ಕೃಷ್ಣೇಗೌಡ ನಿರ್ದೇಶಿಸಿ, ನಿರ್ಮಾಣ ಮಾಡಿರುವ `ನಾನು ಕುಸುಮ’ (naanu kusuma) ಚಿತ್ರ ಜೂನ್ 30ರಂದು ಬಿಡುಗಡೆಗೊಳ್ಳಲಿದೆ. ಒಂದು ಭಿನ್ನ ಕಥಾನಕ ಬೇರೆಯದ್ದೇ ಧಾಟಿಯಲ್ಲಿ ದೃಷ್ಯರೂಪಕ್ಕಿಳಿದಾಗ ಅದರ ಬಗೆಗೊಂದು ಕುತೂಹಲ ಮೂಡಿಕೊಳ್ಳುವುದು ಸಹಜ. ಈವತ್ತಿಗೆ `ನಾನು ಕುಸುಮ’ (naanu kusuma) ಚಿತ್ರ ಈ ಮಟ್ಟದಲ್ಲಿ ನಿರಕ್ಷೆಮೂಡಿಸಿದೆಯೆಂದರೆ, ಅದಕೆ ಪ್ರಧಾನ ಕಾರಣ ಅದರ ಒಡಲಲ್ಲಿರುವ ವಿಶಿಷ್ಟ ಕಥೆ ಮತ್ತು ಅದು ರೂಪುಗೊಂಡಿರುವ ರೀತಿ. ಈಗಾಗಲೇ ಈ ಚಿತ್ರ ಒಂದಷ್ಟು ಪ್ರತಿಷ್ಟಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಒಂದಷ್ಟು ಮೌಲಿಕವಾದ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ನರ್ಸ್ ಒಬ್ಬಳ ಸುತ್ತ ಚಲಿಸುವ ಈ ಕಥಾನಕದಲ್ಲಿ ಪ್ರಧಾನ ಪಾತ್ರಕ್ಕೆ ಜೀವ ತುಂಬಿರುವವರು (greeshma shridhar) ಗ್ರೀಷ್ಮ ಶ್ರೀಧರ್.
ಗ್ರೀಷ್ಮ ಶ್ರೀಧರ್ (greeshma shridhar) ಎಂಬ ಹೆಸರು ಕನ್ನಡ ಚಿತ್ರಪ್ರೇಮಿಗಳಿಗೆ ಅಪರಿಚಿತವೇನಲ್ಲ. ನಟಿಸಿರುವುದು ಕೆಲವೇಸಿನಿಮಾಗಳಲ್ಲಾದರೂ ಅವರ ಪಾತ್ರಗಳು ನೋಡುಗರ ಮನಸಿಗಿಳಿದಿವೆ. ಕೆಲವೊಮ್ಮೆ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸಿ, ಪ್ರಸಿದ್ಧಿ ಸಿಕ್ಕ ಮೇಲೂ ಕೆಲ ನಟಿಯರನ್ನು ಕಂಟೆಂಟೆಂಟ್ ಓರಿಯಂಟೆಡ್ ಪಾತ್ರಗಳ ಸೆಳೆತ ಆವರಿಸಿಕೊಳ್ಳುತ್ತದೆ. ಆದರೆ, ದಕ್ಕುವುದು ಕೆಲವೇ ಕೆಲವರಿಗೆ ಮಾತ್ರ. ಈ ನಿಟ್ಟಿನಲ್ಲಿ ನೋಡೋದಾದರೆ, ಗ್ರೀಷ್ಮ ನಿಜಕ್ಕೂ ಅದೃಷ್ಟವಂತೆ. ನಟಿಯಾಗಬೇಕೆಂಬ ತೀವ್ರ ಹಂಬಲದೊಂದಿಗೆ ಮುಂದುವರೆಯುತ್ತಿರುವ ಆಕೆಗೆ ಅಪರೂಪದ ಪಾತ್ರಗಳು ತಾನೇತಾನಾಗಿ ಒಲಿದು ಬರುತ್ತಿವೆ. ಹಾಗೆ ಸಿಕ್ಕ ಪಾತ್ರಕ್ಕಾಗಿ ತಯಾರಾಗುವ ರೀತಿ, ಅದಕ್ಕೆ ಜೀವ ತುಂಬುವ ಪರಿಯೇ ಮತ್ತೊಂದಷ್ಟು ಬೆರಗಿನ ಪಾತ್ರಗಳಿಗೆ ಗ್ರೀಷ್ಮಾರನ್ನು ಮುಖಾಮುಖಿಯಾಗಿಸಿವೆ.
ಇದೀಗ ಕುಸುಮಳಾಗಿ, ಎಲ್ಲ ಹೆಣ್ಣು ಜೀವಗಳ ಒಳತೋಟಿಗಳ ಪ್ರಾತಿನಿಧಿಕ ಪಾತ್ರವೊಂದಕ್ಕೆ ಜೀವ ತುಂಬಿರುವವರು ಗ್ರೀಷ್ಮ. ಮೂಲತಃ ಬೆಂಗಳೂರು ಹುಡುಗಿ ಗ್ರೀಷ್ಮ ರಾಷ್ಟ್ರ ಮಟ್ಟದ ಸ್ವಿಮ್ಮರ್ ಕೂಡಾ ಹೌದು. ಸ್ವಿಮ್ಮಿಂಗಿನಲ್ಲಿ ಕಾಂತಾರ ಯಾತಿಯ ಸಪ್ತಮಿ ಗೌಡ ಇವರ ಜೊತೆಗಾತಿ. ವಕೀಲರು, ಶಿಕ್ಷಕ ವೃತ್ತಿಯವರೇ ತುಂಬಿದ ಸಂಪ್ರದಾಯಸ್ಥ ಕುಟುಂಬದವರಾದ ಗ್ರೀಷ್ಮಾಗೆ ಆರಂಭದಿಂದಲೂ ನಟನೆÀಯತ್ತ ಅತೀ ಆಸಕ್ತಿಯಿತ್ತು. ಸಾಮಾನ್ಯವಾಗಿ ಇಂಥಾ ಕುಟುಂಬಗಳ ಹೆಣ್ಣುಮಕ್ಕಳು ಇಂಥಾ ಕಲಾಸಕ್ತಿ ಹೊಂದಿದ್ದರೆ, ಹೆತ್ತವರ ಬೆಂಬಲ ಸಿಗುವುದು ತುಸು ತ್ರಾಸದಾಯಕ ಸಂಗತಿ. ಆ ವಿಚಾರದಲ್ಲಿ ಗ್ರೀಷ್ಮ ಅದೃಷ್ಟವಂತೆ. ಯಾಕೆಂದರೆ, ಪೋಷಕರು ಅವರಿಗೆ ತನ್ನಿಚ್ಛೆಯಂತೆ ಮುಂದುವರೆಯುವ ಸ್ವಾತಂತ್ರ್ಯ ಕೊಟ್ಟಿದ್ದರು. ಅದೆಲ್ಲವನ್ನೂ ಸರಿಕಟ್ಟಾಗಿ ಬಳಸಿಕೊಂಡು, ಒಂದೊಂದೇ ಹಂತಗಳನ್ನು ದಾಟಿ ಬಂದು ನಟಿಯಾಗಿ ನೆಲೆ ಕಂಡುಕೊಂಡ ಹಾದಿ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು.
ತನ್ನ ಅಭಿರುಚಿಗೆ ತಕ್ಕಂತೆ ಪರ್ಫಾರ್ಮಿಂಗ್ ಆಟ್ರ್ಸ್‍ನಲ್ಲಿ ಪದವಿ ಪಡೆದುಕೊಂಡಿದ್ದ ಗ್ರೀಷ್ಮ, ಮೇಜರ್ ಥಿಯೇಟ್ರ್ ಆಕ್ಟಿಂಗಿನಲ್ಲಿ ಡಿಪೊಮೋ ಕೂಡಾ ಮಾಡಿಕೊಂಡಿದ್ದಾರೆ. ಆ ಬಳಿಕ ನಾನಾ ಜಾಹೀರಾತುಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡು, ಆ ಮೂಲಕ ಒಂದಷ್ಟು ಭಾಷೆಗಳಲ್ಲಿ ಜನಪ್ರಿಯತೆ ಗಳಿಸಿಕೊಂಡ ಬಳಿಕ ಸಿನಿಮಾಗಳಲ್ಲಿ ನಟಿಸಬೇಕೆಂಬ ತುಡಿತ ಗ್ರೀಷ್ಮಾರನ್ನು ಕಾಡಲಾರಂಭಿಸಿತ್ತು. ಅದಕ್ಕೊಂದು ಭೂಮಿಕೆ ಒದಗಿಸಿಕೊಟ್ಟ ಸಿನಿಮಾ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ `ನಾತಿಚರಾಮಿ’. ಮಂಸೋರೇ ಫೇಸ್‍ಬುಕ್‍ನಲ್ಲಿ ಹಾಕಿದ್ದ ಪೋಸ್ಟ್ ಒಂದನ್ನು ಕಂಡು ಗ್ರೀಷ್ಮ ಆಡಿಷನ್ನಿಗೆ ಹೋಗಿದ್ದರು. ಬಳಿಕ ಸಣ್ಣ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದರು. ಅದು ಗ್ರೀಷ್ಮಾ ಪಾಲಿಗೆ ಮೊದಲ ಹೆಜ್ಜೆಯಾಗಿ ದಾಖಲಾಗುತ್ತದೆ.
ಅದಾದ ಬಳಿಕ ನೋಡಿ ಸ್ವಾಮಿ ನಾನಿರೋದೇ ಹೀಗೆ ಚಿತ್ರಕ್ಕವ ತಯಾರಿ ನಡೆಸುತ್ತಿದ್ದ ರಿಷಿ, ಪ್ರಧಾನ ಪಾತ್ರಕ್ಕಾಗಿ ಗ್ರೀಷ್ಮರನ್ನು ಸಂಪರ್ಕಿಸಿದ್ದರು. ಅದರಲ್ಲಿನ ಮೂವರು ನಾಯಕಯರ ಪಕಿ ಒಬ್ಬಾಗಿ ಆಯ್ಕೆ ಮಾಡಿಕೊಂಡಿದ್ದರು. ಅದು ನಾಯಕಿಯಾಗಿ ಗ್ರೀಷ್ಮಾರದ್ದು ಪ್ರಥಮ ಹೆಜ್ಜೆ. ಅದಾದ ಬಳಿಕ ಒಲಿದು ಬಂದಿದ್ದು ಮಾಲ್ಗುಡಿ ಡೇಸ್ ಚಿತ್ರದ ಅವಕಾಶ. ಆ ಸಿನಿಆದಲಿ ಗ್ರೀಷ್ಮ ವಿಜಯ್ ರಾಘವೇಂದ್ರರ ಜೊತೆ ಅಭಿನಯಿಸಿದ್ದರು. ಗಮನೀಯ ಅಂಶವೆಂದರೆ, ಹೀಗೆ ತಾನೇತಾನಾಗಿ ಗ್ರೀಷ್ಮಾರನ್ನು ಅರಸಿ ಬಂದ ಅವಕಾಶಗಳೆಲ್ಲವೂ ಪ್ರಯೋಗಾತ್ಮಕ ಗುಣಗಳನ್ನು ಹೊಂದಿರುಂಥವೇ. ಸಿಕ್ಕ ಪಾತ್ರಗಳು ಕೂಡಾ ಭಿನ್ನ ಧಾಟಿಯವುಗಳೇ. ಒಂದು ಸಣ್ಣ ಅಧಿಯಲ್ಲಿ ದೊಡ್ಡನುಭವ ಗಿಟ್ಟಸಿಕೊಂಡ ಗ್ರೀಷ್ಮ ಪಾಲಿಗೆ ಅಚಾನಕ್ಕಾಗಿ ಒದಗಿ ಬಂದ ಅವಕಾಶ `ನಾನು ಕುಸುಮ’ ಚಿತ್ರದ್ದು.
ನಾತಿ ಚರಾಮಿ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಗ್ರೀಷ್ಮ ನಟಿಸಿದ್ದರಲ್ಲಾ? ಆ ಚಿತ್ರದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದವರು ರಮೇಶ್. ಅದೊಂದು ದಿನ ಗ್ರೀಷ್ಮಾಗೆ ಕರೆ ಮಾಡಿದ್ದ ರಮೇಶ್ ಒಂದು ಚೆಂದದ ಪಾತ್ರ ಕಾಯುತ್ತಿರೋದರ ಸುಳಿವು ಕೊಟ್ಟಿದ್ದರು. ನಂತರ ರೀಡಿಂಗ್ ಪಡೆದುಕೊಂಡ ಗ್ರೀಷ್ಮಾಗೆ ಕಥೆ, ಪಾತ್ರಗಳೆಲ್ಲವೂ ಹಿಡಿಸಿದ್ದವು. ಆ ಕ್ಷಣದಲ್ಲಿ ಅವರ ಮುಂದೆ ಎರಡು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಕಾಶಗಳಿದ್ದವು. ಆ ಎರಡರಲ್ಲಿ ಗ್ರೀಷ್ಮಾಗೆ ತುಂಬಾ ಇಷ್ಟವಾಗಿದ್ದು ಕುಸಮಾ ಪಾತ್ರ. ಅದನ್ನೇ ಆಯ್ಕೆ ಮಾಡಿಕೊಂಡವರಿಗೆ ನಿರ್ದೇಶಕರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕಿತ್ತು. ಆ ನಂತರ ಆರಂಭವಾದದ್ದ ಕುಸುಮಾಳ ಪಾತ್ರವನ್ನು ಪರಿಣಾಮಕಾರಿಯಾಗಿ ಒಳಗಿಳಿಸಿಕೊಳ್ಳುವ ತುರ್ತಿನ ತಯಾರಿ!
ಆ ಪಾತ್ರ ಗ್ರೀಷ್ಮಾ ಪಾಲಿಗೆ ಅಪರಿಚಿತವಾಗಿದ್ದ ಅನುಭವಗಳ ಕಟಾಂಜನದಂತಿತ್ತು. ಅದೊಂದು ಪಾತ್ರ ಮಾತ್ರವೇ ಆಗಿರದೆ, ಹೆಣ್ಣುಮಕ್ಕಳೆಲ್ಲರ ತವಕ, ತಲ್ಲಣಗಳ ಪ್ರತಿನಿಧಿಯಂತಿತ್ತು. ಆ ನರ್ಸ್ ಪಾತ್ರವನ್ನು ಆವಾಹಿಸಿಕೊಳ್ಳುವ ಸಲುವಾಗಿಯೇ ಗ್ರೀಷ್ಮ, ಒಂದು ವಾರಗಳ ಕಾಲ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುತ್ತಾ, ಎಲವನ್ನೂ ಸೂಕ್ಷ್ಮವಾಗಿ ಗಮನಿಸಲಾರಂಭಿಸಿದ್ದರು. ನಂತರ ರವೀಂದ್ರ ಕಲಾಕ್ಷೇತ್ರದ ಬಾಜಿನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೂ ಭೇಟಿ ಕೊಟ್ಟು ಆ ವಾತಾವರಣ, ನರ್ಸ್, ಡಾಕ್ಟರುಗಳನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದ್ದರು. ಆ ನಂತರ ಕುಸುಮ ಎಂಬ ಪಾತ್ರದ ಒಂದೊಂದೇ ಪಕಳೆಗಳನ್ನು ಮನಸಿಗಾನಿಸಿಕೊಂಡು ಅಣಿಗೊಂಡಿದ್ದ ಗ್ರೀಷ್ಮಾಗೀಗ ಆ ಪಾತ್ರಕ್ಕೆ ಶಕ್ತಿ ಮೀರಿ ನ್ಯಾಯ ಸಲ್ಲಿಸಿದ ತೃಪ್ತಿ ಇದೆ.
ಕುಸುಮ ಎಂಬ ಹೆಸರಲ್ಲಿಯೂ ವಿಶೇಷತೆಯಿದೆ. ಅದನ್ನು ಈ ಕಥೆಗೆ ಪೂರಕವಾಗಿ ಹೂವಿನ ರೂಪಕವಾಗಿ ಬಳಸಿಕೊಳ್ಳಲಾಗಿದೆ. ಈ ಸಮಾಜದಲ್ಲಿ ಹೂವನ್ನು ದೂರದಿಂದಲೇ ನೋಡಿ ಮುದಗೊಳ್ಳುವವರಿದ್ದಾರೆ. ಅದನ್ನು ನೀರೆರೆದು ಪೋಶಿಸುವವರು, ಜತನಿದ ಕಾಪಾಡುವವರೂ ಇದ್ದಾರೆ. ಅದೇ ರೀತಿ ಅದನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹೊಸಕಿ ಹಾಕುವ ರಕ್ಕಸರಿದ್ದಾರೆ, ಬಳಸಿ ಬಿಸಾಡುವ ವಿಷಜಂತುಗಳೂ ಈ ಸಮಾಜದಲ್ಲಿ ಪಿತಗುಡುತ್ತಿವೆ. ಇಂಥಾ ವಾತಾವರಣದ ಸಮಯದ ಬೊಂಬೆಯಂಥಾ ಪಾತ್ರ ಕುಸುಮಾ. ಅಮ್ಮನನ್ನು ಕಳೆದುಕೊಂಡು, ಅಪ್ಪನನ್ನೇ ಜಗತ್ತೆಂದುಕೊಂಡು ಬದುಕೋ ಪಾತ್ರ ದಿನನಿತ್ಯ ಒಂದೊಂದು ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತೆ. ನೊಂದುಕೊಳ್ಳುತ್ತೆ. ಅದೆಲ್ಲ ಭಾವಗಳನ್ನೂ ಜೀವತುಂಬಿ ನಟಿಸಿದ ತುಂಬು ಖುಷಿ ಗ್ರೀಷ್ಮಾರಲ್ಲಿದೆ.
ಈಗಾಗಲೇ ಟ್ರೈಲರ್ ಮೂಲಕ ಕುಸುಮಾಳ ಪಾತ್ರದ ತೀವ್ರತೆ ಏನೆಂಬ ವಿಚಾರ ಜಾಹೀರಾಗಿದೆ. ಗ್ರೀಷ್ಮಾ ನಿರ್ವಹಿಸಿರುವ ಕುಸುಮ ಎಂಬ ಪಾತ್ರದ ಚಹರೆಗಳಂತೂ ಸಿನಿಮಾಸಕ್ತರನ್ನು ಬಹುವಾಗಿ ಕಾಡಿವೆ. ಬಹುಶಃ ಈ ಪಾತ್ರದ ಮೂಲಕ ಗ್ರೀಷ್ಮಾ ವೃತ್ತಿ ಬದುಕು ಮತ್ತೊಂದು ಎತ್ತರದತ್ತ ಪಥ ಬದಲಿಸಬಹುದು. ಸದ್ಯಕ್ಕು ನಾನು ಕುಸುಮ ಚಿತ್ರದ ಬೆನ್ನಲ್ಲಿಯೇ, ಗ್ರೀಷ್ಮ ನಟಿಸಿರುವ ಮತ್ತೊಂದಷ್ಟು ಸಿನಿಮಾಗಳು ಬಿಡುಗಡೆಯ ತಯಾರಿಯಲ್ಲಿವೆ. ಸೈತಾನ್, ಪ್ರಾಜೆಕ್ಟ್ ಶರಪಂಜರ ಮುಂತಾದ ಚಿತ್ರಗಳಲ್ಲಿಯೂ ಗ್ರೀಷ್ಮ ಅಭಿನಯಿಸಿದ್ದಾರೆ. ತೃಪ್ತಿ ಕುಲಕರ್ಣಿ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಥರ್ಡ್ ವ್ಹೀಲ್ ಚಿತ್ರದಲ್ಲವರು ಕನ್ನಡತಿ ಖಾತಿಯ ರಂಜನಿ ರಾಘನ್ ಜೊತೆ ನಟಿಸಿದ್ದಾರೆ. ಈ ಎಲ್ಲದರಲ್ಲಿಯೂ ಗ್ರೀಷ್ಮಾ ಪಾತ್ರ ವಿಶೇಷವಾಗಿಯೇ ಇರಲಿದೆಯಂತೆ…