vnagendraprasad – Cini Shodha

Super Hit Movie: ಕೌತುಕದ ಕಡಲಿನಲೊಂದು ನಗೆಯ ಹಾಯಿದೋಣಿ!
ಬಿಗ್‌ಬಾಸ್ ವಿನ್ನರ್ ಗಿಲ್ಲಿನಟ ಮತ್ತು ಸೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ ಸೂಪರ್ ಹಿಟ್. ಈಗಾಗಲೇ ಹಾಸ್ಯ ಪ್ರಧಾನ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಸೂಪರ್ ಹಿಟ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಸದರಿ ಸಿನಿಮಾದ ಪಾಲಿಗೆ ಆರಂಭದಿಂದಲೂ ಕೂಡಾ ಎಲ್ಲವೂ ಸಕಾರಾತ್ಮಕವಾಗಿ ಸಾಥ್ ಕೊಡುತ್ತಾ ಬಂದಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರೋ ಗಿಲ್ಲಿ ಬಿಗ್ ಬಾಸ್ ಸ್ಪರ್ಧಿಯಾದದ್ದು, ಕಂಡುಕೇಳರಿಯದಂಥಾ ಜನಪ್ರಿಯತೆ ಪಡೆದು ವಿನ್ನರ್ ಆಗಿದ್ದೂ ಕೂಡಾ ಸಕಾರಾತ್ಮಕ ಸರಪಣಿಗೆ ಹೊಸಾ ಕೊಂಡಿಯಂತೆ ಬೆಸೆದುಕೊಂಡಿದೆ. ಬಿಗ್‌ಬಾಸ್ ಮನೆಯಲ್ಲಿದ್ದಷ್ಟೂ ದಿನ ಪ್ರೇಕ್ಷಕರನ್ನು ರಂಜಿಸಿದ್ದ ಗಿಲ್ಲಿಯ ಕಾಮಿಡಿ ಕಮಾಲನ್ನು ಹಿರಿತೆರೆಯಲ್ಲಿ ನೋಡಬೇಕೆಂಬ ಬಹುಜನರ ಆಕಾಂಕ್ಷೆ ಫೆಬ್ರವರಿ೨೭ ಅಂದರೆ ನಾಳೆ ಸಾಕಾರಗೊಳ್ಳಲಿದೆ.

ಖ್ಯಾತ ಗೀತರಚನೆಕಾರರಾದ ಕವಿರತ್ನ ನಾಗೇಂದ್ರ ಪ್ರಸಾದ್ ಸಹೋದರ ವಿಜಯಾನಂದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೊಳಪಡುವ ಸೂಪರ್ ಹಿಟ್ ಹಾಸ್ಯದ ಜೊತೆಗೆ ಕ್ಷಣ ಕ್ಷಣವೂ ಕುತೂಹಲ ಕೆರಳಿಸೋ ಗಟ್ಟಿ ಕಥೆಯನ್ನೂ ಒಳಗೊಂಡಿದೆ. ಅಂಥಾದ್ದೊಂದು ಸೂಚನೆ ಟೀಸರ್, ಟ್ರೈಲರ್ ಹಾಗೂ ಚಿತ್ರತಂಡ ಬಿಟ್ಟುಕೊಟ್ಟಿರುವ ಒಂದಷ್ಟು ಸುಳಿವುಗಳ ಮೂಲಕ ಜಾಹೀರಾಗಿದೆ. ಗೀತರಚನೆಕಾರರಾಗಿ ಹೆಸರಾಗಿರುವ ನಾಗೇಂದ್ರ ಪ್ರಸಾದ್ ಸಂಗೀತ ನಿರ್ದೇಶಕನಾಗಿಯೂ ತಮ್ಮನ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಒಂದಿಡೀ ಕಥೆಗೆ ತಿರುವು ಕೊಡುವಂಥಾ ಮಹತ್ವದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ಹಾಸ್ಯ ಕಲಾವಿದರ ದಂಡು, ಅದಕ್ಕೆ ತಕ್ಕುದಾದ ಕಥನ ಈ ಚಿತ್ರದಲ್ಲಿದೆ ಎಂಬುದು ನಿರ್ದೇಶಕರ ಭರವಸೆ.

ಸಾಮಾನ್ಯವಾಗಿ ಒಂದೊಂದು ಜಾನರಿನ ಚಿತ್ರಗಳಿಗೂ ಅದರದ್ದೇ ಆದ ಪ್ರೇಕ್ಷಕ ವರ್ಗವಿರುತ್ತೆ. ಒಂದು ಬಗೆಯ ಸಿನಿಮಾ, ಮತ್ತೊಂದು ಅಭಿರುಚಿಯ ಪ್ರೇಕ್ಷಕರಿಗೆ ಪಥ್ಯವಾಗೋದಿಲ್ಲ. ಅಂಥಾ ಭಿನ್ನ ಅಭಿರುಚಿಯ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸಾರಾಸಗಟಾಗಿ ಸೆಳೆಯುವ ಗುಣ ಹಾಸ್ಯ ಪ್ರಧಾನ ಚಿತ್ರಗಳಿಗಿರುತ್ತದೆ. ಅದರಲ್ಲಿಯೂ ಚೆಂದದ ನಿರೂಪಣೆ, ಹೊಸತನ, ಗಟ್ಟಿ ಕಥೆಗಳ ಸಾಥ್ ಇದ್ದರಂತೂ ಗೆಲುವು ಮತ್ತಷ್ಟು ಸಲೀಸಾಗುತ್ತದೆ. ಸೂಪರ್ ಹಿಟ್ ಕೂಡಾ ಅಂಥಾದ್ದೊಂದು ಮೋಡಿ ಮಾಡಲಿದೆಯಾ? ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿಯ ಜುಗಲ್ಬಂಧಿ ಹಾಸ್ಯ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯಲಿದೆಯಾ? ಇಂಥಾ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.

ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.

keywords: super hit movie, vijayanand, gilli nata

The post Super Hit Movie: ಕೌತುಕದ ಕಡಲಿನಲೊಂದು ನಗೆಯ ಹಾಯಿದೋಣಿ! appeared first on Cini Shodha.

Super Hit Movie: ಸಹೋದರನಿಗಾಗಿ ನಾಗೇಂದ್ರ ಪ್ರಸಾದ್ ಸಾಹಸ!
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಹೋದರನ ಸಿನಿಮಾದ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಗೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಸೂಪರ್ ಹಿಟ್ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದಾರೆ. ತನ್ನ ಆಂತರ್ಯದ ಗಟ್ಟಿತನದ ಸುಳಿವಿನೊಂದಿಗೂ ಈ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಭರ್ಜರಿ ಹಾಸ್ಯದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಸನ್ನಾಹದಲ್ಲಿರುವ ಸೂಪರ್ ಹಿಟ್ ಚಿತ್ರದ ಮೂಲಕ ಅಣ್ಣ ತಮ್ಮನ ಜುಗಲ್ಬಂಧಿಯೊಂದು ಘಟಿಸಿದೆ. ನಿರ್ದೇಶಕ ವಿಜಯಾನಂದ್‌ಗೆ ಪ್ರಸಿದ್ಧಗೀತರಚನೆಕಾರರಾದ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತದ ಮೂಲಕ ಸಾಥ್ ಕೊಟ್ಟಿರೋದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ತಮ್ಮ ನಿರ್ದೇಶನ ಮಾಡಿರುವ ಚಿತ್ರಕ್ಕೆ, ಅಣ್ಣ ಸಂಗೀತ ಹಾಗೂ ಸಾಹಿತ್ಯದ ಮೂಲಕ ಸಾಥ್ ಕೊಟ್ಟ ಅಪರೂಪದ ವಿದ್ಯಮಾನವೊಂದಕ್ಕೆ ಸೂಪರ್ ಹಿಟ್ ಚಿತ್ರ ಸಾಕ್ಷಿಯಾಗಿದೆ.

ಅಣ್ಣ ನಾಗೇಂದ್ರ ಪ್ರಸಾದ್ ಅವರ ನೆರಳಿನಲ್ಲಿಯೇ ಸಿನಿಮಾ ಯಾನ ಆರಂಭಿಸಿದ್ದವರು ವಿಜಯಾನಂದ್. ಇದುವರೆಗೂ ಅವರು ಸಾಕಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಲ್ಲದೇ, ಚಿತ್ರ ಸಾಹಿತಿಯಾಗಿಯೂ ಗಮನ ಸೆಳೆದಿದ್ದಾರೆ. ತಾವೇ ಸ್ವತಃ ಸಾಹಿತ್ಯ ರಚನೆಯ ಛಾತಿ ಹೊಂದಿದ್ದರೂ ತಾನು ನಿರ್ದೇಶನ ಮಾಡೋ ಚಿತ್ರಗಳ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕೆಂಬ ತುಡಿತ ವಿಜಯಾನಂದ್ ಅವರದ್ದು. ಈ ಹಿಂದೆ ಅವರು ನಿರ್ದೇಶನ ಮಾಡಿದ್ದ ಕೃಷ್ಣ ಟಾಕೀಸ್‌ನಲ್ಲಿ ಪ್ರಮೋದ್ ಮರವಂತೆಗೆ ಹಾಡು ಬರೆಯೋ ಅವಕಾಶ ಮಾಡಿ ಕೊಟ್ಟಿದ್ದರು. ಸೂಪರ್ ಹಿಟ್ ಚಿತ್ರದಲ್ಲಿಯೂ ಅದನ್ನೇ ಮುಂದುವರೆಸೋ ಆಲೋಚನೆ ಹೊಂದಿದ್ದ ವಿಜಯಾನಂದ್, ಅಣ್ಣನ ಬಳಿಯೂ ಹಾಡು ಬರೆಸುವ ಇರಾದೆ ಹೊಂದಿದ್ದರು.

Super Hit Movie: ನಿರ್ದೇಶಕ ವಿಜಯಾನಂದ್ ತೆರೆದಿಟ್ಟ ಅಚ್ಚರಿ!

ಸಿನಿಮಾ ವಿಚಾರದಲ್ಲಿ ಎಲ್ಲ ಬಂಧಗಳಾಚೆ ನಿಂತು ಯೋಚಿಸುವ ನಾಗೇಂದ್ರ ಪ್ರಸಾದ್, ತಮ್ಮ ಹೇಳಿದ ಕಥೆ ಕೇಳಿ ಖುಷಿಗೊಂಡಿದ್ದರಂತೆ. ಆ ಬಲದಿಂದಲೇ ಹಾಡು ಬರೆಯೋದರ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಅದರ ಭಾಗವಾಗಿಯೇ ಒಂದು ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ಒಟ್ಟು ಮೂರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ವಿಶೇಷವೆಂದರೆ, ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದರೆ, ಮತ್ತೆರಡು ಹಾಡುಗಳನ್ನು ಹೊಸಬರಾದ ದೊಡ್ಡಬಸವ ಮತ್ತು ರಾಜು ಎಂಬಿ ಬರೆದಿದ್ದಾರೆ. ಈ ಮೂರೂ ಹಾಡುಗಳನ್ನು ಶಮಿರ್ ಮುಡಿಪು, ಸಚಿನ್ ನಗರ್ಥ, ಚುಟುಚುಟು ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ.

ಈ ಮೂರು ಹಾಡುಗಳಲ್ಲಿ ಒಂದು ಹಾಡು ಈಗಾಗಲೇ ಬಿಡುಗಡೆಗೊಂಡಿದೆ. ಅದು ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಪ್ಯಾಥೋ ಸಾಂಗ್ ಸೇರಿದಂತೆ ಇನ್ನೆರಡು ಹಾಡುಗಳು ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿವೆ. ಒಟ್ಟಾರೆಯಾಗಿ, ಈ ಸಿನಿಮಾ ಮೂಲಕ ಅಣ್ಣ ತಮ್ಮನ ಜುಗಲ್ಬಂಧಿ ನಡೆದಿದೆ. ಅಹೋರಾತ್ರಿ ಶ್ರಮವಹಿಸಿರುವ ನಾಗೇಂದ್ರ ಪ್ರಸಾದ್ ಅವರು ತಮ್ಮನ ಚಿತ್ರವೆಂಬ ಸಲುಗೆಯಾಚೆಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಒಂದು ಮಹತ್ವದ ಪಾತ್ರಕ್ಕೂ ಜೀವ ತುಂಬಿದ್ದಾರೆ. ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ ೨೭ರಂದು ರಾಜ್ಯಾದ್ಯಂತ ಇನ್ನೂರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ.

keywords: super hit, dr v nagendraprasad, vijayanand, gilli nata, sandalwood

The post Super Hit Movie: ಸಹೋದರನಿಗಾಗಿ ನಾಗೇಂದ್ರ ಪ್ರಸಾದ್ ಸಾಹಸ! appeared first on Cini Shodha.

Super Hit Movie: ನಿರ್ದೇಶಕ ವಿಜಯಾನಂದ್ ತೆರೆದಿಟ್ಟ ಅಚ್ಚರಿ!
ಕೆಲವೊಂದು ಸಿನಿಮಾಗಳ ಪಾಲಿಗೆ ಕಾಲವೆಂಬೋ ಕಾಲವೇ ಸರಿಕಟ್ಟಾಗಿ ಸಾಥ್ ಕೊಟ್ಟು ಬಿಡೋದಿದೆ. ತಿಂಗಳಿಂದೀಚೆಗೆ ಸುದ್ದಿ ಕೇಂದ್ರದಲ್ಲಿರುವ `ಸೂಪರ್ ಹಿಟ್’ ಚಿತ್ರದ ಪಾಲಿಗೂ ಅಂಥಾದ್ದೇ ಒಂದು ಪೂರಕ ಸನ್ನಿವೇಶ ತಂತಾನೇ ಕೂಡಿಬಂದಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಗಿಲ್ಲಿ ನಟ ನಾಯಕನಾಗಿ ನಟಿಸಿದ್ದಾರೆ. ಬಹುಶಃ ಸದರಿ ಸಿನಿಮಾ ಶುರುವಾತಿನಲ್ಲಿ ಗಿಲ್ಲಿ ಬಿಗ್ ಬಾಸ್‌ಗೆ ಹೋಗೋದರ ಬಗೆಗಾಗಲಿ, ಆತ ಬಿಗ್ ಬಾಸ್ ಶೋ ಗೆದ್ದು ಈ ಪರಿಯಲ್ಲಿ ಜನಪ್ರಿಯತೆ ಗಳಿಸುತ್ತಾನೆಂಬ ಸಣ್ಣ ಕಲ್ಪನೆಯಾಗಲಿ ಚಿತ್ರತಂಡಕ್ಕೆ ಇರಲಿಕ್ಕಿಲ್ಲ. ಸರಿಯಾಗಿ ಗಿಲ್ಲಿ ಬಿಗ್ ಬಾಸ್ ಅಡ್ಡೆಗೆ ತೆರಳಿ ಹವಾ ಸೃಷ್ಟಿಸುವ ಹೊತ್ತಿಗೆಲ್ಲ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯ ಮುಗಿಸಿಕೊಂಡಿದ್ದ ಸೂಪರ್ ಹಿಟ್ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಅಚ್ಚುಕಟ್ಟಾದೊಂದು ಪತ್ರಿಕಾಗೋಷ್ಠಿಯಲ್ಲಿ, ಅರ್ಥವತ್ತಾದ ಟೀಸರ್ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಣೆ ಮಾಡಿದೆ!

ಅದರನ್ವಯ ಹೇಳೋದಾದರೆ, ಇದೇ ಫೆಬ್ರವರಿ ೨೭ರಂದು ಸೂಪರ್ ಹಿಟ್ ಚಿತ್ರ ಕರ್ನಾಟಕದಾದ್ಯಂತ ಇನ್ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ. ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದ ಈ ವೇದಿಕೆಯಲ್ಲಿ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ. ಉಮೇಶ್, ಸಾಧು ಕೋಕಿಲಾ, ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಸೇರಿಕದಂತೆ ಚಿತ್ರತಂಡ ಹಾಜರಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಕ, ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್, ಸಿನಿಮಾ ಕುರಿತಾದ ಒಂದಷ್ಟು ಅಚ್ಚರಿಗಳನ್ನು ತೆರೆದಿಟ್ಟಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ಹೂವೆತ್ತಿಟ್ಟಷ್ಟೇ ಸರಾಗವಾಗಿ ಕೆಲಸ ಕಾರ್ಯ ಮುಗಿಸಿಕೊಂಡ ಪರಿಯನ್ನು ವಿವರಿಸಿದ ಅವರು, ಈ ಸಿನಿಮಾ ಜನಮನ ಗೆಲ್ಲವ ಗಾಢ ಭರವಸೆ ವ್ಯಕ್ತಪಡಿಸಿದ್ದಾರೆ. ನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ನೀಡಿ ಹೆಸರಿಗೆ ತಕ್ಕಂತೆ ಸೂಪರ್ ಹಿಟ್ಟಾಗಲು ಪ್ರೇಕ್ಷಕರೆಲ್ಲ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

ಇದೇ ವೇದಿಕೆಯಲ್ಲಿ ಒಂದು ಸಂಭ್ರಮದ ಸಂಗತಿಯನ್ನು ವಿಜಯಾನಂದ್ ಹಂಚಿಕೊಂಡಿದ್ದಾರೆ. ಹೊಸಾ ಸಂಸ್ಥೆಯೊಂದು ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎಂಬುದು ಅದರ ಸಾರಾಂಶ. ಈ ಮೂಲಕ ಒಟ್ಟಾರೆ ಸಿನಿಮಾದೊಳಗಿನ ಕಸುವಿನ ಬೆಗೆಗೊಂದು ಸ್ಪಷ್ಟ ಚಿತ್ರಣ ಪ್ರೇಕ್ಷಕರತ್ತ ದಾಟಿಕೊಂಡಂತಾಗಿದೆ. ನಂತರ ಸಾಧು ಕೋಕಿಲಾ ಮಾತನಾಡುತ್ತಾ, ಇಂಥಾ ವೇದಿಕೆಗಳಲ್ಲಿನ ಮಾತುಗಖಳಾಚೆಗೆ ಹೊರಜಗತ್ತಿನಲ್ಲಿ ಸಿನಿಮಾವೊಂದನ್ನು ಜನರಿಗೆ ಹತ್ತಿರಾಗಿಸುವ ಪಟ್ಟುಗಳು ಅದೆಷ್ಟು ಅನಿವಾರ್ಯ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಚಿತ್ರತಂಡಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಜೊತೆಗೆ ಗಿಲ್ಲಿಗೂ ಒಂದಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ.

ತನ್ನ ತಮ್ಮನ ಚಿತ್ರಕ್ಕೆ ಆರಂಭದಿಂದಲೂ ಸಾಥ್ ಕೊಡುತ್ತಾ ಬಂದಿರುವ ಡಾ. ವಿ. ನಾಗೇಂದ್ರ ಪ್ರಸಾದ್ ಸೂಪರ್ ಹಿಟ್ ಚಿತ್ರದ ಸಂಗೀತ ಹಾಗೂ ಸಾಹಿತ್ಯದ ಜೊತೆಗೆ ಒಂದು ಮಹತ್ವದ ಪಾತ್ರಕ್ಕೂ ಜೀವ ತುಂಬಿದ್ದಾರೆ. ಒಟ್ಟಾರೆ ಸಿನಿಮಾ ಮೂಡಿ ಬಂದಿರೋ ರೀತಿಯನ್ನು ಇತ್ತೀಚೆಗಷ್ಟೇ ನೋಡಿರುವ ಅವರು, ಈ ಸಿನಿಮಾ ಜನಮನ ಗೆಲ್ಲುತ್ತದೆಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಇದೇ ಹೊತ್ತಿನಲ್ಲಿ ಗಿಲ್ಲಿಗೂ ಒಂದಷ್ಟು ಬುದ್ಧಿಮಾತುಗಳನ್ನು ಹೇಳಿದ್ದಾರೆ. ಏನೇನೂ ಅಲ್ಲದ ಘಳಿಗೆಯಲ್ಲಿ ಕೆಲಸ ಕೊಟ್ಟವರನ್ನು ಗೌರವಿಸುತ್ತಲೇ, ಅಂಥಾ ಸಿನಿಮಾಗಳಿಗೆ ತನ್ನದೇ ಮಿತಿಯಲ್ಲಿ ಪ್ರಚಾರ ನೀಡುವಂತೆ ಗಿಲ್ಲಿಗೆ ಮನವರಿಕೆ ಮಾಡಿ ಕೊಟ್ಟರು. ಇನ್ನುಳಿದಂತೆ ಪ್ರಥಮ ಹೆಜ್ಜೆಯಲ್ಲಿಯೇ ಗೆಲುವಿನ ಸೂಚನೆ ಸಿಗುತ್ತಿರುವ ಖುಷಿಯಲ್ಲಿರುವ ನಿರ್ಮಾಪಕ ಜಿ. ಉಮೇಶ್ ತಮ್ಮ ಸಿನಿಮಾ ಕನಸು, ಈ ಚಿತ್ರ ನಿರ್ಮಾಣದ ಅನುಭವ, ಆತ್ಮತೃಪ್ತಿಯ ಬಗ್ಗೆ ಮಾತಾಡುತ್ತಲೇ ಸಿನಿಮಾ ನೋಡಿ ಹರಸುವಂತೆ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ ೨೭ರಂದು ತೆರೆಗಾಣಲಿದೆ. ಈ ಮೂಲಕ ನಗೆಹಬ್ಬವೊಂದು ಚಾಲೂ ಆಗಲಿದೆ.

keyword: gilli nata, biggboss12 winner, vijayananda, sandalwood, kfi

The post Super Hit Movie: ನಿರ್ದೇಶಕ ವಿಜಯಾನಂದ್ ತೆರೆದಿಟ್ಟ ಅಚ್ಚರಿ! appeared first on Cini Shodha.

Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ!
ಕಿರುಚಿತ್ರಗಳು, ಕಾಮಿಡಿ ಶೋಗಳ ಮೂಲಕ ಮನೆಮಾತಾಗಿದ್ದ ಗಿಲ್ಲಿ ನಟ ಇದೀಗ ಬಿಗ್‌ಬಾಸ್ ಸ್ಪರ್ಧಿಯಾಗಿ ಸಂಚಲನ ಸೃಷ್ಟಿಸಿದ್ದಾನೆ. ತನ್ನ ಸೆನ್ಸ್ ಆಫ್ ಹ್ಯೂಮರ್, ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಗಿಲ್ಲಿಯೀಗ `ಸೂಪರ್ ಹಿಟ್’ ಎಂಬ ಚಿತ್ರದ ಮೂಲಕ ಸದ್ದಿಲ್ಲದೆ ನಾಯಕನಾಗಿದ್ದಾನೆ. ಖ್ಯಾತ ಗೀತರಚನೆಗಾರ ವಿ. ನಾಗೇಂದ್ರ ಪ್ರಸಾದ್ ಸಹೋದರ ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾಗಿ ನಡೆದಿರುವ ಪತ್ರಿಕಾಗೋಷ್ಠಿಯ ಮೂಲಕ ಸೂಪರ್ ಹಿಟ್ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಹೀಗೆ ಬಿಡುಗಡೆಗೊಂಡಿರುವ ಸದರಿ ಟೀಸರ್‌ನಲ್ಲಿರೋ ಭರ್ಜರಿ ಕಾಮಿಡಿ, ಗಟ್ಟಿ ಕಥನದ ಸುಳಿವು ಕಂಡವರೆಲ್ಲ, ಸು ಫ್ರಂ ಸೋ ನಂತಗರದಲ್ಲಿ ಮತ್ತೊಂದು ಕಾಮಿಡಿ ಗಾರುಡಿ ನಡೆಯೋದರ ಮುನ್ಸೂಚನೆಯನ್ನ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ, ಯಾವುದೇ ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರ ಮನಗೆದ್ದರೆ ಸೂಪರ್ ಹಿಟ್ ಆಗುತ್ತೆ. ಆದರೆ, ಈ ಚಿತ್ರದ ಶೀರ್ಷಿಕೆಯೇ ಸೂಪರ್ ಹಿಟ್. ಅದಕ್ಕೆ ರನ್ನಿಂಗ್ ಸಕ್ಸಸ್‌ಫುಲೀ ಎಂಬ ಟ್ಯಾಗ್‌ಲೈನನ್ನೂ ಇಡಲಾಗಿದೆ. ಈ ಮೂಲಕ ಶೀರ್ಷಿಕೆಯ ಮೂಲಕವೇ ಗಮನ ಸೆಳೆದ ಸಿನಿಮಾಗಳ ಸಾಲಿಗೂ ಸೇರ್ಪಡೆಗೊಂಡಿದೆ. ಹೆಸರಿನ ಬಗ್ಗೆಯೇ ಕುತೂಹಲ ಮೂಡಿಕೊಂಡಿರೋದರಿಂದಾಗಿ, ಅದರ ಹುಟ್ಟಿನ ಹಿಂದಿರೋ ಅಚ್ಚರಿಯನ್ನು ನಿರ್ದೇಶಕ ವಿಜಯಾನಂದ ತೆರೆದಿಟ್ಟಿದ್ದಾರೆ!

ಈ ಚಿತ್ರವನ್ನು ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರವಿದು. ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಬೇಕೆಂಬ ತುಡಿತ ಹೊಂದಿದ್ದ ಉಮೇಶ್, ಈ ಹಿಂದೆ ಸಿನಿಮಾವೊಂದಕ್ಕೆ ಕಾಸು ಹೂಡಿಕೆ ನಡೆಸಿ ನಿರಾಸೆಗೊಂಡಿದ್ದರಂತೆ. ಅಷ್ಟಾದರೂ ಹಿಟ್ ಸಿನಿಮಾ ನಿರ್ಮಾಣದ ಕನಸಿಟ್ಟುಕೊಂಡಿದ್ದ ಉಮೇಶ್ ಅವರನ್ನು ಗಮನಿಸಿದ್ದ ನಿರ್ದೇಶಕರು, ಅದನ್ನೇ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ. ಪಕ್ಕಾ ಕಮರ್ಶಿಯಲ್ ಪಥದಲ್ಲಿ, ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾವನ್ನು ರೂಪಿಸಲಾಗಿದೆ. ಪ್ರತೀ ಹತ್ತು ನಿಮಿಷಗಳಿಗೊಮ್ಮೆ ಪ್ರೇಕ್ಷಕರನ್ನು ರೋಮಾಂಚನಕ್ಕೀಡು ಮಾಡುವ ಟ್ವಿಸ್ಟುಗಳು, ಹೊಸತನದೊಂದಿಗೆ ದೃಷ್ಯ ಕಟ್ಟಲಾಗಿದೆ. ಕನ್ನಡದ ಮಟ್ಟಿಗೆ ಪ್ರಥಮವಾಗಿ ಥ್ರಿಲ್ಲರ್ ಅಂಶವನ್ನು ಕಾಮಿಡಿಯೊಂದಿಗೆ ಬೆರೆಸುವ ಭಿನ್ನ ಪ್ರಯತ್ನ ನಡೆದಿದೆ ಅನ್ನೋದು ನಿರ್ದೇಶಕರ ಮಾತು.

ಈಗಾಗಲೇ ಸೂಪರ್ ಹಿಟ್‌ ಚಿತ್ರದ ಎಲ್ಲ ಕೆಲಸ ಕಾರ್ಯಗಳೂ ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ದಿನಾಂಕ ಘೋಷಣೆ ಮಾಡುವ ತಯಾರಿ ನಡೆಯುತ್ತಿದೆ. ಅಂದಹಾಗೆ, ಸೋಶಿಯಲ್ ಮೀಡಿಯಾ ಮೂಲಕ, ಕಾಮಿಡಿ ಝಲಕ್ಕುಗಳೊಂದಿಗೆ ಪ್ರಸಿದ್ಧಿ ಪಡೆದಿರುವ ಗೌರವ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಇಲ್ಲಿ ನಾಯಕರಾಗಿ ನಟಿಸಿದ್ದಾರೆ. ಹಾಸ್ಯದ ಪ್ರಾಕಾರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಇಬ್ಬರು ನಟರ ಆಯ್ಕೆ ಆ ಪಾತ್ರಗಳಿಗೆ ಮಾತ್ರವಲ್ಲದೇ ಒಂದಿಡೀ ಸಿನಿಮಾಗೂ ಪ್ಲಸ್ ಆಗಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ. ಸು ಫ್ರಂ ಸೋ ಚಿತ್ರಕ್ಕೆ ಸಿಕ್ಕಿರೋ ಭಾರೀ ಗೆಲುವು ಕೂಡಾ ಚಿತ್ರತಂಡಕ್ಕೆ ಭರವಸೆ ತುಂಬಿದೆ. ಯಾಕೆಂದರೆ, ಭಿನ್ನ ಬಗೆಯ ಕಥನ, ಹಾಸ್ಯವಿರೋ ಈ ಚಿತ್ರಕ್ಕೂ ಪ್ರೇಕ್ಷಕರು ಅಂಥಾದ್ದೇ ಬೆಂಬಲ ಕೊಡುತ್ತಾರೆಂಬ ನಂಬಿಕೆ ಚಿತ್ರತಂಡಕ್ಕಿದೆ.

ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿ ನಾಯಕರಾಗಿ ನಟಿಸಿದ್ದರೆ, ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ವಿರುವ ಈ ಚಿತ್ರ, ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ.

The post Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ! appeared first on Cini Shodha.