ರಾಕಿಂಗ್ ಸ್ಟಾರ್ ಯಶ್ (rocking star yash) ಇದೀಗ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಲೆಯಾಳಂ (maleyalam film industry) ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗೀತು ಮೋಹನ್ ದಾಸ್ ಸಾರಥ್ಯದ ಸಿನಿಮಾ ಟಾಕ್ಸಿಕ್. ಹಾಗೆ ನೋಡಿದರೆ, ಕೆಜಿಎಫ್ ಮೊದಲ ಭಾಗದಿಂದಲೇ ಯಶ್ ಅಭಿಮಾನಿಗಳಿಗೆ ಅವುಡುಗಚ್ಚಿ ಕಾಯುವ ಸಂದಿಗ್ಧವೊಂದು ಎದುರಾಗಿತ್ತು. ಎರಡನೇ ಭಾಗದಲ್ಲಿಯೂ ಅದು ಅನೂಚಾನವಾಗಿ ಮುಂದುವರೆದಿತ್ತು. ಕಡೆಗೂ (toxic movie) ಟಾಕ್ಸಿಕ್ ಮೂಲಕ ಅದು ಕೊನೆಗೊಳ್ಳುತ್ತದೆಂಬ ಆಶಾವಾದ ಮೊಳೆತುಕೊಂಡಿತ್ತು. ಈ ಚಿತ್ರ ಟೇಕಾಫ್ ಆಗಿದ್ದ ರೀತಿ ಮತ್ತು ಚಿತ್ರೀಕರಣದ ವೇಗಗಳೆಲ್ಲವೂ ಯಶ್ ಅಭಿಮಾನಿಗಳನ್ನು ಥ್ರಿಲ್ ಆಗಿಸಿದ್ದದ್ದು ಸತ್ಯ. ಆದರೀಗ, ಸಂದರ್ಶನವೊಂದರಲ್ಲಿ ಟಾಕ್ಸಿಕ್ ಬಿಡುಗಡೆಯ ಬಗ್ಗೆ ಶಾಕಿಂಗ್ ಹೇಳಿಕೆಯೊಂದು ಖುದ್ದು ಯಶ್ ಕಡೆಯಿಂದಲೇ ಜಾಹೀರಾಗಿದೆ!
ಟಾಕ್ಸಿಕ್ ಅನ್ನು ಬೇಗನೆ ಕಂಪ್ಲೀಟ್ ಮಾಡಿ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಡಬೇಕೆಂಬ ಇರಾದೆ ಯಶ್ (yash) ಅವರಿಗಿದ್ದದ್ದು ನಿಜ. ಆದರೆ, ಒಟ್ಟಾರೆ ಸಿನಿಮಾದ ಕಥನವೇ ಒಂದಷ್ಟು ಕಾಲಾವಕಾಶ ಬೇಡುವ ವಿಚಾರ ಚಿತ್ರೀಕರಣದ ಹಂತದಲ್ಲಿ ಗಮನಕ್ಕೆ ಬಂದಿದೆ. ಅದೇನೇ ಪ್ರಯತ್ನ ಪಟ್ಟರೂ ನಿರೀಕ್ಷೆಯಂತೆ ಮುಂದಿನ ವರ್ಷ ಏಪ್ರಿಲ್ ತಿಂಗಳಿನಲ್ಲಿ ಟಾಕ್ಸಿಕ್ ಅನ್ನು ಬಿಡುಗಡೆಗೊಳಿಸುವ ಅವಕಾಶ ಸಿಗೋ ಸಾಧ್ಯತೆಗಳಿಲ್ಲ. ಈ ಕಾರಣದಿಂದಲೇ ಏಪ್ರಿಲ್ ನಲ್ಲಿ ಟಾಕ್ಸಿಕ್ ತೆರೆಗಾಣೋದಿಲ್ಲ ಎಂಬ ವಿಚಾರವನ್ನು ಯಶ್ ತೆರೆದಿಟ್ಟಿದ್ದಾರೆ. ಈ ಮೂಲಕ ಬೇಗನೆ ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳ ಕಾತರಕ್ಕೆ ತಣ್ಣೀರೆರಚಿದಂತಾಗಿದೆ. ಇಂಥಾದ್ದೊಂದು ಶಾಕಿಂಗ್ ಸುದ್ದಿಯ ಬೆನ್ನಲ್ಲಿಯೇ ಮತ್ತೊಂದು ಖುಷಿಯ ಸಂಗತಿಯನ್ನೂ ಕೂಡಾ ಯಶ್ ಹಂಚಿಕೊಂಡಿದ್ದಾರೆ.
ಅಭಿಮಾನಿ ಬಳಗದಲ್ಲಿ ಕೆಜಿಎಫ್ ಛಾಪ್ಟರ್3 (kgf3) ಬಗ್ಗೆ ಅತೀವ ಕುತೂಹಲವಿತ್ತು. ಆದರೆ, ಪ್ರಶಾಂತ್ ನೀಲ್ ಆಗಲಿ, ಯಶ್ ಆಗಲಿ ಈ ಬಗ್ಗೆ ಮಾತಾಡಿರಲಿಲ್ಲ. ಇದರ ನಡುವೆ ಕೆಜಿಎಫ್ ಚಾಪ್ಟರ್೩ ಬಗ್ಗೆ ತಯಾರಿ ಆರಂಭವಾಗಿದೆಯಂತೆ. ಹಾಗಂತ ಯಶ್ ಹೇಳಿಕೊಂಡಿದ್ದಾರೆ. ಅತ್ತ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ. ಇತ್ತ ಯಶ್ ಟಾಕ್ಸಿಕ್ ಮತ್ತು ರಾಮಾಯಣ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥಾದ್ದರ ನಡುವೆಯೂ ನೀಲ್ ಒಂದೆಳೆ ಕಥೆಯನ್ನು ಯಶ್ ಗೆ ಹೇಳಿದ್ದಾರಂತೆ. ಈ ಬಗ್ಗೆ ಅವರಿಬ್ಬರ ನಡುವೆ ಒಂದು ಸುತ್ತಿನ ಚರ್ಚೆಯೂ ನಡೆದಿದೆ. ಸದ್ಯಕ್ಕೆ ನೀಲ್ ಜ್ಯೂಊನಿಯರ್ ಎನ್ಟಿಆರ್ ಚಿತ್ರದತ್ತ ಗಮನ ಹರಿಸಿದ್ದಾರೆ. ಅದು ಮುಗಿಯುತ್ತಲೇ, ಯಶ್ ಕೈಲಿರುವ ಪ್ರಾಜೆಕ್ಟುಗಳು ಅಂತಿಮ ಹಂತ ತಲುಪಿಕೊಳ್ಳಲಿವೆ. ಆ ನಂತರ ಕೆಜಿಎಫ್ ಚಾಪ್ಟರ್೩ಗೆ ವಿದ್ಯುಕ್ತ ಚಾಲನೆ ಸಿಗಲಿದೆ.