ulaganayagan – Cini Shodha

Indian 3 movie Cancelled: ನಿರ್ಮಾಪಕರ ಕಾಸಲ್ಲಿ ಶಂಕರ್-ಕಮಲ್ ಜೊತೆಯಾಟ!
ಭಾರತೀಯ ಚಿತ್ರರಂಗದ ಮೇರು ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಕಮಲ್ ಹಾಸನ್. ಸದಾ ಭಿನ್ನವಾದ ಪಾತ್ರಗಳನ್ನೇ ಅರಸುತ್ತಾ ಬಂದಿರುವ ಕಮಲ್, ಇಳಿವಯಸ್ಸಿನಲ್ಲಿಯೂ ಅದೇ ಹಾದಿಯಲ್ಲಿ ಮುಂದುವರೆದಿದ್ದಾರೆ. ಒಂದು ಪ್ರಯೋಗ ನೀರಸ ಪ್ರತಿಕ್ರಿಯೆ ಕಂಡರೂ, ಭಾರೀ ನಿರೀಕ್ಷೆ ತಲೆಕೆಳಗಾದರೂ ಕೂಡಾ ಎಲ್ಲವನ್ನೂ ಸಮಚಿತ್ತದಿಂದ ಸಂಬಾಳಿಸಿಕೊಂಡು ಬಂದಿರೋ ಕಮಲ್, ಇತ್ತೀಚಿನ ವರ್ಷಗಳಲಲಿ ಅದೇಕೋ ಸಿನಿಮಾ ಆಯ್ಕೆ ವಿಚಾರದಲ್ಲಿ ಎಡವುತ್ತಿದ್ದಾರೆ. ಹಾಗಂತ ಖುದ್ದು ಅವರನ್ನು ಆರಾಧಿಸುವ ಅಭಿಮಾನಿಗಳೇ ಅಸಹನೆಗೀಡಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ, ಕಮಲ್ ಯಾಕೆ ಇಂಡಿಯನ್3ನಂಥಾ ಚಿತ್ರವನ್ನು ಒಪ್ಪಿಕೊಂಡರೆಂಬ ಯಕ್ಷಪ್ರಶ್ನೆಯೊಂದು ಸಿನಿಮಾಸಕ್ತರನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ!

ಆದರೆ, ಕಮಲ್ ಹಾಸನ್ ಮಾತ್ರ ತಮ್ಮ ಬಗ್ಗೆ ಹಬ್ಬಿಕೊಂಡಿರುವ ನಕಾರಾತ್ಮಕ ಅಂಶಗಳತ್ತ ಗಮನ ಹರಿಸುವ ಆಸಾಮಿಯಲ್ಲ. ಬಹುಶಃ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಮನದಿಂಗಿತವನ್ನ ಅರ್ಥ ಮಾಡಿಕೊಂಡು ಮುಂದಡಿ ಇಡುವ ಸೂಕ್ಷ್ಮತೆಯನ್ನು ಕಮಲ್ ಮರೆತಿದ್ದಾರೆ. ಅಂಥಾ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ ಪರಮ ತೋಪು ಚಿತ್ರವಾದ ಇಂಡಿಯನ್೩ಯ ಸೀಕ್ವೆಲ್‌ಗೆ ತಯಾರಾಗಲು ಸಾಧ್ಯವಿತ್ತಾ? ಇಂಡಿಯನ್೨ ಚಿತ್ರ ಅತ್ಯಂತ ಹೀನಾಯ ಸೋಲು ಕಂಡಿತ್ತು. ನಿರ್ಮಾಪಕರಂತೂ ಕಮಲ್ ಮತ್ತು ಶಂಕರ್‌ನನ್ನು ನಂಬಿ ಕೋಟಿ ಕೋಟಿ ಸುರಿದು ಕೈ ಸುಟ್ಟುಕೊಂಡಿದ್ದರು. ಸಾಮಾನ್ಯವಾಗಿ ಹೀಗೆ ತೋಪೆದ್ದ ಚಿತ್ರವೊಂದರ ಸೀಕ್ವೆಲ್ ಮಾಡೋ ದಡ್ಡತನವನ್ನು ಯಾರೂ ಮಾಡೋದಿಲ್ಲ. ಆದರೆ, ಕಳೆದುಕೊಂಡಲ್ಲಿಯೇ ಮರಳಿ ಪಡೆಯಬೇಕೆಂಬ ಜಿದ್ದಿಗೆ ಬಿದ್ದಂತಿದ್ದ ಕಮಲ್ ಮತ್ತು ಶಂಕರ್ ಇಂಡಿಯನ್೩ಗೆ ಅಣಿಗೊಂಡಿದ್ದರು.

ಈ ಪ್ರಾಜೆಕ್ಟು ಬೇಡವೆಂದು ಸಾರಿ ಹೇಳಿದರೂ ಶಂಕರ್ ಆಗಲಿ, ಕಮಲ್ ಆಗಲಿ ಪಟ್ಟು ಬಿಟ್ಟಿರಲಿಲ್ಲ. ಕಡೆಗೂ ನಿಮಾಪಕರು ಕಮಲ್ ಮೇಲಿನ ಗೌರವದಿಂದ ಕೊಂಚ ಮೆತ್ತಗಾಗಿದ್ದರು. ಅದನ್ನೇ ಬಳಸಿಕೊಂಡ ಶಂಕರ್ ಮತ್ತು ಕಮಲ್ ಸೇರಿ ಟ್ರೈಲರ್ ಒಂದನ್ನು ಸಿದ್ಧಪಡಿಸಿದ್ದರು. ಇದು ಇಂಡಿಯನ್೨ಗೆ ಹೋಲಿಸಿದರೆ ಕೊಂಚ ಪರವಾಗಿಲ್ಲವೆನಿಸಿತ್ತು. ಆದರೆ, ಓಟಿಟಿಗೆ ಮಾತ್ರವೇ ಮಾಡೋದಾದರೆ ಮಾತ್ರ ಕಾಸು ಹೂಡೋದಾಗಿ ನಿಮಾಪಕರು ಹೇಳಿದ್ದರಂತೆ. ಶಂಕರ್‌ಗೆ ಅದು ಸುತಾರಾಂ ಇಷ್ಟವಿರಲಿಲ್ಲ. ಈ ಚಿತ್ರವನ್ನು ತೆರೆಗಾಣಿಸಿ ಕಾಸು ಮಾಡೋ ವಿಶ್ವಾಸ ನಿರ್ಮಾಪಕರಿಗೂ ಇರಲಿಲ್ಲ. ಈ ಕಾರಣದಿಂದಲೇ ಕಡ್ಡಿಮುರಿದಂತೆ ಓಟಿಟಿ ಬಿಟ್ಟು ಬೇರ್‍ಯಾವ ಸಾಹಸಕ್ಕೂ ಕೈ ಹಾಕಲು ಸಾಧ್ಯವಿಲ್ಲವೆಂದು ನಿರ್ಮಾಪಕರು ಹೇಳಿದ್ದಾರೆ. ಇದರಿಂದ ನಿರಾಸೆಗೀಡಾಗಿರೋ ಶಂಕರ್ ಮುಂದಿನ ಪ್ರಾಜೆಕ್ಟಿಗಾಗಿ ತಡಕಾಡಲಾರಂಭಿಸಿದ್ದಾರೆ!

keywords: kamal hassan, shankar, indian3, kollywood

The post Indian 3 movie Cancelled: ನಿರ್ಮಾಪಕರ ಕಾಸಲ್ಲಿ ಶಂಕರ್-ಕಮಲ್ ಜೊತೆಯಾಟ! appeared first on Cini Shodha.

rajanikanth-kamal haasan new movie: ಲೋಕೇಶ್ ಕನಕರಾಜ್‌ಗೆ ಮತ್ತೊಂದು ಅವಕಾಶ!
ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿದೆ. ಆದರೆ, ಪಕ್ಕಾ ರಜನೀ ಶೈಲಿಯಲ್ಲಿ ಕೂಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಸೃಷ್ಟಿಸುತ್ತಿರೋದು ಸುಳ್ಳಲ್ಲ. ಹೈಪಿಗೆ ಒಂದಷ್ಟು ಹತ್ತಿರಾಗಿ ಮೂಡಿ ಬಂದಿದ್ದರೂ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಅವಕಾಶದಿಂದ ಕೂಲಿ ವಂಚಿತವಾದಂತಿದೆ. ಇದೇ ಹೊತ್ತಿನಲ್ಲಿ ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ದೊಡ್ಡ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇದು ನಿಜಕ್ಕೂ ವಿಶೇಷವಾದ ಸಿನಿಮಾ. ಯಾಕೆಂದರೆ, ಇಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಸಲಿದ್ದಾರೆ. ಇದೊಂದು ರೀತಿಯಲ್ಲಿ ಅಪೂರ್ವ ಸಂಗಮ ಅನ್ನಲಡ್ಡಿಯಿಲ್ಲ. ಭರ್ತಿ ನಾಲಕ್ಕು ದಶಕಗಳ ನಂತರ ಈ ಇಬ್ಬರು ನಟರು ಒಂದೇವ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆಂದರೆ, ಅದು ಸಿನಿಮಾ ಪ್ರೇಮಿಗಳ ಪಾಲಿಗೆ ಪಕ್ಕಾ ಥ್ರಿಲ್ಲಿಂಗ್ ವಿಚಾರ. ೧೯೭೯ರಲ್ಲಿ ಅಲ್ಲಾವುದ್ದೀನಮ್ ಅಲ್ಬೂತ ವಿಲಕ್ಕುಮ್ ಎಂಬ ಸಿನಿಮಾದಲ್ಲಿ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಿದ್ದರು. ಅದೇ ಕೊನೆ; ಇಂದಿನವರೆಗೂ ಈ ಜೋಡಿ ತಾರೆಯರನ್ನು ಒಟ್ಟಾಗಿ ನೋಡುವ ಭಾಗ್ಯ ಕೂಡಿ ಬಂದಿರಲಿಲ್ಲ. ಲೋಕೇಶ್ ಕನಕರಾಜ್ ಅದನ್ನು ಸಾಧ್ಯವಾಗಿಸುವ ಹೊಸ್ತಿಲಿನಲ್ಲಿದ್ದಾರೆ.

ಇದು ಗ್ಯಾಂಗ್‌ಸ್ಟರ್‌ಗಳ ಕಥೆಯಾಧಾರಿತ ಸಿನಿಮಾ. ಲೋಕೇಶ್ ಕನಕರಾಜ್ ಕೊರೋನಾ ಕಾಲದಲ್ಲಿಯೇ ಈ ಕಥೆಯನ್ನು ಸಿದ್ಧಗೊಳಿಸಿದ್ದರಂತೆ. ಆ ಕಥೆ ಸಿದ್ಧಗೊಳ್ಳುವ ಹಾದಿಯಲ್ಲಿಯೇ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಬೇಕೆಂಬುದು ಲೋಕಿ ಕನಸಾಗಿತ್ತು. ಕೂಲಿ ಸಿನಿಮಾ ಸಂದರ್ಭದಲ್ಲಿಯೇ ರಜನಿ ಬಳಿ ಲೋಕೇಶ್ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದರಂತೆ. ಆ ಘಳಿಗೆಯಲ್ಲಿಯೇ ಮೊದಲು ಕೂಲಿ ಮುಗಿಸಿಕೊಂಡು ಆ ನಂತರ ಅದರ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಲೈವಾ ಹೇಳಿದ್ದರು. ಇದೀಗ ಮತ್ತೆ ರಜನಿ ಚಿತ್ರ ಆ ಪ್ರಾಜೆಕ್ಟಿನತ್ತ ಹೊರಳಿಕೊಂಡಿದೆ. ಎಲ್ಲವೂ ಈಗ ಮಾತುಕತೆಯ ಹಂತದಲ್ಲಿದೆ. ಅದಾದೇಟಿಗೆ ಅಧಿಕೃತ ಮಾಹಿತಿಗಳು ಜಾಹೀರಾಗಲಿವೆ.

The post rajanikanth-kamal haasan new movie: ಲೋಕೇಶ್ ಕನಕರಾಜ್‌ಗೆ ಮತ್ತೊಂದು ಅವಕಾಶ! appeared first on Cini Shodha.