#komalkumar – Cini Shodha

Komal Kumar New Movie Updates: ಈ ಬಾರಿಯಾದರೂ ಕೈಹಿಡಿದೀತೇ ಗೆಲುವು?
ಅದೇಕೋ ನವರಸ ನಾಯಕ ಜಗ್ಗೇಶ್ ತಮ್ಮ ಕೋಮಲ್ ಕುಮಾರ್ ವೃತ್ತಿ ಬದುಕು ಹೊಯ್ದಾಟದಲ್ಲಿಯೇ ಮುಂದುವರೆದಿದೆ. ಕೋಮಲ್ ನಾಯಕನಾಗೋ ಆಸೆ ಚಿಗುರಿಸಿಕೊಂಡಾದ ನಂತರದ ಯಾನ ಕಂಡವರಿಗೆ, ಆತನನ್ನು ಆವರಿಸಿಕೊಂಡಿರುವ ಸೋಲಿನ ಪರ್ವದ ಹಿಂದಿರೋ ಅಸಲೀ ಕಾರಣ ನಿಖರವಾಗಿಯೇ ಗೊತ್ತಾಗುತ್ತದೆ. ದುರಂತವೆಂದರೆ, ಅದು ಸತತ ಸೋಲಿನ ಬಳಿಕವೂ ಗೊತ್ತಾಗದಿರೋದು ಕೋಮಲ್‌ಗೆ ಮಾತ್ರ. ತಮ್ಮನ ಗೆಲುವನ್ನು ಜ್ಯೋತಿಷ್ಯ, ಗ್ರಹಗತಿ, ರಾಹು ಕೇತು ಗಂಡಾಂತರಗಳ ಮೂಲಕ ವಿಶ್ಲೇಶಿಸುತ್ತಾ ಜಗ್ಗಣ್ಣ ಆಗಾಗ ಕಾಮಿಡಿ ಮಾಡುತ್ತಿರುತ್ತಾರೆ. ಆದರೆ, ತನಿಷ್ಕಾ ಕುಪ್ಪಂಡ ನಿರ್ಮಾಣ ಮಾಡಿದ್ದ ಕೋಣ ಎಂಬ ಚಿತ್ರವನ್ನು ನೋಡಿದ ಮಂದಿಗೆ ಮಾತ್ರ ಗಾಬರಿಯ ಜೊತೆಗೆ, ಕೋಮಲ್ ಯಾಕೆ ಇಂಥಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆಂಬ ಚೋದ್ಯವೂ ಕಾಡಿದೆ. ಕೋಣದ ಸೋಲನ್ನು ಮೀರುವ ಪ್ರಯತ್ನದಲ್ಲಿರುವಂತೆ ಕಾಣಿಸೋ ಕೋಮಲ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ!

ಕೋಮಲ್ ಕುಮಾರ್ ನಾಯಕನಾಗಿ ನಟಿಸಿರುವ ತೆನಾಲಿ ಡಿಎ ಎಲ್‌ಎಲ್‌ಬಿ ಎಂಬ ಚಿತ್ರವೀಗ ಅಧಿಕೃತವಾಗಿ ಘೋಷಣೆಯಾಗಿದೆ. ಸದರಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದೇ ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೋಮಲ್, ಅಷ್ಟೇ ಭಿನ್ನವಾದ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಪೋಸ್ಟರ್ ಧ್ವನಿಸುವಂಥಾದ್ದೇ ಭರಪೂರ ಹಾಸ್ಯ ಶೈಲಿಯಲ್ಲಿ ಒಟ್ಟಾರೆ ಸಿನಿಮಾ ಮುದ ನೀಡಲಿದೆ ಎಂಬಸುಳಿವಷ್ಟೇ ಚಿತ್ರತಂಡದ ಕಡೆಯಿಂದ ಜಾಹೀರಾಗಿದೆ. ಈ ಹಿಂದೆ ಮಾರೀಚಿ ಅಂತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದ ಸಿದ್ದ್ರುವ್ ತೆನಾಲಿಯ ಸಾರಥ್ಯ ವಹಿಸಿಕೊಂಡಿದ್ದಾರೆ.

Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!

ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದ ಮಾರೀಚಿ ಸಿನಿಮಾ ಒಂದಷ್ಟು ಜನ ಮೆಚ್ಚುಗೆ ಪಡೆದುಕೊಂಡಿತ್ತು. ಈ ನಿಟ್ಟಿನಲ್ಲಿ ಹೇಳೋದಾದರೆ ಅದೇ ಸಿದ್ದ್ರುವ್ ನಿರ್ದೇಶನದ ತೆನಾಲಿಯ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದಾವೆ. ಸದ್ಯದ ಮಟ್ಟಿಗೆ ಸದರಿ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದೂ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ. ಇನ್ನೇನು ತಿಂಗಳೊಪ್ಪತ್ತಿನಲ್ಲಿಯೇ ಚಿತ್ರೀಕರಣ ಚಾಲೂ ಆಗಲಿದೆ. ತಾರಾಗಣದ ಆಯ್ಕೆ ಕಾರ್ಯವೂ ಸಾಗುತ್ತಿರೋದರಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆ ಬಗೆಗಿನ ವಿಚಾರಗಳನ್ನುನ ಚಿತ್ರತಂಡ ಹಂಚಿಕೊಳ್ಳಲಿದೆ. ಈ ಬಾರಿಯಾದರೂ ಕೋಮಲ್ ಕುಮಾರ್ ಒಂದೊಳ್ಳೆ ಕಥೆಯನ್ನು ಒಪ್ಪಿಕೊಂಡಿರಬಹುದಾ? ಈ ಮೂಲಕ ಅವರು ಸೋಲಿನ ಪರ್ವವನ್ನು ದಾಟಿಕೊಳ್ಳಬಹುದೆಂಬ ಪ್ರಶ್ನೆ ಬಹುತೇಕರಲ್ಲಿದೆ. ಈ ಸಾರ್ತಿ ಕೋಮಲ್‌ಗೆ ಗೆಲುವಾಗಲೆಂಬುದು ಹಾರೈಕೆ…

keywords: komal, komalkumar, sandalwood, thenali

The post Komal Kumar New Movie Updates: ಈ ಬಾರಿಯಾದರೂ ಕೈಹಿಡಿದೀತೇ ಗೆಲುವು? appeared first on Cini Shodha.

Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!
ನಿರ್ದೇಶನ: ಹರಿಕೃಷ್ಣ ಎಸ್

ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ, ಕೀರ್ತಿರಾಜ್ ಮತ್ತು ಕಾಮಿಡಿ ಕಲಾವಿದರು

ರೇಟಿಂಗ್: 2

ತನಿಷಾ ಕುಪ್ಪಂಡ ಬಿಗ್‌ಬಾಸ್ ಪ್ರಭೆಯಲ್ಲಿಯೇ ನಿರ್ಮಾಪಕಿಯಾಗಿ ಅವತರಿಸಿದ್ದ ಚಿತ್ರ ಕೋಣ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಂದಾಗಲೂ ಹೆಚ್ಚೇನೂ ನಿರೀಕ್ಷೆಗಳಿರಲಿಲ್ಲ. ಅಷ್ಟಕ್ಕೂ ಈ ಕೋಣ ಅನ್ನೋ ಟೈಟಲ್ಲೇ ಹೆಚ್ಚೇನೂ ಕುತೂಹಲ ಹುಟ್ಟಿಸಿರಲಿಲ್ಲ. ಅದೇನು ಕಂಬಳದ ಕೋಣವೋ, ಮಾರಿ ಜಾತ್ರೆಯಲ್ಲಿ ಬಲಿಕೊಡುವ ಕೋಣವೋ ಎಂಬಂಥಾ ಗೊಂದಲ ಸೃಷ್ಟಿಯಾಗಿತ್ತೇ ಹೊರತು, ನಿರೀಕ್ಷೆಗಳೇನೂ ಮೂಡಿರಲಿಲ್ಲ. ಇದೀಗ ಬಿಡುಗಡೆಗೊಂಡಿರೋ ಈ ಸಿನಿಮಾದುದ್ದಕ್ಕೂ ಅಂಥಾ ಗೊಂದಲಗಳೇ ಗೂಡುಕಟ್ಟಿಕೊಂಡಿವೆ. ಒಂದಷ್ಟು ಅಚ್ಚುಕಟ್ಟಾಗಿದ್ದಂತೆ ಕಂಡಿದ್ದ ಟ್ರೈಲರ್ ನೋಡಿ ಚಿತ್ರಮಂದಿರಕ್ಕೆ ತೆರಳಿದ್ದವರನ್ನೆಲ್ಲ ಕೋಮಲ್ ಕುಮಾರನ ಕೋಣ ಅಕ್ಷರಶಃ ರೊಚ್ಚಿಗೆಬ್ಬಿಸುತ್ತೆ!

ನಿರ್ದೇಶಕನೆನ್ನಿಸಿಕೊಂಡಿರುವ ಪುಣ್ಯಾತ್ಮ ಹರಿಕೃಷ್ಣ ಅದೇನೋ ಕಥೆ ಮಾಡಿಕೊಂಡಿದ್ದಾರೆ. ಆರಂಭ ಕೊಂಚ ಆಶಾದಾಯಕವಾಗಿದ್ದರೂ, ಕೋಣದ ಪಯಣ ಯಾವ ಘಟ್ಟದಲ್ಲಿಯೂ ಸಹ್ಯವಾಗಿ ಕಾಣಿಸೋದಿಲ್ಲ. ಕಾಡೊಂದರ ಮೂಲಕ ಈ ಚಿತ್ರ ತೆರೆದುಕೊಳ್ಳುತ್ತೆ. ಆ ಕಾಡಿನ ಮಧ್ಯದಲ್ಲೊಬ್ಬ ದನಗಾಹಿಯಂಥವನು ನದಿಯೊಂದರತ್ತ ಓಡಿ ಗಾಬರಿಯಾಗಿ ನಿಲ್ಲುತ್ತಾನೆ. ಆ ನದಿಯಲ್ಲಿ ಹೆಣಗಳ ರಾಶಿ ತೇಲಿ ಬರುತ್ತಿರುತ್ತೆ. ಹೀಗೆ ಹದಿನಾರನೇ ಶತಮಾನದಲ್ಲಿ ಘಟಿಸುವ ಈ ಸಿನಿಮಾ ಹದಿನಾರನೇ ಶತಮಾನಕ್ಕೂ ಲಿಂಕು ಪಡೆದುಕೊಳ್ಳುತ್ತೆ. ಅದ್ಯಾರೋ ರಾಜ, ಸಲೀಸಾಗಿ ಯುದ್ಧ ಗೆದ್ದುಕೊಳ್ಳಲು ಆತ ಮಾಂತ್ರಿಕರ ಮೂಲಕ ಸೃಷ್ಟಿಸಿದ್ದ ಬೆದರುಗೊಂಬೆ, ಬರ ಬರುತ್ತಾ ಮನುಷ್ಯರ ರಕ್ತಕ್ಕಾಗಿ ಬಾಯ್ತೆರೆದು ನಿಲ್ಲುತ್ತೆ. ಅದನ್ನು ಗಡಿಯಾಚೆ ಎಸೆಯೋ ಕ್ಷುದ್ರ ಕಾರ್ಯಾಚರಣೆಯ ಬೆನ್ನಲ್ಲಿಯೇ ಕಥೆಯೆಂಬುದು ಏಕಾಏಕಿ ಈ ಶತಮಾನಕ್ಕೆ ಬಂದು ನಿಲ್ಲುತ್ತೆ.

ಇಲ್ಲಿ ಕಥಾ ನಾಯಕ ಕೋಮಲ್ ಎಂಟ್ರಿಯಾಗುತ್ತೆ. ರೋಬೋಟ್ ಮೂಲಕ ಜ್ಯೋತಿಷ್ಯ ಹೇಳೋ ಆತ ಸತ್ತಿರೋ ತನ್ನ ಮಡದಿ ಬಳಿಯಿದ್ದಾಳೆಂದು ಭ್ರಮಿಸುತ್ತಾ ಆಕೆಯೊಂದಿಗೆ ಮಾತಾಡುತ್ತಿರುತ್ತಾನೆ. ವಿಕ್ಷಿಪ್ತ ಸ್ವಭಾವದ ಆ ಪಾತ್ರದ ಜೊತೆಗೆ ತನಿಷಾ ಕುಪ್ಪಂಡ ಸೇರಿದಂತೆ ಮತ್ತೊಂದಷ್ಟು ಪಾತ್ರಗಳು ಜಮೆಯಾಗುತ್ತವೆ. ಅಂಥಾ ಕೋಮಲ್ ಹೊಟೆಲ್ ಮುಂಭಾಗ ರೋಬೋಟ್ ನಿಲ್ಲಿಸಿಕೊಂಡು ಗ್ರಾಹಕರಿಗಾಗಿ ಕಾಯುತ್ತಿರುವಾಗ ಬಸ್ಸೊಂದರಲ್ಲಿ ಕಾಮಿಡಿ ಕಿಲಾಡಿಗಳ ಎಂಟ್ರಿಯಾಗುತ್ತೆ. ಹಾಗೆ ಬಂದವರು ಕಾಮಿಡಿ ಕಿಲಾಡಿಗಳು, ಗಿಚ್ಚಿಗಿಲಿಗಿಲಿಯಂಥಾ ಕಾಮಿಡಿ ಶೋಗಳ ಪ್ರತಿಭೆಗಳು. ಅವರೆಲ್ಲರೂ ಊರೊಂದರಲ್ಲಿ ನಡೆಯಲಿದ್ದ ನಾಟಕಕ್ಕಾಗಿ ಹೊರಟು ನಿಂತ ಕಲಾವಿದರು. ಒಂದು ಪಾತ್ರಕ್ಕಾಗಿ ಕಲಾವಿದ ಬೇಕಿರೋದರಿಂದ ಆ ತಂಡದ ಮಂದಿ ಕೋಮಲ್‌ನನ್ನೇ ಕರೆದುಕೊಂಡು ಹೊರಡುತ್ತಾರೆ. ಹಾಗೆ ಆ ಕಾಮಿಡಿ ಕಲಾವಿದರ ದಂಡಿನೊಂಡಿದೆ ಕೋಳೂರು ಎಂಬೂರಿಗೆ ಸಿನಿಮಾ ಶಿಫ್ಟಾಗುತ್ತೆ.

ಅಲ್ಲಿಂದಾಚೆಗೆ ನಡೆಯೋದು ಅಕ್ಷರಶಃ ಪ್ರೇಕ್ಷಕರ ತಾಳ್ಮೆ ಪರೀಕ್ಷೆ.

ನಂತರ ಕಥೆಯೇ ಇಲ್ಲದೆ, ಕೇವಲ ಕಾಮಿಡಿ ಕಿಲಾಡುಇಗಳು ಶೈಲಿಯ ಸ್ಕಿಟ್ಟುಗಳನ್ನು ನಂಬಿಯೇ ನಿರ್ದೇಶಕರು ದೃಷ್ಯ ಕಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಥರದ ಶೋಗಳಲ್ಲಿ ಥರ್ಡ್ ಕ್ಲಾಸ್ ಆದರೂ ಪಂಚುಗಳಾದರೂ ಇರುತ್ತವೆ. ಆದರೆ. ಇಲ್ಲಿ ಅದಕ್ಕೂ ಗತಿಯಿಲ್ಲ. ಕಡೆಗೂ ಕಾಮಿಡಿ ಕಿಲಾಡಿಗಳು ಭ್ರಾಮಕ ಹಾಸ್ಯದ ಭ್ರಮೆಯಲ್ಲಿ ತೊನೆದಾಡುತ್ತಾರೆ. ಅದಾಗಲೇ ತಾಳ್ಮೆ ಕಳೆದುಕೊಂಡ ಪ್ರೇಕ್ಷಕರ ಕಣ್ಣಿಗೆ ಕೋಮಲ್ ಸೇರಿದಂತೆ ಎಲ್ಲರೂ ಲಗಾಡಿಯೆದ್ದ ಕಥೆಯ ಕಳೇಬರದ ಮೇಲೆ ಹುಚ್ಚುದ್ದು ಕುಣಿಯೋ ಕೋತಿಯಂತೆ ಕಾಣಿಸುತ್ತಾರೆ. ಕಡೆಗೂ ಕ್ಲೈಮ್ಯಾಕ್ಸಿನಲ್ಲಿ ಎಲ್ಲಿಂದೆಲ್ಲಿಗೋ ಲಿಂಕು ಮಾಡಿ, ಸ್ಪಷ್ಟೀಕರಣ ನೀಡುವ ನೆಪದಲ್ಲಿ ಮತ್ತಷ್ಟು ಸಿಕ್ಕುಗಟ್ಟಿಸಿ ಬಿಟ್ಟಿದ್ದಾರೆ. ಆ ಹೊತ್ತಿಗೆಲ್ಲ ಕೋಮಲನ ಕೋಣಕ್ಕೆ ಅದೇ ಇಲ್ಲ ಎಂಬ ಸತ್ಯ ಪ್ರೇಕ್ಷಕರಿಗೆ ಅರ್ಥವಾಗುತ್ತೆ!

ಕಡೇಯ ಸೀನಿನಲ್ಲಿ ಕೋಮಲ್ ಥೇಟು ಪಂಜುರ್ಲಿ ದೈವದ ಪಾತ್ರದಲ್ಲಿ ರಿಷಭ್ ಶೆಟ್ಟಿ ಅಬ್ಬರಿಸಿದಂತೆ ನಟಿಸಲು ಪ್ರಯತ್ನಿಸಿದ್ದಾರೆ. ಆ ದೃಷ್ಯ ಮಾತ್ರ ಅದ್ಭುತ. ಕಾಮಿಡಿ ಕಿಲಾಡಿಗಳೆಲ್ಲ ಮುಕ್ಕರಿಸಿ ಪ್ರಯತ್ನಿಸಿದರೂ ಮೂಡದ ನಗು ಆ ದೃಷ್ಯವನ್ನು ನೋಡಿ ಪ್ರೇಕ್ಷಕರ ಮುಖದಲ್ಲಿ ಕುಣಿದಾಡುತ್ತೆ. ಇನ್ನು ಈ ಚಿತ್ರದಿಂದ ಯಾರಿಗಾದರೂ ಉಪಯೋಗವಾಗಿದ್ದರೆ ಅದು ತನಿಷಾ ಕುಪ್ಪಂಡಳಿಗೆ ಮಾತ್ರ. ಯಾಕೆಂದರೆ, ಆಕೆ ಇಡೀ ಸಿನಿಮಾದಲ್ಲಿ ತಾನಿರುವಂತೆ ನೋಡಿಕೊಂಡಿದ್ದಾರೆ. ಕಷ್ಟಪಟ್ಟು ಉದ್ದಿಮೆಗಳನ್ನು ಕಟ್ಟಿ ಹಣ ಸಂಪಾದಿಸಿರುವ ಹೆಣ್ಣುಮ ಗಳು ತನಿಷಾ. ಅಂಥಾ ಕಷ್ಟದ ಲಾಸನ್ನು ಆಕೆ ಯಾಕಿಂಥಾ ಕೆಟ್ಟ ಚಿತ್ರಕ್ಕೆ ಸುರಿದರೋ ಗೊತ್ತಾಗೋದಿಲ್ಲ. ಕಡೆಗೂ ಇಂಥಾದ್ದೊಂದು ಕೆಟ್ಟ ಸಿನಿಮಾವನ್ನು ಈ ಆಸಾಮಿ ಕೋಮಲ್ ಅದ್ಯಾಕೆ ಒಪ್ಪಿಕೊಂಡರೆಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತೆ. ಇದಕ್ಕೆ ಸಿಗುವ ಉತ್ತರದಲ್ಲಿಯೇ ಕೋಮಲ್‌ನನ್ನು ಮುತ್ತಿಕೊಳ್ಳುತ್ತಾ ಬಂದಿರುವ ಸಾಲು ಸಾಲು ಸೋಲಿನ ಹಿಂದಿರೋ ಕಾರಣವೂ ಸ್ಪಷ್ಟವಾಗುತ್ತೆ. ಈ ಹಂತದಲ್ಲಿ ಪ್ರೇಕ್ಷಕgರು ಒಳಗಿಂದೊಳಗೇ ರೊಚ್ಚಿಗೆದ್ದಿರುವಾಗ ಕೋಮಲನ ಅಣ್ಣ ಜಗ್ಗಣ್ಣನ ಧ್ವನಿ ಕೇಳಿಸುತ್ತೆ. ಅದೂ ಕೂಡಾ ಹತಾಶ ಪ್ರೇಕ್ಷಕರನನ್ನು ಸಮಾಧಾನಿಸೋದಿಲ್ಲ. ನಿಜಕ್ಕೂ ಕೋಮಲ್ ಇನ್ನು ಮುಂದೆ ನಾಯಕನಾಗೋ ತಲುಬು ಬಿಟ್ಟು, ಮತ್ತೆ ಹಾಸ್ಯ ಪಾತ್ರಗಳಿಗೆ ಮರಳೋದೊಳಿತು. ಜಗ್ಗಣ್ಣ ತನ್ನ ತಮ್ಮನಿಗೆ ಒಂದಷ್ಟು ಬುದ್ಧಿ ಹೇಳಬಾರದೇ?

The post Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು! appeared first on Cini Shodha.

komal kumar: ಜಗ್ಗಣ್ಣನ ತಮ್ಮನ ನಸೀಬು ಸರಿಯಾದ ಲಕ್ಷಣ!
ಕನ್ನಡದ ಹಾಸ್ಯ ನಟರ ಸಾಲಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು (komal kumar) ಕೋಮಲ್ ಕುಮಾರ್. ಅಣ್ಣ (actor jaggesh) ಜಗ್ಗೇಶ್ ನಾಯಕ ನಟನಾಗಿ ಮಿಂಚಿದರೆ, ತಮ್ಮ ಕೋಮಲ್ ಹಾಸ್ಯ ಪಾತ್ರಗಳ ಮೂಲಕ ತಮ್ಮದೇ ಆದ ಖದರ್ ಹೊಂದಿದ್ದರು. ಬೇರೆ ಬೇರೆ ನಟರ ಸಿನಿಮಾಗಳಲ್ಲಿ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದವರು ಕೋಮಲ್. ತಮ್ಮದೇ ಶೈಲಿಯ ಡೀಲಾಗ್ ಡೆಲಿವರಿ, ವಿಶಿಷ್ಟ ಮ್ಯಾನರಿಸಂ ಮೂಲಕ ದೊಡ್ಡದೊಂದು ಅಭಿಮಾನಿ ಬಳಗವೂ ಈತನಿಗೆ ಸಿಕ್ಕಿತ್ತು. ಆದರೆ, ಕನ್ನಡದಲ್ಲಿ ಹೀಗೆ ಹಾಸ್ಯ ನಟರಾಗಿ ಮಿಂಚಿದವರಿಗೆ ಒಂದಷ್ಟು ಗಾವುದ ಕ್ರಮಿಸುತ್ತಲೇ ಏಕಾಏಕಿ ನಾಯಕನಾಗೋ ತಲುಬು ಹತ್ತಿಕೊಳ್ಳುತ್ತೆ. ಅದು ಬಹುತೇಕರ ಪಾಲಿಗೆ ಶಾಪವಾದದ್ದೂ ಇದೆ. ಅದೇ ರೀತಿ ಕೋಮಲ್ ಕುಮಾರ್ ಗೂ ಹಾಸ್ಯ ನಟನಾಗಿ ಉತ್ತುಂಗದಲ್ಲಿರುವಾಗಲೇ ನಾಯಕನಾಗೋ ಆಸೆ ಚಿಗುರಿಕೊಂಡಿತ್ತು. ಅದರ ಸಲುವಾಗಿ ಮಾಡಿದ ಸರ್ಕಸ್ಸುಗಳಿಂದಾಗಿ ಅವರ ವೃತ್ತಿಬದುಕಿನ ಅಮೂಲ್ಯವಾದ ಒಂದಷ್ಟು ವರ್ಷಗಳು ಅಕ್ಷರಶಃ ನಜ್ಜುಗುಜ್ಜಾಗಿ ಬಿಟ್ಟಿದ್ದವು!

ಹೀಗೆ ನಾಯ ನಟನಾಗಿ ಹಲವಾರು ಏರಿಳಿತಗಳನ್ನು, ನಷ್ಟಗಳನ್ನು ಕಂಡಿದ್ದ (komal kumar) ಕೋಮಲ್, ಒಂದು ಹಂತದಲ್ಲಿ ವೃತ್ತಿ ಬದುಕೇ ಮುಗಿದು ಹೋಯ್ತೆಂಬಂಥಾ ಹತಾಶೆಗೆ ಬಿದ್ದಂತಿದ್ದರು. ಇಂಥಾ ಸೋಲು ಗೆಲುವುಗಳು ಚಿತ್ರರಂಗದಲ್ಲಿ ಹೊಸತೇನೂ ಅಲ್ಲ. ಒಂದು ಘಟ್ಟದಲ್ಲಿ ತುಸು ಅಧೀರರಾದಂತೆ ಕಾಣಿಸಿದ್ದ ಕೋಮಲ್ ಪಾಲಿಗೀಗ ಅದೃಷ್ಟದ ಪರ್ವಕಾಲವೊಂದು ಕಣ್ತೆರೆದಂತೆ ಕಾಣಿಸುತ್ತಿದೆ. ಈ ವಾರ ಬಿಡುಗಡೆಗೊಳ್ಳಲಿರುವ ಯಲಾ ಕುನ್ನಿ ಎಂಬ ಚಿತ್ರದ ಸುತ್ತ ಹಬ್ಬಿಕೊಂಡಿರೋ ಪಾಸಿಟಿವ್ ವಾತಾವರಣ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ನಿಜ, ಕೋಮಲ್ ಓರ್ವ ಪ್ರತಿಭಾನ್ವಿತ ಕಲಾವಿದ. ಆದರೆ, ಅವರ ಆಯ್ಕೆಯಲ್ಲಿ ತುಸು ಯಡವಟ್ಟುಗಳಾದಂತಿದ್ದವು. ಆದರೀಗ ಯಲಾಕುನ್ನಿ ಅವರ ವೃತ್ತಿ ಬದುಕಿನ ಉತ್ಕೃಷ್ಟ ಆಯ್ಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿದ್ದಾವೆ.

ಇದು ಹಳ್ಳಿಯೊಂದರಲ್ಲಿ ಘಟಿಸುವ ವಿದ್ಯಮಾನಗಳ ಸುತ್ತ ನಡೆಯುವ ಸಿನಿಮಾವಂತೆ. ಕೋಮಲ್ ಇಲ್ಲಿ ಡಬಲ್ ರೋಲ್ ನಿರ್ವಹಿಸಿದ್ದಾರೆ. ತಂದೆಯ ಪಾತ್ರದಲ್ಲಿ ಕನ್ನಡ ಚಿತ್ರರಂಗ ಕಂಡ ಮಹಾನ್ ಕಲಾವಿದ ವಜ್ರಮುನಿಯ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಒಂದಷ್ಟು ಛಾಯೆಗಳು ಥೇಟು ವಜ್ರಮುನಿಯವರನ್ನೇ ಎರಕ ಹೊಯ್ದಂತೆ ಭಾಸವಾಗುತ್ತಿದೆ. ಅದರ ಬಗ್ಗೆ ಮೆಚ್ಚುಗೆ ಮೂಡಿಕೊಳ್ಳುತ್ತಲೇ, ನಿರೀಕ್ಷೆಗಳೂ ನಿಗಿನಿಗಿಸುತ್ತಿವೆ. ಈ ಸಿನಿಮಾ ಮೂಲಕ ಕೋಮಲ್ ವೃತ್ತಿ ಬದುಕಿಗೆ ಹೊಸಾ ಶಕ್ತಿ ಸಿಗಲಿದೆಯಾ? ಇದುವರೆಗೆ ಸಾಲು ಸಾಲಾಗಿ ಸಿಕ್ಕ ಸೋಲಿನ ಹೊಡೆತಗಳಿಂದ ಆತ ಚೇತರಿಸಿಕೊಳ್ಳುತ್ತಾರಾ? ಇಂಥಾ ನಾನಾ ಪ್ರಶ್ನೆಗಳಿಗೆ ಈ ವಾರವೇ ನಿಖರವಾದ ಉತ್ತರ ಸಿಗಲಿದೆ. ಕೋಮಲ್ ಸೋಲಿನ ಶೂಲಕ್ಕೆ ಸಿಕ್ಕಿದ್ದನ್ನು ಅಣ್ಣ ಜಗ್ಗಣ್ಣ ಆಗಾಗ ಜ್ಯೋತಿಷ್ಯದ ಭೂಮಿಕೆಯಲ್ಲಿ ವಿಶ್ಲೇಶಿಸೋದಿದೆ. ಗ್ರಹಗತಿ ಅದೂ ಇದೂ ಅಂತೆಲ್ಲ ಮಾತಾಡೋದಿದೆ. ಆದರೆ, ಸೋಲು ಸುತ್ತಿಕೊಂಡಿದ್ದರಲ್ಲಿ ಆಯ್ಕೆಗಳ ಪಾಲಿದೆಯೇ ಹೊರತು ಗ್ರಹಗತಿಗಳ ತಪ್ಪಿಲ್ಲ ಅಂತ ಕೋಮಲ್ ಆಪ್ತ ಬಳಗವೇ ಅಭಿಪ್ರಾಯ ಪಡುತ್ತಿದೆ!

The post komal kumar: ಜಗ್ಗಣ್ಣನ ತಮ್ಮನ ನಸೀಬು ಸರಿಯಾದ ಲಕ್ಷಣ! appeared first on Cini Shodha.