚಿ ಬೀಳಿಸಿತು ಬಾಲಯ್ಯನ ಅಖಂಡ ಕಾಮಿಡಿ!

    18/06/2025
    Search
    Category
    • OTT (3)
    • Uncategorized (12)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (20)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (54)
    • ಸೌತ್ ಜೋನ್ (95)
    • ಸ್ಪಾಟ್ ಲೈಟ್ (163)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/202511 Views
    Don't Miss
    ಸ್ಪಾಟ್ ಲೈಟ್ 20/06/2025

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    ಚಿತ್ರರಂಗದಲ್ಲಿ ಅದೆಂಥಾದ್ದೇ ಅಲೆ ಚಾಲ್ತಿಯಲ್ಲಿದ್ದರೂ ಕೂಡಾ, ನಮ್ಮ ನಡುವಿನ ಕಥನಕ್ಕೆ ಕಣ್ಣಾದ ಸಿನಿಮಾಗಳತ್ತ ಪ್ರೇಕ್ಷಕರು ಬಹು ಬೇಗನೆ ಆಕರ್ಷಿತರಾಗುತ್ತಾರೆ. ನಿಜ,…

    kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

    deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

    sanju weds geetha2 movie: ಹರುಕು ಚಲ್ಲಣಕ್ಕೆ ತ್ಯಾಪೆ ಹಚ್ಚೋ ಸರ್ಕಸ್ಸು!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.