ಮೊದಲ ಚಿತ್ರ `ಮದಿಪು’ (madipu movie) ಮೂಲಕವೇ ರಾಷ್ಟ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದವರು ನಿರ್ದೇಶಕ (director chethan mundadi) ಚೇತನ್ ಮುಂಡಾಡಿ. ಅವರು `ಭಾವಪೂರ್ಣ’ (bhavapoorna movie) ಅಂತೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ದಿ ಬಹು ಹಿಂದೆಯೇ ಜಾಹೀರಾಗಿತ್ತು. ಸಹಜವಾಗಿಯೇ ಪ್ರೇಕ್ಷಕರೂ ಕೂಡಾ ಆ ಸಿನಿಮಾ ಬಗ್ಗೆ ಒಂದಷ್ಟು ನಿರೀಕ್ಷೆಯಿಟ್ಟುಕೊಂಡು ಕಾಯುವಂತಾಗಿತ್ತು. ಇದೀಗ (bhavapoorna) ಭಾವಪೂರ್ಣ ಟ್ರೈಲರ್ ಬಿಡುಗಡೆಗೊಂಡಿದೆ. ಯಾರೂ ಅಂದಾಜಿಸಲಾಗದ ಕಥಾ ಹಂದರ ಸುಳಿವಿನೊಂದಿಗೆ ಈ ಟ್ರೈಲರ್ ಅಚ್ಚರಿಯೊಂದನ್ನು ಪ್ರತೀ ಪ್ರೇಕ್ಷಕರೊಳಗೂ ಪ್ರತಿಷ್ಟಾಪಿಸಿಬಿಟ್ಟಿದೆ. ಈ ಮೂಲಕ, ಇದುವರೆಗೂ ತಮ್ಮದು ಭಿನ್ನ ಪಥ ಅನ್ನೋದನ್ನು ಸಾಬೀತು ಪಡಿಸುತ್ತಾ ಬಂದಿರುವ ಚೇತನ್ ಮುಂಡಾಡಿ, ಯಾರೂ ಮುಟ್ಟದ ಕಥೆಯೊಂದಕ್ಕೆ ದೃಷ್ಯ ರೂಪ ನೀಡಿರುವುದನ್ನು ಸದರಿ ಟ್ರೈಲರ್ (bhavapoorna tariler) ಋಜುವಾತುಗೊಳಿಸಿದೆ!

ಹಲವಾರು ಬಾರಿ ಅಗಾಧ ನಿರೀಕ್ಷೆಯ ನೆತ್ತಿಯ ಮೇಲೆ ಏಕಾಏಕಿ ತಣ್ಣೀರು ರಾಚಿ ಬಿಡುತ್ತದೆ. ನಿಂತಲ್ಲಿ ಕೂತಲ್ಲಿ ಹೈಪು ಸೃಷ್ಟಿಸುತ್ತಾ, ಭಾರೀ ಪ್ರಚಾರದ ಪಟ್ಟುಗಳನ್ನು ಪ್ರದರ್ಶಿಸುವ ಒಂದಷ್ಟು ಸಿನಿಮಾಗಳು ಟೀಸರ್, ಟ್ರೈಲರ್ ನಲ್ಲಿಯೇ ಮಗುಚಿಕೊಳ್ಳೋದಿದೆ. ಆದರೆ, ನಿರ್ದೇಶಕ ಚೇತನ್ ಮುಂಡಾಡಿ ಭಾವಪೂರ್ಣ ವಿಚಾರದಲ್ಲಿ ಪ್ರಚಾರದ ಪಟ್ಟುಗಳನ್ನು ಪ್ರದರ್ಶಿಸಿರಲಿಲ್ಲ. ತಮ್ಮ ಸಿನಿಮಾ ಬಗ್ಗೆ ಹೆಚ್ಚಿಗೇನನ್ನೂ ಹೇಳಿಕೊಳ್ಳುವ ಗೋಜಿಗೂ ಹೋಗಿರಲಿಲ್ಲ. ತಮ್ಮ ಪಾಡಿಗೆ ತಾವು ಚಿತ್ರೀಕರಣ ಮುಗಿಸಿಕೊಂಡು, ಸೃಜನಾತ್ಮಕ ಹಾದಿಯಲ್ಲಿಯೇ ಸಾಗಿ ಬಂದು, ಈ ಟ್ರೈಲರ್ ಮೂಲಕ ಅಕ್ಷರಶಃ ಸರ್ ಪ್ರೈಸ್ ಕೊಟ್ಟಿದ್ದಾರೆ.

ಇದು ತೊಂಬತ್ತರ ದಶಕದಲ್ಲಿ ಘಟಿಸುವ ಕಥೆಯೊಂದನ್ನಾಧರಿಸಿದ ಚಿತ್ರ. ಐವತ್ತರ ಆಸುಪಾಸಿನ ಪ್ರಾಯದ ವ್ಯಕ್ತಿಯೊಬ್ಬನ ಸುತ್ತ ಹಬ್ಬಿಕೊಂಡಿರುವ, ನಾನಾ ಕೊಂಬೆ ಕೋವೆಗಳಿರುವ ಕಥೆ ಇಲ್ಲಿದೆಯಂತೆ. ಅದರ ಅಸಲೀ ಸ್ವಾದ ಎಂಥಾದ್ದಿದೆ ಎಂಬುದರ ಸ್ಪಷ್ಟ ಅಂದಾಜು ಈ ಟ್ರೈಲರ್ ಮೂಲಕ ಸಿಕ್ಕಿ ಹೋಗಿದೆ. ಅಲ್ಲಿ ತೆರೆದುಕೊಂಡ ಕಥೆಯ ಕುರುಹು, ಅದಕ್ಕೆ ತಟಿಕೆ ಹಾಕಿಕೊಂಡಿರುವ ನೆಲದ ನಂಟಿನ ದೃಷ್ಯಗಳ ಮೂಲಕ ಹೊಸತೊಂದು ಜಗತ್ತು ಪ್ರೇಕ್ಷಕರ ಮುಂದೆ ತೆರೆದುಕೊಂಡಂತಾಗಿದೆ. ಈ ಮೂಲಕ, ಇದುವರೆಗೂ ಕಲಾತ್ಮಕ ಚಿತ್ರಗಳಲ್ಲಿ ಲೀನವಾಗಿದ್ದ ಚೇತನ್ ಮುಂಡಾಡಿ, ಕಮರ್ಶಿಯಲ್ ಹಾದಿಯಲ್ಲಿಯೂ ಗೆಲುವು ದಾಖಲಿಸೋ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿವೆ.

ಭಾವಪೂರ್ಣ ಚಿತ್ರ ಪ್ರಶಾಂತ್ ಅಂಜನಪ್ಪ ನಿರ್ಮಾಣದಲ್ಲಿ ಮೂಡಿ ಬಂದಿದೆ. ಇದರ ಪ್ರಧಾನ ಪಾತ್ರವನ್ನು ಹಿರಿಯ ನಟ ರಮೇಶ್ ಪಂಡಿತ್ ನಿರ್ವಹಿಸಿದ್ದಾರೆ. ಇದುವರೆಗೆ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿರುವವರು ರಮೇಶ ಪಂಡಿತ್. ಅವರು ಸ್ವತಃ ಈ ಸಿನಿಮಾ ಪಾತ್ರದ ಬಗ್ಗೆ ಥ್ರಿಲ್ ಆಗಿದ್ದಾರೆ. ಟ್ರೈಲರ್ ನೋಡಿದವರೆಲ್ಲರಿಗೂ ಅಂಥಾದ್ದೇ ಭಾವವೀಗ ದಾಟಿಕೊಂಡಿದೆ. ಪುಷ್ಕಳ ಮನೋರಂಜನೆಯ ಮೂಲಕವೇ ಚೇತನ್ ಮುಂಡಾಡಿ ಗಹನವಾದ ಕಥೆಯನ್ನು ನಿರೂಪಿಸಿರುವ ಲಕ್ಷಣಗಳೂ ಕೂಡಾ ಈ ಟ್ರೈಲರ್ ನಲ್ಲಿ ಕಾಣಿಸಿವೆ. ಅಂತೂ ಭಾವಪೂರ್ಣ ಚಿತ್ರ ಪ್ರೇಕ್ಷಕರನ್ನೀಗ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಇದರ ಬೆನ್ನಲ್ಲಿಯೇ ಚಿತ್ರದ ಬಗೆಗಿನ ಮತ್ತೊಂದಷ್ಟು ಮಹತ್ವದ ಅಂಶಗಳು ಪ್ರೇಕ್ಷಕರನ್ನು ತಲುಪಿಕೊಳ್ಳುವ ಸಾಧ್ಯತೆಗಳಿದ್ದಾವೆ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!