thalaiva – Cini Shodha

Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!
ಜೈಲರ್ ಚಿತ್ರದ ಭಾರೀ ಯಶಸ್ಸಿನ ನಂತರ ರಜನೀಕಾಂತ್ ಜೈಲರ್೨ನತ್ತ ಮುಖ ಮಾಡಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಗರಾಜನ್ ಪ್ರವರ ಕೇಳಿ, ಆತ ಸಿದ್ಧಪಡಿಸಿದ್ದ ಕಥೆಗೆ ನೋ ಅಂದ ನಂತರವೀಗ ತಲೈವಾ ಗಮನವೆಲ್ಲ ಜೈಲರ್೨ನತ್ತ ಕೇಂದ್ರೀಕರಿಸಿಕೊಂಡಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಾರಾಗಣದ ಆಯ್ಕೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಸಿನಿಮಾ ರಂಗದ ಘಟಾನುಘಟಿ ನಟ ನಟಿಯರೆಲ್ಲ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗಬಹುದಾ ಎಂಬಂತೆ ಆಸೆಗಣ್ಣಿನಿಂದ ಕಾಯಲಾರಂಭಿಸಿದ್ದಾರೆ. ಈ ನಡುವೆ ಜೈಲರ್೨ ಅಡ್ಡಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದರನ್ವಯ ಹೇಳೊದಾದರೆ, ಶಾರೂಖ್ ಖಾನ್ ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ನಿಭಾಯಿಸಲು ಒಪ್ಪಿಗೆ ಸೂಚಿಸಿದ್ದಾರೆ!

ಈಗ ಹಬ್ಬಿಕೊಂಡಿರೋ ಸುದ್ದಿಯನ್ನು ಆಧರಿಸಿ ಹೇಳುವುದಾದರೆ, ಶಾರೂಖ್ ಖಾನ್ ಜೈಲರ್೨ನ ಭಾಗವಾಗುತ್ತಿರೋ ಸುದ್ದಿ ರೂಮರ್ ಅಲ್ಲ. ಖುದ್ದು ರಜನೀಕಾಂತ್ ಈಗಾಗಲೇ ಶಾರೂಖ್ ಜೊತೆ ಮಾತಾಡಿದ್ದಾರೆ. ಆ ನಂತರವೇ ನಿರ್ದೇಶಕ ನೆಲ್ಸನ್ ಶಾರೂಖ್‌ಗೆ ಪಾತ್ರದ ಬಗ್ಗೆ ವಿವರಿಸಿ ಹೇಳಿದ್ದಾರೆ. ಶಾರೂಖ್ ಕೂಡಾ ಆ ಪಾತ್ರದ ಚಹರೆಯಿಒಂದಲೇ ಥ್ರಿಲ್ ಆಗಿ ರಜನಿಯೊಂದಿಗೆ ನಟಿಸಲು ಒಪ್ಪಿಕೊಂಡಿದ್ದಾರೆ. ಕಡಿಮೆ ಅವಧಿಯದ್ದೇ ಆದರೂ ಇಡೀ ಸಿನಿಮಾದ ಪ್ರಧಾನ ಆಕರ್ಷಣೆಯಾಗಿ, ತಿರುವ ನೀಡುವ ಪಾತ್ರವ ಆಗಿ ಶಾರೂಖ್ ಕಾಣಿಸಿಕೊಳ್ಳಲಿದ್ದಾರಂತೆ. ಮುಂದಿನ ವರ್ಷದ ಆರಂಭದಲ್ಲಿಯೇ ಶಾರೂಖ್ ಖಾನ್ ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

ರಜನೀಕಾಂತ್ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಅತಿಥಿಗಳಾಗಿ ನಟಿಸೋದೇನೂ ಹೊಸತಲ್ಲ. ಆದರೆ, ಶಾರೂಖ್ ಖಾನ್ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸುತ್ತಿರೋದು ಆತನ ಅಬಿಮಾನಿಗಳನ್ನು ಥ್ರಿಲ್ ಆಗಿಸಿದೆ. ಈ ಹಿಂದೆ ಕೂಲಿ ಚಿತ್ರದಲ್ಲಿ ಆಮೀರ್ ಖಾನ್ ಒಂದು ಪಾತ್ರದಲ್ಲಿ ನಟಿಸಿದ್ದರು. ಆದರೆ ಅದೇಕೋ ಆ ಪಾತ್ರ ಪಕ್ಕಾ ಕಾಮಿಡಿ ಪೀಸಿನಂತೆ ಕಾಣಿಸುವ ಮೂಲಕ ನಿರಾಸೆ ಮೂಡಿಸಿತ್ತು. ಖುದ್ದು ಆಮೀರ್ ಅಭಿಮಾನಿಗಳೇ ಆ ಪಾತ್ರವನ್ನು ನೋಡಿ ಕಂಗಾಲೆದ್ದಿದ್ದರು. ಆದರೆ, ಜೈಲರ್೨ನಲ್ಲಿ ಶಾರೂಖ್ ಪಾತ್ರ ಅಭಿಮಾನಿ ಬಳಗವನ್ನು ಖುಷಿಗೊಳಿಸವಂತಿರಲಿದೆಯಂತೆ. ಅಂದಹಾಗೆ, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ವಿನಾಯಗನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಶಿವರಾಜ್‌ಕುಮಾರ್‌ಗೂ ಚೆಂದದ ಪಾತ್ರ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜೈಲರ್2ನ ತಾರಾಗಣ ಭರ್ತಿಯಾಗಲಿದೆ.

The post Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್! appeared first on Cini Shodha.

Rajanikanth Coolie On Ott: ತಲೈವಾ ಸಿನಿಮಾವೀಗ ಮತ್ತಷ್ಟು ಹತ್ತಿರ!
ರಜನೀಕಾಂತ್ ಥರದ ಸೂಪರ್ ಸ್ಟಾರ್‌ಗಳ ಸಿನಿಮಾಗಳು ತೀರಾ ಕೆಟ್ಟದಾಗಿರಬೇಕೆಂದೇನೂ ಇಲ್ಲ; ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಕೂಡಾ ತೋಪು ಚಿತ್ರಗಳೆನ್ನಿಸಿಕೊಳ್ಳುತ್ತವೆ. ರಜನಿ ಸಿನಿಮಾಗಳೆಂದ ಮೇಲೆ ಕಾಸು ಹೂಡಿದ ನಿರ್ಮಾಪಕರಿಗೆ ಯಾವ ಕಾರಣಕ್ಕೂ ಲುಕ್ಸಾನಾಗುವುದಿಲ್ಲ. ಹಾಗಿದ್ದ ಮೇಲೆ ಅಭಿಮಾನಿಗಳಿಗೆ ತೀವ್ರ ನಿರಾಸೆ ಮಾಡಿದ್ದ ಕೂಲಿ ಕೂಡಾ ಗಳಿಕೆಯ ಲೆಕ್ಕದಲ್ಲಿ ಸೋತಿದೆ ಅಂದುಕೊಳ್ಳುವಂತಿಲ್ಲ. ಆದರೆ, ಓರ್ವ ನಿರ್ದೇಶಕನಾಗಿ ಲೋಕೇಶ್ ಕನಗರಾಜ್ ರಜನಿ ಅಭಿಮಾನಿಗಳನ್ನು ಸಂತೃಪ್ತಗೊಳಿಸುವಲ್ಲಿ ಸೋತಿದ್ದಾರೆ. ಇಂಥಾ ಹತ್ತಾರು ತಕರಾರುಗಳ ನಡುವೆ ಸಿನಿಮಾ ಮಂದಿರಗಳಿಂದ ಎಗರಿಕೊಂಡಿದ್ದ ಕೂಲಿಯೀಗ ಓಟಿಟಿಗೆ ಎಂಟ್ರಿ ಕೊಟ್ಟು ಅಲ್ಲಿಯೂ ನೀರಸ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ತಿಂಗಳ ಹನ್ನೆರಡರಂದೇ ಕೂಲಿ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿತ್ತು. ಸಾಮಾನ್ಯವಾಗಿ ಸಿನಿಮಾ ಮಂದಿರಗಳಲ್ಲಿ ಮುಗ್ಗರಿಸಿದ ಅದೆಷ್ಟೋ ಸಿನಿಮಾಗಳು ಓಟಿಟಿಯಲ್ಲಿ ಪುಟಿದೇಳುತ್ತವೆ. ಕೂಲಿ ಕೂಡಾ ಅಂಥಾದ್ದೊಂದು ಆಶಾದಾಯಕ ಬೆಳವಣಿಗೆ ಕಾಣಬಹುದೆಂಬ ನಿರೀಕ್ಷೆ ಸಹಜವಾಗಿಯೇ ಬಹುತೇಕರಲ್ಲಿತ್ತು. ಆದರೆ, ರಜನೀ ಸಿನಿಮಾಗಳು ದೊಡ್ಡ ಪರದೆಯ ಮೇಲೆ ಹುಟ್ಟಿಸೋ ಫೀಲ್ ಅನ್ನು ಅದರಾಚೆಗೆ ಮೂಡಿಸಲು ಸಾಧ್ಯವಿಲ್ಲ.ಹೇ ಹೇಳಿಕೇಳಿ ಕೂಲಿ ದೊಡ್ಡ ಪರದೆಯಲ್ಲೇ ಅಡ್ಡಡ್ಡ ಮಲಗಿತ್ತು. ಇಂಥಾ ಸಿನಿಮಾವೀಗ ಅಮೇಜಾನ್ ಪ್ರೈಮ್‌ನಲ್ಲಿಯೂ ತೆವಳುತ್ತಾ ಸಾಗುತ್ತಿದೆ.

ಇನ್ನುಳಿದಂತೆ ಹಬ್ಬದ ವಾರದ ಅಂಚಿನಲ್ಲಿಯೇ ಕೂಲಿ ಉದಯ ವಾಹಿನಿಯಲ್ಲಿಯೂ ಕೂಡಾ ಪ್ರಸಾರಗೊಂಡಿದೆ. ಆದರೆ, ಅಲ್ಲೂ ರಜನಿ ಸಿನಿಮಾ ಹೇಳಿಕೊಳ್ಳುವಂಥಾ ದಾಖಲೆ ಬರೆದಂತಿಲ್ಲ. ರಜನೀಕಾಂತ್ ಸಿನಿಮಾ ತೆರೆಗಬಾಣುತ್ತದೆಯೆಂದರೆ, ಬಹುಕೋಟಿ ಬ್ಯುಸಿನೆಸ್ ಆಗುವ ಅಂದಾಜಿರುತ್ತದೆ. ಆದರೆ, ಕೂಲಿ ಮುಕ್ಕರಿಸಿ ನೂರಾವ ಐವತ್ತು ಕೋಟಿ ಸಂಪಾದಿಸುವಷ್ಟರಲ್ಲಿ ಬಸವಳಿದು ಬಿಟ್ಟಿದೆ. ಈ ಮೂಲಕ ರಜನಿ ಸಿನಿಮಾದ ಸಮರ್ಥ ಸಾರಥಿಯಾಗುವಲ್ಲಿ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದಾರೆ. ವಿಶೇಷವೆಂದರೆ, ರಜನೀಕಾಂತ್ ಅದೇ ಲೋಕೇಶ್‌ಗೆ ತಮ್ಮ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕಲ್ಪಿಸಿದ್ದಾರೆ!

The post Rajanikanth Coolie On Ott: ತಲೈವಾ ಸಿನಿಮಾವೀಗ ಮತ್ತಷ್ಟು ಹತ್ತಿರ! appeared first on Cini Shodha.

rajanikanth-kamal haasan new movie: ಲೋಕೇಶ್ ಕನಕರಾಜ್‌ಗೆ ಮತ್ತೊಂದು ಅವಕಾಶ!
ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿದೆ. ಆದರೆ, ಪಕ್ಕಾ ರಜನೀ ಶೈಲಿಯಲ್ಲಿ ಕೂಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಸೃಷ್ಟಿಸುತ್ತಿರೋದು ಸುಳ್ಳಲ್ಲ. ಹೈಪಿಗೆ ಒಂದಷ್ಟು ಹತ್ತಿರಾಗಿ ಮೂಡಿ ಬಂದಿದ್ದರೂ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಅವಕಾಶದಿಂದ ಕೂಲಿ ವಂಚಿತವಾದಂತಿದೆ. ಇದೇ ಹೊತ್ತಿನಲ್ಲಿ ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ದೊಡ್ಡ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇದು ನಿಜಕ್ಕೂ ವಿಶೇಷವಾದ ಸಿನಿಮಾ. ಯಾಕೆಂದರೆ, ಇಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಸಲಿದ್ದಾರೆ. ಇದೊಂದು ರೀತಿಯಲ್ಲಿ ಅಪೂರ್ವ ಸಂಗಮ ಅನ್ನಲಡ್ಡಿಯಿಲ್ಲ. ಭರ್ತಿ ನಾಲಕ್ಕು ದಶಕಗಳ ನಂತರ ಈ ಇಬ್ಬರು ನಟರು ಒಂದೇವ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆಂದರೆ, ಅದು ಸಿನಿಮಾ ಪ್ರೇಮಿಗಳ ಪಾಲಿಗೆ ಪಕ್ಕಾ ಥ್ರಿಲ್ಲಿಂಗ್ ವಿಚಾರ. ೧೯೭೯ರಲ್ಲಿ ಅಲ್ಲಾವುದ್ದೀನಮ್ ಅಲ್ಬೂತ ವಿಲಕ್ಕುಮ್ ಎಂಬ ಸಿನಿಮಾದಲ್ಲಿ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಿದ್ದರು. ಅದೇ ಕೊನೆ; ಇಂದಿನವರೆಗೂ ಈ ಜೋಡಿ ತಾರೆಯರನ್ನು ಒಟ್ಟಾಗಿ ನೋಡುವ ಭಾಗ್ಯ ಕೂಡಿ ಬಂದಿರಲಿಲ್ಲ. ಲೋಕೇಶ್ ಕನಕರಾಜ್ ಅದನ್ನು ಸಾಧ್ಯವಾಗಿಸುವ ಹೊಸ್ತಿಲಿನಲ್ಲಿದ್ದಾರೆ.

ಇದು ಗ್ಯಾಂಗ್‌ಸ್ಟರ್‌ಗಳ ಕಥೆಯಾಧಾರಿತ ಸಿನಿಮಾ. ಲೋಕೇಶ್ ಕನಕರಾಜ್ ಕೊರೋನಾ ಕಾಲದಲ್ಲಿಯೇ ಈ ಕಥೆಯನ್ನು ಸಿದ್ಧಗೊಳಿಸಿದ್ದರಂತೆ. ಆ ಕಥೆ ಸಿದ್ಧಗೊಳ್ಳುವ ಹಾದಿಯಲ್ಲಿಯೇ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಬೇಕೆಂಬುದು ಲೋಕಿ ಕನಸಾಗಿತ್ತು. ಕೂಲಿ ಸಿನಿಮಾ ಸಂದರ್ಭದಲ್ಲಿಯೇ ರಜನಿ ಬಳಿ ಲೋಕೇಶ್ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದರಂತೆ. ಆ ಘಳಿಗೆಯಲ್ಲಿಯೇ ಮೊದಲು ಕೂಲಿ ಮುಗಿಸಿಕೊಂಡು ಆ ನಂತರ ಅದರ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಲೈವಾ ಹೇಳಿದ್ದರು. ಇದೀಗ ಮತ್ತೆ ರಜನಿ ಚಿತ್ರ ಆ ಪ್ರಾಜೆಕ್ಟಿನತ್ತ ಹೊರಳಿಕೊಂಡಿದೆ. ಎಲ್ಲವೂ ಈಗ ಮಾತುಕತೆಯ ಹಂತದಲ್ಲಿದೆ. ಅದಾದೇಟಿಗೆ ಅಧಿಕೃತ ಮಾಹಿತಿಗಳು ಜಾಹೀರಾಗಲಿವೆ.

The post rajanikanth-kamal haasan new movie: ಲೋಕೇಶ್ ಕನಕರಾಜ್‌ಗೆ ಮತ್ತೊಂದು ಅವಕಾಶ! appeared first on Cini Shodha.

coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ!
ತಲೈವಾ ರಜನೀಕಾಂತ್ ಅಭಿನಯದ ಕೂಲಿ ಚಿತ್ರ ಬಿಡುಗಡೆಗೊಂಡಿದೆ. ಜೈಲರ್ ಮೂಲಕ ಮತ್ತೆ ಮೈ ಕೊಡವಿಕೊಂಡಿದ್ದ ರಜನೀಕಾಂತ್ ಕೂಲಿ ಮೂಲಕ ಮತ್ತೊಂದು ದಾಖಲೆ ಬರೆಯುತ್ತಾರೆಂಬಂತೆ ಬಿಲ್ಡಪ್ಪುಗಳು ಹರಿದಾಡಿದ್ದವು. ಈ ತಮಿಳು ಮಂದಿ ಎಷ್ಟು ಸಿನಿಮಾರಾಧಕರೋ, ತಮ್ಮಿಷ್ಟದ ನಟನ ಸಿನಿಮಾ ಬಗ್ಗೆ ಊರಗಲ ಹೈಪು ಸೃಷ್ಟಿಸೋದರಲ್ಲಿಯೂ ಅಷ್ಟೇ ನಿಸ್ಸೀಮರು. ಸಿನಿಮಾ ನಿರ್ಮಾತೃಗಳೂ ಕೂಡಾ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಒಂದಷ್ಟು ಬಚಾವಾಗಲೋಸುಗ ಅಂಥ ಭ್ರಾಮಕ ಹೈಪುಗಳನ್ನೇ ನೆಚ್ಚಿಕೊಳ್ಳುತ್ತಾರೆ. ಕೂಲಿ ಬರಖತ್ತಾಗೋದು ಕಷ್ಟ ಎಂಬರಿತ ಕೂಲಿ ತಂಡ ಕೂಡಾ ಅಂಥಾದ್ದೊಂದು ಬುದ್ಧಿವಂತಿಕೆಯ ನಡೆ ಅನುಸರಿಸಿತ್ತಾ? ಈ ಪ್ರಶ್ನೆಗೆ ಸಿನಿಮಾ ನೋಡಿದ ಮೇಲೆ ಹೌದೆಂಬ ಉತ್ತರವೇ ಗಟ್ಟಿಯಾಗುತ್ತೆ. ಭಯಾನಕ ಪ್ರಚಾರ ಪಡೆದುಕೊಂಡು ತೆರೆಗಂಡಿದ್ದ ಕೂಲಿ ತೀರಾ ಮಾಮೂಲಿ ಎಂಬ ವಿಮರ್ಶೆಗಳೇ ಅಷ್ಟ ದಿಕ್ಕುಗಳಲ್ಲಿಯೂ ಇಟ್ಟಾಡಲಾರಂಭಿಸಿದೆ.

ವಿಕ್ರಮ್ ಥರದ ಸಿನಿಮಾ ಮೂಲಕ ಕಮಲ್ ಹಾಸನ್‌ರಂಥಾ ನಟರನ್ನಿಟ್ಟುಕೊಂಡು ಮ್ಯಾಜಿಕ್ಕು ಮಾಡಿದ್ದಾತ ಲೋಕೇಶ್ ಕನಗರಾಜ್. ಅಂಥಾ ಯುವ ನಿರ್ದೇಶಕನ ಸಾರಥ್ಯದಲ್ಲಿ ರಜನಿ ಗೆಲುವಿನ ಪರ್ವ ಮುಂದುವರೆಯುತ್ತದೆಂದೇ ಬಹುತೇಕರು ಭಾವಿಸಿದ್ದರು. ಯಾವಾಗ ಮೆಲ್ಲಗೆ ಕ್ರೇಜ್ ಸೃಷ್ಟಿಯಾಗ ತೊಡಗಿತೋ, ಅದನ್ನು ಚಿತ್ರತಂಡ ಮತ್ತಷ್ಟು ಮಿರುಗುವಂತೆ ಮಾಡಿ ಬಿಟ್ಟಿತ್ತು. ಆದರೆ, ರಜನೀಕಾಂತ್ ಸಿನಿಮಾವೆಂಬ ಆಕರ್ಷಣೆಯ ಹೊರತಾಗಿ ಮತ್ತೆಲ್ಲವೂ ಮಾಮೂಲಿ ಎಂಬಂಥಾ ರೀತಿಯಲ್ಲಿ ಕೂಲಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಇಲ್ಲಿ ಕಥೆ ಇದೆ; ಆದರದು ಕಾಡೋದಿಲ್ಲ. ಅದ್ದೂರಿ ದೃಶ್ಯಾವಳಿಗಳು, ತಲೈವಾಗೆ ಕೊಟ್ಟಿರೋ ಬಿಲ್ಡಪ್ಪುಗಳು ಪ್ರೇಕ್ಷಕರ ನಿರಾಸೆಯನ್ನು ತೊಡೆದು ಹಾಕುವಷ್ಟು ಶಕ್ತವಾಗಿಲ್ಲ.

ಒಂದೊಂದು ಹಂತದಲ್ಲಿ ಇದು ನಿಜಕ್ಕೂ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಚಿತ್ರವಾ? ಅಂತೊಂದು ಸಂದೇಹ ಪ್ರೇಕ್ಷಕರನ್ನು ಕಾಡಲಾರಂಭಿಸುತ್ತೆ. ಯಾವ ಮುಲಾಜುಗಳಿಗೆ ಕಟ್ಟು ಬಿದ್ದು ಲೋಕೇಶ್ ಇಂಥಾದ್ದೊಂದು ಸರಕನ್ನು ಸಿದ್ಧಪಡಿಕಸಿದ್ದಾರೆಂಬುದೇ ಪ್ರಶ್ನೆಯಾಗುಳಿಯುತ್ತೆ. ಇಲ್ಲಿ ಬೇರೆ ಬೇರೆ ಸಿನಿಮಾ ರಂಗಗಳ ಸ್ಟಾರ್ ನಟರಿದ್ದಾರೆ. ಅವರನ್ನೆಲ್ಲ ಒಂದು ಮಟ್ಟಿಗೆ ಚೆಂದಗೆ ಬಳಸಿಕೊಳ್ಳಲಾಗಿದೆ. ಮಹಾ ತಿರುವು ಹೊಂದಿರುವ ಪಾತ್ರವನ್ನು ರಚಿತ ರಾಮ್ ಕೂಡಾ ಪ್ರೇಷರ ಮನಗೆಲ್ಲುವಂತೆ ನಿರ್ವಹಿಸಿದ್ದಾರೆ. ಆಕೆಯ ಅಭಿನಯ ಚಾತುರ್ಯವಿಲ್ಲಿ ಎದ್ದು ಕಾಣಿಸುತ್ತೆ. ಉಪ್ಪಿ ಪಾತ್ರ ಕೂಡಾ ಚೆನ್ನಾಗಿದೆ. ಆದರೆ, ಅದು ಜೈಲರ್‌ನಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಪಾತ್ರದಷ್ಟು ಪರಿಣಾಮಕಾರಿಯಾಗಿಲ್ಲ.

ನಿಖರವಾಗಿ ಹೇಳಬೇಕೆಂದರೆ, ಒಂದಿಡೀ ಸಿನಿಮಾ ವಾಲಿದಾಗೆಲ್ಲ ಹಿಡಿದೆತ್ತಿ ನಿಂತಂತೆ ಕಾಣಿಸೋದು ಮಲೆಯಾಳಂ ನಟ ಸೋಬಿನ್. ಈತ ನಟನೆಯಲ್ಲಿ ದಯಾಳ್ ಎಂಬ ಪಾತ್ರವನ್ನು ಆವಾಹಿಸಿಕೊಂಡಿರೋ ರೀತಿಯೇ ಅದ್ಭುತ. ಇನ್ನುಳಿದಂತೆ ಸಂಗೀತ ನಿರ್ದೇಶಕ ಅನಿರುದ್ಧ್ ಕೂಡಾ ಈ ಸಿನಿಮಾವನ್ನು ಕುಸಿಯದಂತೆ ನೋಡಿಕೊಂಡ ಆಧಾರ ಸ್ತಂಭಗಳಲ್ಲೊಬ್ಬರಾಗಿ ಮುಖ್ಯರಾಗುತ್ತಾರೆ. ಆದರೆ, ಲೋಕೇಶ್ ಯಾಕಿಂಥಾ ಪೇಲವ ಸಿನಿಮಾ ಮಾಡಿದರೆಂಬ ಪ್ರಶ್ನೆ ಸಿನಿಮಾ ಮುಗಿದ ನಂತರವೂ ಕಾಡುತ್ತೆ. ಅಷ್ಟಕ್ಕೂ ಲೋಕೇಶ್ ಇಲ್ಲಿ ಪ್ರದರ್ಶಿಸಿರುವ ಪಟ್ಟುಗಳು ಪುರಾತನ ಕಾಲದವುಗಳು. ಊರ್ಯ ನಿಸಿದ್ದ ಅಯ್ಯನ್ ಸಿನಿಮಾದಲ್ಲಿ ದಶಕಗಳ ಹಿಂಎಯೇ ಅವುಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿತ್ತು. ಅಂಥಾ ಸವಕಲು ಸರಕನ್ನು ತೀರಾ ಮಾಮೂಲಿಕಯಾಗಿ ಕದೃಷವಾಗಿಸಿದ್ದಾರೆ.

ತಲೈವಾ ಸಿನಿಮಾಗಳಿಂದ ಮೇಲೆ ಕಾಸು ಹೂಡಿದವರಿಗೇನ ಲುಕ್ಸಾನಾಗೋದಿಲ್ಲ. ಒದಷ್ಟು ಲಾಭವಾಗೋದೂ ಖಚಿತ. ಆದರೆ, ಒಂದೊಳ್ಳೆ ಸಿನಿಮಾ ಮೂಲಕ ಅದನ್ನು ಬಳಸಿಕೊಳ್ಳದೇ ಹೋದರೆ ನಿಜಕ್ಕೂ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಲೋಕೇಶ್ ಕನಗರಾಜ್ ಕೂಡಾ ಯಾಕೋ ಅಂಥಾ ಮೂರ್ಖತನವನ್ನೇ ಮಾಡಿದಂತೆ ಕಾಣಿಸುತ್ತಿದೆ. ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಹೈಪು ಸೃಷ್ಟಿಯಾಗಿತ್ತು. ಕಬಾಲಿ ಜಾಹೀರಾತು ಇಮಗಳಲ್ಲಿಯೂ ರಾರಾಜಿಸಿದ್ದವು. ಅಂಥಾ ಹೈಪುಗಳ ಅಬ್ಬರದಲ್ಲಿ ಬಿಡುಗಡೆಗೊಂಡಿದ್ದು ತೋಪು ಸಿನಿಮಾ. ಕೂಲಿಯ ಕ್ರೇಜ್ ನೋಡಿದಾಗಲೂ ಕಬಾಲಿ ಕಾಲವೇ ನೆನಪಾಗಿತ್ತು. ಆದರೆ, ಸಿನಿಮಾ ನೋಡಿದ ಮಂದಿ ಕೂಲಿಗಿಂತ ಕಬಾಲಿಯೇ ವಾಸಿ ಅಂದುಕೊಳ್ಳುವಂತಾಗಿದೆ. ಬಹುಶಃ ಅದು ಕೂಲಿಯ ನಿಜವಾದ ವಿಮರ್ಶೆಯಾಗಬಲ್ಲದು!

The post coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ! appeared first on Cini Shodha.

Coolie movie craze: ಮತ್ತೆ ಮೈ ಕೊಡವಿದ ತಲೈವಾ!
ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ದೇಶದ ಗಡಿ ದಾಟಿ ವಿದೇಶಗಳಲ್ಲಿಯೂ ಕೂಡಾ ಕೂಲಿಯನ್ನು ಎದುರುಗೊಳ್ಳುವ ಉತ್ಸಾಹ ಮೇರೆ ಮೀರಿಕೊಂಡಿದೆ. ಜೈಲರ್ ಸಿನಿಮಾದ ಭಾರೀ ಯಶಸ್ಸಿನ ನಂತರದಲ್ಲಿ ಬಿಡುಗಡೆಗೊಳ್ಳುತ್ತಿರುವ ಕೂಲಿ ಬಾಕ್ಸಾಫೀಸ್‌ನಲ್ಲಿ ಭಾರೀ ದಾಖಲೆ ಸೃಷ್ಟಿಸುವ ಸೂಚನೆಗಳು ಈಗಾಗಲೇ ಕಾಣಿಸಲಾರಂಭಿಸಿವೆ. ಒಂದು ಮಹಾ ಸೋಲಿನ ಪರ್ವವನ್ನು ಜೈಲರ್ ಮೂಲಕ ದಾಟಿಕೊಂಡಿದ್ಚದ ತಲೈವಾ ಕೂಲಿಯ ಅವತಾರದಲ್ಲಿ ಮತ್ತೆ ಮೈಕೊಡವಿಕೊಳ್ಳಲಿರೋದು ಪಕ್ಕಾ ಎಂಬಂಥಾ ವಾತಾವರಣ ಈಗ ಚಾಲ್ತಿಯಲ್ಲಿದೆ. ಈ ಸಿನಿಮಾ ಮ ಉಂಗಡ ಬುಕ್ಕಿಂಗ್‌ನಲ್ಲಿ ಮಾಡಿರುವ ಕಲೆಕ್ಷನ್ನಿನ ಮೊತ್ತವೇ ಮಹಾ ಗೆಲುವಿನ ಮುನ್ಸೂಚನೆಯಂತಿರೋದು ಸುಳ್ಳಲ್ಲ!

ಈಗ ಜಾಹೀರಾಗಿಕರುವ ಲೆಕ್ಕಾಚಾರವೊಂದರ ಪ್ರಕಾರವಾಗಿ ಹೇಳೋದಾದರೆ, ಮುಂಗಡ ಬುಕ್ಕಿಂಗ್‌ನಿಂದಲೇ ಕೂಲಿ ನೂರು ಕೋಟಿ ಕಲೆಕ್ಷನ್ನು ಮಾಡಿದೆ. ಕೇವಲ ತಮಿಳು ನಾಡು ಮಾತ್ರವಲ್ಲ; ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಕೂಲಿ ಕ್ರೇಜ್ ಯಾವ ಮಟ್ಟದಲ್ಲಿದೆ ಅನ್ನೋದಕ್ಕೆ ಈ ಕಲೆಕ್ಷನ್ ಮೊತ್ತಕ್ಕಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಈ ಮೊತ್ತದಲ್ಲಿ ವಿದೇಶಗಳ ಪಾಲು ಐವತ್ತು ಕೋಟಿಗಳಷ್ಟಿದೆ ಅನ್ನೋದು ಮತ್ತೊಂದು ವಿಶೇಷ. ಹಾಗೆ ನೋಡಿದರೆ, ಕೂಲಿ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಆ ನಂತರವೂ ಸುಖಾಸುಮ್ಮನೆ ಹೈಪ್ ಕ್ರಿಯೇಟ್ ಮಾಡೋ ಗೋಜಿಗೆ ಚಿತ್ರತಂಡ ಹೋಗಿರಲಿಲ್ಲ. ಆದರೂ ಕೂಡಾ ಜೈಲರ್ ಗೆಲುವಿನ ಪ್ರಭೆಯಲ್ಲಿ ತಾನೇ ತಾನಾಗಿ ಕೂಲಿ ಲಕಲಕಿಸಿದೆ.

ಇದು ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ನಟನೊಬ್ಬನ ಛಾರ್ಮ್ ಅನ್ನು ಅಂದಾಜಿಸಿ, ಅದಕ್ಕನುಗುಣವಾಗಿ ದೃಶ್ಯ ಕಟ್ಟುವ ಛಾತಿ ಹೊಂದಿರುವ ಲೋಕೇಶ್ ಒಂದು ಗಟ್ಟಿ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿದಂತಿದೆ. ತಲೈವಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಒಂದಷ್ಟು ಗೆಟಪ್ಪುಗಳು ಮಾತ್ರವೇ ಇದೂವರೆಗೂ ಜಾಹೀರಾಗಿವೆ. ಆದರೆ, ಸಿನಿಮಾ ಮಂದಿರದೊಳಗೆ ತಲೈವಾಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ ಕಾದಿವೆ ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಕೂಲಿ ತೆರೆಗಾಣಲು ಇನ್ನು ಕೆಲವೇ ಕೆ ಗಂಟೆಗಳು ಮಾತ್ರವೇ ಬಾಕಿ ಉಳಿದುಕೊಂಡಿದೆ. ಒಟ್ಟಾರೆ ಸಿನಿಮಾದ ಅಸಲೀಯತ್ತು ಮುಂಜಾನೆ ಹೊತ್ತಿಗೆಲ್ಲ ಬಯಲಾಗಲಿದೆ!

The post Coolie movie craze: ಮತ್ತೆ ಮೈ ಕೊಡವಿದ ತಲೈವಾ! appeared first on Cini Shodha.