tollywoodactress – Cini Shodha

pooja hegde: ಯಾಕೆ ಮಂಕಾದಳು ಮಂಗಳೂರು ಹುಡುಗಿ?
ಕರ್ನಾಟಕದಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಭಾರೀ ಗೆಲುವು ದಕ್ಕಿಸಿಕೊಂಡ ಅನೇಕ ನಟಿಯರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದರೂ ಕೂಡಾ, ಆಕೆಗೂ ಮುನ್ನವೇ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾಕೆ ಪೂಜಾ ಹೆಗ್ಡೆ. ಸರಿಸುಮಾರು ಏಳೆಂಟು ವರ್ಷಗಳ ಕಾಲ ಈಕೆ ತೆಲುಗು ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ವಿಜೃಂಭಿಸಿದ್ದಳು. ಆ ಕಾಲದಲ್ಲಿ ಆಕೆಯ ಬಗೆಗಿದ್ದ ಕ್ರೇಜ್, ಬೇಡಿಕೆಗಳನ್ನು ನೋಡಿದ್ದವರಿಗೆ, ಈವತ್ತು ಪೂಜಾ ಹೆಗ್ಡೆ ಮಂಕಾಗಿರುವ ರೀತಿ ಕಂಡರೆ ಅಚ್ಚರಿಯಾಗದಿರೋದಿಲ್ಲ. ಒಂದು ಸುದೀರ್ಘ ವನವಾಸದ ನಂತರವೂ ಆಕೆ ಮುಟ್ಟಿದ್ದೆಲ್ಲವೂ ಮಣ್ಣಾಗುವಂತಾಗಿದೆ. ಇದೇ ಹೊತ್ತಿನಲ್ಲಿಮ ಪೂಜಾ ಮಲೆಯಾಳ ಚಿತ್ರರಂಗಕ್ಕೆ ತೆರಳಿ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿರೋ ಸುದ್ದಿ ಬಂದಿದೆ!

2020ರಲ್ಲಿ ಅಲಾ ವೈಕುಂಟಪುರಾಲೋ ಅಂತೊಂದು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಳು. ಅದು ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಆ ಕ್ಷಣದಿಂದ ಇಲ್ಲಿಯವರೆಗೂ ಪೂಜಾ ಹೆಗ್ಡೆ ಪಾಲಿಗೆ ಮತ್ತೊಂದು ಗೆಲುವು ಮರೀಚಿಕೆಯಾಗಿದೆ. ಎಲ್ಲಾ ಸಿನಿಮಾಗಳೂ ಗೆಲ್ಲುತ್ತವೆ ಎಂದೇನೂ ಅಲ್ಲ. ಒಂದು ಸೋಲಿನ ನಂತರ ಮತ್ತೊಂದು ಸುಮಾರಾದ ಗೆಲುವು ಸಿಕ್ಕರೂ ಆಕ್ಸಿಜನ್ನು ಸಿಕ್ಕಂತಾಗುತ್ತದೆ. ಆದರೆ, ಪೂಜಾ ಪಾಲಿಗೆ ಅದೇಕೋ ಅಂಥಾದ್ದೊಂದು ಅವಕಾಶವೇ ಸಿಗದಾಗಿ ಹೋಗಿದೆ. ಈ ನಡುವೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂಬ ಸಿನಿಮಾದಲ್ಲಿ ಪೂಜಾ ನಟಿಸಿದ್ದಳು. ಅದು ಹೀನಾಯವಾಗಿ ಸೋಲು ಕಂಡಿತ್ತು. ರಾಧೆ ಶ್ಯಾಮ್, ಬೀಸ್ಟ್, ದೇವಾ ಮುಂತಾದ ಸಿನಿಮಾಗಳಿಗೆ ಒಂದರ ಹಿಂದೊಂದರಂತೆ ಸೋಲೆದುರಾಗಿತ್ತು.

ಒಂದು ಕಾಲದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ ಸಿನಿಮಾಗಳೆಲ್ಲವೂ ಗೆಲ್ಲುತ್ತದೆಂಬಂಥಾ ನಂಬಿಕೆ ಇತ್ತು. ಆಕೆಯ ನಟನೆ ಮತ್ತು ಗ್ಲಾಮರ್‌ಗೆ ಭಾಷಾತೀತವಾಗಿ ಅಭಿಮಾನಿಗಳಿದ್ದರು. ಈಗಲೂ ಅಭಿಮಾನಕ್ಕೇನು ತತ್ವಾರವಿಲ್ಲ. ಈಕೆಯ ದುರಾದೃಷ್ಟದಿಂದಲೇ ನಟಿಸಿದ ಸಿನಿಮಾಗಳೆಲ್ಲ ಕವುಚಿಕೊಂಡಿದೆ ಅನ್ನೋದೂ ಕೂಡಾ ಮೂರ್ಖತನ. ಯಾಕೆಂದರೆ, ತಪ್ಪಿರೋದು ಆಯ್ಕೆಯಲ್ಲಿ ಮಾತ್ರ. ಯಶದ ನಾಗಾಲೋಟದಲ್ಲಿದ್ದಾಗ ಆಯ್ಕೆಗೆ ವಿಪುಲ ಅವಕಾಶಗಳಿರುತ್ತವೆ. ಆದರೆ ಹೀಗೆ ಸೋಲಿನ ಕಾವಳ ಕವುಚಿಕೊಂಡಾಗ ಸಿಕ್ಕ ಅವಕಾಶವನ್ನೇ ಅಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗುತ್ತೆ. ಸದ್ಯಕ್ಕೆ ಪೂಜಾಳ ಮುಂದೆಯೂ ಅಂಥಾ ಅನಿವಾರ್ಯತೆ ಇದ್ದಂತಿದೆ. ಈ ನಡುವೆ ಆಕೆ ದುಲ್ಕರ್ ಸಲ್ಮಾನ್ ನಟನೆಯ ಸಿನಿಮಾವೊಂದನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಆ ಮೂಲಕ ಮಂಗಳೂರು ಹುಡುಗಿ ಮತ್ತೆ ಮಿಂಚಬಹುದಾ?

The post pooja hegde: ಯಾಕೆ ಮಂಕಾದಳು ಮಂಗಳೂರು ಹುಡುಗಿ? appeared first on Cini Shodha.

nidhhi agerwal: ವಿವಾದದ ಬಗ್ಗೆ ನಿಧಿ ಅಗರ್ವಾಲ್ ಹೇಳಿದ್ದೇನು?
ಬಾಲಿವುಡ್ ಮತ್ತು ಹಾಲಿವುಡ್ಡಿನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವಾಕೆ ನಿಧಿ ಅಗರ್ವಾಲ್. ಈಗೊಂದು ದಶಕದಿಂದ ಸಿನಿಮಾ ರಂಗದಲ್ಲಿ ಸಕ್ರಿಯಳಾಗಿರುವ ನಿಧಿ ಉತ್ತರ ಭಾರತದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಹೈದರಾಬಾದಿನಲ್ಲಿಯೇ. ಈ ಕಾರಣದಿಂದಲೇ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈಕೆಗೆ ಹೇಳಿಕೊಳ್ಳುವಂಥಾ ಗೆಲುವು ಸಿಕ್ಕಿರಲಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಒಂದಷ್ಟು ಚಾಲ್ತಿಯಲ್ಲಿದ್ದ ಈಕೆ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದಲ್ಲಿ ನಟಿಸಿದ್ದಳು. ಇದೀಗ ಖಾಸಗೀ ಸಮಾರಂಭವೊಂದಕ್ಕೆ ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಡುವ ಮೂಲಕ ನಿಧಿ ನಾನಾ ದಿಕ್ಕುಗಳಿಂದ ಟೀಕೆಗಳನ್ನು ಎದುರಿಸುವಂತಾಗಿದೆ.

ಸರ್ಕಾರಿ ವಾಹನಗಳನ್ನು ಸರ್ಕಾರಿ ಅಧಿಕಾರಿಗಳೇ ಖಾಸಗಿ ಅನುಕೂಲಕ್ಕೆ ಬಳಸುವಂತಿಲ್ಲ. ಹಾಗಿರುವಾಗ ಅದ್ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ನಟಿಯೊಬ್ಬಳು ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಟ್ಟರೆ ಅದು ವಿವಾದವಾಗದಿರಲು ಸಾಧ್ಯವೇ? ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ನಿಧಿ ಅತಿಥಿಯಾಗಿ ಪಾಲ್ಗೊಂಡಿದ್ದಳು. ಹೇಳಿಕೇಳಿ ಇದು ಪಾಪರಾಜಿಗಳ ಜಮಾನ. ನಟಿಯರು ಸುಳಿದಾಡೋದನ್ನೇ ಕಾದು ಕೂರುವ ಇಂಥವರ ಪಾಲಿಗೆ ಅಂಥವರು ನಿಂತಿದ್ದು, ತಿರುಗಿದ್ದು, ಹಾಯ್ ಅಂದಿದ್ದು, ಕೆಲವೊಮ್ಮೆ ಥುಪುಕ್ಕನೆ ಉಗಿದದ್ದೂ ಕೂಡಾ ಕಂಟೆಂಟೇ. ಇದೇ ದೆಸೆಯಲ್ಲಿ ನಿಧಿ ಕಾರಿಂದ ಇಳಿಯೋ ದೃಶ್ಯ ಕೂಡಾ ನಾನಾ ಆಂಗಲ್ಲುಳ್ಲಿ ಸೆರೆಯಾಗಿತ್ತು.

ಅದು ಸರ್ಕಾರಿ ಕಾರೆಂಬ ಸುಳಿವು ಸಿಗುತ್ತಲೇ ಕೆಲ ನೆಟ್ಟಿಗರು ನಿಧಿ ಅಗರ್ವಾಲ್‌ಳನ್ನು ಟೀಕಿಸಿದ್ದರು. ಕಡೆಗೂ ಆ ಬಗ್ಗೆ ನಿಧಿ ಸಮಜಾಯಿಶಿ ಕೊಟ್ಟಿದ್ದಾಳೆ. ಆ ಮೂಲಕ ಮತ್ತೊಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾಳೆ. ತಾನು ಇಂಥಾದ್ದೇ ವಾಹನ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಆದರೀಗ ಸರ್ಕಾರಿ ಅಧಿಕಾರಿಗಳೇ ನನಗೆ ಆ ವಾಹನ ಕಳಿಸಿದ್ದರೆಂದು ಸುದ್ದಿಯಾಗುತ್ತಿದೆ. ಆದರೆ ಆಯೋಜಕರೇ ಅದನ್ನು ಕಳಿಸಿದ್ದರೆಂದಿದ್ದಾಳೆ. ಆಯೋಜಕರು ಆಂಧ್ರ ಸರ್ಕಾರದ ಬೋರ್ಡ್ ಇರುವ ಕಾರನ್ನು ಹೇಗೆ ಕಳಿಸಲು ಸಾಧ್ಯ? ತನ್ನೊಂದಿಗೆ ನಟಿಸಿದ್ದಳೆಂಬ ಕಾರಣಕ್ಕೆ ಪವನ್ ಕಲ್ಯಾಣ್ ಈಕೆಯ ಬಗ್ಗೆ ಇಷ್ಟೊಂದು ಉದಾರಿಯಾದರಾ? ಅಧಿಕಾರಿಗಳಿಗೆ ಹೇಳಿ ನಿಧಿ ಸರ್ಕಾರಿ ವಾಹನದಲ್ಲಿ ಅಡ್ಡಾಡುವ ಅವಕಾಶ ಕಲ್ಪಿಸಿದರಾ? ಈ ಬಗ್ಗೆ ವಿಪಕ್ಷಗಳು ಪವನ್ ಕಲ್ಯಾಣ್ ಮೇಲೆ ಆರೋಪಗಳ ಸುರಿಮಳೆಗೈಯುತ್ತಿದ್ದಾವೆ!

The post nidhhi agerwal: ವಿವಾದದ ಬಗ್ಗೆ ನಿಧಿ ಅಗರ್ವಾಲ್ ಹೇಳಿದ್ದೇನು? appeared first on Cini Shodha.