geetumohandas – Cini Shodha

Toxic Teaser: ಬಾಲಿವುಡ್ ಮಂದಿಗೆ ಶುರುವಾಯ್ತು ಢವಢವ!
ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಪಾತ್ರ ಪರಿಚಯದ್ದೊಂದು ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ರಾಕಿಭಾಯ್ ಕಾಣಿಸಿಕೊಂಡಿದ್ದ ಪರಮ ಪೋಲಿ ಅವತಾರ ಕಂಡು ಖುದ್ದು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದರು. ಒಂದಷ್ಟು ಉರಗಗಳು ಮಡಿವಂತಿಕೆಯ ಪೊರೆಯೊಳಗೆ ಮಿಸುಕಾಡುತ್ತಾ ಸಂಭ್ರಮಿಸುತ್ತಲೇ, ಸೋಶಿಯಲ್ ಮೀಡಿಯಾದಲ್ಲಿ ಸುಭಗರೆಂಬಂತೆ ಪೋಸು ಕೊಟ್ಟಿದ್ದವು. ಇದರಾಚೆಗೆ ಕನ್ನಡದ ನೈಜ ಸಿನಿಮಾ ಪ್ರೇಮಿಗಳೂ ಕೂಡಾ ಹಾಲಿವುಡ್ ಫಾರ್ಮುಲಾವನ್ನು ಎರಕಹೊಯ್ದಂತಿದ್ದ ಆ ಪೋಲಿ ಸೀನುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ, ತಮ್ಮ ಅಸ್ತ್ರ ಸರಿಯಾದ ಸ್ಥಳಗಳಿಗೆ ಹೆಟ್ಟಿಕೊಂಡು, ಭರ್ಜರಿ ಮೈಲೇಜು ಸಿಕ್ಕ ಖುಷಿಯೊಂದು ಟಾಕ್ಸಿಕ್ ತಂಡವನ್ನು ಆವರಿಸಿಕೊಂಡಿತ್ತು. ಇಂಥಾ ಚರ್ಚೆಗಳ ಹಬೆ ಆರೋ ಮುನ್ನವೇ ಟಾಕ್ಸಿಕ್ ಟೀಸರ್ ಲಾಂಚ್ ಆಗಿದೆ!

ರಾಯನ ಲುಕ್ ರಿವೀಲ್ ಮಾಡಿದ್ದ ಟೀಸರ್ ಬಗ್ಗೆ ಒಂದಷ್ಟು ನಕಾರಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದವಲ್ಲಾ? ಅದನ್ನೇ ಅಪಪ್ರಚಾರಕ್ಕೆ ಬಳಸಿಕೊಂಡಿದ್ದ ಬಾಲಿವುಡ್ ಮಂದಿ ಧುರಂಧರ್೨ ಚಿತ್ರವನ್ನು ಮುಂದಿಟ್ಟುಕೊಂಡು ಮೆರೆಯಲು ಹವಣಿಸಿದ್ದರು. ಬೇರೆ ಭಾಷೆಗಳ ಸಿನಿಮಾಗಳ ಗೆಲುವು ಕಂಡು ಬ್ಯಾಕು ಸುಟ್ಟುಕೊಂಡಿದ್ದ ಕೆಲ ಹಿಂದಿವಾಲಾಗಳಂತೂ ಧುರಂಧರ್ ಮುಂದೆ ಟಾಕ್ಸಿಕ್ ಮಣ್ಣುಮಕ್ಕುತ್ತದೆ ಎಂಬರ್ಥದಲ್ಲಿ ಟ್ರೋಲುಗಳನ್ನು ಮಾಡುತ್ತಾ ಸಂಭ್ರಮಿಸಿದ್ದರು. ಇದೀಗ ಬಿಡುಗಡೆಗೊಂಡಿರುವ ಟಾಕ್ಸಿಕ್ ಟೀಸರ್ ತನ್ನ ಕಸುವಿನಿಂದಲೇ ಅದೆಲ್ಲದಕ್ಕೂ ಸೆಡ್ಡು ಹೊಡೆದಿಕದೆ. ಕನ್ನಡದ ಭೂಮಿಕೆಯಲ್ಲಿರೋ ಟಾಕ್ಸಿಕ್ ಟೀಸರ್ ಹವಾ ಕಂಡು ಬಾಲಿವುಡ್ ಮಂದಿ ಅಕ್ಷರಶಃ ಕಂಗಾಲೆದ್ದಿದ್ದಾರೆ. ಅಂಥಾ ಉರಿ ಸಾಮಾಜಿಕ ಜಾಲತಾಣದ ಅಲ್ಲಲ್ಲಿ ಧಗಧಗಿಸುತ್ತಿದೆ.

Toxic Movie Controvercy: ತತ್ತರಿಸಿದ ಹಿಂದಿವಾಲಾಗಳ ಟಾಕ್ಸಿಕ್ ವಾರ್!

ಆದರೆ, ಕನ್ನಡದ ಯಶ್ ನಟಿಸಿರೋ ಈ ಸಿನಿಮಾ ಟೀಸರ್ ಮೂಲಕ ಸೃಷ್ಟಿಸಿರುವ ಕ್ರೇಜ್ ಕನ್ನಡ ಸಿನಿಮಾ ರಂಗದ ಘನತೆ ಗೌರವರಗಳನ್ನು ಮತ್ತಷ್ಟು ಹೆಚ್ಚಿಸಿರೋದು ಸುಳ್ಳಲ್ಲ. ಅಬ್ಬರದ ದೃಷ್ಯಗಳಿಗೆನ ಒತ್ತು ಕೊಡೋ ಭರದಲ್ಲಿ ಕಥಾ ಹಂದರದತ್ತ ಕೌತುಕ ಮೂಡಿಸುವುದರತ್ತ ನಿರ್ದೇಶಕಿ ಗಮನ ಹರಿಸಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದೂ ಕೂಡಾ ಭಾಷೆಯ ನೆಲೆಯಲ್ಲಿನ ಅಸಮಧಾನದ ಫಲವೆಂಬಂತೆಯೇ ಕಾಣಿಸುತ್ತಿದೆ. ಇದೆಲ್ಲದರಾಚೆಗೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟೀಸರ್‌ನ ವೀಕ್ಷಣೆಗಳು ಜ್ವರದೋಪಾದಿಯಲ್ಲಿ ಏರಿಕೊಳ್ಳುತ್ತಿದೆ. ಧುರಂಧರ್೨ ಮೂಲಕ ಟಾಕ್ಸಿಕ್ ಅನ್ನು ಮಣಿಸಿ, ಮತ್ತೆ ಭಾರತೀಯ ಸಿನಿಮಾ ರಂಗದ ಮೇಲೆ ಅಧಿಪತ್ಯ ಸಾಧಿಸುವ ಬಾಲಿವುಡ್ ಮಂದಿಯ ಕನಸಿಗೂ ಈ ಟೀಸರ್ ತಣ್ಣೀರೆರಚಿದೆ. ಟಾಕ್ಸಿಕ್ ಅಬ್ಬರದ ನಡುವೆ ಧುರಂಧರ ಮಾಯವಾಗಿ ಬಿಡುವ ಗಾಢ ಭಯವೊಂದು ಬಾಲಿವುಡ್ಡನ್ನು ಆವರಿಸಿಕೊಂಡಿದೆ. ಇದಕ್ಕಿಂತ ದೊಡ್ಡ ಗೆಲುವು ಮತ್ಯಾವುದಿರಲು ಸಾಧ್ಯ?

keywords: toxic, yash, toxic teaser, bollywood, sandalwood

The post Toxic Teaser: ಬಾಲಿವುಡ್ ಮಂದಿಗೆ ಶುರುವಾಯ್ತು ಢವಢವ! appeared first on Cini Shodha.

Toxic Movie: ಭಾರತೀಯ ಚಿತ್ರರಂಗಕ್ಕೆ ನ್ಯಾಟಲಿ ಬರ್ನ್ ಆಗಮನ!
ಪಕ್ಕಾ ಹಾಲಿವುಡ್ ಛಾಯೆಯ ಮೂಲಕ ಟಾಕ್ಸಿಕ್ ರಾಯನ ಪರಿಚಯಾತ್ಮಕ ಟೀಸರ್ ಸದ್ದು ಮಾಡುತ್ತಿದೆ. ಅಭಿಮಾನದಾಚೆಗೂ ರಾಕಿಂಗ್ ಸ್ಟಾರ್ ಯಶ್ ಅವತಾರ ಕಂಡು ಒಂದಷ್ಟು ಮಂದಿ ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ವಿಮರ್ಶೆ, ವಿರೋಧಾಭಾಸಗಳೂ ವ್ಯಕ್ತವಾಗುತ್ತಿವೆ. ಪ್ರಧಾನವಾಗಿ, ಸಿನಿಮಾದ ಕಥೆ ಯಾವ ಥರದ್ದಿರಬಹುದೆಂಬ ಚರ್ಚೆಯೊಂದು ಟ್ರೈಲರ್, ಟೀಸರ್ ಮೂಲಕ ಮೂಡಿಕೊಳ್ಳೋದು ಮಮೂಲು. ಆದರೆ, ಟಾಕ್ಷಿಕ್ ವಿಚಾರದಲ್ಲದು ಅನಿರೀಕ್ಷಿತ ತಿರುವು ಕಂಡಿದೆ. ಆದರೆ, ಅದು ಸಿನಿಮಾ ತಂಡದ ಪಾಲಿಗೆ ಅಪೇಕ್ಷಿತ ವಿಚಾರ. ಈ ನಿಟ್ಟಿನಲ್ಲಿ ಟಾಕ್ಸಿಕ್ ಟೀಮು ಭರ್ಜರಿಯಾಗಿಯೇ ಗೆದ್ದಿದೆ. ಮಂದಿ ತಲೆ ಕೆಡಿಕೊಳ್ಳಲೆಂದೇ ಕಾರೊಳಗೆ ಫಾರಿನ್ ಸ್ಟೈಲಿನ ಕಾಮ ಕೇಳಿಯ ದೃಷ್ಯಗಳನ್ನಿಟ್ಟಿದ್ದಾರೆ. ಈಗಂತೂ ಅದರ ಸುತ್ತಲೇ ಚರ್ಚೆಗಳು ನಡೆಯುತ್ತಿವೆ.

ಕನ್ನಡದ ಮಟ್ಟಿಗೆ ಟಾಕ್ಸಿಕ್‌ನದ್ದು ಮಡಿವಂತಿಕೆಯ ಡೌಲುಗಳನ್ನು ಅಲುಗಾಡಿಸುವ ನಡೆ. ಕನ್ನಡದಲ್ಲಿ ಇಂಥಾ ದೃಷ್ಯಗಳನ್ನು ಸಾಂಕೇತಿಕ ಸಂಜ್ಞೆಗಳ ಮೂಲಕ ತೋರಿಸುವ ಪರಿಪಾಠವಿತ್ತು. ಯಶ್ ಚಿತ್ರ ಅದನ್ನು ಸಾರಾಸಗಟಾಗಿ ಬದಲಾಯಿಸಿ ಬಿಟ್ಟಿದೆ. ಹಾಗಂತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ವಿಚಾರದಲ್ಲಿ ಸ್ವಂತದ ಹಾದಿ ಹಿಡಿದಿಲ್ಲ. ಆಕೆ ಹಾಲಿವುಡ್ಡಿನ ಜನಪ್ರಿಯ ಧಾಟಿಯನ್ನು ಆಯ್ದುಕೊಂಡಿದ್ದಾರಷ್ಟೆ. ಇದೆಲ್ಲ ಏನೇ ಇದ್ದರೂ ಕಾರೊಳಗಿನ ಹಸಿಬಿಸಿ ರೊಮ್ಯಾನ್ಸಿನಲ್ಲಿ ಕಾಣಿಸಿಕೊಂಡ ನಟಿ ಯಾರು ಅಂತೊಂದು ಕುತೂಹಲ ಅನೇಕರಲ್ಲಿದೆ. ಅಂದಹಾಗೆ, ಟಾಕ್ಸಿಕ್‌ನ ಈ ಕಾಮಿಣಿ ಹಾಲಿವುಡ್ಡಿನ ಖ್ಯಾತ ನಟಿ, ನಿರ್ಮಾಪಿ, ಮಾಡಲ್ ನ್ಯಾಟಲಿ ಬರ್ನ್!

Toxic Teaser Review: ಪ್ಯಾನಿಂಡಿಯಾ ಪ್ರಭೆಯಾಚೆ ಕೈಚಾಚಿದ ಯಶ್!

ನ್ಯಾಟಲಿ ಬರ್ನ್ ಹಾಲಿವುಡ್ ಸಿನಿಮಾ ವೀಕ್ಷಕರಿಗೆಲ್ಲ ಪರಿಚಿತ ನಟಿ. ಸದಾ ಕ್ರಿಯಾಶೀಲವಾಗಿರುವ ಈಕೆ ಒಂದಷ್ಟು ಯಶಸ್ವೀ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಇಂಥಾ ನ್ಯಾಟಲಿ ಬರ್ನ್ ಟಾಕ್ಸಿಕ್ಕಿಗೆ ಒಂದಷ್ಟು ಹಣ ಹೂಡಿದ್ದಾಳೆಂದೂ ಹೇಳಲಾಗುತ್ತಿದೆ. ಬಹುಶಃ ಭಾರತೀಯ ಚಿತ್ರರಂಗದ ನಾಯಕಿ ಇಂಥಾ ಸೀನುಗಳಲ್ಲಿ ನಟಿಸಲು ಒಪ್ಪಿಕೊಳ್ಳೋದು ಕಷ್ಟ. ರಾಕಿ ಸಾವಂತ್ ಮನಸು ಮಾಡಬಹುದಷ್ಟೆ. ಈ ಸತ್ಯ ಗೊತ್ತಿದ್ದೇ ಗೀತು ನ್ಯಾಟಲಿಯನ್ನು ಆಯ್ಕೆ ಮಾಡಿಕೊಂಡಂತಿದೆ. ಇದೊಂದು ಸೀನೇ ಒಂದಿಡೀ ಟಾಕ್ಸಿಕ್ ಟೀಸರ್‌ನ ಆಕರ್ಷಣೆಯಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಗೀತು ಮೋಹನ್ ದಾಸ್ ಸರಿಕಟ್ಟಾದ ದಾಳವನ್ನೇ ಉರುಳಿಸಿದ್ದಾರೆ. ಯಾಕೆಂದರೆ, ಪಡ್ಡೆಗಳು, ಮಡಿವಂತರು ಸೇರಿದಂತೆ ಎಲ್ಲರೊಳಗೂ ನ್ಯಾಟಲಿಯ ಕಡೇಯ ಕೂಗು ಮತ್ತು ನಿಂತಲ್ಲೇ ಕುಲುಕಿದ ಕಪ್ಪು ಕಾರಿನ ಛಾಯೆ ಆವರಿಸಿಕೊಂಡಿದೆ!

keywords: toxic, yash, geethu, mohandas, movie, teaser, romance

The post Toxic Movie: ಭಾರತೀಯ ಚಿತ್ರರಂಗಕ್ಕೆ ನ್ಯಾಟಲಿ ಬರ್ನ್ ಆಗಮನ! appeared first on Cini Shodha.

rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ?
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು. ಈಕೆ ಸಪ್ತಸಾಗರದಾಚೆಯ ನಂತರ ಸೀದಾ ತಮಿಳಿಗೆ ಹಾರಿ ವಿಜಯ್ ಸೇತುಪತಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಹಿನ್ನಡೆಯ ಹಿಂಚುಮುಂಚಲ್ಲಿಯೇ ಅಚ್ಚರಿದಾಯಕವಾಗಿ ಈ ಹುಡುಗಿಕಗೆ ದೊಡ್ಡ ದೊಡ್ಡ ಅವಕಾಶಗಳು ಒಲಿದು ಬರುತ್ತಿವೆ. ಇದೀಗ ರುಕ್ಮಿಣಿಗೆ ರಾಕಿ ಭಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿದೆ.

ರೆಟ್ರೋ ಶೈಲಿಯ ಟಾಕ್ಸಿಕ್ ಚಿತ್ರ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ಹುಮಾ ಖುರೇಶಿ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹತ್ವದ ಪಾತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಡುಕಾಟ ನಟೆಸುತ್ತಿದ್ದರು. ಕಡಸೆಗೂ ರಾಕಿ ಭಾಯ್ ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರುಕ್ಮಿಣಿ ಯಾವ ಥರದ ಪಾತ್ರದಲ್ಲಿ ನಟಿಸಲಿದ್ದಾರೆಂಬುದೂ ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.

ರುಕ್ಮಿಣಿ ವಸಂತ್ ಪಾಲಿಗೆ ಟಾಕ್ಸಿಕ್ ಮೂಲಕ ಎರಡನೇ ಪ್ಯಾನಿಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಂತಾಗಿದೆ. ಈಗಾಗಲೇ ಕಾಂತಾರ ಅಧ್ಯಾಯ ಒಂದರಲ್ಲಿಯೂ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಂತಾರಾ ಅಂತೂ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿ ಮಾಡೋದು ಪಕ್ಕಾ. ಅದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಕೂಡಾ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಲಕ್ಷಣಗಳಿದ್ದಾವೆ. ಈ ಎಲ್ಲವನ್ನೂ ನೋಡಿದರೆ ರುಕ್ಮಿಣಿ ವಸಂತ್ ನಿಸ್ಸಂದೇಹವಾಗಿಯೂ ಪ್ಯಾನಿಂಡಿಯಾ ಮಟ್ಟದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಹಾಗಂತ ಸಿನಿಮಾ ಪ್ರೇಮಿಗಳೇ ಅಭಿಪ್ರಾಯ ಪಡುತ್ತಿದ್ದಾರೆ.

The post rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ? appeared first on Cini Shodha.