#saipallavi – Cini Shodha

Vijay Sethupathi: ಮಣಿರತ್ನಂ ಸಾರಥ್ಯಕ್ಕೆ ಸಾಯಿಪಲ್ಲವಿ ಸಾಥ್!
ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾತ ವಿಜಯ್ ಸೇತುಪತಿ. ಭಿನ್ನ ಕಥೆ, ಅದಕ್ಕೆ ತಕ್ಕುದಾದ ಪಾತ್ರಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ಸೇತುಪತಿ ಈಗ ಸೂಪರ್ ಸ್ಟಾರ್‌ಗಳನ್ನೇ ಸರಿಗಟ್ಟುವಂತೆ ಬೆಳೆದು ನಿಂತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೆರ್ಪು ಹಂಚಿದಂತೆ ಸಿಕ್ಕ ಸಿಕ್ಕವರಿಗೆಲ್ಲ ಕಾಲ್ ಶೀಟ್ ಕೊಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದೂ ಇದೆ. ಈ ವಿಚಾರದಲ್ಲಿ ಖುದ್ದು ಅಭಿಮಾನಿಗಳೇ ಅಸಮಾಧಾನಗೊಂಡಿದ್ದರು. ಅಂಥಾ ವಿಜಯ್ ಸೇತುಪತಿಯೀಗ ಧನುಷ್ ತಿರಸ್ಕರಿಸಿದ್ದ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ!

ಸಿನಿಮಾ ರಂಗದ ಪಡಸಾಲೆಯಲ್ಲಿ ಹಬ್ಬಿಕೊಂಡಿರೋ ಸುದ್ದಿಗಳ ಪ್ರಕಾರವಾಗಿ ಹೇಳೋದಾದರೆ, ವಿಜಯ್ ಸೇತುಪತಿ ಈಗಾಗಲೇ ಬೇರೆ ನಟರು ಒಲ್ಲೆ ಅಂದಿದ್ದ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲೊಂದಷ್ಟು ಗೆಲುವು ಕಂಡಿದ್ದೂ ಇದೆ. ಅದರ ಮುಂದುವರೆದ ಭಾಗವೆಂಬಂತೆ ಮಣಿರತ್ನಂ ನಿರ್ದೇಶನದ ಸಿನಿಮಾ ಒಂದನ್ನು ಸೇತುಪತಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಾಯಿಪಲ್ಲವಿ ನಾಯಕಿಯಾಗಿಯೂ ನಿಕ್ಕಿಯಾಗಿದ್ದಾರೆ. ಮಣಿರತ್ನಂ ಸಿನಿಮಾಗಳಲ್ಲಿ ನಟಿಸಲು ಸ್ಟಾರ್ ನಟರೇ ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗಿರುವಾಗ ಈ ಚಿತ್ರವನ್ನು ಧನುಷ್ ನಿರಾಕರಿಸಿದ್ದೇಕೆ ಎಂಬಂಥಾ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಧನುಷ್‌ಗೆ ಮಣಿರತ್ನಂ ಹೇಳಿದ್ದ ಕಥೆ ಇಷ್ಟವಾಗಿತ್ತಂತೆ. ಆದರೆ, ಸಂಭಾವನೆಯ ವಿಚಾರದಲ್ಲಿ ಹೊಂದಿಕೆಯಾಗದ ಕಾರಣದಿಂದ ಧನುಷ್ ಹಿಂದೆ ಸರಿದಿದ್ದರಂತೆ.

ಅಲ್ಲಿಗೆ ಮಣಿರತ್ನಂ ಸರಿಕಟ್ಟಾದೊಂದು ಕಥೆಯೊಂದಿಗೆ ಅಖಾಡಕ್ಕಿಳಿದಿರೋದು ಪಕ್ಕಾ ಆಗಿದೆ. ಇದು ಮಣಿರತ್ನಂ ಜೊತೆ ಸೇತುಪತಿಯ ಎರಡನೇ ಸಿನಿಮಾ. ತಾಜಾ ಸರಕುಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ಮಣಿರತ್ನಂ ಇತ್ತೀಚೆಗೆ ಒಂದಷ್ಟು ಎಡರು ತೊಡರುಗಳನ್ನು ಅನುಭವಿಸಿದ್ದಾರೆ. ಕಮಲ್ ಹಾಸನ್ ನಟನೆಯ ಥಗ್‌ಲೈಫ್ ಸೋಲಿನಿಂದ ಮಣಿರತ್ನಂ ಕಂಗಾಲಾಗಿದ್ದಾರೆ. ಆ ಸೋಲನ್ನು ದಾಟಿಕೊಳ್ಳುವ ಸಂಕಲ್ಪದೊಂದಿಗೆ ಈ ಕಥೆಯನ್ನು ಸಿದ್ಧ ಪಡಿಸಿಕೊಂಡಂತಿದೆ. ದೊಡ್ಡ ತಾರಾಗಣ ಹೊಂದಿರುವ, ಬಿಗ್ ಬಜೆಟ್ಟಿನ ಈ ಸಿನಿಮಾದ ನಾಯಕನಾಗಿ ಅನೇಕರ ಹೆಸರುಗಳು ತೇಲಿ ಬಂದಿದ್ದವು. ಕಡೆಗೂ ವಿಜಯ್ ಸೇತುಪತಿ ಆ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ.

keywords: vijay sethupathi, manirathnam, saipallavi

The post Vijay Sethupathi: ಮಣಿರತ್ನಂ ಸಾರಥ್ಯಕ್ಕೆ ಸಾಯಿಪಲ್ಲವಿ ಸಾಥ್! appeared first on Cini Shodha.

Sai Pallavi: ವಿಶಿಷ್ಟ ಪಾತ್ರಕ್ಕೆ ಅಣಿಗೊಳ್ಳುತ್ತಿರೋ ಸಾಯಿಪಲ್ಲವಿ!
ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ. ನಡೆದಾಡೋ ಸೌಂದರ್ಯವರ್ಧಕಗಳ ಜಾಹೀರಾತಿನಂತೆ ಕಾಣಿಸೋ ನಟಿಯ ನಡುವೆ, ತಾನಿರೋದೇ ಹೀಗೆಂಬಂತೆ ಸಹಜವಾಗಿ ಬದುಕೋದಕ್ಕೆ, ಹಾಗಿದ್ದುಕೊಂಡೇ ಒಳ್ಳೊಳ್ಳೆ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ನಿಜಕ್ಕೂ ಛಾತಿ ಬೇಕಾಗುತ್ತೆ. ಅಂಥಾ ಕಲೆಯನ್ನು ಕರಗತ ಮಾಡಿಕೊಂಡಿರುವಾಕೆ ಸಾಯಿಪಲ್ಲವಿ. ವಿಶೇಷವೆಂದರೆ, ಆಕೆಯ ಮನಃಸ್ಥಿತಿಗೆ ಅನುಗುಣವಾದ ದೊಡ್ಡ ಅವಕಾಶಗಳೇ ಸಾಯಿಪಲ್ಲವಿಯನ್ನು ಅಡಿಗಡಿಗೆ ಅರಸಿ ಬರುತ್ತಿವೆ!

ಇದೀಗ ಭಾರತೀಯ ಸಂಗೀತ ಕ್ಷೇತ್ರದ ಮೇರು ಗಾಯಕಿ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸೋ ಅವಕಾಶ ಸಾಯಿಪಲ್ಲವಿಗೆ ಕೂಡಿ ಬಂದಿದೆ. ಇಂಥಾ ಅಭಿಜಾತ ಕಲಾವಿದೆಯ ಜೀವನಾಧಾರಿಕ ಕಥೆಯಲ್ಲಿ ಪಾತ್ರವಾಗಬೇಕೆಂಬುದು ಅನೇಕ ನಟಿಯರ ಜೀವಮಾನದ ಕನಸು. ಅಂಥಾದ್ದೊಂದು ಅವಕಾಶ ತಾನೇ ತಾನಾಗಿ ಸಾಯಿಪಲ್ಲವಿಗೆ ಲಭಿಸಿದೆ. ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ರಾಮಾಯಣ ಚಿತ್ರದಲ್ಲಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಕಲ್ಕಿ ಸೀಕ್ವೆಲ್‌ನಲ್ಲಿ ಪ್ರಭಾಸ್ ಜೊತೆ ನಟಸಲೂ ತಯಾರಾಗಿದ್ದಾರೆ. ಇದೆಲ್ಲದರ ನಡುವಲ್ಲಿಯೇ ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಕಥನದ ಭಾಗವಾಗಲು ಸಾಯಿಪಲ್ಲವಿ ತಾಲೀಮು ಶುರುವಿಟ್ಟಿದ್ದಾರೆ.

Sai Pallavi: ಏಕ್ ದಿನ್ ಟೀಸರ್‌ನಲ್ಲಿ ಅಂಥಾದ್ದೇನಿದೆ?

ಈಗಾಗಲೇ ಚಿತ್ರತಂಡ ಸದರಿ ಸಿನಿಮಾದ ಪೂರ್ವಭಾವಿ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಸುಬ್ಬುಲಕ್ಷ್ಮಿ ಜೀವಿಸಿದ್ದ ಕಾಲಘಟ್ಟಕ್ಕೆ ಹೊಂದಿಕೆಯಾಗುವಂಥಾ ಕಾಸ್ಟ್ಯೂಮ್ ಡಿಸೈನಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಇದರ ಪಾತ್ರವನ್ನು ಆವಾಹಿಸಿಕೊಳ್ಳಲು ದಿನದಲ್ಲೊಂದಷ್ಟು ಸಮಯವನ್ನು ಸಾಯಿಪಲ್ಲವಿ ಮೀಸಲಿಟ್ಟಿದ್ದಾರಂತೆ. ಇದೀಗ ರಾಮಾಉಯಣ ಚಿತ್ರದತ್ತ ಗಮನ ಕೇಂದ್ರೀಕರಿಸಿರುವ ಈಕೆ, ಅದಾದ ನಂತರ ಕಲ್ಕಿ ಸೀಕ್ವೆಲ್ ಚಿತ್ರವನ್ನು ಮುಗಿಸಿಕೊಳ್ಳಬೇಕಿದೆ. ಕಲ್ಕಿಯ ನಂತರದಲ್ಲಿ ಸುಬ್ಬುಲಕ್ಷ್ಮಿ ಜೀವನಾಧಾರಿತ ಕಥನದ ಚಿತ್ರೀಕರಣ ಚಾಲೂ ಆಗಲಿದೆ. ಇದೆಲ್ಲದರ ಜೊತೆ ಜೊತೆಗೇ ಮತ್ತೊಂದಷ್ಟು ದೊಡ್ಡ ಪ್ರಾಜೆಕ್ಟುಗಳೂ ಸಾಯಿಪಲ್ಲವಿಗಾಗಿ ಕಾದು ಕೂತಿವೆ. ಒಟ್ಟಾರೆಯಾಗಿ ಮೊಡವೆ ಸುಂದರಿ ಪಾಲಿಗಿದು ವೃತ್ತಿಬದುಕಿನ ಪರ್ವಕಾಲ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ!

keywords: sai pallavi, bollywood, ms subbulakshmi biopic

The post Sai Pallavi: ವಿಶಿಷ್ಟ ಪಾತ್ರಕ್ಕೆ ಅಣಿಗೊಳ್ಳುತ್ತಿರೋ ಸಾಯಿಪಲ್ಲವಿ! appeared first on Cini Shodha.

saipallavi new movie updates: ರೊಮ್ಯಾಂಟಿಕ್ ಪಾತ್ರಕ್ಕೆ ಫಿದಾ ಆದ ಚೆಲುವೆ!
ಮೊಡವೆ ಸುಂದರಿ ಸಾಯಿಪಲ್ಲವಿ ಇದೀಗ ಬಹು ನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಗ್ಲಾಮರ್‌ಗೆ ಮಾತ್ರವೇ ಬಹಳಷ್ಟು ಒತ್ತು ಕೊಡುವವರೆಂಬ ನಂಬಿಕೆ ಇದೆ. ಇದು ಆ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವ ಅನಿವಾರ್ಯ ಸೂತ್ರವೂ ಹೌದು. ಆದರೆ, ದಕ್ಷಿಣ ಭಾರತೀಯ ಚಿತ್ರರಂಗ ಬಹು ಬೇಡಿಕೆಯ ನಟಿಯಾಗಿ, ಈಗ ಬಾಲಿವುಡ್ಡಿಗೂ ಹಾರಿರುವ ಸಾಯಿಪಲ್ಲವಿ ಮಾತ್ರ ತದ್ವಿರುದ್ಧ. ಇಂಥಾ ಸಾದಾ ಸೀದಾ ನಟಿ ರಾಮಾಯಣದ್ಲಿ ಸೀತೆಯಾಗಿ ನಟಿಸುತ್ತಿರೋದರ ಬಗ್ಗೆ ಬಹುತೇಕರಲ್ಲಿ ಹೆಮ್ಮೆ ಇದೆ. ಈ ರಾಮಾಯಣದ ನಡುವೆಯೇ ಸಾಯಿಪಲ್ಲವಿ ಮತ್ತೊಮ್ಮೆ ನಟ ನಾನಿಗೆ ಜೋಡಿಯಾಗಲಿರುವ ಸುದ್ದಿಯೊಂದು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ನ್ಯಾಚುರಲ್ ಸ್ಟಾರ್ ನಾನಿಯೊಂದಿಗೆ ಸಾಯಿಪಲ್ಲವಿ ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಆ ಮೂರು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲದೇ ಹೋದರೂ ಕೂಡಾ ನಾನಿ ಮತ್ತು ಸಾಯಿಪಲ್ಲವಿ ಜೋಡಿ ಪ್ರೇಕ್ಷಕರನ್ನು ಮೋಡಿಗೀಡು ಮಾಡಿತ್ತು. ಆ ಜೋಡಿಯನ್ನು ಮತ್ತೆ ಮತ್ತೆ ತೆರೆಯ ಮೇಲೆ ನೋಡುವ ಬಯಕೆ ಅದೆಷ್ಟೋ ಪ್ರೇಕ್ಷಕರಲ್ಲಿ ಮೂಡಿಕೊಳ್ಳುವಷ್ಟರ ಮಟ್ಟಿಗೆ ಆ ಕೆಮಿಸ್ಟ್ರಿ ಫಲಪ್ರದವಾಗಿತ್ತು. ಇಂಥಾ ಜೋಡಿ ಶೇಖರ್ ಕಮ್ಮುಲ ನಿರ್ದೇಶನದ ಚಿತ್ರದಲ್ಲಿ ಮತ್ತೆ ಒಂದುಗೂಡಲಿದೆ. ಭಿನ್ನ ಪ್ರೇಮ ಕಥಾನಕ ಹೊಂದಿರುವ ಈ ಸಿನಿಮಾದಲ್ಲಿ ಸಾಯಿಪಲ್ಲವಿ ಮತ್ತು ನಾನಿ ಮತ್ತೆ ಪ್ರೇಮಿಗಳಾಗಿ ಕಂಗೊಳಿಸಲಿದ್ದಾರೆ.

ಶೇಖರ್ ಕಮ್ಮಲ ಈಗಾಗಲೇ ಸಾಯಿಪಲ್ಲವಿ ನಟಿಸಿದ್ದ ಫಿದಾ ಮತ್ತು ಥಂಡೇಲ್ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ಶೇಖರ್ ಕಮ್ಮಲ ಬಾಕ್ಸಾಫೀಸಿನಲ್ಲಿ ಸಂಚಲನ ಮೂಡಿಸುವಂಥಾ ಕಂಟೆಂಟಿನೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಸಾಯಿ ಪಲ್ಲವಿ ರಾಮಾಯಾಣದಲ್ಲಿ ಸೀತೆಯಾಗುತ್ತಲೇ, ಅದರ ನಡುವಲ್ಲಿ ಬೇರೊಂದಷ್ಟು ಸಿನಿಮಾಗಳಲ್ಲಿಯೂ ಭಾಆಗಿಯಾಗಲು ನಿರ್ಧರಿಸಿದ್ದಾಳೆ. ಈಗಾಗಲೇ ಆಮಿರ್ ಖಾನ್ ಪುತ್ರನ ಜೊತೆ ಏಕ್ ದಿನ್ ಎಂಬ ಚಿತ್ರದಲ್ಲಿಯೂ ನಟಿಸಿದ್ದಾಳೆ. ಇದೆಲ್ಲವನ್ನೂ ನೋಡಿದರೆ, ಮುಂದಿನ ಇನ್ನೊಂದಷ್ಟು ವರ್ಷಗಳ ಕಾಲ ಭಾರತತೀಯ ಚಿತ್ರರಂಗದಲ್ಲಿ ಸಾಯಿಪಲ್ಲವಿಯ ಪರ್ವ ಚಾಲ್ತಿಯಲ್ಲಿರುವ ಲಕ್ಷಣಗಳು ಢಾಳಾಗಿಯೇ ಗೋಚರಿಸುತ್ತವೆ!

The post saipallavi new movie updates: ರೊಮ್ಯಾಂಟಿಕ್ ಪಾತ್ರಕ್ಕೆ ಫಿದಾ ಆದ ಚೆಲುವೆ! appeared first on Cini Shodha.

thandel movie: ಹೈಟೆಕ್ ಕಳ್ಳರ ವಿರುದ್ಧ ನಿರ್ಮಾಪಕರ ಸಮರ!
ಪ್ರಯಾಸ ಪಟ್ಟು ಸಿನಿಮಾ ಮಾಡಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಸುಳಿಯದೆ ಅದೆಷ್ಟೋ ಸಿನಿಮಾಗಳು ಉಸಿರು ಚೆಲ್ಲಿದ ಉದಾಹರಣೆಗಳಿದ್ದಾವೆ. ಈಗಿನ ವಾತಾವರಣದಲ್ಲಿ ಕನ್ನಡ ಮಾತ್ರವಲ್ಲದೇ ಪ್ರತೀ ಚಿತ್ರರಂಗಗಳಲ್ಲಿಯೂ ಸಿನಿಮಾವೊಂದನ್ನು ನೆಲೆಗಾಣಿಸಲು ನಾನಾ ಸವಾಲುಗಳಿದ್ದಾವೆ. ಒಂದು ವೇಳೆ ಎಲ್ಲವನ್ನೂ ಮೀರಿ ಚಿತ್ರವೊಂದು ಯಶಸ್ವೀ ಪ್ರದರ್ಶನ ಕಾಣುವ ಹೊತ್ತಿಗೆಲ್ಲ ಮಹಾನ್ ಗಂಡಾಂತರವೊಂದು ಥಿಯೇಟರಿನೊಳಗೇ ಮುಗುಮ್ಮಾಗಿ ಹೊಂಚಿ ಕೂತಿರುತ್ತೆ. ಅದು ಬಹುತೇಕ ಎಲ್ಲ ಭಾಷೆಗಳ ಚಿತ್ರಗಳನ್ನೂ ಕಾಡಿಸಿ ಕಂಗಾಲು ಮೂಡುತ್ತಿರೋ ಪೈರಸಿ ಪಿಡುಗು. ಈ ದಂಧೆಯೀಗ ತೆಲುಗು ಚಿತ್ರರಂಗವನ್ನು ಹಿಂಡಿ ಹಾಕುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಕಂಡು, ಒಂದಷ್ಟು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ನಾಗಚೈತನ್ಯನ ಥಂಡೇಲ್ ಚಿತ್ರಕ್ಕೂ ಪೈರಸಿ ಪಿಡುಗು ಕೊಡಬಾರದ ರೀತಿಯಲ್ಲಿ ಕಾಟ ಕೊಟ್ಟಿದೆ.

ಸಾಮಾನ್ಯವಾಗಿ, ಹೆಚ್ಚಿನ ಸಿನಿಮಾ ನಿರ್ಮಾತೃಗಳು ಈ ಪೈರಸಿ ಬಾಧೆಯ ವಿರುದ್ಧ ಕಾಲೂರಿ ನಿಂತು ಸೆಳೆಸಾಡುವ ಕಸುವುಉ ಹೊಂದಿರುವುದಿಲ್ಲ. ಅಷ್ಟಕ್ಕೂ ಈಗ ಪೈರಸಿ ಎಂಬುದು ಕುಂತಲ್ಲೇ ಕೋಟಿ ಬಾಚುವ ದಂಧೆಯಾಗಿ ಬಿಟ್ಟಿದೆ. ಅದೊಂದು ರೀತಿಯಲ್ಲಿ ಯಾರದ್ದೇ ಬೆವರಿನಲ್ಲಿ ಫಾಯಿದೆ ಗಿಟ್ಟಿಸಿಕೊಳ್ಳುವ ಹಡಬೆ ಕಸುಬು. ಇಂಥಾ ದಂಥೆಯ ವಿರುದ್ಧ ಇದೀಗ ಥಂಡೇಲ್ ಚಿತ್ರದ ನಿರ್ಮಾಪಕರು ಸಮರ ಸಾರಿದ್ದಾರೆ. ಥಂಡೇಲ್ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಪೈರಸಿ ಖದೀಮರು ಇದರ ಹೆಚ್‌ಡಿ ಆವೃತ್ತಿಯನ್ನ ಪೈರಸಿ ಮಾಡಿದ್ದರು. ಒಂದಷ್ಟು ಒಳ್ಳೆ ಅಭಿಪ್ರಾಯ ಮೂಡಿಕೊಂಡು ಸಂಜೆಯಾಗೋದರೊಳಗೆ ಥಂಡೇಲ್ ಚಿತ್ರದ ಪೈರೇಟೆಡ್ ವರ್ಷನ್ನು ಸಾಮಾಜಿಕ ಜಾಲತಾಣದಲ್ಲಿ ಇಟ್ಟಾಡಲಾರಂಭಿಸಿತ್ತು.

ಯಾವ ಸಿನಿಮಾ ನಿರ್ಮಾಪಕರು, ಚಿತ್ರತಂಡದವರ ಪಾಲಿಗಾದರೂ ಇದೊಂದು ಆಘಾತಕರ ಸಂಗತಿ. ಆರಂಭದಲ್ಲಿ ಇದರಿಂದ ತತ್ತರಿಸಿ ಹೋಗಿದ್ದ ನಿರ್ಮಾಪಕರು ಕಡೆಗೂ ಪತ್ರಿಕಾ ಗೋಷ್ಠಿಯ ಮೂಲಕ ಪೈರಸಿ ದಂಧೆಕೋರರ ವಿರುದ್ಧ ಸಿಡಿದೆದ್ದಿದ್ದಾರೆ. ಈ ದಂಧೆಯನ್ನು ಬೇರು ಸಮೇತ ಕಿತ್ತೆಸೆಯುವ ನಿರ್ಧಾರದೊಂದಿಗೆ ನಿರ್ಣಾಯಕವಾಗಿಯೇ ಸಮರ ಸಾರಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ನಿರ್ಮಾಪಕ ಅಲ್ಲು ಅರವಿಂದ್, ಸಿನಿಮಾ ಪೈರಸಿ ವರ್ಷನನ್ನು ಸಾಮಾಜಿಕ ಜಾಲತಾಣದ ನಾನಾ ಆಪ್ ಗಳಲ್ಲಿ ಅಡ್ಡಾಡಿಸಿದ ಅಡ್ಮಿನ್‌ಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಇಂಥಾ ಪೈರೇಟೆಡ್ ಸಿನಿಮಾಗಳು ಯಾವ ಮೂಲದಿಂದ ಬರುತ್ತವೆ, ಅವು ಯಾವ ಜಾಲದಿಂದ ಹಂಚಿಕೆಯಾಗುತ್ತವೆ, ಇದರ ಹಿಂದೆ ಯಾರ್‍ಯಾರಿದ್ದಾರೆಂದು ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆಯನ್ನೂ ಕೊಟ್ಟಿದ್ದಾರೆ.

ಮತ್ತೋರ್ವ ನಿರ್ಮಾಪಕ ಬನ್ನಿ ವಾಸ್ ಕೂಡಾ ಪೈರಸಿ ದಂಧೆಯನ್ನು ಖಂಡಿಸಿದ್ದಾರೆ. ಥಂಡೇಲ್ ಚಿತ್ರದ ಪೈರಸಿ ಆವೃತ್ತಿಯನ್ನು ಅಪಿಆರ್‌ಟಿಸಿ ಬಸ್ಸಿನಲ್ಲಿ ಭಹಿರಂಗವಾಗಿ ಪ್ರದರ್ಶಿಸಿದ ಘಟನೆಯನ್ನೂ ಕೂಡಾ ಅವರು ಖಂಡಿಸಿದ್ದಾರೆ. ಇಂಥಾ ಪೈರೇಟೆಡ್ ಸಿನಿಮಾಗಳನ್ನು ಸೆರೆ ಹಿಡಿದು ಹಂಚುವವರು ಮಾತ್ರವಲ್ಲ, ಡೌನ್ ಲೋಡ್ ಮಾಡಿಕೊಂಡು ನೋಡುವವರ ಮೇಲೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಥಂಡೇಲ್ ನಿರ್ಮಾಪಕರು ರವಾನಿಸಿದ್ದಾರೆ. ಈ ನಿಲುವಿನ ಬಗ್ಗೆ ಬೆಂಬಲದ ಮಾತುಗಳೇ ಕೇಳಿ ಬರುತ್ತಿವೆ. ಈ ಪೈರಸಿ ದಂಧೆಯ ಜಾಲದ ವಿರುದ್ಧ ಪ್ರತೀ ಭಾಷೆಗಳ ಚಿತ್ರರಂಗದ ಮಂದಿಯೂ ಇಂಥಾದ್ದೇ ನಿಲುವು ತಳೆಯದಿದ್ದರೆ ಖಂಡಿತಾ ಚಿತ್ರರಂಗಕ್ಕೆ ಉಳಿಗಾಲವಿರುವುದಿಲ್ಲ!

The post thandel movie: ಹೈಟೆಕ್ ಕಳ್ಳರ ವಿರುದ್ಧ ನಿರ್ಮಾಪಕರ ಸಮರ! appeared first on Cini Shodha.

sai pallavi: ಧನುಷ್-ಸೂರ್ಯ ಅಭಿಮಾನಿಗಳ ಮುನಿಸು!
ಕೇವಲ ಉಡುಗೆ ತೊಡುಗೆ ಮಾತ್ರವಲ್ಲ; ಸೀದಾ ಸಾದಾ ವ್ಯಕ್ತಿತ್ವದ ಮೂಲಕವೂ ಎಲ್ಲರ ಮನಗೆದ್ದಿದ್ದಾಕೆ ಸಾಯಿಪಲ್ಲವಿ. ಈ ಹುಡುಗಿ ತನ್ನದಾಗಿಸಕೊಳ್ಳುತ್ತಿರುವ ಅವಕಾಶಗಳು, ಆಕೆಗೆ ಒಲಿದು ಬರುತ್ತಿರುವ ಅಪರೂಪದ ಪಾತ್ರಗಳನ್ನು ಕಂಡು, ಓರಗೆಯ ನಟಿಯರೇ ಕರುಬುವಂತಾಗಿದೆ. ಇಂಥಾ ಸಾಯಿಪಲ್ಲವಿ ಅತ್ಯಂತ ಪ್ರೌಢಿಮೆಯಿಂದ ಸಾಮಾಜಿಕ ಪಲ್ಲಟಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳೋದಿದೆ. ಇತ್ತೀಚಿನ ದಿನಗಳಲ್ಲಿ ಅಂಥಾ ಅಭಿಪ್ರಾಯಗಳೇ ಒಂದಷ್ಟು ವಿರೋಧಾಭಾಸದ ಕಿಚ್ಚು ಹೊತ್ತಿಸಿದ್ದೂ ಇದೆ. ಇತ್ತೀಚೆಗಷ್ಟೇ ಅಮರನ್ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮವೊಂದರಲ್ಲಿ ಈಕೆ ಭಾರತೀಯ ಸೈನಿಕರ ಕುರಿತಾಗಿ ಆಡಿದ್ದೊಂದು ಮಾತು ಸಂಚಲನ ಸೃಷ್ಟಿಸಿತ್ತು. ಇದೀಗ ಅದೇ ಚಿತ್ರದ ಭೂಮಿಕೆಯಲ್ಲಿ ಮತ್ತೊಂದು ವಿವಾದದ ಇಕ್ಕಟ್ಟಿಗೆ ದೊಡ್ಡ ಮಟ್ಟದಲ್ಲಿ ಯಶವನ್ನೂ ಕಂಡಿದೆ ಸಾಯಿಪಲ್ಲವಿ ಸಿಲುಕಿದ್ದಾಳೆ!

ಅಮರನ್ ಚಿತ್ರ ಬಿಡುಗಡೆಗೊಂಡು ಅಷ್ಟದಿಕ್ಕುಗಳಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದು ತಮಿಳು ಚಿತ್ರರಂಗದಲ್ಲಿ ಸಾಯಿಪಲ್ಲವಿಗೆ ಸಿಕ್ಕ ಮತ್ತೊಂದು ಮಹಾ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅಮರನ್ ಚಿತ್ರದ ಸಮಾರಂಭದಲ್ಲಿ ಸಾಯಿ ಪಲ್ಲವಿ ಮನದುಂಬಿ ಮಾತಾಡಿದ್ದಾಳೆ. ಈ ಮಾತಿನ ಭರದಲ್ಲಿ ಬಿಟ್ಟು ಹೋದ ಒಂದೆರಡು ತಮಿಳು ಸಿನಿಮಾ ಹೆಸರುಗಳೇ ಇದೀಗ ಆಕೆಯ ವಿರುದ್ಧ ಅಸಹನೆ ಹಬೆಯಾಡುವಂತೆ ಮಾಡಿ ಬಿಟ್ಟಿವೆ. ಅಮರನ್ ಗೆಲುವನ್ನು ಸಂಭ್ರಮಿಸುವಾಗ ತನ್ನ ಈ ಹಿಂದಿನ ಸಿನಿಮಾಗಳಾದ ಮಾರಿ೨ ಹಾಗು ಸೂರ್ಯ ಜೊತೆಗಿನ ಚಿತ್ರಗಳ ಹೆಸರನ್ನು ಸಾಯಿಪಲ್ಲವಿ ಪ್ರಸ್ತಾಪಿಸಿಲ್ಲ. ಇದರ ವಿರುದ್ಧ ಧನುಷ್ ಮತ್ತು ಸೂರ್ಯನ ಅಭಿಮಾನಿಗಳು ಅಸಹನೆ ಹೊರ ಹಾಕುತ್ತಿದ್ದಾರೆ. ಹೊಸಾ ಗೆಲುವಿನ ಸಂದರ್ಭದಲ್ಲಿ ಹಳೇ ಹೆಜ್ಜೆಗಳನ್ನು ಮರೆಯೋದು ತಪ್ಪೆಂಬಂಥಾ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸಾಯಿಪಲ್ಲವಿ ಅದನ್ನು ಮರೆತಳೋ ಏನೋ ಗೊತ್ತಿಲ್ಲ; ವಿವಾದವಾಗಿರೋದಂತೂ ಸತ್ಯ. ಇದೆಲ್ಲದರಾಚೆ ನೋಡಿದರೆ, ಮೇಜರ್ ಮುಕುಂದನ್ ಜೀವನಾಧಾರಿತ ಅಮರನ್ ಚಿತ್ರದಲ್ಲಿನ ಸಾಯಿಪಲ್ಲವಿಯ ನಟನೆ ಭಾರೀ ಮೆಚ್ಚುಗೆ ಗಳಿಸಿಕೊಂಡಿದೆ. ಮೇಜರ್ ಮುಕುಂದನ್ ಮಡದಿಯ ಪಾತ್ರವನ್ನು ಈಕೆ ಆವಾಹಿಸಿಕೊಂಡ ರೀತಿ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿ ಬಿಟ್ಟಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾದಲ್ಲಿ ರೆಬೆಕಾ ವರ್ಗೀಸ್ ಆಗಿ ಕಾಣಿಸಿಕೊಂಡಿರೋ ಸಾಯಿಪಲ್ಲವಿ, ತಮಿಳು ಚಿತ್ರರಂಗದಲ್ಲಿ ಮತ್ತೊಂದು ಗೆಲುವಿನ ಮೈಲಿಗಲ್ಲು ನೆಟ್ಟಿದ್ದಾಳೆ. ಇದರ ಜೊತೆ ಜೊತೆಗೇ ಮತ್ತೊಂದಷ್ಟು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾಳೆ.

The post sai pallavi: ಧನುಷ್-ಸೂರ್ಯ ಅಭಿಮಾನಿಗಳ ಮುನಿಸು! appeared first on Cini Shodha.