hollywood – Cini Shodha

Toxic Movie: ಭಾರತೀಯ ಚಿತ್ರರಂಗಕ್ಕೆ ನ್ಯಾಟಲಿ ಬರ್ನ್ ಆಗಮನ!
ಪಕ್ಕಾ ಹಾಲಿವುಡ್ ಛಾಯೆಯ ಮೂಲಕ ಟಾಕ್ಸಿಕ್ ರಾಯನ ಪರಿಚಯಾತ್ಮಕ ಟೀಸರ್ ಸದ್ದು ಮಾಡುತ್ತಿದೆ. ಅಭಿಮಾನದಾಚೆಗೂ ರಾಕಿಂಗ್ ಸ್ಟಾರ್ ಯಶ್ ಅವತಾರ ಕಂಡು ಒಂದಷ್ಟು ಮಂದಿ ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ವಿಮರ್ಶೆ, ವಿರೋಧಾಭಾಸಗಳೂ ವ್ಯಕ್ತವಾಗುತ್ತಿವೆ. ಪ್ರಧಾನವಾಗಿ, ಸಿನಿಮಾದ ಕಥೆ ಯಾವ ಥರದ್ದಿರಬಹುದೆಂಬ ಚರ್ಚೆಯೊಂದು ಟ್ರೈಲರ್, ಟೀಸರ್ ಮೂಲಕ ಮೂಡಿಕೊಳ್ಳೋದು ಮಮೂಲು. ಆದರೆ, ಟಾಕ್ಷಿಕ್ ವಿಚಾರದಲ್ಲದು ಅನಿರೀಕ್ಷಿತ ತಿರುವು ಕಂಡಿದೆ. ಆದರೆ, ಅದು ಸಿನಿಮಾ ತಂಡದ ಪಾಲಿಗೆ ಅಪೇಕ್ಷಿತ ವಿಚಾರ. ಈ ನಿಟ್ಟಿನಲ್ಲಿ ಟಾಕ್ಸಿಕ್ ಟೀಮು ಭರ್ಜರಿಯಾಗಿಯೇ ಗೆದ್ದಿದೆ. ಮಂದಿ ತಲೆ ಕೆಡಿಕೊಳ್ಳಲೆಂದೇ ಕಾರೊಳಗೆ ಫಾರಿನ್ ಸ್ಟೈಲಿನ ಕಾಮ ಕೇಳಿಯ ದೃಷ್ಯಗಳನ್ನಿಟ್ಟಿದ್ದಾರೆ. ಈಗಂತೂ ಅದರ ಸುತ್ತಲೇ ಚರ್ಚೆಗಳು ನಡೆಯುತ್ತಿವೆ.

ಕನ್ನಡದ ಮಟ್ಟಿಗೆ ಟಾಕ್ಸಿಕ್‌ನದ್ದು ಮಡಿವಂತಿಕೆಯ ಡೌಲುಗಳನ್ನು ಅಲುಗಾಡಿಸುವ ನಡೆ. ಕನ್ನಡದಲ್ಲಿ ಇಂಥಾ ದೃಷ್ಯಗಳನ್ನು ಸಾಂಕೇತಿಕ ಸಂಜ್ಞೆಗಳ ಮೂಲಕ ತೋರಿಸುವ ಪರಿಪಾಠವಿತ್ತು. ಯಶ್ ಚಿತ್ರ ಅದನ್ನು ಸಾರಾಸಗಟಾಗಿ ಬದಲಾಯಿಸಿ ಬಿಟ್ಟಿದೆ. ಹಾಗಂತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ವಿಚಾರದಲ್ಲಿ ಸ್ವಂತದ ಹಾದಿ ಹಿಡಿದಿಲ್ಲ. ಆಕೆ ಹಾಲಿವುಡ್ಡಿನ ಜನಪ್ರಿಯ ಧಾಟಿಯನ್ನು ಆಯ್ದುಕೊಂಡಿದ್ದಾರಷ್ಟೆ. ಇದೆಲ್ಲ ಏನೇ ಇದ್ದರೂ ಕಾರೊಳಗಿನ ಹಸಿಬಿಸಿ ರೊಮ್ಯಾನ್ಸಿನಲ್ಲಿ ಕಾಣಿಸಿಕೊಂಡ ನಟಿ ಯಾರು ಅಂತೊಂದು ಕುತೂಹಲ ಅನೇಕರಲ್ಲಿದೆ. ಅಂದಹಾಗೆ, ಟಾಕ್ಸಿಕ್‌ನ ಈ ಕಾಮಿಣಿ ಹಾಲಿವುಡ್ಡಿನ ಖ್ಯಾತ ನಟಿ, ನಿರ್ಮಾಪಿ, ಮಾಡಲ್ ನ್ಯಾಟಲಿ ಬರ್ನ್!

Toxic Teaser Review: ಪ್ಯಾನಿಂಡಿಯಾ ಪ್ರಭೆಯಾಚೆ ಕೈಚಾಚಿದ ಯಶ್!

ನ್ಯಾಟಲಿ ಬರ್ನ್ ಹಾಲಿವುಡ್ ಸಿನಿಮಾ ವೀಕ್ಷಕರಿಗೆಲ್ಲ ಪರಿಚಿತ ನಟಿ. ಸದಾ ಕ್ರಿಯಾಶೀಲವಾಗಿರುವ ಈಕೆ ಒಂದಷ್ಟು ಯಶಸ್ವೀ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಇಂಥಾ ನ್ಯಾಟಲಿ ಬರ್ನ್ ಟಾಕ್ಸಿಕ್ಕಿಗೆ ಒಂದಷ್ಟು ಹಣ ಹೂಡಿದ್ದಾಳೆಂದೂ ಹೇಳಲಾಗುತ್ತಿದೆ. ಬಹುಶಃ ಭಾರತೀಯ ಚಿತ್ರರಂಗದ ನಾಯಕಿ ಇಂಥಾ ಸೀನುಗಳಲ್ಲಿ ನಟಿಸಲು ಒಪ್ಪಿಕೊಳ್ಳೋದು ಕಷ್ಟ. ರಾಕಿ ಸಾವಂತ್ ಮನಸು ಮಾಡಬಹುದಷ್ಟೆ. ಈ ಸತ್ಯ ಗೊತ್ತಿದ್ದೇ ಗೀತು ನ್ಯಾಟಲಿಯನ್ನು ಆಯ್ಕೆ ಮಾಡಿಕೊಂಡಂತಿದೆ. ಇದೊಂದು ಸೀನೇ ಒಂದಿಡೀ ಟಾಕ್ಸಿಕ್ ಟೀಸರ್‌ನ ಆಕರ್ಷಣೆಯಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಗೀತು ಮೋಹನ್ ದಾಸ್ ಸರಿಕಟ್ಟಾದ ದಾಳವನ್ನೇ ಉರುಳಿಸಿದ್ದಾರೆ. ಯಾಕೆಂದರೆ, ಪಡ್ಡೆಗಳು, ಮಡಿವಂತರು ಸೇರಿದಂತೆ ಎಲ್ಲರೊಳಗೂ ನ್ಯಾಟಲಿಯ ಕಡೇಯ ಕೂಗು ಮತ್ತು ನಿಂತಲ್ಲೇ ಕುಲುಕಿದ ಕಪ್ಪು ಕಾರಿನ ಛಾಯೆ ಆವರಿಸಿಕೊಂಡಿದೆ!

keywords: toxic, yash, geethu, mohandas, movie, teaser, romance

The post Toxic Movie: ಭಾರತೀಯ ಚಿತ್ರರಂಗಕ್ಕೆ ನ್ಯಾಟಲಿ ಬರ್ನ್ ಆಗಮನ! appeared first on Cini Shodha.

pooja hegde: ತೆಲುಗು ಚಿತ್ರರಂಗಕ್ಕೆ ವಿದಾಯ ಹೇಳ್ತಾಳಾ ಮಂಗಳೂರು ಹುಡುಗಿ?
ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು ಬಾಚಿಕೊಂಡವರೂ ಇಲ್ಲಿ ಕಾಣಿಸುತ್ತಾರೆ; ಅವಕಾಶಗಳ ಜಾತ್ರೆಯಲ್ಲಿ ನಿಂತಂತಿದ್ದವರು ಎಲ್ಲ ಮುಗಿದಾದ ನಂತರ ಶೆಡ್ಡು ಸೇರುವ ತೇರಿನಂತಾದವರ ಸಂಖ್ಯೆಗೇನೂ ಕೊರತೆಯಿಲ್ಲ. ಅಂಥಾದ್ದೊಂದು ಆಘಾತದಿಂದ ತತ್ತರಿಸಿ ಹೋಗಿದ್ದಾಕೆ ಮಂಗಳೂರು ಮೂಲದ ಹುಡುಗಿ (pooja hegde) ಪೂಜಾ ಹೆಗ್ಡೆ. ಒಂದು ಕಾಲದಲ್ಲಿ (rashmika mandanna) ರಶ್ಮಿಕಾ ಮಂದಣ್ಣಗಿಂತಲೂ ವೇಗವಾಗಿ ತೆಲುಗು ಚಿತ್ರರಂಗದಲ್ಲಿ ಬೆಳೆದು ನಿಂತಿದ್ದ ಪೂಜಾ, ವೃತ್ತಿ ಬದುಕಿನಲ್ಲಿ ಇಂಥಾ ಪಾತಾಳ ಕಾಣುತ್ತಾಳೆಂಬುದನ್ನು ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ!

ಸಿನಿಮಾ ಜಗತ್ತಿನ ಹವಾಮಾನ ಯಾರ ವಿಚಾರದಲ್ಲಿ ಹೇಗೆಲ್ಲ ಬದಲಾಗಬಹುದೆಂದು ಹೇಳಲು ಬರುವುದಿಲ್ಲ. ಒಂದರ ಹಿಂದೊಂದರಂತೆ ಅವಕಾಶಗಳು ಮುಗಿಬೀಳೋದನ್ನು ನೋಡಿ ನಂದೇ ಹವಾ ಎಂಬಂತೆ ಅಬ್ಬರಿಸಿದವರೆಲ್ಲ ಅಕ್ಷರಶಃ ಹವಾ ಇಳಿದು ಹೋದ ಬಲೂನಿನಂತೆ ಮುರುಟಿಕೊಂಡಿದ್ದಿದೆ. ಆದರೆ, ಈ ಹುಡುಗಿ ಪೂಜಾ ಅಂಥಾ ಯಾವುದೇ ಮೆರೆದಾಟವನ್ನೂ ನಡೆಸಿರಲಿಲ್ಲ. ಸಿಕ್ಕ ಅವಕಾಶವನ್ನೆಲ್ಲ ಬಳಸಿಕೊಂಡು ಯಶಸ್ಸಿನ ಏಣಿ ಹತ್ತಿ ನಕ್ಕಿದ್ದಳಷ್ಟೆ. ಅದೇನು ದುರಾದೃಷ್ಟ ಕವುಚಿಕೊಂಡಿತೋ ಗೊತ್ತಿಲ್ಲ; ಪೂಜಾಳ ಬೇಡಿಕೆ ಏಕಾಏಕಿ ಮಗುಚಿಕೊಂಡು ಬಿಟ್ಟಿತ್ತು. ಆ ನಂತರ ಮಂಗಳೂರು ಹುಡುಗಿಯ ಪಾಲಿಗೆ ಪಕ್ಕಾ ನಸೀಬುಗೇಡಿ ಪರ್ವವೊಂದು ಎದುರಾಗಿ ಬಿಟ್ಟಿತ್ತು.

ಗುಂಟೂರ್ ಖಾರಂನಂಥಾ ಬಿಗ್ ಬಜೆಟ್ ಚಿತ್ರಗಳೇ ಪೂಜಾ ಕೈ ತಪ್ಪಿ ಹೋಗಲಾರಂಭಿಸಿದ್ದವು. ಇಂಥಾ ಆಘಾತಗಳು ವರ್ಷವೊಂದರಲ್ಲೇ ಆಕೆಗೆ ಅನೇಕ ಬಾರಿ ಎದುರಾಗಿ ಬಿಟ್ಟಿತ್ತು. ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟಿತೆಂದರೆ, ಸರಿಕಟ್ಟಾದೊಂದು ಅವಕಾಶ ಸಿಕ್ಕಲೆಂಬಂತೆ ಪೂಜಾ ಕಾಯುವಂತಾಗಿತ್ತು. ಇಂಥಾ ಅನಿಶ್ಚಿತ ವಾತಾವರಣದಲ್ಲಿಯೇ ವರ್ಷಗಗಟ್ಟಲೆ ಕಾದಿದ್ದ ಪೂಜಾಗೆ ಇದೀಗ ತೆಲುಗಿನಲ್ಲಿ ಅವಕಾಶಕ್ಕಾಗಿ ಅರಸಿ ಪ್ರಯೋಜನವಿಲ್ಲ ಎಂಬ ಜ್ನಾನೋದಯವಾದಂತಿದೆ. ಅದರ ಫಲವಾಗಿಯೇ ಬಾಲಿವುಡ್ ನತ್ತ ಪ್ರಧಾನವಾಗಿ ಗಮನ ಹರಿಸಿದ್ದಾಳೆ.

ಸದ್ಯದ ಮಟ್ಟಿಗೆ ಪೂಜಾ ಮುಂದೆ ಬಾಲಿವುಡ್ಡಿನಲ್ಲಿ ಒಂದಷ್ಟು ಅವಕಾಶಗಳಿರುವಂತೆ ಕಾಣಿಸುತ್ತಿದೆ. ಮೊದಲನೆಯದ್ದಾಗಿ, ರೋಶನ್ ಆಂಡ್ರ್ಯೂಸ್ ನಿರ್ದೇಶನದ ಚಿತ್ರಕ್ಕಾಗಿನ ತಯಾರಿಯಲಲಿ ಪೂಜಾ ಬ್ಯುಸಿಯಾಗಿದ್ದಾಳೆ. ಈ ಸಿನಿಮಾದಲ್ಲಿ ಆಕೆ ಶಾಹಿದ್ ಕಪೂರ್ ಜೊತೆ ನಾಯಕಿಯಾಗಿ ನಟಿಸಲಿದ್ದಾಳೆ. ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಲಿರುವ, ಇನ್ನೂ ಶೀರ್ಷಿಕೆ ನಿಕ್ಕಿಯಾಗದ ಚಿತ್ರಕ್ಕೂ ಪೂಜಾ ನಾಯಕಿಯಾಗೋದು ಪಕ್ಕಾ. ಇನ್ನುಳಿದಂತೆ, ಮತ್ತೊಂದು ಚಿತ್ರದಲ್ಲಿ ಅಹಾನ್ ಶೆಟ್ಟಿಗೆ ನಾಯಕಿಯಹಾಗಿಯೂ ನಟಿಸಲು ಒಪ್ಪಿಕೊಂಡಿದ್ದಾಳೆ. ಇದುವರೆಗೂ ನಾನಾ ತೆರನಾದ ಪಾತ್ರಗಳಲ್ಲಿ, ಹಲವಾರು ಹಿಟ್ ಸಿನ ಇಮಾಗಳಲ್ಲಿ ನಟಿಸಿರುವಾಕೆ ಪೂಜಾ ಹೆಗ್ಡೆ. ಒಂದು ವನವಾಸದ ಬಳಿಕ ಆಕೆಯ ವೃತ್ತಿ ಬದುಕಿನಲ್ಲೀಗ ಸೆಕೆಂಡ್ ಇನ್ನಿಂಗ್ಸ್ ಶುರುವಾದಂತಿದೆ. ಅದರ ಪರಿಣಾಮ, ಫಲಿತಾಂಶಗಳೇನೆಂಬುದನ್ನು ಕಾಲವೇ ನಿರ್ಧರಿಸಲಿದೆ!

The post pooja hegde: ತೆಲುಗು ಚಿತ್ರರಂಗಕ್ಕೆ ವಿದಾಯ ಹೇಳ್ತಾಳಾ ಮಂಗಳೂರು ಹುಡುಗಿ? appeared first on Cini Shodha.