jananayaganmovie – Cini Shodha

Jana Nayagan Movie: ಸಂಭಾವನೆ ವಾಪಾಸು ಕೊಡ್ತಾನಾ ಧಳಪತಿ?
ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ ವಿಜಯ್ ಅಭಿಮಾನಿಗಳು ಈ ಕ್ಷಣಕ್ಕೂ ಶುಭ ಸುದ್ದಿಯೇನಾದರೂ ಸಿಕ್ಕೀತಾ ಎಂಬಂತೆ ಗೋಣು ಚಾಚಿ ಕಾಯುತ್ತಿದ್ದಾರೆ. ಆದರೆ ಚಾಚಿದ ಗೋಣಿಗೆ ರಾಚುತ್ತಿರೋದು ಮಾತ್ರ ದುರಂತದಂಥಾ ಸುದ್ದಿಗಳೇ. ಈಗ ಹೊರ ಬಂದಿರೋದೂ ಕೂಡಾ ಅಂಥಾದ್ದೇ ಒಂದು ಸುದ್ದಿ!

ದಳಪತಿ ವಿಜಯ್ ವೃತ್ತಿ ಬದುಕಿನ ಕಟ್ಟ ಕಡೆಯ ಚಿತ್ರವೆಂಬ ಕಾರಣದಿಂದಲೇ ಜನನಾಯಗನ್ ಒಂದಷ್ಟು ಗಮನ ಸೆಳೆದಿತ್ತು. ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿರೋ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ಅತ್ಯಂತ ಉತ್ಸಾಹದಿಂದಲೇ ನಿರ್ಮಾಣ ಮಾಡಿತ್ತು. ಆದರೀಗ ವಿಜಯ್‌ನನ್ನು ನಂಬಿ ಬಹುಕೋಟಿ ಹೂಡಿದ್ದ ಕೆವಿಎನ್ ಸಂಸ್ಥೆಯೇ ಕಂಗಾಲಾಗುವಂತಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದ್ದೂ ಸೇರಿದಂತೆ ಲುಕ್ಸಾನಿನ ಪರ್ವವೊಂದಕ್ಕೆ ಈ ನಿರ್ಮಾಣ ಸಂಸ್ಥೆ ಎದೆಯೊಡ್ಡುವಂತಾಗಿದೆ. ಇದೆಲ್ಲವನ್ನೂ ಕಂಡು ಬೇಸತ್ತಿರೋ ವಿಜಯ್ ತಾನು ಪಡೆದಿದ್ದ ಸಂಭಾವನೆಯಲ್ಲಿಯೇ ಒಂದಷ್ಟು ಮೊತ್ತವನ್ನು ಹಿಂತಿರುಗಿಸುವ ಮೂಲಕ ನಿರ್ಮಾಪಕರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾನಂತೆ!

Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!

ಹಾಗೆ ನೋಡಿದರೆ, ವಿಜಯ್ ಈ ಸಿನಿಮಾದ ಒಟ್ಟಾರೆ ಬಜೆಟ್ಟಿನ ಅರ್ಧದಷ್ಟು ಮೊತ್ತವನ್ನು ಸಂಭಾವನೆಯಾಗಿ ಪಡೆದಿದ್ದರು. ಈ ಕಾರಣದಿಂದಲೇ ದೇಶಾದ್ಯಂತ ಈ ಸಂಭಾವನೆಯ ಮೊತ್ತದ ಬಗ್ಗೆ ಚರ್ಚೆಯಾಗಿತ್ತು. ಅಂದಹಾಗೆ, ಜನನಾಯಗನ್ ಚಿತ್ರಕ್ಕಾಗಿ ವಿಜಯ್ ಪಡೆದಿದ್ದದ್ದು ಭರ್ತಿ ಇನ್ನೂರು ಕೋಟಿ. ಒಂದು ರೀಮೇಕ್ ಸರಕಿಗೆ ಈ ಸಂಸ್ಥೆ ಅದ್ಯಾಕೆ ಈ ಪಾಟಿ ಹೂಡಿಕೆ ಮಾಡಿತೋ ಗೊತ್ತಿಲ್ಲ. ಅಂತೂ ದಳಪತಿ ಚುನಾವಣಾ ಪೂರ್ವ ರ್‍ಯಾಲಿಗಳನ್ನು ಜನನಾಯಗಳ ಸಂಭಾವನೆ ಕಾಸಲ್ಲಿಯೇ ಸಂಭಾಳಿಸುವ ಯೋಜನೆ ಹಾಕಿಕೊಂಡಿರಲೂ ಬಹುದು. ಆದರೀಗ ಎಲ್ಲವೂ ಅದಲು ಬದಲಾಗಿದೆ. ಬಿಡುಗಡೆ ದಿನಾಂಕವೇ ನಿಗಧಿಯಾಗದಿರೋದರಿಂದಾಗಿ ವ್ಯವಹಾರಕ್ಕೆ ಭಾರೀ ಹಿನ್ನಡೆಯಾಗಿದೆ. ಒಂದು ವೇಳೆ ಎಲ್ಲ ಮುಗಿದು ಬಿಡುಗಡೆ ದಿನಾಂಕ ಘೋಶಣೆಯಾದರೂ ಕೂಡಾ ವ್ಯವಹಾರ ನಡೆಸೋ ಧೈರ್ಯ ಅನೇಕರಿಗಿಲ್ಲ. ಯಾಕೆಂದರೆ, ಜನನಾಯಕನಿಗೆ ಯಾವ ಕ್ಷಣದಲ್ಲಿ, ಯಾವ ಸ್ವರೂಪದ ಗುನ್ನಾ ಬೀಳುತ್ತದೆಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ!

keyword: jana nayagan, thalapathy vijay, kollywood, kvn productions

The post Jana Nayagan Movie: ಸಂಭಾವನೆ ವಾಪಾಸು ಕೊಡ್ತಾನಾ ಧಳಪತಿ? appeared first on Cini Shodha.

Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!
ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ ಮೂಲಕ ತಾನೂ ಕೂಡಾ ದೇಶವನ್ನು ಕಿತ್ತು ತಿನ್ನುತ್ತಿರುವ ಖೂಳ ರಾಜಕಾರಣಿಗಳ ಸಾಲಿಗೆ ಸೇರಿದವನೆಂಬ ಸ್ಪಷ್ಟ ಸಂದೇಶವೊಂದನ್ನು ದಳಪತಿ ರವಾನಿಸಿದ್ದಾನೆ. ಈ ಮೂಲಕ ತೀವ್ರತರನಾದ ನಿರಾಸೆಯನ್ನೂ ಮೂಡಿಸಿದ್ದಾನೆದ. ಇದೇ ಹೊತ್ತಿನಲ್ಲಿ ಜನನಾಯಗನ್ ಚಿತ್ರದ ವಿಚಾರದಲ್ಲಿ ಮತ್ತೊಂದು ಮರ್ಮಾಘಾತ ಎದುರಾಗಿ ಬಿಟ್ಟಿದೆ!

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜನನಾಯಗನ್ ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆಯುತ್ತಿತ್ತು. ಇನ್ನೇನು ಬಿಡುಗಡೆಗೆ ಎರಡು ದಿನ ಇರುವಾಗಲೇ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಅಲ್ಲಿಂದ ಶುರುವಾದ ಆಘಾತಗಳ ಸರಣಿ ಅನೂಚಾನವಾಗಿ ಮುಂದುವರೆದಿದೆ. ಇದೀಗ ಅಮೇಜಾನ್ ಪ್ರೈಮ್ ಕೂಡಾ ಈ ಸಿನಿಮಾದ ಓಟಿಟಿ ಹಕ್ಕುಗಳಿಂದ ಹಿಂದೆ ಸರಿದಿದೆ. ಅದೇನು ಸಣ್ಣ ಮಟ್ಟದ ವ್ಯವಹಾರವಾಗಿರಲಿಲ್ಲ. ಭರ್ತಿ ನೂರಾ ಇಪ್ಪತ್ತು ಕೋಟಿಗಳಿಗೆ ಮಾತುಕತೆ ನಡೆದಿತ್ತು. ಜನನಾಯಗನ್ ಓಟಿಟಿ ಎಂಟ್ರಿಗೆ ಮುಹೂರ್ತವೂ ನಿಗಧಿಯಾಗಿತ್ತು. ಆದರೀಗ ಬಿಡುಗಡೆಯೇ ಪದೇ ಪದೆ ಮುಂದಕ್ಕೆ ಹೋಗುತ್ತಿರೋದರಿಂದ, ಹಳೇ ಮಾತುಕತೆಯಷ್ಟು ಮೊತ್ತ ಕೊಡಲಾಗುವುದಿಲ್ಲ ಅಂತ ಪ್ರೈಮ್ ಮಂದಿ ತಗಾದೆ ಶುರುವಿಟ್ಟಿದ್ದಾರೆ.

ಈ ಬಗ್ಗೆ ನಿರ್ಮಾಪಕರೊಂದಿಗೆ ಸುದೀರ್ಘವಾದ ಮಾತುಕತೆ, ಚೌಕಾಶಿ ವ್ಯವಹಾರ ನಡೆದು ಕಡೆಗೂ ಅಮೇಜಾನ್ ಪ್ರೈಂ ಈ ವ್ಯವಹಾರದಿಂದಲೇ ಹಿಂದೆ ಸರಿದಿದೆ ಎಂಬಂಥಾ ಸುದ್ದಿಗಳು ಹಬ್ಬಿಕೊಂಡಿವೆ. ಇದು ನಿಜಕ್ಕೂ ಧಳಪತಿಗೆ ಬಹುದೊಡ್ಡ ಆಘಾತ. ಹಾಗಂತ ಮದ್ಯ ಪ್ರವೇಶ ಮಾಡಿ ಯಾವ ಭರವಸೆ ಕೊಡಲೂ ಸಾಧ್ಯವಾಗದ ಸ್ಥಿತಿ ದಳಪತಿಯದ್ದು. ಯಾಕೆಂದರೆ, ಈಗಿರುವ ವಾತಾವರಣ ನೋಡಿದರೆ, ಮಳೆಗಾಲ ಬಂದರೂ ಈ ಚಿತ್ರ ಬಿಡುಗಡೆಯಾಗೋದು ಕಷ್ಟವಿದೆ. ಯಾಕೆಂದರೆ, ವಿಜಯ್ ವಿರೋಧಿ ಪಾಳೆಯ ಹಾಗೊಂದು ಅಡ್ಡಗಾಲು ಹಾಕಲು ಏನೇನು ಬೇಕೋ ಅದೆಲ್ಲ ತಯಾರಿಯನ್ನೂ ಮಾಡಿಕೊಂಡಿದೆ. ಅಂತೂ ಅಮೇಜಾನ್ ಪ್ರೈಂ ಡೀಲ್ ಕ್ಯಾನ್ಸಲ್ ಆಗಿರೋದರಿಂದ ಜನನಾಯಗನ್‌ಗೆ ಬಹುದೊಡ್ಡ ಹಿನ್ನಡೆ, ಅವಮಾನವಾಗಿರೋದಂತೂ ಸತ್ಯ!

keywords: jana nayagan movie, thalapathy vijay, amazon prime, kollywood

The post Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್! appeared first on Cini Shodha.

Jananayagan Movie: ದಳಪತಿಯ ತಳದಲ್ಲಿ ಹೇಳಲಾರದ ತಳಮಳ!
ಏಕಾಏಕಿ ರಾಜಕಾರಣಿಯಾಗಿ ಗೆಟಪ್ಪು ಬದಲಿಸಿರುವ ದಳಪತಿ ವಿಜಯ್ ನಸೀಬು ಅದ್ಯಾಕೋ ಖರಾಬಾದಂತಿದೆ. ರಾಜಕೀಯ ರ್‍ಯಾಲಿಗಳ ಮೂಲಕ ಶಕ್ತಿಪ್ರದರ್ಶನಕ್ಕಿಳಿದಿದ್ದ ವಿಜಯ್‌ಗೆ ಅಭಿಮಾನಿಗಳ ಸಾವಿನ ಸೂತಕ ಸುತ್ತಿಕೊಂಡಿತ್ತು. ಇದೆಲ್ಲದರಿಂದ ಬಚಾವಾಗಿ ಜನನನಾಯಗನ್ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ವಿಜಯ್‌ಗೆ ಹೆಜ್ಜೆ ಹೆಜ್ಜೆಗೂ ಆಘಾತಗಳೇ ಎದುರಾಗಲಾರಂಭಿಸಿವೆ. ಅತ್ತ ಸಿಬಿಐ ಪ್ರಹಾರ, ಇತ್ತ ಜನನಾಯಗನ್ ಬಿಡುಗಡೆಗೆ ಎದುರಾಗಿರುವ ಸೆನ್ಸಾರ್ ಕಂಟಕ… ಇದೆಲ್ಲದರಿಂದ ದಳಪತಿಯ ತಳದಲ್ಲಿ ಹೇಳಲಾರದ ತಳಮಳ ಶುರುವಾಗಿದೆ. ಇದೇ ಹೊತ್ತಿನಲ್ಲಿ ಸಾಗರದಾಚೆಯೂ ಸದರಿ ಚಿತ್ರಕ್ಕೆ ಒಂದರ ಹಿಂದೊಂದರಂತೆ ಅಡೆತಡೆಗಳು ಎದುರಾಗುತ್ತಿವೆ.

ವಿಜಯ್‌ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಭಾಷೆಯ ಹಂಗಿಲ್ಲದೆ ವಿಜಯ್ ನಟನೆಯನ್ನು ಆಸ್ವಾದಿಸುವ ವಿದೇಸಿಗರ ಸಂಖ್ಯೆ ದೊಡ್ಡದಿದೆ. ಹಾಗೆ ಅಭಿಮಾನಿ ಬಳಗ ಹೆಚ್ಚಿರುವ, ಒಂದಷ್ಟು ಕಲೆಕ್ಷನ್ ಆಗುವ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡಾ ಮುಂಚೂಣಿಯಲ್ಲಿದೆ. ಸೌದಿಯಲ್ಲಿ ತಮಿಳು ನಾಡು ಸೇರಿದಂತೆ ಭಾರತದ ಬಹುತೇಕ ರಾಜ್ಯ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರಣದಿಂದಲೇ ಭಾರತೀಯ ಸಿನಿಮಾಗಳಿಗೆ ಅಲ್ಲಿ ಬಹುದೊಡ್ಡ ಮಾರುಕಟ್ಟೆ ಇದೆ. ಆದರೀಗ ಜನನಾಯಗನ್ ಚಿತ್ರವನ್ನು ಸೌದಿ ಅರೇಬಿಯಾದಲ್ಲಿ ಬ್ಯಾನ್ ಮಾಡಲಾಗಿದೆ.

Jana Nayagan Release Date Postponed: ಜನನಾಯಗನ್ ಬಿಡುಗಡೆಯಾಗೋದು ಡೌಟು!

ಜನನಾಯಗನ್ ವಿರುದ್ಧ ಸೌದಿಯಲ್ಲಿ ಉರಿ ಕಿತ್ತುಕೊಂಡಿರೋದರ ಹಿಂದೆ ಪಾಕ್ ಪ್ರೇಮವಿದೆ. ಈ ಸಿನಿಮಾದಲ್ಲಿ ವಿಲನ್ ಪಾಕಿಸ್ತಾನದಾತ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಲ್ಲಿನ ಸೇನೆಯನ್ನು ಲೇವಡಿ ಮಾಡುವ ಅನೇಕ ಸಂಭಾಷಣೆಗಳಿದ್ದಾವೆ. ಇದು ಟ್ರೈಲರಿನಲ್ಲಿಯೂ ಕಾಣಿಸಿಕೊಂಡಿದ್ದರಿಂದಾಗಿ ಸೌದಿಯಲ್ಲಿ ನಿಷೇಧ ಹೇರಲಾಗಿದೆ. ಇದು ಈ ಕ್ಷಣದ ಹಿನ್ನಡೆಯಾದರೆ, ಖುದ್ದು ವಿಜಯ್‌ಗೆ ಒಟ್ಟಾರೆ ಸಿನಿಮಾ ಬಗ್ಗೆ ಭರವಸೆ ಇದ್ದಂತಿಲ್ಲ. ಇದು ಭಗವಂತ ಕೇಸರಿಯ ರೀಮೇಕ್ ಎಂಬ ವಿಚಾರವೇ ಎಲ್ಲ ಕುತೂಹಲವನ್ನು ಮಣ್ಣುಪಾಲಾಗಿಸಿದೆ. ಸದ್ಯದ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಟಿಕೇಟ್ ದರದ ಮೂಲಕ ಲೂಟಿ ಮಾಡಲಾಗುತ್ತಿದೆ. ಈ ಮೂಲಕ ಬಿಡುಗಡೆ ಪೂರ್ವ ಕಲೆಕ್ಷನ್ನು ಜೋರಾಗಿದ್ದರೂ, ಬಿಡುಗಡೆಯಾದ ಬಳಿಕ ಅದು ಇಳಿಮುಖವಾದೀತೆಂಬ ಆತಂಕ ಚಿತ್ರತಂಡವನ್ನು ಬಾಧಿಸುತ್ತಿರುವಂತಿದೆ!

keywords: jananayagan, vijay, thalapathy

The post Jananayagan Movie: ದಳಪತಿಯ ತಳದಲ್ಲಿ ಹೇಳಲಾರದ ತಳಮಳ! appeared first on Cini Shodha.