amruthaiyengar – Cini Shodha

Love Mocktail3 Movie: ಕಾರ್ಗತ್ತಲ ಕಾಲದಲ್ಲಿ ಡಾರ್ಲಿಂಗ್ ಕೃಷ್ಣ ಹಚ್ಚಿದ್ದ ಕಂದೀಲು!
ಲವ್ ಮಾಕ್ಟೇಲ್3 ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಮಾರ್ಚ್ 19ರಂದು ಯುಗಾದಿಯ ಶುಭ ಘಳಿಗೆಯಲ್ಲಿ ಬಿಡುಗಡೆಗೊಳ್ಳಲಿರುವ ಲವ್ ಮಾಕ್ಟೇಲ್3ಗೆ ಎಲ್ಲ ಕೋನಗಳಿಂದಲೂ ಹಸನಾದ ವಾತಾವರಣ ತಂತಾನೇ ಸೃಷ್ಟಿಯಾಗಿದೆ. ಈ ಸಿನಿಮಾದ ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ, ಈ ಬಾರಿ ಮತ್ತೊಂದಷ್ಟು ಗಾಢವಾದ ಗೆಲುವಿನ ಸೂಚನೆಗಳು ಕಾಣಿಸುತ್ತಿವೆ. ಇದೆಲ್ಲದಕ್ಕೆ ಕಾರಣವಾಗಿರೋದು ಪ್ರೇಕ್ಷಕ ವಲಯದಲ್ಲಿ ಮಾಯಕವೆಂಬಂತೆ ಪ್ರತಿಷ್ಠಾಪಿಸಲ್ಪಟ್ಟಿರುವ ಗಾಢ ನಂಬಿಕೆ. ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋದರೂ ಕೂಡಾ ಧುರಂಧರ್ ಎಂಬ ದೊಡ್ಡ ಸಿನಿಮಾ ಆ ದಿನವೇ ಬಿಡುಗಡೆಗೊಳ್ಳಲಿದೆ. ಆ ಬಿರುಗಾಳಿಗೂ ಅಂಜದೆ ಕಾಲೂರಿ ನಿಲ್ಲುವ ಧೈರ್ಯ ಮಾಡಿರುವ ಡಾರ್ಲಿಂಗ್ ಕೃಷ್ಣ ದಂಪತಿಯ ಆತ್ಮವಿಶ್ವಾಸವಿದೆಯಲ್ಲಾ? ಅದನ್ನು ಕಂಡ ಪ್ರೇಕ್ಷಕರಿಗೆಲ್ಲ ಲವ್ ಮಾಕ್ಟೇಲ್೩ ಬಗೆಗಿನ ಭರವಸೆ ಮತ್ತಷ್ಟು ತೀವ್ರಗೊಂಡಿದೆ!

ಮಾರ್ಚ್ ೧೯ಕ್ಕೆ ಯುಗಾದಿ ರಜೆ ಇರೋದರಿಂದ, ವೀಕೆಂಡ್ ಸಾಥ್ ಕೊಡೋದರಿಂದ ಆ ದಿನಾಂಕದತ್ತ ಅನೇಕ ಕನ್ನಡ ಚಿತ್ರಗಳು ಕಣ್ಣಿಟ್ಟಿದ್ದವು. ಯಾವಾಗ ಟಾಕ್ಸಿಕ್ ಮತ್ಗತು ಧುರಂಧರ್ ಆ ದಿನವೇ ಲಗ್ಗೆಯಿಡಲಿರೋ ಸುದ್ದಿ ಹೊರ ಬಿತ್ತೋ, ನಜ್ಜುಗುಜ್ಜಾಗುವ ಭಯದಿಂದ ಬಹುತೇಕರು ಕಣದಿಂದ ಹಿಂದೆ ಸರಿದಿದ್ದರು. ಆದರೆ, ಟಾಕ್ಸಿಕ್ ಮುಂದಕ್ಕೆ ಹೋಗುತ್ತಲೇ, ಲವ್ ಮಾಕ್ಟೇಲ್ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಅಚ್ಚರಿದಾಯಕ ನಿರ್ಧಾರ ತಳೆದಿತ್ತು. ಆ ದಿನವೇ ಲವ್ ಮಾಕ್ಟೇಲ್ ೩ ಬಿಡುಗಡೆಗೆ ಹಸಿರು ನಿಶಾನೆ ತೋರಿಸುತ್ತಲೇ ಡಾರ್ಲಿಂಗ್ ದಂಪತಿ ತುಸುವೂ ಹಿಂದೇಟು ಹಾಕದೆ ಒಪ್ಪಿಕೊಂಡಿದ್ದರು. ಇಂಥಾ ಆತ್ಮವಿಶ್ವಾಸದ ಹಿಂದಿರೋದು ಲವ್ ಮಾಕ್ಟೇಲ್೩ ಚಿತ್ರದ ಕಂಟೆಂಟಿನ ಕಸುವು. ಬಹುಶಃ ಒಟ್ಟಾರೆ ಸಿನಿಮಾ ಚೆಂದಗೆ ಮೂಡಿ ಬಾರದಿದ್ದಿದ್ದರೆ, ಮಾರ್ಚ್ ೧೯ ಅದೆಂಥಾ ಒಳ್ಳೆ ಘಳಿಗೆಯಾಗಿದ್ದರೂ ಕೂಡಾ ಬಿಡುಗಡೆಗೆ ಸಜ್ಜಾಗುವ ಧೈರ್ಯ ಮಾಡಲು ಸಾಧ್ಯವಾಗುತ್ತಿರಲಿಲ್ಲ.

Love Mocktail3 Movie: ಚೆಂದದ ಅನುಭೂತಿಯೊಂದರ ಸ್ಪಷ್ಟ ಸುಳಿವು!

ಟಾಕ್ಸಿಕ್ ಬಿಡುಗಡೆಗೊಳ್ಳದಿದ್ದರೂ ಧುರಂಧರ್ ಹಾವಳಿ ಪಕ್ಕಾ ಆಗಿದೆ. ಹೇಳಿಕೇಳಿ ಇದು ಬಹುನಿರೀಕ್ಷಿತ ಚಿತ್ರ. ಇಂಥಾ ಸಿನಿಮಾಗಳು ತೆರೆಗಂಡಾಗ ಕನ್ನಡ ಚಿತ್ರಗಳು ನಾನಾ ಪಡಿಪಾಟಲು ಪಟ್ಟಿದ್ದಿದೆ. ಆದರೆ, ಡಾರ್ಲಿಂಗ್ ಕೃಷ್ಣ ಮುಖದಲ್ಲಿ ಆ ಆತಂಕದ ಸಣ್ಣ ಗೆರೆಯೂ ಕಾಣಿಸುತ್ತಿಲ್ಲ. ಬಹುಶಃ ಅಂಥಾ ಭಯವಿದ್ದಿದ್ದರೆ, ಕೊರೋನಾ ಕಾಲದಲ್ಲಿ ಲವ್ ಮಾಕ್ಟೇಲ್ ಚಿತ್ರವನ್ನು ರೂಪಿಸಲೂ ಸಾಧ್ಯವಾಗುತ್ತಿರಲಿಲ್ಲ. ಕೊರೋನಾ ಕಾಲದಲ್ಲಿ ವರ್ಷಗಟ್ಟಲೆ ಲಾಕ್‌ಡೌನ್ ಆಗಿ ಚಿತ್ರರಂಗ ನಿತ್ರಾಣಗೊಂಡಿತ್ತು. ಚಿತ್ರಮಂದಿರಗಳು ಯಾವಾಗ ಬಾಗಿಲು ತೆರೆದುಕೊಳ್ಳುತ್ತವೆ? ಕೊಂದೇ ಬಿಡುವ ವೈರಸ್ಸಿನ ಭಯ ಮೀರಿಕೊಂಡು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದಾ? ಇಂತಾ ಆತಂಕ, ಅನುಮಾನಗಳಿರುವಾಗಲೇ ಕೃಷ್ಣ ತಮ್ಮ ವೃತ್ತಿ ಬದುಕಿನ ಮಹತ್ವದ ತೀರ್ಮಾನ ಕೈಗೊಂಡಿದ್ದರು.

ತಾವೇ ನಿರ್ದೇಶನಕ್ಕಿಳಿಯೋ ಮನಸು ಮಾಡಿದ್ದ ಕೃಷ್ಣ ಲವ್ ಮಾಕ್ಟೇಲ್ ಸಿನಿಮಾವನ್ನು ಲಾಕ್‌ಡೌನ್ ಹಿಂಚುಮುಂಚಲ್ಲಿಯೇ ಚಾಲೂ ಮಾಡಿದ್ದರು. ಕೊರೋನಾ ಕಂಟಕದ ಕಾಲದಲ್ಲಿಯೇ ಬಿಡುಗಡೆಗೊಳಿಸಿ ಸಮ್ಮೋಹಕ ಗೆಲುವು ದಕ್ಕಿಸಿಕೊಂಡಿದ್ದರು. ಕೊರೋನಾ ಗ್ರಹಣ ನೀಗಿಸಿ ಚಿತ್ರರಂಗದತ್ತ ಭರವಸೆಯ ಬೆಳಕೊಂದು ಹಾಯುವಲ್ಲಿ ಲವ್ ಮಾಕ್ಟೇಲ್ ಚಿತ್ರದ ಪಾತ್ರ ಹಿರಿದಾಗಿದೆ. ದುರಿತ ಕಾಲದಲ್ಲಿ ಧೈರ್ಯ ಮಾಡಿ ಡಾರ್ಲಿಂಗ್ ಕೃಷ್ಣ ಹಚ್ಚಿಟ್ಟ ಲವ್ ಮಾಕ್ಟೇಲ್ ಎಂಬ ಹಣತೆಯ ಪ್ರಭೆಯಲ್ಲಿಯೇ ಚಿತ್ರರಂಗ ಭರವಸೆಯತ್ತ ಮುಖ ಮಾಡಿತ್ತು. ಆ ನಂತರದಲ್ಲಿ ಲವ್ ಮಾಕ್ಟೇಲ್೨ ಚಿತ್ರಕ್ಕೂ ಗೆಲುವು ಸಿಕ್ಕಿತ್ತು. ಆ ಸರಣಿಯ ಕೊನೇಯ ಅಧ್ಯಾಯದಂತಿರೋ ಲವ್ ಮಾಕ್ಟೇಲ್೩ ಇದೀಗ ಅದ್ದೂರಿಯಾಗಿ ತೆರೆಗಾಣಲು ಸಜ್ಜಾಗಿದೆ. ಕಥೆ, ನಿರ್ದೇಶನ ಸೇರಿದಂತೆ ಎಲ್ಲದರಲ್ಲಿಯೂ ಹೊಸತನವಿಟ್ಟಿರೋ ಡಾರ್ಲಿಂಗ್ ಕೃಷ್ಣರ ಪ್ರಯತ್ನಕ್ಕೆ ಪ್ರೇಕ್ಷಕರ ಕಡೆಯಿಂದ ಎಂಥಾ ಪ್ರತಿಕ್ರಿಯೆ ಸಿಗಲಿದೆ ಅನ್ನೋದಕ್ಕೆ ಇನ್ನೆರಡು ದಿನಗಳಲ್ಲಿ ನಿಖರ ಉತ್ತರ ಸಿಗಲಿದೆ.

keywords: love mocktail3, darling krishna, milana nagaraj, sandalwood

The post Love Mocktail3 Movie: ಕಾರ್ಗತ್ತಲ ಕಾಲದಲ್ಲಿ ಡಾರ್ಲಿಂಗ್ ಕೃಷ್ಣ ಹಚ್ಚಿದ್ದ ಕಂದೀಲು! appeared first on Cini Shodha.

Love Mocktail3 Movie: ಚೆಂದದ ಅನುಭೂತಿಯೊಂದರ ಸ್ಪಷ್ಟ ಸುಳಿವು!
ಕೆಜಿಎಫ್ ನಂತರದಲ್ಲಿ ಎಲ್ಲರ ಚಿತ್ತವೂ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳತ್ತ ವಾಲಿಕೊಂಡಿದೆ. ಕೆಜಿಎಫ್‌ನಂಥಾ ಸರಣಿ ಚಿತ್ರಗಳು ಅಪ್ಪಳಿಸಿದ ನಂತರ ಒಂದಿಡೀ ಕನ್ನಡ ಚಿತ್ರರಂಗವೇ ಕಪ್ಪು ಕಪ್ಪು ಛಾಯೆ ಮತ್ತು ಅದರಿಂದ ರಾಚಿಕೊಂಡಿದ ಭ್ರಮೆಯ ಧೂಳಿನ ನಡುವೆ ಉಸಿರುಗಟ್ಟಿದ ಸ್ಥಿತಿಗೀಡಾಗಿತ್ತು. ಇದರ ನಡುವೆ ನಿಜಕ್ಕೂ ಬರಖತ್ತಾಗಬಹುದಾಗಿದ್ದ ಒಂದಷ್ಟು ಸಿನಿಮಾಗಳು ನಾನಾ ಸಂಕಷ್ಟಗಳನ್ನು ಎದುರಿಸಬೇಕಾದದ್ದೀಗ ಇತಿಹಾಸ. ಇಂಥಾದ್ದರ ನಡುವೆ ಭಿನ್ನ ಧಾಟಿಯ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯಬಲ್ಲ ಪ್ರಯತ್ನಗಳು ಮಾತ್ರವೇ ಚಿತ್ರರಂಗದ ಹರಿವನ್ನು ಯಥಾ ಸ್ಥಿತಿಯಲ್ಲಿಡಲು ಸಾಧ್ಯ. ಈ ಹಾದಿಯಲ್ಲಿ ಭರವಸೆ ಹುಟ್ಟು ಹಾಕಿರುವ ಸಿನಿಮಾ ಲವ್‌ಮಾಕ್ಟೇಲ್೩. ಡಾರ್ಲಿಂಗ್ ಕೃಷ್ಣ ತಮ್ಮ ನಿರ್ದೇಶನದ ಕಸುವಿನಿಂದಲೇ ಈ ಸರಣಿಯ ಎರಡು ಚಿತ್ರಗಳನ್ನು ಗೆಲ್ಲಿಸಿಕೊಂಡಿದ್ದರು. ಇದೀಗ ಲವ್ ಮಾಕ್ಟೇಲ್೩ ಚಿತ್ರದ ಟ್ರೈಲರ್‌ಗೆ ಸಿಗುತ್ತಿರೋ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಈ ಬಾರಿಯೂ ಸಮ್ಮೋಹಕ ಗೆಲುವೊಂದು ಪ್ರಾಪ್ತಿಯಾಗಬಲ್ಲ ಸೂಚನೆಗಳು ಡಟ್ಟೈಸಿವೆ!

ಅಷ್ಟಕ್ಕೂ ಒಂದು ಸಿನಿಮಾ ಗೆದ್ದ ನಂತರ ಅದರ ಸೀಕ್ವೆಲ್ ಮೂಲಕವೂ ಗೆಲುವು ಪಡೆಯೋದು ತ್ರಾಸದಾಯಕ ವಿಚಾರ. ಅದರಲ್ಲಿ ನಿರ್ದೇಶಕರಾಗಿ ಗೆಲುವು ಕಂಡಿರುವ ಡಾರ್ಲಿಂಗ್ ಕೃಷ್ಣ ಪಾಲಿಗೆ ಸಹಜವಾಗಿಯೇ ಮೂರನೇ ಆವೃತ್ತಿ ಈ ಹಿಂದಿಗಿಂತಲೂ ಸವಾಲಿನದ್ದಾಗಿತ್ತು. ಯಾಕೆಂದರೆ, ಇಂಥಾ ಸರಣಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡೋದು ಸುಲಭದ ಮಾತಲ್ಲ. ಆದರೆ, ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಲವ್‌ಮಾಕ್ಟೇಲ್‌ಗೆ ಫಿದಾ ಆಗಿದ್ದವರೆಲ್ಲ ಲವ್ ಮಾಕ್ಟೇಲ್೩ ಟ್ರೈಲರ್ ಕಂಡು ಅಕ್ಷರಶಃ ಖುಷಿಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ಖುಷಿ ಪ್ರತಿಫಲಿಸುತ್ತಿದೆ. ಇದು ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಒಂದಿಡೀ ಚಿತ್ರತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ.

ಡಾರ್ಲಿಂಗ್ ಕೃಷ್ಣ ಆರಂಭದಿಂದ್ ಇಲ್ಲಿಯವರೆಗೂ ಸಿನಿಮಾದ ಬಗ್ಗೆ ಹೆಚ್ಚೇನೂ ಗುಟ್ಟು ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ನಿರ್ದೇಶನ ಸೇರಿದಂತೆ ಎಲ್ಲದರಲ್ಲಿಯೂ ಹೊಸತನವಿದೆ ಎಂಬ ವಿಚಾರವನ್ನು ಒತ್ತಿ ಹೇಳಿದ್ದರು. ಈ ಹಿಂದಿನ ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಭಾವುಕತೆಯನ್ನು ಹಾಗೆಯೇ ಕಾಪಿಟ್ಟುಕೊಳ್ಳುವ ಮೂಲಕ, ಮತ್ತೊಂದು ಮನಸಿಗೆ ತಾಕುವ ಕಥೆಯೊಂದಿಗೆ ಈ ಚಿತ್ರವ್ನ್ನು ರೂಪಿಸಿದಂತಿದೆ. ಟ್ರೈಲರ್ ನೋಡಿದವರಿಗೆಲ್ಲ ಈ ವಿಚಾರ ನಿಚ್ಚಳವಾಗಿಯೇ ಅರಿವಾಗಿದೆ. ಇಲ್ಲಿ ತಂದೆ ಮಗಳ ಬಾಂಧವ್ಯ, ಗಾಢ ಪ್ರೇಮ, ವಿರಹ ಮುಂತಾದ ಪ್ರತಿಯೊಬ್ಬರ ಮನಸಲ್ಲೂ ಅಚ್ಚಾದ, ಸಲೀಸಾಗಿ ಎಲ್ಲರನ್ನೂ ಆವರಿಸಿಕೊಳ್ಳಬಲ್ಲ ಅಂಶಗಳು ಟ್ರೈಲರ್‌ನಲ್ಲಿ ಕಾಣಿಸಿವೆ.

ಇದು ಕಡೆಯ ಅಧ್ಯಾಯ ಎಂಬ ಸುಳಿವನ್ನೂ ಕೂಡಾ ಡಾರ್ಲಿಂಗ್ ಕೃಷ್ಣ ಬಿಟ್ಟು ಕೊಟ್ಟಿದ್ದಾರೆ. ತಮ್ಮನ್ನು ಆವರಿಸಿಕೊಂಡಿದ್ದ ಲವ್ ಮಾಕ್ಟೇಲ್ ಸರಣಿಯ ಕೊನೇ ಅಧ್ಯಾಯವೆಂಬೋ ಪ್ರೇಕ್ಷಕರ ಸೆಂಟಿಮೆಂಟ್ ಕೂಡಾ ಈ ಚಿತ್ರಕ್ಕೆ ಪ್ಲಸ್ ಆಗೋ ಸಾಧ್ಯತೆಗಳಿದ್ದಾವೆ. ಹಾಗಂತ ಈ ಹಿಒಂದಿನ ಸರಣಿಯ ಸೀಮಿತ ಪ್ರೇಕ್ಷಕರನ್ನು ಮಾತ್ರವೇ ಲವ್ ಮಾಕ್ಟೇಲ್೩ ಸೆಳೆದಿದೆ ಅಂದುಕೊಳ್ಳುವಂತಿಲ್ಲ. ಎಲ್ಲ ವರ್ಗದ ಪ್ರೇಕ್ಷಕರೂ ಟ್ರೈಲರ್ ಕಂಡು ಖುಷಿಗೊಂಡಿದ್ದಾರೆ. ಒಂದೊಳ್ಳೆ ಸಮಯದಲ್ಲಿ ಬಿಡುಗಡೆಗೆ ಅವಕಾಶ ಪಡೆದುಕೊಂಡಿರೋ ಲವ್ ಮಾಕ್ಟೇಲ್೩ಗೆ ಎಲ್ಲ ದಿಕ್ಕಿನಿಂದಲೂ ಸಕಾರಾತ್ಮಕ ಹಾದಿ ತೆರೆದುಕೊಂಡಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

keywords: love mocktail3 movie, darling krishna, milana nagaraj, sandalwood

The post Love Mocktail3 Movie: ಚೆಂದದ ಅನುಭೂತಿಯೊಂದರ ಸ್ಪಷ್ಟ ಸುಳಿವು! appeared first on Cini Shodha.

Love Mocktail3 Trailer Launch: ಕನಸೊಂದು ಟಿಸಿಲೊಡೆದ ಅಚ್ಚರಿ ಬಿಚ್ಚಿಟ್ಟ ಡಾಲಿಂಗ್ ದಂಪತಿ!
ಲವ್ ಮಾಕ್ಟೇಲ್3 ಚಿತ್ರತಂಡವೀಗ ಬಿಡುಗಡೆಗೆ ಪ್ರಶಸ್ತವಾದ ಘಳಿಗೆ ನಿಗಧಿಯಾದ ಖುಷಿಯಲ್ಲಿದೆ. ಇದೇ ಮಾರ್ಚ್ 19ರಂದು ತೆರೆಗಾಣಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾ ಟ್ರೈಲರ್‌ಗಳನ್ನು ಅತಿರಥ ಮಹಾರಥರಿಂದ ಬಿಡುಗಡೆಗೊಳಿಸೋದು ವಾಡಿಕೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಡಾರ್ಲಿಂಗ್ ಕೃಷ್ಣ ಕೂಡಾ ಅಂತಾ ಸಿದ್ಧಸೂತ್ರಕ್ಕೆ ಅಂಟಿಕೊಂಡಿದ್ದರು. ಅದರ ಭಾಗವಾಗಿಯೇ ಮೊದಲ ಆವೃತ್ತಿಯ ಟ್ರೈಲರ್ ಕಿಚ್ಚ ಸುದೀಪ್ ಕಡೆಯಿಂದ ಅನಾವರಣಗೊಂಡಿತ್ತು. ಲವ್ ಮಾಕ್ಟೇಲ್3 ಟ್ರೈಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆಗೊಳಿಸಿದ್ದರು. ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿರೋದು ಡಾರ್ಲಿಂಗ್ ಕೃಷ್ಣ-ಮಿಲನಾ ದಂಪತಿಯ ಪ್ರೀತಿಯ ಮಗಳು ಪರಿ!

ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಲವ್ ಮಾಕ್ಟೇಲ್3 ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಸಮಾರಂಭದಲ್ಲಿ ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರಿಬ್ಬರೂ ಡಾರ್ಲಿಂಗ್ ಕೃಷ್ಣ ಮತ್ತು ಒಂದಿಡೀ ಚಿತ್ರತಂಡಕ್ಕೆ ಶುಭ ಕೋರಿದರು. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಈ ಸಿನಿಮಾ ರೂಪುಗೊಂಡ ಬಗೆ, ಅದರ ವಿಶೇಷತೆ, ಈ ಹಿಂದೆ ಎರಡು ಸರಣಿಗಳಿಗೆ ದಕ್ಕಿದ ಗೆಲುವು ಹಾಗೂ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆಂಬಂಥಾ ಗಾಢ ನಂಬಿಕೆಯ ಪಸೆಯಿರುವಂಥಾ ಮಾತುಗಳನ್ನಾಡಿದ್ದಾರೆ.

ಸಾಮಾನ್ಯವಾಗಿ, ಧುರಂಧರ್ ಥರದ ಯಾವುದೇ ಪ್ಯಾನಿಂಡಿಯಾ ಚಿತ್ರಗಳ ಮುಂದೆ ತೆರೆಗಾಣಲು ಸಿನಿಮಾ ತಂಡಗಳು ಹಿಂದೇಟು ಹಾಕೋದಿದೆ. ಆದರೆ, ಟಾಕ್ಸಿಕ್ ಚಿತ್ರ ಮುಂದೂಡಲ್ಪಟ್ಟ ನಂತರ ಧುರಂಧರ್ ಹಾವಳಿಯನ್ನೂ ಲೆಕ್ಕಿಸದೆ ಲವ್ ಮಾಕ್ಟೇಲ್೩ ಚಿತ್ರ ಬಿಡುಗಡೆಗೆ ಅಣಿಗೊಂಡಿದೆ. ಅಂಥಾ ದೊಡ್ಡ ಚಿತ್ರದ ಮುಂದೆ ತೆರೆಗಾಣುವ ಧೈರ್ಯ ಹೇಗೆ ಬಂತೆಂದು ಅನೇಕರು ಪ್ರಶ್ನಿಸಿದ್ದಾರಂತೆ. ಈ ಬಗ್ಗೆ ಪ್ರಧಾನವಾಗಿ ಮಾತಾಡಿರುವ ಮಿಲನಾ ನಾಗರಾಜ್, ಈ ಸಿನಿಮಾ ಮೂಡಿ ಬಂದಿರುವ ಬಗೆಗಿನ ನಂಬಿಕೆ, ಗೆದ್ದೇ ಗೆಲ್ಲುತ್ತೇವೆಂಬ ಭರವಸೆಯಿಂದಲೇ ಆ ರೀತಿಯದ್ದೊಂದು ಗಟ್ಟಿ ನಿರ್ಧಾರ ತಳೆದಿರೋದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಚಿತ್ರದ ನಿರ್ದೇಶಕರೂ ಆಗಿರುವ ಡಾರ್ಲಿಂಗ್ ಕೃಷ್ಣ ಒಲವ್ ಮಾಕ್ಟೇಲ್೩ ಚಿತ್ರದ ಕಥೆ ಹುಟ್ಟಿದ ಕುರಿತಾದ ಒಂದಷ್ಟು ರಸವತ್ತಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಎರಡು ಸರಣಿಗಳು ಗೆದ್ದಿದ್ದರಿಂದ ಮೂರನೇ ಆವೃತ್ತಿಗೆ ಕಥೆ ಸಿದ್ಧಪಡಿಸಲು ವರ್ಷಗಟ್ಟಲೆ ಕೃಷ್ಣ ಸರ್ಕಸ್ಸು ನಡೆಸಿದ್ದರಂತೆ. ಕಡೆಗೂ ಒಂದು ದಿನ ಕಥಾ ಎಳೆಯೊಂದು ಹೊಳೆದಿದ್ದೇ, ಮಡದಿ ಮಿಲನಾಗೆ ಹೇಳಿ ಸೀದಾ ಹೋದದ್ದು ಗೋವಾಕ್ಕೆ. ಅಲ್ಲಿ ಮೂರು ದಿನಗಳ ಕಾಲ ಬೀಡುಬಿಟ್ಟಿದ್ದ ಕೃಷ್ಣ, ಕಥೆಯನ್ನು ಅಚ್ಚುಕಟ್ಟಾಗಿ ಸಿನಿಮಾ ಚೌಕಟ್ಟಿಗೊಗ್ಗಿಸಿ, ಚಿತ್ರಕಥೆಯ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ವಾಪಾಸಾಗುವ ಮೂಲಕ ಲವ್ ಮಾಕ್ಟೇಲ್3ಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದಾಗೆ ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.

ಇನ್ನುಳಿದಂತೆ ಜೋ ಎಂಬ ಲವ್ ಮಾಕ್ಟೇಲ್ ಪಾತ್ರದ ಮೂಲಕ ಹೆಸರಾಗಿರುವ ಅಮೃತಾ ಅಯ್ಯಂಗಾರ್ ಕೂಡಾ ಈ ಸಿನಿಮಾದಲ್ಲೊಂದು ಪಾತ್ರವಾಗಿದ್ದಾರೆ. ಅವರೂ ಆ ಪಾತ್ರ ಮತ್ತು ಒಟ್ಟಾರೆ ಚಿತ್ರೀಕರಣದ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಖುದ್ದು ಡಾರ್ಲಿಂಗ್ ಕೃಷ್ಣ ತಮ್ಮ ಸಿನಿಮಾದಲ್ಲಿ ನಟಿಸಿರುವ ಎಲ್ಲರನ್ನು ಪರಿಚಯಿಸಿ, ಅವರ ಪ್ರತಿಭೆಯ ಬಗ್ಗೆ ಹೇಳಿಕೊಂಡಿದ್ದು ವಿಶೇಷ. ಒಟ್ಟಾರೆಯಾಗಿ, ಟ್ರೈಲರ್ ಬಿಡುಗಡೆಯ ಅಂಗವಾಗಿ ಒಟ್ಟುಗೂಡಿದ್ದ ಚಿತ್ರತಂಡದಲ್ಲಿ ಗೆಲುವಿನ ಭರವಸೆ ಸ್ಪಷ್ಟವಾಗಿಯೇ ಮಿರುಗುತ್ತಿರುವಂತೆ ಭಾಸವಾಗಿತ್ತು. ತಂದೆ ಮಗಳ ಬಾಂಧವ್ಯದ ಕೇಂದ್ರದಲ್ಲಿರುವ, ಎಲ್ಲರ ಮನಸಿಗೂ ನಾಟುವಂಥಾ ಸೂಕ್ಷ್ಮ ಕಥನದ ಸೂಚನೆಯನ್ನು ಈ ಟ್ರೈಲರ್ ಬಿಟ್ಟುಕೊಟ್ಟಂತಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ಈ ಚಿತ್ರಕ್ಕೊಂದು ಹಾಡನ್ನು ಬರೆದಿರುವ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ, ನಯಾರಾ ಮುಂತಾದವರು ಉಪಸ್ಥಿತರಿದ್ದರು. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

keywords: love mocktaile3, darling krishna, milana nagaraj, amrutha iyyengar, sandalwood

The post Love Mocktail3 Trailer Launch: ಕನಸೊಂದು ಟಿಸಿಲೊಡೆದ ಅಚ್ಚರಿ ಬಿಚ್ಚಿಟ್ಟ ಡಾಲಿಂಗ್ ದಂಪತಿ! appeared first on Cini Shodha.

Love Mocktail 3 Release Date Announced: ಬಿಡುಗಡೆ ದಿನಾಂಕ ಘೋಶಿಸಿದ ಡಾರ್ಲಿಂಗ್ ಕೃಷ್ಣ!
ಕನ್ನಡ ಚಿತ್ರರಂಗಕ್ಕೆ ಕೊರೋನಾ ಕಾರ್ಮೋಡ ಕವುಚಿಕೊಂಡಿದ್ದ ಘಳಿಗೆಯಲ್ಲಿ ಗೆಲುವಿನ ಘಮ ಹಬ್ಬುವಂತೆ ಮಾಡಿದ್ದ ಚಿತ್ರ ಲವ್ ಮಾಕ್ಟೇಲ್. ಅದಾಗಲೇ ನಾಯಕ ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಒಂದು ಸಂದಿಗ್ಧ ಕಾಲಘಟ್ಟದಲ್ಲಿ ತಾವೇ ಹೋಂ ಬ್ಯಾನರ್ ಮೂಲಕ ಆ ಸಿನಿಮಾವನ್ನು ನಿರ್ಮಾಣ ಮಾಡುವ ಸಾಹಸಕ್ಕೂ ಕೈ ಹಾಕಿದ್ದರು. ಈ ಸಿನಿಮಾ ಮೂಲಕವೇ ಡಾರ್ಲಿಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚೆಂದದ ಕಥೆಯೊಂದರ ಪಾತ್ರಗಳಾಗುವ ಮೂಲಕ ಮೋಡಿ ಮಾಡಿದ್ದರು. ಆ ನಂತರ ತೆರೆಗಂಡಿದ್ದ ಇದರ ಎರಡನೇ ಆವೃತ್ತಿಗೂ ಗೆಲುವು ದಕ್ಕಿತ್ತು. ಇದೀಗ ಅದೇ ಯಶಸ್ಸಿನ ಪ್ರಭೆಯಲ್ಲಿ ಲವ್ ಮಾಕ್ಟೇಲ್೩ ತಯಾರಾಗಿ ನಿಂತಿದೆ. ಹೊಸ ವರ್ಷವೊಂದು ಕಣ್ತೆರೆದಿರುವ ಹೊತ್ತಿನಲ್ಲಿಯೇ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್೩ ಬಿಡುಗಡೆ ದಿನಾಂಕವನ್ನು ಘೋಶಿಸಿದ್ದಾರೆ!

ಇದೇ ಏಪ್ರಿಲ್ ೧೦ರಂದು ಲವ್ ಮಾಕ್ಟೇಲ್೩ ಅದ್ದೂರಿಯಾಗಿ ತೆರೆಗಾಣಲಿದೆ. ಈ ಹಿಂದಿನ ಎರಡು ಆವೃತ್ತಿಗಳನ್ನು ನೋಡಿ ಮೆಚ್ಚಿಕೊಂಡಿದ್ದವರೆಲ್ಲ ಬೆರಗಾಗುವಂತೆ ಡಾರ್ಲಿಂಗ್ ಕೃಷ್ಣ ಮೂರನೇ ಆವೃತ್ತಿಯನ್ನು ರೂಪಿಸಿದ್ದಾರಂತೆ. ಸಾಮಾನ್ಯವಾಗಿ ಯಶಸ್ವೀ ಚಿತ್ರವೊಂದರ ಸರಣಿಗಳನ್ನು ರೂಪಿಸುವಾಗ ಸವಾಲುಗಳ ಸಂತೆಯೇ ನೆರೆದಿರುತ್ತದೆ. ಒಂದು ಭಾಗವನ್ನು ಮೀರಿಸುವ ಕಂಟೆಂಟಿನೊಂದಿಗೆ ಬಂದರೆ ಮಾತ್ರವೇ ಗೆಲುವು ದಕ್ಕಬಹುದಷ್ಟೆ. ಲವ್ ಮಾಕ್ಟೇಲ್೨ ಚಿತ್ರದಲ್ಲಿ ಅಂಥಾ ಸವಾಲನ್ನು ದಾಟಿಕೊಂಡಿದ್ದ ಕೃಷ್ಣ, ಮೂರನೇ ಕಂತಿನಲ್ಲಿ ಓರ್ವ ನಿರ್ದೇಶಕರಾಗಿ ತಮ್ಮ ಕೈಚಳಕ ತೋರಿಸಿರುವ ಲಕ್ಷಣಗಳಿವೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ಇರಲಿದೆ ಎಂಬ ಸೂಚನೆಯನ್ನಷ್ಟೇ ಸದ್ಯದ ಮಟ್ಟಿಗೆ ಡಾರ್ಲಿಂಗ್ ಕೃಷ್ಣ ಬಿಟ್ಟು ಕೊಟ್ಟಿದ್ದಾರೆ.

Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

ಇತ್ತೀಚೆಗಷ್ಟೇ ಈ ಚಿತ್ರದ ಮೋಷನ್ ಪೋಸ್ಟರ್ ಒಂದು ಬಿಡುಗಡೆಗೊಂಡಿತ್ತು. ಅದು ಲವ್ ಮಾಕ್ಟೇಲ್೩ ಬಗ್ಗೆ ಗಾಢ ಕೌತುಕ ಹರಳುಗಟ್ಟುವಂತೆ ಮಾಡಿತ್ತು. ಮೊದಲೆರಡು ಕಂತುಗಳಲ್ಲಿ ಪ್ರೇಮದ ಭಾವ ತೀವ್ರತೆ ಇದ್ದರೆ, ಮೂರನೇ ಕಂತಿನಲ್ಲಿ ತಂದೆ ಮಗಳ ಬಾಂಧವ್ಯದ ಚಿತ್ರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ಸೂಚನೆಗಳಿದ್ದಾರೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣವಿರುವ ಈ ಚಿತ್ರ ಬೇಸಗೆ ರಜೆಯ ಹೊಸ್ತಿಲಲ್ಲಿಯೇ ತೆರೆಗಾಣುತ್ತಿದೆ.

keywords: darling krishna, milana nagaraj, lovemocktaile3, sandalwood, kfi

The post Love Mocktail 3 Release Date Announced: ಬಿಡುಗಡೆ ದಿನಾಂಕ ಘೋಶಿಸಿದ ಡಾರ್ಲಿಂಗ್ ಕೃಷ್ಣ! appeared first on Cini Shodha.