Chaithra Achar: ಫೌಜಿ ಪೋಸ್ಟರ್‌ನಲ್ಲಿ ಪೌರ್ಣಮಿಯ ಫೋಟೋ!

ಆರಂಭಿಕವಾಗಿ ತನ್ನ ನಟನೆಯ ಚಾತುರ್ಯದಿಂದಲೇ ಗಮನ ಸೆಳೆದಿದ್ದಾಕೆ ಚೈತ್ರಾ ಆಚಾರ್. ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿದ್ದ ಟೋಬಿ ಚಿತ್ರದಲ್ಲಿನ ಈಕೆಯ ನಟನೆ ಕೂಡಾ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಆ ನಂತರ ಹೇಳಿಕೊಳ್ಳುವಂಥಾ ಪಾತ್ರಗಳು ಚೈತ್ರಾಗೆ ಸಿಕ್ಕಿರಲಿಲ್ಲ. ಈ ಶುಷ್ಕ ವಾತಾವರಣವನ್ನು ಬೋಲ್ಡ್ ಫೋಟೋ ಶೂಟ್‌ಗಳ ಮೂಲಕ ನೀಗಿಕೊಂಡಿದ್ದ ಚೈತ್ರಾ ಆಚಾರ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಚೈತ್ರಾ ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರುವ ಫೌಜಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ! … Continue reading Chaithra Achar: ಫೌಜಿ ಪೋಸ್ಟರ್‌ನಲ್ಲಿ ಪೌರ್ಣಮಿಯ ಫೋಟೋ!