ರಾಜಕಾರಣಿಗಳು ಆಗಾಗ ಹೀನಾಮಾನ ನಾಲಗೆ ಹರಿಯಬಿಡುವ ಮೂಲಕ ಸುದ್ದಿಯಾಗೋದಿದೆ. ಎದುರಾಳಿಗಳಿಗೆ ಟಾಂಗ್ ಕೊಡುವ ಭರದಲ್ಲಿ ಏನೇನೋ ಒದರಿ ಬಿಡುವ, ಆ ಮೂಲಕ ವಿನಾಕಾರಣ ವಿವಾದ ಎಬ್ಬಿಸುವ ಖಯಾಲಿ ಈ ದೇಶದ ಬಹುತೇಕ ರಾಜಕಾರಣಿಗಳಿಗಿದೆ. ಈ ಮಾತಿಗೆ ಸೂಕ್ತ ಪುರಾವೆಯಂತೆ ಇದೀಗ ತೆಲಂಗಾಣ ಕಾಂಗ್ರೆಸ್ ಮುಖಂಡ (bandla ganesh) ಬಾಂದ್ಲಾ ಗಣೇಶ್ ಆಂಧ್ರ ಸಿಎಂ (jagan mohan reddy) ಜಗನ್ ಮೋಹನ್ ರೆಡ್ಡಿಯನ್ನು ಹಣಿಯುವ ಭರದಲ್ಲಿ ಆತನ ಕ್ಯಾಬಿನೆಟ್ಟಿನ ಸಚಿವೆ, ಮಾಜೀ ನಟಿ ರೋಜಾರನ್ನೂ (actress roja) ಕೂಡಾ ಮೂದಲಿಸಿದ್ದಾನೆ. ಈ ರೋಜಾ ಒಬ್ಬಳು ಐಟಂ ರಾಣಿ ಅನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾನೆ!

ಈ ಮೂಲಕ ತೆಲುಗು ನಾಡಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಚಾಲನೆ ಸಿಕ್ಕಂತಾಗಿದೆ. ಆಂಧ್ರ ಮತ್ತು ತೆಲಂಗಾಣದ ನಡುವೆ ಪಕ್ಷಸಂಬಂಧಿ ರಾಜಕೀಯ ದ್ವೇಷ ಸದಾ ಚಾಲ್ತಿಯಲ್ಲಿದೆ. ಈ ಹಿಂದೆ ರೋಜಾ ತೆಲಂಗಾಣ ಮುಖ್ಯಮಂತ್ರಿ ರೇವಂಣತ್ ರೆಡ್ಡಿಯ ಬಗ್ಗೆ ಅವಹೇಳನಕಾರಿಯಾಗೊಂದು ಹೇಳಿಕೆ ಕೊಟ್ಟಿದ್ದರಂತೆ. ಅದಕ್ಕೆ ತಿರುಗೇಟು ನೀಡುವ ಭರದಲ್ಲಿ ಬಾಂದ್ಲಾ ಗಣೇಶ್ ಎಡವಟ್ಟು ಮಾಡಿಕೊಂಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಒಬ್ಬ ಆಕ್ಸಿಡೆಂಟಲ್ ಮುಖ್ಯಮಂತ್ರಿ ಅಂದಿರುವ ಬಾಂದ್ಲಾ, ರೋಜಾ ಐಂಟಂ ರಾಣಿ ಎಂದೂ ಮೂದಲಿಸಿದ್ದಾರೆ. ಈ ಮೂಲಕ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಭಿನ್ನ ಪಕ್ಷಗಳ ನಡುವೆ ಮತ್ತೊಂದು ಸಲ ಬೆಂಕಿ ಹೊತ್ತಿಕೊಂಡಿದೆ.

ಆಂಧ್ರ ಪ್ರದೇಶದಲ್ಲಿ ಭಾರೀ ಪ್ರಭಾವ ಹೊಂದಿದ್ದ ವೈ ಎಸ್ ರಾಜಶೇಖರ ರೆಡ್ಡಿ ದುರಂತ ಸಾವಿಗೀಡಾದ ನಂತರ ತೆಲುಗುನಾಡಿನ ರಾಜಕೀಯ ಕವಲೊಡೆದಿದೆ. ತನ್ನ ತಂದೆಯ ಮರಣದ ನಂತರ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಜಗನ್ ಮೋಹನ್ ರೆಡ್ಡಿ ವೈ ಎಸ್ ಆರ್ ಕಾಂಗ್ರೆಸ್ ಪPಕ್ಷ ಹುಟ್ಟು ಹಾಕಿ, ಗೆದ್ದು ಮುಖ್ಯಮಂತ್ರಿಯಾಗಿದ್ದೀಗ ಇತಿಹಾಸ. ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್‍ದ ವಿರೋಧಿ ಪಡೆಯೀಗ ತೆಲಂಗಾಣದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಈ ಅವಧಿಯ ತುಂಬೆಲ್ಲ ಜಗನ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಯುದ್ಧವೇ ನಡೆದು ಹೋಗಿದೆ. ಈಗ ಕೊಂಚ ತಣ್ಣಗಾದಂತೆ ಕಂಡರೂ ಈ ಪಕ್ಷಗಳ ನಾಯಕರು ಪರಸ್ಪರ ಬೈದಾಡಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಬಾಂದ್ಲಾ ಗಣೇಶ್ ಹೇಳಿಕೆ ರಾಜಕೀಯದಾಚೆಗೂ ಒಂದಷ್ಟು ಗಂಭೀಆರ ಸ್ವರೂಪ ಪಡೆದುಕೊಳ್ಳುತ್ತಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!