ಹೀಗಿದೆ ಈ ಪಿಚ್ಚರ್ – Cini Shodha

I Am God Movie Review: ಕೌಟುಂಬಿಕ ದುರಂತಕ್ಕೆ ಕನ್ನಡಿಯಾದ ಕಥೆ!
ಟ್ರೈಲರ್ ಮೂಲಕ ಒಂದಷ್ಟು ಕುತೂಹಲ, ಮತ್ತೊಂದಷ್ಟು ಚರ್ಚೆ ಹುಟ್ಟು ಹಾಕಿದ್ದ ಚಿತ್ರ ಐ ಯಾಮ್ ಗಾಡ್. ಆ ಟ್ರೈಲರಿನಲ್ಲಿಯೇ ತೆಲುಗಿನ ಹಿಟ್ ಚಿತ್ರವಾದ ಅರ್ಜುನ್ ರೆಡ್ಡಿಯ ಪ್ರಭಾವ ಎದ್ದು ಕಂಡಿತ್ತು. ಇದೆಲ್ಲದರಾಚೆಗೆ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದದ್ದು ಒಟ್ಟಾರೆ ಕಥೆಯಲ್ಲಿನ ಹೊಸತನ ಮತ್ತು ಚುರುಕುತನದ ಸುಳಿವು. ಕಾಲೇಜು ಕೇಂದ್ರಿತವಾದ ಕಥೆಯ ಹೊಳಹಿನ ಮೂಲಕವೂ ಮತ್ತೊಂದಷ್ಟು ಪ್ರೇಕ್ಷಕರು ಐ ಯಾಮ್ ಗಾಡ್ ಚಿತ್ರದತ್ತ ವಾಲಿಕೊಂಡಿದ್ದರು. ಇಂಥಾ ನಿರೀಕ್ಷೆಯಿಟ್ಟುಕೊಂಡ ನೋಡ ಹೋದ ಪ್ರೇಕ್ಷಕರಿಗೆ ಐ ಯಾಮ್ ಗಾಡ್ ಚಿತ್ರವಿಚಿತ್ರ ಭಾವಗಳನ್ನು ತುಂಬುವಂತಿದೆ. ಅತ್ಯಂತ ಲವಲವಿಕೆಯ ಕಥೆ, ಸಮ್ಮೋಹಕ ಟ್ವಿಸ್ಟುಗಳು ಸೇರಿದಂತೆ ಎಲ್ಲ ಇದ್ದೂ ಏನೋ ಕೊರತೆಯಾದಂಥಾ ಸಿಡಿಮಿಡಿಯೊಂದಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಂದ ನಿರ್ಗಮಿಸುವಂತಾಗಿದೆ.

ರವಿ ಬಿ ಗೌಡ ಈ ಸಿನಿಮಾವನ್ನು ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿದ್ದಾರೆ. ಹೀಗೆ ಎರಡೆರಡು ಜವಾಬ್ದಾರಿಗಳನ್ನು ನಿಭಾಯಿಸಿರುವ ರವಿ ಬಿ ಗೌಡ ಇಲ್ಲಿ ಪ್ರಧಾನವಾಗಿ ಹೀರೋಯಿಸಂ ಮೂಲಕ ಒಂದೇ ಏಟಿಗೆ ನೆಲೆ ನಿಲ್ಲುವ ಉತ್ಸಾಹ ತೋರಿದ್ದಾರೆ. ಇಲ್ಲಿನ ಕಥೆ ಟ್ರೈಲರ್ ಕಂಡು ಬಂದಿದ್ದವರನ್ನು ಥ್ರಿಲ್ ಆಗಿಸುವಂತೆ ತೆರೆದುಕೊಳ್ಳುತ್ತೆ. ಕಾಲೇಜಿನ ಕ್ಲಾಸ್ ರೂಮಿಗೆ ಚಿಲಕ ಹಾಕಿಕೊಂಡು, ಬಿಡುಬೀಸಾಗಿ ನಾಯಕ ನಾಯಕಿ ಕಿಸ್ ಮಾಡಿಕೊಳ್ಳೋ ದೃಷ್ಯದೊಂದಿಗೆ ಸಿನಿಮಾ ಶುರುವಾಗುತ್ತೆ. ಆ ಬಳಿಕ ಎಲ್ಲಿಯೂ ನಿಧಾನಗತಿ ಆವರಿಸಿದಂತೆ ನೋಡಿಕೊಂಡಿರೋ ನಿರ್ದೇಶಕ, ಇಂಟರ್ವಲ್‌ಗೂ ಮುಂಚಿನ ಮುಕ್ಕಾಲು ಭಾಗವನ್ನು ಹೀರೋ ಮತ್ತು ಹೀರೋಯಿನ್ನುಗಳ ವೈಲ್ಡ್ ಮನಃಸ್ಥಿತಿ ಅರ್ಥ ಮಾಡಿಸಲೆಂದೇ ಮೀಸಲಿಟ್ಟಿದ್ದಾರೆ.

ಆ ನಂತರ ನಾನಾ ಕೊಂಬೆ ಕೋವೆಗಳೊಂದಿಗೆ, ತಿರುವುಗಳೊಂದಿಗೆ ಚಲಿಸೋ ಕಥೆ ಇಂಟರ್ವೆಲ್ಲಿನ ಟ್ವಿಸ್ಟ್ ಒಂದರ ನಂತರ ಮತ್ತಷ್ಟು ಆವೇಗದಿಂದ ಮುಂದುವರೆಯುತ್ತೆ. ಇದೇ ಹೊತ್ತಿನಲ್ಲಿ ಸಾಲು ಸಾಲಾಗಿ ಮದುವೆಯಾದ ಮಹಿಳೆಯರನ್ನು ಕೊಲೆ ಮಾಡುತ್ತಾ ಸಾಗೋ ಸೈಕೋ ಕಿಲ್ಲರ್‌ನತ್ತ ಕಥೆ ಹೊರಳಿಕೊಳ್ಳುತ್ತೆ. ಆ ಸೈಕೋ ಕಿಲ್ಲರ್ ಯಾರು? ಅವನೇಕೆ ಮದುವೆಯಾದ ನಂತರ ಗಂಡ ಮತ್ತು ಮನೆ ಮಂದಿಯನ್ನು ಕಾಡಿಸುವ ಮಹಿಳೆಯರನ್ನು ಮಾತ್ರವೇ ಹುಡುಕಿ ಕೊಲ್ಲುತ್ತಾನೆ? ಇಂಥಾ ಪ್ರಶ್ನೆಗಳಿಗೆ ಸಿನಿಮಾ ಮಂದಿರದಲ್ಲಷ್ಟೇ ಉತ್ತರ ಹುಡುಕೋದೊಳಿತು. ಪ್ರಧಾನವಾಗಿ, ನಿರ್ದೇಶಕ ರವಿ ಬಿ ಗೌಡ ತಾನು ಈ ಸಿನಿಮಾ ಮೂಲಕವೇ ಥೇಟು ವಿಜಯ್ ದೇವರಕೊಂಡನಂತೆ ಮಿಂಚುವ ಆಸೆ ಹೊಂದಿದ್ದಂತಿದೆ. ಅದೇ ಭರದಲ್ಲಿ ಷದೃಷ್ಯ ಕಟ್ಟುತ್ತಾ ಸಾಗಿರುವ ರವಿ, ಹೀರೋಗಿರಿ, ಬಿಲ್ಡಪ್ಪಿನ ಭರಾಟೆಯಲ್ಲಿ ನಿರ್ದೇಶನದ ಕುಸುರಿಯನ್ನೇ ಆಯಕಟ್ಟಿನ ಜಾಗಗಳಲ್ಲಿ ಮರೆತು ಬಿಟ್ಟಿದ್ದಾರೆ. ಅದುವೇ ಈ ಸಿನಿಮಾವನ್ನು ಆವರೇಜಿನ ಮಟ್ಟ ಮುಟ್ಟಲೂ ಆಗದಂತೆ ತಡೆದು ಬಿಟ್ಟಿದೆ.

ಒಟ್ಟಾರೆ ಸಿನಿಮಾದುದ್ದಕ್ಕು ಅರ್ಜುನ್ ರೆಡ್ಡಿ ಛಾಠಯೆಯಿದೆ. ರವಿ ಉಪ್ಪಿ ಗರಡಿಯಲ್ಲಿ ಪಳಗಿದ್‌ದರಿಂದಾಗಿಯೇ ಉಪೇಂದ್ರರ ಎ ಸಿನಿಮಾದ ಛಾಯೆ ಡೈಲಾಗುಗಳಲ್ಲಿ, ರವಿಯ ನಟನೆಯಲ್ಲಿ ಕಾಣಿಸುತ್ತೆ. ರವಿ ಮೊದಲ ಸಿನಿಮಾದಲ್ಲಿಯೇ ನಾಯಕನಾಗಿ, ಅಭಿನಯದ ಮೂಲಕ ಗೆದ್ದಿದ್ದಾರೆ. ಆದರೆ ನಿರ್ದೇಶಕನಾಗಿ ಸೋತು ಬಿಟ್ಟಿದ್ದಾರೆ. ಇಡೀ ಕಥೆಯ ಮುಖ್ಯ ಬಿಂದುವಿಗೆ ತಲುಪೋದಕ್ಕೀತ ಭರ್ತಿ ಎರಡು ಗಂಟೆ ವ್ಯಯಿಸಿದ್ದಾರೆ. ಆದರೆ, ಒಂದಷ್ಟು ಕೊರತೆಗಳ ಮೂಲಕ ಅದು ವ್ಯರ್ಥವೆಂಬ ಭಾವ ಪ್ರೇಕ್ಷಕರನ್ನು ಮುತ್ತಿಕೊಳ್ಳುತ್ತೆ. ಇದರಾಚೆಗೆ ಈವತ್ತಿನ ಸಮಾಜದಲ್ಲಿ ಕೆಲ ಹೆಣ್ಣುಮಕ್ಕಳು ಕೌಟುಂಬಿಕ ದೌರ್ಜನ್ಯದ ಕಾನೂನನ್ನು ದುರ್ಭಳಕೆ ಮಾಡಿಕೊಳ್ಳೋದರ ವಿರುದ್ಧ ಸಮರ್ಥ ಸಂದೇಶ ದಾಟಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ಚಿತ್ರ ಸಾರ್ಥಕ್ಯ ಕಂಡಿದೆ.

ಇನ್ನುಳಿದಂತೆ ಅಜನೀಶ್ ಲೋಕನಾಥ್ ಈ ಚಿತ್ರದ ಸಂಗೀತ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಂತಾರ ಮೂಲಕ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವವರು ಅಜನೀಶ್. ಆದರೆ, ಈ ಚಿತ್ರಕ್ಕೆ ಮಾತ್ರ ಅವರು ತೀರಾ ಬುರ್ನಾಸು ಸಂಗೀತ ಕೊಟ್ಟಿದ್ದಾರೆ. ಯಾವ ಹಾಡುಗಳೂ ಚೆಂದಗಿಲ್ಲ. ಹಿನ್ನೆಲೆ ಸಂಗೀತವೂ ಕಳಪೆ. ಒಂದು ಸಿನಿಮಾ ಒಪ್ಪಿಕೊಂಡ ಮೇಲೆ ಅದಕ್ಕೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಬೇಕೆಂಬ ವೃತ್ತಿ ಧರ್ಮವನ್ನೇ ಅಜನೀಶ್ ಮರೆತಂತಿದೆ. ಇನ್ನುಳಿದಂತೆ ರವಿ ಬಿ ಗೌಡ ಸೇರಿದಂತೆ, ನಾಯಕಿ ವಿಜೇತಾ ಫರೀಕ್, ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್ ಮುಂತಾದವರು ತಂತಮ್ಮ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಆದರೆ, ನಿರ್ದೇಶಕನಾಗಿ ಒಂದೊಳ್ಳೆ ಕಥೆ ಕೈಗೆತ್ತಿಕೊಂಡಿದ್ದ ರವಿ ಅದರಲ್ಲಿ ಸೋತಿದ್ದಾರೆ. ಈ ಕಾರಣದಿಂದಲೇ ಒಂದು ಮಟ್ಟ ಮುಟ್ಟಬಹುದಾಗಿದ್ದ ಐ ಯಾಮ್ ಗಾಡ್ ಆ ಅವಕಾಶದಿಂದ ವಂಚಿತವಾಗಿದೆ!

The post I Am God Movie Review: ಕೌಟುಂಬಿಕ ದುರಂತಕ್ಕೆ ಕನ್ನಡಿಯಾದ ಕಥೆ! appeared first on Cini Shodha.

Love You Muddu Movie Review: ಚೆಂದದ ಕಥೆ ಸೇರಿದಂತೆ ಎಲ್ಲವೂ ಇದೆ; ಆದರೆ..!
ಅದೆಂಥಾ ಅಲೆಗಳು ಚಾಲ್ತಿಯಲ್ಲಿದ್ದರೂ ಕೂಡಾ, ನವಿರು ಪ್ರೇಮ ಕಥಾನಕಗಳ ಬಗ್ಗೆ ಸಿನಿಮಾ ಪ್ರೇಮಿಗಳೊಳಗಿನ ಬೆರಗು ಬತ್ತುವುದೇ ಇಲ್ಲ. ಒಂದು ವೇಳೆ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂಥಾ ಭಾವತೀವ್ರತೆ ಶಕ್ತವಾಗಿ ದೃಷ್ಯವಾಗಿದ್ದರಂತೂ ಅಂಥಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಿಡುತ್ತವೆ. ಮುಂಗಾರುಮಳೆ ಸೇರಿದಂತೆ ಅನೇಕ ಸಿನಿಮಾಗಳು ಕಥೆಯ ಕಸುವಿನಾಚೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದದ್ದು ಅಂಥಾ ಗುಣದಿಂದಲೇ. ಹಾಗಿರುವಾಗ ಒಂದು ರಿಯಲಿಸ್ಟಿಕ್ ಪ್ರೇಮಕಥಾನಕಕ್ಕೆ ಅಂಥಾದ್ದೊಂದು ಸೆಳೆತ ಇಲ್ಲದಿರಲು ಸಾಧ್ಯವೇ? ಈ ಕಾರಣದಿಂದಲೇ ಬಹುವಾಗಿ ಚರ್ಚೆಗೀಡಾಗಿದ್ದ ಚಿತ್ರ ಲವ್ ಯೂ ಮುದ್ದು. ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿ ಪಡೆದಿದ್ದ ಜೋಡಿಯೊಂದರ ಕಥೆಯನ್ನೊಳಗೊಂಡಿರೋ ಸಿನಿಮಾವೀಗ ಬಿಡುಗಡೆಗೊಂಡು, ಒಂದಷ್ಟು ಆಶಾದಾಯಕ ಪ್ರದರ್ಶನ ಕಾಣುತ್ತಿದೆ.

ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಅಂತೊಂದು ಸಿನಿಮಾ ಮೂಲಕ ಗಮನ ಸೆಳೆದಿದ್ದ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಲವ್ ಯೂ ಮುದ್ದು ಒಂದಷ್ಟು ನಿರೀಕ್ಷೆ ಮೂಡಿಸಿದ್ದರ ಹಿಂದೆ ಈ ವಿಚಾರವೂ ಕೆಲಸ ಮಾಡಿರೋದು ಸುಳ್ಳಲ್ಲ. ಆದರೆ, ಇಂಥಾ ನಿರೀಕ್ಷೆಯ ಭಾರ ಹೊತ್ತು ಮುನ್ನಡೆದ ನಿರ್ದೇಶಕರು ಅಲ್ಲಲ್ಲಿ ಎಡವಿದ್ದಾರೆ. ಮತ್ತೆ ಸಾವರಿಸಿಕೊಂಡುಮುಂದುವರೆದರೂ ಕೂಡಾ ಯಾವುದಕ್ಕೆ ಪ್ರಾಧಾನ್ಯತೆ ಕೊಡಬೇಕು, ಹೇಗೆ ಮುಂದುವರೆಯಬೇಕೆಂಬ ನಿಖರ ದಾರಿ ಕಾಣದಂತೆ ತಬ್ಬಿಬ್ಬಾಗಿ ನಿಲ್ಲುತ್ತಾರೆ. ಒಂದಿಡೀ ಸಿನಿಮಾದ ಎಲ್ಲ ಕೊರತೆಗಳನ್ನೂ ಮಾಫಿ ಮಾಡುವಂತೆ ತೀವ್ರವಾಗಿ ಕಟ್ಟಬೇಕಿದ್ದ ದೃಷ್ಯಗಳ ವಿಚಾರದಲ್ಲಿ ನಿರ್ದೇಶಕರು ಅಕ್ಷರಶಃ ಅಸಹಾಯಕರಂತೆ ಕೈಚೆಲ್ಲಿದ್ದಾರೆ. ಇದೆಲ್ಲದರಾಚೆಗೂ ಲವ್ ಯೂ ಮುದ್ದು ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡುತ್ತೆ. ಬಹುಶಃ ಅದು ಪರಿಶುದ್ಧ ಪ್ರೇಮಕ್ಕಿರೋ ಅಸಲೀ ಶಕ್ತಿಯೇನೋ…

ಹಾಗೆ ನೋಡಿದರೆ, ಈ ಸಿನಿಮಾಕ್ಕಾಗಿ ನಿರ್ದೇಶಕರು ಆಯ್ದುಕೊಂಡಿದ್ದ ಅಸಲೀ ಕಥೆಯೇ ಚೆಂದಗಿದೆ. ಆದರೆ, ಅದನ್ನು ದೃಷ್ಯಕ್ಕೆ ಒಗ್ಗಿಸುವಾಗಿನ ಕುಸುರಿಯಲ್ಲಿ ಒಂದಷ್ಟು ಕಸಿವಿಸಿಗಳು ಘಟಿಸಿವೆ. ಲವಲವಿಕೆಯಿಂದಲೇ ಆರಂಭವಾಗುವ ಈ ಚಿತ್ರದ ಒಂದಷ್ಟು ಸಮಯವನ್ನು ನಿರ್ದೇಶಕರು ನಾಯಕ ನಾಯಕಿಯನ್ನು ಪ್ರೇಮಿಗಳಾಗಿ ನೋಡುಗರ ಮನಸಿಗೆ ಛಾಪಿಸುದಕ್ಕೆ ಮೀಸಲಿಟ್ಟಿದ್ದಾರೆ. ಆ ನಂತರದಲ್ಲಿ ಒಂದಿಡೀ ಕಥೆ ಒಂದಷ್ಟು ತಿರುವುಗಳೊಂದಿಗೆ ಮುನ್ನಡೆಯುತ್ತೆ. ಅನಿರೀಕ್ಷಿತವಾಗಿ ಒಂದಾಗಿ ಜೀವದಂತೆ ಹಚ್ಚಿಕೊಂಡ ಈ ಪ್ರೇಮಿಗಳ ಬಾಳಲ್ಲಿ ನಡೆಯೋ ದುರಂತ, ಅದಕ್ಕೆ ಹೊಸೆದುಕೊಂಡಂತಿರೋ ನಾಯಕನ ತಂದೆಯ ನಿಗೂಢ ನಡೆ, ಅಪಘಾತದಿಂದ ದೇಹದ ಒಂದು ಭಾಗದ ಚಲನೆಯನ್ನೇ ಕಳೆದುಕೊಳ್ಳೋ ನಾಯಕಿ, ಆಕೆಯನ್ನು ಉಳಿಸಿಕೊಳ್ಳಲು ನಾಯಕ ನಡೆಸೋ ಹರಸಾಹಸ… ಇಂಥಾ ಮನಮಿಡಿಯೋ ಕಥನದೊಂದಿಗೆ ಸಿನಿಮಾ ಸಾಗುತ್ತೆ.

ಚಿತ್ರವೇನೂ ಸಲೀಸಾಗಿ ಮುನ್ನಡೆದಂತೆ ಕಾಣಿಸುತ್ತೆ. ನಾಯಕನಾಗಿ ನಟಿಸಿರೋ ಸಿದ್ದು ಮೂಲಿಮನಿ ಮತ್ತು ನಾಯಕಿ ರೇಷ್ಮಾ ನಟನೆಯೂ ಚೆನ್ನಾಗಿದೆ. ಆದರೆ, ಆ ಪಾತ್ರಗಳಿಗೆ ಅವರು ಹೊಂದಿಕೆಯಾಗುತ್ತಿಲ್ಲ ಎಂಬ ಭಾವ ಪ್ರೇಕ್ಷಕರನ್ನು ಕಾಡುತ್ತೆ. ತಾರಾಗಣದ ಆಯ್ಕೆಯಲ್ಲಿಯೇ ನಿರ್ದೇಶಕರು ಎಡವಿದರಾ ಅಂತೊಂದು ಗುಮಾನಿ ನೋಡುಗರ ಮನಸಲ್ಲಿ ಗಿರಕಿ ಹೊಡೆಯುತ್ತೆ. ಹಾಗಂತ ನಾಯಕ ನಾಯಕಿಯನ್ನು ದೂರುವಂತಿಲ್ಲ. ಯಾಕೆಂದರೆ, ಅವರು ತಂತಮ್ಮ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ. ಆದರೂ ಕೊರತೆ ಕಾಡಿದ್ದರ ಹಿಂದಿರೋದು ಆಯ್ಕೆಯಲ್ಲಿನ ದೋಷವಷ್ಟೆ. ಇದೆಲ್ಲದರ ನಡುವೆ ಕೆಲ ಹಾಸ್ಯ ಸನ್ನಿವೇಶಗಳನ್ನು ತೂರಿಸುವ ಮೂಲಕ ಮತ್ತಷ್ಟು ಗೋಜಲು ಮೂಡಿಸಲಾಗಿದೆ. ಕ್ಲೈಮ್ಯಾಕ್ಸ್ ಹೊತ್ತಿನ ಬಹುಮುಖ್ಯ ದೃಷ್ಯಕ್ಕೆ ಇಡೀ ಚಿತ್ರಮಂದಿರವೇ ಹುಚ್ಚೆದ್ದು ಸಂಭ್ರಮಿಸಬೇಕಿತ್ತು. ಆದೃಷ್ಯ ಅಷ್ಟು ಪರಿಣಾಮಕಾರಿಯಾಗೋ ಅವಕಾಶ ತಪ್ಪಿಸಿಕೊಂಡಿದ್ದರೂ ಪ್ರೇಕ್ಷಕರಿಗೆ ಒಂದಷ್ಟು ನಾಟುವಂತಿದೆ.

ಇಂಥಾ ಪ್ರೇಮಕಥಾನಕಗಳಲ್ಲಿ ನಾಯಕ ನಾಯಕಿಯ ಕೆಮಿಸ್ಟ್ರಿ ಹೊಂದಾಣಿಕೆಯಾದರೆ ಮಾತ್ರ ಸಿನಿಮಾ ಗೆಲ್ಲಬಹುದು. ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್ ಮತ್ತು ರುಕ್ಮಿಣಿ ನಡುವಿನ ಕೆಮಿಸ್ಟ್ರಿಯೇ ಗೆಲುವಿನ ಮೂಲ. ಆದರೆ, ಯಾವ ಸೀನುಗಳಲ್ಲಿಯೂ ಲವ್ ಯೂ ಮುದ್ದು ಚಿತ್ರದಲ್ಲಿ ಅದು ಸಾಧ್ಯವಾಗಿಲ್ಲ. ಇದ್ದುದರಲ್ಲಿ ಸಮುದ್ರದಂಚಿನ ಸೀನುಗಳಲ್ಲಿ ಈ ಜೋಡಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತೆ. ಅದಕ್ಕೆ ಕಾರಣವಾಗಿರೋದು ಸಿನಿಮಾಟೋಗ್ರಫಿ. ಈ ವಿಚಾರದಲ್ಲಿ ಕೃಷ್ಣ ದೀಪಕ್ ಅವರ ಕೈಚಳಕ ಅಚ್ಚರಿ ಮೂಡಿಸುತ್ತೆ. ಇನ್ನುಳಿದಂತೆ ಯಾವುದೇ ಪ್ರೇಮ ಕಥೆ ಗೆಲ್ಲವಬೇಕೆಂದರೆ ಅದರಲ್ಲಿ ಹಾಡುಗಳ ಪಾತ್ರ ದೊಡ್ಡದು. ಅನಿರುದ್ಧ ಶಾಸ್ತ್ರಿ ಆ ವಿಚಾರದಲಲಿ ಸೋತಿದ್ದಾರೆ. ಹಾಡುಗಳಾಗಲಿ, ಹಿನ್ನೆಲೆ ಸಂಗೀತವಾಗಲು ಮನಸಿಗಿಳಿಯುವಂತಿಲ್ಲ. ಇಂಥಾ ಹಲವಾರು ತಪ್ಪುಗಳಾಚೆಗೆ ಅಸಲೀ ಕಥೆಯನ್ನು ಹಾಗೆಯೇ ತೆರೆ ಮೇಲೆ ತಂದಿದ್ದರೂ ನಿರ್ದೇಶಕರು ಪ್ರೇಕ್ಷಕರನ್ನು ಮತ್ತಷ್ಟು ಮುದಗೊಳಿಸಬಹುದಿತ್ತು. ಅಂತೂ ಒಂದೊಳ್ಳೆ ಕಥೆ, ಸಂದೇಶದೊಂದಿಗೆ ಈ ಪ್ರೇಮ ಕಥನದ ಪರಾಗ ಪ್ರೇಕ್ಷಕರ ಮನಸಿಗೆ ಮೆತ್ತಿಕೊಳ್ಳುವಂತಿದೆ!

The post Love You Muddu Movie Review: ಚೆಂದದ ಕಥೆ ಸೇರಿದಂತೆ ಎಲ್ಲವೂ ಇದೆ; ಆದರೆ..! appeared first on Cini Shodha.

Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!
ನಿರ್ದೇಶನ: ಹರಿಕೃಷ್ಣ ಎಸ್

ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ, ಕೀರ್ತಿರಾಜ್ ಮತ್ತು ಕಾಮಿಡಿ ಕಲಾವಿದರು

ರೇಟಿಂಗ್: 2

ತನಿಷಾ ಕುಪ್ಪಂಡ ಬಿಗ್‌ಬಾಸ್ ಪ್ರಭೆಯಲ್ಲಿಯೇ ನಿರ್ಮಾಪಕಿಯಾಗಿ ಅವತರಿಸಿದ್ದ ಚಿತ್ರ ಕೋಣ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಂದಾಗಲೂ ಹೆಚ್ಚೇನೂ ನಿರೀಕ್ಷೆಗಳಿರಲಿಲ್ಲ. ಅಷ್ಟಕ್ಕೂ ಈ ಕೋಣ ಅನ್ನೋ ಟೈಟಲ್ಲೇ ಹೆಚ್ಚೇನೂ ಕುತೂಹಲ ಹುಟ್ಟಿಸಿರಲಿಲ್ಲ. ಅದೇನು ಕಂಬಳದ ಕೋಣವೋ, ಮಾರಿ ಜಾತ್ರೆಯಲ್ಲಿ ಬಲಿಕೊಡುವ ಕೋಣವೋ ಎಂಬಂಥಾ ಗೊಂದಲ ಸೃಷ್ಟಿಯಾಗಿತ್ತೇ ಹೊರತು, ನಿರೀಕ್ಷೆಗಳೇನೂ ಮೂಡಿರಲಿಲ್ಲ. ಇದೀಗ ಬಿಡುಗಡೆಗೊಂಡಿರೋ ಈ ಸಿನಿಮಾದುದ್ದಕ್ಕೂ ಅಂಥಾ ಗೊಂದಲಗಳೇ ಗೂಡುಕಟ್ಟಿಕೊಂಡಿವೆ. ಒಂದಷ್ಟು ಅಚ್ಚುಕಟ್ಟಾಗಿದ್ದಂತೆ ಕಂಡಿದ್ದ ಟ್ರೈಲರ್ ನೋಡಿ ಚಿತ್ರಮಂದಿರಕ್ಕೆ ತೆರಳಿದ್ದವರನ್ನೆಲ್ಲ ಕೋಮಲ್ ಕುಮಾರನ ಕೋಣ ಅಕ್ಷರಶಃ ರೊಚ್ಚಿಗೆಬ್ಬಿಸುತ್ತೆ!

ನಿರ್ದೇಶಕನೆನ್ನಿಸಿಕೊಂಡಿರುವ ಪುಣ್ಯಾತ್ಮ ಹರಿಕೃಷ್ಣ ಅದೇನೋ ಕಥೆ ಮಾಡಿಕೊಂಡಿದ್ದಾರೆ. ಆರಂಭ ಕೊಂಚ ಆಶಾದಾಯಕವಾಗಿದ್ದರೂ, ಕೋಣದ ಪಯಣ ಯಾವ ಘಟ್ಟದಲ್ಲಿಯೂ ಸಹ್ಯವಾಗಿ ಕಾಣಿಸೋದಿಲ್ಲ. ಕಾಡೊಂದರ ಮೂಲಕ ಈ ಚಿತ್ರ ತೆರೆದುಕೊಳ್ಳುತ್ತೆ. ಆ ಕಾಡಿನ ಮಧ್ಯದಲ್ಲೊಬ್ಬ ದನಗಾಹಿಯಂಥವನು ನದಿಯೊಂದರತ್ತ ಓಡಿ ಗಾಬರಿಯಾಗಿ ನಿಲ್ಲುತ್ತಾನೆ. ಆ ನದಿಯಲ್ಲಿ ಹೆಣಗಳ ರಾಶಿ ತೇಲಿ ಬರುತ್ತಿರುತ್ತೆ. ಹೀಗೆ ಹದಿನಾರನೇ ಶತಮಾನದಲ್ಲಿ ಘಟಿಸುವ ಈ ಸಿನಿಮಾ ಹದಿನಾರನೇ ಶತಮಾನಕ್ಕೂ ಲಿಂಕು ಪಡೆದುಕೊಳ್ಳುತ್ತೆ. ಅದ್ಯಾರೋ ರಾಜ, ಸಲೀಸಾಗಿ ಯುದ್ಧ ಗೆದ್ದುಕೊಳ್ಳಲು ಆತ ಮಾಂತ್ರಿಕರ ಮೂಲಕ ಸೃಷ್ಟಿಸಿದ್ದ ಬೆದರುಗೊಂಬೆ, ಬರ ಬರುತ್ತಾ ಮನುಷ್ಯರ ರಕ್ತಕ್ಕಾಗಿ ಬಾಯ್ತೆರೆದು ನಿಲ್ಲುತ್ತೆ. ಅದನ್ನು ಗಡಿಯಾಚೆ ಎಸೆಯೋ ಕ್ಷುದ್ರ ಕಾರ್ಯಾಚರಣೆಯ ಬೆನ್ನಲ್ಲಿಯೇ ಕಥೆಯೆಂಬುದು ಏಕಾಏಕಿ ಈ ಶತಮಾನಕ್ಕೆ ಬಂದು ನಿಲ್ಲುತ್ತೆ.

ಇಲ್ಲಿ ಕಥಾ ನಾಯಕ ಕೋಮಲ್ ಎಂಟ್ರಿಯಾಗುತ್ತೆ. ರೋಬೋಟ್ ಮೂಲಕ ಜ್ಯೋತಿಷ್ಯ ಹೇಳೋ ಆತ ಸತ್ತಿರೋ ತನ್ನ ಮಡದಿ ಬಳಿಯಿದ್ದಾಳೆಂದು ಭ್ರಮಿಸುತ್ತಾ ಆಕೆಯೊಂದಿಗೆ ಮಾತಾಡುತ್ತಿರುತ್ತಾನೆ. ವಿಕ್ಷಿಪ್ತ ಸ್ವಭಾವದ ಆ ಪಾತ್ರದ ಜೊತೆಗೆ ತನಿಷಾ ಕುಪ್ಪಂಡ ಸೇರಿದಂತೆ ಮತ್ತೊಂದಷ್ಟು ಪಾತ್ರಗಳು ಜಮೆಯಾಗುತ್ತವೆ. ಅಂಥಾ ಕೋಮಲ್ ಹೊಟೆಲ್ ಮುಂಭಾಗ ರೋಬೋಟ್ ನಿಲ್ಲಿಸಿಕೊಂಡು ಗ್ರಾಹಕರಿಗಾಗಿ ಕಾಯುತ್ತಿರುವಾಗ ಬಸ್ಸೊಂದರಲ್ಲಿ ಕಾಮಿಡಿ ಕಿಲಾಡಿಗಳ ಎಂಟ್ರಿಯಾಗುತ್ತೆ. ಹಾಗೆ ಬಂದವರು ಕಾಮಿಡಿ ಕಿಲಾಡಿಗಳು, ಗಿಚ್ಚಿಗಿಲಿಗಿಲಿಯಂಥಾ ಕಾಮಿಡಿ ಶೋಗಳ ಪ್ರತಿಭೆಗಳು. ಅವರೆಲ್ಲರೂ ಊರೊಂದರಲ್ಲಿ ನಡೆಯಲಿದ್ದ ನಾಟಕಕ್ಕಾಗಿ ಹೊರಟು ನಿಂತ ಕಲಾವಿದರು. ಒಂದು ಪಾತ್ರಕ್ಕಾಗಿ ಕಲಾವಿದ ಬೇಕಿರೋದರಿಂದ ಆ ತಂಡದ ಮಂದಿ ಕೋಮಲ್‌ನನ್ನೇ ಕರೆದುಕೊಂಡು ಹೊರಡುತ್ತಾರೆ. ಹಾಗೆ ಆ ಕಾಮಿಡಿ ಕಲಾವಿದರ ದಂಡಿನೊಂಡಿದೆ ಕೋಳೂರು ಎಂಬೂರಿಗೆ ಸಿನಿಮಾ ಶಿಫ್ಟಾಗುತ್ತೆ.

ಅಲ್ಲಿಂದಾಚೆಗೆ ನಡೆಯೋದು ಅಕ್ಷರಶಃ ಪ್ರೇಕ್ಷಕರ ತಾಳ್ಮೆ ಪರೀಕ್ಷೆ.

ನಂತರ ಕಥೆಯೇ ಇಲ್ಲದೆ, ಕೇವಲ ಕಾಮಿಡಿ ಕಿಲಾಡುಇಗಳು ಶೈಲಿಯ ಸ್ಕಿಟ್ಟುಗಳನ್ನು ನಂಬಿಯೇ ನಿರ್ದೇಶಕರು ದೃಷ್ಯ ಕಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಥರದ ಶೋಗಳಲ್ಲಿ ಥರ್ಡ್ ಕ್ಲಾಸ್ ಆದರೂ ಪಂಚುಗಳಾದರೂ ಇರುತ್ತವೆ. ಆದರೆ. ಇಲ್ಲಿ ಅದಕ್ಕೂ ಗತಿಯಿಲ್ಲ. ಕಡೆಗೂ ಕಾಮಿಡಿ ಕಿಲಾಡಿಗಳು ಭ್ರಾಮಕ ಹಾಸ್ಯದ ಭ್ರಮೆಯಲ್ಲಿ ತೊನೆದಾಡುತ್ತಾರೆ. ಅದಾಗಲೇ ತಾಳ್ಮೆ ಕಳೆದುಕೊಂಡ ಪ್ರೇಕ್ಷಕರ ಕಣ್ಣಿಗೆ ಕೋಮಲ್ ಸೇರಿದಂತೆ ಎಲ್ಲರೂ ಲಗಾಡಿಯೆದ್ದ ಕಥೆಯ ಕಳೇಬರದ ಮೇಲೆ ಹುಚ್ಚುದ್ದು ಕುಣಿಯೋ ಕೋತಿಯಂತೆ ಕಾಣಿಸುತ್ತಾರೆ. ಕಡೆಗೂ ಕ್ಲೈಮ್ಯಾಕ್ಸಿನಲ್ಲಿ ಎಲ್ಲಿಂದೆಲ್ಲಿಗೋ ಲಿಂಕು ಮಾಡಿ, ಸ್ಪಷ್ಟೀಕರಣ ನೀಡುವ ನೆಪದಲ್ಲಿ ಮತ್ತಷ್ಟು ಸಿಕ್ಕುಗಟ್ಟಿಸಿ ಬಿಟ್ಟಿದ್ದಾರೆ. ಆ ಹೊತ್ತಿಗೆಲ್ಲ ಕೋಮಲನ ಕೋಣಕ್ಕೆ ಅದೇ ಇಲ್ಲ ಎಂಬ ಸತ್ಯ ಪ್ರೇಕ್ಷಕರಿಗೆ ಅರ್ಥವಾಗುತ್ತೆ!

ಕಡೇಯ ಸೀನಿನಲ್ಲಿ ಕೋಮಲ್ ಥೇಟು ಪಂಜುರ್ಲಿ ದೈವದ ಪಾತ್ರದಲ್ಲಿ ರಿಷಭ್ ಶೆಟ್ಟಿ ಅಬ್ಬರಿಸಿದಂತೆ ನಟಿಸಲು ಪ್ರಯತ್ನಿಸಿದ್ದಾರೆ. ಆ ದೃಷ್ಯ ಮಾತ್ರ ಅದ್ಭುತ. ಕಾಮಿಡಿ ಕಿಲಾಡಿಗಳೆಲ್ಲ ಮುಕ್ಕರಿಸಿ ಪ್ರಯತ್ನಿಸಿದರೂ ಮೂಡದ ನಗು ಆ ದೃಷ್ಯವನ್ನು ನೋಡಿ ಪ್ರೇಕ್ಷಕರ ಮುಖದಲ್ಲಿ ಕುಣಿದಾಡುತ್ತೆ. ಇನ್ನು ಈ ಚಿತ್ರದಿಂದ ಯಾರಿಗಾದರೂ ಉಪಯೋಗವಾಗಿದ್ದರೆ ಅದು ತನಿಷಾ ಕುಪ್ಪಂಡಳಿಗೆ ಮಾತ್ರ. ಯಾಕೆಂದರೆ, ಆಕೆ ಇಡೀ ಸಿನಿಮಾದಲ್ಲಿ ತಾನಿರುವಂತೆ ನೋಡಿಕೊಂಡಿದ್ದಾರೆ. ಕಷ್ಟಪಟ್ಟು ಉದ್ದಿಮೆಗಳನ್ನು ಕಟ್ಟಿ ಹಣ ಸಂಪಾದಿಸಿರುವ ಹೆಣ್ಣುಮ ಗಳು ತನಿಷಾ. ಅಂಥಾ ಕಷ್ಟದ ಲಾಸನ್ನು ಆಕೆ ಯಾಕಿಂಥಾ ಕೆಟ್ಟ ಚಿತ್ರಕ್ಕೆ ಸುರಿದರೋ ಗೊತ್ತಾಗೋದಿಲ್ಲ. ಕಡೆಗೂ ಇಂಥಾದ್ದೊಂದು ಕೆಟ್ಟ ಸಿನಿಮಾವನ್ನು ಈ ಆಸಾಮಿ ಕೋಮಲ್ ಅದ್ಯಾಕೆ ಒಪ್ಪಿಕೊಂಡರೆಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತೆ. ಇದಕ್ಕೆ ಸಿಗುವ ಉತ್ತರದಲ್ಲಿಯೇ ಕೋಮಲ್‌ನನ್ನು ಮುತ್ತಿಕೊಳ್ಳುತ್ತಾ ಬಂದಿರುವ ಸಾಲು ಸಾಲು ಸೋಲಿನ ಹಿಂದಿರೋ ಕಾರಣವೂ ಸ್ಪಷ್ಟವಾಗುತ್ತೆ. ಈ ಹಂತದಲ್ಲಿ ಪ್ರೇಕ್ಷಕgರು ಒಳಗಿಂದೊಳಗೇ ರೊಚ್ಚಿಗೆದ್ದಿರುವಾಗ ಕೋಮಲನ ಅಣ್ಣ ಜಗ್ಗಣ್ಣನ ಧ್ವನಿ ಕೇಳಿಸುತ್ತೆ. ಅದೂ ಕೂಡಾ ಹತಾಶ ಪ್ರೇಕ್ಷಕರನನ್ನು ಸಮಾಧಾನಿಸೋದಿಲ್ಲ. ನಿಜಕ್ಕೂ ಕೋಮಲ್ ಇನ್ನು ಮುಂದೆ ನಾಯಕನಾಗೋ ತಲುಬು ಬಿಟ್ಟು, ಮತ್ತೆ ಹಾಸ್ಯ ಪಾತ್ರಗಳಿಗೆ ಮರಳೋದೊಳಿತು. ಜಗ್ಗಣ್ಣ ತನ್ನ ತಮ್ಮನಿಗೆ ಒಂದಷ್ಟು ಬುದ್ಧಿ ಹೇಳಬಾರದೇ?

The post Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು! appeared first on Cini Shodha.

Brat Movie Review: ಕಥೆ ರೋಚಕ; ಅರ್ಜುನ್ ಜನ್ಯಾ ಕೈಚಳಕ ಭಯಾನಕ!
ನಿರ್ದೇಶನ: ಶಶಾಂಕ್

ತಾರಾಗಣ: ಡಾರ್ಲಿಂಗ್ ಕೃಷ್ಣ, ಮನಿಷಾ ಕಂದಕೂರ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು

ರೇಟಿಂಗ್: 3

ಟೈಟಲ್ ಮೂಲಕವೇ ಒಂದಷ್ಟು ಚರ್ಚೆ ಹುಟ್ಟು ಹಾಕಿ, ಆ ಮೂಲಕ ಸೆಳೆದುಕೊಳ್ಳುವ ಫಾರ್ಮುಲಾದೊಂದಿಗೆ ಪ್ರಚಲಿತಕ್ಕೆ ಬಂದಿದ್ದ ಚಿತ್ರ ಬ್ರ್ಯಾಟ್. ಅಷ್ಟೇನೂ ಪರಿಚಿತವಲ್ಲದ ಇಂಥಾದ್ದೊಂದು ಟೈಟಲ್ಲು ಟ್ರೈಲರ್ ಮೂಲಕ ಮತ್ತೊಂದು ಆಯಾಮದಲ್ಲಿ ಕ್ರೇಜ್ ಮೂಡಿಸಿತ್ತು. ನಿರ್ದೇಶಕ ಶಶಾಂಕ್ ಇತ್ತೀಚಿನ ದಿನಗಳಲ್ಲಿ ಸೆಳೆತ ಕಳೆದುಕೊಂಡಿದ್ದರೂ ಕೂಡಾ ಡಾರ್ಲಿಂಗ್ ಕೃಷ್ಣ ಜೊತೆಗಿನ ಕಾಂಬಿನೇಷನ್ನಿನಲ್ಲಿ ಮ್ಯಾಜಿಕ್ಕು ನಡೆದೀತೆಂಬ ಆಶಾವಾದವೊಂದು ಚಿಗಿತುಕೊಂಡಿತ್ತು. ಇದೀಗ ಬ್ರ್ಯಾಟ್ ತೆರೆಗಂಡಿದೆ. ಸಮರ್ಥವಾದ ಬರವಣಿಗೆಯೊಂದಿದ್ದರೆ, ನಿರ್ದೇಶನದ ತೊಡಕುಗಳನ್ನೂ ಪ್ರೇಕ್ಷಕ ಮಾಫಿ ಮಾಡೋದಿದೆ. ಇದೀಗ ಊರೂರನ್ನೂ ಆವರಿಸಿಕೊಂಡಿರುವ ಬೆಟ್ಟಿಂಗ್ ದಂಧೆಯ ಕರಾಳ ಲೋಕದೊಳಗೆ ಪಾತಾಳ ಗರಡಿ ಹಾಕುತ್ತಲೇ, ಅದರ ಸೂಕ್ಷ್ಮಗಳನ್ನು ತೆರೆದಿಟ್ಟಿರುವ ಕಥೆ, ಅಲ್ಲಲ್ಲಿ ನಿರ್ದೇಶನದ ಬಿಗುವು ಕಳೆದುಕೊಂಡರೂ ಮತ್ತೊಂದು ತಿರುವಿನಲ್ಲಿ ಅದನ್ನು ಮರೆಸುವ ಗುಣದೊಂದಿಗೆ ಬ್ರ್ಯಾಟ್ ಪ್ರೇಕ್ಷಕರನ್ನು ತಲುಪಿದೆ.

ಡಾರ್ಲಿಂಗ್ ಕೃಷ್ಣ ನಟನೆಯ ವಿಚಾರದಲ್ಲಿ ಮಿತಿಗಳ ಸರಹದ್ದಿನಲ್ಲಿಯೇ ಗಿರಕಿ ಹೊಡೆಯುವ ನಟ. ಚಿತ್ರದಿಂದ ಚಿತ್ರಕ್ಕೆ ಅಂಥಾ ಮಿತಿಗಳ ಸರಹದ್ದು ದಾಟಿ ಚಕಿತಗೊಳಿಸಬೇಕೆಂಬ ಇರಾದೆಯೇ ಈತನಿಗಿಲ್ಲವೇನೋ ಅಂತ ಪ್ರೇಕ್ಷಕರಿಗೆ ಅನ್ನಿಸಿದ್ದಿದೆ. ಈ ಕಾರಣದಿಂದಲೇ ಒಂದೇ ಬಗೆಯ ಆತನ ನಟನೆ ಏಕತಾನತೆ ಮೂಡಿಸಿದ್ದೂ ಇದೆ. ಬ್ರ್ಯಾಟ್ ಚಿತ್ರದಲ್ಲಿಯೂ ಡಾರ್ಲಿಂಗು ಅದನ್ನು ಮೀರಿಕೊಂಡಿಲ್ಲ. ಆದರೆ, ಆತನ ಒರಿಜಿನಲ್ ಛಾಯೆಗೆ ತಕ್ಕಂಥಾ ಪಾತ್ರವನ್ನೇ ನಿರ್ದೇಶಕ ಶಶಾಂಕ್ ಸೃಷ್ಟಿಸಿದ್ದಾರೆ. ಈ ಕಾರಣದಿಂದಲೇ ಸದರಿ ಪಾತ್ರ ಕೃಷ್ಣನಿಗೆ ಬಿಟ್ಟರೆ ಮತ್ಯಾರಿಗೂ ಸರಿಹೊಂದೋದಿಲ್ಲ ಎಂಬ ಭಾವವೊಂದು ಪ್ರೇಕ್ಷಕನ ಮನದಲ್ಲಿ ಹಾದು ಹೋಗುತ್ತೆ. ಹೆಂಗಾದ್ರೂ ಕಾಸು ಮಾಡ್ಬೇಕು ಮಗಾ ಅನ್ನೋದು ಹೊಸಾ ಜನರೇಷನ್ನಿನ ಮೂಲಮಂತ್ರ. ಅದರ ಚುಂಗು ಹಿಡಿದುಕೊಂಡೇ ಒಂದುಷ್ಟು ಅಧ್ಯಯನ, ಗಟ್ಟಿ ಕಥೆಯೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಶಾಲಾ ದಿನಗಳಲ್ಲಿಯೇ ಸಹಪಾಠಿ ಹುಡುಗರಿಗೆ ಬೆಟ್ಟಿಂಗಿನಂಥಾ ಆಟ ಆಡಿಸಿ, ಒಂದಷ್ಟು ಕಾಸು ಮಾಡಿಕೊಳ್ಳೋ ಪ್ರಳಯಾಂತಕ ಹುಡುಗ ಕೃಷ್ಣ ಅಲಿಯಾಸ್ ಕ್ರಿಸ್ಟಿ. ಇಂಥಾ ಹುಡುಗ ಶಿಸ್ತಿನ ಸಿಪಾಯಿಯಂಥಾ ಹೆಡ್ ಕಾನ್ಟೇಬಲ್ ಮಗ. ಆರಂಭದಿಂದಲೇ ಕ್ರಿಕೆಟರ್ ಆಗಬೇಕೆಂಬ ಕನಸು ಹೊತ್ತಿರೋ ಈ ಹುಡುಗನದ್ದು ಕೈ ತುಂಬಾ ಕಾಸು ಮಾಡಿಕೊಳ್ಳಬೇಕೆಂಬ ಬಯಕೆ. ಅದಕ್ಕಾಗಿ ತಂದೆಯಿಂದ ಕಲಿತುಕೊಂಡ ಆದರ್ಶಗಳಂತೆ ಬಲು ಕಷ್ಟದ ಹಾದಿಯನ್ನು ಆರಿಸಿಕೊಳ್ಳೋ ಕೃಷ್ಣ, ಬಹಳಷ್ಟು ಶ್ರಮ ಹಾಕುತ್ತಾನೆ. ಕಡೆಗೂ ಆ ಹಾದಿಯಲ್ಲಿ ಸೋತಂತೆ ಕಾಣೋ ನಾಯಕನಿಗೆ ನಿರ್ದೇಶಕರು ನಾಯಿಯ ಮೂಲಕ ತಿರುವೊಂದನ್ನು ಕರುಣಿಸುತ್ತಾರೆ. ಆ ನಂತರ ಈ ಹುಡುಗ ಕ್ರಿಸ್ಟಿ ಭಯಾನಕ ಬೆಟ್ಟಿಂಗ್ ಮಾಫಿಯಾಕ್ಕಿಳಿಯುವ ಕಥನವೇ ಒಟ್ಟಾರೆ ಸಿನಿಮಾದ ಜೀವಾಳ. ಕ್ರಿಕೆಟ್ಟಿಗೆ ಅಂಟಿಕೊಂಡಂತಿರುವ ಬೆಟ್ಟಿಂಗ್ ಮಾಫಿಯಾ, ಅದು ನಡೆಯುವ ರೀತಿ, ಅದರಾಳದ ದಂಧೆ ದುಷ್ಮನಿಗಳನ್ನು ನಿರ್ದೇಶಕರು ಸಮರ್ಥವಾಗಿ ಕಟ್ಟಿ ಕೊಟ್ಟಿದ್ದಾರೆ.

ಕ್ರಿಟೆಟ್ ಜಗತ್ತು ಹಾಗೂ ಬೆಟ್ಟಿಂಗ್ ಮಾಫಿಯಾದ ಬಗ್ಗೆ ಆಳವಾದ ಅಧ್ಯಯನ ನಡೆಸಿಯೇ ಈ ಸಿನಿಮಾ ಕಥೆ ಹೊಸೆಯಲಾಗಿದೆ. ಅದು ಈ ಸಿನಿಮಾದ ನಿಜವಾದ ಶಕ್ತಿ. ಆದರೆ, ಕೆಲವಾರು ದೃಷ್ಯಗಳಲ್ಲಿ ನಿರ್ದೇಶಕರು ಸಿನಿಮಾತ್ಮಕವಾಗಿ ದಾಟಿಸಬಹುದಾದ ಪರಿಣಾಮಕಾರಿ ಹಾದಿಗೆ ಎಳಸು ಎಳಸಾದ ಶೈಲಿಯ ಕಲ್ಲುಮುಳ್ಳು ಸುರಿದಿದ್ದಾರೆ. ಆದರೆ, ಅದಾದ ನಂತರ ಸರಿಯುವ ದೃಷ್ಯಗಳು ಅಸಹನೆಯನ್ನೆಲ್ಲ ಮರೆತು ಮುನ್ನಡೆಯುವಂತೆ ಮಾಡುತ್ತವೆ. ಬೆಟ್ಟಿಂಗ್ ಮಾಫಿಯಾ ಅನ್ನೋದು ಹೇಗೆಲ್ಲ ಅಧಿಕಾರಸ್ಥರ ನೆರಳಲ್ಲಿಯೇ ನಡೆಯುತ್ತೆ, ಅದರ ಆಳ ಅಗಲಗಳೇನು, ಯುವ ಸಮುದಾಯ ಆ ವರ್ತುಲದೊಳಗೆ ಹೇಗೆಲ್ಲ ಸಿಲುಕಿಕೊಳ್ಳುತ್ತೆ… ಇಂಥಾ ವಿಚಾರಗಳನ್ನಿಲ್ಲಿ ರೋಚಕವಾಗಿಯೇ ಪ್ರಚುರಪಡಿಸಲಾಗಿದೆ. ನಿರ್ದೇಶನದ ಸೂತ್ರ ಸಡಿಲವಾದರೂ ಗಟ್ಟಿ ಕಥೆ ಹೇಗೋ ದಡ ಸೇರಿಸುತ್ತೆ. ನಾಯಕನ ತಂದೆಯಾಗಿ, ಹೆಡ್ ಕಾನ್ಟೇಬಲ್ ಆಗಿ ಅಚ್ಯತ ಕುಮಾರ್, ಪೊಲೀಸ್ ಅಧಿಕಾರಿಯಾಗಿ ರಮೇಶ್ ಇಂದಿರಾ ಹಾಗೂ ಖಡಕ್ ವಿಲನ್ ಆಗಿ ಡ್ರ್ಯಾಗನ್ ಮಂಜು ನಟನೆ ಅಚ್ಚುಕಟ್ಟಾಗಿದೆ. ನಾಯಕನಾಗಿ ಡಾರ್ಲಿಂಗ್ ಕೃಷ್ಣ ಕೂಡಾ ತಮ್ಮ ಮಿತಿಯೊಳಗಿನ ಪಾತ್ರವನ್ನು ಚೆಂದಗೆ ನಿಭಾಯಿಸಿದ್ದಾರೆ.

ಇಲ್ಲಿ ಕೊರತೆಯಂತೆ ಭಾಸವಾಗೋದು ನಾಯಕಿ ಮನಿಷಾ ಕಂದಕೂರ್. ಈ ಹುಡುಗಿ ಮನಿಷಾಳನ್ನು ನಾಯಕಿಯಾಗಿ ಲಾಂಚ್ ಮಾಡಲೆಂದೇ ನಿರ್ಮಾಪಕರು ಈ ಸಿನಿಮಾ ಮಾಡಿದ್ದಾರೆಂಬ ಮಾತು ಚಿತ್ರರಂಗದ ವಲಯದಲ್ಲಿ ಹರಿದಾಡಿತ್ತು. ಆಕೆಯ ನಟನೆ ಕಂಡರೆ ಯಾರಿಗಾದರೂ ಆ ರೂಮರ್ ಸತ್ಯ ಅನ್ನಿಸುತ್ತೆ. ಯಾಕೆಂದರೆ, ನಟಿಯಾಗಿ ಮನಿಷಾಗೆ ಈ ಪಾತ್ರವನ್ನು ನಿಭಾಯಿಸುವ ಛಾತಿ ಯಾವ ಫ್ರೇಮಿನಲ್ಲಿಯೂ ಕಾಣಿಸುವುದಿಲ್ಲ. ಅನ್ನದಾತನ ಮಗಳೆಂಬ ಕಾರಾಣದಿಂದ ನಿರ್ದೇಶಕರಿಗೆ ಮನಿಷಾಳ ನಟನೆ ಸಹ್ಯವಾಗ ಬಹುದು. ಆದರೆ ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ಅದು ಕೊರತೆಯಾಗಿ ಕಾಡುತ್ತೆ. ಇನ್ನುಳಿದಂತೆ ಈ ಚಿತ್ರದ ಮಹಾ ಮೈನಸ್ ಪಾಯಿಂಟು ಅರ್ಜುನ್ ಜನ್ಯಾರ ಭೀಕರ ಹಿನ್ನೆಲೆ ಸಂಗೀತ. ಅವರೇ ಸಂಗೀತ ನೀಡಿದ್ದ ಹಾಡೊಂದು ಹಿಟ್ ಆಗಿ ವೈರಲ್ ಆಗಿತ್ತು. ಆದರೆ ಹಿನ್ನೆಲೆ ಸಂಗೀತವನ್ನು ಜನ್ಯಾ ಅಕ್ಷರಶಃ ಹಡಾಲೆಬ್ಬಿಸಿದ್ದಾರೆ. ತಾನು ಬೆರಳಾಡಿಸಿದ್ದನ್ನೆಲ್ಲ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆಂಬ ಅಹಮ್ಮಿಕೆಯೋ, ಕೆಲಸದ ಒತ್ತಡವೋ ಗೊತ್ತಿಲ್ಲ; ಜನ್ಯಾ ಕಡೆಯಿಂದ ಈ ಚಿತ್ರಕ್ಕೆ ದೋಖಾ ಸಂಭವಿಸಿದೆ.

ಇದೆಲ್ಲದರಾಚೆಗೆ ಬರವಣಿಗೆಯ ಕಸುವಿನೊಂದಿಗೇ ಈ ಸಿನಿಮಾ ಒಂದಷ್ಟು ಪರಿಣಾಮಕಾರಿಯಾಗಿದೆ ಎಂಬ ಅಭಿಪ್ರಾಯ ಸಿನಿಮಾಸಕ್ತರಲ್ಲಿ ಮೂಡಿಕೊಳ್ಳುತ್ತೆ. ಈ ವಿಚಾದಲ್ಲಿ ರಘುನಂದನ್ ಮತ್ತು ರವಿ ಚಕ್ರವರ್ತಿ ಅವರ ಶ್ರಮವನ್ನು ಮೆಚ್ಚಿಕೊಳ್ಳಲೇಬೇಕು. ಯಾಕೆಂದರೆ, ಈ ಕಥೆ ಹಾಗೂ ಸ್ಕ್ರೀನ್ ಪ್ಲೇ ಅವರು ಕಲೆ ಹಾಕಿರುಜವ ಸಮೃದ್ಧವಾದ ಮಾಹಿತಿಗಳಿಂದಲೇ ಕಳೆಗಟ್ಟಿಕೊಂಡಿದೆ. ಅಂಥಾ ಸಮರ್ಥವಾದ ಕಥೆಯನ್ನು ನಿರೂಪಣೆ ಮಾಡೋ ಹಾದಿಯಲ್ಲಿ ನಿರ್ದೇಶಕ ಶಶಾಂಕ್ ಅಲ್ಲಲ್ಲಿ ಮುಗ್ಗರಿಸಿದ್ದಾರೆ. ಆದರೆ, ಕ್ಲೈಮ್ಯಾಕ್ಸಿನಲ್ಲಿಯೇ ಒಂದಷ್ಟು ಟ್ವಿಸ್ಟುಗಳು ಮತ್ತು ನಗು ಬೆರೆಸುವ ಮೂಲಕ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿದ್ದಾರೆ. ಒಟ್ಟಾರೆಯಾಗಿ ಬ್ರ್ಯಾಟ್ ಸಿನಿಮಾ ಈ ಜನರೇಷನ್ನಿನ ಹುಡುಗರ ಮನಃಸ್ಥಿತಿಗೆ ತಕ್ಕುದಾಗಿ, ಒಂದು ಭಯಾನಕ ಮಾಫಿಯಾದ ಗರ್ಭದೊಳಗಿನ ಜಗತ್ತನ್ನು ದೃಷ್ಯಗಳಲ್ಲಿ ಹಿಡಿದಿಡುವ ಮೂಲಕ ಪ್ರೇಕ್ಷಕರನ್ನು ತೃಪ್ತಗೊಳಿಸುತ್ತೆ!

The post Brat  Movie Review: ಕಥೆ ರೋಚಕ; ಅರ್ಜುನ್ ಜನ್ಯಾ ಕೈಚಳಕ ಭಯಾನಕ! appeared first on Cini Shodha.

Dilmaar Movie Review: ಕಜಿಎಫ್ ಖ್ಯಾತಿಯ ಪ್ರಭೆಯಲ್ಲಿ ಕೇಜಿಗಟ್ಟಲೆ ಸಂಭಾಷಣೆ!
ನಿರ್ದೇಶನ: ಚಂದ್ರಮೌಳಿ

ತಾರಾಗಣ: ರಾಮ್ ಗೌಡ, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ, ಸಾಯಿಕುಮಾರ್, ಶರತ್ ಲೋಹಿತಾಶ್ವ

ರೇಟಿಂಗ್: 2.5

ಟ್ರೈಲರ್ ಮೂಲಕವೇ ಒಂದು ವರ್ಗದ ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಲೇ, ಪಡ್ಡೆ ಹೈಕಳ ಹೃದಯದಲ್ಲಿ ಸಂಚಲನ ಸೃಷ್ಟಿಸಿದ್ದ ಚಿತ್ರ ದಿಲ್ ಮಾರ್. ಈ ಸಿನಿಮಾ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಕ್ಕೆ ಟ್ರೈಲರ್ ಮಾತ್ರವೇ ಕಾರಣ ಅಂದುಕೊಳ್ಳುವಂತಿಲ್ಲ. ಕೆಜಿಎಫ್‌ನಂಥಾ ಸೂಪರ್ ಹಿಟ್ ಸಿನಿಮಾದ ಸಂಭಾಷಣಾ ಕಾರರಾಗಿಕ ಹೆಸರಾಗಿದ್ದ ಚಂದ್ರಮೌಳಿ ದಿಲ್ ಮಾರ್ ಮೂಲಕ ನಿರ್ದೇಶಕರಾಗಿದ್ದರು. ಕೆಜಿಎಫ್‌ನಂಥಾದ್ದೊಂದು ಬಿಗ್ ಹಿಟ್ ಸಿನಿಮಾದ ಭಾಗವಾದವರು ನನ್ನು ಮಾಡಹೊರಟರೂ ಪ್ರೇಕ್ಷಕರಲ್ಲೊಂದು ಕುತೂಹಲ ಮೂಡಿಸೋದು ಸಹಜ. ಅಂಥಾ ಕೌತುಕದ ಒಡ್ಡೋಲಗದಲ್ಲಿ ದಿಲ್ ಮಾರ್ ತೆರೆಗಂಡಿದೆ. ಅದರ ಕಥನ, ಅದು ಮೂಡಿಸೋ ಫೀಲ್ ಮತ್ತು ಒಟ್ಟಾರೆ ಸಿನಿಮಾವನ್ನು ಚಂದ್ರಮೌಳಿ ಕಟ್ಟಿಕೊಟ್ಟಿರುವ ರೀತಿಯೆಲ್ಲವೂ ನೋಡುಗರನ್ನು ಸೆಳೆದಿದೆ. ಆದರೆ, ಅವರೆಲ್ಲರನ್ನೂ ಕೂಡಾ ಇದು ಈ ಕಾಲಘಟ್ಟದಲ್ಲಿ ಬಿಡುಗಡೆಗೊಳ್ಳವಂಥಾ ಸಿನಿಮಾವಲ್ಲ ಎಂಬ ವಿಚಿತ್ರ ಭಾವವೊಂದು ಅನಾಯಾಸವಾಗಿ ಅಪ್ಪಿಕೊಂಡಿದೆ!

ಚಂದ್ರಮೌಳಿ ಮೊದಲ ಹೆಜ್ಜೆಯಲ್ಲಿಯೇ ಸಿಕ್ಸರ್ ಬಾರಿಸುವ ಉಮೇದಿನೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಟ್ಟಿರೋದು ಪ್ರತೀ ಫ್ರೇಮುಗಳಲ್ಲಿಯೂ ಕಣ್ಣಿಗೆ ರಾಚುತ್ತೆ. ಅವರ ಪ್ರಯತ್ನದಲ್ಲಿ ಯಶವನ್ನೂ ಕಂಡಿದ್ದಾರೆ. ಸೀನುಗಳು ಸರಿದಾಗೆಲ್ಲ ಪುಟಿದೇಳುವ ಪಂಚಿಂಗ್ ಡೈಲಾಗುಗಳು, ಲವ್ವು, ಫೈಟ್ ಸೀನುಗಳು ಈ ಸಿನಿಮಾವನ್ನು ಕಿಮರ್ಶಿಯಲ್ ಚೌಕಟ್ಟಿನಲ್ಲಿ ಸಮೃದ್ಧಗೊಳಿಸಿವೆ. ತಾನೋರ್ವ ಹೊಸಾ ಹೀರೋನನ್ನು ಲಾಂಚ್ ಮಾಡುತ್ತಿರುವ ವಿಚಾರವನ್ನ ಮರೆತೇ ಬಿಟ್ಟಂತೆ ಚಂದ್ರಮೌಳಿ ಆ ಪಾತ್ರವನ್ನು ಕೇಜಿಗಟ್ಟಲೆ ಪಂಚಿಂಗ್ ಡೈಲಾಗುಗಳಿಂದ ಶೃಂಗರಿಸಿದ್ದಾರೆ. ತಮ್ಮ ಪಾಲಿನ ಅಷ್ಟೂ ಕೆಲಸವನ್ನು ನೋಡುಗರೆಲ್ಲ ಅಹುದಹುದೆನ್ನುವಂತೆ ಮಾಡಿದ್ದರೂ ಕೂಡಾ, ಅತೀ ಮುಖ್ಯ ವಿಚಾರವೇ ಅದೇಕೋ ಚಂದ್ರಮೌಳಿಯ ತಲೆಗೆ ಹೊಳೆಯದೆ ಯಡವಟ್ಟು ಸಂಭವಿಸಿದಂತಿದೆ!

ಈ ಸಿನಿಮಾ ಮಂಗಳೂರಿನಲ್ಲೋರ್ವ ರೌಡಿಯ ಕೊಲೆಯ ಸನ್ನಿವೇಶದೊಂದಿಗೆ ತೆರೆದುಕೊಳ್ಳುತ್ತೆ. ಹಾಗೆ ಕೊಲೆಯಾದವನ ಅಣ್ಣ ಭಾರ್ಗವನ ಪರಿಚಯವನ್ನೂ ಕೂಡಾ ನಿರ್ದೇಶಕರು ಪಂಚಿಂಗ್ ಡೈಲಾಗುಗಳ ಮೂಲಕವೇ ಮಾಡಿಸುತ್ತಾರೆ. ಆ ನಂತರದ ದೃಷ್ಯ ಮತ್ತದೇ ಡೈಲಾಗ್ ಕಮಾಲಿನೊಂದಿಗೆ ತೆರೆದುಕೊಳ್ಳೋದು ಮೇಲುಕೋಟೆಯಲ್ಲಿ. ಅಲ್ಲಿಯೇ ಹೀರೋ ಎಂಟ್ರಿಯಾಗುತ್ತೆ. ಏಕಾಏಕಿ ಆ ಊರ ಗೌಡನ ಮನೆಗೆ ನುಗ್ಗೋ ನಾಯಕ ಹುಡುಗಿಯೊಬ್ಬಳ ಹೆಸರು ಕೂಗುತ್ತಾ ಅರಚಾಡೋ ನಾಯಕನಿಗೆ ಆಕೆಯ ಅಣ್ಣ ಸಾಯಡಿಯುತ್ತಾನೆ. ಯಾಕೆಂದರೆ, ಹೀರೋ ಅದೆಷ್ಟು ಸಲ ಹೊಡೆಸಿಕೊಂಡರೂ ಮತ್ತೆ ಮತ್ತೆ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿರುತ್ತಾನೆ. ಇಂಥಾ ನಾಯಕನಿಗೆ ಅದಕ್ಕೂ ಮುನ್ನವೇ ಹುಡುಗಿಯೊಬ್ಬಳೊಂದಿಗೆ ಹೇಗೆ ಲವ್ವಾಗಿರುತ್ತೆ? ಖುದ್ದು ಆ ಸುಂದರಿಯೇ ಬಳಿ ಬಂದರೂ ಬ್ರೈನಿನ ಮಾತು ಕೇಳದ, ಮೆದುಳು ಹೇಳಿದಕ್ಕೆ ತದ್ವಿರುದ್ಧ ಪಥದಲ್ಲಿ ಸಾಗಿದ್ದ ಈತ ಅದೇ ಹುಡುಗಿಯ ಮೋಹಕ್ಕೆ ಬೀಳಲು ಕಾರಣವೇನು? ಆತನ ವ್ಯಕ್ತಿತ್ವಕ್ಕೆ ಸೈಕೋ ಪದರ ಮೆತ್ತಿದ ವಿಕ್ಷಿಪ್ತ ಅಧ್ಯಾತ್ಮದ ಮೂಲ ಯಾವುದು?

ಮೊದಲ ಹುಡುಗಿ ತಾನೇ ಪೀಡಿಸಿ ಪ್ರೀತಿಸೆಂದರೂ ಕೊಸರಿಕೊಂಡಿದ್ದ ನಾಯಕ ಯಾಕೆ ಮದುವೆ ನಿಗಧಿಯಾಗಿದ್ದ ಮತ್ತೋರ್ವ ಹುಡುಗಿಯನ್ನು ಬೆಂಬಿದ್ದು ಕಾಡಿಸುತ್ತಾನೆ? ಅಷ್ಟಕ್ಕೂ ಮೊದಲ ಹುಡುಗಿಯ ಬರ್ಭರ ಸಾವಿಗೆ ಕಾರಣವೇನು? ರೌಡಿ ಭಾರ್ಗವ ನಾಯಕನ ಮೇಲೆ ರೊಚ್ಚಿಟ್ಟುಕೊಂಡು ಕೊಲ್ಲಲು ಮುಗಿಬೀಳೋದ್ಯಾಕೆ? ಇಂಥಾ ಎಲ್ಲ ಪ್ರಶ್ನೆಗಳಿಗೂ ರೋಚಕ ಉತ್ತರವೆಂಬಂತೆ ನಿರ್ದೇಶಕರು ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಕಥೆಯ ವಿಚಾರಕ್ಕೆ ಬಂದರೂ ಗಟ್ಟಿತನವಿದೆ. ಪಾತ್ರವನ್ನು ಸೃಷ್ಟಿಸೋ ವಿಚಾರದಲ್ಲಿಯೂ ಚಂದ್ರಮೌಳಿಯ ಕುಸುರಿ ಬೆರಗು ಮೂಡಿಸುತ್ತೆ. ಪಂಚಿಂಗ್ ಡೈಲಾಗುಗಳಲ್ಲಿಯಂತೂ ಎಲ್ಲವನ್ನೂ ಆವರಿಸುವ ಉಮೇದಿನಲ್ಲಿ ನಿರ್ದೇಶಕರು ವಿಜೃಂಭಿಸಿದ್ದಾರೆ. ಟ್ರೈಲರ್ ನೋಡಿ ಆ ಮೂಲಕ ಕುತೂಹಲ ಮೂಡಿಸಿಕೊಂಡು ಯಾರೇ ಹೋದರೂ ಈ ಸಿನಿಮಾ ಖಂಡಿತವಾಗಿಯೂ ಮೋಸ ಮಾಡೋದಿಲ್ಲ!

ಇಷ್ಟಿದ್ದ ಮೇಲೆ ದಿಲ್ ಮಾರ್ ಹೌಸ್ ಫುಲ್ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಬೇಕಲ್ಲಾ? ಇಂಥಾ ಪ್ರಶ್ನೆ ನಿಮ್ಮನ್ನು ಕಾಡಸಿದರೆ ಉತ್ತರವೆಂಬುದು ನಿರಾಶಾದಾಯಕವಾಗಿದೆ. ಯಾಕೆಂದರೆ, ಕೆಜಿಎಫ್‌ನಂಥಾ ಈ ಕಾಲಮಾನದ ಸೂಪರ್ ಹಿಟ್ ಚಿತ್ರದ ಭಾಗವಾಗಿದ್ದ ನಿರ್ದೇಶಕ ಚಂದ್ರಮೌಳಿ, ದಿಲ್ ಮಾರ್ ಚಿತ್ರವನ್ನು ಇಂದಿನ ವಾತಾವರಣಕ್ಕೆ ತಕ್ಕುದಾಗಿ ರೂಪಿಸುವಲ್ಲಿ ಎಡವಿದ್ದಾರೆ. ಇಲ್ಲಿ ಚಂದ್ರಮೌಳಿ ಪ್ರದರ್ಶಿಸಿರೋದು ನಿರ್ದೇಶಕರ ಪಿಎನ್ ಸತ್ಯ ಬ್ರ್ಯಾಂಡಿನ ಫಾರ್ಮುಲಾವನ್ನು. ಪಾತ್ರಗಳನ್ನು ಡೈಲಾಗಿನ ಬಿಲ್ಡಪ್ಪುಗಳ ಮೂಲಕವೇ ಹಿಡಿದೆತ್ತೋದು ಸತ್ಯ ಶೈಲಿ. ಅದು ದಶಕಗಳ ಹಿಂದೆ ಸರಿಕಟ್ಟಾಗಿಯೇ ಪರಿಣಾಮ ಬೀರುತ್ತಿತ್ತು. ದರ್ಶನ್, ಸುದೀಪ್, ಶಿವಣ್ಣನಂಥಾ ನಟರೂ ಕೂಡಾ ಅಂಥಾ ಫಾರ್ಮುಲಾವನ್ನು ನೆಚ್ಚಿಕೊಂಡೇ ಸ್ಟಾರ್‌ಡಂ ಪಡೆದುಕೊಂಡಿದ್ದರು. ಆದರೆ, ಅದರ ಪಟ್ಟುಗಳೆಲ್ಲ ದಶಕದ ಹಿಂದೆಯೇ ಸವಕಲಾಗಿದೆ.

ಗಮನೀಯ ಅಂಶವೆಂದರೆ, ಹೊಸಾ ಹೀರೋನ ಎಂಟ್ರಿಯ ಸಿನಿಮಾದಲ್ಲಿ ಇಂಥಾ ಬಿಲ್ಡಪ್ ಡೈಲಾಗುಗಳು ಭಾರವೆನ್ನಿಸುತ್ತವೆ. ಈ ಕಾರಣದಿಂದಲೇ ನವನಾಯಕ ರಾಮ್ ಗೌಡ ಅತ್ಯಂತ ಎನರ್ಜಿಯಿಂದ, ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದರೂ ಕೂಡಾ ಅದು ಗೆಲುವಾಗಿ ರೂಪಾಂತರಗೊಳ್ಳುವಲ್ಲಿ ಎಡವಿದಂತಾಗಿದೆ. ಓವರ್ ಬಿಲ್ಡಪ್ಪಿನ ಪ್ರಭೆಯೇ ಅವರ ಪಾಲಿಗೆ ಒಜ್ಜೆಯಾದಂತೆ ಭಾಸವಾಗುತ್ತದೆ. ಇದೆಲ್ಲದರಾಚೆ, ಈ ಸಿನಿಮಾವೇನಾದರೂ ಈಗೊಂದು ಐದತ್ತು ವರ್ಷಗಳ ಹಿಂದೆ ಬಂದಿದ್ದರೆ, ಆ ದಿನಗಳಲ್ಲಿ ಸ್ಟಾರುಗಳಾಗಿದ್ದ ದರ್ಶನ್, ಸುದೀಪ್‌ರಂಥಾ ನಟರು ನಾಯಕರಾಗಿದ್ದರೆ ಈ ಸಿನಿಮಾ ಖಂಡಿತವಾಗಿಯೂ ನೂರು ದಿನಗಳ ಭರ್ಜರಿ ಪ್ರದರ್ಶನ ಕಾಣುತ್ತಿತ್ತು. ಆದರೆ, ಈಗ ಸೋಶಿಯಲ್ ಮೀಡಿಯಾ ಅಲೆದಯಿಂದ ಪ್ರೇಕ್ಷಕರೇ ಅಪ್‌ಡೇಟಾಗಿದ್ದಾರೆ. ಈ ಹಂತದಲ್ಲಿ ದಿಲ್‌ಮಾರ್ ಚಿತ್ರಕ್ಕೆ ಸ್ಟಾರ್ ನಟರು ಹೀರೋ ಆಗಿದ್ದರೂ ಬಚಾವಾಗೋದು ಕಷ್ಟವೇ!

ಓರ್ವ ನಿರ್ದೇಶಕನಾಗಿ ಕಥೆಯ ಸೃಷ್ಟಿ, ಪಾತ್ರಗಳನ್ನು ರೂಪಿಸುವಿಕೆ ಸೇರಿದಂತೆ ಎಲ್ಲದರಲ್ಲಿಯೂ ಚಂದ್ರಮೌಳಿ ಗೆದ್ದಿದ್ದಾರೆ. ಆದರೆ, ಈವತ್ತಿನ ಪ್ರೇಕ್ಷಕರಿಗೆ ತಕ್ಕುದಾಗಿ ಈ ಸಿನಿಮಾವನ್ನು ಕಟ್ಟಿ ಕೊಡೋದರಲ್ಲಿ ಸೋತಿದ್ದಾರೆ. ಇಂಥಾ ಹಿನ್ನಡೆಯನ್ನು ಹೊರತಾಗಿಸಿ ನೋಡಿದರೆ, ನವ ನಾಯಕ ರಾಮ್ ಗೌಡ ಅತ್ಯಂತ ಸವಾಲಿನದ್ದಾದ ಈ ಪಾತ್ರವನ್ನು ಪೋಶಿಸುವಲ್ಲಿ ಗೆದ್ದಿದ್ದಾರೆ. ನಾಯಕಿಯರಾದ ಅದಿತಿ ಪ್ರಭುದೇವ ಮತ್ತು ಡಿಂಪಲ್ ಹಯಾತಿ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇತ್ತೀಚೆಗೆ ನೇಪಥ್ಯಕ್ಕೆ ಸರಿದಂತಿದ್ದ ಸಾಯಿಕುಮಾರ್ ಭಾರ್ಗವ ಎಂಬ ಪಾತ್ರದಲ್ಲಿ ವಿಲನ್ ಆಗಿ ಅಕ್ಷರಶಃ ಅಬ್ಬರಿಸಿದ್ದಾರೆ. ಕಡಿಮೆ ಕಾಲಾವಧಿಯಿದ್ದರೂ ನಾಯಕಿಯ ತಂದೆಯ ಪಾತ್ರದ ಮೂಲಕ ಶರತ್ ಲೋಹಿತಾಶ್ವ ಮನಸಿಗಿಳಿಯುತ್ತಾರೆ. ನಿರ್ದೇಶಕನಾಗಿ ಪ್ರತೀ ಸೂಕ್ಷ್ಮಗಳನ್ನೂ ಸಮರ್ಥವಾಗಿ ನಿಭಾಯಿಸಿರುವ ಚಂದ್ರಮೌಳಿ ಅದ್ಯಾಕೆ ದಶಕದ ಹಿಂದಿನ ಸವಕಲು ಫಾರ್ಮುಲಾವನ್ನು ನೆಚ್ಚಿಕೊಂಡರೋ… ಸಿನಿಮಾ ನೋಡಿದವರನ್ನೆಲ್ಲ ಅಂತಿಮವಾಗಿ ಅದೊಂದು ಪ್ರಶ್ನೆ ವಿಷಾಧದಂತೆ ಆವರಿಸಿಕೊಳ್ಳುತ್ತೆ!

The post Dilmaar Movie Review: ಕಜಿಎಫ್ ಖ್ಯಾತಿಯ ಪ್ರಭೆಯಲ್ಲಿ ಕೇಜಿಗಟ್ಟಲೆ ಸಂಭಾಷಣೆ! appeared first on Cini Shodha.

Green Movie Review: ಮಿಸ್ಟೀರಿಯಸ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್‌ನ ವಿಕ್ಷಿಪ್ತ ಅನುಭವ!
ನಿರ್ದೇಶನ: ರಾಜ್ ವಿಜಯ್

ತಾರಾಗಣ: ಗೋಪಾಲ ದೇಶಪಾಂಡೆ, ಬಾಲಾಜಿ ಮನೋಹರ್, ರಾಜ್ ವಿಕ್ಕಿ, ವಿಶ್ವನಾಥ್ ಮಂಡಲಿಕ, ಶಿವ್ ಮಂಜು, ಗಿರೀಶ್ ಎಂ.ಎನ್

ರೇಟಿಂಗ್: 2.5

ಪ್ರಚಾರದ ಅಬ್ಬರವಿಲ್ಲದೆ ತಣ್ಣಗೆ ತೆರೆಗಂಡಿರುವ ಸಿನಿಮಾ ಗ್ರೀನ್. ಒಂದಷ್ಟು ಮಂದಿಗೆ ದೀಪಾವಳಿಯ ಆಸುಪಾಸಲ್ಲಿ ಇಂಥಾದ್ದೊಂದು ಸಿನಿಮಾ ತೆರೆಗಂಡಿರುವ ವರ್ತಮಾನವೇ ತಲುಪಿಕೊಂಡಿರಲಿಕ್ಕಿಲ್ಲ. ಆದರೆ, ಆರಂಭಿಕವಾಗಿ ವಿಭಿನ್ನ ಪೋಸ್ಟರ್ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಅದರ ಬೆನ್ನಲ್ಲಿಯೇ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರರ್ಶನ ಕಂಡು ಪ್ರಶಸ್ತಿ ಬಾಚಿಕೊಂಡ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ಟೀಸರ್ ಬಿಡುಗಡೆಯಾದ ನಂತರವಂತೂ ಗ್ರೀನ್ ತಾನೇ ತಾನಾಗಿ ಸುದ್ದಿ ಕೇಂದ್ರಕ್ಕೆ ಬಂದು ನಿಂತಿತ್ತು. ಇದೊಂದು ಹಾರರ್ ಸಿನಿಮಾ ಇರಬಹುದಾ ಎಂಬ ಕುತೂಹಲ, ವಿಶೇಷವಾದದ್ದೇನೋ ಕಥೆಯಿರಬಹುದೆಂಬ ಚರ್ಚೆಗಳ ನಡುವೆ ಸದ್ದಿಲ್ಲದೆ ಈ ಸಿನಿಮಾ ತೆರೆಗಂಡಿದೆ.

ಒಂದು ಕಾಲದಲ್ಲಿ ಎಲ್ಲೋ ಗೋಡೆ ಮೇಲೆ ಅಂಟಿಸಿದ್ದ ಪೋಸ್ಟರ್ ಭಿನ್ನವಾಗಿದ್ದರೆ, ಟೈಟಲ್ಲು ವಿಶೇಷವಾಗಿದ್ದರೆ ಆಸುಪಾಸಿನ ಸಿನಿಮಾ ಮಂದಿರಕ್ಕೆ ನುಗ್ಗುವ ಪ್ರೇಕ್ಷಕ ವರ್ಗವೊಂದಿತ್ತು. ಈಗ ಓಟಿಟಿ, ಮೊಬೈಲ್ ಜಮಾನಾ ಚಾಲ್ತಿಯಲ್ಲಿದ್ದರೂ ಕೂಡಾ ಗ್ರೀನ್ ಮೂಲಕ ಅಂಥಾ ಪ್ರೇಕ್ಷಕ ವರ್ಗ ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದೆ. ಹಾಗೊಂದು ಕುತೂಹಲದ ಸೆಳವಿಗೆ ಸಿಕ್ಕು ಸಿನಿಮಾ ಮಂದಿರ ತಲುಪಿದವರನ್ನು ಈ ಚಿತ್ರ ತನ್ನೊಳಗೆ ಎಳೆದುಕೊಂಡು, ತಾನೇ ಹೊರದಬ್ಬಿ, ಮತ್ತೆ ಸೆಳೆದುಕೊಳ್ಳುವ ಚಿತ್ರವಿಚಿತ್ರ ಅನುಭವಗಳನ್ನು ಕೊಡಮಾಡುತ್ತದೆ. ಅಲ್ಲಲ್ಲಿ ಬೇರ್‍ಯಾವುದೋ ಸಿನಿಮಾಗಳ ಛಾಯೆ ಇದ್ದರೂ ನಿರ್ದೇಶಕ ರಾಜ್ ವಿಜಯ್ ಭಿನ್ನವಾದ ಕಥನವನ್ನೇ ಆಯ್ದುಕೊಂಡಿದ್ದಾರೆ. ಆದರೆ, ಸಿನಿಮಾ ನೋಡಿ ಹೊರಬಂದ ಮೇಲೂ ಅತ್ತ ಪೂರ್ಣ ತೃಪ್ತಿಯೂ ಅಲ್ಲದ, ಇತ್ತ ಸಂಪೂರ್ಣವಾಗಿ ಅತೃಪ್ತವೂ ಅಲ್ಲದ ತ್ರಿಶಂಕು ಭಾವವೊಂದು ಮನೆತನಕವೂ ಹಿಂಬಾಲಿಸುತ್ತೆ!

ಪೊಲೀಸ್ ಅಧಿಕಾರಿಯೋರ್ವ ಸುಶೀಲಾ ಬೇಗ ಸಿಕ್ಬಿಡಮ್ಮ ಅನ್ನೋ ಸ್ವಗತದೊಂದಿಗೆ ಕಾರಿನಲ್ಲಿ ಕಾಡೊಂದನ್ನು ಪ್ರವೇಶಿಸುವ ಮೂಲಕ ಈ ಸಿನಿಮಾ ತೆರೆದುಕೊಳ್ಳುತ್ತದೆ. ಹಾಗೆ ಆ ಕಾರು ಗೊಂಡಾರಣ್ಯವನ್ನ ಪ್ರವೇಶಿಸೋ ದೃಷ್ಯವಿದೆಯಲ್ಲಾ? ಅದು ಇದರ ಸಿನಿಮಾಟೋಗ್ರಾಫರ್ ಯಾರು ಅಂತೊಂದು ಬೆರಗನ್ನ ನೋಡುಗರೊಳಗೆ ಮಿಸುಕಾಡುವಂತೆ ಮಾಡುತ್ತೆ. ಅಂಥಾದ್ದೊಂದು ಛಳುಕು ಮೂಡಿಸೋ ಕೈಚಳಕದ ಮೂಲಕ ಈ ಚಿತ್ ಛಾಯಾಗ್ರಾಹಕ ಮಧುಸೂಧನ್.ಕೆ ಗಮನಸೆಳೆಯುತ್ತಾರೆ. ಆ ನಂತರ ತೆರೆದುಕೊಳ್ಳೋದು ಚಿತ್ರವಿಚಿತ್ರ ಜಗತ್ತು. ಹಾಗೆ ಕಾಡೊಳಗೆ ಪ್ರವೇಶಿಸುವ ಜೀಪ್ ಕೆಟ್ಟು ನಿಂತಾಗ ಆ ಅಧಿಕಾರಿ ಕ್ಯಾನ್ ಹಿಡಿದು ನೀರನ್ನರಸುತ್ತಾ ಸುತ್ತಾಡಿ, ನೀರನ್ನು ತುಂಬಿ ತಂದು ಜೀಪಿಗೆ ಹಾಕಿ ಹೊರಟವನು ತನ್ನೊಂದಿಗೆ ತಾನೇ ಮಾತಾಡುವ ಮೂಲಕ ಆ ಕಾಡಿನ ನಿಗೂಢವನ್ನ, ಆತ ಅದರೊಳಗೆ ಹೊರಟಿರುವ ಉದ್ದೇಶದ ಸುಳಿವು ಬಿಟ್ಟು ಕೊಡುತ್ತಾನೆ.

ಅಲ್ಲಿಂದ ತುಸು ದೂರ ಹೊರಟವನಿಗೆ ಬುಡ್ಡಯ್ಯನ ಹೆಂಡದಂಗಡಿ ಸಿಗುತ್ತೆ. ಕುರುಡ ಬುಡ್ಡಯ್ಯನಿಗೆ ಓರ್ವ ಹೆಂಗಸಿನ ಫೋಟೋ ತೋರಿಸಿ, ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಮಗ್ಗುಲ ದಿಕ್ಕಿನಿಂದ ರಣಭೀಕರ ಘರ್ಜನೆಯೊಂದು ಕೇಳಿ ಬರುತ್ತೆ. ಆ ಭೀಕರ ಸದ್ದಿನಿಂದ ಹೆದರೋ ಆ ಅಧಿಕಾರಿ ಒಂದೇ ಸಮನೆ ಓಡಲು ಶುರುವಿಟ್ಟುಕೊಂಡಂತೆಯೇ, ಆ ಕಾಡಿನ ಮತ್ತೊಂದು ಪಾರ್ಶ್ವದ ಹೂ ಗಿಡಗಳ ನರ್ಸರಿಯ ಚಿತ್ರಣ ತೆರೆದುಕೊಳ್ಳುತ್ತೆ. ಅಲ್ಲೊಬ್ಬ ವಿಜ್ಞಾನಿಗಳ ಬಳಸೋ ಮಾಸ್ಕ್ ಧರಿಸಿದಾತ ಅದರ ಮಾಲಕನಂತೆ ಕಾಣಿಸುತ್ತಾನೆ. ಅಲ್ಲಿರುವ ವೀಲ್ ಚೇರಿನ ಆಸಾಮಿ ಯಾರು, ಆ ಕಾಡೊಳಗಿಂದ ಹೊರ ಹೋಗುವ ಧಾವಂತದೊಂದಿಗೆ ಬ ಡಬಡಿಸುವ ಗೋಪಾಲ್ ದೇಶಪಾಂಡೆಯ ಪಾತ್ರವೇನು? ಅದೇ ನರ್ಸರಿಯ ಒಡಲಲ್ಲಿರೋ ಮತ್ತೊಂದು ನರ್ಸರಿಯ ನಿಗೂಢವೇನು? ಅದೇ ನರ್ಸರಿ ವಾತಾವರಣದಲ್ಲಿರೋ ಮರದ ಬೇರುಗಳು ಹೆಣದ ರುಚಿ ಅಂಟಿಸಿಕೊಂಡಿದ್ದೇಕೆ? ಸಾವೇ ಇಲ್ಲದಂತೆ ಮಾಡಬಲ್ಲ ಹೂವಿನ ರಸದ ರಹಸ್ಯವೇನು? ಅಲ್ಲಿನ ಮರಗಳು ಹೇಗೆ ರಾತ್ರೋರಾತ್ರಿ ಒಂದು ಕಡೆಯಿಂದ ಮತ್ತೊಂದೆಡೆಗೆ ಚಲಿಸುತ್ತವೆ? ಅಲ್ಲಿ ನಡೆಯೋ ನಿಗೂಢ ಸಾವುಗಳ ಹಿಂದಿರೋ ಮರ್ಮವೇನೆಂಬುದು ಒಟ್ಟಾರೆ ಸಿನಿಮಾದ ಸಾರ.

ಕನ್ನಡದ ಮಟ್ಟಿಗೆ ಇಲ್ಲಿರೋದು ಭಿನ್ನ ಕಥೆ ಮತ್ತು ಅದಕ್ಕೆ ತಕ್ಕುದಾದ ನಿರೂಪಣೆ. ಇದು ಮಿಸ್ಟೀರಿಯಸ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಜಾನರಿನ ಚಿತ್ರ. ಇದರ ವಿಶೇಷತೆಯೆಂದರೆ ಕಣ್ಣೆದುರೇ ಗೋಜಲಾಗಿ, ಸಿಕ್ಕು ಸಿಕ್ಕಾಗಿ ದೃಷ್ಯಗಳು ಸರಿಯುತ್ತವೆ. ಕಥೆ ಕೂಡಾ ಆ ಸಿಕ್ಕುಗಳ ಜೊತೆಗೇ ಸಾಗುತ್ತೆ. ಇಂಥಾ ಸಿನಿಮಾಗಳನ್ನು ನೋಡಿ ಅರಗಿಸಿಕೊಳ್ಳುವುದಕ್ಕೂ ಒಂದಷ್ಟು ವಿಶೇಷ ಗುಣಗಳೇ ಬೇಕಾಗುತ್ತವೆ. ಕಡೇ ತನಕವೂ ಕಣ್ಣೆದುರು ಏನಾಗುತ್ತಿದೆ, ಯಾವ ಪಾತ್ರದ ಚಹರೆಗಳೇನು, ಕಥೆ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬ ಸುಳಿವೇ ಸಿಗುವುದಿಲ್ಲ. ಅಂಥಾ ಗೊಂದಲಗಳನ್ನೂ ಕೂಡಾ ನೋಡುಗರಿಗೆ ಅಸಹನೆ ಮೂಡದಂತೆ, ದೃಷ್ಯದಿಂದ ದೃಷ್ಯಕ್ಕೆ ಕುತೂಹಲ ತೀವ್ರಗೊಳ್ಳುವಂತೆ ಎಚ್ಚರ ವಹಿಸೋದು ಇಂತಾ ಸಿನಿಮಾಗಳ ನಿರ್ದೇಶನದ ದೊಡ್ಡ ಸವಾಲು. ದೃಷ್ಯಗಳು, ಕಥೆ ಅದೆಷ್ಟೇ ಸಿಕ್ಕುಗಟ್ಟಿದರೂ ಅದರ ಮೂಲ ಸೂತ್ರದ ಮೇಲೆ ನಿರ್ದೇಶಕನ ಹಿಡಿತ ತಪ್ಪುವಂತಿಲ್ಲ. ಒಂದು ವೇಳೆ ತಪ್ಪಿತೆಂದರೆ ಕ್ಲೈಮ್ಯಾಕ್ಸ್ ಅದೆಷ್ಟೇ ಅದ್ಭುತವಾಗಿದ್ದರೂ ಪ್ರೇಕ್ಷಕನಿಗೆ ತಾಕುವುದಿಲ್ಲ.

ಗ್ರೀನ್ ಚಿತ್ರದ ವಿಚಾದರಲ್ಲಿ ಹೇಳೋದಾದರೆ, ಎಲ್ಲವನ್ನೂ ರೋಚಕವಾಗಿಸುವ ಭರದರಲ್ಲಿ ಆ ಸೂತ್ರವೆಂಬುದು ನಿರ್ದೇಶಕರ ಕೈ ತಪ್ಪಿದಂತಿದೆ. ಇಲ್ಲಿ ಹೆಜ್ಜೆ ಹಜ್ಜೆಗೂ ಬೆರಗಾಗಿಸಬಲ್ಲ, ಬೆಚ್ಚಿ ಬೀಳಿಸುವ ಅಂಶಗಳಿದ್ದಾವೆ. ಕೆಲವೊಂದು ದೃಷ್ಯಗಳು ಹಾಲಿವುಡ್ ಸಿನಿಮಾವೊಂದರ ನೇರ ಪ್ರಭಾವದಿಂದ ಸೃಷ್ಟಿಯಾದಂತೆ ಭಾಸವಾಗುತ್ತದೆ. ಈ ಊಹಾತ್ಮಕ ವ್ಯೂಹಕ್ಕೆ ಸಿಕ್ಕ ಪ್ರೇಕ್ಷಕರ ಮೆದುಳು ಕ್ಲ್ಯಾಕ್ಸಿನ ಹೊತ್ತಿಗೆಲ್ಲ ಮರಗಟ್ಟಿದಂತಾಗುತ್ತದೆ. ಇದರ ದೆಸೆಯಿಂದಲೇ ರೋಮಾಂಚಕವಾಗಿರುವ ಕ್ಲೈಮ್ಯಾಕ್ಸಿನ ಅನುಭೂತಿಯನ್ನು ಎದುರುಗೊಳ್ಳುವ ಶಕ್ತಿಯನ್ನು ನೋಡುಗರು ಕಳೆದುಕೊಂಡಿರುತ್ತಾರೆ. ಮುಕ್ತಾಯದ ಹೊತ್ತಿಗೆಲ್ಲ ಮನುಷ್ಯರ ಹೆಣ ತಿನ್ನುವ ವಿಚಿತ್ರ ಮರ ಕಾಡುತ್ತೆ. ಅಷ್ಟರಲ್ಲಿ ಆ ನರಭಕ್ಷಕ ಮರದ ಕೊಂಬೆಯಲ್ಲಿ ನೇತುಬಿದ್ದಿರುವ ಬೊಂಬೆಗಳೆಲ್ಲ ನಮ್ಮದೇ ಹೆಣವೆಂಬಂತೆ ಭಾಸವಾಗಲಾರಂಭಿಸುತ್ತೆ. ಅಂಥಾ ವಿಕ್ಷಿಪ್ತ ಭಾವವೊಂದು ಸಿನಿಮಾ ಮಂದಿರದಿಂದ ಹೊರಬಿದ್ದು ಮನೆವರೆಗೂ ಹಿಂಬಾಲಿಸುತ್ತೆ!

The post Green Movie Review: ಮಿಸ್ಟೀರಿಯಸ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್‌ನ ವಿಕ್ಷಿಪ್ತ ಅನುಭವ! appeared first on Cini Shodha.

Bilichukki Hallihakki Review: ಮೈಮನಸುಗಳಿಗಾದ ಗಾಯಗಳ ಮುಖಾಮುಖಿ!
ಪ್ಯಾನಿಂಡಿಯಾ ಅಲೆ, ಮಾಸ್ ಸಿನಿಮಾಗಳ ಭರಾಟೆಗಳ ನಡುವೆ ಒಂದು ಭಿನ್ನ ಪ್ರಯತ್ನದ ಸುಳಿವು ಸಿಕ್ಕರೂ ಸಾಕು; ಕನ್ನಡದ ಪ್ರೇಕ್ಷಕರು ರೋಮಾಂಚಿತರಾಗುತ್ತಾರೆ. ಹಾಗಿರುವಾಗ ವಿಟಿಲಿಗೋದಂಥಾ ಸಮಸ್ಯೆಯ ಸುತ್ತ ಕಮರ್ಶಿಯಲ್ ಹಾದಿಯಲ್ಲಿ ರೂಪುಗೊಂಡಿರುವ ಚಿತ್ರವೊಂದು ತಯಾರಾಗಿದೆ ಎಂದರೆ ಕುತೂಹಲ ಮೂಡದಿರಲು ಸಾಧ್ಯವೇ? ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದದ್ದು ಆ ಕಾರಣದಿಂದಲೇ. ಅಂಥಾದ್ದೊಂದು ಗಾಢ ನಿರೀಕ್ಷೆಯ ಒಡ್ಡೋಲಗದಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಬಿಡುಗಡೆಗೊಂಡಿದೆ.

ಎಲ್ಲರಿಗೂ ಗೊತ್ತಿರುವಂತೆ ವಿಟಿಲಿಗೋ ಅಥವಾ ತೊನ್ನಿನ ಸುತ್ತ ಹಬ್ಬಿಕೊಂಡಿರುವ ಕಥೆ ಈ ಚಿತ್ರದ ಜೀವಾಳ. ತೊನ್ನೆಂಬುದು ನಮಗೇನೂನ ಅಪರಿಚಿತವಾದ ದೈಹಿಕ ಸಮಸ್ಯೆಯಲ್ಲ. ಮೈ ತುಂಬಾ ಬಿಳಿಮಚ್ಚೆ ಹಬ್ಬಿರುವ ಜೀವಗಳು ನಮ್ಮ ಸುತ್ತಲೇ ಸುಳಿದಾಡುತ್ತಿರುತ್ತವೆ. ವಿಚಿತ್ರವೆಂದರೆ, ದೇಹದೊಳಗಿನ ಕೆಲ ವ್ಯತ್ಯಯಗಳಿಂದ ಹರಡಿಕೊಳ್ಳುವ ಈ ಕಾಯಿಲೆಯಲ್ಲದ ಕಾಯಿಲೆಯ ಬಗ್ಗೆ ಈ ಸಮಾಜದಲ್ಲಿ ಒಂದಷ್ಟು ಮೌಢ್ಯ ತುಂಬಿಕೊಂಡಿದೆ. ಅದುವೇ ತೊನ್ನುಪೀಡಿತ ವ್ಯಕ್ತಿಗಳು ಸಾಮಾಜಿಕವಾಗಿಯೂ ಘಾಸಿಗೊಳ್ಳುವಂತೆ ಮಾಡುತ್ತದೆ. ಸ್ವತಃ ತೊನ್ನಿನ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರು ಕೌಟುಂಬಿಕ ಹಿನ್ನೆಲೆಯಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿಯ ಕಥೆಯನ್ನು ಹರವಿದ್ದಾರೆ.

ಶಿವ ಅಮ್ಮನ ಪ್ರೀತಿಯ ಕೂಸು. ಬದುಕಿಗೆ ಬೇಕಾದ ಕಸುಬಿನ ಮೂಲವೂ ಆತನ ಮುಂದಿರುತ್ತೆ. ಆದರೆ ಆತನನ್ನು ಹೆಜ್ಜೆ ಹೆಜ್ಜೆಗೂ ಎಳವೆಯಿಂದಲೇ ಕಾಡಿಸಲಾರಂಭಿಸಿದ್ದು ಮೈಮೇಲೆ ಮೂಡಿಕೊಂಡಿದ್ದ ತೊನ್ನಿನ ಕಲೆಗಳು. ಅಮ್ಮನ ಅದ್ಮ್ಯ ಪ್ರೀತಿ, ಆಕೆ ನೀಡುವ ಬೆಚ್ಚನೆಯ ಭಾವದಾಚೆಗೂ ಸಾಮಾಜಿಕವಾಗಿ ತನ್ನತ್ತ ಬೀರುವ ತೀಕ್ಷ್ಣ ದೃಷ್ಟಿ ಮತ್ತು ಸಹಪಾಠಿಗಳ ಮೂದಲಿಕೆಗಳು ಶಿವನ ಮನಸಿಗೂ ಗಾಯವಾಗಿಸಿರುತ್ತೆ. ಇಂಥಾ ಹುಡುಗ ಬೆಳೆದು ದೊಡ್ಡವನಾಗಿ, ತನ್ನ ಅನ್ನ ತಾನೇ ಸಂಪಾದಿಸುವಷ್ಟು ಶಕ್ತನಾದರೂ ಕೂಡಾ ಮೈಮೇಲಿನ ತೊನ್ನು ಕೀಳರಿಮೆಯಾಗಿ ಕಾಡಲಾರಂಭಿಸುತ್ತೆ. ಅಮ್ಮನ ಒತ್ತಾಸೆಗೆ ಕಟ್ಟು ಬಿದ್ದು ಮದುವೆಯಾಗುವ ಪ್ರಯತ್ನದಲ್ಲೂ ಮೈಮೇಲಿನ ಬಿಳಿ ಕಲೆಗಳು ವಿಲನ್‌ನಂತೆ ಕಂಗೆಡಿಸುತ್ತವೆ. ಆತನ ಮನಸಿನ ಗಾಯ ಮತ್ತಷ್ಟು ವ್ರಣವಾಗುತ್ತೆ.

ಇದೆಲ್ಲದರ ನಡುವೆ ಓರ್ವ ಹುಡುಗಿ ಶಿವನ ಬದುಕಿಗೆ ಬಂದಲ್ಲಿಂದಾಚೆಗೆ ಕಥೆ ಗರಿಬಿಚ್ಚಿಕೊಳ್ಳುತ್ತೆ. ಹಾಗೆ ಶಿವನ ಬದುಕಿಗೆ ಬಂದವಳ ಮನಸಲ್ಲೂ ಎಂದೂ ಮಾಸದ ಗಾಯವೊಂದಿರುತ್ತೆ. ಕಥೆಯುದ್ದಕ್ಕೂ ಅವರೊಳಗಿನ ಗಾಯಗಳು ಮುಖಾಮುಖಿಯಾಗುತ್ತವೆ. ಒಂದಷ್ಟು ಹಂತದಲ್ಲಿ ಸೀರಿಯಲ್ಲಿನ ಛಾಯೆ ಕಥೆಯ ಗಾಂಭೀರ್ಯಕ್ಕೆ ಪೆಟ್ಟು ಕೊಟ್ಟಿತೇನೋ ಅನ್ನಿಸೋದು ನಿಜ. ಇದೂ ಸೇರಿ ಸಿನಿಮಾದ ಅಲ್ಲಲ್ಲಿ ಒಂದಷ್ಟು ಕೊರತೆಗಳು ಕಾಣಿಸುತ್ತವೆ. ಆದರೆ ಕೈಮ್ಯಾಕ್ಸ್ ಸನ್ನಿವೇಶ ಎಲ್ಲ ಕೊರತೆಗಳನ್ನೂ ನೀಗಿಸುತ್ತದೆ. ವಿಶೇಷವಾಗಿ ತೊನ್ನಿನ ಸುತ್ತಲೇ ರೂಪುಗೊಂಡ ಈ ಸಿನಿಮಾ, ಅದರ ಬಗ್ಗೆ ಮ ನಮುಟ್ಟುವಂಥಾ ಸಂದೇಶ ರವಾನಿಸುವಲ್ಲಿ ಗೆದ್ದಿದೆ. ಅದು ಮಹೇಶ್ ಗೌಡರ ಒಟ್ಟಾರೆ ಶ್ರಮದ ಸಾರ್ಥಕ್ಯದಂತೆಯೂ ಭಾಸವಾಗುತ್ತದೆ.

ಎಲ್ಲ ಜವಾಬ್ದಾರಿಗಳನ್ನು ಮೈಮೇಲೆಳೆದುಕೊಂಡಿದ್ದರೂ ಓರ್ವ ನಟನಾಗಿಯೂ ಮಹೇಶ್ ಗೌಡ ಆಪ್ತವಾಗುತ್ತಾರೆ. ಭಾವಗಳ ಮೂಲಕವೇ ಸಂವಹನ ನಡೆಸುವ ನಾಯಕಿಯಾಗಿ ಕಾಜಲ್ ಕುಂದರ್ ಮನಸಿಗಿಳಿಯುತ್ತಾರೆ. ವೀಣಾ ಸುಂದರ್, ಲಕ್ಷ್ಮಿ ಸಿದ್ದಯ್ಯ, ಜಹಾಂಗೀರ್, ರವಿಭಟ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರದ ಒಳಗಿಳಿದು ನಟಿಸಿದ್ದಾರೆ. ಪ್ರತಿಭಾನ್ವಿತ ಪೋಶಕ ನಟರಾಗಿ ಗುರುತಿಸಿಕೊಂಡಿರುವ ರವಿ ಭಟ್ ನಾಯಕಿಯ ತಂದೆಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಪಾತ್ರ ಒಟ್ಟಾರೆ ಸಿನಿಮಾದ ಅಂತಃಶಕ್ತಿಯಂತಿದೆ. ಇನ್ನು ತೊನ್ನಿನ ಸಮಸ್ಯೆ ಹೊಂದಿರುವ ಮಗನನ್ನು ಕೀಳರಿಮೆ ಕಾಡದಂತೆ ಕಾಪಿಟ್ಟುಕೊಳ್ಳುವ, ಪ್ರತೀ ಹಂತದಲ್ಲಿಯೂ ನೆತ್ತಿ ನೇವರಿಸಿ ಜೊತೆಯಾಗುವ ಲಕ್ಷ್ಮಿ ಸಿದ್ದಯ್ಯರ ತಾಯಿ ಪಾತ್ರ ನೋಡುಗರಿಗೆ ತಾಯ್ತನದ ಮಧುರಾನುಭೂತಿಯನ್ನು ದಾಟಿಸುವಂತಿದೆ. ಇನ್ನು ಅಳಿಯನ ತೊನ್ನಿನ ಸಮಸ್ಯೆಯನ್ನು ಆಡಿಕೊಳ್ಳುತ್ತಲೇ ಮಗಳ ಬದುಕಿಗೆ ಮಗ್ಗುಲಮುಳ್ಳಾಗುವ ಬಜಾರಿ ತಾಯಿಯಾಗಿ ವೀಣಾ ಸುಂದರ್ ಅವರ ನಟನೆಯೂ ಈ ಸಿನಿಮಾದ ಹೈಲೈಟ್‌ಗಳಲ್ಲೊಂದು. ಆ ಪಾತ್ರ ತೊನ್ನಿನ ಸಮಸ್ಯೆಯ ಬಗ್ಗೆ ಈ ಸಮಾಜದಲ್ಲಿರುವ ಮನಃಸ್ಥಿತಿಯ ರೂಪಕದಂತಿದೆ. ಭೋಳೇ ಸ್ವಭಾವದ ಮಾವನಾಗಿ ಜಹಾಂಗೀರ್ ಅವರ ನಟನೆಯೂ ಗಮನ ಸೆಳೆಯುತ್ತದೆ.

The post Bilichukki Hallihakki Review: ಮೈಮನಸುಗಳಿಗಾದ ಗಾಯಗಳ ಮುಖಾಮುಖಿ! appeared first on Cini Shodha.

coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ!
ತಲೈವಾ ರಜನೀಕಾಂತ್ ಅಭಿನಯದ ಕೂಲಿ ಚಿತ್ರ ಬಿಡುಗಡೆಗೊಂಡಿದೆ. ಜೈಲರ್ ಮೂಲಕ ಮತ್ತೆ ಮೈ ಕೊಡವಿಕೊಂಡಿದ್ದ ರಜನೀಕಾಂತ್ ಕೂಲಿ ಮೂಲಕ ಮತ್ತೊಂದು ದಾಖಲೆ ಬರೆಯುತ್ತಾರೆಂಬಂತೆ ಬಿಲ್ಡಪ್ಪುಗಳು ಹರಿದಾಡಿದ್ದವು. ಈ ತಮಿಳು ಮಂದಿ ಎಷ್ಟು ಸಿನಿಮಾರಾಧಕರೋ, ತಮ್ಮಿಷ್ಟದ ನಟನ ಸಿನಿಮಾ ಬಗ್ಗೆ ಊರಗಲ ಹೈಪು ಸೃಷ್ಟಿಸೋದರಲ್ಲಿಯೂ ಅಷ್ಟೇ ನಿಸ್ಸೀಮರು. ಸಿನಿಮಾ ನಿರ್ಮಾತೃಗಳೂ ಕೂಡಾ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಒಂದಷ್ಟು ಬಚಾವಾಗಲೋಸುಗ ಅಂಥ ಭ್ರಾಮಕ ಹೈಪುಗಳನ್ನೇ ನೆಚ್ಚಿಕೊಳ್ಳುತ್ತಾರೆ. ಕೂಲಿ ಬರಖತ್ತಾಗೋದು ಕಷ್ಟ ಎಂಬರಿತ ಕೂಲಿ ತಂಡ ಕೂಡಾ ಅಂಥಾದ್ದೊಂದು ಬುದ್ಧಿವಂತಿಕೆಯ ನಡೆ ಅನುಸರಿಸಿತ್ತಾ? ಈ ಪ್ರಶ್ನೆಗೆ ಸಿನಿಮಾ ನೋಡಿದ ಮೇಲೆ ಹೌದೆಂಬ ಉತ್ತರವೇ ಗಟ್ಟಿಯಾಗುತ್ತೆ. ಭಯಾನಕ ಪ್ರಚಾರ ಪಡೆದುಕೊಂಡು ತೆರೆಗಂಡಿದ್ದ ಕೂಲಿ ತೀರಾ ಮಾಮೂಲಿ ಎಂಬ ವಿಮರ್ಶೆಗಳೇ ಅಷ್ಟ ದಿಕ್ಕುಗಳಲ್ಲಿಯೂ ಇಟ್ಟಾಡಲಾರಂಭಿಸಿದೆ.

ವಿಕ್ರಮ್ ಥರದ ಸಿನಿಮಾ ಮೂಲಕ ಕಮಲ್ ಹಾಸನ್‌ರಂಥಾ ನಟರನ್ನಿಟ್ಟುಕೊಂಡು ಮ್ಯಾಜಿಕ್ಕು ಮಾಡಿದ್ದಾತ ಲೋಕೇಶ್ ಕನಗರಾಜ್. ಅಂಥಾ ಯುವ ನಿರ್ದೇಶಕನ ಸಾರಥ್ಯದಲ್ಲಿ ರಜನಿ ಗೆಲುವಿನ ಪರ್ವ ಮುಂದುವರೆಯುತ್ತದೆಂದೇ ಬಹುತೇಕರು ಭಾವಿಸಿದ್ದರು. ಯಾವಾಗ ಮೆಲ್ಲಗೆ ಕ್ರೇಜ್ ಸೃಷ್ಟಿಯಾಗ ತೊಡಗಿತೋ, ಅದನ್ನು ಚಿತ್ರತಂಡ ಮತ್ತಷ್ಟು ಮಿರುಗುವಂತೆ ಮಾಡಿ ಬಿಟ್ಟಿತ್ತು. ಆದರೆ, ರಜನೀಕಾಂತ್ ಸಿನಿಮಾವೆಂಬ ಆಕರ್ಷಣೆಯ ಹೊರತಾಗಿ ಮತ್ತೆಲ್ಲವೂ ಮಾಮೂಲಿ ಎಂಬಂಥಾ ರೀತಿಯಲ್ಲಿ ಕೂಲಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಇಲ್ಲಿ ಕಥೆ ಇದೆ; ಆದರದು ಕಾಡೋದಿಲ್ಲ. ಅದ್ದೂರಿ ದೃಶ್ಯಾವಳಿಗಳು, ತಲೈವಾಗೆ ಕೊಟ್ಟಿರೋ ಬಿಲ್ಡಪ್ಪುಗಳು ಪ್ರೇಕ್ಷಕರ ನಿರಾಸೆಯನ್ನು ತೊಡೆದು ಹಾಕುವಷ್ಟು ಶಕ್ತವಾಗಿಲ್ಲ.

ಒಂದೊಂದು ಹಂತದಲ್ಲಿ ಇದು ನಿಜಕ್ಕೂ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಚಿತ್ರವಾ? ಅಂತೊಂದು ಸಂದೇಹ ಪ್ರೇಕ್ಷಕರನ್ನು ಕಾಡಲಾರಂಭಿಸುತ್ತೆ. ಯಾವ ಮುಲಾಜುಗಳಿಗೆ ಕಟ್ಟು ಬಿದ್ದು ಲೋಕೇಶ್ ಇಂಥಾದ್ದೊಂದು ಸರಕನ್ನು ಸಿದ್ಧಪಡಿಕಸಿದ್ದಾರೆಂಬುದೇ ಪ್ರಶ್ನೆಯಾಗುಳಿಯುತ್ತೆ. ಇಲ್ಲಿ ಬೇರೆ ಬೇರೆ ಸಿನಿಮಾ ರಂಗಗಳ ಸ್ಟಾರ್ ನಟರಿದ್ದಾರೆ. ಅವರನ್ನೆಲ್ಲ ಒಂದು ಮಟ್ಟಿಗೆ ಚೆಂದಗೆ ಬಳಸಿಕೊಳ್ಳಲಾಗಿದೆ. ಮಹಾ ತಿರುವು ಹೊಂದಿರುವ ಪಾತ್ರವನ್ನು ರಚಿತ ರಾಮ್ ಕೂಡಾ ಪ್ರೇಷರ ಮನಗೆಲ್ಲುವಂತೆ ನಿರ್ವಹಿಸಿದ್ದಾರೆ. ಆಕೆಯ ಅಭಿನಯ ಚಾತುರ್ಯವಿಲ್ಲಿ ಎದ್ದು ಕಾಣಿಸುತ್ತೆ. ಉಪ್ಪಿ ಪಾತ್ರ ಕೂಡಾ ಚೆನ್ನಾಗಿದೆ. ಆದರೆ, ಅದು ಜೈಲರ್‌ನಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಪಾತ್ರದಷ್ಟು ಪರಿಣಾಮಕಾರಿಯಾಗಿಲ್ಲ.

ನಿಖರವಾಗಿ ಹೇಳಬೇಕೆಂದರೆ, ಒಂದಿಡೀ ಸಿನಿಮಾ ವಾಲಿದಾಗೆಲ್ಲ ಹಿಡಿದೆತ್ತಿ ನಿಂತಂತೆ ಕಾಣಿಸೋದು ಮಲೆಯಾಳಂ ನಟ ಸೋಬಿನ್. ಈತ ನಟನೆಯಲ್ಲಿ ದಯಾಳ್ ಎಂಬ ಪಾತ್ರವನ್ನು ಆವಾಹಿಸಿಕೊಂಡಿರೋ ರೀತಿಯೇ ಅದ್ಭುತ. ಇನ್ನುಳಿದಂತೆ ಸಂಗೀತ ನಿರ್ದೇಶಕ ಅನಿರುದ್ಧ್ ಕೂಡಾ ಈ ಸಿನಿಮಾವನ್ನು ಕುಸಿಯದಂತೆ ನೋಡಿಕೊಂಡ ಆಧಾರ ಸ್ತಂಭಗಳಲ್ಲೊಬ್ಬರಾಗಿ ಮುಖ್ಯರಾಗುತ್ತಾರೆ. ಆದರೆ, ಲೋಕೇಶ್ ಯಾಕಿಂಥಾ ಪೇಲವ ಸಿನಿಮಾ ಮಾಡಿದರೆಂಬ ಪ್ರಶ್ನೆ ಸಿನಿಮಾ ಮುಗಿದ ನಂತರವೂ ಕಾಡುತ್ತೆ. ಅಷ್ಟಕ್ಕೂ ಲೋಕೇಶ್ ಇಲ್ಲಿ ಪ್ರದರ್ಶಿಸಿರುವ ಪಟ್ಟುಗಳು ಪುರಾತನ ಕಾಲದವುಗಳು. ಊರ್ಯ ನಿಸಿದ್ದ ಅಯ್ಯನ್ ಸಿನಿಮಾದಲ್ಲಿ ದಶಕಗಳ ಹಿಂಎಯೇ ಅವುಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿತ್ತು. ಅಂಥಾ ಸವಕಲು ಸರಕನ್ನು ತೀರಾ ಮಾಮೂಲಿಕಯಾಗಿ ಕದೃಷವಾಗಿಸಿದ್ದಾರೆ.

ತಲೈವಾ ಸಿನಿಮಾಗಳಿಂದ ಮೇಲೆ ಕಾಸು ಹೂಡಿದವರಿಗೇನ ಲುಕ್ಸಾನಾಗೋದಿಲ್ಲ. ಒದಷ್ಟು ಲಾಭವಾಗೋದೂ ಖಚಿತ. ಆದರೆ, ಒಂದೊಳ್ಳೆ ಸಿನಿಮಾ ಮೂಲಕ ಅದನ್ನು ಬಳಸಿಕೊಳ್ಳದೇ ಹೋದರೆ ನಿಜಕ್ಕೂ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಲೋಕೇಶ್ ಕನಗರಾಜ್ ಕೂಡಾ ಯಾಕೋ ಅಂಥಾ ಮೂರ್ಖತನವನ್ನೇ ಮಾಡಿದಂತೆ ಕಾಣಿಸುತ್ತಿದೆ. ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಹೈಪು ಸೃಷ್ಟಿಯಾಗಿತ್ತು. ಕಬಾಲಿ ಜಾಹೀರಾತು ಇಮಗಳಲ್ಲಿಯೂ ರಾರಾಜಿಸಿದ್ದವು. ಅಂಥಾ ಹೈಪುಗಳ ಅಬ್ಬರದಲ್ಲಿ ಬಿಡುಗಡೆಗೊಂಡಿದ್ದು ತೋಪು ಸಿನಿಮಾ. ಕೂಲಿಯ ಕ್ರೇಜ್ ನೋಡಿದಾಗಲೂ ಕಬಾಲಿ ಕಾಲವೇ ನೆನಪಾಗಿತ್ತು. ಆದರೆ, ಸಿನಿಮಾ ನೋಡಿದ ಮಂದಿ ಕೂಲಿಗಿಂತ ಕಬಾಲಿಯೇ ವಾಸಿ ಅಂದುಕೊಳ್ಳುವಂತಾಗಿದೆ. ಬಹುಶಃ ಅದು ಕೂಲಿಯ ನಿಜವಾದ ವಿಮರ್ಶೆಯಾಗಬಲ್ಲದು!

The post coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ! appeared first on Cini Shodha.

junior movie review: ಗಣಿಗಳ್ಳನ ಮಗನ ಸಿನಿಮಾ ಹೀಗಿದೆ!
ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಿಲ್ಲ. ಇದು ಗೊತ್ತಿದ್ದರೂ ಕೂಡಾ ಬಳ್ಳಾರಿಯ ಗಣಿಗಳ್ಳ (gaalijanardhanreddy) ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು (kireeti) ನಾಯಕ ನಟನನ್ನಾಗಿ ನೆಲೆಗಾಣಿಸುವ ಕಸರತ್ತು ನಡೆಸಿದ್ದ. ಗಣಿಧೂಳಿನ ಬ್ಲಾಕ್ ಮನಿಯನ್ನು ತಂದು ಸುರಿದರೂ ಕೂಡಾ ರೆಡ್ಡಿಮಗನ (junior movie) ಜ್ಯೂನಿಯರ್ ಚಿತ್ರಕ್ಕೆ ಅಡಿಗಡಿಗೆ ಕಂಟಕ ಎದುರಾಗಿತ್ತು. ಕಡೆಗೂ ಇದೀಗ ಆ ಚಿತ್ರ ಬಿಡುಗಡೆಗೊಂಡಿದೆ. ಗಣಿ ಧೂಳಿಂದೆದ್ದು (mining mafia) ಬಂದ ಕೀಟವೀಗ ಸಿನಿಮಾ ಮಂದಿರದ ಹೆಬ್ಬಾಗಿಲಲ್ಲೇ ಲಗಾಟಿ ಹೊಡೆದಿದೆ.

ಹೇಳಿಕೇಳಿ (janardhan reddy) ಜನಾರ್ಧನ ರೆಡ್ಡಿ ನೆಲ ಬಗೆಯುತ್ತಾ ಏಕಾಏಕಿ ಕೋಟಿ ಕೋಟಿ ಗುಂಜಿಕೊಂಡವನು. ಇಂಥವನಿಗೆ ಓರ್ವ ನಟ ಸಿನಿಮಾ ರಂಗದಲ್ಲಿ ಸರ್ಕಸ್ಸು ನಡೆಸುತ್ತಾ, ಸ್ಟಾರ್ ನಟನಾಗಿ ನೆಲೆ ಕಾಣೋದು ಅದೆಷ್ಟು ಸುದೀರ್ಘವಾದ, ತ್ರಾಸದಾಯಕ ಪ್ರಯಾಣವೆಂಬ ಅರಿವಿರಲು ಸಾಧ್ಯವೇ? ಅಂಥಾದ್ದೊಂದು ಸೈರಣೆಯನ್ನು ಗಾಲಿ ರೆಡ್ಡಿಯಿಂದಾಗಲಿ, ಅವನ ಮಗ (kireeti) ಕಿರೀಟಿಯಿಂದಾಗಲಿ ನಿರೀಕ್ಷೆ ಮಾಡೋದೇ ಮುಠ್ಠಾಳತನ. ಇದನ್ನಿಲ್ಲಿ ಪ್ರಸ್ತಾಪಿಸುತ್ತಿರೋದಕ್ಕೆ ಕಾರಣ ಇಲ್ಲದಿಲ್ಲ. ಜ್ಯೂನಿಯರ್ ಸಿನಿಮಾ ನೋಡಿದ ಯಾರಿಗಾದರೂ ಒಂದೇ ಸಿನಿಮಾದಲ್ಲಿ ಕಿರೀಟಿಯನ್ನು ಸ್ಟಾರ್ ನಟನಾಗಿ ನೆಲೆಗಾಣಿಸುವ ಹಳವಂಡ ಕಣ್ಣಿಗೆ ರಾಚುತ್ತೆ.

ಹಾಗೆ ನೋಡಿದರೆ, ಇಲ್ಲಿ ಕೈಗೆತ್ತಿಕೊಂಡಿರುವ ಕಥೆ ಚೆನ್ನಾಗಿದೆ ಅಂತನ್ನಿಸಿದರೂ ಅದರಲ್ಲಿ ಹೊಸತನವೇನಿಲ್ಲ. ಯಾವ ಘಟ್ಟದಲ್ಲಿಯೂ ಕಥೆಯ ಭಾಗ ವಾಹ್ ಅನ್ನಿಸೋದಿಲ್ಲ. ಪಾತ್ರ ವರ್ಗ ಮತ್ತು ಕಲಾವಿದರು ಅದಕ್ಕೆ ಜೀವ ತುಂಬಿರುವ ರೀತಿಯನ್ನೂ ಮೆಚ್ಚಿಕೊಳ್ಳಬಹುದು. ಆದರೆ, ಕಿರೀಟಿಗೆ ಹಾಡು ಮಾತ್ರವಲ್ಲದೇ ಪ್ರತಿಯೊಂದಕ್ಕೂ ಬಿಲ್ಡಪ್ಪಿ ಕೊಡುವ ದರ್ದಿಗೆ ಬಿದ್ದಿರುವ ನಿರ್ದೇಶಕರು, ಕಥೆಯ ಮೂಲ ಸತ್ವದ ಕತ್ತು ಹಿಸುಕಿದ್ದಾರೆ. ಹಾಡುಗಳಲ್ಲಿ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿರುವ ಕಿರೀಟಿ, ನಟನೆ ಅಂತ ಬಂದಾಗ ಬಸವಳಿದಂತೆ ಕಾಣಿಸುತ್ತಾನೆ. ಗಣಿಗಳ್ಳ ರೆಡ್ಡಿ ಇದುವರೆಗೆ ಗೋರಿಕೊಂಡಿರುವ ಕಾಸನ್ನೆಲ್ಲ ಗುಡ್ಡೆ ಹಾಕಿದರೂ ಕೂಡಾ, ಕಿರೀಟಿ ನಟನಾಗಿ ಪಳಗೋದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

ಅಷ್ಟಕ್ಕೂ ಜನಾ ರೆಡ್ಡಿಯಂಥಾ ಬೇನಾಮಿ ಆಸ್ತಿ ಹೊಂದಿರೋ ಖದೀಮರ ಮಕ್ಕಳು ಹೇಗೆ ಬೇಕಾದರೂ ತಯಾರಿ ನಡೆಸಬಹುದು. ಕಿರೀಟಿ ಕೂಡಾ ನೃತ್ಯ ಸೇರಿದಂತೆ ಒಂದಷ್ಟು ಬಗೆಯಲ್ಲಿ ಶ್ರಮ ಹಾಕಿದ್ದಾನೆ. ಆ ಕಾರಣದಿಂದಲೇಬ ಜ್ಯೂನಿಯರ್ ಇದ್ದುದರಲ್ಲಿಯೇ ಒಂದಷ್ಟು ಸಹ್ಯವೆನಿಸುತ್ತೆ. ಅಷ್ಟರ ಮಟ್ಟಿಗೆ ರೆಡ್ಡಿಮಗ ಕಿರೀಟಿಯನ್ನು ಮೆಚ್ಚಿಕೊಳ್ಳಬಹುದು. ಇದೆಲ್ಲದರಾಚೆಗೆ ಗಣಿಗಳ್ಳನ ಪುತ್ರನ ಸಿನಿಮಾದ ಬಗ್ಗೆ ಬೇರೇನೂ ಹೇಳಲಾಗೋದಿಲ್ಲ. ಒಂದು ಕಾಲದಲ್ಲಿ ಹಡಬೆ ಕಾಸಿಂದ ಒಂದಿಡೀ ರಾಜಕೀಯವನ್ನು ಹಡಾಲೆಬ್ಬಿಸಿದ್ದವನು, ಅಳಿದುಳಿದಿದ್ದ ಮೌಲ್ಯಗಳನ್ನು ಗಣಿಧೂಳಿನಲ್ಲಿ ಉಸಿರುಗಟ್ಟಿಸಿದ್ದವನು ಗಾಲಿ ಜನಾರ್ಧನ ರೆಡ್ಡಿ. ಇಂಥವನ ಮಗ ಹೀರೋ ಆದರೆ ಅದು ಕೆಡುಕಾಗಿಯಷ್ಟೇ ಕಾಣಿಸಲು ಸಾಧ್ಯ!

The post junior movie review: ಗಣಿಗಳ್ಳನ ಮಗನ  ಸಿನಿಮಾ ಹೀಗಿದೆ! appeared first on Cini Shodha.

Ekka movie review: ಎರಡನೇ ಪ್ರಯತ್ನದಲ್ಲೂ ತಪ್ಪಿತೇ ಯುವನ ಲೆಕ್ಕ!
ಹಾಡುಗಳು ಮತ್ತು (trailer) ಟ್ರೈಲರ್ ಮೂಲಕ ಭಾರೀ ಸದ್ದು ಮಾಡೋ ಸಿನಿಮಾಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮೂಡಿಕೊಳ್ಳುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ನಿರೀಕ್ಷೆಗಳ ಬೆನ್ನಲ್ಲಿಯೇ ಗುಮಾನಿಯೊಂದು ಸರಿದಾಡಲಾರಂಭಿಸಿದೆ. ಯಾಕೆಂದರೆ, ನೀಟಾಗಿ ಟ್ರೈಲರ್ ರೂಪಿಸೋ ಮಂದಿ, ಆ ಆವೇಗವನ್ನು ಸಿನಿಮಾದುದ್ದಕ್ಕೂ ಸಂಭಾಳಿಸಲಾಗದೆ ಸೋತಿದ್ದಾರೆ. ಇಂಥಾ ಹೊತ್ತಿನಲ್ಲಿ ಬಿಡುಗಡೆಗೊಂಡಿದ್ದ (yuva rajkumar) ಯುವ ರಾಜ್ ಕುಮಾರ್ ಅಭಿನಯದ ಎಕ್ಕ ಚಿತ್ರ ಅಂಥಾ ಗುಮಾನಿಗಳಾಚೆಗೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಹೇಳಿಕೇಳಿ ಕನ್ನಡ ಚಿತ್ರರಂಗ ಒಂದು ಭರಪೂರ ಹಿಟ್ ಸಿನಿಮಾವಿಲ್ಲದೆ ಬಸವಳಿದಿತ್ತು. ಇಂಥಾ ಸಂದರ್ಭದಲ್ಲಿ ಎಕ್ಕ (ekka movie) ದೊಡ್ಡ ಮಟ್ಟದಲ್ಲಿಯೇ ಧೂಳೆಬ್ಬಿಸುತ್ತೆ ಎಂಬಂಥಾ ನಿರೀಕ್ಷೆಯಿತ್ತು. ಇದೀಗ ಭಾರಾಈ ನಿರೀಕ್ಷೆಯ ಇಕ್ಕಳಕ್ಕೆ ಸಿಕ್ಕು ಸಪ್ಪೆ ಸಪ್ಪೆ ಅನ್ನಿಸೋ ಸ್ಥಿತಿಯಲ್ಲಿ ಎಕ್ಕ ಪ್ರೇಕ್ಷಕರನ್ನು ಎದುರುಗೊಂಡಿದೆ!

ಈ ಹಿಂದೆ (yuva rajkumar) ಯುವ ರಾಜ್ ಕುಮಾರ್ ಪೊರಕೆ ಹಿಡಿದು ನಿಂತ ಪೋಸ್ ಒಂದು ಪ್ರೇಕ್ಷಕರನ್ನು ಎದುರುಗೊಂಡಿತ್ತು. ಅದು ಥೇಟು (powerstar puneethrajkumar) ಪವರ್ ಸ್ಟಾರ್ ಪುನೀತರ್ ರಾಜ್ ಕುಮಾರ್ ನಟಿಸಿದ್ದ ಜಾಕಿ (jackie movie) ಸಿನಿಮಾವನ್ನು ಕಾಪಿ ಹೊಡೆದಂತಿತ್ತು. ಹೇಳಿಕೇಳಿ ಅಪ್ಪು ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಂಡಿರುವಾತ ಯುವ. ಅದರ ಭಾಗವಾಗಿಯೇ ಇಂಥಾದ್ದೊಂದು ಅವತಾರ ಸೃಷ್ಟಿಯಾಗಿರಬಹುದು ಅಂತನ್ನಿಸಿತ್ತು. ಆದರೀಗ ಸಿನಿಮಾ ನೋಡಿದ ಮಂದಿಗೇ ಒಟ್ಟಾರೆ ಎಕ್ಕ ಮೂಡಿ ಬಂದಿರುವ ರೀತಿಯಲ್ಲಿಯೂ ಕೂಡಾ ಜಾಕಿಯ ಛಾಯೆ ಢಾಳಾಗಿದೆ ಅನ್ನಿಸಿದೆ. ಹಾಗಂತ ಎಕ್ಕದಲ್ಲಿರೋದು ಮತ್ತದೇ ಕಥೆಯಾ ಅಂದುಕೊಂಡರೆ ಅದು ಪಕ್ಕಾ ಸುಳ್ಳು. ಕಥೆ ಹೊಸತೇ ಆದರೂ, ಅದು ದೃಶ್ಯರೂಪ ಪಡೆದ ರೀತಿ ಮಾತ್ರ ಹಳೇ ಜಾಡಿನದ್ದೇ!

ಸಮೃದ್ಧ ಹಳ್ಳಿಯೊಂದರಲ್ಲಿ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಯುವಕ ಮುತ್ತು. ಮಗು ಮನಸಿನ ಈತ ಒಲ್ಲದ ಮನಸ್ಸಿಂದಲೇ ಊರು ಬಿಟ್ಟು ಬೆಂಗಳೂರು ಸೇರಿಕೊಂಡ ನಂತರ ಗರಿಬಿಚ್ಚಿಕೊಳ್ಳುವ ಕಥನವೇ ಎಕ್ಕದ ಅಸಲೀ ಜೀವಾಳ. ಹಾಗೆ ಬೆಂಗಳೂರು ಸೇರಿಕೊಂಡ ಮುತ್ತುವಿನ ಬದುಕಲ್ಲಿ ಎಂತೆಂಥಾ ಘಟನೆಗಳು ನಡೆಯುತ್ತವೆ? ಹಳ್ಳಿಗಾಡಿನ ಮುಗ್ಧತೆಯನ್ನು ಮೈಗೂಡಿಸಿಕೊಂಡು ಬೆಳೆದ ಮುತ್ತು ಮಾಸ್ ಅವತಾರವೆತ್ತಲು ಕಾರಣವೇನು? ಇಂಥಾ ಪ್ರಶ್ನೆಗಳಿಗೆ ಸಿನಿಮಾ ಮಂದಿರದಲ್ಲೇ ಉತ್ತರ ಹುಡುಕಿದರೊಳಿತು. ಆದರೆ, ನಿರ್ದೇಶಕ ರೋಹಿತ್ ಪದಕಿ ತಾಂತ್ರಿಕವಾಗಿ ಎಕ್ಕವನ್ನು ಶ್ರೀಮಂತಿಕೆಯಿಂದ ಕಟ್ಟಿ ಕೊಟ್ಟಿದ್ದರಾದರೂ, ಯುವನನ್ನು ಮಾಸ್ ಲುಕ್ಕಿನಲ್ಲಿ ಬಿಂಬಿಸುವ ಭರಾಟೆಯಲ್ಲಿ ಈ ಕಥೆಯ ಭಾವನಾತ್ಮಕ ಸನ್ನಿವೇಶಗಳೇ ಮಂಕಾಗುವಂತೆ ಮಾಡಿದ್ದಾರೆ. ಭಾವನಾತ್ಮಕ ಸನ್ನಿವೇಶಗಳೆಲ್ಲ ಮಾಸ್ ಸೀನುಗಳಲ್ಲು ಕಲೆಸಿಕೊಂಡು ಎರಡೂ ಕೂಡಾ ಪ್ರೇಕ್ಷಕರ ಮನಸಿಗೆ ತಾಕದೆ ಪೇಲವ ಭಾವವನ್ನಷ್ಟೇ ಮೂಡಿಸುತ್ತೆ.

ಇನ್ನು ಪಾತ್ರ ಕಟ್ಟುವ ವಿಚಾರದಲ್ಲಿ (rohit padaki) ರೋಹಿತ್ ಪದಕಿಯದ್ದು ಗಮನಾರ್ಹ ಪ್ರಯತ್ನ. ಖುದ್ದು ರೋಹಿತ್ ಅವರಿಗೆ ಮಾಸ್ ಕಥನ ಹೊಸತು. ತಮ್ಮ ಆತ್ಮದ ಅಭಿರುಚಿಯನ್ನು ಮಾಸ್ ಧಾಟಿಯೊಂದಿಗೆ ಸರಿದೂಗಿಸುವಲ್ಲಿ ಅವರು ಅಲ್ಲಲ್ಲಿ ಬ ಲಾಲೆನ್ಸು ತಪ್ಪಿದಂತೆ ಭಾಸವಾಗುತ್ತೆ. ಇನ್ನು ಸಾಹಿತ್ಯದ ನಂಟು ಹೊಂದಿರುವ (vikram hathwar) ವಿಕ್ರಮ್ ಹತ್ವಾರ್ ಕಥೆಯೊಂದಿಗೆ ಸಂಭಾಷಣೆಯಲ್ಲಿಯೂ ಈ ಚಿತ್ರಕ್ಕೆ ಸಾಥ್ ಕೊಟ್ಟಿಯದ್ದಾರೆ. ಇಂಥಾ ಸಾಹಿತ್ಯಕ ಹಿನ್ನೆಲೆಯವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗ ಸಹಜವಾಗಿಯೇ ನಿರೀಕ್ಷೆ ಮೂಡುತ್ತೆ. ಹತ್ವಾರ್ ಈ ಚಿತ್ರದ ಕಥೆ ಚಿತ್ರಕಥೆ ಮತ್ತು ಸಭಾಷಣೆಗಳ ಭಾಗವಾಗಿದ್ದಾರೆ.

ಇನ್ನುಳಿದಂತೆ ಎಕ್ಕ ಚಿತ್ರದ ವಿಚಾರದಲ್ಲಿ ಯುವ ರಾಜ್ ಕುಮಾರ್ ನಟನೆಯತ್ತ ಎಲ್ಲರ ಚಿತ್ತ ನೆಟ್ಟುಕೊಂಡಿತ್ತು. ಯಾಕೆಂದರೆ, ಮೊದಲ ಚಿತ್ರ ಯುವದಲ್ಲಿ ಆತನ ನಟನೆಯ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಅಪಸ್ವರ ಕೇಳಿ ಬಂದಿತ್ತು. ಜೊತೆಗೆ ಆ ಸಿನಿಮಾ ಭೂಮಿಕೆಯಲ್ಲಿಯೇ ವಿವಾದವೂ ತಲೆಯಿತ್ತಿತ್ತು. ಅಷದರ ಬೆನ್ನಲ್ಲಿಯೇ ಎಕ್ಕ ಚಿತ್ರ ಘೋಷಣೆಯಾಗಿದ್ದರಿಂದ ಅದರ ಬಗೆಗೊಂದು ಕುತೂಹಲವಿತ್ತು. ಈ ಸಿನಿಮಾ ಮಟ್ಟಿಗೆ ಹೇಳೋದಾದರೆ, ಯುವನ ನಟನೆಯಲ್ಲಿ ಒಂದಷ್ಟು ಸಕಾರಾತ್ಮಕ ಬೆಳವಣಿಗೆ ಕಾಣಿಸುತ್ತದೆ. ಆದರೆ, ಓರ್ವ ನಾಯಕ ನಟನಾಗಿ ನೆಲೆ ಕಂಡುಕೊಳ್ಳಬೇಕೆಂದರೆ, ಯುವ ನಟನೆಯಲ್ಲಿ ಮತ್ತಷ್ಟು ಪಳಗಿಕೊಳ್ಳೋದು ಅತ್ಯವಶ್ಯಕ. ಅಂತೂ ಎಕ್ಕ ಚಿತ್ರ ನ ಇರೀಕ್ಷೆಯ ಮಟ್ಟ ಮುಟ್ಟುವಂತೆ ಮೂಡಿ ಬಂದಿಲ್ಲ ಅನ್ನೋದಂತೂ ಪಕ್ಕಾ!

The post Ekka movie review: ಎರಡನೇ ಪ್ರಯತ್ನದಲ್ಲೂ ತಪ್ಪಿತೇ ಯುವನ ಲೆಕ್ಕ! appeared first on Cini Shodha.