Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    Facebook Twitter Instagram
    Thursday, May 8
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » kerebete harini shrikanth: ಅದು ಮಲೆನಾಡಿನ ಗಟ್ಟಿಗಿತ್ತಿಯ ಪಾತ್ರ!
    ಸ್ಪಾಟ್ ಲೈಟ್

    kerebete harini shrikanth: ಅದು ಮಲೆನಾಡಿನ ಗಟ್ಟಿಗಿತ್ತಿಯ ಪಾತ್ರ!

    By Santhosh Bagilagadde14/03/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಕಿರುತೆರೆ ಎಂಬುದು ನಮ್ಮ ರಾಜ್ಯದ ಮಟ್ಟಿಗೆ ಜನರ ಭಾವಕೋಶದಲ್ಲಿ ಬಹು ಆಳವಾಗಿ ಬೇರೂರಿಕೊಂಡಿದೆ. ಟೀವಿ ಎಂಬುದೇ ಹೊಸತೆನ್ನಿಸಿದ ಕಾಲಘಟ್ಟದಿಂದಲೂ ಕಿರುತೆರೆ ಎಂಬುದೊಂದು ಬೆರಗು. ಹಾಗೆ, ಟೀವಿಯೇ ಮಹಾನ್ ಲಕ್ಷುರಿ ವಸ್ತು ಅನ್ನಿಸಿದ ತೊಂಬತ್ತರ ದಶಕದಿಂದ ಇಲ್ಲಿಯವರೆಗೂ ಯಾರಾದರೂ ಕಲಾವಿದರು ಚಾಲ್ತಿಯಲ್ಲಿದ್ದಾರೆಂದರೆ ಅವರ ಬಗೆಗೊಂದು ಬೆರಗು ಮೂಡಿಕೊಳ್ಳೋದು ಸಹಜ. ಅಂಥಾದ್ದೊಂದು ಬೆರಗಿನ ರೂವಾರಿಯಂತೆ ಕಾಣಿಸುತ್ತಿರುವವರು (harini shrikanth) ಹರಿಣಿ ಶ್ರೀಕಾಂತ್. ಹಲವಾರು ಸಿನಿಮಾ, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ಹರಿಣಿ ಪ್ರಧಾನವಾಗಿ ಗುರುತಾಗಿರೋದು ಅಮ್ಮನ ಪಾತ್ರಗಳ ಮೂಲಕ. ಅವರೀಗ ರಾಜ್ ಗುರು ನಿರ್ದೇಶನದ `ಕೆರೆಬೇಟೆ’ ಚಿತ್ರದ ಮೂಲಕ ಮತ್ತೆ ಅಮ್ಮನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ.

    ಹರಿಣಿ ಪಾಲಿಗೆ ಸಿನಿಮಾರಂಗವಾಗಲಿ, ಅಮ್ಮನ ಪಾತ್ರಗಳಾಗಲಿ ಹೊಸತೇನೂ ಅಲ್ಲ. ಆದರೆ ಸಿನಿಮಾದಿಂದ ಸಿನಿಮಾಗೆ ಬೇರೆ ತೆರನಾದ ಸವಾಲುಗಳಿರುವ ಚೆಂದದ ಪಾತ್ರಗಳು ಸಿಗಲಿ ಎಂಬ ಹಂಬಲವೊಂದು ಅವರೊಳಗಿದೆ. ಅಂಥಾ ಬಯಕೆಯೊಂದು ಕೆರೆಬೇಟೆಯ ಮೂಲಕ ಈಡೇರಿದ ಖುಷಿ ಅವರಲ್ಲಿದೆ. ಈ ಸಿನಿಮಾದಲ್ಲಿ ಹರಿಣಿ ನಾಯಕನ ತಾಯಿಯಾಗಿ ನಟಿಸಿದ್ದಾರೆ. ಅದು ಮಲೆನಾಡಿನ ಭಾಷೆ, ಗುಣ ಲಕ್ಷಣಗಳನ್ನು ಎರಕ ಹೊಯ್ದಂತಿರುವ ಪಾತ್ರ. ಟಿಪಿಕಲ್ ಮಲೆನಾಡು ಶೈಲಿಯ ಹೆಣ್ತನದ ಚಹರೆಗಳಿರುವ ಆ ಪಾತ್ರವನ್ನು ಜೀವಿಸಿದಂತೆ ನಟಿಸಿದ ಖುಷಿ ಹರಿಣಿ ಅವರಲ್ಲಿದೆ.

    ಹಾಗೆನೋಡಿದರೆ, ಹರಿಣಿ ಮಲೆನಾಡಿಗೆ ಅಪರಿಚಿತರೇನಲ್ಲ. ಅವರ ಮೂಲವಿರೋದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಅವರ ಪೂರ್ವಜರೆಲ್ಲ ಬದುಕಿ ಬಾಳಿರುವುದು ಮಲೆನಾಡ ನೆಲದಲ್ಲಿಯೇ. ಆದರೆ, ಹರಿಣಿ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರಿಂದ ಅಪ್ಪಟ ಅಲ್ಲಿನವರೇ ಆಗಿ ಹೋಗಿದ್ದಾರೆ. ಬದುಕು ಎಲ್ಲಿ ನೆಲೆ ಕಂಡುಕೊಂಡರೂ ಹುಟ್ಟಿದೂರಿನ ಸೆಳೆತವೊಂದನ್ನು ಸದಾ ಕಾಪಿಟ್ಟುಕೊಂಡಿರುವ ಹರಿಣಿ, ತನ್ನೂರಿನ ಗಟ್ಟಿಗಿತ್ತಿಯ ಪಾತ್ರವನ್ನು ಸಂಭ್ರಮಿಸಿಕೊಂಡು ನಟಿಸಿದ್ದಾರಂತೆ. ಚಿತ್ರೀಕರಣದ ಸಂದರ್ಭದಲ್ಲಿ ಅಪ್ಪಟ ಮಲೆನಾಡು ವಾತಾವರಣದಲ್ಲಿ ಕಲೆತು ಬದುಕುವ ಅವಕಾಶ ಸಿಕ್ಕಿದ್ದೇ ಅದೃಷ್ಟವೆಂಬ ಧನ್ಯತಾ ಭಾವ ಅವರಲ್ಲಿದೆ.

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

    harini_shrikanth kerebete_gowrishankar_titlesong_kfi_byvijayendra_shivamogga_sandalwood_kfi_cinishodha
    Share. Facebook Twitter LinkedIn WhatsApp Telegram Email
    Previous Articlekerebete shekar karadimane: ನಾಯಕಿಗೆ ಮಾವನಾದ ಶೇಖರ್ ಕರಡಿಮನೆ!
    Next Article kerebete raghu rajananda: ಕೆರೆಬೇಟೆಯಲ್ಲೊಂದು ಖಡಕ್ ಪೊಲೀಸ್ ಪಾತ್ರ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/2025

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    25/04/2025

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    24/04/2025
    Search
    Category
    • OTT (3)
    • Uncategorized (10)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (17)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (43)
    • ಸೌತ್ ಜೋನ್ (78)
    • ಸ್ಪಾಟ್ ಲೈಟ್ (151)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (9)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

    28/05/20237 Views

    ರಾಕಿ ಬಾಯ್ ಬಗ್ಗೆ ಮಂಗಳೂರು ಹುಡುಗಿ ಹೇಳಿದ್ದೇನು?

    25/05/20236 Views

    sanjay dutt: ಸಂಜಯ್ ದತ್ ವಿಲನ್‍ಗಿರಿ!

    28/05/20234 Views

    rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

    28/05/20234 Views
    Don't Miss
    ಸ್ಪಾಟ್ ಲೈಟ್ 30/04/2025

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ.…

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.