trishakrishnan – Cini Shodha

Thalapthy Vijay Political Updates: ದಳಪತಿಯ ಸಖಿ ತ್ರಿಷಾಗೆ ಲಕ್ಕು ಕುದುರಿದ ಲಕ್ಷಣ!
ತಮಿಳುನಾಡಿನ ರಾಜಕೀಯ ಅಖಾಡವೀಗ ಚುನಾವಣಾ ಸಂದರ್ಭಕ್ಕಿಂತಲೂ ತುಸು ಹೆಚ್ಚೇ ರಂಗೇರಿಕೊಂಡಿದೆ. ದಶಕಗಟ್ಟಲೆ ದ್ರಾವಿಡ ವಿಚಾರಧಾರೆಯ ರಾಜಕಾರಣದಿಂದಲೇ ತಮಿಳುನಾಡು ಸಾಗಿ ಬಂದಿತ್ತು. ದಳಪತಿಯ ಟಿವಿಕೆ ಪಕ್ಷದ ಮೂಲಕ ಮೊದಲ ಬಾರಿ ಭಿನ್ನ ರಾಜಕೀಯ ಪರ್ವವೊಂದು ತಮಿಳುನಾಡಿನಲ್ಲಿ ಕಣ್ತೆರೆದಿದೆ. ಇದರ ಹಿಂದಿರೋ ಸಾಮಾಜಿಕ ಒಳನೋಟಗಳು, ಒಳ ಕಿಸುರುಗಳು ಅದೇನೇ ಇದ್ದರೂ ಕೂಡಾ ದಳಪತಿ ವಿಜಯ್‌ನದ್ದು ನಿಜಕ್ಕೂ ರೋಮಾಂಚಕ ಗೆಲುವು. ಖುದ್ದು ವಿಜಯ್ ಚುನಾವಣಾ ಸಂದರ್ಭದಲ್ಲಿ ಕೊಟ್ಟಿರುವ ಭರವಸೆಗಳೇ ಮುಂದೆ ಮಹಾ ಸವಾಲುಗಳಾಗಿ ಎದುರಾಗೋದು ಗ್ಯಾರಂಟಿಯಾದರೂ ಕೂಡಾ, ಆಡಳಿತಾತ್ಮಕವಾಗಿ ಜನಪರವಾಗಿ ಕ್ರಾಂತಿ ಮಾಡುವ ಅವಕಾಶವಂತೂ ಇದ್ದೇ ಇದೆ. ಇದೇ ಹೊತ್ತಿನಲ್ಲಿ ತಮಿಳುನಾಡಿನ ಸಿನಿಮಾಸಕ್ತರ ನಡುವೆ ಮತ್ತೊಂದು ಬಗೆಯ ಚರ್ಚೆಯೂ ವ್ಯಾಪಕವಾಗಿ ನಡೆಯಲಿದೆ. ಅದಕ್ಕೆ ಕಾರಣವಾಗಿರೋದು ವಿಜಯ್ ಸಖಿ ತ್ರಿಷಾ ಕೃಷ್ಣನ್!

ಈ ಚುನಾವಣೆಯ ಹೊತ್ತಿನಲ್ಲಿಯೇ ತ್ರಿಷಾ ಕೃಷ್ಣನ್ ಮತ್ತು ದಳಪತಿ ವಿಜಯ್ ಅಫೇರಿನ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗಿದ್ದವು. ದಳಪತಿಯ ದಾಂಪತ್ಯ ಜೀವನ ವಿಚ್ಛೇದನದ ಮೂಲಕ ಛಿದ್ರವಾಗುತ್ತಲೇ, ಗಂಡ ಹೆಂಡಿರ ನಡುವೆ ವಿರಸ ಮೂಡಲು ತ್ರೀಷಾಳೇ ಮೂಲ ಕಾರಣವೆಂಬ ಆರೋಪಗಳೂ ವ್ಯಾಪಕವಾಗಿ ಕೇಳಿ ಬಂದಿದ್ದವು. ಅಷ್ಟಕ್ಕೂ ವಿಜಯ್ ಮತ್ತು ತ್ರಿಷಾ ಬಂಧದ ಬಗ್ಗೆ ರೂಮರುಗಳು ಹಬ್ಬಿಕೊಳ್ಳುತ್ತಿರೋದು ಇದೇ ಮೊದಲೇನಲ್ಲ. ಸಿನಿಮಾ ರಂಗದ ಪಡಸಾಲೆಯಲ್ಲಿ ಆ ಬಗ್ಗೆ ಹಬ್ಬಿಕೊಂಡ ರಂಗು ರಂಗಿನ ಕಥನಗಳೇ ಸಿನಿಮಾವೊಂದಕ್ಕೆ ಸರಕಾಗುವಷ್ಟಿವೆ. ಆದರೀಗ ವಿಚ್ಚೇದನದ ನಂತರ ಅವರಿಬ್ಬರ ಅಫೇರು ಹಂತ ಹಂತವಾಗಿ ಖುಲ್ಲಂಖುಲ್ಲ ಘಟ್ಟ ತಲುಪಿಕೊಳ್ಳುತ್ತಿದೆ.

ಇತ್ತೀಚೆಗಷ್ಟೇ ಅದೆಷ್ಟೋ ವರ್ಷಗಳ ಹಿಂದಿನ ತ್ರಿಷಾಳ ವೀಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಆಕೆ ಇನ್ನು ಹತ್ತು ವರ್ಷದ ನಂತರ ನಾನು ಸಿಎಂ ಆಗೇ ಆಗ್ತೀನಿ ಎಂಬರ್ಥದಲ್ಲಿ ಮಾತಾಡಿದ್ದಳು. ಆಗ ತಮಾಶೆಯಾಗಿ ಹೇಳಿದ್ದ ಆ ಮಾತುಗಳೀಗ ವಾಸ್ತವದ ಹೊಸ್ತಿಲಲ್ಲಿಯೇ ನಿಂತಂತೆ ಭಾಸವಾಗುತ್ತಿದೆ. ಇದೀಗ ವಿಜಯ್ ಅಂತಃಪುರದಲ್ಲಿ ತ್ರಿಷಾಳ ಕನಸನ್ನು ಕನಸು ಮಾಡುವ ಪಲ್ಲಟಗಳು ತಣ್ಣಗೆ ನಡೆಯುತ್ತಿವೆ. ಈ ಬಾರಿ ವಿಜಯ್ ಎರಡೆರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅದರಲ್ಲೊಂದುಇ ಕ್ಷೇತ್ರದಿಂದ ತ್ರಿಷಾಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಇರಾದೆ ವಿಜಯ್‌ಗೆ ಇದ್ದಂತಿದೆ.

ಇದು ತ್ರಿಷಾಳಿಗೆ ಪಟ್ಟ ಕಟ್ಟುವ ಮೊದಲ ಹೆಜ್ಜೆ. ಸದ್ಯ ಮಟ್ಟಿಗೆ ಬಾಹ್ಯ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸೋದರತ್ತ ಚಿತ್ತ ನೆಟ್ಟಿರುವ ವಿಜಯ್, ಆ ನಂತರದಲ್ಲಿ ತ್ರಿಷಾಳನ್ನು ಶಾಶಕಿಯಾಗಿಸಿ, ಉಪ ಮುಖ್ಯಮಂತ್ರಿ ಹುದ್ದೆ ಕೊಡುವ ಆಲೋಚನೆಯು ಇದ್ದಂತಿದೆ. ಇದರಿಮದ ಸಾಮಾಜಿಕವಾಗಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿದ ಹೆಗ್ಗಳಿಕೆಯೂ ವಿಜಯ್‌ಗೆ ದಕ್ಕುತ್ತದೆ. ಮನದನ್ನೆಯನ್ನು ಬಾಜಿನಲ್ಲಿ ಕೂರಿಸಿಕೊಂಡು ರಾಜ್ಯ ಆಳುವ ಆತ್ಮತೃಪ್ತಿಯೂ ಸಿಗುತ್ತದೆ. ಒಂದು ಬರಿ ತ್ರಿಷಾ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಡಿಸಿಎಂ ಆದರೆ, ಥೇಟು ಜಯಲಲಿತಾರಂತೆ ಸಿಎಂ ಆಗೋ ಹಾದಿ ಸುಗಮವಾದಂತೆಯೇ. ವಿಜಯ್ ಏನಾದರೂ ಈ ಬಾರಿ ಜನರ ನಿರೀಕ್ಷೆಗೆ ತಕ್ಕುದಾಗಿ ಆಡಳಿತ ನಡೆಸಿದರೆ, ಮುಂದಿನ ಬಾರಿ ಟಿವಿಕೆ ಬಹುಮತ ಪಡೆದುಕೊಂಡರೆ, ಆಗ ತಮಿಳುನಾಡಿಗೆ ಜ್ಯೂನಿಯರ್ ಅಮ್ಮನ ದರ್ಶನವಾಗೋದು ಬಹುತೇಕ ಖಚಿತ!

keywords: trisha krishnan, thalapathy vijay, tamilnadu politics

The post Thalapthy Vijay Political Updates: ದಳಪತಿಯ ಸಖಿ ತ್ರಿಷಾಗೆ ಲಕ್ಕು ಕುದುರಿದ ಲಕ್ಷಣ! appeared first on Cini Shodha.

kamal haasan thug life: ಸಿಂಬು ಸ್ಟಾರ್‌ಡಮ್ ನೆಚ್ಚಿಕೊಂಡ ಮಣಿರತ್ನಂ ಕೈಲೀಗ ಖಾಲಿ ಚೊಂಬು!
ಈ ಸಿನಿಮಾ ಮಂದಿ ತೋಪು ಪ್ರಾಡಕ್ಟನ್ನು ಬಚಾವು ಮಾಡಲು ಯಾವ್ಯಾವ ಥರದ ನೌಟಂಕಿ ನಾಟಕವಾಡಲೂ ಹಿಂದೆಮುಂದೆ ನೋಡುವವರಲ್ಲ. ಅಗತ್ಯ ಬಿದ್ದರೆ ಸ್ಟಾರ್ ನಟರೂ ಕೂಡಾ ಮೂರೂ ಬಿಟ್ಟವರಂತೆ ಇಂಥಾ ಬೃಹನ್ನಾಟಕದ ಪಾತ್ರಧಾರಿಗಳಾಗಿ ಬಿಡುತ್ತಾರೆ. ಈ ಮಾತಿಗೆ ಸದ್ಯದ ವಾತಾವರಣದಲ್ಲಿ ತಾಜಾ ಉದಾಹರಣೆಯಂತಿರುವಾತ ಉಳಗನಾಯಗನ್ ಕಮಲ್ ಹಾಸನ್. ಈ ಕ್ಷಣದ ತಕರಾರುಗಳೇನೇ ಇರಬಹುದು. ಅದರಾಚೆಗೆ ಕಮಲ್ ಓರ್ವ ಅದ್ಭುತ ನಟ. ಆದರೆ, ಸಿನಿಮಾ ಆಯ್ಕೆಯ ವಿಚಾರದಲ್ಲಿ ಅಷ್ಟೇ ಕೆಟ್ಟ ಟೇಸ್ಟು ಹೊಂದಿರುವ ನಟನೂ ಹೌದು. ಚಿತ್ರವಿಚಿತ್ರ ಪಾತ್ರಗಳಲ್ಲಿ ತನ್ನನ್ನು ತಾನು ಮೆರೆಸಬೇಕೆಂಬ ಇಚ್ಛೆ ಹೊಂದಿರೋ ಕಮಲ್, ಕಥೆಯ ಬಗ್ಗೆ ತಾತ್ಸಾರ ವಹಿಸುತ್ತಾರೆಂಬ ಮಾತಿದೆ. ಅಂಥಾದ್ದೊಂದು ಆರೋಪ ಥಗ್ ಲೈಫ್ ಚಿತ್ರದ ವಿಚಾರದಲ್ಲಿ ಅಕ್ಷರಶಃ ಸಾಬೀತಾಗಿ ಬಿಟ್ಟಿದೆ!

ಥಗ್ ಲೈಫ್ ಅನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸುವ ಭೂಮಿಕೆಯಲ್ಲಿ ಕಮಲ್ ಕನ್ನಡಿಗರನ್ನು ಕೆಣಕಿದ್ದರು. ಯಾವ ಕಾರಣವೂ ಇಲ್ಲದೆ ಏಕಾಏಕಿ ಭಾಷಾ ತಜ್ಞನಂತೆ ಪೋಸು ಕೊಟ್ಟಿದ್ದ ಕಮಲ್, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬರ್ಥದ ಅಪದ್ಧ ಮಾತುಗಳನ್ನಾಡಿದ್ದರು. ಇಷ್ಟಾದದ್ದೇ ಕನ್ನಡಿಗರೆಲ್ಲ ಸಾರಾಸಗಟಾಗಿ ಕಮಲ್ ಜುಟ್ಟು ಹಿಡಿದ ಝಾಡಿಸಲಾರಂಭಿಸಿದ್ದರು. ಅವಕಾಶ ಸಿಕ್ಕಾಗೆಲ್ಲ ಕಮಲ್ ಹಾಸನ್‌ನನ್ನು ಹೀನಾಮಾನ ನಿಂದಿಸಿ ಸೇಡು ತೀರಿಸಿಕೊಳ್ಳಲಾರಂಭಿಸಿದ್ದರು. ಇದೆಲ್ಲದರ ನಡುವೆ ಥಗ್ ಲೈಫಿಗೆ ಕರ್ನಾಟಕದಲ್ಲಿ ಬ್ಯಾನ್ ಭಾಗ್ಯ ಮುಂದುವರೆದಿದೆ. ಇದೇ ಹೊತ್ತಿನಲ್ಲಿ ಅತ್ತ ತಮಿಳುನಾಡಿನಲ್ಲಿ ಬಿಡುಗಡೆಗೊಂಡಿದೆ. ಅದನ್ನು ನೋಡಿದ ತಮಿಳ್ ಮಕ್ಕಳ್ ಕಂಗಾಲಾಗಿ ಹಾದಿಬೀದಿಗಳಲ್ಲಿ ಗುಣಗಾನ ಮಾಡುತ್ತಿರೋ ಪರಿ ಕಂಡು ಸಮಸ್ತ ಕನ್ನಡಿಗರಿಗೂ ಕಮಲ್ ಅದೆಂಥಾ ಕರುಣಾಮಯಿ ಎಂಬ ಜ್ಞಾನೋದಯವಾಗಿದೆ!

ಎಲ್ಲವೂ ಸರಿಯಾಗಿದ್ದಿದ್ದರೆ ಐದನೇ ತಾರೀಕಿನ ಮುಂಜಾನೆ ಹೊತ್ತಿಗೆಲ್ಲ ಕರ್ನಾಟಕದಲ್ಲಿಯೂ ಥಗ್ ಲೈಫ್ ಹಾವಳಿ ಶುರುವಾಗುತ್ತಿತ್ತು. ಅದೆಂಥಾ ಕೆಟ್ಟ ವಾತಾವರಣವಿದ್ದರೂ ಒಂದಷ್ಟು ರೊಕ್ಕ ಉಳಗನಾಯಗನ್‌ನ ಉಡಿ ಸೇರುತ್ತಿತ್ತು. ಆದರೆ, ಬೆಳ್ಳಂಬೆಳಗ್ಗೆ ಕನ್ನಡದ ಪ್ರೇಕ್ಷಕರಿಗೆ ಥಗ್ ಲೈಫ್ ಮೂಲಕ ಬೀಭತ್ಸ ಅನುಭವ ಖಾಯಮ್ಮಾಗಿತ್ತು. ಅಂಥಾದ್ದೊಂದು ಕಂಟಕದಿಂದ ಕನ್ನಡಿಗರನ್ನು ಪಾರುಗಾಣಿಸಿದ ಪುಣ್ಯ ನಿಸ್ಸಂದೇಹವಾಗಿಯೂ ಕನ್ನಡ ವಿರೋಧಿಯ ಸ್ಥಾನದಲ್ಲಿ ನಿಂತಿರೋ ಕಮಲ್ ಖಾತೆಗೆ ಜಮಾವಣೆಗೊಳ್ಳುತ್ತೆ. ಬಿಟ್ಟಿ ಪ್ರಚಾರದ ಪಟ್ಟುಗಳನ್ನು ಭಾಷಾ ವಿವಾದದ ಬೆಂಕಿ ಹೊತ್ತಿಸುವ ಮೂಲಕ ಕಮಲ್ ಪ್ರದರ್ಶಿಸಿದ್ದೀಗ ಪಕ್ಕಾ ಆಗಿದೆ. ಈ ವಿಚಾರದಲ್ಲಿ ಖಂಡಿತವಾಗಿಯೂ ಯಾವ ಕನ್ನಡಿಗರಿಗೂ ಬೇಸರವೇನಿಲ್ಲ. ಯಾಕೆಂದರೆ, ಖಟ್ಟರ್ ಭಾಷಾಭಿಮಾನಿಗಳಾದ ತಮಿಳು ಪ್ರೇಕ್ಷಕರೇ ಥಗ್ ಲೈಫಿಗೆ ಮಂಗಳಾರತಿ ಎತ್ತುತ್ತಾ ಕನ್ನಡದ ಮಕ್ಕಳು ಹೇಗೋ ಬಚಾವಾದರೆಂದು ಮಮ್ಮಲ ಕರುಬಹತ್ತಿದ್ದಾರೆ!

ಥಗ್ ಲೈಫ್ ಅಸಲೀ ಹಣೆಬರಹ ಏನೆಂಬುದು ಈ ಹಿಂದೆ ಟ್ರೈಲರ್ ಬಿಡುಗಡೆಗೊಂಡಾಗಲೇ ತಿಳಿದು ಹೋಗಿತ್ತು. ಬೇರೆಯವರಿರಲಿ; ಖುದ್ದು ಕಮಲ್ ಆರಾಧಕರೇ ಅದನ್ನು ಕಂಡು ನಿರಾಸೆಗೀಡಾಗಿದ್ದರು. ಬಹುಶಃ ಕಮಲ್ ಮತ್ತು ಮಣಿರತ್ನಂ ಇಬ್ಬರನ್ನು ಬಿಟ್ಟು ಮಿಕ್ಕವರೆಲ್ಲರಿಗೂ ಇದು ಬರಖತ್ತಾಗೋ ಸರಕಲ್ಲ ಎಂಬ ವಿಚಾರ ಖಾತರಿಯಾಗಿತ್ತು. ಥಗ್ ಲೈಫ್ ಚಿತ್ರೀಕರಣದ ಸಂದರ್ಭದಲ್ಲಿಯೇ ಸೆಟ್ಟಿನಿಂದ ಒಂದಷ್ಟು ಸೂಕ್ಷ್ಮ ವಿಚಾರಗಳು ತೇಲಿ ಬಂದಿದ್ದವು. ಇದರಲ್ಲಿ ನಟ ಸಿಂಬು ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾನೆ. ಆತನಿಗೆ ತಮಿಳುನಾಡಿನಲ್ಲೊಂದಷ್ಟು ಮಾರ್ಕೆಟ್ ವ್ಯಾಲ್ಯೂ ಇದೆ. ಆತನ ಪಾತ್ರಕ್ಕೆ ಬಿಲ್ಡಪ್ ಕೊಟ್ಟು, ಅದರ ಅವಧಿಯನ್ನು ಹಿಗ್ಗಲಿಸುವ ಸರ್ಕಸನ್ನು ಮಣಿರತ್ನಂ ಚಿತ್ರೀಕರಣ ಶುರುವಾದ ನಂತರವೇ ಮಾಡಿದ್ದರೆಂಬ ಮಾತಿದೆ. ಮಣಿರತ್ನಂರಂಥಾ ನಿರ್ದೇಶಕನಿಗೇ ತನ್ನ ಕಥೆಯ ಮೇಲೆ ನಂಬಿಕೆ ಇಲ್ಲದೇ ಹೋಯಿತಾ? ಸಿಂಬುನಂಥಾ ನಟರ ನೇಮು ಫೇಮನ್ನಾದರೂ ಬಳಸಿಕೊಂಡು ಒಂದಷ್ಟು ಬಚಾವಾಗಲು ಹವಣಿಸಿದರಾ ಗೊತ್ತಿಲ್ಲ. ಆದರೆ, ಚಿತ್ರೀಕರಣದ ಹಂತದಲ್ಲಿಯೇ ಈ ಕಥೆ ಮತ್ತಷ್ಟು ಕಲಸುಮೇಲೋಗರವಾದದ್ದಂತೂ ಸತ್ಯ!

ಅಂಥಾದ್ದೊಂದು ಹಳಸಲು ಕಥೆ ಕಂಡ ತಮಿಳ್ ಮಕ್ಕಳ ಮಿದುಳಿಗೆ ಅಕ್ಷರಶಃ ಹುಳ ಬಿದ್ದಂತಾಗಿದೆ. ಈ ಸಿನಿಮಾ ತಕ್ಕ ಮಟ್ಟಿಗಿದ್ದಿದ್ದರೂ ತಮಿಳರ ಭಾಷಾಭಿಮಾನದಿಂದಲೇ ಬಾಕ್ಸಾಫೀಸು ಭದ್ರವಾಗುತ್ತಿತ್ತು. ಅಂಥಾ ಅವಕಾಶವನ್ನು ಮಣಿರತ್ನಂ ಮತ್ತು ಕಮಲ್ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಮಲ್ ವಿರುದ್ಧ ಸಿಡಿದೇಳುತ್ತಲೇ ತಮಿಳರ ಭಾಷಾಭಿಮಾನ ಜಾಗೃತಗೊಂಡಿತ್ತು. ಅಭಿಮಾನದಾಚೆಗೆ ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳಬೇಕೆಂಬಂಥಾ ನಿರ್ಧಾರವೊಂದು ತಂತಾನೇ ವ್ಯಾಪಿಸಿಕೊಂಡಿತ್ತು. ಇಂಥಾ ಭಾಷಾಭಿಮಾನದಿಂದ ಸಿನಿಮಾ ನೋಡಿದವರಿಗೆ ನಿರಾಸೆಯಲ್ಲದೆ ಬೇರ್‍ಯಾವ ಅನುಭೂತಿಯೂ ದಕ್ಕಿಲ್ಲ. ಇದೊಂದು ಬುರ್ನಾಸು ಚಿತ್ರ ಅಂತ ತಮಿಳು ಪ್ರೇಕ್ಷಕರು ಘಂಟಾಘೋಶವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲಿಗೆ ಸಿನಿಮಾ ಬ್ರಾಂಡಿಂಗಿಗೆ ಭಾಷೆಯ ಬೆಂಕಿಯನ್ನು ನೆಚ್ಚಿಕೊಂಡಿದ್ದ ಕಮಲ್ ಕಸರತ್ತು ಬೆಂಕಿಯಲ್ಲಿ ಬೆಂದು ಜೀರ್ಣವಾದಂತಾಗಿದೆ. ಆದರೆ, ಮೊದಲ ದಿನ ಈ ಸಿನಿಮಾ ನೋಡಿದ ಕೆಟ್ಟ ಅನುಭವವನ್ನು ಮಾತ್ರ ತಮಿಳ್ ಮಕ್ಕಳ ಪಾಲಿಗೆ ಅರಗಿಸಿಕೊಳ್ಳಕಾರದ ಅಗುಳಿನಂತಾಗಿ ಬಿಟ್ಟಿದೆ. ಇದು ಕಮಲ್ ಹಾಸನ್ ವೃತ್ತಿ ಬದುಕಿನ ಮೇಲೆ ರಾಚಿಕೊಂಡ ಬಗ್ಗಡವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದು ಕಮಲ್ ವೃತ್ತಿ ಬದುಕಿನ ಸ್ಮೃತಿಯೊಂದಿಗೆ ಅನುಗಾಲವೂ ಅಚ್ಚಳಿಯದೆ ಉಳಿದುಕೊಳ್ಳುತ್ತೆ!

The post kamal haasan thug life: ಸಿಂಬು ಸ್ಟಾರ್‌ಡಮ್ ನೆಚ್ಚಿಕೊಂಡ ಮಣಿರತ್ನಂ ಕೈಲೀಗ ಖಾಲಿ ಚೊಂಬು! appeared first on Cini Shodha.

samantha-trisha: ಒಂದೇ ಸಲ ಕುದುರಿಕೊಳ್ತು ಇಬ್ಬರ ಲಕ್ಕು!
ಯಾವುದೇ ಸಮಸ್ಯೆಗಳ ಕಾವಳ ಸರಿದು ಹೊಸಾ ದಿಕ್ಕು ಗೋಚರಿಸುತ್ತದೆಂಬುದು ಪ್ರತೀ ಜೀವಗಳ ನಂಬುಗೆ. ಆದರೆ, ಕೆಲವರ ಜೀವನದಲ್ಲಿ ಮಾತ್ರವೇ ಅದು ಬಹುಬೇಗನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸಮಂತಾ (samantha) ಪಾಲಿಗೆ ಅಂಥಾದ್ದೊಂದು ಅದೃಷ್ಟ ಕೈ ಹಿಡಿದಿದೆ. ಅತ್ತ ತೀರಾ ಪ್ರೀತಿಯಿಂದ ನೆಚ್ಚಿಕೊಂಡಿದ್ದ ಮದುವೆ ಮುರಿಬಿದ್ದ ಸಂಕಟ, ಇತ್ತ ಒಂಟಿಯಾಗಿ ನಿಂತ ಘಳಿಗೆಯಲ್ಲಿ ಅಮರಿಕೊಂಡ ವಿಚಿತ್ರ ಕಾಯಿಲೆ… ಬಹುಶಃ ಎಂಥಾ ಗಟ್ಟಿಗರನ್ನೇ ಆದರೂ ಇಂಥಾ ಸಂದರ್ಭ ಹೈರಾಣು ಮಾಡಿ ಹಾಕುತ್ತೆ. ಓರ್ವ ಹೆಣ್ಣು ಮಗಳಾಗಿ ಎಲ್ಲವನ್ನೂ ಏಕಾಂಗಿಯಾಗೇ ಎದುರಿಸಿದ್ದ ಸಮಂತಾ (samantha) ಈಗ ಮತ್ತೆ ಎದ್ದು ನಿಂತಿದ್ದಾಳೆ. ಇದು ಆಕೆಯ ಪಾಲಿಗೆ ಅಕ್ಷರಶಃ ಪುನರ್ಜನ್ಮ. ವೃತ್ತಿ ಬದುಕಿನ ಪಾಲಿಗೆ ಅದ್ಭುತ ಸೆಕೆಂಡ್ ಇನ್ನಿಂಗ್ಸ್. ಇದೀಗ ಸಾಲು ಸಾಲು ಅವಕಾಶ ಪಡೆದುಕೊಂಡು, ಕೋಟಿ ಕೋಟಿ ಸಂಭಾವನೆ ಗಳಿಸುತ್ತಿರೋ ಸಮಂತಾಗೀಗ ಎದುರಾಳಿಯೊಬ್ಬಳು ಹುಟ್ಟಿಕೊಂಡಿದ್ದಾಳೆ. ಆಕೆ ಬಹುಭಾಷಾ ನಟಿ (trisha krishnan) ತ್ರಿಷಾ!

ಸಮಂತಾ (samantha) ಅನುಭವಿಸಿದ್ದ ಸಾಲು ಸಾಲು ಸಂಕಷ್ಟ ಕಂಡವರನೇಕರು ಇನ್ನು ಈಕೆಯ ವೃತ್ತಿ ಬದುಕಿಗೆ ಫುಲ್ ಸ್ಟಾಪ್ ಬಿತ್ತೆಂದೇ ಅಂದುಕೊಂಡಿದ್ದರು. ಅದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ಆದರೆ, ಸಮಂತಾ ಬಹುಬೇಗನೆ ರೇಸಿಗೆ ಮರಳಿದ್ದಾಳೆ. ಪುಷ್ಪ ಚಿತ್ರದ ಹಾಡೊಂದಕ್ಕೆ ಮಾದಕವಾಗಿ ಮೈ ಬಳುಕಿಸಿದ್ದ ಸಮಂತಾಳ ನಸೀಬೇ ಇದೀಗ ಬದಲಾಗಿ ಹೋಗಿದೆ. ಆಕೆ ನೋಡ ನೋಡುತ್ತಲೇ ದಕ್ಷಿಣ ಭಾರತೀಯ ಚಿತ್ರರಂಗದ ಟಾಪ್ ನಟಿಯರ ಸಾಲಿನಲ್ಲಿ ಮುಂಚೂಣಿ ಪಟ್ಟ ಗಿಟ್ಟಿಸಿಕೊಂಡಿದ್ದಾಳೆ. ಅದರ ಭಾಗವಾಗಿಯೇ ಈ ಹಿಂದಿನದ್ದ್ಕಿಂತೂ ಹೆಚ್ಚಿನ ಅವಾಶಗಳು ಆಕೆಯನ್ನು ಅರಸಿ ಬರುತ್ತಿವೆ. ಸಿಟಾಡೆಲ್ ಇಂಡಿಯಾ ಅಂತೊಂದು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾಳಲ್ಲಾ? ಅದಕ್ಕೆ ಆಕೆ ಪಡೆದುಕೊಂಡಿರೋ ಸಂಭಾವನೆ ಭರ್ತಿ ಹತ್ತು ಕೋಟಿ!

ಹೀಗೆ ಸಮಂತಾ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತಲೇ, ಅದೇ ದಕ್ಷಿಣ ಭಾರತೀಯ ಚಿತ್ರರಂಗದ ಮತ್ತೋರ್ವ ಸುಂದರಿ ತ್ರಿಷಾ ಲಕ್ಕು ಕೂಡಾ ಅಚ್ಚರಿದಾಯಕವಾಗ ಕುದುರಿಕೊಂಡಿದೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ಸಿನ ಉತ್ತುಂಗ ಕಂಡಿದ್ದಾಕೆ ತ್ರಿಷಾ. ಈಕೆಯನ್ನು ಹೀರೋಯಿನ್ನಾಗಿ ತಮ್ಮ ಸಿನಿಮಾಕ್ಕೆ ಕರೆತರಬೇಕೆಂಬುದೇ ಅನೇಕರ ಕನಸಾಗಿತ್ತು. ನಮ್ಮದೇ ಕನ್ನಡದಲ್ಲಿಯೂ ಅಂಥಾ ಸಾಕಷ್ಟು ವಿಫಲ ಪ್ರಯತ್ನಗಳು ನಡೆದಿದ್ದವು. ಆದರೆ, ಇಂಥಾ ಜನಪ್ರಿಯತೆ ಒಂದಿದ್ದ ತ್ರಿಷಾ ಕೂಡಾ ವರ್ಷಗಟ್ಟಲೆ ಮಂಕಾಗ ಕೂರುವಂಥಾ ವಾತಾವರಣ ಸೃಷ್ಟಿಯಾಗಿತ್ತು. ಆ ಬಗ್ಗೆ ನಾನಾ ರೂಮರುಗಳು ಹಬ್ಬಿಕೊಂಡಿದ್ದವು. ಅದಕ್ಕೆ ಸರಿಯಾಗಿ ಸದಾ ಫಳಫಳಿಸುವ ಆಕೆಯ ಸ್ನಿಗ್ಧ ಸೌಂದರ್ಯ ಒಂದಷ್ಟು ಮಂಕಾದಂತೆ ಕಂಡು ಬರಲಾಂಭಿಸಿತ್ತು.

ಇಂಥಾ ತ್ರಿಷಾ ಕೂಡಾ ಇದೀಗ ಮತ್ತೆ ರೇಸಿಗೆ ಮರಳಿದ್ದಾಳೆ. ಇತ್ತೀಚೆಗೆ ತೆರೆ ಕಂಡಿದ್ದ ಪೊನ್ನಿಯಿನ್ ಸೆಲ್ವನ್ ಚಿತ್ರ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಕಂಡಿರಲಿಲ್ಲ. ಆದರೆ, ಅದರಲ್ಲಿ ನಟಿಸಿದ್ದ ತ್ರಿಷಾ ಬಗೆಗಿನ ಕ್ರೇಜ್ ಮಾತ್ರ ಇಮ್ಮಡಿಸಿದೆ. ಅದಾದ ನಂತರದಲ್ಲಿ ಹಲವಾರು ಸ್ಟಾರ್‍ಗಳ ಸಿನಿಮಾಗಳಲ್ಲಿ ತ್ರಿಷಾಗೆ ಆಫರುಗಳು ಬರುತ್ತಿವೆ. ಒಂದು ಮೂಲದ ಪರಕರ ಆಕೆಯ ಸಂಭಾವನೆ ಕೂಡಾ ಹತ್ತು ಕೋಟಿಯ ಗಡಿ ಮೀರುವ ಸನ್ನಾಹದಲ್ಲಿದೆ. ತ್ರಿಷಾ ಇದೀಗ ವಿಜಯ್ ಜೊತೆ ಲಿಯೋ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಹದಿನಾಲಕ್ಕು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿದೆ. ತ್ರಿಷಾ ಕೃಷ್ಣನ್ ಕೂಡಾ ಖಾಸಗಿ ಬದುಕಿನ ತೊಳಲಾಟಗಳಿಂದ ನೊಂದಿದ್ದವಳು. ರಾಣಾ ದಗ್ಗುಬಾಟಿಯೊಂದಿಗಿನ ಅಫೇರು ಮುರಿಉಬಿದ್ದ ಬಳಿಕ ಆಕೆ ಮಾನಸಿಕವಾಗಿ ಜರ್ಝರಿತಳಾಗಿದ್ದಳು. ಈ ವಿಚಾರದಲ್ಲಿ ಒಂದೇ ದೋಣಿಯ ಪಯಣಿಗರಂತೆ ಕಾಣುವ ಸಮಂತಾ ಮತ್ತು ತ್ರಿಷಾ ಒಟ್ಟೊಟ್ಟಿಗೇ ಮೇಲೆದ್ದು ನಿಂತಿರೋದನ್ನು ಕಂಡು ಅಭಿಮಾನಿ ಬಳಗ ಖುಷಿಗೊಂಡಿದೆ.

The post samantha-trisha: ಒಂದೇ ಸಲ ಕುದುರಿಕೊಳ್ತು ಇಬ್ಬರ ಲಕ್ಕು! appeared first on Cini Shodha.