toxicmovie – Cini Shodha

Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ!
ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರೋದರಿಂದ ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಅತ್ಯಂತ ಪ್ರಶಸ್ತವಾದ ಘಳಿಗೆಯನ್ನು ಟಾಕ್ಸಿಕ್ ಚಿತ್ರತಂಡ ಯಾಕೆ ಕೈ ಜಾರಿಸಿಕೊಂಡಿದೆ ಅನ್ನೋದರ ಸುತ್ತಾ ಚರ್ಚೆಗಳು ನಡೆಯುತ್ತಿವೆ. ಯುಗಾದಿಯ ರಜೆ, ಅದರ ಬೆನ್ನಿಗಂಟಿಕೊಂಡು ಬರುವ ಮತ್ತೆರಡು ಹಬ್ಬಗಳು ಮತ್ತು ವೀಕೆಂಡಿನ ಸಾಥ್… ಮಾರ್ಚ್ ೧೯ರ ಮೇಲೆ ಸಿನಿಮಾ ಮಂದಿಯ ದೃಷ್ಟಿ ಕೇಂದ್ರೀಕರಿಸಿದ್ದದ್ದು ಈ ಕಾರಣದಿಂದಲೇ. ಇಂಥಾ ದಿನಾಂಕದಂದೇ ಲವ್ ಮಾಕ್ಟೇಲ್೩ಯನ್ನು ತೆರೆಗಾಣಿಸುವ ಸುವರ್ಣಾವಕಾಶವೊಂದು ಡಾರ್ಲಿಂಗ್ ಕೃಷ್ಣಗೆ ತಂತಾನೇ ಸಿಕ್ಕಿಬಿಟ್ಟಿದೆ. ಏಪ್ರಿಲ್ ಹತ್ತರಂದು ಬಿಡುಗಡೆಗೊಳ್ಳಲಿದ್ದ ಲವ್ ಮಾಕ್ಟೇಲ್೩ ಮಾರ್ಚ್ 19ಕ್ಕೆ ಬಿಡುಗಡೆಗೊಳ್ಳಲಿದೆ!

ಲವ್ ಮಾಕ್ಟೇಲ್ ಚಿತ್ರದ ಎರಡು ಆವೃತ್ತಿಗಳು ಗೆಲುವು ಕಂಡಿದ್ದವು. ಈ ಕಾರಣದಿಂದಲೇ ಮೂರನೇ ಆವೃತ್ತಿಯ ಸುತ್ತ ಗಾಢ ನಿರೀಕ್ಷೆ ಹಬ್ಬಿಕೊಂಡಿದೆ. ಈಗಾಗಲೇ ಹಾಡುಗಳ ಮೂಲಕವೂ ಸೆಳೆದುಕೊಂಡಿರುವ ಈ ಚಿತ್ರವನ್ನು ಟಾಕ್ಸಿಕ್ ಬಿಡುಗಡೆಯಾಗಬೇಕಿದ್ದ ದಿನದಂದೇ ತೆರೆಗಾಣಿಸಲು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಧರಿಸಿದೆ. ಲವ್ ಮಾಕ್ಟೇಲ್೩ಯ ಹಂಚಿಕೆಯ ಜವಾಬ್ದಾರಿಯನ್ನು ಕೆವಿಎನ್ ಸಂಸ್ಥೆ ಹೊತ್ತುಕೊಂಡಿದೆ. ಟಾಕ್ಸಿಕ್ ಮುಂದೂಡಲ್ಪಟ್ಟಿರೋದರಿಂದ ಕೈಬಿಟ್ಟಂತಿದ್ದ ಶುಭ ಮುಹೂರ್ತವನ್ನು ಲವ್ ಮಾಕ್ಟೇಲ್ ಚಿತ್ರದ ಮೂಲಕ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಡೆಯನ್ನು ಕೆವಿಎನ್ ಸಂಸ್ಥೆ ಅನುಸರಿಸಿದೆ.

ಅತ್ಯಂತ ಆಸ್ಥೆಯಿಂದ ಈ ಚಿತ್ರವನ್ನು ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡಿರುವ ಡಾರ್ಲಿಂಗ್ ಕೃಷ್ಣ ಪಾಕಲಿಗಿದು ಅಕ್ಷರಶಃ ಲಾಟರಿ ಹೊಡೆದಂಥಾ ವಿದ್ಯಮಾನ. ಅಳೆದೂ ತೂಗಿ ಏಪ್ರಿಲ್ ಹತ್ತರಂದು ತೆರೆಗಾಣುವ ಸನ್ನಾಹದಲ್ಲಿದ್ದ ಲವ್ ಮಾಕ್ಟೇಲ್‌ಗೀಗ ಒಂದೊಳ್ಳೆ ಅವಕಾಶ ಸಿಕ್ಕಂತಾಗಿದೆ. ಮಾರ್ಚ್ ೧೯ರಂದು ಯುಗಾದಿ ರಜೆ ಇದೆ. ಅದಾದ ಬಳಿಕ ರಂಜಾನ್ ಮುಂತಾದ ಹಬ್ಬಗಳಿಂದಾಗಿ ಸುದೀರ್ಘವಾದೊಂದು ವಾರಾಂತ್ಯ ಸಿಗುತ್ತಿರೋದು ಸಹಜವಾಗಿಯೇ ಈ ಚಿತ್ರಕ್ಕೆ ವರವಾಗಲಿದೆ. ಅದೆಷ್ಟೋ ಸಿನಿಮಾಗಳನ್ನು ಈ ದಿನದಲ್ಲಿ ಬಿಡುಗಡೆಗೊಳಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ಟಾಕ್ಸಿಕ್‌ನಂಥಾ ಸಿನಿಮಾ ಅಲೆಗೆದುರಾಗುವ ಇಚ್ಛೆಯಿಲ್ಲದೆ ಅನೇಕರಯ ಕೈಚೆಲ್ಲಿ ಕೂತಿದ್ದರು. ಅಂಥಾದ್ದೊಂದು ಅವಕಾಶವೀಗ ಅಚಾನಕ್ಕಾಗಿ ಡಾರ್ಲಿಂಗ್ ಕೃಷ್ಣನ ಬೊಗಸೆಗೆ ಬಿದ್ದಿದೆ.

Love Mocktail 3 Songs: ಬಿಡುಗಡೆಯಾಯ್ತು ಲವ್ ಮಾಕ್ಟೇಲ್3 ಲಿರಿಕಲ್ ವೀಡಿಯೋ ಸಾಂಗ್!

ಏಪ್ರಿಲ್ ಹತ್ತನೇ ತಾರೀಕಿಗಿಂತಲೂ ಮಾರ್ಚ್ ಹತ್ತೊಂಬತ್ತರ ಸುತ್ತಾ ಸಕಾರಾತ್ಮಕ ಅಂಶಗಳು ಹೆಚ್ಚಿವೆ. ಹೇಳಿಕೇಳಿ ಡಾರ್ಲಿಂಗ್ ಕೃಷ್ಣ ನಿರ್ದೇಶಕನಾಗಿ ಹೊಸತನದ ಪಟ್ಟುಗಳೊಂದಿಗೆ ಈ ಚಿತ್ರವನ್ನು ರೂಪಿಸಿದ್ದಾರಂತೆ. ಅದು ಪ್ರೇಕ್ಷಕರ ಮನ ಗೆದ್ದರೆ, ಚಿತ್ರಮಂದಿರಗಳು ತುಂಬಿಕೊಳ್ಳಬಹುದಾದ ಸಾಧ್ಯತೆಗಳೇ ದಟ್ಟವಾಗಿವೆ. ಒಟ್ಟಾರೆಯಾಗಿ ಹಠಾತ್ತನೆ ಸಿಕ್ಕ ಸದರಿ ಅವಕಾಶ ಲವ್ ಮಾಕ್ಟೇಲ್೩ ಚಿತ್ರತಂಡವನ್ನು ಥ್ರಿಲ್ ಆಗಿಸಿರೋದಂತೂ ನಿಜ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

keywords: lovemocktail3 movie, darling krishna, kvn productions , toxic, sandalwood

The post Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ! appeared first on Cini Shodha.

Toxic Controvercy: ಕಾಮಸೂತ್ರದ ಮೊರೆ ಹೋದದ್ದೇ ಯಡವಟ್ಟಾಯ್ತಾ?
ಈಗ ಎಲ್ಲೆಂದರಲ್ಲಿ ಟಾಕ್ಸಿಕ್ ಚಿತ್ರದ್ದೇ ಸುದ್ದಿ. ಟೀಸರ್, ಟ್ರೈಲರ್‌ಗಳ ಮೂಲಕ ತಲೆಗೆ ಹುಳ ಬಿಟ್ಟರೆ ಬಿಟ್ಟಿಯಾಗಿಯೇ ಪಬ್ಲಿಸಿಟಿ ಸಿಗುತ್ತದೆಂಬುದು ಸಿನಿಮಾ ಮಂದಿಯ ಹಳೇ ಫಾರ್ಮುಲಾ. ಇದನ್ನು ಟಾಕ್ಸಿಕ್ ನಿರ್ದೇಶಕ ಗೀತು ಮೋಹನ್ ದಾಸ್ ಬಲವಾಗಿಯೇ ನೆಚ್ಚಿಕೊಂಡಿದ್ದಾರೆ. ಹಾಗೆನೋಡಿದರೆ, ಟಾಕ್ಸಿಕ್ ಟೀಸರ್ ಅನ್ನು ಬೇರೆ ರೀತಿಯಲ್ಲಿ ಪ್ರೇಕ್ಷಕರ ಮುಂದಿಡುವ ಅವಕಾಶ ಗೀತು ಮುಂದಿತ್ತು. ಆದರೆ, ಆಕೆ ಹಾಲಿವುಡ್ ಶೈಲಿಯ ಕಾಮಸೂತ್ರದ ಬೆಂಬಿದ್ದು, ಅದಕ್ಕನುಗುಣವಾಗಿ ಟೀಸರ್ ಅನ್ನು ರೂಪಿಸಿದ್ದಾರೆ. ಆಕೆಯ ನಿರೀಕ್ಷೆ ನಿಜವಾಗಿದೆ. ಕಾರೊಳಗಿನ ಮುಲುಕಾಟವನ್ನು ಪಿಸ್ಟನ್ನಿನ ಲಯದಲ್ಲಿ ತಲೆತುಂಬಿಕೊಂಡ ಮಂದಿ ಆ ಗುಂಗಿಗೆ ಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ಒಂದಷ್ಟು ಚರ್ಚೆಗಳೂ ನಡೆಯುತ್ತಿವೆ. ಆದರೆ, ಆತ್ಯಂತಿಕವಾಗಿ ಟಾಕ್ಸಿಕ್ ಟೀಸರಿನ ಪರಿಣಾಮ ಇತರೇ ಸಿನಿಮಾಗಳ ಮೇಲೂ ಆಗುವ ವಿಷಮ ಸನ್ನಿವೇಷವೂ ಇದೀಗ ಸೃಷ್ಟಿಯಾಗಿದೆ!

ಟಾಕ್ಸಿಕ್ ಟೀಸರ್‌ನಲ್ಲಿ ಕಾಮಪ್ರಯೋಗ ಮಾಡಿರೋದರ ಬಗ್ಗೆ ಎಲ್ಲೆಡೆ ವಿರೋಧಾಭಾಸಗಳು ವ್ಯಕ್ತವಾಗಲಾರಂಭಿಸಿವೆ. ಯಾವಾಗ ಇದರ ಬಗ್ಗೆ ಅಮೂಲಾಗ್ರವಾಗಿ ವಿಮರ್ಶೆಗಳು ಕೇಳಿ ಬರಲಾರಂಭಿಸಿದವೋ, ಆಗ ಎಚ್ಚೆತ್ತುಕೊಂಡ ಚಿತ್ರತಂಡ ಇದು ಅಪ್ರಾಪ್ತರು ನೋಡೋ ಟೀಸರ್ ಅಲ್ಲ ಎಂಬುದನ್ನು ಒತ್ತಿಹೇಳುವ ಮೂಲಕ ತಿಪ್ಪೆ ಸಾರಿಸಲೆತ್ನಿಸಿದೆ. ಇದು ಚಿತ್ರತಂಡದ ಅತೀಬುದ್ಧಿವಂತಿಕೆಯ ಮುಠ್ಠಾಳತನ. ಯಾಕೆಂದರೆ, ಯೂಟೈಬಿನಲ್ಲಿ ಬಿಡುಗಡೆಗೊಂಡಿರುವ ಸದರಿ ಟೀಸರ್ ಅನ್ನು ಅಪ್ರಾಪ್ತರು ನೋಡದಿರಲು ಸಾಧ್ಯವೇ? ಈ ಕಾರಣದಿಂದಲೇ ಅನೇಕರು, ಯಾವುದೇ ಸಿನಿಮಾ ಟೀಸರ್, ಟ್ರೈಲರ್‌ಗೂ ಸೆನ್ಸಾರ್ ಮಾನದಂಡ ವಿಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

Toxic Movie Controvercy: ತತ್ತರಿಸಿದ ಹಿಂದಿವಾಲಾಗಳ ಟಾಕ್ಸಿಕ್ ವಾರ್!

ಒಂದುಯ ದಿಕ್ಕಿನಿಂದ ಆಲೋಚಿಸಿದರೆ ಅಂಥಾದ್ದೊಂದು ಮಾನದಂಡ ವಿಧಿಸಿದರೆ ಹಸಿಬಿಸಿ ದೃಷ್ಯಗಳ ಮೂಲಕ ಪಬ್ಲಿಸಿಟಿ ಮಾಡೋ ಗಿಮಿಕ್ಕನ್ನು ಕೊಂಚ ಹತೋಟಿಗೆ ತರಬಹುದು. ಆದರೆ, ಇದು ನಾನಾ ಸಂಕಷ್ಟಗಳ ನಡುವೆ ಕಂಗಾಲಾಗಿರುವ ಚಿತ್ರ ನಿರ್ಮಾಪಕರಿಗೆ ಮತ್ತೊಂದು ತಲೆ ನೋವಿನಂಥಾ ವಿಚಾರ. ಯಾಕೆಂದರೆ, ಕೆಲ ಸಿನಿಮಾಗಳು ಸೆನ್ಸಾರ್ ಒಂದು ಸೆನ್ಸಾರ್ ಅನ್ನು ದಾಟಿಕೊಳ್ಳೋದೇ ಕಷ್ಟ. ಅಂಥಾದ್ದರಲ್ಲಿ ಟೀಸರ್, ಟ್ರೈಲರಿಗೂ ಸೆನ್ಸಾರ್ ಮೊರೆ ಹೋಗಬೇಕಾಗಿ ಬಂದರೆ ಎಲ್ಲವೂ ತ್ರಾಸದಾಯಕವಾಗಲಿದೆ. ಈ ಕಂಟಕ ತಂದೊಡ್ಡಿರುವ ಟಾಕ್ಸಿಕ್ ಚಿತ್ತಂಡದ ವಿರುದ್ಧ ಒಂದಷ್ಟು ನಿರ್ಮಾಪಕರು ಕೆಂಡ ಕಾರಲಾರಂಭಿಸಿದ್ದಾರೆ. ಇದರಿಂದಾಗಿ ನಿರ್ದೇಶಕಿ ಗೀತು ಮೋಹನ್‌ದಾಸ್ ಕೂಡಾ ಕಂಗಾಲಾದಂತಿದೆ!

keywords: toxic, controvercy, yash, geethumohandas, toxicteaser

The post Toxic Controvercy: ಕಾಮಸೂತ್ರದ ಮೊರೆ ಹೋದದ್ದೇ ಯಡವಟ್ಟಾಯ್ತಾ? appeared first on Cini Shodha.

Toxic Teaser Review: ಪ್ಯಾನಿಂಡಿಯಾ ಪ್ರಭೆಯಾಚೆ ಕೈಚಾಚಿದ ಯಶ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗೆಗಿದ್ದ ಭಾರೀ ಕುತೂಹಲ ತಣಿದಿದೆ. ಈ ಹಿಂದೆ ಹಂತ ಹಂತವಾಗಿ ಟಾಕ್ಸಿಕ್ ಅಡ್ಡಾದಿಂದ ಒಂದಷ್ಟು ಅಂಶಗಳು ಜಾಹೀರಾಗಿದ್ದವು. ಆದರೆ, ಅವ್ಯಾವುವೂ ನಿರೀಕ್ಷೆಯ ಮಟ್ಟ ಮುಟ್ಟಿರಲಿಲ್ಲ. ಅದೂ ಕೂಡಾ ಟಾಕ್ಸಿಕ್ ಚಿತ್ರತಂಡದ ಬುದ್ಧಿವಂಕೆಯದ್ದೊಂದು ಭಾಗ ಎಂಬ ವಿಚಾರವೀಗ ಋಜುವಾತಾಗಿದೆ. ಏಕಾಏಕಿ ಬಿಡುಗಡೆಗೊಂಡಿರುವ ಟೀಸರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಯಾಕೆಂದರೆ, ಯಾರೂ ಊಹಿಸಿರದ ರೀತಿಯಲ್ಲಿ ಟಾಕ್ಸಿಕ್ ಮೂಡಿ ಬಂದಿರೋ ಸ್ಪಷ್ಟ ಸೂಚನೆ ಸದರಿ ಟೀಸರ್ ಮೂಲಕ ಸಿಕ್ಕಿದಂತಾಗಿದೆ.

ಹಾಲಿವುಡ್ ಗುಣಮಟ್ಟದಿಂದ ಕೂಡಿರುವ ಈ ಟೀಸರ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕಂಡು ಪ್ರೇಕ್ಷಕರು ಅವಾಕ್ಕಾಗಿದ್ದಾರೆ. ಈ ಹಿಂದೆ ಯಶ್ ಅವರದ್ದೊಂದು ಅವತಾರದ ಕ್ಲೂ ಕಡಲಾಗಿತ್ತು. ಈ ಟೀಸರ್‌ನಲ್ಲಿ ಅದರ ಮುಂದುವರೆದ ಭಾಗದಂತೆ ರಾಕಿ ಭಾಯ್ ಪಕ್ಕಾ ರಸಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಷ್ಯಗಳನ್ನು ರೋಮಾಂಚನಕಾರಿಯಾಗಿ ಕಟ್ಟಿ ಕೊಡುವ ಮೂಲಕ ನಿರ್ದೇಶಕಿ ಗೀತು ಮೋಹನ್ ದಾಸ್ ಕೂಡಾ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಮಹಿಳಾ ನಿರ್ದೇಶಕಿಯೋರ್ವರು ಮನಸು ಮಾಡಿದರೆ ಅದ್ಭುತವನ್ನೇ ಸೃಷ್ಟಿಸಬಹುದೆಂಬುದನ್ನು ಗೀತು ಕಾರ್ಯ ರೂಪದಲ್ಲಿಯೇ ತೋರಿಸಿ ಕೊಟ್ಟಿದ್ದಾರೆ.

ರಾಕಿ ಭಾಯ್ ಈ ಟೀಸರ್‌ನಲ್ಲಿ ಕೆಜಿಎಫ್ ಸರಣಿಯ ಕತ್ತಲ ಛಾಯೆಯಿಂದ ಕಳಚಿಕೊಂಡು, ಬೇರೊಂದು ಬಗೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಮಾತ್ರವಲ್ಲ; ಚೆಂದದ ಸಿನಿಮಾಗಳಿಗಾಗಿ ಸದಾ ಕಾದು ಕೂರುವ ಜಗತ್ತಿನ ಅಷ್ಟೂ ಸಿನಿಮಾ ಪ್ರೇಮಿಗಳನ್ನು ಯಶ್ ಸೆಳೆದಿದ್ದಾರೆ. ಒಂದು ಕಾಲದಲ್ಲಿ ಕನ್ನಡದ ಸೀಮಿತ ಪರಿಧಿಯಾಚೆಗೆ ಕೈ ಚಾಚಿ, ಪ್ಯಾನಿಂಡಿಯಾ ಸ್ಟಾರ್ ಆಗಿದ್ದವರು ಯಶ್. ಆ ಪಥದಲ್ಲಿ ಸರಣಿ ಗೆಲುವಿನ ಮೈಲಿಗಲ್ಲು ನೆಟ್ಟ ಬಳಿಕ ಅವರೀಗ ಪ್ಯಾನಿಂಡಿಯಾ ಪ್ರಭೆಯಾಚೆಗೂ ಕೈಚಾಚಿದ್ದಾರೆ. ಈ ಟೀಸರಿನಲ್ಲಿರು ಕ್ವಾಲಿಟಿ, ಬಿಗುವು ಒಂದಿಡೀ ಸಿನಿಮಾದಲ್ಲಿದ್ದರೆ ಯಶ್ ವಿಶ್ವ ಮಟ್ಟದಲ್ಲಿ ಎಲ್ಲ ನಟರನ್ನೂ ಹಿಂದಿಕ್ಕಿ ಮೆರೆಯೋದು ನಿಕ್ಕಿ!

keywords: toxic, teaser, yash, geethu mohan das, bollywood, sandalwood, mollywood

The post Toxic Teaser Review: ಪ್ಯಾನಿಂಡಿಯಾ ಪ್ರಭೆಯಾಚೆ ಕೈಚಾಚಿದ ಯಶ್! appeared first on Cini Shodha.

rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ?
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು. ಈಕೆ ಸಪ್ತಸಾಗರದಾಚೆಯ ನಂತರ ಸೀದಾ ತಮಿಳಿಗೆ ಹಾರಿ ವಿಜಯ್ ಸೇತುಪತಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಹಿನ್ನಡೆಯ ಹಿಂಚುಮುಂಚಲ್ಲಿಯೇ ಅಚ್ಚರಿದಾಯಕವಾಗಿ ಈ ಹುಡುಗಿಕಗೆ ದೊಡ್ಡ ದೊಡ್ಡ ಅವಕಾಶಗಳು ಒಲಿದು ಬರುತ್ತಿವೆ. ಇದೀಗ ರುಕ್ಮಿಣಿಗೆ ರಾಕಿ ಭಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿದೆ.

ರೆಟ್ರೋ ಶೈಲಿಯ ಟಾಕ್ಸಿಕ್ ಚಿತ್ರ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ಹುಮಾ ಖುರೇಶಿ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹತ್ವದ ಪಾತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಡುಕಾಟ ನಟೆಸುತ್ತಿದ್ದರು. ಕಡಸೆಗೂ ರಾಕಿ ಭಾಯ್ ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರುಕ್ಮಿಣಿ ಯಾವ ಥರದ ಪಾತ್ರದಲ್ಲಿ ನಟಿಸಲಿದ್ದಾರೆಂಬುದೂ ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.

ರುಕ್ಮಿಣಿ ವಸಂತ್ ಪಾಲಿಗೆ ಟಾಕ್ಸಿಕ್ ಮೂಲಕ ಎರಡನೇ ಪ್ಯಾನಿಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಂತಾಗಿದೆ. ಈಗಾಗಲೇ ಕಾಂತಾರ ಅಧ್ಯಾಯ ಒಂದರಲ್ಲಿಯೂ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಂತಾರಾ ಅಂತೂ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿ ಮಾಡೋದು ಪಕ್ಕಾ. ಅದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಕೂಡಾ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಲಕ್ಷಣಗಳಿದ್ದಾವೆ. ಈ ಎಲ್ಲವನ್ನೂ ನೋಡಿದರೆ ರುಕ್ಮಿಣಿ ವಸಂತ್ ನಿಸ್ಸಂದೇಹವಾಗಿಯೂ ಪ್ಯಾನಿಂಡಿಯಾ ಮಟ್ಟದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಹಾಗಂತ ಸಿನಿಮಾ ಪ್ರೇಮಿಗಳೇ ಅಭಿಪ್ರಾಯ ಪಡುತ್ತಿದ್ದಾರೆ.

The post rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ? appeared first on Cini Shodha.