yogarajbhat – Cini Shodha

Comedy KIhiladigalu Season 5: ಕಾಮಿಡಿ ಕಿಲಾಡಿಗಳ ವಿರುದ್ಧ ಹಬೆಯಾಡಿತು ಆಕ್ರೋಶ!
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್೫ ಬಗೆಗೀಗ ಭಾರೀ ಚರ್ಚೆಗಳು ನಡೆಯುತ್ತಿವೆ. ಹೆಚ್ಚೇನಲ್ಲ; ಈಗ್ಗೆ ಏಳೆಂಟು ವರ್ಷಗಳ ಹಿಂದೆ ಹೊಸಾ ಹೊಸ ಕಾರ್ಯಕ್ರಮಗಳ ಮೂಲಕ, ರಿಯಾಲಿಟಿ ಶೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ವಾಹಿನಿ ಜೀ ಕನ್ನಡ. ಪ್ರತಿಯೊಂದರಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರ ಮನಗೆಲ್ಲುವಂತೆ ಈ ವಾಹಿನಿಯನ್ನು ಕಟ್ಟಿ ನಿಲ್ಲಿಸಿದ್ದ ಕೀರ್ತಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್‌ಗೆ ಸಲ್ಲುತ್ತೆ. ಎಲ್ಲ ಸ್ಪರ್ಧೆಯನ್ನು ಕ್ರಿಯೇಟಿವಿಟಿಯ ಮೂಲಕವೇ ಎದುರಿಸಿ ಒಂದು ವಾಹಿನಿಯನ್ನು ಕಟ್ಟಿ ನಿಲ್ಲಿಸೋದಿದೆಯಲ್ಲಾ? ಅದು ನಿಜಕ್ಕೂ ಒಂದು ಸಾಹಸ. ಈ ನಿಟ್ಟಿನಲ್ಲಿ ಯುವ ಸಾಹಸಿಯಾಗಿ ಕಂಡಿದ್ದ ರಾಘವೇಂದ್ರ ಬರಬರುತ್ತಾ ಟಿಆರ್‌ಪಿ ಮರ್ಜಿಗೆ ಒರಗಿಕೊಂಡು ಹಂತ ಹಂತವಾಗಿ ಅಧ್ವಾನವೆಬ್ಬಿಸುತ್ತಾ ಬರಲಾರಂಭಿಸಿದ್ದರು. ಈಗಂತೂ ಯಾವ ವಾಹಿನಿಯನ್ನು ಉತ್ತುಂಗಕ್ಕೇರಿಸಿದ್ದರೋ, ಅದನ್ನು ಕೀಳು ಅಭಿರುಚಿಯ ಪಾತಾಳಕ್ಕಿಳಿಸಿದ ಕುಖ್ಯಾತಿಯೂ ರಾಘವೇಂದ್ರ ಹುಣಸೂರ್ ಖಾತೆಗೆ ಜಮೆಯಾಗಿ ಬಿಟ್ಟಿದೆ!

ಅಷ್ಟಕ್ಕೂ ಇತ್ತೀಚಿನ ಸೀಜನ್ನುಗಳ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಥರ್ಡ್‌ಗ್ರೇಡ್ ಹಾಸ್ಯಗಳ ಮೂಲಕ ಮಾನ ಕಳೆದುಕೊಂಡಿತ್ತು. ತೋಳಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಹಚ್ಚೆ ಹಾಕಿಸಿಕೊಂಡು, ಸೋಶಿಯಲ್ ಮೀಡಿಯಾ ಮೂಲಕ ಅಬ್ರಕದಬ್ರ ಕನ್ನಡದಲ್ಲಿ ಏನೇನೋ ಬೋಧಿಸುವ ಜಗ್ಗೇಶ್ ಜಡ್ಜ್ ಆಗಿ ಆ ಕಾರ್ಯಕ್ರಮವನ್ನು ಮತ್ತಷ್ಟು ಹಡಾಲೆಬ್ಬಿಸಿದ್ದು ದುರಂತ ವಾಸ್ತವ. ಇದೆಲ್ಲ ಆಗಿ ಒಂದಷ್ಟು ಕಾಲದ ನಂತರ ಶುರುವಾಗಿದ್ದ ಸೀಜನ್೫ರಲ್ಲಿ ಅಸಲೀ ಹಾಸ್ಯದ ಸ್ವಾದವಿರಬಹುದೆಂಬ ಕ್ಷೀಣ ನಿರೀಕ್ಷೆಯೊಂದು ಪ್ರೇಕ್ಷಕರಲ್ಲಿದ್ದದ್ದು ಸತ್ಯ. ಅದು ಮೊದಲ ಒಂದಷ್ಟು ಎಪಿಸೋಡುಗಳಲ್ಲಿಯೇ ನೇಣು ಹಾಕಿಕೊಂಡಿತ್ತು. ಇದೀಗ ಟಿಆರ್‌ಪಿ ತಲುಬಿಗಾಗಿ ಈ ಕಾರ್ಯಕ್ರಮದ ಆಯೋಜಕರು ತುಳಿದಿರುವ ಹಾದಿ ಇದೆಯಲ್ಲಾ? ಅದರ ವಿರುದ್ಧ ಪ್ರಜ್ಞಾವಂತರೆಲ್ಲ ಕೊತಗುಡಲಾರಂಭಿಸಿದ್ದಾರೆ.

ಇದು ಹೇಳಿಕೇಳಿ ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಒಳ್ಳೆ ಸರಕುಗಳಿಗಿಂತಲೂ, ಕೆಟ್ಟದ್ದೇ ಹೆಚ್ಚಾಗಿ ಬಿಕರಿಯಾಗುತ್ತವೆ. ಪೆಕರು ಪೆಕರಾಗಿ ಡೈಲಾಗು ಉದುರಿಸಿದಾತ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂಬ ಭ್ರಮೆಗೆ ಬಲಿಯಾಗುತ್ತಾನೆ. ಚೆಂದದ ಹಾಡನ್ನು ದ್ರಾಬೆಯಂತೆ ಹಾಡಿದ ಎಳಸು ಹುಡುಗಿಯೊಬ್ಬಳು ಸೆಲೆಬ್ರಿಟಿಯಂತೆ ಮಿಂಚುತ್ತಾಳೆ. ಅವಳ್ಯಾರೋ ದೆವ್ವ ಮೆಟ್ಟಿಸಿಕೊಂಡವಳಂತೆ ವಿಕಾರವಾಗಿ ಅರಚಾಡುತ್ತಾಳೆ. ಮತ್ಯಾವನೋ ಬಟ್ಟೆ ಹರಿದುಕೊಂಡು ಕುಣಿದಾಡುತ್ತಾನೆ. ಇಂಥಾ ಕಿತಾಪತಿಗಳನ್ನೆಲ್ಲ ನಿರ್ಲಕ್ಷ್ಯ ಮಾಡಿದರೆ, ಈ ಬಗೆಯ ವಿಕೃತಿಗಳಿಗೆ ಮಾರುಕಟ್ಟೆಯಿಲ್ಲ ಎಂಬ ಸಂದೇಶವನ್ನ ತಣ್ಣಗೆ ರವಾನಿಸಿದಂತಾಗುತ್ತೆ. ಮತ್ತೊಂದಷ್ಟು ಕೀಟಬಾಧೆಯಿಂದ ಈ ಸಮಾಜ ತಪ್ಪಿಸಿಕೊಂಡಂತಾಗುತ್ತೆ.

ಆದರೆ, ರಾಘವೇಂದ್ರ ಹುಣಸೂರನ ಸಾರಥ್ಯದಲ್ಲಿ ಇಂಥಾ ಎಳಸುಯ ಕುನ್ನಿಗಳಿಗೆ ಕಾಮಿಡಿ ಕಿಲಾಡಿಯಂಥಾ ದೊಡ್ಡ ವೇದಿಕೆ ಕಲ್ಪಸಲಾಗುತ್ತಿದೆ. ಇದಕ್ಕಿಂತಲೂ ದುರಂತ ಬೇರೇನಿರಲು ಸಾಧ್ಯ? ಅದ್ಯಾರೋ ಹುಡುಗಿಯೊಬ್ಬಳಿ ಹೂವಿನ ಬಾಣದಂತೆ ಎಂಬ ಹಾಡನ್ನು ಅಪಭ್ರಂಶಗೊಳಿಸಿ ಹಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದಳು. ಅದರ ಮೂಲಕ ಆಕೆಗೆ ಸಿಕ್ಕ ಭ್ರಾಮಕ ಪಬ್ಲಿಸಿಟಿ ಕಂಡ ಪ್ರಜ್ಞಾವಂತರು ಸೋಶಿಯಲ್ ಮೀಡಿಯಾ ಮೂಲಕವೇ ತಿಳಿ ಹೇಳಲು ಪ್ರಯತ್ನಿಸಿದ್ದರು. ಆದರೀಗ ಕಾಮಿಡಿ ಕಿಲಾಡಿ ಶೋನಲ್ಲಿ ಆ ಹುಡುಗಿಗೆ ಅವಕಾಶ ಕೊಡಲಾಗಿದೆ. ಇದಕ್ಕಿಂತಲೂ ಭೀಕರ ವಿಚಾರವೆಂದರೆ, ಗಾಂಜಾ ಗಿರಾಕಿಯಂತೆ ಕಾಣುವ ಅಮುಕುಡುಮುಕುವನ್ನು ಕೂಡಾ ಕಾಮಿಡಿ ಕಿಲಾಡಿಗಳ ದೊಡ್ಡಿಗೆ ಸೇರಿಸಿಕೊಳ್ಳಲಾಗಿದೆ.

ಧ್ರುವ ಸರ್ಜಾನ ಮನೆ ಮುಂದೆ ನಿಂತು ಅರ್ಥವಿಲ್ಲದೆ ಅರಚಾಡುವ ಮೂಲಕ ಮುನ್ನೆಲೆಗೆ ಬಂದಿದ್ದವನು ಅಮುಕುಡುಮುಕು. ಇಂಥವನು ಆ ನಂತರ ಸೋಶಿಯಲ್ ಮೀಡಿಯಾದ ಚಪ್ರಿ ಗ್ಯಾಂಗುಗಳ ನಡುವೆ ಕಾಣಿಸಿಕೊಳ್ಳಲಾರಂಭಿಸಿದ್ದ. ಕಷ್ಟಪಟ್ಟು ದುಡಿಯೋ ಯೋಗ್ಯತೆಯಿಲ್ಲದೆ ತಿರ್ಕೆ ಶೋಕಿ ಅಂಟಿಸಿಕೊಂಡಿರೋ ಇವನೊಳಗೆ ಜಗ್ಗೇಶ್, ಯೋಗರಾಜ ಭಟ್ ಥರದವರಿಗೆ ಅದೆಂಥಾ ಪ್ರತಿಭೆ ಕಾಣಿಸಿತೋ ಭಗವಂತನೇ ಬಲ್ಲ. ಕಡೆಗೂ ಈ ಕ್ರಿಮಿ ಕಾಮಿಡಿ ಕಿಲಾಡಿಗಳ ವೇದಿಕೆಯಲ್ಲಿ ಪಿತಗುಡಲಾರಂಭಿಸಿದೆ. ಈತನ ಪುಟಗೋಸಿ ಕಾಮಿಡಿಗೆ ಜಗ್ಗೇಶಿ ಮೈಕುಲುಕಿಸಿ ನಗುತ್ತೆ. ಯೋಗರಾಜ ಭಟ್ಟರ ಮುಖದಲ್ಲೂ ಒಂದು ಯಾಂತ್ರಿಕ ನಗೆ ಕಾಣಿಸಿಕೊಳ್ಳುತ್ತೆ. ಆದರೆ, ದುರ್ಬೀನು ಹಾಕಿ ಹುಡುಕಿದರೂ, ಮನೋರಂಜನೆಯ ಅಭಿರುಚಿಯನ್ನೇ ಹಾಳುಗೆಡವಿದ ಪಾಪಪ್ರಜ್ಞೆ ಮಾತ್ರ ಕಾಣಿಸುತ್ತಿಲ್ಲ.

Love Mocktail3 Song: ಮನಸಿಗೆ ಮುತ್ತಿಟ್ಟ ಲವ್ ಮಾಕ್ಟೇಲ್3ಗೀತೆ!

ಈ ಹಿಂದೆ ಶೋ ಒಂದಕ್ಕೆ ಪ್ರಸಿದ್ಧ ಯೂಟ್ಯೂಬರ್ ಡಾಕ್ಟರ್ ಬ್ರೋನನ್ನು ಏಕೆ ಕರೆಸುತ್ತಿಲ್ಲ ಅಂತೊಂದು ಪ್ರಶ್ನೆ ರಾಘವೇಂದ್ರ ಹುಣಸೂರನಿಗೆ ಎದುರಾಗಿತ್ತು. ಆಗ ಹುಣಸೂರ ನಿಮ್ಮಜ್ಜಿಗೆ ಡಾ ಬ್ರೋ ಗೊತ್ತಾ ಅಂತ ಮರು ಪ್ರಶ್ನೆ ಎಸೆಯುವ ಮೂಲಕ ವಿವಚಾದಕ್ಕೀಡಾಗಿದ್ದರು. ಬಹುಶಃ ಈ ಅಮುಕುಡುಮುಕು ಥರದ ಪೀಡೆಗಳೆಲ್ಲ ರಾಘವೇಂದ್ರದ ಅಜ್ಜಿಗೆ ಗೊತ್ತಿರಬಹುದು. ಆ ಕಾರಣದಿಂದಲೇ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅವಕಾಶ ಕೊಟ್ಟಿರಬಹುದೇನೋ… ಇಂಥಾ ಅಯೋಗ್ಯ ನಡೆಯ ಮೂಲಕ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಗಂಭೀರವಾಗಿಯೇ ನಗೆಪಾಟಲಿಗೀಡಾಗಿದೆ. ಅಮುಕುಡುಮುಕು ಮುಂತಾದ ಅಯೋಗ್ಯರಿಗೆ ವೇದಿಕೆ ಕಲ್ಪಿಸೋದಿದೆಯಲ್ಲಾ? ಅದು ಕಲೆಗೆ ಮಾಡೋ ಅಸಲಿ ಅವಮಾನ. ಇಂಥಾ ಶೋಗಳ ಆಡಿಷನ್ನಿನಲ್ಲಿ ನಿಂತು ಅವಕಾಶ ಸಿಗದೆ ನೊಂದ ಅದೆಷ್ಟೋ ಜೀವಗಳ ಶಾಪ ಖಂಡಿತವಾಗಿಯೂ ಈ ಶೋನ ಭಾಗವಾಗಿರುವವರಿಗೆ ತಟ್ಟದಿರೋದಿಲ್ಲ.

ಈ ನಡೆಯ ಮೂಲಕ ವಿಕೃತ ವರ್ತನೆ, ಅತಿರೇಕ, ಹಾರಾಟ, ಚೀರಾಟಗಳೇ ಪ್ರಸಿದ್ಧಿಗಿರುವ ಮಾರ್ಗ ಎಂಬ ನಿರ್ಧಾರಕ್ಕೆ ಹೊಸಾ ತಲೆಮಾರು ಒಗ್ಗಿಕೊಳ್ಳುವ ಅಪಾಯವಿದೆ. ಚಿತ್ರ ವಿಚಿತ್ರ ವರ್ತನೆಗಳಿಂದಲೇ ಮುನ್ನೆಲೆಗೆ ಬಂದಿರುವವರನ್ನೇ ಆಯ್ಕೆ ಮಾಡೋದಾದರೆ ಯಾವ ಸೌಭಾಗ್ಯಕ್ಕೆ ಆಡಿಷನ್ನಿನ ನಾಟಕವಾಡುತ್ತೀರಿ? ನಿಜವಾದ ಕಲೆಯನ್ನು ಎದೆಯೊಳಗಿಟ್ಟುಕೊಂಡು ಅವಕಾಶಕ್ಕಾಗಿ ಕಾಯೋ ಜೀವಗಳನ್ನು ಯಾಶಕೆ ನಿರಾಸೆಗೀಡು ಮಾಡುತ್ತೀರಿ? ಹಾಡೊಂದನ್ನು ಮನ ಬಂದಂತೆ ಒರಲುವುದೇ ಪ್ರಸಿದ್ಧಿಯ ಫಾರ್ಮುಲಾಶ ಅಂತಾದರೆ, ಯಾವ ಮುಖವಿಟ್ಟುಕೊಂಡು ನಿಮ್ಮದೇ ವಾಹಿನಿಯಲ್ಲಿ ಸರೆಗಮಪದಂಥಾ ಶೋಗಳನ್ನು ನಡೆಸುತ್ತೀರಿ? ಹಿರಿಯರಾದ ಜಗ್ಗೇಶ್, ಯೋಗರಾಜ ಭಟ್ ಮೆದುಳೇನು ಬಾಟಮ್ಮಿಗಿಳಿದಿದೆಯಾ? ಇಂಥಾ ಅಧ್ವಾನಗಳನ್ನೇ ಕಾಮಿಡಿಯಾಗಿಸಿ ಕಾಸು ಗುಂಜಲು ನಿಂತಿದ್ದೀರೆಂದರೆ ನಿಮ್ಮಂಥಾ ಕಲಾ ದ್ರೋಹಿಗಳು ಮತ್ಯಾರಿರಲು ಸಾಧ್ಯ? ರಾಘವೇಂದ್ರ ಹುಣಸೂರ್‌ಗೆ ಮಾನ ಮರ್ಯಾದೆಗಳ ಪರಿಚಯವಿದ್ದರೆ ಮೊದಲು ಇಂತಾ ಅಧ್ವಾನಗಳಿಗೆ ಬ್ರೇಕ್ ಹಾಕಲಿ. ಹಾಗಂತ ಪ್ರೇಕ್ಷಕರೇ ಒತ್ತಾಯಿಸುತ್ತಿದ್ದಾರೆ!

keywords: comedy, kkhiladigalu, season5, jaggesh, raghavendra, hunasur, yogaraj bhat, amukudumuku, zee kannada, cinishodha

The post Comedy KIhiladigalu Season 5: ಕಾಮಿಡಿ ಕಿಲಾಡಿಗಳ ವಿರುದ್ಧ ಹಬೆಯಾಡಿತು ಆಕ್ರೋಶ! appeared first on Cini Shodha.

Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!
ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸೂಪರ್ ಹಿಟ್’ ಚಿತ್ರವೀಗ ಸಿನಿಮಾ ಪ್ರೇಮಿಗಳ ನಡುವೆ ಭರ್ಜರಿ ಚರ್ಚೆ ಹುಟ್ಟುಹಾಕಿದೆ. ಅದೆಂಥಾದ್ದೇ ಅಲೆಯಿದ್ದರೂ ಕೂಡಾ ಹಾಸ್ಯಪ್ರಧಾನ ಸಿನಿಮಾಗಳತ್ತ ಒಂದು ಸೆಳೆತ ಇದ್ದೇ ಇರುತ್ತೆ. ಅದರಲ್ಲಿಯೂ ಪ್ರಯೋಗಾತ್ಮಕ ಗುಣ ಹೊಂದಿರೋ ಸಿನಿಮಾ ಅಂದಮೇಲೆ ಅದರತ್ತ ಸಹಜವಾಗಿಯೇ ಪ್ರೇಕ್ಷಕರ ಚಿತ್ತ ಹೊರಳಿಕೊಳ್ಳುತ್ತೆ. ಪ್ರೇಕ್ಷಕರು ಮಾತ್ರವಲ್ಲದೆ, ಸಿನಿಮಾ ರಂಗದ ಭಾಗವಾಗಿರುವವರೂ ಕೂಡಾ ಇತ್ತೀಚೆಗೆ ಬಿಡುಗಡೆಗೊಂಡಿದ್ದ ಸೂಪರ್ ಹಿಟ್ ಟೀಸರ್ ಕಂಡು ಬೆರಗಾಗಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ ಈ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಅವರು ಹಂಚಿಕೊಂಡಿರುವ ಅಭಿಪ್ರಾಯದಿಂದಾಗಿ ಚಿತ್ರತಂಡದ ಭರವಸೆ ನೂರ್ಮಡಿಯಾಗಿದೆ!

ಸಾಮಾನ್ಯವಾಗಿ ಯೋಗರಾಜ್ ಭಟ್ ತಮ್ಮ ಸಿನಿಮಾದಾಚೆಗೆ ಹೊಸಬರ ಪ್ರಯತ್ನಗಳತ್ತ ಬೆರಗಿನ ಕಣ್ಣಿಟ್ಟಿರುತ್ತಾರೆ. ಕಾಲ ಕಾಲಕ್ಕೆ ಚೆಂದದ ಪ್ರಯತ್ನಗಳನ್ನು ಗುರುತಿಸುವ ಮೂಲಕ ಬೆನ್ತಟ್ಟಿ ಪ್ರೋತ್ಸಾಹಿಸುವ ಗುಣವನ್ನೂ ಹೊಂದಿದ್ದಾರೆ. ಅದರ ಭಾಗವಾಗಿಯೇ ಸೂಪರ್ ಹಿಟ್ ಸಿನಿಮಾದ ಟ್ರೈಲರ್ ನೋಡಿ ಥ್ರಿಲ್ ಆಗಿರೋ ಭಟ್ಟರು ಇದು ಪಕ್ಕಾ ಸೂಪರ್ ಹಿಟ್ ಸಿನಿಮಾ ಎಂಬ ಭವಿಷ್ಯ ನುಡಿದಿದ್ದಾರೆ. `ಅದ್ಭುತ ಶೀರ್ಷಿಕೆ, ಅಪರೂಪದ ಅಪ್ರೋಚ್ ॒ಬರಹಗಾರ, ನಿರ್ದೇಶಕ ವಿಜಯಾನಂದ್‌ಗೆ ಹಾಡೂ ಇಡೀ ತಂಡಕ್ಕೆ ಶುಭವಾಗಲಿ. ಹೆಸರಿನಂತೆಯೇ ಚಿತ್ರವೂ ಸೂಪರ್ ಹಿಟ್ ಆಗಲಿ’ ಅಂತ ಯೋಗರಾಜ್ ಭಟ್ ಶುಭ ಕೋರಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಗೊಂಡಿತ್ತು. ಒಂದು ಗಹನವಾದ ಕಥೆಯನ್ನು, ಹಾಸ್ಯದ ಚುಂಗುಹಿಡಿದು ಹೇಳಿರೋ ಸೂಚನೆಯೊಂದು ಟೀಸರ್ ಮೂಲಕ ಗೋಚರಿಸಿದೆ. ಹೇಳಿಕೇಳಿ, ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿರುವ ಗಿಲ್ಲಿ ನಟನ ಹವಾ ಊರೆಲ್ಲ ಹಬ್ಬಿಕೊಂಡಿದೆ. ಪಕ್ಕಾ ಹಾಸ್ಯದ ಮೂಲಕ, ಸೆನ್ಸ್ ಆಫ್ಗ್ ಹ್ಯೂಮರ್ ಮೂಲಕ ಗಿಲ್ಲಿ ಬಿಗ್‌ಬಾಸ್ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾನೆ. ಇದೇ ಹೊತ್ತಿನಲ್ಲಿ ಆತ ನಾಯಕನಾಗಿರೋ ಸೂಪರ್ ಹಿಟ್ ಚಿತ್ರದ ಟೀಸರ್ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಇಂಥಾ ಘಳಿಗೆಯಲ್ಲಿಯೇ ಯೋಗರಾಜ್ ಭಟ್ಟರ ಕಡೆಯಿಂದ ಬಂದಿರೋ ಮೆಚ್ಚುಗೆ ಮತ್ತು ಶುಭಾಶಯದಿಂದ ನಿರ್ದೇಶಕ ವಿಜಯಾನಂದ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ.

ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.

The post Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್! appeared first on Cini Shodha.

garadi movie song: ಮತ್ತೆ ಯೋಗರಾಜ್ ಭಟ್- ಹರಿಕೃಷ್ಣ ಜೋಡಿಯ ಮೋಡಿ!
ಯೋಗರಾಜ್ ಭಟ್ (director yogaraj bhat) ನಿರ್ದೇಶನದ ಗರಡಿ ದಿನಕ್ಕೊಂದೊಂದು ರೀತಿಯಲ್ಲಿ ಪ್ರೇಕ್ಷಕರ ನಡುವೆ ಗಿರಕಿ ಹೊಡೆಯುತ್ತಿದೆ. ಕಾಲಕ್ಕೆ ತಕ್ಕಂತೆ ಹೊಸಾ ಪೀಳಿಗೆಗೆ, ಟ್ರೆಂಡಿಗೆ ತಕ್ಕಂತೆ ಅಪ್ ಡೇಟಾಗೋದು ಯೋಗರಾಜ್ ಭಟ್ ಸ್ಪೆಷಾಲಿಟಿ. ಒಂದರ್ಥದಲ್ಲಿ ನಾನಾ ನಮೂನೆಯ ಟ್ರೆಂಡುಗಳನ್ನು ಸ್ವತಃ ಭಟ್ಟರೇ ಹುಟ್ಟು ಹಾಕಿದ್ದಿದೆ. (gardi movie) ಗರಡಿ ಚಿತ್ರ ಶುರುವಾದ ನಂತರವಂತೂ ಅವರು ತಮ್ಮ ಮಾಮೂಲಿ ಪಥದಿಂದ, ಬೇರ್ಯಾವುದೋ ದಿಕ್ಕಿನತ್ತ ಹೊರಳಿಕೊಂಡಿರುವ ಸ್ಪಷ್ಟ ಸೂಚನೆ ಸಿಕ್ಕಿ ಹೋಗಿತ್ತು. ಇದೀಗ ಗರಡಿಯ ಬಹು ನಿರೀಕ್ಷಿತ ಹಾಡು ಬಿಡುಗಡೆಗೊಂಡಿದೆ. ಈ ಮೂಲಕ ಯೋಗರಾಜ್ ಭಟ್, ಹರಿಕೃಷ್ಣ ಹಾಗೂ (singer vijay prakash) ವಿಜಯ ಪ್ರಕಾಶ್ ಜೋಡಿ ಅಕ್ಷರಶಃ ಮೋಡಿ ಮಾಡಿದೆ.

`ಅನಿಸಬಹುದು ನಿನಗೆ ಇದು ತುಂಬ ಸಣ್ಣ ವಿಷಯ, ಅರಿಯದೇನೆ ನಾನು ಆಗಿರುವೆ ನಿನ್ನ ಇನಿಯ’ ಎಂಬ ಭಾವುಕ ಸಾಲುಗಳಿರುವ ಈ ಹಾಡೀಗ ಮೆಲ್ಲದೆ ಪ್ರೇಕ್ಷಕರನ್ನು ತಾಕುತ್ತಿದೆ. ಹಾಡುಗಳ ವಿಚಾರದಲ್ಲಿ ಯೋಗರಾಜ್ ಭಟ್ಟರಿಗೊಂದು ಬೇರೆಯದ್ದೇ ತೆರನಾದ ಅಭಿರುಚಿ ಇದೆ. ತಾನು ಸೃಸ್ಟಿಸಿದ ಸಾಲುಗಳು ಕೇಳುಗರನ್ನು ಹೇಗೆಲ್ಲ ಕಾಡಬಹುದೆಂಬ ಸ್ಪಷ್ಟ ಅಂದಾಜೂ ಅವರಲ್ಲಿದೆ. ಸದ್ಯದ ಮಟ್ಟಿಗೆ ಈ ಜನರೇಷನ್ನಿನ ಹಳವಂಡಗಳಿಗೆ ಆ ಕ್ಷದ ಮದ್ದಾಗುವ, ಮಂದ್ರವಾಗಿ ಕಾಡುವ ಹಾಡುಗಳ ಸಂಖ್ಯೆ ಕಡಿಮೆ ಇದೆ. ಆ ಕೊರತೆಯನ್ನ ಗರಡಿಯ ಹಾಡು ನೀಗಿಸುವಂತಿದೆ. ಬಹುಶಃ ಇದು ಮೆಲ್ಲ ಮೆಲ್ಲಗೆ ಎದೆಗಿಳಿಯುತ್ತಾ, ಬಹು ಕಾಲ ಅಲ್ಲೇ ಉಳಿಯುವ ಛಾತಿ ಇರುವ ಹಾಡು. ಕೇಳಿಉದಾಕ್ಷಣ ಹುಚ್ಚೆಬ್ಬಿಸೋ ಹಾಡುಗಳಿಗೆ ಆಯಸ್ಸು ಕಡಿಮೆ. ಆದರೆ, ಸಾವಧಾನದಿಂದ ಎದೆಗಿಳಿದು ನರ ನಾಡಿಗಳಿಗೆ ಹಬ್ಬಿಕೊಳ್ಳುವ ಹಾಡಿವೆಯಲ್ಲಾ? ಅವು ತಲೆಮಾರುಗಳಾಚೆಗೂ ದಾಟಿಕೊಳ್ಳುತ್ತವೆ. ಭಟ್ಟರ ಹಾಡೂ ಕೂಡಾ ಅಂಥಾದ್ದೊದು ಮೋಡಿ ಮಾಡಬಹುದಾ ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಈವತ್ತಿನ ಮಟ್ಟಿಗೆ ಹೇಳೋದಾದರೆ, ಪ್ರತೀ ಬಂಧಗಳಿಗೂ ಭಾವುಕ ಬಿಸುಪು ಕಡಿಮೆಯಾಗುತ್ತಿದೆ. ಅದರಲ್ಲಿಯೂ ಈ ದಿನಮಾನದಲ್ಲಿ ಮೂಡಿಕೊಳ್ಳುವ ಪ್ರೀತಿಯಂತೂ ಹುಟ್ಟಿದಷ್ಟೇ ವೇಗವಾಗಿ ಉಸಿರು ಚೆಲ್ಲುತ್ತವೆ. ಸೋಶಿಯಲ್ ಮೀಡಿಯಾದ ಸಂದಿಗೊಂದಿಗಳಲ್ಲಿ ಇಂಥಾ ರಾಶಿ ರಾಶಿ ಕಥೆಗಳಿವೆ. ಅಂಥಲ್ಲಿ ಯಾವ ಜೀವದೆಡೆಗೋ ಪ್ರೀತಿ ಮೂಡಿಕೊಂಡ ಪುಳಕಗಳಿರೋದಿಲ್ಲ; ವಿದಾಯದ ಆಧ್ರ್ರತೆಯೂ ಇರುವುದಿಲ್ಲ. ಇಂಥಾ ಆರೋಪದಾಚೆಗೂ ಪ್ರೀತಿ ಕೈ ತಪ್ಪಿ ಹೋದ ಯಾತನೆಯನ್ನು ಜೀವಕಂಟಿಸಿಕೊಂಡು ಬದುಕುವ ಪ್ರತಿಯೊಬ್ಬರಿಗೂ ಗರಡಿಯ ಹಾಡು ಆಪ್ಯಾಯವೆನಿಸುತ್ತೆ. ಈ ಗುಣದಿಂದಲೇ ಹಿಟ್ ಲಿಸ್ಟಿಗೆ ಸೇರಿಕೊಳ್ಳುವ ಎಲ್ಲ ಸಾಧ್ಯತೆಗಳೂ ಈ ಹಾಡಿಗಿದ್ದಂತಿದೆ.

ಹಾಗೆ ನೋಡಿದರೆ, ಹಾಡುಗಳ ವಿಚಾರದಲ್ಲಿ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಸ್ಯಾಂಡಲ್ ವುಡ್ಡಿನ ಪುರಾತನ ಯಶಸ್ವೀ ಜೋಡಿ. ಇಬ್ಬರು ಒಟ್ಟುಗೂಡಿದರೆ ಹಿಟ್ ಸಾಂಗುಗಳು ಖಾತರಿ ಎಂಬ ನಂಬಿಕೆಯೊಂದು ತಂ ತಾನೇ ಹಬ್ಬಿಕೊಂಡಿತ್ತು. ಆ ನಂತರ ಒಂದಷ್ಟು ಕಾಲ ಶುಷ್ಕ ವಾತಾವರಣ ಸೃಷ್ಟಿಯಾಗಿದ್ದದ್ದು ನಿಜ. ಆದರೀಗ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಮತ್ತೆ ಜೊತೆಗೂಡಿದ್ದಾರೆ. ವಿಜಯ ಪ್ರಕಾಶ್ ಕೂಡಾ ಸಾಥ್ ಕೊಟ್ಟಿದ್ದಾರೆ. ಇದರ ಫಲವೆಂಬಂತೆ ಒಡೆದ ಹೃದಯದ ಹಾಡು ಪ್ರೇಕ್ಷಕರತ್ತ ಮೆಲುವಾಗಿ ದಾಟಿಕೊಂಡಿದೆ. ಇದರೊಂದಿಗೆ ಬಿಡುಗಡೆಯ ಅಂಚಿನಲ್ಲಿರುವ ಗರಡಿಯ ಪ್ರಭೆ ಕೊಂಚ ಹೆಚ್ಚಾದಂತೆಯೂ ಭಾಸವಾಗುತ್ತಿದೆ.

ಈ ಕ್ಷಣಕ್ಕೂ ಗರಡಿ ಚಿತ್ರದ ಅಸಲೀ ಛಾಯೆ ಏನೆಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಯೋಗರಾಜ್ ಭಟ್ ಅತ್ಯಂತ ನಾಜೂಕಿನಿಂದಲೇ, ಅಂಥಾದ್ದೊಂದು ಕೌತುಕವನ್ನ ಕಾಪಿಟ್ಟುಕೊಂಡು ಬಂದಿದ್ದಾರೆ. ಗರಡಿ ಮೂಲಕ ಭಟ್ಟರು ಪಕ್ಕಾ ಮಾಸ್ ಮೂಡಿಗೆ ಜಾರಿದ್ದಾರೆಂಬುದು ಸ್ಪಷ್ಟವಿತ್ತು. ಆದರೀಗ ಈ ಹಾಡಿನ ಮೂಲಕ ಗರಡಿಯೊಳಗಿನ ಪ್ರೇಮ ಕಥೆಯ ಮಜಲೊಂದು ತಂತಾನೇ ತೆರೆದುಕೊಂಡಿದೆ. ಯೋಗರಾಜ್ ಭಟ್ ಓರ್ವ ನಿರ್ದೇಶಕರಾಗಿ ಅದೆಷ್ಟು ಜನರನ್ನು ಸೆಳೆದಿದ್ದಾರೋ, ಗೀತರಚನೆಕಾರರಾಗಿಯೂ ಅಂಥಾದ್ದೇ ಕಮಾಲು ಮಾಡಿರೋದು ನಿಜ. ಅದರಲ್ಲಿಯೂ ಮನಸಿಗೆ ಮುತ್ತಿಕ್ಕುವಂಥಾ ಹಾಡೊಂದು ಭಟ್ಟರ ಬತ್ತಳಿಕೆಯಿಂದ ಬರಲೆಂದು ಕಾಯುವವರ ಸಂಖ್ಯೆ ಬಹಳಷ್ಟಿದೆ. ಅಂಥವರನ್ನೆಲ್ಲ ಈ ಹಾಡು ಸಂತೃಪ್ತಗೊಳಿಸಿದೆ. ಇನ್ನೇನಿದ್ದರೂ ಗರಡಿಯ ಗಾರುಡಿ ಸಿನಿಮಾ ಮಂದಿರಗಳಲ್ಲಿ ಶುರುವಾಗೋದಷ್ಟೇ ಬಾಕಿ!

The post garadi movie song: ಮತ್ತೆ ಯೋಗರಾಜ್ ಭಟ್- ಹರಿಕೃಷ್ಣ ಜೋಡಿಯ ಮೋಡಿ! appeared first on Cini Shodha.

yogaraj bhat: ಭಟ್ಟರು ಬದಲಾದ ಸೂಚನೆ ಕೊಟ್ಟ ಕರಟಕ ದಮನಕ!
ಘನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ, ಒಲಿದು ಬಂದು ಒಂದಷ್ಟು ಗೆಲುವಿನ ಹಿಂದಿರುವ ರಸಹ್ಯವೂ ಅದೇ ಮೂಲದ್ದೆಂಬುದು ಸಾಬೀತಾಗುತ್ತದೆ. ಅದೇ ರೀತಿ ಭಟ್ಟರು ಸಾಕಷ್ಟು ಬಾರಿ ಮುಗ್ಗರಿಸಿದ್ದರ ಹಿಂದಿರುವ ಅಸಲೀ ಕಾರಣಗಳು ಸಹ ಅದೇ ಮೂಲದಲ್ಲಿಯೇ ಗಹಗಹಿಸಿ ನಗುವಂತೆಯೂ ಭಾಸವಾಗುತ್ತದೆ. ಇಂಥಾ ಯೋಗರಾಜ್ ಭಟ್ಟರು ಏಕಾಏಕಿ ವರಸೆ ಬದಲಿಸಿದಾ? ಸಿನಿಮಾ ವಿಚಾರದಲ್ಲಿ ಘನಗಂಭೀರ ಹೆಜ್ಜೆ ಇಡಲಾರಂಭಿಸಿದ್ದಾರಾ ಎಂಬಂಥಾ ಪ್ರಶ್ನೆಗಳು ಸ್ಪಷ್ಟವಾಗಿಯೇ ಮೂಡಿಕೊಂಡಿವೆ. ಅದಕ್ಕೆ ಕಾರಣವಾಗಿರೋದು (karataka damanaka) ಕರಟಕ ದಮನಕ ಚಿತ್ರದ ಫಸ್ಟ್ ಲುಕ್!

ಇತ್ತೀಚಿನ ದಿನಗಳಲ್ಲಿ ಗರಡಿ ಚಿತ್ರದ ಚಿತ್ರೀಕರಣದಲಿ ಯೋಗರಾಜ್ ಭಟ್ ಬ್ಯುಸಿಯಾಗಿದ್ದರು. ಈ ಸಿನಿಮಾ ಮೂಲಕವೇ ಬಟ್ಟರು ಮಾಮೂಲಿ ದಾರಿಯನ್ನು ಬಿಟ್ಟು, ಭಿನ್ನ ಪಥದತ್ತ ಹೊರಳಿಕೊಂಡಿರುವ ಮುನ್ಸೂಚನೆ ಸಿಕ್ಕಿದಂತಾಗಿತ್ತು. ಗರಡಿಯ ಬಗ್ಗೆ ಒಂದಷ್ಟು ಸುದ್ದಿಗಳು ಆಗಾಗ ಜಾಹೀರಾಗುತ್ತಿತ್ತಾದರೂ ಭಟ್ಟರ ಮುಂದಿನ ನಡೆ ನಿಗೂಢವಾಗಿತ್ತು. ಇದೀಗ ಗರಡಿಯ ಚಿತ್ರೀಕರಣ ಮುಕ್ತಾಯದ ಘಟ್ಟ ತುಪಿರುವ ಕರಟಕ ದಮನಕರು ಸದ್ದು ಮಾಡಲಾರಂಭಿಸಿದ್ದಾರೆ. ಈ ಸಿನಿಮಾದಲ್ಲಿ ಶಿವರಾ ಕುಮಾರ್ ಮತ್ತು ಪ್ರಭುದೇವ ಸಲಿದ್ದಾರೆಂಬ ಬಗ್ಗೆ ಬಹು ಹಿಂದಿನಿಂದಲೇ ಮಾಹಿತಿಗಳು ಹೊರಬಂದಿದ್ದವು. ಇದೀಗ ಫಸ್ಟ್ ಲುಕ್ ಪೋಸ್ಟರ್‍ನಲ್ಲಿ ಅವರಿಬ್ಬರ ಲುಕ್ ಹೇಗಿರಲಿದೆ ಎಂಬುದನ್ನು ಭಟ್ಟರು ತೋರಿಸಿದ್ದಾರೆ.

ಶೀರ್ಷಿಕೆಯ ವಿನ್ಯಾಸ, ಶಿವಣ್ಣ ಮತ್ತು ಪ್ರಭುದೇವ ಲುಕ್ಕು ಗಮನಿಸುತ್ತಿದ್ದರೆ ಯೋಗರಾಜ್ ಭಟ್ ಈ ಬಾರಿ ಪ್ರೇಕ್ಷಕರನ್ನು ಚಕಿತಗೊಳಿಸೋದು ಪಕ್ಕಾ ಎಂದೆನಿಸುತ್ತದೆ. ಸದ್ಯದ ವಾತಾವರಣ ಗಮನಿಸಿದೆ ಭಟ್ಟರೇಕೋ ಸೈಲೆಂಟಾಗಿ ರೊಚ್ಚಿಗೆದ್ದಂತಿದೆ. ಯಾಕೆಂದರೆ, ಒಂದಷ್ಟು ಸೋಲಿನ ನಂತರದಲ್ಲಿ ಮತ್ತೆ ಎದೆ ಸೆಟೆಸಿ ಮೇಲೆದ್ದು ನಿಲ್ಲುವ ಅನಿವಾರ್ಯತೆ ಅವರ ಮುಂದಿದೆ. ಅಷ್ಟಕ್ಕೂ ಅದೆಷ್ಟೋ ವರ್ಷಗಳ ಕಾಲ ಕಾದು ಮುಂಗಾರು ಮಳೆ ಗೆಲುವಿಗೆ ಮೈಯೊಡ್ಡಿದ್ದವರು ಯೋಗರಾಜ ಭಟ್. ಆದರೆ, ಆ ನಂತರ ಆ ಗೆಲುವಿನ ಹನಿಗಳಿಗೆ ಮೈಯೊಡ್ಡಿ ಪ;ಉಳಕಗೊಂಡರೇ ಹೊರತು, ಅದನ್ನು ಮೀರಿಕೊಂಡು ಮತ್ತೊಂದು ಗೆಲುವಿನತ್ತ ಅವುಡುಗಚ್ಚಿ ನಡೆಯಲು ಅವರಿಂದ ಸಾಧ್ಯವಾಗಿಲ್ಲ. ಗಾಳಿಪಟ2 ಒಂದಷ್ಟು ಕಲೆಕ್ಷನ್ನು ಮಾಡಿತ್ತಾದರೂ ಅದೇನು ಸಮ್ಮೋಹಕ ಗೆಲುವಲ್ಲ. ಕರಟಕ ದಮನಕ ಚಿತ್ರದ ಮೂಲಕ ಭಟ್ಟರಿಗೆ ಮಹಾ ಗೆಲುವು ಸಿಕ್ಕಲೆಂಬುದು ಹಾರೈಕೆ!

The post yogaraj bhat: ಭಟ್ಟರು ಬದಲಾದ ಸೂಚನೆ ಕೊಟ್ಟ ಕರಟಕ ದಮನಕ! appeared first on Cini Shodha.