rajanikanth – Cini Shodha

Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!
ಜೈಲರ್ ಚಿತ್ರದ ಭಾರೀ ಯಶಸ್ಸಿನ ನಂತರ ರಜನೀಕಾಂತ್ ಜೈಲರ್೨ನತ್ತ ಮುಖ ಮಾಡಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಗರಾಜನ್ ಪ್ರವರ ಕೇಳಿ, ಆತ ಸಿದ್ಧಪಡಿಸಿದ್ದ ಕಥೆಗೆ ನೋ ಅಂದ ನಂತರವೀಗ ತಲೈವಾ ಗಮನವೆಲ್ಲ ಜೈಲರ್೨ನತ್ತ ಕೇಂದ್ರೀಕರಿಸಿಕೊಂಡಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಾರಾಗಣದ ಆಯ್ಕೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಸಿನಿಮಾ ರಂಗದ ಘಟಾನುಘಟಿ ನಟ ನಟಿಯರೆಲ್ಲ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗಬಹುದಾ ಎಂಬಂತೆ ಆಸೆಗಣ್ಣಿನಿಂದ ಕಾಯಲಾರಂಭಿಸಿದ್ದಾರೆ. ಈ ನಡುವೆ ಜೈಲರ್೨ ಅಡ್ಡಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದರನ್ವಯ ಹೇಳೊದಾದರೆ, ಶಾರೂಖ್ ಖಾನ್ ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ನಿಭಾಯಿಸಲು ಒಪ್ಪಿಗೆ ಸೂಚಿಸಿದ್ದಾರೆ!

ಈಗ ಹಬ್ಬಿಕೊಂಡಿರೋ ಸುದ್ದಿಯನ್ನು ಆಧರಿಸಿ ಹೇಳುವುದಾದರೆ, ಶಾರೂಖ್ ಖಾನ್ ಜೈಲರ್೨ನ ಭಾಗವಾಗುತ್ತಿರೋ ಸುದ್ದಿ ರೂಮರ್ ಅಲ್ಲ. ಖುದ್ದು ರಜನೀಕಾಂತ್ ಈಗಾಗಲೇ ಶಾರೂಖ್ ಜೊತೆ ಮಾತಾಡಿದ್ದಾರೆ. ಆ ನಂತರವೇ ನಿರ್ದೇಶಕ ನೆಲ್ಸನ್ ಶಾರೂಖ್‌ಗೆ ಪಾತ್ರದ ಬಗ್ಗೆ ವಿವರಿಸಿ ಹೇಳಿದ್ದಾರೆ. ಶಾರೂಖ್ ಕೂಡಾ ಆ ಪಾತ್ರದ ಚಹರೆಯಿಒಂದಲೇ ಥ್ರಿಲ್ ಆಗಿ ರಜನಿಯೊಂದಿಗೆ ನಟಿಸಲು ಒಪ್ಪಿಕೊಂಡಿದ್ದಾರೆ. ಕಡಿಮೆ ಅವಧಿಯದ್ದೇ ಆದರೂ ಇಡೀ ಸಿನಿಮಾದ ಪ್ರಧಾನ ಆಕರ್ಷಣೆಯಾಗಿ, ತಿರುವ ನೀಡುವ ಪಾತ್ರವ ಆಗಿ ಶಾರೂಖ್ ಕಾಣಿಸಿಕೊಳ್ಳಲಿದ್ದಾರಂತೆ. ಮುಂದಿನ ವರ್ಷದ ಆರಂಭದಲ್ಲಿಯೇ ಶಾರೂಖ್ ಖಾನ್ ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

ರಜನೀಕಾಂತ್ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಅತಿಥಿಗಳಾಗಿ ನಟಿಸೋದೇನೂ ಹೊಸತಲ್ಲ. ಆದರೆ, ಶಾರೂಖ್ ಖಾನ್ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸುತ್ತಿರೋದು ಆತನ ಅಬಿಮಾನಿಗಳನ್ನು ಥ್ರಿಲ್ ಆಗಿಸಿದೆ. ಈ ಹಿಂದೆ ಕೂಲಿ ಚಿತ್ರದಲ್ಲಿ ಆಮೀರ್ ಖಾನ್ ಒಂದು ಪಾತ್ರದಲ್ಲಿ ನಟಿಸಿದ್ದರು. ಆದರೆ ಅದೇಕೋ ಆ ಪಾತ್ರ ಪಕ್ಕಾ ಕಾಮಿಡಿ ಪೀಸಿನಂತೆ ಕಾಣಿಸುವ ಮೂಲಕ ನಿರಾಸೆ ಮೂಡಿಸಿತ್ತು. ಖುದ್ದು ಆಮೀರ್ ಅಭಿಮಾನಿಗಳೇ ಆ ಪಾತ್ರವನ್ನು ನೋಡಿ ಕಂಗಾಲೆದ್ದಿದ್ದರು. ಆದರೆ, ಜೈಲರ್೨ನಲ್ಲಿ ಶಾರೂಖ್ ಪಾತ್ರ ಅಭಿಮಾನಿ ಬಳಗವನ್ನು ಖುಷಿಗೊಳಿಸವಂತಿರಲಿದೆಯಂತೆ. ಅಂದಹಾಗೆ, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ವಿನಾಯಗನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಶಿವರಾಜ್‌ಕುಮಾರ್‌ಗೂ ಚೆಂದದ ಪಾತ್ರ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜೈಲರ್2ನ ತಾರಾಗಣ ಭರ್ತಿಯಾಗಲಿದೆ.

The post Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್! appeared first on Cini Shodha.

Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ!
ಕಬಾಲಿ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್ ಮೂಲಕ ಪುಷ್ಕಳ ಗೆಲುವನ್ನು ಎದುರುಗೊಂಡಿದ್ದಾರೆ. ಅದರಲ್ಲಿನ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಬೇರೆ ಬೇರೆ ಭಾಷೆಗಳ ನಟರು ಜೈಲರ್ ಚಿತ್ರದ ಭಾಗವಾಗಿದ್ದರು. ಇಂಥವರೆಲ್ಲರ ಪಾತ್ರಗಳು ಪಡೆದುಕೊಂಡಿದ್ದ ಮೈಲೇಜು ಗಮನಿಸಿದ್ದ ತೆಲುಗು ಸ್ಟಾರ್ ಬಾಲಯ್ಯನ ಅಭಿಮಾನಿಗಳು, ತಮ್ಮ ನೆಚ್ಚಿನ ನಟನೂ ಈ ಸಿನಿಮಾ ಭಾಗವಾಗಿತ್ತೆಂಬ ಆಸೆ ವ್ಯಕ್ತಪಡಿಸಿದ್ದರು. ಖುದ್ದು ಬಾಲಯ್ಯನಿಗೇ ಅಂಥಾದ್ದೊಂದು ಬಯಕೆ ಮೂಡಿಕೊಂಡಿದ್ದರೂ ಅಚ್ಚರಿಯೇನಿಲ್ಲ. ವಿಶೇಷವೆಂದರೆ, ಜೈಲರ್೨ನಲ್ಲಿ ಖುದ್ದು ಈ ಸಿನಿಮಾ ನಿರ್ದೇಶಕರೇ ನಟಿಸುವಂತೆ ಕೇಳಿಕೊಂಡರೂ ನಂದಮೂರಿ ಬಾಲಕೃಷ್ಣ ಒಲ್ಲೆ ಅಂದಿದ್ದಾರೆ!

ನಿರ್ದೇಶಕ ನೆಲ್ಸನ್ ಜೈಲರ್೨ ಕಥೆ ಸಿದ್ಧಪಡಿಸುವಾಗಲೇ ಬಾಲಯ್ಯನಿಗಾಗಿ ಒಂದು ಪಾತ್ರವನ್ನು ಸೃಷ್ಟಿಸಿದ್ದರಂತೆ. ಅದು ಮೇಲು ನೋಟಕ್ಕೆ ಅತಿಥಿ ಪಾತ್ರದಂತೆ ಕಂಡರೂ ಕೂಡಾ ಖುದ್ದು ರಜನಿ ಪಾತ್ರಕ್ಕೇ ಸರಿಸಮನಾಗಿತ್ತಂತೆ. ಇಂಥಾದ್ದೊಂದು ಪಾತ್ರವನ್ನು ಸೃಷ್ಟಿ ಮಾಡಿದ್ದ ನೆಲ್ಸನ್‌ಗೆ, ಅದರ ಚಹರೆ ಕೇಳುತ್ತಲೇ ಬಾಲಯ್ಯ ಥ್ರಿಲ್ ಆಗಿ ಒಪ್ಪಿಗೆ ಸೂಚಿಸುತ್ತಾರೆಂಬ ವಿಶ್ವಾಸವಿತ್ತು. ಆದರೆ, ಬಾಲಯ್ಯನನ್ನು ಸಂಪರ್ಕಿಸಿದಾಗ ನೆಲ್ಸನ್‌ಗೆ ಆದದ್ದು ಅಕ್ಷರಶಃ ಆಘಾತ. ಯಾಕೆಂದರೆ, ತೀರಾ ನಿರ್ಲಿಪ್ತವಾಗಿ ಈ ಅವಕಾಶವನ್ನು ಎದುರುಗೊಂಡ ಬಾಲಯ್ಯ ಆರಂಭದಿಂದಲೇ ನಾನಾ ರೊಳ್ಳೆ ತೆಗೆದಿದ್ದರು. ಕಡೆಗೂ ತಾನು ತೆಲುಗು ಬಿಟ್ಟು ಮತ್ಯಾವ ಭಾಷೆಯಲ್ಲಿಯೂ ನಟಿಸೋದಿಲ್ಲ ಎಂಬಂಥಾ ನಿರ್ಧಾರ ಪ್ರಕಟಿಸಿ ಜೈಲರ್೨ ಅವಕಾಶವನ್ನು ಸಾರಾಸಗಟಾಗಿ ನಿರಾಕರಿಸಿರುವ ಸುದ್ದಿ ಬಂದಿದೆ.

ಯಾವ ಭಾಷೆಯ ಸೂಪರ್ ಸ್ಟಾರುಗಳೇ ಆಗಿದ್ದರೂ ಕೂಡಾ ರಜನಿ ಜೊತೆ ನಟಿಸುವ ಅವಕಾಶಕ್ಕಾಗಿ ಹಂಬಲಿಸುತ್ತಾರೆ. ಕನ್ನಡದ ಶಿವಣ್ಣ, ಉಪ್ಪಿ ನಟಿಸಿದ್ದು ಕೂಡಾ ಅಂಥಾ ಅದಮ್ಯ ಪ್ರೀತಿಯಿಂದಲೇ. ಆದರೆ ಈ ಬಾಲಯ್ಯ ವಿಕ್ಷಿಪ್ತ ನಟ. ಕಾಮಿಡಿಯಂಥಾ ಪಾತ್ರಗಳನ್ನು ಮಾಡುತ್ತಾ, ಬೇರೆ ಭಾಷೆದಗಳ ಪ್ರೇಕ್ಷಕರು ಲೇವಡಿಯಾಡುವಂಥಾ ಬಿಲ್ಡಪ್ಪುಗಳ ಮೂಲಕ ಚಾಲ್ತಿಯಲ್ಲಿರುವಾತ ಬಾಲಯ್ಯ. ಎಣ್ಣೆ ಏಟಲ್ಲಿ ಏನೇನೋ ಅಧ್ವಾನ ಮಾಡಿಕೊಳ್ಳುವ ಮೂಲಕವೂ ಈತ ಸುದ್ದಿಕೇಂದ್ರದಲ್ಲಿರುತ್ತಾನೆ. ಇಂಥಾ ಬಾಲಯ್ಯ ತಾನು ರಜನಿಯನ್ನೂ ಮೀರಿದ ಸೂಪರ್ ಸ್ಟಾರ್ ಎಂಬ ಭ್ರಮೆಯಲ್ಲಿರುವಂತಿದೆ. ಈ ಕಾರಣದಿಂದಲೇ ಜೈಲರ್೨ ಅವಕಾಸ ಬರುತ್ತಲೇ ಐವತ್ತು ಕೋಟಿ ಸಂಭಾವನೆ ಕೊಡುವಂತೆ ಬೇಡಿಕೆ ಇಡುವ ಮೂಲಕ ಸೀರಿಯಸ್ ಆಗಿಯೇ ಕಾಮಿಡಿ ಮಾಡಿದ್ದ. ಬಾಲಯ್ಯನ ಇಂಥಾ ದುರಹಂಕಾರದ ವರ್ತನೆಯಿಂದ ತಲೈವಾ ಅಭಿಮಾನಿಗಳು ಕೆಂಡವಾಗಿದ್ದಾರೆ!

The post Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ! appeared first on Cini Shodha.

Rajanikanth: ಕೂಲಿ ಸೋಲಿನಿಂದ ಸಿಟ್ಟಾದರಾ ರಜನಿಕಾಂತ್?
ಜೈಲರ್ ಸರಣಿಯ ಗೆಲುವಿನಿಂದ ಮತ್ತೆ ಲಕಲಕಿಸಿದ್ದ ರಜನಿಗೆ ಕೂಲಿಯ ದೆಸೆಯಿಂದ ಒಂದಷ್ಟು ಹಿನ್ನಡೆ ಉಂಟಾಗಿದೆ. ರಜನೀಕಾಂತ್ ಸಿನಿಮಾ ಅಂದಮೇಲೆ ಒಂದು ಮಟ್ಟದ ಗಳಿಕೆಗೆ ತತ್ವಾರವಿರೋದಿಲ್ಲ. ಹಾಕಿದ ಬಂಡವಾಳಕ್ಕಿಂತಲೂ ಒಂದಷ್ಟು ಹೆಚ್ಚು ಗಳಿಕೆಯಾದ ಮಾತ್ರಕ್ಕೆ ರಜನಿ ಸಿನಿಮಾ ಗೆದ್ದಿತೆಂದು ಹೇಳಲಾಗೋದಿಲ್ಲ. ಅಭಿಮಾನದಾಚೆಗೂ ಸರ್ವರೂ ಸಂಭ್ರಮಿಸಿ ಕೊಂಡಾಡುವಂತಾದರೆ ಮಾತ್ರವೇ ರಜನಿಯಂಥಾ ಸೂಪರ್ ಸ್ಟಾರ್‌ಗಳ ಸಿನಿಮಾ ಗೆದ್ದಿತೆಂದು ಅಂದುಕೊಳ್ಳಬಹುದು ಆ ನಿಟ್ಟಿನಲ್ಲಿ ನೋಡಹೋದರೆ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರ ಹೀನಾಯವಾಗಿ ಸೋತಿತ್ತು!

ಅಚ್ಚರಿಯೆಂದರೆ, ಇಂಥಾ ಹಿನ್ನಡೆಯ ನಂತರವೂ ಲೋಕೇಶ್ ಕನಗರಾಜ್‌ಗೆ ರಜನಿ ಮತ್ತೊಂದು ಅವಕಾಶ ಕೊಟ್ಟಿದ್ದರೆಂಬ ಗುಲ್ಲೆದ್ದಿತ್ತು. ಅದರ ಹಿಂದೆ ಸತ್ಯವೂ ಇತ್ತು. ಕೂಲಿ ನೀರಸವಾಗಿ ಮೂಡಿ ಬಂದಿದೆ ಅಂದ ಮಾತ್ರಕ್ಕೆ ಅದ್ಭುತ ಸಿನಿಮಾ ಮಾಡೋ ಕಸುವನ್ನು ಲೋಕಿ ಕಳೆದುಕೊಂಡಿದ್ದಾರೆಂದು ತೀರ್ಮಾನಿಸುವಂತಿಲ್ಲ. ಇಂಥಾ ಹತ್ತಾರು ಸೋಲು ಕಂಡಿರುವ ರಜನಿ, ಈ ಎಳೇ ಹುಡುಗಮನಿಗೆ ಮತ್ತೊಂದು ಅವಕಾಶ ಕೊಟ್ಟಿರೋದು ಅನೇಕರಿಗೆ ಸರಿಯೆನ್ನಿಸಿತ್ತು. ಲೋಕೇಶ್ ಪಾಲಿಗೂ ಕೂಡಾ ಅದು ಒಂದು ಸೋಲನ್ನು ನೀಗಿಕೊಳ್ಳುವ ಅವಕಾಶದಂತಾಗಿತ್ತು. ಈ ಕಾರಣದಿಂದಲೇ ಆತ ಹೊಸಾ ಪ್ರಾಜೆಕ್ಟುಗಳತ್ತ ಗಮನ ಹರಿಸದೆ ರಜನಿ ಜೊತೆಗಿನ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದರು.

ಆದರೀಗ ಲೋಕೇಶ್ ಕನಗರಾಜ್ ಸಿದ್ಧಪಡಿಸಿದ್ದ ಕಥೆಗೆ ರಜನೀಕಾಂತ್ ಒಲ್ಲೆ ಅಂದಿದ್ದಾರೆಂಬ ಸುದ್ದಿಯೊಂದು ಜಾಹೀರಾಗಿದೆ. ಲೋಕೇಶ್ ಕೂಲಿಗೂ ಹಿಂದೆಯೇ ಬಿಗ್ ಬಜೆಟ್ ಕಥೆಯೊಂದನ್ನು ರಜನಿಗೆ ಹೇಳಿದ್ದರಂತೆ. ಅದರಲ್ಲೊಂದಷ್ಟು ಬದಲಾವಣೆ ಸೂಚಿಸಿದ್ದ ರಜನಿಕೂಲಿಯ ನಂತರ ಅದನ್ನ ಕೈಗೆತ್ತಿಕೊಳ್ಳುವ ಭರವಸೆ ಕೊಟ್ಟಿದ್ದರಂತೆ. ಇದೀಗ ಅದೇ ಕಥೆಗೆರ ಪಾಲೀಶು ಮಾಡಿದ ಲೋಕೇಶ್ ರಜನಿಗೆ ಹೇಳಿದ್ದಾರೆ. ಇದನ್ನು ಕೇಳಿದ ತಲೈವಾ ಆಪ್ತ ಬಳಗಕ್ಕೂ ಮತ್ತೊಂದು ಕೂಲಿಯಂಥಾ ಸಿನಿಮಾವಾಗುವ ಸೂಚನೆ ಸಿಕ್ಕಿದೆ. ಈ ಕಾರಣದಿಂದಲೇ ಆ ಕಥೆ ಬೇಡ ಅಂದಿದ್ದಾರಂತೆ ರಜನಿ. ಈ ಆಘಾತದಿಂದ ಕಂಗಾಲಾಗಿರವ ಲೋಕೇಶ್ ಕನಗರಾಜ್ ಸದ್ಯ ಕೈಥಿ೨ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

The post Rajanikanth: ಕೂಲಿ ಸೋಲಿನಿಂದ ಸಿಟ್ಟಾದರಾ ರಜನಿಕಾಂತ್? appeared first on Cini Shodha.

Rajanikanth Coolie On Ott: ತಲೈವಾ ಸಿನಿಮಾವೀಗ ಮತ್ತಷ್ಟು ಹತ್ತಿರ!
ರಜನೀಕಾಂತ್ ಥರದ ಸೂಪರ್ ಸ್ಟಾರ್‌ಗಳ ಸಿನಿಮಾಗಳು ತೀರಾ ಕೆಟ್ಟದಾಗಿರಬೇಕೆಂದೇನೂ ಇಲ್ಲ; ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಕೂಡಾ ತೋಪು ಚಿತ್ರಗಳೆನ್ನಿಸಿಕೊಳ್ಳುತ್ತವೆ. ರಜನಿ ಸಿನಿಮಾಗಳೆಂದ ಮೇಲೆ ಕಾಸು ಹೂಡಿದ ನಿರ್ಮಾಪಕರಿಗೆ ಯಾವ ಕಾರಣಕ್ಕೂ ಲುಕ್ಸಾನಾಗುವುದಿಲ್ಲ. ಹಾಗಿದ್ದ ಮೇಲೆ ಅಭಿಮಾನಿಗಳಿಗೆ ತೀವ್ರ ನಿರಾಸೆ ಮಾಡಿದ್ದ ಕೂಲಿ ಕೂಡಾ ಗಳಿಕೆಯ ಲೆಕ್ಕದಲ್ಲಿ ಸೋತಿದೆ ಅಂದುಕೊಳ್ಳುವಂತಿಲ್ಲ. ಆದರೆ, ಓರ್ವ ನಿರ್ದೇಶಕನಾಗಿ ಲೋಕೇಶ್ ಕನಗರಾಜ್ ರಜನಿ ಅಭಿಮಾನಿಗಳನ್ನು ಸಂತೃಪ್ತಗೊಳಿಸುವಲ್ಲಿ ಸೋತಿದ್ದಾರೆ. ಇಂಥಾ ಹತ್ತಾರು ತಕರಾರುಗಳ ನಡುವೆ ಸಿನಿಮಾ ಮಂದಿರಗಳಿಂದ ಎಗರಿಕೊಂಡಿದ್ದ ಕೂಲಿಯೀಗ ಓಟಿಟಿಗೆ ಎಂಟ್ರಿ ಕೊಟ್ಟು ಅಲ್ಲಿಯೂ ನೀರಸ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ತಿಂಗಳ ಹನ್ನೆರಡರಂದೇ ಕೂಲಿ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿತ್ತು. ಸಾಮಾನ್ಯವಾಗಿ ಸಿನಿಮಾ ಮಂದಿರಗಳಲ್ಲಿ ಮುಗ್ಗರಿಸಿದ ಅದೆಷ್ಟೋ ಸಿನಿಮಾಗಳು ಓಟಿಟಿಯಲ್ಲಿ ಪುಟಿದೇಳುತ್ತವೆ. ಕೂಲಿ ಕೂಡಾ ಅಂಥಾದ್ದೊಂದು ಆಶಾದಾಯಕ ಬೆಳವಣಿಗೆ ಕಾಣಬಹುದೆಂಬ ನಿರೀಕ್ಷೆ ಸಹಜವಾಗಿಯೇ ಬಹುತೇಕರಲ್ಲಿತ್ತು. ಆದರೆ, ರಜನೀ ಸಿನಿಮಾಗಳು ದೊಡ್ಡ ಪರದೆಯ ಮೇಲೆ ಹುಟ್ಟಿಸೋ ಫೀಲ್ ಅನ್ನು ಅದರಾಚೆಗೆ ಮೂಡಿಸಲು ಸಾಧ್ಯವಿಲ್ಲ.ಹೇ ಹೇಳಿಕೇಳಿ ಕೂಲಿ ದೊಡ್ಡ ಪರದೆಯಲ್ಲೇ ಅಡ್ಡಡ್ಡ ಮಲಗಿತ್ತು. ಇಂಥಾ ಸಿನಿಮಾವೀಗ ಅಮೇಜಾನ್ ಪ್ರೈಮ್‌ನಲ್ಲಿಯೂ ತೆವಳುತ್ತಾ ಸಾಗುತ್ತಿದೆ.

ಇನ್ನುಳಿದಂತೆ ಹಬ್ಬದ ವಾರದ ಅಂಚಿನಲ್ಲಿಯೇ ಕೂಲಿ ಉದಯ ವಾಹಿನಿಯಲ್ಲಿಯೂ ಕೂಡಾ ಪ್ರಸಾರಗೊಂಡಿದೆ. ಆದರೆ, ಅಲ್ಲೂ ರಜನಿ ಸಿನಿಮಾ ಹೇಳಿಕೊಳ್ಳುವಂಥಾ ದಾಖಲೆ ಬರೆದಂತಿಲ್ಲ. ರಜನೀಕಾಂತ್ ಸಿನಿಮಾ ತೆರೆಗಬಾಣುತ್ತದೆಯೆಂದರೆ, ಬಹುಕೋಟಿ ಬ್ಯುಸಿನೆಸ್ ಆಗುವ ಅಂದಾಜಿರುತ್ತದೆ. ಆದರೆ, ಕೂಲಿ ಮುಕ್ಕರಿಸಿ ನೂರಾವ ಐವತ್ತು ಕೋಟಿ ಸಂಪಾದಿಸುವಷ್ಟರಲ್ಲಿ ಬಸವಳಿದು ಬಿಟ್ಟಿದೆ. ಈ ಮೂಲಕ ರಜನಿ ಸಿನಿಮಾದ ಸಮರ್ಥ ಸಾರಥಿಯಾಗುವಲ್ಲಿ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದಾರೆ. ವಿಶೇಷವೆಂದರೆ, ರಜನೀಕಾಂತ್ ಅದೇ ಲೋಕೇಶ್‌ಗೆ ತಮ್ಮ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕಲ್ಪಿಸಿದ್ದಾರೆ!

The post Rajanikanth Coolie On Ott: ತಲೈವಾ ಸಿನಿಮಾವೀಗ ಮತ್ತಷ್ಟು ಹತ್ತಿರ! appeared first on Cini Shodha.

rajanikanth-kamal haasan new movie: ಲೋಕೇಶ್ ಕನಕರಾಜ್‌ಗೆ ಮತ್ತೊಂದು ಅವಕಾಶ!
ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿದೆ. ಆದರೆ, ಪಕ್ಕಾ ರಜನೀ ಶೈಲಿಯಲ್ಲಿ ಕೂಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಸೃಷ್ಟಿಸುತ್ತಿರೋದು ಸುಳ್ಳಲ್ಲ. ಹೈಪಿಗೆ ಒಂದಷ್ಟು ಹತ್ತಿರಾಗಿ ಮೂಡಿ ಬಂದಿದ್ದರೂ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಅವಕಾಶದಿಂದ ಕೂಲಿ ವಂಚಿತವಾದಂತಿದೆ. ಇದೇ ಹೊತ್ತಿನಲ್ಲಿ ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ದೊಡ್ಡ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇದು ನಿಜಕ್ಕೂ ವಿಶೇಷವಾದ ಸಿನಿಮಾ. ಯಾಕೆಂದರೆ, ಇಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಸಲಿದ್ದಾರೆ. ಇದೊಂದು ರೀತಿಯಲ್ಲಿ ಅಪೂರ್ವ ಸಂಗಮ ಅನ್ನಲಡ್ಡಿಯಿಲ್ಲ. ಭರ್ತಿ ನಾಲಕ್ಕು ದಶಕಗಳ ನಂತರ ಈ ಇಬ್ಬರು ನಟರು ಒಂದೇವ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆಂದರೆ, ಅದು ಸಿನಿಮಾ ಪ್ರೇಮಿಗಳ ಪಾಲಿಗೆ ಪಕ್ಕಾ ಥ್ರಿಲ್ಲಿಂಗ್ ವಿಚಾರ. ೧೯೭೯ರಲ್ಲಿ ಅಲ್ಲಾವುದ್ದೀನಮ್ ಅಲ್ಬೂತ ವಿಲಕ್ಕುಮ್ ಎಂಬ ಸಿನಿಮಾದಲ್ಲಿ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಿದ್ದರು. ಅದೇ ಕೊನೆ; ಇಂದಿನವರೆಗೂ ಈ ಜೋಡಿ ತಾರೆಯರನ್ನು ಒಟ್ಟಾಗಿ ನೋಡುವ ಭಾಗ್ಯ ಕೂಡಿ ಬಂದಿರಲಿಲ್ಲ. ಲೋಕೇಶ್ ಕನಕರಾಜ್ ಅದನ್ನು ಸಾಧ್ಯವಾಗಿಸುವ ಹೊಸ್ತಿಲಿನಲ್ಲಿದ್ದಾರೆ.

ಇದು ಗ್ಯಾಂಗ್‌ಸ್ಟರ್‌ಗಳ ಕಥೆಯಾಧಾರಿತ ಸಿನಿಮಾ. ಲೋಕೇಶ್ ಕನಕರಾಜ್ ಕೊರೋನಾ ಕಾಲದಲ್ಲಿಯೇ ಈ ಕಥೆಯನ್ನು ಸಿದ್ಧಗೊಳಿಸಿದ್ದರಂತೆ. ಆ ಕಥೆ ಸಿದ್ಧಗೊಳ್ಳುವ ಹಾದಿಯಲ್ಲಿಯೇ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಬೇಕೆಂಬುದು ಲೋಕಿ ಕನಸಾಗಿತ್ತು. ಕೂಲಿ ಸಿನಿಮಾ ಸಂದರ್ಭದಲ್ಲಿಯೇ ರಜನಿ ಬಳಿ ಲೋಕೇಶ್ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದರಂತೆ. ಆ ಘಳಿಗೆಯಲ್ಲಿಯೇ ಮೊದಲು ಕೂಲಿ ಮುಗಿಸಿಕೊಂಡು ಆ ನಂತರ ಅದರ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಲೈವಾ ಹೇಳಿದ್ದರು. ಇದೀಗ ಮತ್ತೆ ರಜನಿ ಚಿತ್ರ ಆ ಪ್ರಾಜೆಕ್ಟಿನತ್ತ ಹೊರಳಿಕೊಂಡಿದೆ. ಎಲ್ಲವೂ ಈಗ ಮಾತುಕತೆಯ ಹಂತದಲ್ಲಿದೆ. ಅದಾದೇಟಿಗೆ ಅಧಿಕೃತ ಮಾಹಿತಿಗಳು ಜಾಹೀರಾಗಲಿವೆ.

The post rajanikanth-kamal haasan new movie: ಲೋಕೇಶ್ ಕನಕರಾಜ್‌ಗೆ ಮತ್ತೊಂದು ಅವಕಾಶ! appeared first on Cini Shodha.

coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ!
ತಲೈವಾ ರಜನೀಕಾಂತ್ ಅಭಿನಯದ ಕೂಲಿ ಚಿತ್ರ ಬಿಡುಗಡೆಗೊಂಡಿದೆ. ಜೈಲರ್ ಮೂಲಕ ಮತ್ತೆ ಮೈ ಕೊಡವಿಕೊಂಡಿದ್ದ ರಜನೀಕಾಂತ್ ಕೂಲಿ ಮೂಲಕ ಮತ್ತೊಂದು ದಾಖಲೆ ಬರೆಯುತ್ತಾರೆಂಬಂತೆ ಬಿಲ್ಡಪ್ಪುಗಳು ಹರಿದಾಡಿದ್ದವು. ಈ ತಮಿಳು ಮಂದಿ ಎಷ್ಟು ಸಿನಿಮಾರಾಧಕರೋ, ತಮ್ಮಿಷ್ಟದ ನಟನ ಸಿನಿಮಾ ಬಗ್ಗೆ ಊರಗಲ ಹೈಪು ಸೃಷ್ಟಿಸೋದರಲ್ಲಿಯೂ ಅಷ್ಟೇ ನಿಸ್ಸೀಮರು. ಸಿನಿಮಾ ನಿರ್ಮಾತೃಗಳೂ ಕೂಡಾ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಒಂದಷ್ಟು ಬಚಾವಾಗಲೋಸುಗ ಅಂಥ ಭ್ರಾಮಕ ಹೈಪುಗಳನ್ನೇ ನೆಚ್ಚಿಕೊಳ್ಳುತ್ತಾರೆ. ಕೂಲಿ ಬರಖತ್ತಾಗೋದು ಕಷ್ಟ ಎಂಬರಿತ ಕೂಲಿ ತಂಡ ಕೂಡಾ ಅಂಥಾದ್ದೊಂದು ಬುದ್ಧಿವಂತಿಕೆಯ ನಡೆ ಅನುಸರಿಸಿತ್ತಾ? ಈ ಪ್ರಶ್ನೆಗೆ ಸಿನಿಮಾ ನೋಡಿದ ಮೇಲೆ ಹೌದೆಂಬ ಉತ್ತರವೇ ಗಟ್ಟಿಯಾಗುತ್ತೆ. ಭಯಾನಕ ಪ್ರಚಾರ ಪಡೆದುಕೊಂಡು ತೆರೆಗಂಡಿದ್ದ ಕೂಲಿ ತೀರಾ ಮಾಮೂಲಿ ಎಂಬ ವಿಮರ್ಶೆಗಳೇ ಅಷ್ಟ ದಿಕ್ಕುಗಳಲ್ಲಿಯೂ ಇಟ್ಟಾಡಲಾರಂಭಿಸಿದೆ.

ವಿಕ್ರಮ್ ಥರದ ಸಿನಿಮಾ ಮೂಲಕ ಕಮಲ್ ಹಾಸನ್‌ರಂಥಾ ನಟರನ್ನಿಟ್ಟುಕೊಂಡು ಮ್ಯಾಜಿಕ್ಕು ಮಾಡಿದ್ದಾತ ಲೋಕೇಶ್ ಕನಗರಾಜ್. ಅಂಥಾ ಯುವ ನಿರ್ದೇಶಕನ ಸಾರಥ್ಯದಲ್ಲಿ ರಜನಿ ಗೆಲುವಿನ ಪರ್ವ ಮುಂದುವರೆಯುತ್ತದೆಂದೇ ಬಹುತೇಕರು ಭಾವಿಸಿದ್ದರು. ಯಾವಾಗ ಮೆಲ್ಲಗೆ ಕ್ರೇಜ್ ಸೃಷ್ಟಿಯಾಗ ತೊಡಗಿತೋ, ಅದನ್ನು ಚಿತ್ರತಂಡ ಮತ್ತಷ್ಟು ಮಿರುಗುವಂತೆ ಮಾಡಿ ಬಿಟ್ಟಿತ್ತು. ಆದರೆ, ರಜನೀಕಾಂತ್ ಸಿನಿಮಾವೆಂಬ ಆಕರ್ಷಣೆಯ ಹೊರತಾಗಿ ಮತ್ತೆಲ್ಲವೂ ಮಾಮೂಲಿ ಎಂಬಂಥಾ ರೀತಿಯಲ್ಲಿ ಕೂಲಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಇಲ್ಲಿ ಕಥೆ ಇದೆ; ಆದರದು ಕಾಡೋದಿಲ್ಲ. ಅದ್ದೂರಿ ದೃಶ್ಯಾವಳಿಗಳು, ತಲೈವಾಗೆ ಕೊಟ್ಟಿರೋ ಬಿಲ್ಡಪ್ಪುಗಳು ಪ್ರೇಕ್ಷಕರ ನಿರಾಸೆಯನ್ನು ತೊಡೆದು ಹಾಕುವಷ್ಟು ಶಕ್ತವಾಗಿಲ್ಲ.

ಒಂದೊಂದು ಹಂತದಲ್ಲಿ ಇದು ನಿಜಕ್ಕೂ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಚಿತ್ರವಾ? ಅಂತೊಂದು ಸಂದೇಹ ಪ್ರೇಕ್ಷಕರನ್ನು ಕಾಡಲಾರಂಭಿಸುತ್ತೆ. ಯಾವ ಮುಲಾಜುಗಳಿಗೆ ಕಟ್ಟು ಬಿದ್ದು ಲೋಕೇಶ್ ಇಂಥಾದ್ದೊಂದು ಸರಕನ್ನು ಸಿದ್ಧಪಡಿಕಸಿದ್ದಾರೆಂಬುದೇ ಪ್ರಶ್ನೆಯಾಗುಳಿಯುತ್ತೆ. ಇಲ್ಲಿ ಬೇರೆ ಬೇರೆ ಸಿನಿಮಾ ರಂಗಗಳ ಸ್ಟಾರ್ ನಟರಿದ್ದಾರೆ. ಅವರನ್ನೆಲ್ಲ ಒಂದು ಮಟ್ಟಿಗೆ ಚೆಂದಗೆ ಬಳಸಿಕೊಳ್ಳಲಾಗಿದೆ. ಮಹಾ ತಿರುವು ಹೊಂದಿರುವ ಪಾತ್ರವನ್ನು ರಚಿತ ರಾಮ್ ಕೂಡಾ ಪ್ರೇಷರ ಮನಗೆಲ್ಲುವಂತೆ ನಿರ್ವಹಿಸಿದ್ದಾರೆ. ಆಕೆಯ ಅಭಿನಯ ಚಾತುರ್ಯವಿಲ್ಲಿ ಎದ್ದು ಕಾಣಿಸುತ್ತೆ. ಉಪ್ಪಿ ಪಾತ್ರ ಕೂಡಾ ಚೆನ್ನಾಗಿದೆ. ಆದರೆ, ಅದು ಜೈಲರ್‌ನಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಪಾತ್ರದಷ್ಟು ಪರಿಣಾಮಕಾರಿಯಾಗಿಲ್ಲ.

ನಿಖರವಾಗಿ ಹೇಳಬೇಕೆಂದರೆ, ಒಂದಿಡೀ ಸಿನಿಮಾ ವಾಲಿದಾಗೆಲ್ಲ ಹಿಡಿದೆತ್ತಿ ನಿಂತಂತೆ ಕಾಣಿಸೋದು ಮಲೆಯಾಳಂ ನಟ ಸೋಬಿನ್. ಈತ ನಟನೆಯಲ್ಲಿ ದಯಾಳ್ ಎಂಬ ಪಾತ್ರವನ್ನು ಆವಾಹಿಸಿಕೊಂಡಿರೋ ರೀತಿಯೇ ಅದ್ಭುತ. ಇನ್ನುಳಿದಂತೆ ಸಂಗೀತ ನಿರ್ದೇಶಕ ಅನಿರುದ್ಧ್ ಕೂಡಾ ಈ ಸಿನಿಮಾವನ್ನು ಕುಸಿಯದಂತೆ ನೋಡಿಕೊಂಡ ಆಧಾರ ಸ್ತಂಭಗಳಲ್ಲೊಬ್ಬರಾಗಿ ಮುಖ್ಯರಾಗುತ್ತಾರೆ. ಆದರೆ, ಲೋಕೇಶ್ ಯಾಕಿಂಥಾ ಪೇಲವ ಸಿನಿಮಾ ಮಾಡಿದರೆಂಬ ಪ್ರಶ್ನೆ ಸಿನಿಮಾ ಮುಗಿದ ನಂತರವೂ ಕಾಡುತ್ತೆ. ಅಷ್ಟಕ್ಕೂ ಲೋಕೇಶ್ ಇಲ್ಲಿ ಪ್ರದರ್ಶಿಸಿರುವ ಪಟ್ಟುಗಳು ಪುರಾತನ ಕಾಲದವುಗಳು. ಊರ್ಯ ನಿಸಿದ್ದ ಅಯ್ಯನ್ ಸಿನಿಮಾದಲ್ಲಿ ದಶಕಗಳ ಹಿಂಎಯೇ ಅವುಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿತ್ತು. ಅಂಥಾ ಸವಕಲು ಸರಕನ್ನು ತೀರಾ ಮಾಮೂಲಿಕಯಾಗಿ ಕದೃಷವಾಗಿಸಿದ್ದಾರೆ.

ತಲೈವಾ ಸಿನಿಮಾಗಳಿಂದ ಮೇಲೆ ಕಾಸು ಹೂಡಿದವರಿಗೇನ ಲುಕ್ಸಾನಾಗೋದಿಲ್ಲ. ಒದಷ್ಟು ಲಾಭವಾಗೋದೂ ಖಚಿತ. ಆದರೆ, ಒಂದೊಳ್ಳೆ ಸಿನಿಮಾ ಮೂಲಕ ಅದನ್ನು ಬಳಸಿಕೊಳ್ಳದೇ ಹೋದರೆ ನಿಜಕ್ಕೂ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಲೋಕೇಶ್ ಕನಗರಾಜ್ ಕೂಡಾ ಯಾಕೋ ಅಂಥಾ ಮೂರ್ಖತನವನ್ನೇ ಮಾಡಿದಂತೆ ಕಾಣಿಸುತ್ತಿದೆ. ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಹೈಪು ಸೃಷ್ಟಿಯಾಗಿತ್ತು. ಕಬಾಲಿ ಜಾಹೀರಾತು ಇಮಗಳಲ್ಲಿಯೂ ರಾರಾಜಿಸಿದ್ದವು. ಅಂಥಾ ಹೈಪುಗಳ ಅಬ್ಬರದಲ್ಲಿ ಬಿಡುಗಡೆಗೊಂಡಿದ್ದು ತೋಪು ಸಿನಿಮಾ. ಕೂಲಿಯ ಕ್ರೇಜ್ ನೋಡಿದಾಗಲೂ ಕಬಾಲಿ ಕಾಲವೇ ನೆನಪಾಗಿತ್ತು. ಆದರೆ, ಸಿನಿಮಾ ನೋಡಿದ ಮಂದಿ ಕೂಲಿಗಿಂತ ಕಬಾಲಿಯೇ ವಾಸಿ ಅಂದುಕೊಳ್ಳುವಂತಾಗಿದೆ. ಬಹುಶಃ ಅದು ಕೂಲಿಯ ನಿಜವಾದ ವಿಮರ್ಶೆಯಾಗಬಲ್ಲದು!

The post coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ! appeared first on Cini Shodha.

Coolie movie craze: ಮತ್ತೆ ಮೈ ಕೊಡವಿದ ತಲೈವಾ!
ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ದೇಶದ ಗಡಿ ದಾಟಿ ವಿದೇಶಗಳಲ್ಲಿಯೂ ಕೂಡಾ ಕೂಲಿಯನ್ನು ಎದುರುಗೊಳ್ಳುವ ಉತ್ಸಾಹ ಮೇರೆ ಮೀರಿಕೊಂಡಿದೆ. ಜೈಲರ್ ಸಿನಿಮಾದ ಭಾರೀ ಯಶಸ್ಸಿನ ನಂತರದಲ್ಲಿ ಬಿಡುಗಡೆಗೊಳ್ಳುತ್ತಿರುವ ಕೂಲಿ ಬಾಕ್ಸಾಫೀಸ್‌ನಲ್ಲಿ ಭಾರೀ ದಾಖಲೆ ಸೃಷ್ಟಿಸುವ ಸೂಚನೆಗಳು ಈಗಾಗಲೇ ಕಾಣಿಸಲಾರಂಭಿಸಿವೆ. ಒಂದು ಮಹಾ ಸೋಲಿನ ಪರ್ವವನ್ನು ಜೈಲರ್ ಮೂಲಕ ದಾಟಿಕೊಂಡಿದ್ಚದ ತಲೈವಾ ಕೂಲಿಯ ಅವತಾರದಲ್ಲಿ ಮತ್ತೆ ಮೈಕೊಡವಿಕೊಳ್ಳಲಿರೋದು ಪಕ್ಕಾ ಎಂಬಂಥಾ ವಾತಾವರಣ ಈಗ ಚಾಲ್ತಿಯಲ್ಲಿದೆ. ಈ ಸಿನಿಮಾ ಮ ಉಂಗಡ ಬುಕ್ಕಿಂಗ್‌ನಲ್ಲಿ ಮಾಡಿರುವ ಕಲೆಕ್ಷನ್ನಿನ ಮೊತ್ತವೇ ಮಹಾ ಗೆಲುವಿನ ಮುನ್ಸೂಚನೆಯಂತಿರೋದು ಸುಳ್ಳಲ್ಲ!

ಈಗ ಜಾಹೀರಾಗಿಕರುವ ಲೆಕ್ಕಾಚಾರವೊಂದರ ಪ್ರಕಾರವಾಗಿ ಹೇಳೋದಾದರೆ, ಮುಂಗಡ ಬುಕ್ಕಿಂಗ್‌ನಿಂದಲೇ ಕೂಲಿ ನೂರು ಕೋಟಿ ಕಲೆಕ್ಷನ್ನು ಮಾಡಿದೆ. ಕೇವಲ ತಮಿಳು ನಾಡು ಮಾತ್ರವಲ್ಲ; ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಕೂಲಿ ಕ್ರೇಜ್ ಯಾವ ಮಟ್ಟದಲ್ಲಿದೆ ಅನ್ನೋದಕ್ಕೆ ಈ ಕಲೆಕ್ಷನ್ ಮೊತ್ತಕ್ಕಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಈ ಮೊತ್ತದಲ್ಲಿ ವಿದೇಶಗಳ ಪಾಲು ಐವತ್ತು ಕೋಟಿಗಳಷ್ಟಿದೆ ಅನ್ನೋದು ಮತ್ತೊಂದು ವಿಶೇಷ. ಹಾಗೆ ನೋಡಿದರೆ, ಕೂಲಿ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಆ ನಂತರವೂ ಸುಖಾಸುಮ್ಮನೆ ಹೈಪ್ ಕ್ರಿಯೇಟ್ ಮಾಡೋ ಗೋಜಿಗೆ ಚಿತ್ರತಂಡ ಹೋಗಿರಲಿಲ್ಲ. ಆದರೂ ಕೂಡಾ ಜೈಲರ್ ಗೆಲುವಿನ ಪ್ರಭೆಯಲ್ಲಿ ತಾನೇ ತಾನಾಗಿ ಕೂಲಿ ಲಕಲಕಿಸಿದೆ.

ಇದು ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ನಟನೊಬ್ಬನ ಛಾರ್ಮ್ ಅನ್ನು ಅಂದಾಜಿಸಿ, ಅದಕ್ಕನುಗುಣವಾಗಿ ದೃಶ್ಯ ಕಟ್ಟುವ ಛಾತಿ ಹೊಂದಿರುವ ಲೋಕೇಶ್ ಒಂದು ಗಟ್ಟಿ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿದಂತಿದೆ. ತಲೈವಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಒಂದಷ್ಟು ಗೆಟಪ್ಪುಗಳು ಮಾತ್ರವೇ ಇದೂವರೆಗೂ ಜಾಹೀರಾಗಿವೆ. ಆದರೆ, ಸಿನಿಮಾ ಮಂದಿರದೊಳಗೆ ತಲೈವಾಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ ಕಾದಿವೆ ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಕೂಲಿ ತೆರೆಗಾಣಲು ಇನ್ನು ಕೆಲವೇ ಕೆ ಗಂಟೆಗಳು ಮಾತ್ರವೇ ಬಾಕಿ ಉಳಿದುಕೊಂಡಿದೆ. ಒಟ್ಟಾರೆ ಸಿನಿಮಾದ ಅಸಲೀಯತ್ತು ಮುಂಜಾನೆ ಹೊತ್ತಿಗೆಲ್ಲ ಬಯಲಾಗಲಿದೆ!

The post Coolie movie craze: ಮತ್ತೆ ಮೈ ಕೊಡವಿದ ತಲೈವಾ! appeared first on Cini Shodha.

jailer movie: ರಜನೀಕಾಂತ್ ಯಶದ ಓಟ ನಿರ್ವಿಘ್ನ!
ಸೂಪರ್ ಸ್ಟಾರ್ ರಜನೀಕಾಂತ್ (rajanikanth) ದೊಡ್ಡ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅಷ್ಟಕ್ಕೂ ಅವರ ಪಾಲಿಗೆ ಗೆಲುವೆಂಬುದು ಹೊಸತೇನಲ್ಲ. ಸೋಲು, ಗೆಲುವೆರಡನ್ನೂ ಸಮವಾಗಿ ಸ್ವೀಕರಿಸುತ್ತಾ, ಸಾವರಿಸಿಕೊಂಡು ಮುನ್ನಡೆಯುವ ಪರಿಪಕ್ವ ಮನಃಸ್ಥಿತಿ ರಜನಿಗೆ (super star rajini) ಯಾವತ್ತೋ ಸಿದ್ಧಿಸಿದೆ. ಆದರೆ, ವೃತ್ತಿ ಬದುಕಿನ ಏರುಹಾದಿಯಲ್ಲೆದುರಾದ ಇತ್ತೀಚಿನ ವರ್ಷಗಳ ಸೋಲಿನಿಂದ ನಿಜಕ್ಕೂ ರಜಿನಿ ಕಂಗಾಲಾಗಿದ್ದರು. ಅದಕ್ಕೆ ಸರಿಯಾಗಿ ಮಗಳ ದಾಂಪತ್ಯ ಮುರಿದು ಬಿದ್ದು, ಮನಃಶಾಂತಿಯೂ ಹಾಳಾಗಿ ಹೋಗಿತ್ತು. ತಲೈವನ ಒಡಲೊಳಗೆ ಎಂಥಾ ಉರಿ ಇತ್ತೆಂದರೆ, ಅವರಿಷ್ಟದ ಹಿಮಾಲಯವೂ ಅದನ್ನು ತಂಪಾಗಿಸಲು ಸಾಧ್ಯವಾಗಿರಲಿಲ್ಲ. ಆದರೀಗ, ಜೈಲರ್ ಗೆ (jailer movie) ಸಿಕ್ಕ ದೊಡ್ಡ ಮಟ್ಟದ ಗೆಲುವು ರಜಿನಿಯನ್ನು ನಿರಾಳವಾಗಿಸಿದೆ!

ಇದೀಗ ವಿಶ್ವಾದ್ಯಂತ ರಜಿನಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಕಬಾಲಿಯಂಥಾ ಕಬಾಲಿಯೇ ಮಗುಚಿಕೊಂಡ ಹಿಂಚುಮುಂಚಲ್ಲಿ ರಜನಿಯ ನೆಮ್ಮದಿ ಕೆಡಿಸುವ ವಿದ್ಯಮಾನಗಳೇ ಸಾಲು ಸಾಲಾಗಿ ಸಂಭವಿಸಿದ್ದವು. ಅಭಿಮಾನಿಗಳ ವಾರ್ ಗಳ ನಡುವೆ ರಜನೀ ಸಿನಿಮಾಗಳ ಸೋಲಿನ ಬಗ್ಗೆ ಪ್ಸ್ತಾಪವಾಗುತ್ತಿತ್ತು. ಮೂದಲಿಕೆಗಳು ತೂರಿ ಬರುತ್ತಿದ್ದವು. ಅದೆಲ್ಲದಕ್ಕೂ ಪುಷ್ಕಳ ಗೆಲುವಿನ ಮೂಲಕ ಉತ್ತರ ಕೊಡಲು ಕಾದಿದ್ದ ಅಭಿಮಾನಿಗಳಿಗೆ ಜೈಲರ್ ಗೆಲುವು ವರವಾಗಿದೆ. ಲೇಟೆಸ್ಟ್ ವಿಚಾರವೆಂದರೆ, ಎಲ್ಲೆಡೆ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುನ್ನುಗ್ಗುತ್ತಿರುವ ಜೈಲರ್ ಶೀಘ್ರದಲ್ಲಿಯೇ ಓಟಿಟಿಗೆ ಎಂಟ್ರಿ ಕೊಡಲಿದೆ.

ಸೆಪ್ಟೆಂಬರ್ ಏಳನೇ ತಾರೀಕಿನಿಂದ ಜೈಲರ್ ನೆಟ್ ಪ್ಲಿಕ್ಸ್‍ನಲ್ಲಿ ರಾರಾಜಿಸಲಿದೆ. ಅಲ್ಲಿಯೂ ಕೂಡಾ ದೊಡ್ಡ ಪ್ರಮಾಣದಲ್ಲಿ ಜೈಲರ್ ಹಿಟ್ ಆಗೋ ಸಾಧ್ಯತೆಗಳೇ ಹೆಚ್ಚಾಗಿವೆ. ಜೈಲರ್ ಗೆ ಸಿಕ್ಕಿರೋದು ಮಹಾ ಗೆಲುವೆಂಬುದರಲ್ಲಿ ಎರಡು ಮಾತಿಲ್ಲ. ತಮಿಳು ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ದಾಖಲಾಗಿದ್ದ ಎಲ್ಲಾ ದಾಖಲೆಗಳನ್ನು ಜೈಲರ್ ಮುರಿದಿದೆ. ಅದರ ಕಲೆಕ್ಷನ್ನಿನ ಓಘ ಕಂಡು ವಿತರಕರು ಸೇರಿದಂತೆ ಎಲ್ಲರೂ ಖುಷಿಗೊಂಡಿದ್ದಾರೆ. ಒಟ್ಟಾರೆಯಾಗಿ ರಜನಿ ಅಭಿಮಾನಿಗಳಿಗೆಲ್ಲ ಜೈಲರ್ ನಿಂದಾಗಿ ಅಕ್ಷರಶಃ ಹಬ್ಬವಾಗಿದೆ. ಮುಂದಿನ ತಿಂಗಳಿಂದ ಆನ್ ಲೈನಿಗೂ ಹಬ್ಬದ ಸಡಗರ ದಾಟಿಕೊಳ್ಳಲಿದೆ!

The post jailer movie: ರಜನೀಕಾಂತ್ ಯಶದ ಓಟ ನಿರ್ವಿಘ್ನ! appeared first on Cini Shodha.

nandamuri balakrishna: ರಗಡ್ ಪೊಲೀಸ್ ಪಾತ್ರ ಕೈತಪ್ಪಿದ್ದೇಕೆ?
ರಜನೀಕಾಂತ್ (rajanikanth) ಅಭಿನಯದ ಜೈಲರ್ (jailer movie) ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಯಾವುದೇ ತರ್ಕದ ಗೋಜಿಗೆ ಹೋಗದೆ, ರಜನಿ ಅವತಾರಗಳನ್ನು ತನ್ಮಯರಾಗಿ ಕಣ್ತುಂಬಿಕೊಳ್ಳುವವರು, ವಿಮರ್ಶಕ ದೃಷ್ಟಿಕೋನದಿಂದಲೇ ದಿಟ್ಟಿಸುವವರನ್ನೆಲ್ಲ ಜೈಲರ್ (jailer) ಆವರಿಸಿಕೊಂಡಿದೆ. ಈ ಭರಾಟೆಯ ನಡುವೆ ಒಂದಷ್ಟು ಕೊರತೆಗಳು, ತಕರಾರುಗಳೂ ಕೂಡ ಥಂಡಾ ಹೊಡೆದಂತಿವೆ. ಸಾಮಾನ್ಯವಾಗಿ, ಇಂಥಾ ಯಶಸ್ವೀ ಸಿನಿಮಾಗಳ ಅಬ್ಬರ ಶುರುವಾದ ನಂತರ, ಅದಕ್ಕೆ ಸಂಬಂಧಿಸಿದ ಮತ್ತೊಂದಷ್ಟು ಕುತೂಹಲಕವಾದ ಅಂಶಗಳು ಜಾಹೀರಾಗುತ್ತವೆ. ಜೈಲರ್ ವಿಚಾರದಲ್ಲಿಯೂ ಅದು ನಿಜವಾಗಿದೆ!

ಈ ಸಿನಿಮಾ ತಂಡವೀಗ ಚಿತ್ರೀಕರಣದ ಹಿಂಚುಮುಂಚಿನ ಒಂದಷ್ಟು ಬೆರಗಿನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಲೆಯಾಳಂನ ಮೋಹನ್ ಲಾಲ್ ಮುಂತಾದವರು ನಟಸಿದ್ದಾರೆ. ಆ ಪಾತ್ರಗೆಲ್ಲವನು ಜನ ಇಷ್ಟಪಟ್ಟಿದ್ದಾರೆ. ಇವರೆಲ್ಲರೊಟ್ಟಿಗೆ ತೆಲುಗಿನ ನಂದಮೂರಿ ಬಾಲಕೃಷ್ಣ ಕೂಡಾ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಆದರೆ, ಕೆಲ ಕಾರಣಗಳಿಂದಾಗಿ ನಿರ್ದೇಶಕರ ಗಮನ ಬೇರೆಡೆರಗೆ ವಾಲಿದ್ದರಿಂದಾಗಿ ಬಾಲಯ್ಯ ಜೈಲರ್ ಗೆ ಜೊತೆಯಾಗೋ ಅವಕಾಶ ವಲ್ಪದರಲ್ಲಿಯೇ ತಪ್ಪಿ ಹೋದಂತಾಗಿದೆ. ಈ ವಿಚಾರವನ್ನು ಖುದ್ದು ನಿರ್ದೇಶಕ ನೆಲ್ಸನ್ ಒಪ್ಪಿಕೊಂಡಿದ್ದಾರೆ.

ಜೈಲರ್ ಪ್ಯಾನಿಂಡಿಯಾ ಮಟ್ಟದ ಚಿತ್ರ. ರಜನೀ ಚಿತ್ರಗಳೆಂದ ಮೇಲೆ ದೇಶವ್ಯಾಪಿ ಬಿಡುಗಡೆಯಾಗೋದು ಮಾಮೂಲು. ಮಾರ್ಕೆಟಿಂಗ್ ದೃಷ್ಟಿಯಿಂದ ನಿರ್ದೇಶಕರು ಒಂದಷ್ಟು ರಾಜ್ಯಗಳಲ್ಲಿ ಭರ್ಜರಿ ಓಪನಿಂಗ್ ಸಿಗುವ ದೃಷ್ಟಿಯಿಂದ ಅಲ್ಲಿನ ನಟರನ್ನು ಒಳಗೊಂಡಂತೆ ಒಂದಷ್ಟು ಪಾತ್ರಗಳನ್ನು ಸೃಷ್ಟಿಸಿದ್ದರು. ಬಾಲಯ್ಯನಿಗಾಗಿ ನೆಗೆಟಿವ್ ಶೇಡ್ ಹೊಂದರುವ ರಗಡ್ ಪೊಲೀಸ್ ಪಾತ್ರವೊಂದನ್ನು ಸೃಷ್ಟಿಸಿದ್ದರಂತೆ. ಆದರೆ, ಆ ಪಾತ್ರವೇಕೋ ಅರ್ಧದಲ್ಲಿಯೇ ನಿಲ್ಲುವಂತಾಗಿತ್ತು. ಈ ಕಾರಣದಿಂಲೇ ಬಾಲಯ್ಯ ಜಲರ್ ಭಾಗವಾಗೋದು ತಪ್ಪಿತ್ತು. ಬಾಲಯ್ಯನ ಸಿನಿಮಾಗಳು, ಅದರ ದೃಷ್ಯಗಳು ಕಾಮಿಡಿ ಅನ್ನಿಸುತ್ತವೆಯಾದರೂ, ಆತನಿಗೆ ತೆಲುಗಿನಲ್ಲಿ ಭಾರೀ ಅಭಿಮಾನಿ ಬಳಗವಿದೆ. ಅವರದ್ದಿದ್ದರೆ, ಜೈಲರ್‍ಗೆ ತೆಲುಗಿನಲ್ಲಿ ಮತ್ತಷ್ಟು ಖದರ್ ನ ಗೆಲುವು ದಕ್ಕುತ್ತಿತ್ತೇನೋ…

The post nandamuri balakrishna: ರಗಡ್ ಪೊಲೀಸ್ ಪಾತ್ರ ಕೈತಪ್ಪಿದ್ದೇಕೆ? appeared first on Cini Shodha.

shivaraj kumar: ಕನ್ನಡ ಸಿನಿಮಾ ಮಂದಿಗೇಕೆ ಇಂಥಾ ಸೆನ್ಸ್ ಇಲ್ಲ?
ರಜನೀಕಾಂತ್ (rajanikant) ಅಭಿನಯದ ಜೈಲರ್ (jailer) ದೇಶಾದ್ಯಂತ ಧೂಳೆಬ್ಬಿಸುತ್ತಿದೆ. ಒಂದಷ್ಟು ಮಿತಿಗಳಾಚೆಗೂ ರಜನಿಯ ಈ ಚಿತ್ರ ಯಥಾ ಪ್ರಕಾರ ಹಬ್ಬದಂತೆ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ. ತಮಿಳು ಚಿತ್ರರಂಗದ ಯುವ ನಿರ್ದೇಶಕ (director nelson) ನೆಲ್ಸನ್ ತಮ್ಮಿಷ್ಟದ ನಟನನ್ನು ಮಿಂಚಿಸಿರೋ ರೀತಿ ಕಂಡು ಅಭಿಮಾನಿಗಳೆಲ್ಲ ಫಿದಾ ಆಗಿ ಬಿಟ್ಟಿದ್ದಾರೆ. ಹಾಗೆ ನೋಡಿದರೆ, ಕಲೆಕ್ಷನ್ನು, ಕ್ರೇಜು ಸೇರಿದಂತೆ ಪ್ರತಿಯೊಂದರಲ್ಲಿಯೂ ಮುಂಚೂಣಿಯಲ್ಲಿರುವ (jailer movie) ಜೈಲರ್ ಸಾಕಷ್ಟು ಆಕರ್ಷಣೆಗಳನ್ನು ಒಡಲಲ್ಲಿಟ್ಟುಕೊಂಡಿದೆ. ಕನ್ನಡವೂ ಸೇರಿದಂತೆ ಬಹುತೇಕ ಭಾಷೆಗಳ ಪ್ರೇಕ್ಷಕರು ಜೈಲರ್ ಖದರ್ ಕಂಡು ಅಕ್ಷರಶಃ ಥ್ರಿಲ್ ಆಗಿದ್ದಾರೆ. ವಿಶೇಷೆಂದರೆ, ಈ ಚಿತ್ರದಲ್ಲಿ ಒಂದಷ್ಟು ನಿಮಿಷಗಳ ಕಾಲ ಕಾಣಿಸಿಕೊಂಡಿರೋ ಹ್ಯಾಟ್ರಿಕ್ ಹೀರೋ (shivarajkumar) ಶಿವರಾಜ್ ಕುಮಾರ್ ಮಾತ್ರ ನೋಡುಗರ ಮನಸಿಗಿಳಿದು, ಅಚ್ಚರಿದಾಯಕ ಕ್ರೇಜ್ ಒಂದನ್ನು ಹುಟ್ಟುಹಾಕಿದ್ದಾರೆ.

ಹಾಗೆ ನೋಡಿದರೆ, ಜೈಲರ್‍ನಲ್ಲಿ ಶಿವಣ್ಣ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆಂಬ ಸುದ್ದಿಯಾಗಿತ್ತಾದರೂ, ಅದರ ಸುತ್ತಾ ಹೇಳಿಕೊಳ್ಳುವಂಥಾ ಹೈಪುಗಳು ಸೃಷ್ಟಿಯಾಗಿರಲಿಲ್ಲ. ಶಿವರಾಜ್ ಕುಮಾರ್ ಕೂಡಾ ಜೈಲರ್ ನಲ್ಲಿನ ತಮ್ಮ ಪಾತ್ರದ ಬಗ್ಗೆ ವಿಶೇಷ ಒತ್ತು ಕೊಟ್ಟು ಎಲ್ಲಿಯೂ ಮಾತಾಡಿದ್ದೂ ಇಲ್ಲ. ಒಂದಷ್ಟು ಪೋಸ್ಟರುಗಳಲ್ಲಿ ಶಿವಣ್ಣ ಪಾತ್ರದ ಝಲಕ್ಕುಗಳು ಕಾಣಿಸಿಕೊಂಡಿದ್ದವಷ್ಟೇ. ಶಿವರಾಜ್ ಕುಮಾರ್ ಕಟ್ಟಾ ಅಭಿಮಾಮಾನಿಗಳನ್ನು ಹೊರತುಪಡಿಸಿ, ಮಿಕ್ಕುಳಿದ ಪ್ರೇಕ್ಷಕ ವರ್ಗದಲ್ಲಿ ಹೇಳಿಕೊಳ್ಳುವಂಥಾ ನಿರೀಕ್ಷೆ ಇರಲಿಲ್ಲ. ಆದರೆ, ಜೈಲರ್ ಚಿತ್ರದಲ್ಲಿನ ಶಿವಣ್ಣನ ನಟನೆಯ ಖದರ್ ಕಂಡು ಎಲ್ರೂ ಬೆಕ್ಕಸ ಬೆರಗಾಗಿದ್ದಾರೆ.

ಕೇವಲ ಕನ್ನಡದ ಪ್ರೇಕ್ಷಕರು ಮಾತ್ರವಲ್ಲ; ಇದುವರೆಗೆ ಶಿವರಾಜ್ ಕುಮಾರ್ ಅವರ ಒಂದೇ ಒಂದು ಸಿನಿಮಾ ನೋಡದವರೂ ಕೂಡಾ ನರಸಿಂಹಾವತಾರಿ ಶಿವಣ್ಣನ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಪರಭಾಷಾ ಪ್ರೇಕ್ಷಕರನೇಕರು ಶಿವರಾಜ್ ಕುಮಾರ್ ಅವರ ನಟನೆಯನ್ನು ವಿಶೇಷವಾಗಿ ಉಲ್ಲೇಖಿಸುತ್ತಾ ಹಾಡಿ ಹೊಗಳುತ್ತಿದ್ದಾರೆ. ಕೆಲವೇ ಕೆಲ ನಿಮಿಷಗಳಲ್ಲಿ ಮಂಡ್ಯ ಸೀಮೆಯ ರೌಡಿ ನರಸಿಂಹನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡ ಬಗೆ ಇದೆಯಲ್ಲಾ? ಅದು ಯಾರನ್ನಾದರೂ ಅಚ್ಚರಿಗೀಡು ಮಾಡುವಂತಿದೆ. ಸಿಕ್ಕ ಸೀಮಿತಾವಧಿಯಲಿಯೇ, ಎಲ್ಲ ಮಿತಿಗಳನ್ನು ಮೀರಿಕೊಂಡು ತನ್ನ ಚಾತುರ್ಯವನ್ನು ಸಾಬೀತುಗೊಳಿಸೋದು, ನಟನೊಬ್ಬನ ಪಾಲಿಗೆ ಅಸಲೀ ಚಾಲೆಂಜ್. ಅದನ್ನು ತಣ್ಣಗಿನ ಅಬ್ಬರದ ಮೂಲಕ ಶಿವಣ್ಣ ಸಾಧಿಸಿಬಿಟ್ಟಿದ್ದಾರೆ.

ಯಾವಾಗ ಶಿವಣ್ಣನ ಪಾತ್ರದ ಬಗ್ಗೆ ಪರಿ ಪರಿಯಾಗಿ ಸದ್ದು ಮಾಡಲಾಂಭಿತೋ, ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ದಿಕ್ಕಿನ ಚರ್ಚೆಯೂ ಶುರುವಾಗಿದೆ. ಶಿವಣ್ಣನನ್ನು ಇಂಥಾ ಸ್ವರೂಪದಲ್ಲಿಯೂ ಕಾಣಿಸಬಹುದೆಂಬ ಮನಸ್ಥಿತಿ, ಕ್ರಿಯಾಶೀಲತೆ ಕನ್ನಡ ಚಿತ್ರರಂಗದ ಮಂದಿಗೇಕಿಲ್ಲ ಎಂಬರ್ಥದಲ್ಲಿ ಜನ ಸಂವಾದ ಉರುವಿಟ್ಟುಕೊಂಡಿದ್ದಾರೆ. ಅದರಲ್ಲಿ ಸತ್ಯವೂ ಇದೆ. ಇಂದ್ರ ಬಾಬು ಥರದ ಒಂದಷ್ಟು ಶಿವಣ್ಣನನ್ನು ಭಿನ್ನವಾಗಿ ಪ್ರೇಕ್ಷಕರೆದುರು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಜೋಗಿ, ಟಗರು, ಮಫ್ತಿ ಮುಂತಾದ ಸಿನಿಮಾದ ಮೂಲಕವೂ ಆ ಥರದ ವಿದ್ಯಮಾನಗಳು ಘಟಿಸಿವೆ. ಆದರೆ, ಮಿಕ್ಕ ಸಿನಿಮಾ ಮಂದಿ ಅದೇ ಮಚ್ಚು ಲಾಂಗುಗಳಿಗೆ ಶಿವಣ್ಣನನ್ನು ಸೀಮಿತಗೊಳಿಸಿದ್ದಾರೆ. ಹಾಗಂತ ಇದರಲ್ಲಿ ಬರೀ ಸಿನಿಮಾ ಮಾಡೋ ಮಂದಿಯದ್ದೇ ತಪ್ಪಿದೆ ಅಂದುಕೊಳ್ಳುವಂತಿಲ್ಲ. ಶಿವರಾಜ್ ಕಮಾರ್ ಆಯ್ಕೆಯ ವಿಚಾರದಲ್ಲಿ ಅಡಿಗಡಿಗೆ ಎಡವುತ್ತಾ ಬಂದಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಭಿಮಾನಿಗಳೇ ಕೊಸರಿಕೊಳ್ಳುವಂಥಾ ಕಸಗಳನ್ನೂ ಕಣ್ಣಿಗೊತ್ತಿಕೊಂಡಂತೆ ಒಪ್ಪಿಕೊಂಡಿದ್ದಾರೆ.

ಒಂದು ಬಗೆಯ ಸಿನಿಮಾಗಳು ಗೆದ್ದರೆ, ಒಂದು ಶೇಡಿನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾದರೆ, ಅಂಥಾದ್ದರ ಬಾಲ ಹಿಡಿದು ಹೊರಡೋದು ಮಾತ್ರವಲ್ಲ; ಅದಕ್ಕೇ ನೇಣು ಹಾಕಿಕೊಂಡು ಬಿಡುವ ಮಹಾನ್ ಪ್ರತಿಭೆಗಳೂ ನಮ್ಮಲ್ಲಿವೆ. ಅಂಥಾ ಪ್ರಬೃತ್ತಿಗಳೆಲ್ಲ ಈಗಾಗಲೇ ಜೈಲರ್ ಚಿತ್ರದ ನರಸಿಂಹನ ಅವತಾರವನ್ನು ಬಗೆ ಬಗೆಯಲ್ಲಿ ಹಿಂಡಲು ತಯಾರಿ ಮಾಡಿಕೊಂಡಿರಲೂ ಬಹುದು. ನರಸಿಂಹನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆಯಲ್ಲಾ? ಶಿವಣ್ಣನನ್ನು ಅದಕ್ಕಿಂತಲೂ ಎಫೆಕ್ಟಿವ್ ಅನ್ನಿಸುವಂಥಾ ಪಾತ್ರದಲ್ಲಿ ಕಾಣಿಸಬೇಕು, ಪ್ರೇಕ್ಷಕರಿಗೆ ಸರ್‍ಪ್ರೈಸ್ ಕೊಡಬೇಕೆಂದು ಹೊರಡೋ ಕ್ರಿಯಶೀಲ ಮನಸುಗಳಿಗಿಲ್ಲಿ ಬರವಿದೆ. ಇದೆಲ್ಲ ಏನೇ ಇದ್ದರೂ ಪ್ಯಾನಿಂಡಿಯಾ ಮಟ್ಟದಲ್ಲಿ ಶಿವಣ್ಣನ ಖದರ್ ಹಬ್ಬಿಕೊಂಡಿದೆ. ಪರಭಾಷಾ ಮಂದಿ ಕೂಡಾ ಆ ಪಾತ್ರ ಇನ್ನಷ್ಟು ಕಾಣಿಸಿಕೊಳ್ಳಬೇಕಿತ್ತೆಂಬ ಬಯಕೆಯಿಟ್ಟುಕೊಂಡೇ ಚಿತ್ರಮಂದಿರಗಳಿಂದ ತೆರಳುತ್ತಿದ್ದಾರೆ. ಅಷ್ಟರಮಟ್ಟಿಗೆ ನಮ್ಮ ಶಿವಣ್ಣನ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿರೋದು ಎಲರೂ ಹೆಮ್ಮೆ ಪಡುವ ಸಂಗತಿ!

The post shivaraj kumar: ಕನ್ನಡ ಸಿನಿಮಾ ಮಂದಿಗೇಕೆ ಇಂಥಾ ಸೆನ್ಸ್ ಇಲ್ಲ? appeared first on Cini Shodha.