rip – Cini Shodha

Rraju Thalikoti is No More: ಕಳಚಿಬಿತ್ತು ರಂಗಭೂಮಿ ನಕ್ಷತ್ರ!
ಕರ್ನಾಟಕದ ರಂಗಭೂಮಿಯ ಪಾಲಿನ ನಕ್ಷತ್ರಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಯಶವಂತ ಸರದೇಶಪಾಂಡೆಯ ಅಕಾಲಿಕ ನಿರ್ಗಮನದ ಸೂತಕ ಮಾಸುವ ಮನ್ನವೇ, ಮತ್ತೋರ್ವ ರಂಗಭೂಇ ಕಲಾವಿದ ರಾಜು ತಾಳಿಕೋಟಿಯವರನ್ನು ಹೃದಯಾಘಾತ ಬಲಿ ತೆಗೆದುಕೊಂಡಿದೆ. ಅತ್ಯಂತ ಕಡುಗಷ್ಟದಿಂದ ಮೇಲೆದ್ದು ಬಂದು, ಎಳವೆಯಲ್ಲಿಯೇ ನಾನಾ ಆಘೈಆತಗಳಿಗೆ ಎದೆಯೊಡ್ಡಿ ರಂಗಭೂಮಿ ಕಂಪೆನಿಯೊಂದರ ಮಾಲೀಕರಾಗಿದ್ದವರು ರಾಜು ತಾಳಿಕೋಟಿ. ತಮ್ಮದೇ ಶೈಲಿಯಲ್ಲಿ ನಗಿಸುತ್ತಾ ಬದುಕಿದ್ದ ಅವರೀಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ರಾಜು ತಾಳಿಕೋಟಿ ರಂಗಭೂಮಿಯಲ್ಲಿ ಮಾತ್ರವಲ್ಲದೇ ಸಿನಿಮಾ ರಂಗದಲ್ಲಿಯೂ ಹೆಸರುವಾಸಿಯಾಗಿದ್ದ ನಟ. ಇತ್ತೀಚಿನ ದಿನಗಳ್ಲ್ಲಿ ಅವರ ಆರೋಗ್ಯ ತುಸು ಹದಗೆಟ್ಟಿದೆ ಎಂಬ ಮಾತು ಆಪ್ತ ವಲಯದಲ್ಲಿ ಹರಿದಾಡುತ್ತಿತ್ತು. ಇದರಾಚೆಗೂ ಸಿನಿಮಾ ಅವಕಾಶಗಳು ವಿರಳವಾಗಿ ಅವರತ್ತ ಕೈ ಚಾಚುತ್ತಿದ್ದವು. ಇತ್ತೀಚೆಗಷ್ಟೇ ಅವಕಾಶವೊಂದು ಬಂದು ಸಿನಿಮಾ ಒಂದರ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದರು. ಆ ಸಂಬಂಧವಾಗಿಯೇ ಮಂಗಳೂರಿಗೆ ತೆರಳಿದ್ದ ರಾಜು ತಾಳಿಕೋಟಿಗೆ ನೆನ್ನೆ ರಾತ್ರಿ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು.

ವೈದ್ಯರು ನಿರಂತರವಾಗಿ ರಾಜು ತಾಳಿಕೋಟಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಇಂದು ಸಂಜೆಯ ಹೊತ್ತಿಗೆಲ್ಲ ರಾಜು ತಾಳಿಕೋಟಿ ಉಸಿರು ನಿಲ್ಲಿಸಿದ್ದಾರೆ. ಕಲಿಯುಗದ ಕುಡುಕ ಎಂಬ ಕ್ಯಾಸೆಟ್ ನಾಟಕದ ಮೂಲಕ ಹೆಸರಾಗಿದ್ದ ರಾಜು ತಾಳಿಕೋಟಿ ಓರ್ವ ರಂಗಕಮ ಇಯಾಗಿಯೂ ಸಾಹಸಿ. ತನ್ನ ಖಾಸಗಿ ಬದುಮಕಿನ ವ್ಯಸನಗಳಾಚೆಗೂ ನಾಟಕಗಳಿಗಾಗಿಯೇ ಮುಡಿಪಾದಂತೆ ಬಂದುಕಿದ್ದ ಅವರು, ಅನಿವಾರ್ಯತೆಗಳಿಂದಲೇ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ವಿಶಿಷ್ಟ ಮ್ಯಾನರಿಸಂ, ಮಾತಿನ ಶೈಲಿಯ ಮೂಲಕ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದರು. ಬಿಗ್ ಬಾಸ್‌ಗೂ ಸ್ಪರ್ಧಿಯಾಗಿಕ ಬರುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಇಂಥಾ ನಟ ಇನ್ನು ನೆನಪು ಮಾತ್ರ…

The post Rraju Thalikoti is No More: ಕಳಚಿಬಿತ್ತು ರಂಗಭೂಮಿ ನಕ್ಷತ್ರ! appeared first on Cini Shodha.

chandrashekhar siddi: ಕಾಡು ಹುಡುಗನ ಬದುಕಲ್ಲಿ ಘಟಿಸಿದ್ದು ಎಂಥಾ ದುರಂತ?
ಕನ್ನಡದ ರಿಯಾಲಿಟಿ ಶೋಗಳ ಬಗ್ಗೆ ಈಗ ದಶದಿಕ್ಕುಗಳಿಂದಲೂ ಅಪಸ್ವರಗಳು ಕೇಳಿ ಬರುತ್ತಿವೆ. ಅಲ್ಲೆಲ್ಲೋ ಕಾಡಿನ ಗರ್ಭದಲ್ಲಿದ್ದ ಹುಡುಗರನ್ನು ಹುಡುಕಿ ತಂದು, ಒಂದಷ್ಟು ಮೆರೆದಾಡಿಸಿ, ಎಲ್ಲ ಮುಗಿದ ಮೇಲೆ ಅನಾಥರನ್ನಾಗಿಸುವ ಖಯಾಲಿಯೊಂದು ದಶಕದ ಹಿಂದೆ ಶುರುವಾಗಿತ್ತು. ಅದರ ಘೋರ ಪರಿಣಾಮವೆಂಬಂತೆ ಬುಡಕಟ್ಟು ಹಾಡಿಯ ಹುಡುಗ ರಾಜೇಶ ಜೀವ ಚೆಲ್ಲಿದ್ದ. ಇದೀಗ ಕಾಮಿಡಿ ಕಿಲಾಡಿಗಳು ಶೋ ಮೂಲಕ ಹೆಸರಾಗಿದ್ದ ರಂಗಭೂಮಿ ಪ್ರತಿಭೆ ಚಂದ್ರಶೇಖರ್ ಸಿದ್ಧಿಯ ಬಲಿಯಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಮಾಹಿತಿ ಜಾಹೀರಾಗಿದೆ. ಹಾಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದೆ ಕೌಟುಂಬಿಕ ಕಾರಣಗಳೂ ಇರಬಹುದೆಂಬ ದಿಕ್ಕಿನಲ್ಲೀಗ ಚರ್ಚೆಗಳು ಶುರುವಾಗಿವೆ. ಆದರೆ, ಅದರ ಹಿಂದಿರೋ ನೆರಳು ಬಣ್ಣದ ಜಗತ್ತಿನ ಭ್ರಾಮಕ ಸುಳಿಗೆ ಸಿಕ್ಕಿ ನರಳಿದ ನಿಸ್ಸಹಾಯಕ ಮನಃಸ್ಥಿತಿ ಎಂಬುದು ಕಟು ವಾಸ್ತವ!

ಚಂದ್ರಶೇಖರ ಸಿದ್ಧಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ವಜ್ರಳ್ಳಿಯ ಚಿಮನಹಳ್ಳಿ ಎಂಬ ಪುಟ್ಟ ಊರಿನವನು. ಸಿದ್ಧಿ ಜನಾಂಗ ಆ ಭಾಗದಲ್ಲಿ ಕಾಡಿನೊಂದಿಗೆ ಬದುಕು ಹೊಸೆದುಕೊಂಡು ಬಂದಿದೆ. ಈಗ ಒಂದಷ್ಟು ರೂಪಾಂತರಗಳಾಗಿದ್ದರೂ ಕೂಡಾ ಆರ್ಥಿಕ ಸಂಕಷ್ಟ ಆ ಸಮುದಾಯವನ್ನು ಬಿಡದೇ ಕಾಡುತ್ತಿದೆ. ಅಂಥಾ ಕುಟುಂಬದಲ್ಲಿ ಜನಿಸಿದ್ದ ಚಂದ್ರಶೇಖರ ಸಿದ್ಧಿ ನೀನಾಸಂನಲ್ಲಿ ರಂಗ ತರಬೇತಿ ಪಡೆದುಕೊಂಡಿದ್ದ. ನಟನಾಗಿ ಹೆಸರು ಮಾಡುವ ಸಹಜವಾದ ಕನಸು ಹೊಂದಿದ್ದ ಆತನಿಗೆ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚುವ ಅವಕಾಶ ಸಿಕ್ಕಿತ್ತು. ಆ ಯಶಸ್ಸಿನ ಪ್ರಭೆಯಲ್ಲಿಯೇ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದ ಸಿದ್ಧಿಗೆ ನಟನಾಗಿ ನೆಲೆಗೊಳ್ಳುವ ಸವಾಲೆದುರಾಗಿತ್ತು.

ಸಾಮಾನ್ಯವಾಗಿ ಹೀಗೆ ಪ್ರಸಿದ್ಧಿ ಪಡೆದ ನಂತರ ಊರ ಕಡೆ ಸಹಜವಾಗಿಯೇ ಒಂದಷ್ಟು ಹವಾ ಸೃಷ್ಟಿಯಾಗುತ್ತೆ. ಅಂಥಾದ್ದರ ನಡುವೆ ಅವಕಾಶಗಳಿಲ್ಲದೆ, ಸೋತು ಹುಟ್ಟಿದೂರಿಗೆ ಹಿಂತಿರುಗೋದು ಒಂದು ರೀತಿಯ ನರಕ. ಅಂಥಾದ್ದೊಂದು ಯಾತನೆಯನ್ನ ಈ ಹುಡುಗ ಚಂದ್ರಶೇಖರ ಸಿದ್ಧಿ ಅನುಭವಿಸುವಂತಾಗಿತ್ತು. ಮದುವೆಯಾದದ್ದರಿಂದ ಕುಟುಂಬದ ಜವಾಬ್ದಾರಿಯೂ ಆತನ ಹೆಗಲೇರಿತ್ತು. ಊರ ಸಾಹುಕಾರರ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗೋದರ ಹೊರತಾಗಿ ಮತ್ಯಾವ ಆಯ್ಕೆಗಳೂ ಆತನ ಮುಂದಿರಲಿಲ್ಲ. ತಾನು ನಟನಾಗಿ ಪ್ರವರ್ಧಮಾನಕ್ಕೆ ಬರಲಾಗದ ಸಂಕಟ, ಅವಕಾಶಗಳಿಲ್ಲದ ಅವಮಾನ ಖಿನ್ನತೆಯಾಗಿ ಕೊಲ್ಲಲಾರಂಭಿಸಿತ್ತಾ? ಇದರ ಫಲವಾಗಿಗೆ ಮೊಳೆತುಕೊಂಡ ಕೌಟುಂಬಿಕ ಕಾಳಗವೂ ಸೇರಿಕೊಂಡು ಈ ಹುಡುಗನನ್ನು ಬಲಿ ಹಾಕಿರುವ ಸಾಧ್ಯತೆಗಳೇ ಹೆಚ್ಚು. ಖ್ಯಾತಿಯೆಂಬುದು ಎಷ್ಟು ಆಕರ್ಷಕವೋ, ಅಷ್ಟೇ ಕ್ರೂರವೂ ಹೌದು. ಈ ವಿಚಾರ ರಾಜೇಶನ ವಿಚಾರದಲ್ಲಿ ಸಾಬೀತಾಗಿತ್ತು. ಆ ಸೂತಕವೀಗ ಚಂದ್ರಶೇಖರ ಸಿದ್ಧಿಯ ನಿರ್ಗಮನದ ಮೂಲಕ ಮತ್ತೆ ಮರುಕಳಿಸಿದೆ!

The post chandrashekhar siddi: ಕಾಡು ಹುಡುಗನ ಬದುಕಲ್ಲಿ ಘಟಿಸಿದ್ದು ಎಂಥಾ ದುರಂತ? appeared first on Cini Shodha.

actor shreedhar: ಅದ್ಯಾಕೆ ಹೀಗೆ ಕಾಡಿಸಿತೋ ಬದುಕು?
ನಟನೆಯ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದ ಅನೇಕ ನಟ ನಟಿಯರು ಅನಾರೋಗ್ಯದಿಂದ ನರಳಿ ನಿರ್ಗಮಿಸಿದ ಅನೇಕ ಉದಾಹರಣೆಗಳಿದ್ದಾವೆ. ಇಲ್ಲಿ ಝಗಮಗಿಸೋ ಬೆಳಕಿನ ಮುಂದೆ ಹರಿಯೋ ಖೊಟ್ಟಿ ಕಣ್ಣೀರು, ಭ್ರಾಮಕ ಕಕ್ಕುಲಾತಿಗಳು ಒಬ್ಬಂಟಿಯಾಗಿ ಅಸಹಾಯಕರಾಗಿ ಮಲಗಿದ ಕಲಾವಿದರಿಗೆ ಸಿಗುವುದಿಲ್ಲ. ಹೀಗೆ ಹಠಾತ್ತನೆ ಅನಾರೋಗ್ಯಕ್ಕೀಡಾದ ಕಲಾವಿದರಿಗೆ ನೆರವಾಗೋ ಸಾಂಘಿಕ ಪ್ರಯತ್ನಗಳೂ ಕೂಡಾ ಕನ್ನಡದಲ್ಲಿಲ್ಲ. ಅದೆಲ್ಲದರ ಫಲವಾಗಿಯೇ ಕನ್ನಡ ಕಿರುತೆರೆ ಕಂಡ ಸ್ಫುರದ್ರೂಪಿ ನಟ ಶ್ರೀಧರ್ ನಾಯಕ್ ನೋವಿನ ಕುಲುಮೆಯಲ್ಲಿ ತಿಂಗಳುಗಟ್ಟಲೆ ನರಳಿ ನಿರ್ಗಮಿಸಿದ್ದಾರೆ. ಕೋಟಿ ಮನಸುಗಳ ಹಾರೈಕೆ, ಕೆಲವರ ನಿಸ್ವಾರ್ಥ ಸಹಾಯದಾಚೆಗೂ ಶ್ರೀಧರ್ ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸಿದ್ದಾರೆ.

ಶ್ರೀಧರ್ ಕಿರುತೆರೆ ಜಗತ್ತಿನ ಪಾಲಿಗೆ ಚಿರಪರಿಚಿತರಾಗಿದ್ದ ನಟ. ಸಿನಿಮಾ ರಂಗಕ್ಕೂ ಕೂಡಾ ಅವರು ಹೊಸಬರೇನಲ್ಲ. ವರ್ಷಗಟ್ಟಲೆ ಯಶಸ್ವಿಯಾಗಿ ಪ್ರಸಾರವಾಗಿದ್ದ ಪಾರು ಧಾರಾವಾಹಿಯ ಮೂಲಕ ಶ್ರೀಧರ್ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿದ್ದ ವಧು ಎಂಬ ಸೀರಿಕಯಲ್ಲಿನಲ್ಲಿಯೂ ಕೂಡಾ ಅವರಿಗೆ ಒಳ್ಳೆ ಪಾತ್ರವೇ ಸಿಕ್ಕಿತ್ತು. ಆದರೆ ವಿಧಿಯೆಂಬುದು ಈ ಸೀರಿಯಲ್ಲಿನ ಚಿತ್ರೀಕರಣದ ಸಂದರ್ಭದಲ್ಲಿಯೇ ಅವರನ್ನು ಕಾಡಿಸಿತ್ತು. ಒಂದು ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಇನ್ಫೆಕ್ಷನ್ ಅತ್ಯಂತ ವೇಗವಾಗಿ ಅವರ ಇಡೀ ದೇಹವನ್ನು ಆವರಿಸಿಕೊಂಡಿತ್ತು. ಅದೆಂಥಾ ರಕ್ಕಸ ಸ್ವರೂಪದ ಮಾರಿಯೆಂದರೆ, ಹದಿನೈದು ದಿನ ಕಳೆಯೋದರಳೊಗಾಗಿ ಶ್ರೀಧರ್ ಅವರ ದೇಹ ಕೃಶವಾಗಿತ್ತು. ಹೊಳೆಯೋ ಚರ್ಮ ಸಂಪೂರ್ಣವಾಗಿ ನಿಸ್ತೇಜಗೊಂಡು ಮೂಳೆಗಂಟಿಕೊಂಡಂತಾಗಿತ್ತು.

ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್ ಅದರ ವೆಚ್ಚ ಭರಿಸಲಾಗದೆ ಮತ್ತಷ್ಟು ಕುಗ್ಗಿ ಹೋಗಿದ್ದರು. ಯಾಕೆಂದರೆ, ಒಂದು ದಿನದ ಚಿಕಿತ್ಸೆಯ ಖರ್ಚು ಹದಿನೈದು ಸಾವಿರವಾಗಿತ್ತು. ಶ್ರೀಧರ್ ಕಡುಗಷ್ಟದಿಂದ ಬದುಕು ನಡೆಸುತ್ತಿದ್ದವರು. ಅವರಿಗೆ ಅದೆಷ್ಟೇ ಬೇಡಿಕೆ ಇದ್ದರೂ ಅಷ್ಟೊಂದು ಹಣ ಹೊಂದಿಸಲು ಶಕ್ತರಾಗಿರಲಿಲ್ಲ. ಉಳಿಸಿಕೊಂಡಿದ್ದ ಚೂರು ಪಾರು ಹಣವನ್ನ ಗೋರಿಕೊಂಡಿದ್ದ ಪತ್ನಿ ಪುಟ್ಟ ಮಗುವಿನ ಸಮೇತ ಬಿಟ್ಟು ನಡೆದಿದ್ದಳು. ಖಾಸಗಿ ಬದುಕಿನ ದುರಂತದಿಂದ ಕಂಗಾಲಾಗಿದ್ದರೂ ಮುಖದ ತುಂಬ ನಗು ತುಂಬಿಕೊಂಡಿದ್ದವರು ಶ್ರೀಧರ್. ಮಾನಸಿಕ ಆಘಾತವನ್ನು ಅವುಡುಗಚ್ಚಿ ಸಹಿಸಿಕೊಂಡಿದ್ದವರನ್ನು ದೈಹಿಕ ಬಾಧೆ ಹಿಂಡಿ ಹಾಕಿತ್ತು. ಕಡೆಗೂ ತಿಂಗಳುಗಟ್ಟಲೆ ನರಕ ಅನುಭವಿಸಿದ್ದ ಶ್ರೀಧರ್ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ… ಅವರ ಅಗಲಿಕೆಯಿಂದ ಕನ್ನಡದ ಕಿರುತೆರೆ ಮತ್ತು ಸಿನಿಮಾ ಜಗತ್ತು ಓರ್ವ ಪ್ರತಿಭಾನ್ವಿತ ಕಲಾವಿದ, ಸ್ನೇಹಶೀಲ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.

The post actor shreedhar: ಅದ್ಯಾಕೆ ಹೀಗೆ ಕಾಡಿಸಿತೋ ಬದುಕು? appeared first on Cini Shodha.

arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!
ಸಿನಿಮಾ ರಂಗದಲ್ಲಿ ಗೆಲುವಿನ ಪ್ರಭೆಯಲ್ಲಿ ಮಿಂದೆದ್ದವರ ಕಥೆಗಳ ಮರೆಯಲ್ಲಿಯೇ ನಾನಾ ಆಘಾತಗಳಿಂದ ನೊಂದೆದ್ದು ಹೋದವರ ದಂಡಿ ದಂಡಿ ಕಥೆಗಳಿವೆ. ಚಿತ್ರರಂಗಲ್ಲೇನಾದರೂ ಸಾಧಿಸಬೇಕೆಂಬ ಗುರಿಯನ್ನೇ ಬದುಕಾಗಿಸಿಕೊಂಡ ಎಷ್ಟೋ ಮಂದಿ ಗುರುತೇ ಇರದಂತೆ ಮರೆಯಾಗಿದ್ದಾರೆ. ಸಿನಿಮಾ ಕನಸಿಗಾಗಿ ಎಲ್ಲವನ್ನೂ ಕಳೆದುಕೊಂಡು, ಆ ಕೊರಗಿನಲ್ಲಿಯೇ ಜೀವ ಬಿಟ್ಟವರೂ ಇದ್ದಾರೆ. ಗಾಂಧಿನಗರದ ಗಲ್ಲಿಗುಂಟ ಇಂಥಾ ಎಂದೂ ಮಾಯದ ಅಗೋಚರ ಗಾಯಗಳ ಗುರುತುಗಳಿದ್ದಾವೆ. ಅದು ಝಗಮಗಿಸುವ ಬಣ್ಣದ ಜಗತ್ತಿನ ಕತ್ತಲ ಕಥನ. ಆದರೆ, ಈಗ ಹೇಳಹೊರಟಿರೋದು ಅದೆಲ್ಲವನ್ನೂ ಮೀರಿಕೊಂಡ ದುರಂತಗಾಥೆಯ ಬಗ್ಗೆ. ಇದರ ಕೇಂದ್ರಬಿಂದುವಾದ ಮೂವತ್ತೊಂದರ ಸ್ನೇಹಜೀವಿಯ ಜೀವಮಾನದ ಕನಸೊಂದು ಇನ್ನೇನು ನನಸಾಗೋದರಲ್ಲಿತ್ತು. ಎಂತೆಂಥಾದ್ದೋ ಸರ್ಕಸ್ಸು ನಡೆಸಿ ಸ್ವತಂತ್ರ ನಿರ್ದೇಶಕನಾಗಿ, ಸಿನಿಮಾವೊಂದನ್ನು ರೂಪಿಸಿದ್ದ ಆತ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಕನಸು ಕಂಡಿದ್ದರು. ವಿಪರ್ಯಾಸವೆಂದರೆ, ಅಷ್ಟು ಕಷ್ಟಪಟ್ಟು ರೂಪಿಸಿದ ಸಿನಿಮಾದ ಫಸ್ಟ್ ಕಾಪಿ ನೋಡುವ ಭಾಗ್ಯವೂ ಅವರ ಪಾಲಿಗೆ ಸಿಕ್ಕಲೇ ಇಲ್ಲ. ಒಂದು ಸಾಮಾನ್ಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ ಸಿನಿಮಾ ವ್ಯಾಮೋಹಿ ದಿನದೊಪ್ಪತ್ತಿನಲ್ಲೇ ಮರಳಿದ್ದು ಶವವಾಗಿ!

ಹಾಗೊಂದು ದಾರುಣ ಅಂತ್ಯ ಕಂಡವರು ಬಿಡುಗಡೆಯ ಹೊಸ್ತಿಲಲ್ಲಿದ್ದ `ಡ್ಯಾಡ್’ ಚಿತ್ರದ ನಿರ್ದೇಶಕ ಅರ್ಜುನ್ ಕೃಷ್ಣ. ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯ ಸ್ನೇಹಿತರಾಗಿದ್ದ ಅರ್ಜುನ್ ಸಾಗರ್ ಕೃಷ್ಣ. ಆಪ್ತ ವಲಯದಲ್ಲಿ ಅರ್ಜುನ್ ಕೃಷ್ಣ ಅಂತಲೇ ಪರಿಚಿತರಾಗಿದ್ದ ಅವರದ್ದು ಅಪ್ಪಟ ಸ್ನೇಹಶೀಲ ಸ್ವಭಾವ. ಈವತ್ತಿಗೆ ಅವರ ಹಠಾತ್ ನಿರ್ಗಮನದ ನೋವು ಸ್ನೇಹ ವಲಯ, ಡ್ಯಾಡ್ ಸಿನಿಮಾ ತಂಡವನ್ನು ತೀವ್ರವಾಗಿ ಕಾಡುತ್ತಿರೋದಕ್ಕೆ ಪ್ರಧಾನ ಕಾರಣ ಅವರು ಸಾಗಿ ಬಂದ ದಾರಿ. ಆ ಯಾನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದ ಪರಿ ಮತ್ತು ಆಸುಪಾಸು ಸುಳಿವವರನ್ನೆಲ್ಲ ಬರಸೆಳೆದುಕೊಂಡು ಪ್ರೀತಿ ತೋರಿಸುತ್ತಿದ್ದ ನಿಸ್ಪೃಹ ವ್ಯಕ್ತಿತ್ವ. ಇಂಥಾ ಅರ್ಜುನ್ ಕೃಷ್ಣ ಅದೆಂಥಾ ಸಿನಿಮಾ ವ್ಯಾಮೋಹಿ ಎಂಬ ವಿಚಾರ ಯಶ್ ಸೇರಿದಂತೆ, ಹತ್ತಿರವಿದ್ದ ಎಲ್ಲರಿಗೂ ಗೊತ್ತಿದ್ದ ವಿಚಾರ. ಇನ್ನೇನು ಬಿಡುಗಡೆಗೆ ಸಜ್ಜಾಗಿದ್ದ ಡ್ಯಾಡ್ ಚಿತ್ರಕ್ಕಾಗಿ ಅವರು ಪಟ್ಟಿದ್ದ ಶ್ರಮ ಇದೆಯಲ್ಲಾ? ಅದನ್ನು ಯಾರೆಂದರೆ ಯಾರೂ ಊಹಿಸಲು ಸಾಧ್ಯವಿಲ್ಲ. ಇನ್ನೇನು ತನ್ನ ಕನಸೊಂದು ಸಾಕಾರಗೊಳ್ಳುವ ಖುಷಿಯಲ್ಲಿದ್ದ ಅರ್ಜುನ್ ಕೃಷ್ಣ ಡ್ಯಾಡ್ ಚಿತ್ರದ ಫಸ್ಟ್ ಪ್ರಿಂಟ್ ನೋಡುವ ಭಾಗ್ಯವೂ ಇಲ್ಲದಂತೆ ಎದ್ದು ನಡೆದಿದ್ದಾರೆ.

ಯಶ್ ಅವರ ಬಾಲ್ಯ ಸ್ನೇಹಿತ ಅರ್ಜುನ್ ಕೃಷ್ಣ ನಿರ್ದೇಶಕನಾಗುವುದಕ್ಕೇ ಬದುಕಿದ್ದಂತೆ ಭಾಸವಾಗುವಂಥಾ ಕನಸು ಹೊಂದಿದ್ದವರು. ಅದಕ್ಕೊಪ್ಪುವ ಪ್ರತಿಭೆ, ಪರಿಶ್ರಮ ಹೊಂದಿದ್ದ ಅವರ ಪಾಲಿಗೆ ಡ್ಯಾಡ್ (ದೇವರಾಜ್ ಅಲಿಯಾಸ್ ಡೇವಿಡ್) ಚಿತ್ರ ಜೀವಮಾನದ ಕನಸಾಗಿತ್ತು. ಅದಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಂತಿದ್ದ ಅರ್ಜುನ್ ಪಾಲಿಗೆ ಕಾಲವೆಂಬುದು ಕೊರೋನಾ ಸೇರಿದಂತೆ ನಾನಾ ರೂಪಗಳಲ್ಲಿ ಆಘಾತ ಕೊಟ್ಟಿತ್ತು. ಅದೆಲ್ಲವನ್ನೂ ಎದುರಿಕೊಂಡು ಬಂದಿದ್ದ ಅರ್ಜುನ್ ಕೃಷ್ಣ ಈ ವರ್ಷದ ಜನವರಿ ತಿಂಗಳಲ್ಲಿ ಡಿಐ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗುವ ಖುಷಿಯಲ್ಲಿದ್ದರು. ಇದೇ ಹೊತ್ತಿನಲ್ಲಿ ಅವರಿಗೆ ಸಣ್ಣ ಸ್ವರೂಪದಲ್ಲಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿತ್ತು. ಆ ಹೊತ್ತಿಗೆಲ್ಲ ಸಿನಿಮಾ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದ ಅರ್ಜುನ್ ಕೃಷ್ಣ ಆಯುರ್ವೇದ ಔಷಧಿಯ ಮೊರೆ ಹೋಗಿದ್ದರು. ಸ್ವಲ್ಪ ದಿನಗಳ ಕಾಲ ಔಷದೋಪಚಾರ ಆದ ನಂತರ ಚೇತರಿಸಿಕೊಂಡು ಮತ್ತೆ ಸಿನಿಮಾ ಕೆಲಗಳಲ್ಲಿ ಬ್ಯುಸಿಯಾಗಿದ್ದರು.

ಇದಾದ ನಂತರ ಅವರಿಗೆ ಮತ್ತೊಂದು ಸುತ್ತಿನ ಆಘಾತ ಕಾಡಿದ್ದ ಇದೇ ಫೆಬ್ರವರಿ ತಿಂಗಳಿನಲ್ಲಿ. ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದಾಗಿ ಆಸ್ಪತ್ರೆಗೆ ತೆರಳಿದಾಗ ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಉಲ್ಬಣಿಸಿ, ಅದರ ಸೋಂಕು ಫ್ಯಾಂಕ್ರಿಯಾಸ್ ಗೂ ಹಬ್ಬಿಕೊಂಡಿದೆ ಎಂಬ ಆಘಾತಕಾರಿ ವಿಚಾರವನ್ನು ವೈದ್ಯರು ಹೇಳಿದ್ದರು. ಅಷ್ಟಾಗುತ್ತಲೇ ಅರ್ಜುನ್ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರ ತಿಳಿದ ಡ್ಯಾಡ್ ಚಿತ್ರತಂಡಕ್ಕೆ ಬೇಸರವಾದರೂ ಕೂಡಾ ಯಾವ ಕೆಡುಕಿನ ಸೂಚನೆಯೂ ಇರಲಿಲ್ಲ. ಯಾಕೆಂದರೆ, ಕಿಡ್ನಿ ಸ್ಟೋನು ಮತ್ತು ಅದರ ಚಿಕಿತ್ಸೆ ಈವಾಗಂತೂ ಮಾಮೂಲು. ಇಂಥಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಜುನ್ ಕೃಷ್ಣ ಬೇಗನೆ ಮರಳುತ್ತಾರೆಂಬ ನಿರೀಕ್ಷೆ ಚಿತ್ರತಂಡದ್ದಾಗಿತ್ತು. ಅವರ ಮನೆಮಂದಿ ಮತ್ತು ಸ್ನೇಹಿತರೂ ಕೂಡಾ ಹಾಗೆಯೇ ಅಂದುಕೊಂಡಿದ್ದರು.

ಅರ್ಜುನ್ ಕೃಷ್ಣ ಹುಷಾರಾಗಿ ಬರೋದರೊಳಗೆ ಉಳಿಕೆ ಕಾರ್ಯ ಮುಗಿಸಬೇಕೆಂಬ ಇರಾದೆಯಿಂದ ಚಿತ್ರತಂಡ ಕೆಲಸ ಮಾಡುತ್ತಿತ್ತು. ಆದರೆ, ಶಿವರಾತ್ರಿಯ ಮುಂಚಿನ ದಿನ ಅಂದರೆ, ಫೆಬ್ರವರಿ ೨೫ರಂದು ನಿಂತಲ್ಲಿಯೇ ಕುಸಿದು ಹೋಗುವಂತೆ ಅರ್ಜುನ್ ಇನ್ನಿಲ್ಲವೆಂಬ ಸುದ್ದಿ ಬಂದೆರಗಿತ್ತು. ಗಾಲ್ ಬ್ಲಾಡರಿನಿಂದ ಫ್ಯಾಂಕ್ರಿಯಾಸ್ ಗೆ ಹಬ್ಬಿಕೊಂಡಿದ್ದ ಸೋಂಕು ತೀವ್ರ ಸ್ವರೂಪ ಪಡೆದ ಪರಿಣಾಮವಾಗಿ, ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿ ಅರ್ಜುನ್ ಉಸಿರು ನಿಲ್ಲಿಸಿದ್ದಾರೆಂದು ವೈದ್ಯರು ಸಮಜಾಯಿಶಿ ಕೊಟ್ಟಿದ್ದರು. ಅಲ್ಲಿಗೆ ಅಪ್ಪಟ ಸಿನಿಮಾ ವ್ಯಾಮೋಹಿಯ ಬದುಕು ಅರ್ಧ ಹಾದಿಯಲ್ಲಿಯೇ ಮುಕ್ತಾಯವಾದಂತಾಗಿತ್ತು. ಮೈಸೂರು ಭಾಗವೂ ಸೇರಿದಂತೆ ಎಲ್ಲೆಡೆ ಹಬ್ಬಿಕೊಂಡಿದ್ದ ಸ್ನೇಹಿತರು, ನಮ್ ಸಿನಿಮಾ ಖ್ಯಾತಿಯ ಶಿವರಾಜ್ ಕುಮಾರ್ ಸೇರಿದಂತೆ ಡ್ಯಾಡ್ ಚಿತ್ರತಂಡ, ಅರ್ಜುನ್ ಕೃಷ್ಣರನ್ನೇ ಜಗತ್ತೆಂದುಕೊಂಡಿದ್ದ ಅಮ್ಮ, ಅಣ್ಣ, ಮಡದಿ ಮತ್ತು ಪುಟ್ಟ ಕಂದನ ಆಘಾತವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಈ ಕ್ಷಣಕ್ಕೂ ಯಶ್ ಸೇರಿದಂತೆ ಸ್ನೇಹ ವಲಯದಲ್ಯಾರಿಗೂ ಸ್ನೇಹಜೀವಿ ಅರ್ಜುನ್ ಕೃಷ್ಣ ಇನ್ನಿಲ್ಲವೆಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹೀಗೆ ಒಂದು ಸಣ್ಣ ಅನಾರೋಗ್ಯ ಸಮಸ್ಯೆ ಉಲ್ಬಣಿಸಿ, ಅದಕ್ಕೆ ಬಲಿಯಾಗಿರುವ ಅರ್ಜುನ್ ಕೃಷ್ಣರಿಗೆ ಈಗಿನ್ನೂ ಮೂವತ್ತೊಂಬತ್ತು ವರ್ಷವಾಗಿತ್ತಷ್ಟೆ. ಅವರೊಳಗೆ ಬೆಟ್ಟದಷ್ಟು ಸಿನಿಮಾ ಸಂಬಂಧಿತವಾದ ಕನಸಿತ್ತು. ತನ್ನವರನ್ನೆಲ್ಲ ಬರಸೆಳೆದು ಅಪ್ಪಿಕೊಳ್ಳುತ್ತಲೇ ಉಸಿರಾಡುವಂಥಾ ಅಪ್ಪಟ ಪ್ರಿತಿಯ ಒರತೆಯೂ ಅವರೊಳಗಿತ್ತು. ದುರಂತವೆಂದರೆ, ಅಂಥಾ ಜೀವ ತನ್ನ ಕನಸಿನಂಥಾ ಮೊದಲ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗೋದನ್ನು ನೋಡುವ ಅವಕಾಶವನ್ನೂ ಕೊಡದ ಕ್ರೂರ ವಿಧಿ ಜೀವವನ್ನೇ ಕಿತ್ತುಕೊಂಡು ಬಿಟ್ಟಿದೆ. ಹೀಗೆ ಅಕಾಲಿಕವಾಗಿ ನಿರ್ಗಮಿಸಿರುವ ಅರ್ಜುನ್ ಕೃಷ್ಣ ರಾಕಿಂಗ್ ಸ್ಟಾರ್ ಯಶ್ ಅವರ ಕುಚಿಕ್ಕೂ ಗೆಳೆಯ. ಅವರಿಬ್ಬರ ಸ್ನೇಹ ಪ್ರಾಥಮಿಕ ಶಾಲಾ ಹಂತದಿಂದಲೇ ಕುದುರಿಕೊಂಡಿತ್ತು. ಈವತ್ತಿಗೂ ಯಶ್ ಮೈಸೂರು ಭಾಗದಲ್ಲಿ ಒಂದು ಸಣ್ಣ ಸ್ನೇಹವಲಯವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಆ ತಂಡದ ಭಾಗವಾಗಿದ್ದವರು ಅರ್ಜುನ್ ಕೃಷ್ಣ.

ಡ್ಯಾಡ್ ಚಿತ್ರ ತಂಡದೊಂದಿಗೆ ಅರ್ಜುನ್ ಕೃಷ್ಣ

ಹಾಗೆ ಶಾಲಾ ದಿನಗಳಲ್ಲಿ ಜೊತೆಯಾಗಿದ್ದ ಯಶ್ ಸ್ಟಾರ್ ನಟನಾಗೋ ಕನಸು ಕಂಡರೆ, ಅರ್ಜುನ್ ಕೃಷ್ಣ ನಿರ್ದೇಶಕನಾಗುವ ಕನಸು ಕಟ್ಟಿಕೊಂಡಿದ್ದರು. ಬಳಿಕ ಬಹುದೂರ ಒಟ್ಟೊಟ್ಟಿಗೇ ಸಾಗಿ ಬಂದು, ಯಶ್ ಗಮ್ಯದತ್ತ ದಾಪುಗಾಲಿಟ್ಟಿದ್ದರು. ಹಂತ ತಂಹವಾಗಿ ಗೆಲುವು ಕಾಣುತ್ತಾ ಸಾಗಿದ್ದರು. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ರಾಜಾ ಹುಲಿಯಂಥಾ ಅನೇಕ ಚಿತ್ರಗಳಲ್ಲಿ ಯಶ್ ಅವರಿಗೆ ಅರ್ಜುನ್ ಸಾಥ್ ಕೊಟ್ಟಿದ್ದರು. ಹೀಗೆ ಗೆಳೆಯ ಗೆಲ್ಲುತ್ತಲೇ ತನ್ನ ಗುರಿಯ ಬೆಂಬಿದ್ದಿದ್ದ ಅರ್ಜುನ್ ಸ್ವತಂತ್ರ ನಿರ್ದೇಶಕನಾಗುವತ್ತ ಗಂಭೀರ ಪ್ರಯತ್ನ ನಡೆಸಿದ್ದರು. ೨೦೧೨ರ ಸುಮಾರಿಗೆಲ್ಲ ಮೊದಲ ಹೆಜ್ಜೆಯೆಂಬಂತೆ ಅರ್ಜುನ್ ಅಹಂ ಅಂತೊಂದು ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದನ್ನು ಖುದ್ದಾಗಿ ಯಶ್ ಬಿಡುಗಡೆಗೊಳಿಸಿ ಸಾಥ್ ಕೊಟ್ಟಿದ್ದರು. ಆ ಕಿರುಚಿತ್ರ ಅರ್ಜುನ್ ಅವರೊಳಗಿದ್ದ ನಿರ್ದೇಶನದ ಕಸುವಿಗೆ ಕನ್ನಡಿಯಾದಂತಿತ್ತು.

ತನ್ನ ಕನಸಿಗೆ ಸಾಥ್ ಕೊಟ್ಟವರೊಂದಿಗೆ…

ಅದನ್ನು ಕಂಡ ಯಾರಿಗೇ ಆದರೂ ಈತ ಗಟ್ಟಿ ಪ್ರತಿಭೆ ಹೊಂದಿದ್ದಾನೆಂಬ ವಿಚಾರ ಸ್ಪಷ್ಟವಾಗಿಯೇ ಮನದಟ್ಟಾಗುತ್ತಿತ್ತು. ಅದು ಕನಸಿನ ಹಾದಿಯಲ್ಲಿ ಅರ್ಜುನ್ ಕೃಷ್ಣ ಅವರಿಗೆ ಸಿಕ್ಕಿದ್ದ ಮೊದಲ ಗೆಲುವು. ಆ ನಂತರ ಈಗ್ಗೆ ಒಂದಷ್ಟು ವರ್ಷಗಳ ಹಿಂದೆ ಅಚ್ಚುಕಟ್ಟಾದೊಂದು ತಂಡ ಕಟ್ಟಿದ್ದ ಅರ್ಜುನ್ ಕೃಷ್ಣ ಆ ನಂತರ ಅನೇಕ ಸವಾಲುಗಳಿಗೆ ಎದೆಕೊಡುವಂತಾಗಿತ್ತು. ನಡುವಲ್ಲಿ ಕೊರೋನಾ ಬಂದು ಎರಡು ವರ್ಷ ಏನೂ ಮಾಡಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಇಂಥಾ ಘಳಿಗೆಯಲ್ಲಿ ಮನೆಯೊಂದನ್ನು ಮಾರಿ, ಕೈ ಸಾಲ ಪಡೆದು ಚಿತ್ರತಂಡವನ್ನು ಸಂಭಾಳಿಸಿದ್ದ ಸ್ನೇಹಜೀವಿ ಅರ್ಜುನ್ ಕೃಷ್ಣ. ಸಾಮಾನ್ಯವಾಗಿ, ಸಿನಿಮಾ ರಂಗದಲ್ಲಿ ದುಡಿಸಿಕೊಂಡು ಕೈಯೆತ್ತುವವರ ಸಂಖ್ಯೆ ಹೆಚ್ಚಿದೆ. ಆದರೆ ಸಾಲಸೋಲ ಮಾಡಿಯಾದರೂ ತನ್ನನ್ನು ನಂಬಿ ಬಂದ ತಂಡಕ್ಕೆ ಆವತ್ತಿನ ಸಂಭಾವನೆಯನ್ನು ಅಂದಂದೇ ನೀಡುವ ಮೂಲಕವೂ ಅರ್ಜುನ್ ಮಾದರಿಯಾಗಿದ್ದರು. ಈ ಸಿನಿಮಾ ನಾಯಕ ಹೊಸಾ ಹುಡುಗ. ಆರಂಭದಿಂದ ಇಲ್ಲಿಯವರೆಗೂ ಆತನನ್ನು ಜೊತೆಗಿಟ್ಟುಕೊಂಡು ಅಕ್ಷರಶಃ ಸಾಕಿದ್ದ ಅಪ್ಪಟ ತಾಯ್ತನ ಅರ್ಜುನ್ ಅವರದ್ದು.

ಓರ್ವ ವ್ಯಕ್ತಿ ಹೀಗೆ ಏಕಾಏಕಿ ಮರೆಯಾದಾಗ ಆ ನಿರ್ವಾತ ಸ್ಥಿತಿ ತೀವ್ರವಾಗಿ ಕಾಡೋದು ಆತನ ಸಾಧನೆಯಿಂದಲ್ಲ; ವ್ಯಕ್ತಿತ್ವದಿಂದ. ಓರ್ವ ವ್ಯಕ್ತಿಯಾಗಿ ಅರ್ಜುನ್ ತಟವಟಗಳಿಲ್ಲದ ವ್ಯಕ್ತಿತ್ವ ಹೊಂದಿದ್ದವರು. ಯಾರೇ ಬಂದು ಅರೆಘಳಿಗೆ ಮಾತಾಡಿದರೂ ಅವರು ಅರ್ಜುನ್ ಸ್ನೇಹ ವಲಯಕ್ಕೆ ಸೇರಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಅವರ ಸ್ನೇಹ ವಲಯ ದೊಡ್ಡದಿತ್ತು. ಇನ್ನು ಓರ್ವ ನಿರ್ದೇಶಕನಾಗಿ ತಂಡವನ್ನು ಸಂಭಾಳಿಸೋದರಲ್ಲಿಯೂ ಅರ್ಜುನ್ ಭಿನ್ನವಾಗಿ ನಿಲ್ಲುತ್ತಾರೆ. ಅವರೆಂದೂ ನಿರ್ದೇಶಕನೆಂಬ ಅಹಮ್ಮಿಕೆ ಪ್ರದರ್ಶಿಸಿದವರಲ್ಲ. ಯಾರನ್ನೋ ಹತ್ತಿಕ್ಕಿ ತಾನು ಏಣಿ ಹತ್ತುವ ಜಾಯಮಾನವೂ ಅವರದ್ದಲ್ಲ. ತನ್ನನ್ನು ನಂಬಿ ಬಂದವರೆಲ್ಲ ಬಂಧುಗಳೆಂಬ ಆ ಆಪ್ತ ಜೀವದ ಅಗಲಿಕೆ ಶಿವರಾಜ್ ಕುಮಾರ್ ಸೇರಿದಂತೆ ಒಂದಿಡೀ ಚಿತ್ರತಂಡವನ್ನು ತೀವ್ರವಾಗಿ ಕಾಡುತ್ತಿದೆ. ಅದು ಸಲೀಸಾಗಿ ಮಾಸಬಹುದಾದ ದುಃಖವಂತೂ ಅಲ್ಲ.

ಡ್ಯಾಡ್ ಚಿತ್ರೀಕರಣ ಮುಕ್ತಾಯದ ಘಳಿಗೆಯಲ್ಲಿ ಚಿತ್ರತಂಡದೊಂದಿಗೆ ಅರ್ಜುನ್ ಕೃಷ್ಣ

ಇಂಥಾ ಸ್ನೇಹಶೀಲ ವ್ಯಕ್ತಿತ್ವದ ಅರ್ಜುನ್ ಕೃಷ್ಣ ಅಂದರೆ ಯಶ್ ಅವರಿಗೂ ಅತೀವ ಪ್ರೀತಿಯಿತ್ತು. ಅರ್ಜುನ್ ವಿಕ್ಟೋರಿಯಾ ಆಸ್ಪತ್ರೆಗೆ ವದಾಖಲಾದ ಘಳಿಗೆಯಲ್ಲವರೆ ಟಾಕ್ಸಿಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೂ ದಿನಕ್ಕೊಂದಷ್ಟು ಸಲ ಕರೆ ಮಾಡಿ ಧೈರ್ಯ ತುಂಬುತ್ತಿದ್ದರು. ಹುಷಾರಾಗಿ ಬಂದ ನಂತರ ಡ್ಯಾಡ್ ಚಿತ್ರದ ಬಿಡುಗಡೆಗೆ ಪಕ್ಕಾ ಪ್ಲಾನು ಮಾಡೋಣ ಅಂತೆಲ್ಲ ಉತ್ಸಾಹ ತುಂಬುತ್ತಿದ್ದರು. ಅರ್ಜುನ್ ಆಪ್ತ ಬಳಗವೂ ಅದೇ ರೀತಿ ಸಾಥ್ ಕೊಟ್ಟಿತ್ತು. ಆದರೆ, ಯಾವ ಹರಕೆ ಹಾರೈಕೆಗಳೂ ಫಲಿಸದೆ ಅರ್ಜುನ್ ಕೃಷ್ಣ ಎಂಬ ಸ್ನೇಹಜೀವಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಒಟ್ಟಿಗಿದ್ದವರ ಪಾಲಿಗೆ ಮಾತ್ರ ಆ ಸತ್ಯವನ್ನು ಅರಗಿಸಿಕೊಳ್ಳಲು ಈ ಕ್ಷಣಕ್ಕೂ ಸಾಧ್ಯವಾಗುತ್ತಿಲ್ಲ.

ಈಗ್ಗೆ ನಾಲಕ್ಕು ವರ್ಷಗಳ ಹಿಂದೆ ಅರ್ಜುನ್ ಮದುವೆಯಾಗಿದ್ದರು. ಮಗುವೊಂದು ಅವರ ಮಡಿಲು ತುಂಬಿತ್ತು. ಇದೀಗ ಅಣ್ಣ, ಅಮ್ಮ, ಮಡದಿ ಮತ್ತು ಪುಟ್ಟ ಮಗುವನ್ನು ಅರ್ಜುನ್ ತಬ್ಬಲಿಗಳಾಗಿಸಿ ನಿರ್ಗಮಿಸಿದ್ದಾರೆ. ಡ್ಯಾಡ್ ಚಿತ್ರತಂಡಕ್ಕೂ ಕೂಡಾ ಅಂಥಾದ್ದೊಂದು ತಬ್ಬಲಿತನ ತೀವ್ರವಾಗಿ ಕಾಡುತ್ತಿದೆ. ಅರ್ಜುನ್ ಅವರ ಇದುವರೆಗಿನ ಬದುಕಿನತ್ತ ಒಮ್ಮೆ ಕಣ್ಣಾಡಿಸಿದರೆ, ಅದು ಹತ್ತಿರ ಸುಳಿದವರಿಗೆಲ್ಲ ಪ್ರೀತಿ ತೋರಿಸುತ್ತಾ, ನಿರ್ದೇಶಕನಾಗಲೆಂದೇ ಹುಟ್ಟಿದ ಜೀವವೇನೋ ಎಂಬಂಥಾ ಭಾವವೊಂದು ಉತ್ಕಟವಾಗಿ ಕಾಡುತ್ತದೆ. ಆದರೀಗ ಅರ್ಧ ದಾರಿಯಲ್ಲಿಯೇ ಅವರು ನಿರ್ಗಮಿಸಿದ್ದಾರೆ. ಅವರ ಜೀವಮಾನದ ಕನಸಾಗಿದ್ದ ಡ್ಯಾಡ್ ಚಿತ್ರ ಅರ್ಧ ಮುಗಿದ ಕನಸಾಗಲಿದರಲಿ. ಅವರನ್ನೇ ನಂಬಿಕೊಂಡಿದ್ದ ಮಡದಿ ಮತ್ತು ಪುಟ್ಟ ಕಂದನ ಮುಂದಿನ ಬದುಕು ಹಸನಾಗಿರಲಿ. ಅವರ ಸ್ನೇಹಿತರಿಗೆ, ಡ್ಯಾಡ್ ಚಿತ್ರತಂಡಕ್ಕೆ ಈ ಆಘಾತವನ್ನು ಭರಿಸಿಕೊಳ್ಳುವ ಶಕ್ತಿ ಸಿಗಲೆಂಬುದು ಹಾರೈಕೆ…

The post arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ! appeared first on Cini Shodha.

director siddique: ಯಶಸ್ವೀ ನಿರ್ದೇಶಕ ಸಿದ್ಧಿಕಿ ಇನ್ನಿಲ್ಲ!
ಕನ್ನಡ ಚಿತ್ರರಂಗಕ್ಕೆ ಮತ್ತೆ ಸಾವಿನ ಸೂತಕ ಕವುಚಿಕೊಂಡಿದೆ. ಅಪ್ಪು (puneeth rajkumar) ಇನ್ನಿಲ್ಲವಾದ ನೋವು ಜಿನುಗುತ್ತಿರುವಾಗಲೇ, ಅವರ ಸೊಸೆ,  (vijay raghavendra) ವಿಜಯ ರಾಘವೇಂದ್ರರ ಮಡದಿ ಸ್ಪಂದನಾ (spandana) ಮತ್ತದೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹತ್ತಾರು ಪ್ರಶ್ನೆಗಳು ಉತ್ತರ ಕಾಣದೆ ಮೌನಮುಖಿಯಾಗಿವೆ. ಇದೇ ಹೊತ್ತಿನಲ್ಲಿ ಕೇರಳ ಮತ್ತು ತಮಿಳುನಾಡು ಚಿತ್ರರಂಗಕ್ಕೂ ಈಗ ಅಂಥಾದ್ದೇ ಒಂದು ಆಘಾತ ಎದುರಾಗಿಬಿಟ್ಟಿದೆ. ಮಲೆಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಅನೇಕ ಯಶಸ್ವೀ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ (director siddique) ಸಿದ್ಧಿಕಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೇರಳದಲ್ಲಿ ಜನಿಸಿ, ಹಲವಾರು ಕಷ್ಟ ಕೋಟಲೆಗಳನ್ನೆದುರಿಸಿ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದವರು ಸಿದ್ಧಿಕಿ. ಕಾಬೂಲಿವಾಲ, ಗಾಡ್‌ಫಾದರ್‌ನಂಥಾ ಎವರ್‌ಗ್ರೀನ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಸಿದ್ಧಿಕಿ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಈಗೊಂದಷ್ಟು ವರ್ಷಗಳಿಂದೀಚೆಗೆ ನೇಪಥ್ಯಕ್ಕೆ ಸರಿದಂತಿದ್ದ ಸಿದ್ಧಿಕಿಗೆ ನಿನ್ನೆ ದಿನ ಬೆಳಗಿನ ಹೊತ್ತಿಗೆಲ್ಲ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ವದ್ಯರು ಶತಪ್ರಯತ್ನ ನಡೆಸಿದರೂ ಕೂಡಾ ಉಪಯೋಗವಾಗಿರಲಿಲ್ಲ. ಸಿದ್ಧಿಕಿರಾತ್ರಿಯ ಹೊತ್ತಿಗೆಲ್ಲ ಉಸಿರು ನಿಲ್ಲಿಸಿದ್ದರು.

ಸಾಮಾನ್ಯ ಹುಡುಗನಾಗಿ, ಸಣ್ಣ ಸಣ್ಣ ಅವಕಾಶಗಳನ್ನು ಬಳಸಿಕೊಂಡೇ ಬೆಳೆದು ನಿಂತವು ಸಿದ್ಧಿಕಿ. ಅಂಥಾ ಪ್ರಯತ್ನದ ಫಲವಾಗಿಯೇ ೧೯೮೬ರಲ್ಲಿ ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್ ಚಿತ್ರಕ್ಕೆ ಚಿತ್ರಕಥೆ ಬರೆಯುವ ಅವಕಾಶ ಒದಗಿ ಬಂದಿತ್ತು. ಆ ಕಾಲಕ್ಕೆ ಹಿಟ್ ಆಗಿದ್ದ ಆ ಸಿನಿಮಾ ಸಿದ್ಧಿಕಿ ಪಾಲಿಗೆ ಹೊಸಾ ದಿಕ್ಕು ತೋರಿಸಿತ್ತು. ಆ ಬಳಿವೂ ಅದೇ ಹಾದಿಯಲ್ಲಿ ಮುಂದುವರೆದು ಬಂದಿದ್ದ ಸಿದ್ಧಿಕಿ, ೧೯೮೯ರಲ್ಲಿ ತೆರೆ ಕಂಡಿದ್ದ ರಾಮ್ ಜಿ ರಾವ್ ಸ್ಪೀಕಿಂಗ್ ಚಿತ್ರದ ಮೂಲಕ ಕನಸು ನನಸು ಮಾಡಿಕೊಂಡಿದ್ದರು. ಅದು ಅವರ ನಿರ್ದೇಶನದ ಮೊದಲ ಚಿತ್ರವಾಗಿ ದಾಖಲಾಗುತ್ತದೆ. ಆ ನಂತರ ತಮಿಳು, ತೆಲುಗು, ಹಿಂದಿಲ್ಲಿಯೂ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದ ಸಿದ್ಧಿಕಿ ಇನ್ನು ನೆನಪು ಮಾತ್ರ…

The post director siddique: ಯಶಸ್ವೀ ನಿರ್ದೇಶಕ ಸಿದ್ಧಿಕಿ ಇನ್ನಿಲ್ಲ! appeared first on Cini Shodha.

spandana is no more: ಚಿನ್ನಾರಿಮುತ್ತನಿಗೆ ಇದೆಂಥಾ ಆಘಾತ?
ಚಿನ್ನಾರಿಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ರಾಘವೇಂದ್ರ ಮತ್ತು ಮಕ್ಕಳ ಜೊತೆ ಸ್ಪಂದನಾ ಬ್ಯಾಂಕಾಕ್‍ಗೆ ತೆರಳಿದ್ದರು. ಸಂಸಾರದೊಂದಿಗೆ ಬೆರೆತು, ಆ ಖುಷಿಯಲ್ಲಿ ಮಿಂದೇಳುತ್ತಿದ್ದ ಸ್ಪಂದನಾ ಹೃದಯಾಘಾತದಿಂದ ಇನ್ನಿಲ್ಲವಾಗಿದ್ದಾರೆ. ಹೃದಯಾಘಾಥ ಸಂಭವಿಸಿದ ತಕ್ಷಣವೇ ಚಿಕಿತ್ಸೆ ಕೊಡಿಸಿದರೂ ಕೂಡಾ, ಯಾವ ಪ್ರಯತ್ನವೂ ಫಲಿಸದೆ ಈ ದುರಂತ ಸಂಭವಿಸಿದೆ.

ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರಮಗಳು ಸ್ಪಂದನಾ. ಅತ್ಯಂತ ಮೃದು ಮನಸಿನ, ಸರಳ ಸ್ವಭಾವದ ಸ್ಪಂದನಾರನ್ನು ಮತು ವಿಜಯ್ ರಘವೇಂದ್ರ ನಡುವೆ ಪ್ರೀತಿ ಮೂಡಿಕೊಂಡಿತ್ತು. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ 2007ರಲ್ಲಿ ವಿಜಯ್ ಮತ್ತು ಸ್ಪಂದನಾ ದಾಂಪಿಸಿರಿಸಿದ್ದರು. ಈ ದಂಪತಿಗೆ ಶೌರ್ಯ ಎಂಬ ಗಂಡು ಮಗುವೂ ಜನಿಸಿತ್ತು. ಇವವು ಮದುವೆಯಾದದ್ದು ಆಗಸ್ಟ್ ಇಪ್ಪತ್ತಾರರಂದು. ಇನ್ನೇನು ಮದುವೆ ವಾರ್ಶೀಕೋತ್ಸವಕ್ಕೆ ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿತ್ತು. ಅಷ್ಟರಲ್ಲಿ ವಿಜಯ್ ಪಾಲಿಗೆ ಜೀವಕ್ಕೆ ಜೀವವಾಗಿದ್ದ ಸ್ಪಂದನಾ ನಿಗಮಿಸಿದ್ದಾರೆ.

ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಬಂದೆರಗಿದ ಮತ್ತೊಂದು ಆಘಾತ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಮಾದರಿ ಜೋಡಿಯಂತಿದ್ದವರು. ಮಗು ಮನಸಿನ ವಿಜಯ್ ಪಾಲಿಗೆ ಕೇವಲ ಮಡದಿಯಾಗಿರದೆ, ಅಮ್ಮನಾಗಿ, ಗೆಳತಿಯಾಗಿಯೂ ಸ್ಪಂದನಾಆಪ್ತವಾಗಿದ್ದರು. ಸಣ್ಣ ವೈಮನಸ್ಯಕ್ಕೂ ಜಾಗವಿಲ್ಲದಂತೆ ಅನ್ಯೋನ್ಯವಾಗಿದ್ದ ಈ ದಾಂಪತ್ಯದ ಮೇಲೆ ಅದ್ಯಾವ ಕೇಡಿನ ಕಣ್ಣು ಬಿತ್ತೋ ಗೊತ್ತಿಲ್ಲ; ಈ ದುರಂತ ನಡೆದು ಹೋಗಿದೆ. ಮಾವ ಪುನೀತ್ ರಾಜ್ ಕುಮಾರ್ ಮರೆಯಾದ ಆಘಾತ ಬಿಟ್ಟೂ ಬಿಡದಂತೆ ಕಾಡುತ್ತಿತ್ತು. ಅದರ ಬೆನ್ನಿಗೇ ಜೀವದಂಥಾ ಮಡದಿಯೇ ಇನ್ನಿಲ್ಲವೆಂಬ ಮತ್ತೊಂದು ಮಹಾ ಆಘಾತ ಅವರಿಗೆದುರಾಗಿದೆ. ಈ ದುಃಖವನ್ನು ದಾಟಿಕೊಳ್ಳುವ ಶಕ್ತಿ ವಿಜಯ್ ರಾಘವೇಂದ್ರ ಮತ್ತವರ ಕುಟುಂಬಕ್ಕೆ ದಕ್ಕಲೆಂಬುದು ಪ್ರಾರ್ಥನೆ…

The post spandana is no more: ಚಿನ್ನಾರಿಮುತ್ತನಿಗೆ ಇದೆಂಥಾ ಆಘಾತ? appeared first on Cini Shodha.