ಬಣ್ಣದ ಹೆಜ್ಜೆ – Cini Shodha

Timepass Kannada Movie: ವೈಷ್ಣವಿ ವೃತ್ತಿ ಬದುಕಲ್ಲಿ ಹೀಗೊಂದು ರೂಪಾಂತರ!
ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ ನಿರ್ದೇಶಕಿಯರೂ ಇಲ್ಲಿ ಬೆರಳೆಣಿಕೆಯಷ್ಟಿದ್ದಾರಷ್ಟೆ. ಹಾಗಿರುವಾಗ, ನಟಿಯಾಗಿ ಸೀರಿಯಲ್ಲು, ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದವರು ಏಕಾಏಕಿ ಸಿನಿಮಾವೊಂದರ ನಿರ್ದೇಶನ ವಿಭಾಗದಲ್ಲಿ, ತಾಂತ್ರಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಾರೆಂದರೆ ಸಹಜವಾಗಿಯೇ ಅಚ್ಚರಿಯಾಗುತ್ತೆ. ಇದೇ ಅಕ್ಟೋಬರ್ ೧೭ರಂದು ತೆರೆಗಾಣಲಿರುವ ಟೈಮ್ ಪಾಸ್ ಚಿತ್ರದ ಭೂಮಿಕೆಯಲ್ಲಿಯೂ ಅಂಥಾದ್ದೊಂದು ಅಚ್ಚರಿಯಿದೆ. ವೈಷ್ಣವಿ ಸತ್ಯನಾರಾಯಣ ಅದರ ಕೇಂದ್ರಬಿಂದುವಾಗಿದ್ದಾರೆ!

ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಅಮೃತಧಾರೆ, ಮಿಥುನರಾಶಿ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದವರು ವೈಷ್ಣವಿ. ಒಂದಷ್ಟು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಆಕೆ ಟೈಮ್ ಪಾಸ್ ಚಿತ್ರದ ಸಹ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ಪ್ರತೀ ಹಂತದಲ್ಲಿಯೂ ನಿರ್ದೇಶಕ ಚೇತನ್ ಜೋಡಿದಾರ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಎರಡು ಹಾಡುಗಳಿಗೆ ಸಾಹಿತ್ಯ ಬರೆಯುವ ಮೂಲಕವೂ ಗಮನ ಸೆಳೆದಿದ್ದಾರೆ. ಈಗಾಗಲೇ ಅವೆರಡೂ ಹಾಡುಗಳು ಬಿಡುಗಡೆಗೊಂಡು, ಕೇಳುಗರಿಂದ ಮೆಚ್ಚುಗೆ ಪಡೆದುಕೊಂಡ ಖುಷಿಯೂ ವೈಷ್ಣವಿಗಿದೆ.

ತೆರೆಮೇಲೆ ಕಾಣಿಸಿಕೊಂಡ ಅನುಭವವಿದ್ದ ವೈಷ್ಣವಿ ಸತ್ಯನಾರಾಯಣರದ್ದು ಸಿನಿಮಾ ಜಗತ್ತಿನ ಎಲ್ಲ ವಿಭಾಗಗಳನ್ನೂ ಕೂಡಾ ಅರಿತುಕೊಳ್ಳಬೇಕೆಂಬ ಹಂಬಲ. ನಟಿಯಾಗಿ ನೆಲೆಗೊಳ್ಳುವ ಸಾಧ್ಯತೆಗಳು ಇದ್ದಾಗಲೂ ಕೂಡಾ, ಅವರ ಪ್ರಧಾನ ಆಸಕ್ತಿ ನಿರ್ದೇಶನದತ್ತ ಕೀಲಿಸಿಕೊಂಡಿತ್ತು. ಅಂಥಾದ್ದೊಂದು ಅವಕಾಶವನ್ನು ಟೈಮ್ ಪಾಸ್ ಮೂಲಕ ನಿರ್ದೇಶಕ ಚೇತನ್ ಜೋಡಿದಾರ್ ಕಲ್ಪಿಸಿದ್ದಾರೆ. ಹಾಗೆ ಸಿಕ್ಕ ಅವಕಾಶವನ್ನು ಸರಿಕಟ್ಟಾಗಿ ಬಳಸಿಕೊಂಡ ಆತ್ಮತೃಪ್ತಿ ಮತ್ತು ಹೆಣ್ಣುಮಕ್ಕಳು ವಿರಳವಾಗಿರುವ ವಲಯದಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ವೈಷ್ಣವಿಯದ್ದು. ವರ್ಷಗಟ್ಟಲೆ ಹಾಕಿದ ಶ್ರಮದಿಂದ ಎಲ್ಲ ವರ್ಗಕ್ಕೂ ರುಚಿಸುವಂತೆ ಟೈಮ್ ಪಾಸ್ ಚಿತ್ರ ಮೂಡಿ ಬಂದಿದೆ ಎಂಬ ಖುಷಿಯೂ ಅವರಲ್ಲಿದೆ.

ಬೆಂಗಳೂರು ಹುಡುಗಿಯಾಗಿರುವ ವೈಷ್ಣವಿ ಬಿಕಾಂ ಪದವೀಧರೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡಿದ್‌ದ ಅವರು, ಓದು ಮುಗಿಯುತ್ತಲೇ ರಂಗಭೂಮಿ ತಂಡಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲಿಯೂ ಕೂಡಾ ಬರೀ ನಟನೆಗೆ ಮಾತ್ರವೇ ಸೀಮಿತವಾಗದೆ ಎಲ್ಲ ವಿಭಾಗಗಳನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸಿದ್ದರು. ಹೀಗೆ ರಂಗಭೂಮಿಯಲ್ಲಿ ಒಂದಷ್ಟು ಕಾಲ ಪಳಗಿಕೊಂಡ ನಂತರ ಧಾರಾವಾಹಿಗಳತ್ತ ವಾಲಿಕೊಂಡ ವೈಷ್ಣವಿ ಪಾಲಿಗೆ ಕಲರ್ಸ್ ಮತ್ತು ಜೀ ಕನ್ನಡ ವಾಹಿನಿಗಳ ಜನಪ್ರಿಯ ಧಾರಾವಾಹಿಗಳಲ್ಲಿ ಗುರುತಾಗುವಂಥಾ ಪಾತ್ರಗಳು ಸಿಕ್ಕಿದ್ದವು. ಪ್ರಿಯಾಂಕಾ ಉಪೇಂದ್ರ ನಟಿಸಿರುವ, ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ ಕತೃ ಕ್ರಿಯಾ ಕರ್ಮ ಚಿತ್ರದಲ್ಲಿಯೂ ಆಕೆ ನಟಿಸಿದ್ದಾರೆ. ಸ್ಲೋಗನ್ ಚಿತ್ರದಲ್ಲಿಯೂ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗೆ ನಟಿಯಾಗಿ ಚಿಗುರಿಕೊಳ್ಳುತ್ತಿದ್ದ ವೈಷ್ಣವಿ ಪಾಲಿಗೆ ಟೈಮ್ ಪಾಸ್ ಚಿತ್ರ ರೂಪಾಂತರವಿದ್ದಂತೆ. ಇದರ ಮೂಲಕ ತನ್ನ ವೃತ್ತಿ ಬದುಕು ಮತ್ತೊಂದು ಬಗೆಯಲ್ಲಿ ಟಿಸಿಲೊಡೆಯಹುವ, ಗೆಲುವು ದಕ್ಕುವ ನಿರೀಕ್ಷೆ ವೈಷ್ಣವಿ ಅವರದ್ದು!

The post Timepass Kannada Movie: ವೈಷ್ಣವಿ ವೃತ್ತಿ ಬದುಕಲ್ಲಿ ಹೀಗೊಂದು ರೂಪಾಂತರ! appeared first on Cini Shodha.

Time pass Kannada Movie: ಸಿನಿಮಾ ಧ್ಯಾನಕ್ಕೆ ಭಾಷೆಯ ಹಂಗಿಲ್ಲ!
ಹೊಸಬರ ತಂಡವೊಂದು ಹೊಸತನದ ಸ್ಪಷ್ಟ ಸುಳಿವಿನೊಂದಿಗೆ ಟೈಮ್ ಪಾಸ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದೆ. ಇದೇ ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿರುವ ಈ ಸಿನಿಮಾ ಭೂಮಿಕೆಯಲ್ಲಿ ಒಂದಷ್ಟು ಪ್ರತಿಭಾನ್ವಿತರ ಸಮಾಗಮವಾಗಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮತ್ತು ಹಾಡುಗಳನ್ನು ಗಮನಿಸಿದ ಅನೇಕರು ಟೈಮ್ ಪಾಸ್ ಚಿತ್ರದ ಮೇಕಿಂಗ್ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂಥಾದ್ದೊಂದು ಮೆಚ್ಚುಗೆ ದಕ್ಕಿಸಿಕೊಳ್ಳಲು ಪ್ರಧಾನ ಕಾರಣರಾಗಿರುವವರು ಈ ಚಿತ್ರದ ಛಾಯಾಗ್ರಾಹಕ ರಾಜೀವ್ ಗಣೇಸನ್. ನಿರ್ದೇಶನದ ಕನಸನ್ನು ಮನಸಲ್ಲಿಟ್ಟುಕೊಂಡು ಛಾಯಾಗ್ರಾಹಕರಾಗಿಯೂ ಚಾಲ್ತಿಯಲ್ಲಿರುವ ರಾಜೀವ್ ಪಾಲಿಗೆ ಟೈಮ್ ಪಾಸ್ ಮೂಲಕ ಅದ್ಭುತ ಅವಕಾಶವೇ ಒಲಿದು ಬಂದಿದೆ!

ನಿರ್ದೇಶಕನಾಗಬೇಕೆಂಬ ಬಯಕೆಯನ್ನು ಜೀವಮಾನದ ಗುರಿಯಾಗಿಟ್ಟುಕೊಂಡಿದ್ದವರು ರಾಜೀವ್ ಗಣೇಸನ್. ಸಿನಿಮಾ ರಂಗದಲ್ಲಿ ಇಂಥಾ ಗುರಿಗಳನ್ನಿಟ್ಟುಕೊಂಡು ಏಕಾಏಕಿ ಸಾಧಿಸಿ ಬಿಡಲಾಗೋದಿಲ್ಲ. ಅಂಥಾ ಅವಕಾಶ ಒಂದಷ್ಟು ಮಂದಿಗೆ ಮಾತ್ರವೇ ಸಿಗುತ್ತದೆ. ಸಿನಿಮಾ ಜಗತ್ತಿನ ಯಾವ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಕೂಡಾ, ಆ ಹಾದಿ ತನ್ನನ್ನು ಗಮ್ಯದತ್ತ ಕೊಂಡೊಯ್ಯುತ್ತದೆಂಬ ಗಾಢ ನಂಬಿಕೆಯೊಂದು ರಾಜೀವ್ ಮನಸಲ್ಲಿತ್ತು. ಆ ಕಾರಣದಿಂದಲೇ ಬದುಕು ಎತ್ತ ಹೊಯ್ದಾಡಿಸಿದರೂ, ಸಿಕ್ಕ ಜವಾಬ್ದಾರಿಯನ್ನೇ ಅತ್ಯಂತ ಅಚ್ಚುಟಾಗಿ ನಿಭಾಯಿಸುವ ಗುಣವನ್ನವರು ಬೆಳೆಸಿಕೊಂಡಿದ್ದರು. ಅಂಥಾ ಮನಃಸ್ಥಿತಿಯ ಕಾರಣದಿಂದಲೇ ಅವರು ಟೈಮ್ ಪಾಸ್ ಚಿತ್ರದ ನಿರ್ದೇಶಕ ಚೇತನ್ ಜೋಡಿದಾರ್ ಅವರ ಗಮನ ಸೆಳೆದು, ಈ ಸಿನಿಮಾದ ಛಾಯಾಗ್ರಾಹಕರಾಗುವ ಅವಕಾಶವನ್ನು ಪಡೆದುಕೊಂಡಿದ್ದರು.

ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ `ಸಾರಿ ಕರ್ಮ ರಿಟರ್ನ್ಸ್’ ಚಿತ್ರದ ಛಾಯಾಗ್ರಾಹಕರಾಗಿ ರಾಜೀವ್ ಕಾರ್ಯನಿರ್ವಹಿಸುತ್ತಿದ್ದರು. ಆ ಸಿನಿಮಾ ಮೂಲಕ ಮೊದಲ ಬಾರಿಗೆ ರಾಜೀವ್ ಮೋಷನ್ ಕ್ಯಾಪ್ಚರ್ ಎಂಬ ಪ್ರಯೋಗ ನಡೆಸಿದ್ದರು. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿಯೇ ರಾಜೀವ್ ಪ್ರಯೋಗ ಮೊದಲನೆಯದ್ದೆನ್ನಿಸಿಕೊಂಡಿದೆ. ಆ ಸಿನಿಮಾ ಇನ್ನೇನು ಬಿಡುಗಡೆಗೊಳ್ಳಲಿದೆ. ಸದರಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಆ ಸೆಟ್ಟಿಗೆ ನಿರ್ದೇಶಕ ಚೇತನ್ ಜೋಡಿದಾರ್ ಭೇಟಿ ಕೊಟ್ಟಿದ್ದರಂತೆ. ಆ ಸಂದರ್ಭದಲ್ಲಿ ರಾಜೀವ್ ಅವರನ್ನು ಸಂಪರ್ಕಿಸಿದ ಚೇತನ್ ಅವರು ಟೈಮ್ ಪಾಸ್ ಚಿತ್ರದ ಬಗ್ಗೆ ಮಾತಾಡಿದ್ದರು. ಈ ಮೂಲಕ ರಾಜೀವ್ ಗಣೇಸನ್ ಟೈಮ್ ಪಾಸ್ ಚಿತ್ರದ ಛಾಯಾಗ್ರಾಹಕರಾಗಿ ಅಖಾಡಕ್ಕಿಳಿದಿದ್ದರು.

ಆರಂಭದಲ್ಲಿಯೇ ಚೇತನ್ ಅವರು ಇಂಚಿಂಚನ್ನೂ ವಿವರಿಸಿ ಕಥೆ ಹೇಳಿದ ರೀತಿಯೇ ರಾಜೀವ್ ಅವರಿಗೆ ಹಿಡಿಸಿತ್ತಂತೆ. ಅಷ್ಟಕ್ಕೂ ಚೇತನ್ ಅವರೊಂದಿಗೆ ರಾಜೀವ್ ಗೆಳೆತನಕ್ಕೆ ಅದಾಗಲೇಢ ಮೂರು ವರ್ಷ ಕಳೆದಿತ್ತು. ಆ ಸ್ನೇಹ ಸದರಿ ಸಿನಿಮಾದ ಮೂಲಕ ಮತ್ತಷ್ಟು ಗಾಢವಾಗಿದೆ. ಆರಂಭದಲ್ಲಿ ಕಥೆ ಹೇಳಿದ ನಂತರ ಒಂದು ವರ್ಷ ಕಳೆದ ನಂತರ ಮತ್ತೆ ಚೇತನ್ ಕಡೆಯಿಂದ ಕರೆ ಬಂದಿದ್ದೇ ಟೈಮ್ ಪಾಸ್ ಚಿತ್ರೀಕರಣ ಚಾಲೂ ಆಗಿತ್ತು. ಆ ನಂತತರದಲ್ಲಿ ಚಿತ್ರೀಕರಣದ ಹಂತದಲ್ಲಿ ಏನೇ ಸಲಹೆ ಸೂಚನೆ ನೀಡಿದರೂ ಕಡೆಗಣಿಸದೆ, ಎಲ್ಲರನ್ನೂ ಒಳಗೊಂಡು ಸಾಗುವ ಚೇತನ್ ಜೋಡಿದಾರ್ ನಿರ್ದೇಶನದ ಶೈಲಿ ರಾಜೀವ್‌ರನ್ನು ಸೆಳೆದುಕೊಂಡಿದೆ. ಈ ಚಿತ್ರದ ಮೂಲಕವೇ ತಮ್ಮ ಕನಸಿನ ಪಯಣಕ್ಕೆ ಮತ್ತಷ್ಟು ಕಸುವು ಸಿಗಲಿದೆಯೆಂಬ ಭರವಸೆಯೂ ಅವರಲ್ಲಿದೆ.

ಬಿಎಸ್‌ಸಿ ಪದವಿ ಪೂರೈಸಿಕೊಂಡ ಕ್ಷಣದಿಂದಲೇ ರಾಜೀವ್ ಗಣೇಸನ್ ಪಾಲಿಗೆ ನಿರ್ದೇಶನವೇ ಬದುಕಿನ ಉದ್ದೇಶವಾಗಿತ್ತು. ಆದರೆ ಅನಿವಾರ್ಯತೆಗಳಿಗೆ ವಶವಾಗಿ ೨೦೦೮ರಲ್ಲಿ ಕಾಲೇಜೊಂದರಲ್ಲಿ ವಿಎಫ್‌ಎಕ್ಸ್ ಬಗೆಗೆ ಬೋಧಿಸುವ ಕೆಲಸವನ್ನು ಆರಂಭಿಸಿದ್ದರು. ನಾಲಕ್ಕು ವರ್ಷ ಅದರಲ್ಲಿ ಮುಂದುವರೆದ ರಾಜೀವ್ ತನ್ನ ಕನಸಿನತ್ತ ಹೊರಳಿಕೊಂಡು, ಖ್ಯಾತ ನಿರ್ದೇಶಕ ನಾಗಾಭರಣರ ಪುತ್ರ ಪನ್ನಗ ಭರಣ ನಿರ್ದೇಶನದ ಸಿನಿಮಾದಲ್ಲಿ ಸಹಾಯಕ ನಿರ್ದೇಶನದ ಅವಕಾಶ ಪಡೆದುಕೊಂಡಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಟೇಕಾಫ್ ಆಗಲಿಲ್ಲ. ನಂತರ ಅದೇ ವರ್ಷ ಸಿನಿಮಾ ಶಾಲೆ ಸೇರಿಕೊಂಡು, ಒಂದಷ್ಟು ಪಟ್ಟುಗಳನ್ನೂ ರಾಜೀವ್ ಕರಗತ ಮಾಡಿಕೊಂಡಿದ್ದರು.

ಕಡೆಗೂ ಒಂದಷ್ಟು ಒಲವಿದ್ದ ಸಿನಿಮಾಟೋಗ್ರಫಿಯತ್ತ ವಾಲಿಕೊಂಡ ಅವರಿಗೆ ಒಂದಷ್ಟು ಅವಕಾಶಗಳು ಒಲಿದು ಬರಲಾರಂಭಿಸಿದ್ದವು. ಸದ್ಯದ ಮಟ್ಟಿಗೆ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಒಂದಷ್ಟು ಸಿನಿಮಾಗಳು ಬಿಡುಗಡೆಯ ರೇಸಿನಲ್ಲಿವೆ. ಅದೆಲ್ಲರ ನಡುವೆ ಟೈಮ್ ಪಾಸ್ ಚಿತ್ರ ಇದೇ ಅಕ್ಟೋಬರ್ ೧೭ರಂದು ತೆರೆಗಾಣುತ್ತಿದೆ. ಈ ಸಿನಿಮಾವನ್ನು ನಿರ್ದೇಶಕರು ಕಟ್ಟಿ ಕೊಟ್ಟಿರುಜವ ಬಗೆ, ಅದಕ್ಕೆ ಕಲಾವಿದರು ಜೀವ ತುಂಬಿರುವ ರೀತಿಗಳ ಬಗ್ಗೆ ರಾಜೀವ್ ಅವರಲ್ಲೊಂದು ಬೆರಗಿದೆ. ಟೈಮ್ ಪಾಸ್ ಪ್ರೇಕ್ಷಕರಿಗೆ ಹಿಡಿಸುತ್ತದೆಂಬಂಥಾ ಭರವಸೆಯೂ ಇದೆ. ಈ ಸಿನಿಮಾದ ನಂತರ ಅವಕಾಶ ಸಿಕ್ಕರೆ ಮೆಲ್ಲಗೆ ನಿರ್ದೇಶನದತ್ತ ಹೊರಡುವ ಆಲೋಚನೆ ರಾಜೀವ್‌ರದ್ದು. ಒಟ್ಟಾರೆಯಾಗಿ, ಓರ್ವ ಛಾಯಾಗ್ರಾಹಕನಾಗಿ ಟೈಮ್ ಪಾಸ್ ತನ್ನ ವೃತ್ತಿ ಬದುಕಿನ ಮಹತ್ವದ ಚಿತ್ರವೆಂಬ ಭಾವ ಅವರೊಳಗಿದೆ. ಮೂಲತಃ ತಮಿಳುನಾಡಿನವರಾದರೂ ಅಲ್ಲಿನ ಕನ್ನಡದ ನಂಟಿನ ಕುಟುಂಬದಿಂದ ಬಂದವರು ರಾಜೀವ್. ಕಲೆಗೆ ಭಾಷೆಯ ಹಂಗಿಲ್ಲ ಎಂಬ ಸಿದ್ಧಾಂತ ಹೊಂದಿರುವ ಅವರೀಗ ಕನ್ನಡ ಚಿತ್ರರಂಗದ ಭಾಗವಾಗಿದ್ದಾರೆ!

The post Time pass Kannada Movie: ಸಿನಿಮಾ ಧ್ಯಾನಕ್ಕೆ ಭಾಷೆಯ ಹಂಗಿಲ್ಲ! appeared first on Cini Shodha.

Timepass Kannada Movie: ರಂಗಭೂಮಿ ಪ್ರತಿಭೆಗೆ ದಕ್ಕಿದ ಚೆಂದದ ಪಾತ್ರ!
ಚೇತನ್ ಜೋಡಿದಾರ್ ನಿರ್ದೇಶನದ ಟೈಮ್ ಪಾಸ್ ಚಿತ್ರ ಇದೇ ಅಕ್ಟೋಬರ್ 17ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಹೆಚ್ಚಾಗಿ ಹೊಸಬರೇ ತುಂಬಿಕೊಂಡಂತಿರುವ ಸದರಿ ಸಿನಿಮಾದ ತಾರಾಗಣದಲ್ಲಿ ರಂಗಭೂಮಿ ಪ್ರತಿಭೆಗಳದ್ದೇ ಮೇಲುಗೈ. ನಟ ನಟಿಯರನ್ನು ಪರಿಪೂರ್ಣವಾಗಿ ಅಣಿಗೊಳಿಸುವ ಸಮ್ಮೋಹಕ ಗುಣ ಹೊಂದಿರುವ ರಂಗಭೂಮಿಯಿಂದ ನಟ ನಟಿಯರ ಆಗಮನವಾದರೆ ಸಹಜವಾಗಿಯೇ ಅದರ ಬಗೆಗೊಂದು ಸೆಳೆತ ಮೂಡಿಕೊಳ್ಳುತ್ತೆ. ಯಾಕೆಂದರೆ, ರಂಗಭೂಮಿಯಲ್ಲಿ ರೂಪುಗೊಂಡ ಕಲಾವಿದರಿಗೆ ಎಂಥಾದ್ದೇ ಪಾತ್ರವಾದರೂ ಸಲೀಸಾಗಿ ಜೀವ ತುಂಬಬಲ್ಲ ಛಾತಿ ಇರುತ್ತದೆಂಬ ನಂಬಿಕೆಯಿದೆ. ಟೈಮ್ ಪಾಸ್ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಯುವ ನಟ ಇಮ್ರಾನ್ ಪಾಷಾ ಕೂಡಾ ರಂಗಭೂಮಿಯನ್ನೇ ಶಕ್ತಿಕೇಂದ್ರವಾಗಿಸಿಕೊಂಡವರು!

ಅಪ್ಪಟ ಬೆಂಗಳರು ಹುಡುಗ ಇಮ್ರಾನ್ ಪಾಷ ಸರಿಸುಮಾರು ಹದಿನಾಲಕ್ಕು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವವರು. ಖ್ಯಾತ ರಂಗಕರ್ಮಿ ಎಂ.ಎಸ್ ಸತ್ಯು ಮತ್ತು ಎಂ.ಸಿ ಆನಂದ್ ಅವರ ಗರಡಿಯಲ್ಲಿ ಪಳಗಿಕೊಂಡಿದ್ದ ಪಾಷಾ, ಇದೀಗ ತಮ್ಮದೇ ತಂಡ ಕಟ್ಟಿಕೊಂಡು ಹಿಂದಿ, ಇಂಗ್ಲಿಷ್ ನಾಟಕಗಳತ್ತಲೂ ತಮ್ಮ ಪರಿಧಿಯನ್ನು ವಿಸ್ತರಿಸಿಕೊಂಡಿದ್ದಾರೆ. ಆ ಹಾದಿಯಲ್ಲಿ ಅವರಿಗೆ ಪೂಜಾ ಪಾಂಡೆ ತ್ರಿಪಾಠಿ ಗುರುವಾಗಿ ಸಿಕ್ಕಿದ್ದಾರೆ. ಹೀಗೆ ಸಕ್ರಿಯವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಇಮ್ರಾನ್ ಪಾಷಾ ಪಾಲಿಗೆ ಆರಂಭದಿಂದಲೂ ವಜ್ರಮುನಿ ಎಂದರೆ ಬಲು ಅಭಿಮಾನ. ವಜ್ರಮುನಿಯವರ ಅಭಿನಯವನ್ನು ಕಣ್ತುಂಬಿಕೊಳ್ಳುತ್ತಲೇ ಸಾಗಿ ಬಂದ ಇಮ್ರಾನ್‌ರೊಳಗೆ ಆ ಕಾರಣದಿಂದಲೇ ಸಿನಿಮಾ ನಟನಾಗುವ ಕನಸು ಟಿಸಿಲೊಡೆದಿತ್ತು.

ಮೂಲತಃ ಸಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಇಮ್ರಾನ್ ಪಾಷಾ ಆರಂಭದಲ್ಲಿ ಮೂರು ವರ್ಷಗಳ ಕಾಲ ಟಿಸಿಎಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಆದರೆ, ಅವರ ಒಲವೆಲ್ಲವೂ ಕಲಾಕೇಂದ್ರಿತವಾಗಿದ್ದದ್ದರಿಂದ ಆ ಕ್ಷೇತ್ರದಲ್ಲಿ ಹೆಚ್ಚು ಕಾಲ ಇಕರಲು ಸಾಧ್ಯವಾಗಿರಲಿಲ್ಲ. ಕಡೆಗೂ ಕಲೆಯ ಸೆಳವಿಗೆ ಸಿಕ್ಕು ಕೈತುಂಬಾ ಸಂಪಾದನೆಯಿದ್ದ ಕೆಲಸವನ್ನು ಬಿಟ್ಟು ಬಂದಿದ್ದ ಪಾಷಾ, ರೇಡಿಯೋ ಮಿರ್ಷಿಯಲ್ಲಿ ಸೀನಿಯರ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ನಮ್ ರೇಡಿಯೋದಲ್ಲಿ ಆರ್‌ಜೆ ಆಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದ ಇಮ್ರಾನ್‌ಗೆ ಒಂದಷ್ಟು ಖ್ಯಾತಿ ಸಿಕ್ಕಿತ್ತು. ಇದಾದ ನಂತರ ತನ್ನ ಬದುಕೇನಿದ್ದರೂ ನಟನೆಗೇ ಅರ್ಪಿತ ಅಂತೊಂದು ನಿರ್ಧಾರ ಮಾಡಿದವರೇ ರಂಗಭೂಮಿಗೆ ಅಡಿಯಿರಿಸಿದ್ದರು.

ರಂಗಭೂಮಿಯ ಜೊತೆ ಜೊತೆಗೇ ಉದಯ ಮ್ಯೂಸಿಕ್ ಚಾನೆಲ್ಲಿನಲ್ಲಿ ಒಂಬತ್ತು ವರ್ಷಗಳ ಕಾಲ ಆಂಕರ್ ಆಗಿಯೂ ಕೆಲಸ ಮಾಡಿದ್ದ ಇಮ್ರಾನ್ ಪಾಶಾ ಜ್ಯೂನಿಯರ್ ಆರ್ಟಿಸ್ಟ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಈ ಹಾದಿಯಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದ ಇಮ್ರಾನ್ ಪಾಲಿಗೆ ಆ ಹೆಜ್ಜೆಗಳೆಲ್ಲವೂ ಗಮ್ಯವನ್ನು ಹತ್ತಿರಾಗಿಸುತ್ತವೆಂಬ ಭಾವವಿತ್ತು. ಕಡೆ ಕಡೆಗೆ ತನ್ನಿಷ್ಟದಂತೆಯೇ ಮುಖ್ಯವಾದ ಖಳನ ಪಾತ್ರಗಳು ಒಲಿದು ಬರಲಾರಂಭಿಸಿದ್ದವು. ಅಂಥಾ ಗುರುತಿಟ್ಟುಕೊಳ್ಳಬಹುದಾದ ಪಾತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇಮ್ರಾನ್ ನಟಿಸಿದ್ದಾರೆ. ಈ ನಡುವೆ ನಿರೂಪಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಇಮ್ರಾನ್‌ರ ವೃತ್ತಿ ಬದುಕು ಮಹತ್ವದ ಘಟ್ಟದತ್ತ ಹೊರಳಿಕೊಂಡಿದ್ದು ಟೈಮ್ ಪಾಸ್ ಚಿತ್ರದಲ್ಲಿ ಕೂಡಿ ಬಂದ ಅವಕಾಶದ ಮೂಲಕ!

ವರ್ಷಗಳ ಹಿಂದೆ ಅದಾಗಲೇ ಟೈಮ್ ಪಾಸ್ ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದ ಚೇತನ್ ಜೋಡಿದಾರ್ ನಾಟಕವೊಂದನ್ನು ನೋಡಲು ಹೋಗಿದ್ದರು. ಆ ನಾಟಕದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದ ಇಮ್ರಾನ್‌ರನ್ನು ಕಂಡು ಮಾತಾಡಿಸಿದ್ದರಂತೆ. ಬಳಿಕ ಈ ಸಿನಿಮಾ ಬಗ್ಗೆ ಮಾತಾಡಿದ್ದ ಚೇತನ್ ಜೋಡಿದಾರ್, ಸಹ ನಿರ್ದೇಶಕಿ ವೈಷ್ಣವಿ ಮೂಲಕ ಕಥಾ ಹಂದರವನ್ನು ವಿವರಿಸಿದ್ದರು. ಅದಾಗಿ ಒಂದಷ್ಟು ಕಾಲ ನೀರವ ವಾತಾವರಣವಿತ್ತು. ಕಡೆಗೂ ಅಚಾನಕ್ಕಾಗಿ ಕರೆ ಮಾಡಿದ್ದ ಚೇತನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಲು ಹೇಳಿದಾಗ ಇಮ್ರಾನ್‌ಗೆ ಖುಷಿ ಮತ್ತು ಭಯ ಒಟ್ಟೊಟ್ಟಿಗೇ ಕಾಡಿತ್ತಂತೆ. ಆದರೂ, ಅದಾಗಿಯೇ ಒಲಿದು ಬಂದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಂಕಲ್ಪದೊಂದಿಗೆ ಇಮ್ರಾನ್ ಟೈಮ್ ಪಾಸ್ ಭಾಗವಾಗಿದ್ದರು.

ಡಾರ್ಕ್ ಕಾಮಿಡಿ ಜಾನರಿನ ಈ ಸಿನಿಮಾದಲ್ಲಿ ಶಂಕರ್ ಎಂಬ ಮುಖ್ಯ ಪಾತ್ರಕ್ಕೆ ಇಮ್ರಾನ್ ಪಾಷಾ ಜೀವ ತುಂಬಿದ್ದಾರೆ. ಆ ಪಾತ್ರದ ಚಹರೆಗಳನ ನು ಒಳಗಿಳಿಸಿಕೊಂಡು, ಅದಕ್ಕಾಗಿ ಒಂದಷ್ಟು ತಾಲೀಮು ನಡೆಸಿಯೇ ಇಮ್ರಾನ್ ಬಣ್ಣ ಹಚ್ಚಿದ್ದಾರೆ. ನಿರ್ದೇಶಕನಾಗೋ ಕನಸು ಹೊತ್ತು ಸಾಗುವ ಆ ಪಾತ್ರದಲ್ಲಿ ಉತ್ಕಟವಾಗಿ ಹಬ್ಬಿಕೊಂಡಿರುವ ಸಿನಿಮಾ ಧ್ಯಾನಕ್ಕೂ, ತಗನ್ನೊಳಗಿನ ಸಿನಿಮಾ ಪ್ರೇಮಕ್ಕೂ ಸಾಮ್ಯತೆಗಳಿವೆ ಎನ್ನುವ ಇಮ್ರಾನ್‌ಗೆ, ಈ ಪಾತ್ರದ ಮೂಲಕವೇ ತನ್ನ ಕನಸಿನ ಹಾದಿ ಸುಗಮವಾಗುತ್ತದೆಂಬ ಭರವಸೆಯಿದೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಸಿಕ್ಕರೂ ಕೂಡಾ, ಮುಂದೆ ಕೂಡಾ ಅಂಥಾದ್ದೇ ಪಾತ್ರಗಳು ಬೇಕೆಂಬ ಇಂಗಿತ ಅವರಲ್ಲಿಲ್ಲ. ಪಾತ್ರ ಯಾವುದಾದರೂ ಸರಿ; ಒಳ್ಳೆ ನಟನಾಗಿ ನೆಲೆಗಾಣಬೇಕೆಂಬುದು ಇಮ್ರಾನ್‌ರ ಏಕಮಾತ್ರ ಆಸೆ.

ಮೊದಲೇ ಹೇಳಿದಂತೆ ವಜ್ರಮುನಿಯ ಖಟ್ಟರ್ ಭಕ್ತನಾಗಿರುವ ಇಮ್ರಾನ್‌ಗೆ ನೆಗೆಟಿವ್ ರೋಲ್‌ಗಳತ್ತಲೇ ಹೆಚ್ಚು ಒಲವಿದೆ. ಈಗಾಗಲೇ ಅವರು ನಟಿಸಿರುವ ಮತ್ತೊಂದಷ್ಟು ಸಿನಿಮಾಗಳೂ ಕೂಡಾ ಬಿಡುಗಡೆಯ ಹಾದಿಯಲ್ಲಿವೆ. ಟೈಮ್ ಪಾಸ್ ಚಿತ್ರದ ಬಗ್ಗೆ ಅವರೊಳಗೆ ಗಾಢವಾದ ನಿರೀಕ್ಷೆಗಳಿದ್ದಾವೆ. ಅಪರಿಚಿತನಾಗಿದ್ದ ತನಗೆ ಈ ಚಿತ್ರದಲ್ಲಿ ಮುಖ್ಯ ಪಾತ್ರ ಕೊಟ್ಟು ಪ್ರೋತ್ಸಾಹಿಸಿದ, ಮಾಶರ್ಗದರ್ಶನ ನೀಡಿದ ಚೇತನ್ ಜೋಡಿದಾರ್ ಮತ್ತು ಸಾಥ್ ಕೊಟ್ಟ ಚಿತ್ರತಂಡದ ಬಗ್ಗೆ ಕೃತಜ್ಞತಾ ಭಾವವಿದೆ. ಅಂತೂ ಟೈಮ್ ಪಾಸ್ ಮೂಲಕ ಇಮ್ರಾನ್ ಪಾಷಾ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುವ ಸೂಚನೆಗಳು ದಟ್ಟವಾಗಿವೆ.

The post Timepass Kannada Movie: ರಂಗಭೂಮಿ ಪ್ರತಿಭೆಗೆ ದಕ್ಕಿದ ಚೆಂದದ ಪಾತ್ರ! appeared first on Cini Shodha.

atharva prakash: ತುಳು-ಕನ್ನಡದಲ್ಲಿ ಅಥರ್ವ ಪ್ರಕಾಶ್ ಸಿನಿಮಾ ಯಾನ!
ಸತ್ಯಪ್ರಕಾಶ್ ನಿರ್ದೇಶನದ ಎಕ್ಸ್ ಆಂಡ್ ವೈ ಚಿತ್ರ ಇತ್ತೀಚೆಗಷ್ಟೇ ತೆರೆಗಂಡು ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಚಿತ್ರದಲ್ಲಿ ಚೆಂದದ ಪ್ರಧಾನ ಪಾತ್ರವೊಂದರಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವವರು ಅಥರ್ವ ಪ್ರಕಾಶ್. ಈ ಪಾತ್ರವನ್ನು ಪ್ರಕಾಶ್ ಸೃಷ್ಟಿಸಿದ್ದ ರೀತಿಯೇ ಪಳಗಿದ ನಟರಿಗೂ ಸವಾಲಿನಂತಿತ್ತು. ಆರಂಭಿಕವಾಗಿ ಅದರ ಬಗ್ಗೆ ಯಾವ ಸುಳಿವಬೂ ಇಲ್ಲದೆ, ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದ ಈ ಹುಡುಗನ ನಟನಾ ಚಾತುರ್ಯ ಕಂಡವರು ಭೇಶ್ ಅಂದಿದ್ದರು. ಹೀಗೆ ಕನ್ನಡ ಚಿತ್ರರಂಗ ಹಾಗೂ ತುಳುವಿನಲ್ಲಿಯೂ ನಟನೆಯ ಯಾನವನ್ನು ಸಂಭಾಳಿಸಿಕೊಂಡು ಸಾಗುತ್ತಿರುವ ಅಥರ್ವ ಪಾಲಿಗೀಗ ಒಂದರ ಹಿಂದೊಂದರಂತೆ ಚೆಂದದ ಅವಕಾಶಗಳು ಕೂಡಿಕೊಳ್ಳುತ್ತಿವೆ. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಏಕಕಾಲದಲ್ಲಿಯೇ ನಾಯಕ ನಟನಾಗಿ ಮಿಂಚುತ್ತಿರುವ ಅರ್ಥರ್ವ ಸಿನಿಮಾ ಪ್ರೇಮಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.

ಇದೀಗ ಒಂದಷ್ಟು ಸಿನಿಮಾಗಳ ಭಾಗವಾಗಿರುವ ಅಥರ್ವ ಪ್ರಕಾಶ್ ಮಂಗಳೂರು ಸೀಮೆಯವರು. ಕಲೆಯ ವಾತಾವರಣದಲ್ಲಿಯೇ ಬೆಳೆದಿದ್ದ ಅವರ ಪಾಲಿಗೆ ಹದಿನಾರನೇ ವಯಸ್ಸಿನಲ್ಲಿಯೇ ಒಂದೊಳ್ಳೆ ಅವಕಾಶ ಕೂಡಿ ಬಂದಿತ್ತು. ತುಳುವಿನಲ್ಲಿ ಸೂಪರ್ ಹಿಟ್ ಆಗಿದ್ದ, ಐನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ಕಂಡಿದ್ದ ಚಾಲಿ ಪೋಲಿಲು ಚಿತ್ರದಲ್ಲಿ ನಟಿಸುವ ಅವಕಾಶವೊಂದು ಅಥರ್ವಗೆ ಸಿಕ್ಕಿತ್ತು. ಆ ಚಿತ್ರದಲ್ಲಿ ಬಾಲ ನಟನಾಗಿ, ನಾಯಕನ ಬಾಲ್ಯದ ಪಾತ್ರಕ್ಕೆ ಜೀವ ತುಂಬಿದ್ಧ ಅಥರ್ವ ಪಾಲಿಗೆ ಆ ದಿನಗಳಿಂದಲೇ ನಟನಾಗಿ ಬೆಳೆದು ನಿಲ್ಲುವ ಹಂಬಲವಿತ್ತು. ಆ ನಂತರದಲ್ಲಿ ಓದಿನ ನಡುವೆಯೇ ನಟನಾಗೋ ತಾಲೀಮು ನಡೆಸುತ್ತಾ ಬಂದು, ಇದೀಗ ಎಂಥಾ ಸವಾಲಿನ ಪಾತ್ರವನ್ನಾದರೂ ಸಲೀಸಾಗಿ ನಿಭಾಯಿಸುವ ಕಸುವು ತುಂಬಿಕೊಂಡಿರೋದು ಅಥರ್ವನ ಹೆಚ್ಚುಗಾರಿಕೆ.

ಹೀಗೆ ತುಳು ಚಿತ್ರರಂಗದಲ್ಲಿ ದೇವದಾಸ್ ಕಾಪಿಕಾಡ್, ಶೋಭರಾಜ್ ಮುಂತಾದ ನಿರ್ದೇಶಕರ ಗರಡಿಯಲ್ಲಿ ನಟನಾಗಿ ಪಳಗಿಕೊಂಡಿದ್ದ ಅಥರ್ವ ಕನ್ನಡಕ್ಕೆ ಅಡಿಯಿರಿಸಿದ್ದದ್ದು ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ. ನವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದ ಪುನೀತ್ ರಾಜ್ ಕುಮಾರ್ ತನ್ನ ಬ್ಯಾನರ್ ಮೂಲಕ ಮ್ಯಾ ಆಫ್ ದ ಮ್ಯಾಚ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಮೂಲಕ ಅಥರ್ವ ಕನ್ನಡ ಸಿನಿಮಾಭಿಮಾನಿಗಳನ್ನು ನಾಯಕ ನಟನಾಗಿ ಮುಖಾಮುಖಿಯಾಗಿದ್ದರು. ಚೇತನ್ ಮುಂಡಾಡಿ ಜನಿರ್ದೇಶನದ ಭಾವಪೂರ್ಣ ಚಿತ್ರದಲ್ಲಿಯೂ ಪ್ರಧಾನ ಪಾತ್ರವನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡಿದ್ದರು. ಅದಾದ ನಂತರ ಮತ್ತೆ ಸತ್ಯಪ್ರಕಾಶ್ ಸಾರಥ್ಯದ ಎಕ್ಸ್ ಆಂಡ್ ರೇ ಸಿನಿಮಾ ಮೂಲಕ ಮತ್ತೆ ನಾಯಮಕನಾಗಿ ಗಮನ ಸೆಳೆದುಕೊಂಡಿದ್ದಾರೆ.

ಕಣ್ಣಾಮುಚ್ಚೆ ಕಾಡೇಗೂಡೆ ಎಂಬ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದ ಅಥರ್ವ ನಾನ್‌ವೆಜ್ ಅಂತೊಂದು ಚಿತ್ರದಲ್ಲಿಯೂ ನಟಿಸಿದ್ದಾರೆ. ಆ ಸಿನಿಮಾ ಮುಂದಿನ ತಿಂಗಳು ತೆರೆಗಾಣುವ ಸಾಧ್ಯತೆಗಳಿದ್ದಾವೆ. ಇದೀಗ ತುಳು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳಲಿರುವ ಚಿತ್ರಕ್ಕಾಗಿ ತಯಾರಿ ಆರಂಭವಾಗಿದೆ. ವಿಶೇಷವೆಂದರೆ, ಪೃಥ್ವಿ ಅಂಬಾರ್ ಆ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಮೂಲತಃ ಆರ್ಕಿಟೆಕ್ಟ್ ಆಗಿರುವ ಅಥರ್ವ ಪಾಲಿಗೆ ಮೊದಲು ಸಿನಿಮಾ ಮೋಹ ಶುರುವಾದದ್ದು ಮೋಹನ್ ಲಾಲ್ ಅಭಿನಯದ ಸಿನಿಮಾ ಮೂಲಕ. ಅದರೊಂದಿಗೆ ಸಿನಿಮಾ ಸೆಳೆತಕ್ಕೆ ಬಿದ್ದಿದ್ದ ಅಥರ್ವ, ಕಾಲೇಜು ದಿನಗಳಲ್ಲಿ ತಮ್ಮ ಮಿತಿಯಲ್ಲಿಯೇ ಒಂದಷ್ಟು ತಯಾರಿ, ಪ್ರಯೋಗಗಳನ್ನು ಮಾಡಿದ್ದರು. ಕಡೆಗೂ ಕನಸಿನ ಹಾದಿಯಲ್ಲಿ ಕಾಲೂರಿ ನಿಂತಿರುವ ಅವರೀಗ ಕನ್ನಡ ಮತ್ತು ತುಳುವಿನಲ್ಲಿ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ…

The post atharva prakash: ತುಳು-ಕನ್ನಡದಲ್ಲಿ ಅಥರ್ವ ಪ್ರಕಾಶ್ ಸಿನಿಮಾ ಯಾನ! appeared first on Cini Shodha.

rock raghu: ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನ ಪ್ರತಿಭೆ!
ಕೆಲ ಮಂದಿ ಸಿನಿಮಾ ಧ್ಯಾನವನ್ನು ಆತ್ಮದಂತೆ ಹಚ್ಚಿಕೊಂಡು ತಾವಂದುಕೊಂಡ ಬಗೆಯಲ್ಲಿ ಅದನ್ನು ನನಸು ಮಾಡಿಕೊಂಡ ಉದಾಹರಣೆಗಳಿದ್ದಾವೆ. ಇನ್ನೂ ಕೆಲವರನ್ನು ಸಿನಿಮಾವೆಂಬ ಮಾಯೆಯೇ ತಾನೇತಾನಾಗಿ ತೆಕ್ಕೆಗಪ್ಪಿಕೊಳ್ಳುತ್ತೆ. ಹಾಗೊಂದು ಅಪ್ಪುಗೆ ಸಿಕ್ಕಾದ ನಂತರ ಬಲು ಆಸ್ಥೆಯಿಂದ ಮುಂದಡಿ ಇಟ್ಟವರನೇಕರು ನಿರ್ದೇಶಕರಾಗಿ, ನಟರಾಗಿ, ನಾನಾ ವಿಭಾಗಗಳಲ್ಲಿ ಮಿಂಚಿದ ವಿಪುಲ ಉದಾಹರಣೆಗಳಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವವರು ಮಲೆಮಹದೇಶ್ವರ ಸ್ವಾಮಿಯ ಬಿಳಿಗಿರಿರಂಗನ ಬೆಟ್ಟಗಳ ತಪ್ಪಲಿನ ಪ್ರತಿಭೆ ರಘು. ಇದೀಗ ಥರ ಥರದ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗ ಮತ್ತು ಸಿನಿಮಾ ಒಪ್ರೇಮಿಗಳಿಗೆ ರಾಕ್ ರಘು ಅಂತಲೇ ಪರಿಚಿತರಾಗಿರುವ ಇವರು, ದುನಿಯಾ ವಿಜಯ್ ಅಭಿನಯದ ಸಲಗ, ಭೀಮದಂಥಾ ಸಿನಿಮಾಗಳ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ. ಒಂದಷ್ಟು ಯಶಸ್ವೀ ಧಾರಾವಾಹಿಗಳಲ್ಲಿ ನಟಿಸುವ ಮೂಲಕವೂ ಮನೆ ಮಾತಾಗಿದ್ದಾರೆ.

ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಪ್ರಾಕೃತಿಕ ದೈವೀಕ ವಾತಾವರಣದಲ್ಲಿ ಬೆಳೆದವರು ರಾಕ್ ರಘು. ಆರಂಭದಿಂದಲೂ ಸಿನಿಮಾ ಬಗೆಗೊಂದು ಸಹಜವಾದ ಆಕರ್ಷಣೆಯಿಟ್ಟುಕೊಂಡಿದ್ದ ರಘು ಪಾಲಿಗೆ ನಟನಾಗಬೇಕೆಂಬ ಆಸೆಯೇನೂ ಇರಲಿಲ್ಲ. ಬೆಟ್ಟದ ಇಕ್ಕೆಲದಲ್ಲಿ ತಲೆಮಾರುಗಳ ಹಿಂದಿನಿಂದಲೂ ಅವರ ಅಸ್ತಿತ್ವವಿತ್ತು. ಅಲ್ಲಿಯೇ ಒಂದು ಸಣ್ಣ ಹೊಟೇಲು ಒಂದಿಡೀ ರಘು ಕುಟುಂಬದ ಜೀವನಾಧಾರವಾಗಿತ್ತು. ಅದನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಈತನ ಬದುಕಿನಲ್ಲಿ ಅನಿರೀಕ್ಷಿತ ಅವಘಡವೊಂದು ನಡೆದದ್ದು ೨೦೧೩ರಲ್ಲಿ. ಅದಾಗ ತಾನೇ ಹೊಸತಾಗಿ ಕಾರು ತೆಗೆದುಕೊಂಡಿದ್ದ ರಘು ಭೀಕರ ಅಪಘಾತಕ್ಕೀಡಾಗಿದ್ದರು. ಗಂಭೀರವಾಗಿ ಗಾಯಗೊಂಡ ಕಾರಣದಿಂದ ಒಂದು ವರ್ಷಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದರು.

ಹಾಗೆ ಅಪಘಾತಕ್ಕೀಡಾಗಿ ಹಾಸಿಗೆಗೆ ಒರಗಿದ್ದ ರಘು ಪಾಲಿಗಾಗ ಟಿವಿಯೇ ಜಗತ್ತು. ಆ ಕಾಲಕ್ಕೆ ಆಂಡ್ರಾಯ್ಡ್ ಫೋನುಗಳಾಗಲಿ, ಈಗಿನಂತೆ ಇಂಟರ್ನೆಟ್ ಆಗಲಿ ಅಷ್ಟಾಗಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಆ ಹಂತದಲ್ಲಿ ಹಲವಾರು ಸಿನಿಮಾಗಳನ್ನು ನೋಡುತ್ತಾ, ಹಾಸ್ಯ ನಟನೆಯತ್ತ ರಘು ಮನಸು ವಾಲಿಕೊಂಡಿತ್ತು. ಬುಲೆಟ್ ಪ್ರಕಾಶ್ ಥರದ ನಟರನ್ನು ನೋಡುತ್ತಾ, ತಾನೂ ಕೂಡಾ ಅದೇ ರೀತಿಯಲ್ಲಿ ಜನರನ್ನು ರಂ ಜಿಸಬೇಕೆಂಬ ಆಕಾಂಕ್ಷೆಯೊಂದು ರಘು ಮನಸಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ಸಾಮಾನ್ಯವಾಗಿ ಹೀಗೆ ಅನಾರೋಗ್ಯದಿಂದಲೋ, ಅಪಘಾತದಿಂದಲೋ ಹಾಸಿಗೆ ಹಿಡಿದ ಸಂದರ್ಭದಲ್ಲಿ ಉತ್ಕಟವಾಗಿ ಹಬ್ಬಿಕೊಳ್ಳುವ ಕನಸೊಂದು ಪವಾಡ ಸದೃಶವಾಗಿ ಹಾಸಿಗೆಯಿಂದ ಎದ್ದು ಕೂರುವಂತೆ ಮಾಡಿಬಿಡೋದಿದೆ. ರಘು ಕೂಡಾ ನಟನಾಗಬೇಕೆಂಬ ಕನಸಿನ ಕಸುವಿನೊಂದಿಗೆ ಆರು ತಿಂಗಳಿಗೆಲ್ಲ ಚೇತರಿಸಿಕೊಂಡು ಬಿಟ್ಟಿದ್ದರು.

ಹಾಗೆ ಚೇತರಿಸಿಕೊಂಡ ಬಳಿಕ ರಘು ನಟನಾಗುವ ಸಲುವಾಗಿ ಗಂಭೀರವಾಗಿ ಪ್ರಯತ್ನಿಸಲಾರಂಭಿಸಿದ್ದರು. ಇದೇ ಹೊತ್ತಿನಲ್ಲಿ ಬಿಆರ್ ಹಿಲ್ಸ್‌ನಲ್ಲಿ ರಾಹಿ ಅಂತೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಗೆಳೆಯರೋರ್ವರ ಕಡೆಯಿಂದ ಈ ವಿಚಾರ ತಿಳಿದ ರಘು ನಿರ್ದೇಶಕ ಗಿರೀಶ್ ಅವರನ್ನು ಭೇಟಿಯಾದಾಗ, ಅಚ್ಚರಿದಾಯಕವಾಗಿ ಆ ಸಿನಿಮಾದ ಹನಾಸ್ಯ ಪಾತ್ರವೊಂದು ಸಿಕ್ಕಿಬಿಟ್ಟಿತ್ತು. ಅದು ನಟನಾಗಿ ರಘು ಪಾಲಿನ ಮೊದಲ ಹೆಜ್ಜೆ. ಆ ನಂತರ ನಿರ್ದೇಶಕ ಮಹೇಶ್ ಸುಖಧರೆ ಬಿಆರ್ ಹಿಲ್ಸ್‌ನ ಐಬಿಗೆ ಬಂದಿದ್ದಾಗ ರಘು ಅವರನ್ನು ಸಂಧಿಸಿ ಅವಕಾಶ ಕೇಳಿದ್ದರಂತೆ. ಆ ಹೊತ್ತಿನಲ್ಲಿ ಉಘೇ ಉಘೇ ಮಾದಪ್ಪ ಎಂಬ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದ ಸುಖಧರೆ ಅದರಲ್ಲೊಂದು ಪಾತ್ರದಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು. ಆ ನಂತರ ಮಹಾದೇವಿ ಎಂಬ ಧಾರಾವಾಹಿಯಲ್ಲಿಯೂ ಒಂದೊಳ್ಳೆ ಪಾತ್ರವೇ ಸಿಕ್ಕಿತ್ತು.

ಅದಾದ ಬಳಿಕ ನಟ ದುನಿಯಾ ವಿಜಯ್ ಅದೊಂದು ಸಲ ಕುಟುಂಬ ಸಮೇತರಾಗಿ ಬಿಆರ್ ಹಿಲ್ಸ್‌ಗೆ ಬಂ ದುಳಿದಿದ್ದರು. ಅವರನ್ನು ಭೇಟಿಯಾದ ರಘುಗೆ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕೊಡೋದಾಗಿ ವಿಜಯ್ ಅಭಯ ಕೊಟ್ಟಿದ್ದರು. ಅದಕ್ಕನುಸಾರವಾಗಿ ಸಲಗ ಚಿತ್ರದಲ್ಲೊಂದು ಪುಟ್ಟ ಪಾತ್ರ ರಘುಗೆ ಸಿಕ್ಕಿತ್ತು. ಆ ನಂತರ ಭೀಮ ಚಿತ್ರದಲ್ಲಿ ಸದಾ ನಾಯಕನ ಜೊತೆಗಿರುವ ಮಹತ್ವದ ಪಾತ್ರದ ಮೂಲಕ ರಾಕ್ ರಘು ಮಿಂಚಿದ್ದರು. ಆ ಸಿನಿಮಾದಲ್ಲಿ ನಟನೆ ಮಾತ್ರವಲ್ಲದೆ, ನಿರ್ದೇಶನ ಸೇರಿದಂತೆ ಎಲ್ಲದರಲ್ಲಿಯೂ ಅನುಭವ ಗಿಟ್ಟಿಸಿಕೊಳ್ಳುವ ಅವಕಾಶವನ್ನು ದುನಿಯಾ ವಿಜಯ್ ಕಲ್ಪಿಸಿದ್ದರು. ಆ ಬಳಿಕ ಪ್ರಸಿದ್ಧ ಕೃಷ್ಣ ನಿರ್ದೇಶನದ, ಕನ್ನಡತಿ ಖ್ಯಾತಿಯ ಕಿರಣ್ ರಾಜ್ ನಾಯಕನಾಗಿ ನಟಿಸಿದ್ದ ಭರ್ಜರಿ ಗಂಡು ಚಿತ್ರದಲ್ಲಿಯೂ ರಘು ನಟಿಸಿದ್ದರು.

ಸದ್ಯ ಅದೇ ಕಿರಣ್ ರಾಜ್ ನಟಿಸಿರುವ ಶೇರ್ ಚಿತ್ರದಲ್ಲೊಂದು ಮಹತ್ವದ ಪಾತ್ರದಲ್ಲಿ ರಾಕ್ ರಘು ನಟಿಸಿದ್ದಾರೆ. ಎಸ್ ಮಹೇಂದರ್ ನಿರ್ದೇಶನದ ಕೊಂಬುಡಕಿ ಚಿತ್ರದಲ್ಲೂ ಅವಕಾಶ ಗಿಟ್ಟಸಿಕೊಂಡಿದ್ದಾರೆ. ವಿಕ್ಕಿ ವರುಣ್ ನಟನೆಯ ಸೈಕೋ ಚಿತ್ರದಲ್ಲೂ ಅವರೊಂದು ಪಾತ್ರವಾಗಿದ್ದಾರೆ. ಅದಲ್ಲದೇ ಮಹೇಶ್ ಸುಖಧರೆ ನಿರ್ದೇಶನದ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲೂ ಅವರು ನಟಿಸಲಿದ್ದಾರೆ. ಬುರುಡೆ ಬಂಗ್ಲೆ ರಹಸ್ಯ ಬಿಡುಗಡೆಯ ಹಾದಿಯಲ್ಲಿದೆ. ಇನ್ನೇನು ಶುರುವಾಗಲಿರುವ ಗಿಚ್ಚಿಗಿಲಿಗಿಲಿ ಶೋನಲ್ಲಿ ಸಾಧು ಕೋಕಿಲಾ ಮಾರ್ಗದರ್ಶನದಲ್ಲಿ ಮಿಂಚಲು ರಾಕ್ ರಘು ಅಣಿಯಾಗಿದ್ದಾರೆ. ಸದ್ಯ ಆ ಶೋಗಾಗಿನ ತಯಾರಿ ಚಾಲ್ತಿಯಲ್ಲಿದೆ. ಒಟ್ಟಾರೆಯಾಗಿ, ಒಂದು ಅಪಘಾತದ ಆಘಾತದ ನಡುವೆ ನಟನ ಆಗೋ ಕನಸು ಕಂಡ ರಾಕ್ ರಘು ಇದೀಗ ಬಹುಬೇಡಿಕೆಯ ನಟರಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ!

The post rock raghu: ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನ ಪ್ರತಿಭೆ! appeared first on Cini Shodha.

Om shivam director alwin: ಕಂಗೆಟ್ಟು ನಿಂತಾಗಲೂ ಬೆಂಬಿಡದ ಸಿನಿಮಾ ಮಾಯೆ!
ಕ್ಷೇತ್ರ ಯಾವುದೇ ಆಗಿರಲಿ; ಅಡಿಗಡಿಗೆ ಆಘಾತವಾದಾಗಲೂ ಸಾವರಿಸಿಕೊಂಡು ಮುಂದುವರೆಯದಿದ್ದರೆ ಗೆಲುವು ದಕ್ಕುವುದಿಲ್ಲ. ಹಾಗೊಂದು ವೇಳೆ ವಾಮ ಮಾರ್ಗದಲ್ಲಿ ನುಸುಳಿ ದಕ್ಕಿಸಿಕೊಂಡರೂ ಅದರ ಆಯಸ್ಸು ಅಲ್ಪಕಾಲಿಕವಷ್ಟೆ. ಅಷ್ಟಕ್ಕೂ ಗೆಲುವೆಂಬುದು ಲೆಕ್ಕಕ್ಕಿಟ್ಟುಕೊಳ್ಳೋದು ಏಟು ಬಿದ್ದ ಮೇಲೂ ಎದ್ದು ನಿಂತು ಅವುಡುಗಚ್ಚಿ ಮುನ್ನಡೆಯೋರನ್ನಷ್ಟೆ. ಹುಡುಕಲು ನಿಂತರೆ ಸಿನಿಮಾ ರಂಗದಲ್ಲಿ ಹಾಗೆ ಏಳುಬೀಳಿನ ಹಾದಿಯಲ್ಲಿ ಮುಂದುವರೆದು ಕನಸು ನನಸಾಗಿಸಿಕೊಂಡ, ಗೆಲುವು ಕಂಡ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಇದೇ ಸೆಪ್ಟೆಂಬರ್ ೫ರಂದು ಬಿಡುಗಡೆಗೊಳ್ಳಲಿರುವ ಓಂ ಶಿವಂ ಚಿತ್ರದ ನಿರ್ದೇಶಕ ಅಲ್ವಿನ್ ಕೂಡಾ ಅದೇ ಸಾಲಿನಲ್ಲಿ ಸೇರಬಹುದಾದ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಹಲವಾರು ನಿರಾಸೆಗಳನ್ನು ನುಂಗಿಕೊಂಡೇ ಅಲ್ವಿನ್ ಒಂದು ಚೌಕಟ್ಟಿನಲ್ಲಿ ಚೆಂದದ ಚಿತ್ರವೊಂದನ್ನು ನಿರ್ದೇಶನ ಮಾಡಿರುವ ತೃಪ್ತ ಭಾವವನ್ನು ತನ್ನದಾಗಿಸಿಕೊಂಡಿದ್ದಾರೆ.

ಹಾಡೊಂದರ ಮೂಲಕ ಸದ್ದು ಮಾಡಿದ್ದ ಓಂ ಶಿವಂ ಚಿತ್ರ ಯಾವ ಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಅದೇ ಹಾದಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಒಂದಷ್ಟು ಬೆರಗಿನ ಅಂಶಗಳನ್ನು ಹರವಲು ಅಣಿಗೊಂಡಿದೆ. ಅಂದಹಾಗೆ, ನಿರ್ದೇಶಕ ಅಲ್ವಿನ್ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನಲ್ಲ. ಆದರೆ, ಹೊಸಬರ ತಂಡ ಕಟ್ಟಿಕೊಂಡು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಭಾರ್ಗವ್ ಕೃಷ್ಣ ಓಂ ಶಿವಂ ಮೂಲಕವೇ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕೃಷ್ಣ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೊಸ ಹುಡುಗಿ ವಿರಾನಿಕಾ ಶೆಟ್ಟಿ ನಾಯಕಿಯಾಗಿ ಜೊತೆಯಾಗಿದ್ದಾರೆ.

ಹೀಗೆ ಒಂದಷ್ಟು ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಈ ಸಿನಿಮಾ ಅಲ್ವಿನ್ ಅವರ ಜೀವಮಾನದ ಕನಸು. ಇದರ ಗೆಲುವಿನಿಂದಲೇ ಈ ಹಾದಿಯಗುಂಟ ಕಂಡುಂಡ ಒಂದಷ್ಟು ನೋವು, ನಿರಾಸೆಗಳ ಗಾಯ ಮಾಯುವ ಗಾಢ ನಿರೀಕ್ಷೆ ಅಲ್ವಿನ್‌ಗಿದ್ದಂತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ರಾಗಿಗುಡ್ಡದವರಾಗ ಅಲ್ವಿನ್ ಎಳವೆಯಿಂದಲೇ ರಂಗಭೂಮಿಯ ನಂಟು ಹೊಂದಿದ್ದವರು. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ಮಧುಸೂಧನ್ ಘಾಟ್ ಮತ್ತು ಲವ ಜಿಯಾರ್ ಅವರಿಂದ ರಂಗ ತರಬೇತಿ ಪಡೆದುಕೊಂಡಿದ್ದರು. ಕಾಲೇಜು ದಿನಗಳಲ್ಲಿಯೇ ನಾಟಕ ರಚಿಸಿ, ನಿರ್ದೇಶನ ಮಾಡಿ ನಟಿಸುವ ಮೂಲಕ ಗಮನ ಸೆಳೆದುಕೊಂಡಿದ್ದವರು ಅಲ್ವಿನ್.

ಆ ನಂತರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದಲೂ ಸೇರಿದಂತೆ ಆರು ನೂರಕ್ಕೂ ಹೆಚ್ಚಿನ ಬೀದಿ ನಾಟಕಗಳಲ್ಲಿ ಅಲ್ವಿನ್ ನಟಿಸಿದ್ದರು. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಈತ, ಪದವಿ ಪಡೆದುಕೊಂಡಾದ ನಂತರ ಒಂದೊಳ್ಳೆ ವೃತ್ತಿಯಲ್ಲಿ ಮುಂದುವರೆಯಬಹುದಾದ ವಿಪುಲ ಅವಕಾಶಗಳಿದ್ದವು. ಆದರೆ, ಆ ಕ್ಷಣದಲ್ಲಿ ಕೈಹಿಡಿದು ಸೆಳೆದುಕೊಂಡಿದ್ದು ಸಿನಿಮಾ ಕನಸು. ಅದರ ಸೆಳವಿಗೆ ಸಿಕ್ಕ ಅಲ್ವಿನ್ ಬ್ಯಾಗೇರಿಸಿಕೊಂಡು ಊರು ಬಿಟ್ಟು ಸೀದಾ ಗಾಂಧಿನಗರದ ಗಲ್ಲಿಗೆ ಬಂದು ನಿಂತಾಗಲೇ ಬದುಕಿನ ಮತ್ತೊಂದು ಮಗ್ಗುಲಿನ ವಾಸ್ತವದರ್ಶನವಾಗಲಾರಂಭಿಸಿತ್ತು. ಅವರ ಒಂದಷ್ಟು ರಾತ್ರಿಗಳು ಪಾರ್ಕುಗಳಲ್ಲಿ ಕಳೆದಿದ್ದವು. ಅದೆಷ್ಟೋ ಮುಂಜಾವುಗಳು ಸಾರ್ವಜನಿಕ ಶೌಚಾಲಯಗಳಲ್ಲಿ ತೆರೆದುಕೊಂಡಿದ್ದವು. ಮತ್ತೊಂದಷ್ಟು ವರ್ಷಗಳು ಯಾರದ್ದೋ ರೂಮುಗಳಲ್ಲಿ ಮುದುರಿಕೊಂಡಿದ್ದವು.

ಇಷ್ಟೆಲ್ಲ ಆಗುವ ಹೊತ್ತಿಗೆ ಅಲ್ವಿನ್ ಒಂದಷ್ಟು ಸೀರಿಯಲ್ಲಿಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ, ಸಾಕಷ್ಟು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಪಳಗಿಕೊಂಡಿದ್ದರು. ಆ ಹಂತದಲ್ಲಿಯೇ ನಿರ್ದೇಶನವೇ ತನ್ನ ಭವಿಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದ ಅಲ್ವಿನ್ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅದರಲ್ಲೊಂದು ಬಿಡುಗಡೆಗೊಂಡರೆ, ಮತ್ತೊಂದು ಎಲ್ಲ ಚೆಂದಗಿದ್ದರೂ ಬಿಡುಗಡೆ ಭಾಗ್ಯ ಸಿಗದ ಆಘಾತ ಕಾಡಿತ್ತು. ಈಗಲೂ ಬುಡಕಟ್ಟು ಸಮುದಾಯದ ಹೆಣ್ಣು ಜೀವಗಳನ್ನು ಕಾಡುತ್ತಿರುವ ಅನಿಷ್ಠ ಪದ್ಧತಿಯೊಂದರ ಸುತ್ತಾ ಮತ್ತೊಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಾಮಾನ್ಯವಾಗಿ ಓರ್ವ ನಿರ್ದೇಶಕನಾಗಿ ಸಿನಿಮಾಗಳಿಗೆ ಹಿನ್ನಡೆ ಉಂಟಾದರೆ ಅದರ ಸುತ್ತಾ ನಾನಾ ರೂಮರುಗಳೇಳುತ್ತವೆ. ವೃತ್ತಿ ಬದುಕಿಗೆ ಹೊಡೆತವೂ ಬೀಳುತ್ತದೆ. ಅಂಥಾ ಎಲ್ಲ ಆಘಾತ, ಅವಮಾನಗಳನ್ನು ದಾಟಿಕೊಂಡ ಅಲ್ವಿನ್ ಪಾಲಿಗೆ ವರವಾಗಿ ಸಿಕ್ಕ ಚಿತ್ರ ಓಂ ಶಿವಂ!

ಕೆ.ಎನ್ ಕೃಷ್ಣ ಅವರಿಗೆ ಅಲ್ವಿನ್ ಕಥೆ ಹೇಳಿದಾಗಲೇ ಅವರು ಖುಷಿಗೊಂಡಿದ್ದರಂತೆ. ಆ ಹಂತದಲ್ಲಿಯೇ ಕೃಷ್ಣರ ಪುತ್ರ ಭಾರ್ಗವ್ ಈ ಕಥೆಯ ನಾಯಕನ ಪಾತ್ರಕ್ಕೆ ಒಗ್ಗುತ್ತಾರೆಂದು ಅಲ್ವಿನ್‌ಗೆ ಅನ್ನಿಸಿತ್ತಂತೆ. ಅದಾಗಲೇ ಸರ್ವ ತಯಾರಿಗಳನ್ನು ಮುಗಿಸಿಕೊಂಡು ಒಂದೊಳ್ಳೆ ಅವಕಾಶಕ್ಕಾಗಿ ಕಾದಿದ್ದ ಭಾರ್ಗವ್‌ಗೂ ಈ ಕಥೆ ಇಷ್ಟವಾದದ್ದೇ ಓಂ ಶಿವಂಗೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು. ಆರಂಭದಲ್ಲಿಯೇ ಚೌಕಟ್ಟು ಹಾಕಿಕೊಂಡು, ಆ ಪರಿಧಿಯಲ್ಲಿ ಹೊಸತನದ ಸಿನಿಮಾವೊಂದನ್ನು ಕಟ್ಟಿ ಕೊಟ್ಟಿರುವ ತೃಪ್ತಿ ಅಲ್ವಿನ್ ಅವರಲ್ಲಿದೆ. ಗಾಢ ಪ್ರೇಮದ ಸುತ್ತ ಹಬ್ಬಿಕೊಂಡಿರುವ ಡ್ರಗ್ಸ್ ಜಾಲ ಮುಂತಾದ ವಾಸ್ತವಿಕ ಅಂಶಗಳನ್ನು ಹೊಂದಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸಲಿದೆ ಎಂಬ ತುಂಬು ಭರವಸೆಯೂ ಅಲ್ವಿನ್‌ಗಿದೆ.

ಇದೇ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಲಿದೆ. ಇದೇ ತಿಂಗಳ ಇಪ್ಪತೈದರಂದು ಜಬರ್ದಸ್ತಾದ ಟ್ರೈಲರ್ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಆ ಮೂಲಕ ಒಟ್ಟಾರೆ ಚಿತ್ರದ ಆಂತರ್ಯದ ಚಿತ್ರಣ ಪ್ರೇಕ್ಷಕರನ್ನು ದಾಟಿಕೊಳ್ಳಲಿದೆ. ಇದು ಹೊಸಬರ ಚಿತ್ರ. ಇದರ ಹಿಂದೆ ಅಪ್ಪಟ ಸಿನಿಮಾ ವ್ಯಾಮೋಹಿಗಳ ಪರಿಶ್ರಮವಿದೆ. ಖುದ್ದು ನಿರ್ದೇಶಕ ಅಲ್ವಿನ್ ಇದುವರೆಗೂ ಸಾಕಷ್ಟು ಎಡರು ತೊಡರುಗಳನ್ನು ದಾಟಿ ಬಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಹಂತದಲ್ಲಿ ಸಿನಿಮಾ ರಂಗದ ಬಾಗಿಲು ಮುಚ್ಚಿದ ಸ್ಥಿತಿ ಎದುರಾದಾಗ, ಉಪನ್ಯಾಸಕರಾಗಿಯಾದರೂ ಬದುಕೋ ಅವಕಾಶ ಅವರ ಮುಂದಿತ್ತು. ಆದರೆ, ಅದರತ್ತ ಓಗೊಟ್ಟು ಸೇಫ್ ಝೋನಿನತ್ತ ವಾಲದಂತೆ ನೋಡಿಕೊಂಡಿದ್ದದ್ದು ಅವರೊಳಗೆ ಉತ್ಕಟವಾಗಿದ್ದ ಸಿನಿಮಾ ವ್ಯಾಮೋಹ. ಅಂಥಾ ದೃಢವಾದ ಹೆಜ್ಜೆಗಳ ಪ್ರತಿಫಲದಂತಿರುವ ಓಂ ಶಿವಂ ಚಿತ್ರ ತೆರೆಗಾಣಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ.

The post Om shivam director alwin: ಕಂಗೆಟ್ಟು ನಿಂತಾಗಲೂ ಬೆಂಬಿಡದ ಸಿನಿಮಾ ಮಾಯೆ! appeared first on Cini Shodha.

apayavide echarike movie: ನಟನಾಗಿ ಗಮನ ಸೆಳೆದ ಮಿಥುನ್ ತೀರ್ಥಹಳ್ಳಿ!
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ ಅಪಾಯವಿದೆ ಎಚ್ಚರಿಕೆ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಹಾರರ್ ಸಿನಿಮಾಗಳೆಂದರೆ ಬಲು ಪ್ರೀತಿ ಹೊಂದಿರುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ, ಆ ಜಾನರಿನ ಸಿದ್ಧಸೂತ್ರಗಳಾಚೆ ಹಬ್ಬಿಕೊಂಡಿರುವ ಈ ಸಿನಿಮಾ ಸಹಜವಾಗಿಯೇ ನೋಡುಗರನ್ನು ಸೆಳೆದುಕೊಂಡಿದೆ. ಈ ಸಿನಿಮಾ ಮೂಲಕವೇ ಹೊಸಾ ಪ್ರತಿಭೆಗಳೊಂದಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಸಾಲಿನಲ್ಲಿ ಗಾಬ್ರಿ ಅಂತೊಂದು ಮುಖ್ಯ ಪಾತ್ರವನ್ನು ನಿರ್ವಹಿಸಿರುವ ಮಿಥುನ್ ತೀರ್ಥಹಳ್ಳಿ ನಿರ್ವಹಿಸಿದ್ದಾರೆ. ಒಂದಷ್ಟು ಭಿನ್ನ ಚಹರೆಗಳನ್ನು ಹೊಂದಿರುವ ಆ ಪಾತ್ರವೀಗ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಒಂದು ಹಂತದಲ್ಲಿ ನಟನಾಗಬೇಕೆಂಬ ಕನಸು ಕಂಡು, ಆ ನಂತರ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್ ಪಾಲಿಗೆ ಅಪಾಯವಿದೆ ಚಿತ್ರ ತಿರುವು ನೀಡೋ ಲಕ್ಷಣಗಳಿದ್ದಾವೆ!

ಕಾಲೇಜು ದಿನಗಳಲ್ಲಿಯೇ ನಟನಾಗಬೇಕೆಂಬ ಕನಸನ್ನು ಸಾಕಿಕೊಂಡಿದ್ದವರು ಮಿಥುನ್. ಡಿಗ್ರಿ ವ್ಯಾಸಂಗದ ಸಮಯದಲ್ಲಿ ಅಚಾನಕ್ಕಾಗಿ ಅದಕ್ಕೊಂದು ವೇದಿಕೆ ಸಿಕ್ಕಿತ್ತು. ಆ ದಿನಗಳಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದ ಮಾಲ್ಗುಡಿ ಡೇಸ್ ಚಿತ್ರದ ಆಡಿಷನ್ ಕರೆಯಲಾಗಿತ್ತು. ಅದರಲ್ಲಿ ಭಾಗಿಯಾಗಿದ್ದ ಮಿಥುನ್ ಗೆ ರಾಜಣ್ಣ ಎಂಬ ಪಾತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಆ ಪಾತ್ರ ಪ್ರೇಕ್ಷರಿಗೂ ಹಿಡಿಸಿತ್ತು. ಆ ಬಳಿಕ ಸಿನಿಮಾ ರಂಗದಲ್ಲಿ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬ ಇರಾದೆಯಿಂದ ಬೆಂಗಳೂರಿಗೆ ಬಂದಿಳಿದಿದ್ದ ಮಿಥುನ್‌ಗೆ ವಾಸ್ತವವೆಂಬುದು ನಾನಾ ರೀತಿಯಲ್ಲಿ ದರ್ಶನ ಕೊಟ್ಟಿತ್ತು. ತೀರ್ಥಹಳ್ಳಿಯಲ್ಲಿರುವಾಗಲೇ ರಂಗಭೂಮಿಯ ನಂಟು ಹೊಂದಿದ್ದ ಮಿಥುನ್ ನಟನೆ, ನಿರ್ದೇಶನ ಸೇರಿದಂತೆ ನಾನಾ ವೀಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಅನುಭವವೇ ಕೈ ಹಿಡಿದೀತೆಂದುಕೊಂಡಿದ್ದ ಆತನಿಗೆ ಸಿನಿಮಾ, ಸೀರಿಯಲ್ ಜಗತ್ತಿನ ಬೇರೆ ಬೇರೆ ಮಾನದಂಡಗಳ ಅರಿವಾಗಿತ್ತು.

ಅನೇಕ ಸೀರಿಯಲ್, ಸಿನಿಮಾಗಳ ಆಡಿಷನ್ನುಗಳಲ್ಲಿ ಭಾಗಿಯಾದರೂ ಅದೇಕೋ ಅವಕಾಶವೆಂಬುಉದು ಕೈಗೆಟುಕದೆ ಸತಾಯಿಸಲಾರಂಭಿಸಿತ್ತು. ಆ ನಂತರ ನಿರ್ದೇಶನ ವಿಭಾಗದತ್ತ ಆಕರ್ಷಿತರಾದ ಮಿಥುನ್, ಯುಗದೋಳ್, ಡಿಸೆಂಬರ್ ೨೪ ಮುಂತಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೆ ವಿಕಲ್ಪ ಅನ್ನೋ ಸಿನಿಮಾದ ಭಾಗವಾಗಿದ್ದರು. ಹೀಗಿರುವಾಗಲೇ ಅಪಾಯವಿದೆ ಎಚ್ಚರಿಕೆ ಚಿತ್ರದ ಆಡಿಷನ್ ನಡೆಯುತ್ತಿರೋದನ್ನು ಮನಗಂಡ ಮಿಥುನ್ ಯಾವುದಕ್ಕೂ ಇರಲಿ ಅಂತ ಭಾಗಿಯಾಗಿದ್ದರು. ನಂತರ ಗಾಬ್ರಿ ಅನ್ನೋ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದರು. ಆ ನಂತರದ ಯಾನ ಮಿಥುನ್ ಪಾಲಿಗೆ ಚೆಂದದ ಅನುಭವಗಳನ್ನು ಕೊಡಮಾಡಿದೆ. ಯಾಕೆಂದರೆ, ಗಾಬ್ರಿ ಅನ್ನೋ ಪಾತ್ರಕ್ಕಾಗಿ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಎಂಟು ತಿಂಗಳ ಕಾಲ ರಿಹರ್ಸಲ್ ನಡೆಸಿದ್ದರಂತೆ. ಹಾಗೆ ಪಳಗಿಕೊಂಡಿದ್ದರಿಂದಲೇ ಗಾಬ್ರಿಒ ಎಂಬ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಾಧ್ಯವಾಗಿದೆ ಎಂಬ ಭಾವ ಮಿಥುನ್ ರದ್ದು.

ಹೀಗೆ ನಟನಾಗೋ ಕನಸಿನ ಮೊದಲ ಹೆಜ್ಜೆಯಲ್ಲಿಯೇ ಮಿಥುನ್ ಗೆ ಆಶಾದಾಯಕ ಪ್ರತಿಕ್ರಿಯೆಗಳು ಸಿಕ್ಕಿವೆ. ಆದರೆ ಕಷ್ಟಕಾಲದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟ ನಿರ್ದೇಶನ ವಿಭಾಗವೇ ಅವರ ಪಾಲಿನ ಮೊದಲ ಆಧ್ಯತೆ. ಮುಂದಿನ ದಿನಗಳಲ್ಲಿ ನಟನೆ ಮತ್ತು ನಿರ್ದೇಶನಗಳೆರಡನ್ನೂ ಸರಿದೂಗಿಸಿಕೊಂಡು ಹೋಗುವ ನಿರ್ಧಾರ ಅವರದ್ದಿದ್ದಂತಿದೆ. ಒಂದು ಯಶಸ್ಸಿನ ಆವೇಗಕ್ಕೊಳಗಾಗದೆ, ಅತ್ಯಂತ ಸಮಚಿತ್ತದಿಂದ ನಿರ್ಧಾರ ತಳೆಯಲು ಮಿಥುನ್ ಗೆ ಸಾಧ್ಯವಾದದ್ದರ ಹಿಂದೆ ಅವರೇ ಕಂಡುಂಡ ಕಷ್ಟಗಳ ಕಿಸುರಿದೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ಬೇರೆ ದಾರಿ ಕಾಣದೆ ಗೆಳೆಯನ ಜೊತೆ ಲಾಡ್ಜಿನಲ್ಲಿ ಕೆಲಸಕ್ಕಿದ್ದುಕೊಂಡೇ ಅವಕಾಶಗಳಿಗಾಗಿ ಅರಸುವ ಸಂದರ್ಭವೂ ಬಂದೊದಗಿತ್ತು.

ಹೀಗೆ ನಾನಾ ಕೆಲಸಗಳನ್ನು ಮಾಡುತ್ತಲೇ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಬದುಕು ಸಲೀಸಾಗಿರಲಿಲ್ಲ. ಕೆಲವೊಂದು ಅವಕಾಶಗಳು ಸಿಕ್ಕ ಸಂದರ್ಭದಲ್ಲಿ ಜೊಮ್ಯಾಟೋದಂಥಾ ಡೆಲಿವರಿ ಕಸುಬು ಮಾಡುತ್ತಲೇ ಜೀವನ ನಡೆಸಿದ ಕಷ್ಟದ ದಿನಗಳನ್ನೂ ಮಿಥುನ್ ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬದುಕು ಒಂದಷ್ಟು ಸಹ್ಯವಾದ ಭಾವ ಅವರಲ್ಲಿದೆ. ಅಪಾಯವಿದೆ ಎಚ್ಚರಿಕೆ ಚಿತ್ರವಂತೂ ಈತನ ಪಾಲಿಗೆ ಆಕ್ಸಿಜನ್ನಿನಂಥಾ ಸಿನಿಮಾ. ಇದರ ಗ್ರಾಬ್ರಿ ಎಂಬ ಪಾತ್ರದ ಮೂಲಕವೇ ಮತ್ತೊಂದಷ್ಟು ಅವಕಾಶಗಳು ಸಿಕ್ಕರೂ ಅಚ್ಚರಿಯೇನಿಲ್ಲ. ಹೀಗೆ ಒಂದು ಸಿನಿಮಾ ಒಂದಷ್ಟು ಯಶ ಕಂಡರೆ ಅದರ ಭಾಗವಾಗಿದ್ದವರ ಬದುಕು ಹಸನಾಗುತ್ತೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರದ ಭೂಮಿಕೆಯಲ್ಲಿಯೂ ಅಂಥಾದ್ದೊಂದು ಚಮತ್ಕಾರ ನಡೆಯಲಾರಂಭಿಸಿದೆ!

The post apayavide echarike movie: ನಟನಾಗಿ ಗಮನ ಸೆಳೆದ ಮಿಥುನ್ ತೀರ್ಥಹಳ್ಳಿ! appeared first on Cini Shodha.

apayavide echarike movie: ಅಪಾಯವಿದೆ ಎಚ್ಚರಿಕೆ ಬಗ್ಗೆ ನಿರ್ದೇಶಕ ತೆರೆದಿಟ್ಟ ಅಚ್ಚರಿ!
ಹೊಸಾ ವರ್ಷದ ಶುರುವಾತಿನಲ್ಲಿಯೇ ಹೊಸಬರ ಹಂಗಾಮಾ ಶುರುವಾಗಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಅಪಾಯವಿದೆ ಎಚ್ಚರಿಕೆ ಚಿತ್ರಕ್ಕೆ ಸಿಗುತ್ತಿರುವ ಪ್ರೇಕ್ಷಕರ ಮೆಚ್ಚುಗೆ ಮತ್ತು ಅದರ ಫಲವಾಗಿಯೇ ಸಾಧ್ಯವಾಗಿರುವ ಯಶಸ್ವೀ ಪ್ರದರ್ಶನಗಳ ಮೂಲಕ ಗೆಲುವಿನ ಶುಭ ಸೂಚನೆಗಳು ಢಾಳಾಗಿಯೇ ಗೋಚರಿಸಲಾರಂಭಿಸಿವೆ. ಹಾರರ್ ಥ್ರಿಲ್ಲರ್ ಜಾನರಿನ ಸಿದ್ಧ ಸೂತ್ರಗಳನ್ನು ಮೀರಿಕೊಳ್ಳುವ ಉಮೇದಿನೊಂದಿಗೆ ರೂಪುಗೊಂಡಿರುವ ಚಿತ್ರ ಅಪಾಯವಿದೆ ಎಚ್ಚರಿಕೆ. ಒಟ್ಟಾರೆ ಕಥೆ, ಕಾಡಿನ ಗರ್ಭದ ಸಹಜ ದೃಶ್ಯವೈಭವ ಹಾಗೂ ಎಲ್ಲಿಯೂ ವಿಚಲಿತವಾಗದಂತೆ ನೋಡಿಕೊಳ್ಳುವ ಬಿಗುವಿನ ನಿರೂಪಣೆಯ ಮೂಲಕ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಹೀಗೆ ಹಬ್ಬಿಕೊಂಡ ಸದಭಿಪ್ರಾಯದಿಂದಲೇ ಚಿತ್ರಮಂದಿರ ತುಂಬಿಕೊಳ್ಳಲಾರಂಭಿಸಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಪ್ರಥಮ ಹೆಜ್ಜೆಯಲ್ಲಿಯೇ ಗೆದ್ದ ಖುಷಿಯೊಂದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿಗೆ ಇಡಿಯಾಗಿ ದಕ್ಕಿದೆ.

ಯಾವುದೇ ಸಿನಿಮಾ ತೆರೆಗಂಡಾಗಲೂ ಪ್ರೇಕ್ಷಕರ ಮುಂದೆ ಗರಿಬಿಚ್ಚಿಕೊಳ್ಳೋ ದೃಷ್ಯಗಳ ಹಿಂದೆ ಹತ್ತಾರು ವರ್ಷಗಳ ಶ್ರಮ, ಕನಸುಗಳಿರುತ್ತವೆ. ಸಾಕಷ್ಟು ಹತಾಶೆ, ಸೋಲು, ಬಿಕ್ಕಳಿಕೆಗಳೂ ಇದ್ದೇ ಇರುತ್ತವೆ. ಈಗ್ಗೆ ದಶಕಗಳಿಂದೀಚೆಗೆ ಕನ್ನಡ ಚಿತ್ರರಂಗದ ಭಾಗವಾಗಿ, ಹತ್ತಾರು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅಭಿಜಿತ್ ತೀರ್ಥಹಳ್ಳಿ ಕೂಡಾ ಅದೆಲ್ಲವನ್ನೂ ದಾಟಿಕೊಂಡು ಬಂದಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಧ್ಯಾನ ಹೊಂದಿದ್ದ ಅಭಿಜಿತ್ ಪಾಲಿಗೆ ನೀನಾಸಂ ವತಿಯಿಂದ ತೀರ್ಥಹಳ್ಳಿ ಸೀಮೆಯ್ಲ್ಲಿ ನಡೆಯುತ್ತಿದ್ದ ರಂಗ ಶಿಬಿರಗಳು ವರವಾಗಿ ಸಿಕ್ಕಿದ್ದವು. ಡಾ. ಮಾಲತಿ ಎಸ್.ಸಾಗರ ಅವರ ಮಾರ್ಗದರ್ಶನದಲ್ಲಿ ನಟನೆ ಮತ್ತು ನಿರ್ದೇಶನ ವಿಭಾದ ಬೆರಗುಗಳಿಗೆ ಒಡ್ಡಿಕೊಳ್ಳುವ ಅವಕಾಶವೂ ಸಿಕ್ಕಿತ್ತು.

ಹಾಗೆ ಕಾಲೇಜು ದಿನಮಾನದಲ್ಲಿಯೇ ನೀನಾಸಂ ರಂಗ ಶಿಬಿರಗಳಲ್ಲಿ ಭಾಗಿಯಾಗಿದ್ದ ಅಭಿಜಿತ್ ಪಾಲಿಗೆ ಓದು ಮುಗಿಯುವ ಹೊತ್ತಿಗೆಲ್ಲ ಗುರಿಯೆಂಬುದು ನಿಖರವಾಗಿತ್ತು. ಮಲೆನಾಡು ಭಾಗದ ಅಪ್ಪಟ ರೈತಾಪಿ ವರ್ಗದಿಂದ ಬಂದವರು ಅಭಿಜಿತ್. ಸಾಮಾನ್ಯವಾಗಿ ಮಧ್ಯಮ ವರ್ಗದಿಂದ ಬಂದವರನ್ನು ಅದೆಂಥಾದ್ದೇ ಕನಸು ಕಾಡುತ್ತಿದ್ದರೂ, ಅದೆಷ್ಟೇ ಪ್ರತಿಭೆ ಇದ್ದರೂ, ಬದುಕಿನ ಅನಿವಾರ್ಯತೆಗಳು ಮತ್ತೊಂದ್ಯಾವುದೋ ಗುರುತಿರದ ಗಮ್ಯದತ್ತ ಸೆಳೆದುಕೊಂಡು ಬಿಡೋದಿದೆ. ಆದರೆ, ಅಭಿಜಿತ್ ತೀರ್ಥಹಳ್ಳಿ ಅಂಥಾ ಅನಿವಾರ್ಯತೆಗಳನ್ನೆಲ್ಲ ಮೀರಿಕೊಂಡು, ಹತ್ತು ವರ್ಷಗಳ ಹಿಂದೆ ಹೋಗಿ ನಿಂತದ್ದು ಗಾಂಧಿನಗರವೆಂಬೋ ಮಾಯಾ ಜಗತ್ತಿಗೆ!

ಆ ಬಳಿಕ ಅವರ ಪಾಲಿಗೆ ಒಂದಷ್ಟು ಒಳ್ಳೆ ಅನುಭವಗಳು, ಮತ್ತೊಂದಷ್ಟು ವಾಸ್ತವಿಕ ದಿಗ್ಧರ್ಶನಗಳೆಲ್ಲ ಸಾಕಷ್ಟಾಗಿವೆ. ಇದೆಲ್ಲದರಾಚೆಗೆ ಪ್ರತಿಭೆಯನ್ನು ಹಿಂಡಿಕೊಳ್ಳುವ ಮಂದಿಯ ಸಂತೆಯಲ್ಲಿ ಸ್ವತಂತ್ರ ಅಸ್ತಿತ್ವ ಹುಡುಕಿಕೊಳ್ಳೋದೇ ಒಳ್ಳೆಯದ್ದೆಂಬ ಜ್ಞಾನೋದಯವೂ ಆಗಿತ್ತು. ಆ ಹೊತ್ತಿಗೆಲ್ಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಲೇ ಒಂದಷ್ಟು ಹಿಟ್ ಸೀರಿಯಲ್ ಟೈಟಲ್ ಟ್ರ್ಯಾಕ್ ಗಳಿಗೆ ಸಾಹಿತ್ಯ ಬರೆಯುವ ಮೂಲಕವೂ ಅಭಿಜಿತ್ ಗಮನ ಸೆಳೆದಿದ್ದರು. ಈ ನಡುವೆ ಸ್ವಂತ್ರರ ನಿರ್ದೇಶಕರಾಗಬೇಕೆಂಬ ನಿರ್ಧಾರಕ್ಕೆ ಬಂದಿದ್ದ ಅಭಿಜಿತ್ ಪಾಲಿಗೆ ಕದ್ದುಮುಚ್ಚಿ ಅಂತೊಂದು ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಆ ಸಿನಿಮಾವನ್ನು ವಿ.ಜಿ ಮಂಜುನಾಥ್ ಅತ್ಯಂತ ಪ್ರೀತಿಯಿಂದ, ನಾನಾ ಮಹತ್ವಾಕಾಂಕ್ಷೆಗಳನ್ನಿಟ್ಟುಕೊಂಡು ನಿರ್ಮಾಣ ಮಾಡಿದ್ದರು.

ಆದರೆ, ಆ ಸಿನಿಮಾ ಭೂಮಿಕೆಯಲ್ಲಿ ಒಂದಷ್ಟು ಪಲ್ಲಟಗಳು ಜರುಗಿದ್ದವು. ಅದರ ಫಲವಾಗಿ ಅಭಿಜಿತ್ ತೀರ್ಥಹಳ್ಳಿ ಹೆಗರಿಗೆ ಒಂದಷ್ಟು ಗುರುತರ ಜವಾಬ್ದಾರಿಗಳೂ ಕೂಡಾ ರವಾನೆಯಾಗಿದ್ದವು. ಕಡೆಗೂ ಅಂಥಾ ಜವಾಬ್ದಾರಿಗಳನ್ನೆಲ್ಲ ಮುಗಿಸಿಕೊಂಡಿದ್ದ ಅಭಿಜಿತ್ ಇನ್ನು ಅಚ್ಚುಕಟ್ಟಾದೊಂದು ಕಥೆ ರೆಡಿ ಮಾಡಿ ನಿರ್ದೇಶನಕ್ಕಿಳಿಯುವ ಅಚಲ ತೀರ್ಮಾನಕ್ಕೆ ಬಂದಿದ್ದರು. ಅದರ ಫಲವಾಗಿಯೇ ವರ್ಷಗಟ್ಟಲೆ ಶ್ರಮ ವಹಿಸಿ, ಚೆಂದದ್ದೊಂದು ಕಥೆ ಸಿದ್ಧಪಡಿಸಿಕೊಂಡಿದ್ದ ಅಭಿಜಿತ್ ಅದನ್ನು ನಿರ್ಮಾಪಕ ವಿ.ಜಿ ಮಂಜುನಾಥ್ ಅವರ ಮುಂದೆ ಹರವಿದ್ದರು. ಅದಾಗಲೇ ಕದ್ದುಮುಚ್ಚಿ ಸಿನಿಮಾ ಮೂಲಕ ನಾನಾ ಆಘಾತಗಳನ್ನುಉ ಕಂಡುಂಡಿದ್ದ ವಿ.ಜಿ ಮಂಜುನಾಥ್ ಹೆಚ್ಚೂ ಕಡಿಮೆ ಚಿತ್ರ ನಿರ್ಮಾಣದ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ರೋಸತ್ತು ಹೋಗಿದ್ದರು.

ಆದರೂ ಕದ್ದುಮುಚ್ಚಿ ಚಿತ್ರದ ಸಂದರ್ಭದಲ್ಲಿ ಅಭಿಜಿತ್ ರನ್ನು ಹತ್ತಿರದಿಂದ ಕಂಡು, ಅವರ ಪ್ರತಿಭೆಯ ಅರಿವಿದ್ದ ವಿ.ಜಿ ಮಂಜುನಾಥ್ ಪಾಲಿಗೆ ಸದರಿ ಕಥೆ ಇಷ್ಟವಾಗಿತ್ತು. ಮೊದಲ ಅನುಭವದಿಂದ ಅಗಾಧವಾದ ಪಾಠ ಕಲಿತಿದ್ದ ನಿರ್ಮಾಪಕರು ಆರಂಭದಿಂದ ಕಡೆಯವರೆಗೂ ಅತ್ಯಂತ ಆಸ್ತೆಯಿಂದ, ಎಚ್ಚರದಿಂದ ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ಪೊರೆದಿದ್ದಾರೆ. ಒಂದಿಡೀ ತಂಡವನ್ನು ಮುನ್ನಡೆಸಿದ್ದಾರೆ. ಆರಂಭದಲ್ಲಿ ಸಣ್ಣದೊಂದು ಬಜೆಟ್ಟಿನ ರೂಪುರೇಷೆಯೊಂದಿಗೆ ಈ ಸಿನಿಮಾ ಆರಂಭವಾಗಿತ್ತು. ಆ ನಂತರ ವಿ.ಜಿ ಮಂಜುನಾಥ್ ಅವರು ಬಜೆಟ್ಟಿನ ಮಿತಿಯಾಚೆಗೂ, ಯಾವುದಕ್ಕೂ ಕೊರತೆಯಾಗದಂತೆ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಾಗೆ ತನ್ನ ಮೇಲೆ ನಂಬಿಕೆಯಿಟ್ಟು, ಕಹಿ ಅನುಭವದಾಚೆಗೂ ಸಾಥ್ ಕೊಟ್ಟ ನಿರ್ಮಾಪಕರ ಬಗ್ಗೆ ಅಭಿಜಿತ್ ಗೆ ಅಚ್ಚರಿ ಬೆರೆತ ಅಭಿಮಾನವಿದೆ.

ಕಡೆಗೂ ಈ ಸಿನಿಮಾ ತನ್ನ ಕಸುವಿನ ಕಾರಣದಿಂದಲೇ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ. ಇದರೊಂದಿಗೆ ನಿರ್ಮಾಪಕ ವಿ.ಜಿ ಮಂಜುನಾಥ್ ಅವರೂ ಖುಷಿಗೊಂಡಿದ್ದಾರೆ. ಹೆಚ್ಚೂ ಕಡಿಮೆ ಹೊಸಬರೇ ತುಂಬಿಕೊಂಡಿರುವ ಒಂದಿಡೀ ತಂಡ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಸಂಭ್ರಮಿಸುತ್ತಿದೆ. ಕಥೆ, ಸಂಭಾಷಣೆ, ಹಾಡುಗಳು ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಅಪಾಯವಿದೆ ಎಚ್ಚರಿಕೆ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ. ಈ ಮೂಲಕ ನವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿಯ ಮೊದಲ ಹೆಜ್ಜೆಗೆ ಭರ್ಜರಿ ಆವೇಗ ಸಿಕ್ಕಿದೆ. ನಿರ್ದೇಶನದ ಕುಸುರಿಯನ್ನು ಸರಿಕಟ್ಟಾಗಿಯೇ ಅರ್ಥ ಮಾಡಿಕೊಂಡಿರೋ ಅಭಿಜಿತ್ ತೀರ್ಥಹಳ್ಳಿ ಇನ್ನೊಂದಷ್ಟು ಶ್ರಮ ಹಾಕಿದರೆ, ತಯಾರಿ ನಡೆಸಿದರೆ ಅವರ ಕಡೆಯಿಂದ ಮತ್ತೊಂದಷ್ಟುಉ ಬಗೆಯ ಸಿನಿಮಾಗಳನ್ನು ಖಮಡಿತವಾಗಿಯೂ ನಿರೀಕ್ಷಿಸಬಹುದು. ಹೀಗೊಂದು ನಂಬಿಕೆಯ ಭಾವ ಅಪಾಯವಿದೆ ಎಚ್ಚರಿಕೆ ಚಿತ್ರ ನೋಡಿದವರಲ್ಲೆಲ್ಲ ಮೂಡಿಕೊಂಡಿದೆ.

The post apayavide echarike movie: ಅಪಾಯವಿದೆ ಎಚ್ಚರಿಕೆ ಬಗ್ಗೆ ನಿರ್ದೇಶಕ ತೆರೆದಿಟ್ಟ ಅಚ್ಚರಿ! appeared first on Cini Shodha.

apayavide eccharike movie: ಉದ್ಯಮಿಯೋರ್ವರ ಅಪ್ಪಟ ಸಿನಿಮಾ ಧ್ಯಾನ!
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರ ಈ ವಾರ ಅಂದರೆ, ಫೆಬ್ರವರಿ 28ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ನೇರವಾಗಿ ಎದೆಗಿಳಿದು ಕಾಡುವಂಥಾ ಹಾಡು, ಕಾಡಿನ ಗರ್ಭದಲ್ಲಿ ಘಟಿಸುವ ಹಾರರ್ ಥ್ರಿಲ್ಲರ್ ಕಥೆನದ ಸುಳಿವು… ಯಶಸ್ವಿ ಚಿತ್ರವೊಂದರ ಆರಂಭಿಕ ಹೆಜ್ಜೆಗಳು ಹೇಗಿರುತ್ತವೋ, ಈ ಸಿನಿಮಾದ ಕದಲಿಕೆಗಳು ಕೂಡಾ ಅದಕ್ಕೆ ತಕ್ಕುದಾಗಿದೆ. ಹೀಗೆ ಹಬ್ಬಿಕೊಂಡಿರೋ ಸಕಾರಾತ್ಮಕ ವಾತಾವರಣದ ಹಿಂದೆ ಹೊಸಬರ ತಂಡವೊಂದರ ಅವಿರತವಾದ ಶ್ರಮವಿದೆ. ಆದರೆ, ಅದರ ಹಿಂದೆ ವಿ.ಕೆ ಮಂಜುನಾಥ್ ಎಂಬ ಅಪ್ಪಟ ಸಿನಿಮಾ ಪ್ರೇಮಿ ನಿರ್ಮಾಪಕರ ಸಾಥ್ ಕೂಡಾ ಪ್ರಧಾನವಾಗಿದೆ. ಯಶಸ್ವೀ ಉದ್ಯಮಿಯಾಗಿದ್ದುಕೊಂಡು, ವ್ಯವಹಾರದಾಚೆಗಿನ ಸಿನಿಮಾ ವ್ಯಾಮೋಹದಿಂದಲೇ ವಿ.ಕೆ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹೊಸಬರು ಸಿನಿಮಾ ರಂಗಕ್ಕೆ ಆಗಮಿಸೋದು ಚಿತ್ರರಂಗದ ಏಳಿಗೆಯ ದೃಷ್ಟಿಯಿಂದ ಅವಶ್ಯಕ ವಿದ್ಯಮಾನ. ಆದರೆ, ಹೊಸಾ ತಂಡವನ್ನು ನೆಚ್ಚಿಕೊಂಡು ಕೋಟಿ ಕೋಟಿ ಪಣಕ್ಕಿಡಲು ಹಿಂಜರಿಕೆ ಹೊಂದಿರುವವರೇ ಹೆಚ್ಚು. ಅಂಥವರ ನಡುವೆ ಕೆಲ ನಿರ್ಮಾಪಕರು ಲಾಭ ನಷ್ಟದ ಗೋಜಿಗೆ ಹೋಗದೆ ಹೊಸಬರನ್ನು ಬೆನ್ತಟ್ಟಿ ಪ್ರೋತ್ಸಾಹಿಸೋದೂ ಇದೆ. ನಿಸ್ಸಂದೇಹವಾಗಿ ಆ ಸಾಲಿಗೆ ಸೇರ್ಪಡೆಗೊಳ್ಳುವವರು ವಿ.ಜಿ ಮಂಜುನಾಥ್. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಗೆ ಸೇರುವ ವಡ್ಡರಹಳ್ಳಿಯವರು ವಿ.ಜಿ ಮಂಜುನಾಥ್. ಅಲ್ಲಿನ ಅಪ್ಪಟ ರೈತಾಪಿ ವರ್ಗದಲ್ಲಿ ಹುಟ್ಟಿ ಬೆಳೆದ ಅವರ ಪಾಲಿಗೆ ಆರಂಭದಿಂದಲೂ ಶಿಕ್ಷಕನಾಗಬೇಕೆಂಬ ಕನಸಿತ್ತು. ಕಷ್ಟಪಟ್ಟು ಓದಿ, ಆ ವೃತ್ತಿಯನ್ನು ದಕ್ಕಿಸಿಕೊಂಡ ಮೇಲೆ ಅವರು ಉದ್ಯಮದತ್ತ ಹೊರಳಿಕೊಂಡು ಯಶ ಕಂಡಿದ್ದೇ ಒಂದು ರೋಚಕ ಕಥನ.

ಹಾಗೆ ಯಶಸ್ವೀ ಉದ್ಯಮಿಯಾಗಿದ್ದ ವಿ.ಜಿ ಮಂಜುನಾಥ್ ಸಿನಿಮಾ ಕನಸಿನತ್ತ ಗಮನ ಹರಿಸಿದ್ದರು. ಅದರ ಫಲವಾಗಿಯೇ ವರ್ಷಾಂತರಗಳ ಹಿಂದೆ ಕದ್ದುಮುಚ್ಚಿ ಅಂತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಹಂತದಲ್ಲಿ ನಿರ್ಮಾಣ ಕ್ರೇತ್ರದ ಬಗ್ಗೆ ಹೆಚ್ಚೇನೂ ತಿಳುವಳಿಕೆ ಹೊಂದಿರದಿದ್ದ ವಿ.ಜಿ ಮಂಜುನಾಥ್ ಪಾಲಿಗೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುಉರಾಗಿದ್ದವು. ನಾನಾ ಸರ್ಕಸ್ಸು ನಡೆಸಿಬ ಬಳಿಕವೂ ಉಳಿದುಕೊಂಡಿದ್ದು ಕೆಟ್ಟ ಅನುಭವದ ಕಹಿ ಮಾತ್ರ. ಸಾಮಾನ್ಯವಾಗಿ ಆರಂಭದಲ್ಲಿ ಶ್ರಮ ಪಟ್ಟರೂ ಹಿನ್ನಡೆಯಾದಾಗ ಯಾರೇ ಆದರೂ ನಿರಾಸೆಗೀಡಾಗೋದು ಸಹಜ. ಓರ್ವ ಉದ್ಯಮಿಯಾಗಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಗೆದ್ದಿರುವ ವಿ.ಜಿ ಮಂಜುನಾಥ್ ಅವರ ಪಾಲಿಗೇನು ಅಡೆತಡೆ ಹೊಸತಲ್ಲ. ಆದರೂ, ನಿರ್ಮಾಪಕನಾಗಿ ಮೊದಲ ಸಿನಿಮಾದಲ್ಲಿಯೇ ಅವರು ಅಕ್ಷರಶಃ ಹೈರಾಣಾಗಿದ್ದರು.

ಇನ್ನು ಮುಂದೆ ಸಿನಿಮಾ ನಿರ್ಮಾಣದ ಸಹವಾಸವೇ ಬೇಡ ಎಂಬ ನಿರ್ಧಾರ ಮಾಡುವಷ್ಟರ ಮಟ್ಟಿಗವರು ಬೇಸತ್ತಿದ್ದರು. ಹಾಗೆ ಭ್ರಮನಿರಸನ ಹೊಂದಿದ್ದ ವಿ.ಜಿ ಮಂಜುನಾಥ್ ಅವರನ್ನು ಮತ್ತೆ ನಿರ್ಮಾಪಕನಾಗಿ ಅಖಾಡಕ್ಕಿಳಿಯುವಂತೆ ಮಾಡಿರೋದು ಅಪಾಯವಿದೆ ಎಚ್ಚರಿಕೆ ಚಿತ್ರದ ಚೆಂದದ ಕಥೆ ಎಂಬುದು ಅಸಲೀ ವಿಶೇಷ. ಯುವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಕದ್ದುಮುಚ್ಚಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಆ ನಂತರ ಉಂಟಾದ ಅನೇಕ ಪಲ್ಲಟಗಳಿಂದಾಗಿ ಹೆಚ್ಚಿನ ಜವಾಬ್ದಾರಿ ತಾನೇ ತಾನಾಗಿ ಅವರ ಹೆಗಲೇರಿಕೊಂಡಿತ್ತು. ಕಡೆಗೂ ಪ್ರಯಾಸ ಪಟ್ಟು ಆ ಸಿನಿಮಾ ತೆರೆಗಂಡ ನಂತರವೂ ಅಭಿಜಿತ್ ನಿರ್ಮಾಪಕ ವಿ.ಜಿ ಮಂಜುನಾಥ್ ಅವರ ಸಂಪರ್ಕದಲ್ಲಿದ್ದರು.

ಅದಾಗಲೇ ದಶಕಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಅಭಿಜಿತ್ ತೀರ್ಥಹಳ್ಳಿ ಸ್ವತಂತ್ರ ನಿರ್ದೇಶಕರಾಗುವ ಇರಾದೆಯಿಂದ ಒಂದು ಕಥೆ ರೆಡಿ ಮಾಡಿಕೊಂಡಿದ್ದರು. ಹಾರರ್ ಅಂಶ ಸೇರಿದಂತೆ ಅನೇಕ ವಿಚಾರಗಳು ಅಡಕವಾಗಿದ್ದ ಆ ಕಥೆಯನ್ನು ವಿ.ಕೆ ಮಂಜುನಾಥ್ ಅವರ ಮುಂದೆ ಹರವಿದಾಗ ಅವರೊಳಗೊಂದು ಭರವಸೆ ಮೂಡಿಕೊಂಡಿತ್ತು. ಹಾಗಂತ ಏಕಾಏಕಿ ನಿರ್ಮಾಣಕ್ಕೆ ಇಳಿದು ಬಿಡುವಂಥಾ ವಾತಾವರಣವೂ ಇರಲಿಲ್ಲ. ಯಾಕೆಂದರೆ, ಮೊದಲ ಸಿನಿಮಾದ ಮೂಲಕ ಆಗಿದ್ದ ಕಹಿ ಅನುಭವಗಳಿನ್ನೂ ಅವರನ್ನು ಕಾಡುತ್ತಿದ್ದವು. ಹೀಗೆ ಮೊದಲ ಹೆಜ್ಜೆಗಂಟಿಗ ಅನುಭವಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿದ್ದ ವಿ.ಜಿ ಮಂಜುನಾಥ್ ಅವರು ಹಂಣತ ಹಂತವಾಗಿ ಅಭಿಜಿತ್ ಅವರನ್ನು ಪರೀಕ್ಷೆಗೊಡ್ಡಿ, ಎಲ್ಲ ರೀತಿಯಿಂದಲೂ ಸಮಯ ಪಕ್ವವಾದ ನಂತರವಷ್ಟೇ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದ್ದರಂತೆ.

ಅಂದಹಾಗೆ, ಆರಂಭಿಕವಾಗಿ ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ಒಂದು ಸೀಮಿತ ಬಜೆಟ್ಟಿನಲ್ಲಿ ನಿರ್ಮಾಣ ಮಾಡಲು ವಿ.ಜಿ ಮಂಜುನಾಥ್ ತೀರ್ಮಾನಿಸಿದ್ದರಂತೆ. ಆದರೆ, ಚಿತ್ರೀಕರಣಕ್ಕಿಳಿದ ನಂತರ ಯಾವುದಕ್ಕೂ ಕಡಿಮೆಯಾಗದಂತೆ ನೋಡಿಕೊಂಡ ಅವರು, ಎಲ್ಲ ಕೋನಗಳಿಂದಲೂ ಈ ಸಿನಿಮಾ ಅಮೋಘವಾಗಿರುವಂತೆ ನೋಡಿಕೊಂಡಿದ್ದಾರೆ. ಕಡೆಗೂ ಆರಂಭಿಕ ಹೆಜ್ಜೆಗಳ ಕಹಿ ಮರೆತು, ಅಪಾಯವಿದೆ ಎಚ್ಚರಿಕೆ ಚಿತ್ರದ ಮೂಲಕ ಹೊಸಾ ಭರವಸೆಯೊಂದು ಅವರನ್ನು ಆವರಿಸಿಕೊಂಡಿದೆ. ದರಿ ಸಿನಿಮಾದೊಂದಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಗುವ ನಿರೀಕ್ಷೆಯೂ ಅವರಲ್ಲಿದೆ. ಸದ್ಯದ ವಾತಾವರಣವಂತೂ ಅದಕ್ಕೆ ಪೂರಕವಾಗಿದೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.

The post apayavide eccharike movie: ಉದ್ಯಮಿಯೋರ್ವರ ಅಪ್ಪಟ ಸಿನಿಮಾ ಧ್ಯಾನ! appeared first on Cini Shodha.

ello jogappa ninnaramane: ಎಲ್ಲೋ ಜೋಗಪ್ಪ ನಿನ್ನರಮನೆ ನಾಯಕ ಅಂಜನ್ ಅಂತರಾಳ!
ಈ ವರ್ಷದ ಆರಂಭದಲ್ಲಿಯೇ ಸಿನಿಮಾ ಪ್ರೇಮಿಗಳ ಪಾಲಿಗೆ ಸುಗ್ಗಿಯಾಗಬಹುದಾದ ವಾತಾವರಣವೊಂದು ಕಣ್ಣಡ ಚಿತ್ರರಂಗವನ್ನು ವ್ಯಾಪಿಸಿಕೊಂಡಿದೆ. ಯಾಕೆಂದರೆ, ಒಂದಕ್ಕೊಂದು ಭಿನ್ನವಾದ, ಹೊಸತನ ಹೊದ್ದುಕೊಂಡಿರುವಂಥಾ ಒಂದಷ್ಟು ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಆ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಹಯವದನ ನಿರ್ದೇಶನದ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಈ ವಾರ ಅಂದರೆ, ಫೆಬ್ರವರಿ ೨೧ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಮೂಲಕ ಅಂಜನ್ ನಾಗೇಂದ್ರ ನಾನಾ ಶೇಡುಗಳಿರುವ ಗಟ್ಟಿ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಅಣಿಗೊಂಡಿದ್ದಾರೆ. ಈ ಪಾತ್ರದ ಚಹರೆ, ಅದು ತನಗೊಲಿದ ಬಗೆ ಹಾಗೂ ಒಂದಿಡೀ ಸಿನಿಮಾ ತನ್ನೊಳಗೆ ಮೂಡಿಸಿರುವ ಭರವಸೆಯ ಬಗ್ಗೆ ಖುದ್ದು ಅಂಜನ್ ನಾಗೇಂದ್ರ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಕಂಬ್ಳಿ ಹುಳ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ಅಂಜನ್. ಮೊದಲ ಹೆಜ್ಜೆಯಲ್ಲಿಯೇ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸಿನಿಮಾದ ಭೂಮಿಕೆಯಲ್ಲಿಯೇ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ನಾಯಕನಾಗೋ ಅವಕಾಶ ಅವರ ಪಾಲಿಗೆ ಒಲಿದದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಎಳವೆಯಿಂದಲೇ ರಂಗಭೂಮಿಯ ನಂಟು ಹೊಂದಿದ್ದ ಅಂಜನ್ ಪಾಲಿಗೆ ನಟನಾಗಿ ಯಾವ ದಿಕ್ಕಿನತ್ತ ಸಾಗಬೇಕು, ಯಾವ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸ್ಪಷ್ಟವಾದ ಅಂದಾಜಿದೆ. ಕಂಬ್ಳಿ ಹುಳ ಚಿತ್ರದ ನಂತರ ಭಿನ್ನವಾದ ಪಾತ್ರದಲ್ಲಿ ನಟಿಸಬೇಕೆಂಬುದು ಅಂಜನ್ ಆಸೆಯಾಗಿತ್ತು. ಅದು ಕಂಬ್ಳಿಹುಳ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಾರಗೊಂಡು ಸ್ವತಃ ಅಂಜನ್ ರನ್ನೇ ಅಚ್ಚರಿಗೀಡು ಮಾಡಿತ್ತು.

ಇಂಥಾದ್ದೊಂದು ಮಿರ್‍ಯಾಕಲ್ ಸಂಭವಿಸಿದ್ದು ಕಂಬ್ಳಿಹುಳ ಚಿತ್ರದ ಪ್ರೀಮಿಯರ್ ಶೋ ಭೂಮಿಕೆಯಲ್ಲಿ. ಈ ಪ್ರೀಮಿಯರ್ ಶೋಗೆ ನಿರ್ದೇಶಕ ಹಯವದನ ಕೂಡಾ ಆಗಮಿಸಿದ್ದರು. ಸಿನಿಮಾ ನೋಡುತ್ತಲೇ ಹಯವದನ ಅದಾಗಲೇ ರೆಡಿ ಮಾಡಿಟ್ಟುಕೊಂಡಿದ್ದ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರಕ್ಕೆ ನಾಯಕನಾಗಲು ಅಂಜನ್ ನಾಗೇಂದ್ರ ಸೂಕ್ತ ಎಂಬಂಥಾ ತೀರ್ಮಾನಕ್ಕೆ ಬಂದಂತಿತ್ತು. ಈ ಕಾರಣದಿಂದಲೇ ಪ್ರೀಮಿಯರ್ ಶೋ ಮುಗಿಯುತ್ತಲೇ ಇಂಥಾದ್ದೊಂದು ಪ್ರಸ್ತಾವನೆಯನ್ನು ಅಂಜನ್ ಮುಂದಿಟ್ಟಿದ್ದರಂತೆ. ನಿಂತ ನಿಲುವಿನಲ್ಲಿಯೇ ಹಯವದನ ಒಂದೆಳೆ ಕಥೆ ಹೇಳಿದಾಕ್ಷಣವೇ ಅಂಜನ್ ನಾಗೇಂದ್ರ ಥ್ರಿಲ್ ಆಗಿ ಒಪ್ಪಿಗೆ ಸೂಚಿಸಿದ್ದರಂತೆ. ಹಾಗೆ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ಯಾನಕ್ಕೊಂದು ವಿದ್ಯುಕ್ತ ಚಾಲನೆ ಸಿಕ್ಕಂತಾಗಿತ್ತು.

ಆ ನಂತರ ಅತ್ಯಂತ ವೇಗವಾಗಿ ರಿಹರ್ಸಲ್ಲು ನಡೆದಿತ್ತು. ಅದರಲ್ಲಿ ಅಂಜನ್ ನಾಗೇಂದ್ರ ಅತ್ಯಂತ ಉತ್ಸಾಹದಿಂದಲೇ ಭಾಗಿಯಾಗಿದ್ದರು. ಅಷ್ಟೆಲ್ಲ ಆದ ನಂತರ ಅತ್ಯಂತ ವ್ಯವಸ್ಥಿತವಾಗಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಇಲ್ಲಿ ಬೆಂಗಳೂರಿನಿಂದ ಹಿಮಾಲಯದವರೆಗೂ ಹಬ್ಬಿಕೊಂಡಿರೋ ಕಥೆ ಇರೋದರಿಂದ, ಚಿತ್ರೀಕರಣದ ಪ್ರತೀ ಘಟ್ಟದಲ್ಲೂ ಬೇರೆಯದ್ದೇ ಜಗತ್ತೊಂದು ಕಣ್ಮುಂದೆ ಪ್ರತ್ಯಕ್ಷವಾದಂಥಾ ಅನುಭೂತಿ ದಕ್ಕಲಾರಂಭಿಸಿತ್ತು. ಬೇರೆ ಬೇರೆ ಭೂಬಾಗ, ಭಿನ್ನವಾದ ಸಂಸ್ಕೃತಿಗಳನ್ನು ಮನತುಂಬಿಕೊಳ್ಳುತ್ತಾ, ಒಂದಷ್ಟು ರಿಸ್ಕು ತೆಗೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾದ ಥ್ರಿಲ್ಲಿಂಗ್ ಅನುಭವವನ್ನು ಅಂಜನ್ ನಾಗೇಂದ್ರ ತಮ್ಮದಾಗಿಸಿಕೊಂಡಿದ್ದಾರೆ.

ಹೀಗೆ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ನಾಯಕನಾಗಿ ನಟಿಸಿರುವ ಅಂಜನ್ ನಾಗೇಂದ್ರ ಮೂಲತಃ ಹಾಸನದವರು. ಇವರ ತಂದೆ ನಾರಾಯಣ ಆ ಕಾಲಕ್ಕೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಈ ಕಾರಣದಿಂದ ಅಂಜನ್ ಪಾಲಿಗೆ ಪುಟ್ಟ ವಯಸ್ಸಿನಲ್ಲಿಯೇ ರಂಗಭೂಮಿಯ ವಾತಾವರಣದಲ್ಲಿ ಬೆರೆಯುವ ಅವಕಾಶ ಸಿಕ್ಕಿತ್ತು. ಆ ಹಂತದಿಂದಲೇ ನಟಿಸುತ್ತಾ ಬಂದಿದ್ದ ಅವರ ಪಾಲಿಗೆ ಸಿನಿಮಾ ನಟನಾಗಬೇಕೆಂಬ ಕನಸು ಕಾಲೇಜು ದಿನಗಳವರೆಗೂ ಇರಲೇ ಇಲ್ಲವಂತೆ. ಕಡೆಗೂ ಹಾಸನದಲ್ಲಿಯೇ ಇಂಜಿನಿಯರಿಂಗ್ ಮುಗಿಸಿದ್ದ ಅಂಜನ್ ನಾಗೇಂದ್ರ ಒಂದೆರಡು ವರ್ಷ ಸಿನಿಮಾ ರಂಗದಲ್ಲಿ ನಟನಾಗಲು ಪ್ರಯತ್ನಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದೇನೇ ಸರ್ಕಸ್ಸು ನಡೆಸಿದರೂ ಎರಡು ವರ್ಷಗಳಲ್ಲಿ ಯಾವ ಬೆಳವಣಿಗೆಗಳೂ ಸಾಧ್ಯವಾಗಿರಲಿಲ್ಲ.

ಆದರೆ, ಎರಡು ವರ್ಷಗಳ ನಂತರ ತಾನೇ ತಾನಾಗಿ ಕಂಬ್ಳಿಹುಳ ಚಿತ್ರದ ನಾಯಕನಾಗುವ ಅವಕಾಶ ಒಲಿದು ಬಂದಿತ್ತು. ಆ ಬಳಿಕ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ಅವಕಾಶವೂ ಹುಡುಕಿ ಬಂದಿತ್ತು. ಈಗ ಮತ್ತೊಂದಷ್ಟು ಅವಕಾಶಗಳೂ ಅಂಜನ್ ಮುಂದಿವೆ. ನಿಖರವಾಗಿ ಹೇಳಬೇಕೆಂದರೆ ಸಿನಿಮಾ ಕಲೆಯೆಂಬುದು ಅವರನ್ನು ಬರಸೆಳೆದು ಅಪ್ಪಿಕೊಂಡಿದೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ತನ್ನ ಮುಂದಿನ ಹಾದಿ ಮತ್ತಷ್ಟು ಸುಗಮವಾಗಲಿದೆ ಎಂಬ ಗಾಢ ನಂಬಿಕೆ ಅವರಲ್ಲಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನವಿರುವ ಈ ಚಿತ್ರ ತೆರೆಗಾಣಲು ದಿನಗಣನೆ ಶುರುವಾಗಿದೆ.

The post ello jogappa ninnaramane: ಎಲ್ಲೋ ಜೋಗಪ್ಪ ನಿನ್ನರಮನೆ ನಾಯಕ ಅಂಜನ್ ಅಂತರಾಳ! appeared first on Cini Shodha.