#triptidimri – Cini Shodha

Tripti Dimri: ರೇಸಿನಲ್ಲಿರೋದು ಪ್ರಸಿದ್ಧ ನಟಿಯರ ದಂಡು!
ತನ್ನ ಅಭಿನಯದ ಶೈಲಿಯಿಂದಲೇ ಜನಮನ ಗೆದ್ದು ನ್ಯಾಚುರಲ್ ಸ್ಟಾರ್ ಅನ್ನಿಸಿಕೊಂಡಿರುವಾತ ನಾನಿ. ವೃತ್ತಿ ಬದುಕಿನಲ್ಲಿ ಸಹಜವಾದ ಒಂದಷ್ಟು ಏರಿಳಿತಗಳನ್ನು ಕಂಡಿರುವ ನಾನಿ, ಒಂದು ಸೋಲಿನ ಬೆನ್ನಲ್ಲಿಯೇ ಮೈ ಕೊಡವಿಕೊಂಡು ಎದ್ದು ನಿಂತ ಉದಾಹರಣೆಗಳಿದ್ದಾವೆ. ಒಂದಷ್ಟು ಹಂತಗಳಲ್ಲಿ ತುಸು ಮಂಕಾದಂತೆ ಕಾಣಿಸಿದ್ದ ನಾನಿಯೀಗ ಮತ್ತೆ ವಸಂತ ಕಾಲದತ್ತ ಮುಖ ಮಾಡಿ ನಿಂತಂತಿದೆ. ದಿ ಪ್ಯಾಡೈಸ್ ಎಂಬ ದೊಡ್ಡ ಬಜೆಟ್ ಚಿತ್ರದಲ್ಲಿ ಬ್ಯುಸಿಯಾಗಿರುವ ಈತನೀಗ ಮತ್ತೊಂದಷ್ಟು ಹೊಸಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಯಾದಿಯಲ್ಲಿ ದಿ ಪ್ಯಾರಡೈಸ್ ನಂತರ ಓಜಿ ಖ್ಯಾತಿಯ ಸುಜೀತ್ ನಿರ್ದೇಶನದ ಸಿನಿಮಾ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಪವನ್ ಕಲ್ಯಾಣ್ ನಟಿಸಿದ್ದ ಓಜಿ ಚಿತ್ರದ ಮೂಲಕ ಗಮನ ಸೆಳೆದಿದ್ದಾತ ನಿರ್ದೇಶಕ ಸುಜೀತ್. ಒಂದು ಮಟ್ಟದ ಗೆಲುವು ಕಂಡ ಓಜಿ ನಂತರ ನಾನಿಗಾಗಿಯೇ ಸುಜೀತ್ ಈ ಕಥೆ ಸಿದ್ಧಪಡಿಸಿದ್ದರಂತೆ. ಇದೀಗ ಪ್ಯಾರಡೈಸ್ ಚಿತ್ರ ಅಚಿತಿಮ ಘಟ್ಟದಲ್ಲಿರುವಾಗಲೇ ಸದರಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ಚಾಲೂ ಆಗಿವೆ. ಸದ್ಯದ ಮಟ್ಟಿಗೆ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ. ತಾಂತ್ರಿಕ ವರ್ಷವೆಲ್ಲ ಈಗಾಗಲೇ ನಿಕ್ಕಿಯಾಗಿದೆ. ಈ ಸಿನಿಮಾದಲ್ಲಿ ನಾನಿಗೆ ನಾಯಕಿ ಹುಡುಕೋ ಕಾರ್ಯ ಈಗೊಂದು ತಿಂಗಳಿಂದೀಚೆಗೆ ಚಾಲೂ ಆಗಿತ್ತು. ಈ ಸಾಲಿನಲ್ಲಿ ಅನೇಕ ನಟಿಯರ ಹೆಸರುಗಳು ಕೇಳಿ ಬಂದಿದ್ದರೂ, ಕಡೆಗೂ ಬಾಲಿವುಡ್ಡಿನ ತೃಪ್ತಿ ದಿಮ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!

೨೦೧೮ರಿಂದೀಚೆಗೆ ನಾಯಕಿಯಾಗಿ ಚಾಲ್ತಿಯಲ್ಲಿರುವ ತೃಪ್ತಿ ದಿಮ್ರಿಗೆ ಇದುವರೆಗೂ ಸಾಧಾರಣ ಎಂಬಂಥ ಗೆಲುವುಗಳು ಮಾತ್ರವೇ ಸಿಕ್ಕಿದೆ. ಒಂದು ಹಂತದಲ್ಲಿ ನಾಯಕಿಯಾಗಿ ಅವಕಾಶಕ್ಕೆ ತತ್ವಾರವಾದಾಗ ಐಟಂ ನಂಬರುಗಳಿಗೆ ಸೀಮಿತವಾದದ್ದೂ ಇದೆ. ನಾಯಕಿಯಾಗಿ ಮೆರೆಯಬೇಕಿದ್ದ ಈ ನಟಿ ಐಟಂ ನಂಬರಿಗೆ ಮಾತ್ರವೇ ಸೀಮಿತವಾಗಿದ್ದ ಘಳಿಗೆಯಲ್ಲಿಯೇ ನಾನಿಗೆ ಜೋಡಿಯಾಗುವಂಥಾ ಸುವರ್ಣಾವಕಾಶ ಒಲಿದು ಬಂದಿದೆ. ಈ ಸಿನಿಮಾ ಮೂಲಕ ತನ್ನ ವೃತ್ತಿ ಬದುಕಿಗೆ ಕವಿದಿದ್ದ ಗ್ರಹಣ ಕಳೆಯೋ ಸಾಧ್‌ಯತೆಗಳಿದ್ದಾವೆ. ಈಗಾಗಲೇ ತೃಪ್ತಿ ಈ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾಳೆ. ಇಷ್ಟರಲ್ಲಿಯೇ ಚಿತ್ರೀಕರಣ ಚಾಲೂ ಆಗಲಿದೆ.

keywords: nani, tripti dimri, tripti dimri upcoming movie, cinishodha

The post Tripti Dimri: ರೇಸಿನಲ್ಲಿರೋದು ಪ್ರಸಿದ್ಧ ನಟಿಯರ ದಂಡು! appeared first on Cini Shodha.

tripti dimri: ನಿರಾಸೆಗೀಡಾದರೇ ಪ್ರಭಾಸ್ ಫ್ಯಾನ್ಸ್?
ಡಾರ್ಲಿಂಗ್ ಪ್ರಭಾಸ್ ಇದೀಗ ಬಾಹುಬಲಿ ನಂತರದ ಸೋಲಿನ ಪರ್ವವನ್ನು ದಾಟಿಕೊಂಡು ನಿಂತಿದ್ದಾರೆ. ಒಂದು ಮಹಾ ಗೆಲುವಿನ ನಂತರ ಮುಲಾಜಿಗೆ ಬಸುರಾಗುವಂಥಾ ಸಂದಿಗ್ಧ ಸ್ಥಿತಿಗಿಳಿದಿದ್ದ ಪ್ರಭಾಸ್ ಇದೀಗ ಬಲು ಎಚ್ಚರದ ನಡೆ ಅನುಸರಿಸುತ್ತಿದ್ದಾರೆ. ಕಲ್ಕಿಯ ಗೆಲುವಿನ ನಂತರ ಸಿಕ್ಕ ಮರುಜೀವವನ್ನು ಗೆಲುವಿಗೆಂದೇ ಮೀಸಲಿಟ್ಟಂತೆ ಮುಂದುವರೆಯುತ್ತಿದ್ದಾರೆ. ಸದ್ಯದ ಮಟ್ಟಿಗೆ ಪ್ರಭಾಸ್ ಎರಡ್ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಸದ್ಯ ಸುದ್ದಿ ಕೇಂದ್ರದಲ್ಲಿದೆ. ಅದರಲ್ಲಿಯೂ ವಿಶೇಷವಾಗಿ, ಈ ಸಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗೋ ನಟಿ ಯಾರೆಂಬುದರ ಸುತ್ತ ಭರ್ಜರಿಯಾಗಿಯೇ ಚರ್ಚೆಗಳು ನಡೆಯುತ್ತಿದ್ದಾವೆ!

ಪ್ರಭಾಸ್ ಯಾವುದೇ ಸಿನಿಮಾ ಒಪ್ಪಿಕೊಂಡಾಗಲೂ ನಾಯಕಿ ಯಾರೆಂಬುದರ ಸುತ್ತ ಚರ್ಚೆಗಳು ಹುಟ್ಟಿಕೊಳ್ಳೋದು ಹೊಸತೇನಲ್ಲ. ಆದರೆ, ಸ್ಪಿರಿಟ್ ವಿಚಾರದಲ್ಲಿ ಅದರ ಸ್ಪೀಡು ಕೊಂಚ ತೀವ್ರವಾದಂತಿದೆ. ಇದುವರೆಗೂ ಈ ಸಾಲಿನಲ್ಲಿ ಸಾಕಷ್ಟು ನಟಿಯರ ಹೆಸರುಗಳು ಕೇಳಿ ಬಂದಿದ್ದಾವೆ. ಇತ್ತೀಚೆಗಷ್ಟೇ ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಪ್ರಭಾಸ್ ಗೆ ನಾಯಕಿಯಾಗೋದು ಪಕ್ಕಾ ಎಂಬಂಥಾ ಸುದ್ದಿಗಳು ಹರಿದಾಡಿದ್ದವು. ತಮಿಳಿನಲ್ಲಿಯೂ ಪ್ರಸಿದ್ಧಿ ಪಡೆದುಕೊಳ್ಳುತ್ತಿರೋ ರುಕ್ಮಿಣಿಯ ಬಗ್ಗೆ ಪ್ರಭಾಸ್ ಅಭಿಮಾನಿಗಳಿಗೂ ಮೆಚ್ಚುಗೆಯಿತ್ತು. ಇದೆಲ್ಲದರ ನಡುವೆ ವಂಗಾನ ಲೆಕ್ಕಾಚಾರವೇ ಬೇರೆ ದಿಕ್ಕಿನಲ್ಲಿದ್ದಂತಿದೆ. ಅದರ ಭಾಗವಾಗಿಯೇ ಇದೀಗ ಸ್ಪಿರಿಟ್ ನಾಯಕಿಯಾಗಿ ತೃಪ್ತಿ ಧಿಮ್ರಿ ಆಯ್ಕೆ ಬಹುತೇಕ ಖಚಿತ ಎಂಬಂಥಾ ಮಾತುಗಳು ಹರಿದಾಡುತ್ತಿವೆ.

ತೃಪ್ತಿ ಧಿಮ್ರಿ ಎಂಬ ಹೆಸರು ಒಂದಷ್ಟು ಮುನ್ನೆಲೆಗೆ ಬಂದಿದ್ದೇ ವಂಗಾ ನಿರ್ದೇಶನದ ಅನಿಮಲ್ ಚಿತ್ರದ ಮೂಲಕ. ಅದರಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ತೃಪ್ತಿ ಆ ನಂತರದಲ್ಲಿ ಹೇಳಿಕೊಳ್ಳುವಂಥಾ ಅವಕಾಶವನ್ನೇನೂ ಪಡೆದುಕೊಂಡಿರಲಿಲ್ಲ. ಆದರೆ, ವಂಗಾ ಆಕೆಯನ್ನು ಪ್ರಭಾಸ್ ಗೆ ನಾಯಕಿಯನ್ನಾಗಿಸಲು ನಿರ್ಧರಿಸಿದ್ದಾರಂತೆ. ಇದರ ವಿರುದ್ಧವೀಗ ಪ್ರಭಾಸ್ ಅಭಿಮಾನಿ ಪಾಳೆಯದಲ್ಲಿ ಅಸಮಾಧಾನಗಳು ಮೂಡಿಕೊಂಡಿವೆ. ಆಕೆಗೆ ಹೆಚ್ಚೆಂದರೆ ಒಂದ್ಯಾವುದೋ ಸಾಂಗಿನಲ್ಲಿ ಅವಕಾಶ ಕೊಡಬಹುದಿತ್ತಷ್ಟೆ. ಆಕೆಗೆ ಪ್ರಭಾಸ್ ನಾಯಕಿಯಾಗುವಂಥಾ ಛಾರ್ಮ್ ಇಲ್ಲ ಎಂಬಂತೆ ಪ್ರಭಾಸ್ ಅಭಿಮಾನಿ ಬಳಗ ಸಿಡಿಮಿಡಿಗೊಂಡಿದೆ.

The post tripti dimri: ನಿರಾಸೆಗೀಡಾದರೇ ಪ್ರಭಾಸ್ ಫ್ಯಾನ್ಸ್? appeared first on Cini Shodha.