suriya – Cini Shodha

Singam Suriya Upcoming Movie Updates: ಸಿಂಗಂ ಸೂರ್ಯನ ಕಂಡರೆ ನಿರ್ದೇಶಕರಿಗೆ ಭಯ!
ವೃತ್ತಿ ಬದುಕಿನಲ್ಲಿ ಕೊಂಚ ಎಡವಿದರೂ ಕೂಡಾ ಸ್ಟಾರ್ ನಟರು ಸರಣಿ ಸೋಲುಗಳಿಗೆ ತಲೆಕೊಡಬೇಕಾಗುತ್ತದೆ. ಎಂತೆಂಥಾ ಸೂಪರ್ ಸ್ಟಾರ್‌ಗಳೂ ಕೂಡಾ ಇಂಥಾ ತಿರುವೊಂದರ ಅಂಚಿಗೆ ಬಂದು ನಿಂತು ಕಂಗಾಲೆದ್ದಿದ್ದಾರೆ. ಕೆಲ ಮಂದಿ ಸಾವರಿಸಿಕೊಂಡು ಮೇಲೆದ್ದು ನಿಂತರೆ; ಮತ್ತೆ ಕೆಲವರು ಕಳೆದೇ ಹೋದದ್ದೂ ಇದೆ. ಸದ್ಯದ ವಾತಾವರಣವನ್ನು ಆಧರಿಸಿ ಹೇಳೋದಾದರೆ ತಮಿಳು ನಟ ಸಿಂಗಂ ಸೂರ್ಯ ಕೂಡಾ ಅಂಥಾದ್ದೊಂದು ಸವಾಲಿಗೆ ಮುಖಾಮುಖಿಯಾಗಿದ್ದಾರೆ. ಒಂದು ಕಾಲದಲ್ಲಿ ಸೂರ್ಯನ ಕಾಲ್‌ಶೀಟ್‌ಗಾಗಿ ನಿರ್ದೇಶಕರ ಹಿಂಡು ಕಾದು ಕೂರುತ್ತಿತ್ತು. ಆದರೀಗ ಕಥೆ ಹೇಳಿದ ನಿರ್ದೇಶಕರೇ ಸುಳಿವು ಕೊಡದಂತೆ ಕಳಚಿಕೊಳ್ಳುತ್ತಿದ್ದಾರೆ. ಹೀಗೆ ಆಘಾತಕ್ಕೀಡಾಗಿರುವ ಸೂರ್ಯನಿಗೀಗ ರಾಮ್ ಗೋಪಾಲ್ ವರ್ಮಾ ಶಿಷ್ಯ ಪುರಿ ಜಗನ್ನಾಥನೇ ಗತಿ ಎಂಬಂತಾಗಿದೆ!

ಸೂರ್ಯನ ವೃತ್ತಿ ಬದುಕು ಈಗೊಂದಷ್ಟು ವರ್ಷಗಳಿಂದ ಅನಿಶ್ಚಿತವಾಗಿ ಹೊಯ್ದಾಡಲಾರಂಭಿಸಿದೆ. ಈ ನಡುವೆ ಭರವಸೆ ಮೂಡಿಸೋ ಒಂದಷ್ಟು ಪ್ರಾಜೆಕ್ಟುಗಳು ಸೂರ್ಯನ ಮುಂದಿದ್ದವು. ಪ್ಯಾನಿಂಡಿಯಾ ಮಟ್ಟದಲ್ಲಿ ಗಮನ ಸೆಳೆದಿರುವ ಲೋಕೇಶ್ ಕನಗರಾಜ್ ವರ್ಷದ ಹಿಂದೆಯೇ ಸೂರ್ಯನಿಗೊಂದು ಕಥೆ ಹೇಳಿದ್ದ. ಸೂರ್ಯ ಮತ್ತು ಲೋಕಿ ಕಾಂಬಿನೇಷನ್ನಿನಲ್ಲಿ ಸಿನಿಮಾ ತಯಾರಿ ನಡೆಯುತ್ತಿದೆ ಅಂತೆಲ್ಲ ಸುದ್ದಿ ಹಬ್ಬಿಕೊಂಡಿತ್ತು. ಆದರೆ, ಲೋಕೇಶ್ ಕನಗರಾಜ್ ಏಕಾಏಕಿ ಉಲ್ಟಾ ಹೊಡೆದವನೇ, ಸೂರ್ಯನಿಗೆ ಹೇಳಿದ ಕಥೆಯನ್ನು ಆಮೀರ್ ಖಾನ್‌ಗೆ ಹೇಳಿ ಒಪ್ಪಿಗೆ ಪಡೆದುಕೊಂಡಿದ್ದಾನೆ. ಈಗ ಆ ಸಿನಿಮಾ ಟೇಕಾಫ್ ಆಗಿದೆ. ಇದಾದ ನಂತರ ವೆಟ್ರಿಮಾರನ್ ವಾಡಿವಾಸನ್ ಎಂಬ ಸಿನಿಮಾ ಕಥೆಯನ್ನ ಸೂರ್ಯನ ಮುಂದೆ ಹರವಿಟ್ಟಿದ್ದರು. ಆದರೀಗ ಆತ ಬೇರೊಂದು ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಅಲ್ಲಿಗೆ ವಾಡಿವಾಸನ್ ಕಥೆ ಮುಕ್ತಾಯವಾದಂತಾಗಿದೆ!

ಹೀಗೆ ಒಂದರ ಹಿಂದೊಂದರಂತೆ ಆಘಾತ ಎದುರಿಸುತ್ತಿರೋ ಸೂರ್ಯನಿಗೆ ನಿರ್ದೇಶಕ ಪೂರಿ ಜಗನ್ನಾಥ್ ವರವಾಗಿ ಕಂಡಿದ್ದಾನೆ. ಪೂರಿ ಒಂದು ಕಥೆ ರೆಡಿ ಮಾಡಿಟ್ಟುಕೊಂಡು, ಅದರಲ್ಲಿ ಆಮೀರ್ ಖಾನ್ ನಟಿಸಬೇಕೆಂಬ ಇಂಗಿತ ಹೊಂದಿದ್ದನಂತೆ. ಕಡೆಗೂ ಹೇಗೋ ಕನೆಕ್ಷನ್ನು ಸಿಕ್ಕಿ ಈ ಕಥೆಯನ್ನು ಸೂರ್ಯನಿಗೆ ಹೇಳಿದ್ದರು. ಆರಂಭದಲ್ಲಿ ಅಷ್ಟೊಂದು ಆಸಕ್ತಿ ವಹಿಸದೇ ಹೋದರೂ ಕೂಡಾ, ಸೂರ್ಯನಿಗೀಗ ಅದೇ ಅನಿವಾರ್ಯವಾದಂತಿದೆ. ಆದರೆ, ಅದೂ ಕೂಡಾ ಸದ್ಯಕ್ಕೆ ಟೇಕಾಫ್ ಆಗುವಂತಿಲ್ಲ. ಯಾಕೆಂದರೆ, ಪುರಿ ಈಗ ಸ್ಲಂಡಾಗ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾನೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಭಿಕ್ಷಿಕನಾಗಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣ ಸಮಾಪ್ತಿಗೊಂಡ ನಂತರ ಸೂರ್ಯನೊಂದಿಗಿನ ಸಿನಿಮಾ ಚಾಲೂ ಆಗುವ ಸಾಧ್ಯತೆಗಳಿದ್ದಾವೆ!

keywords: suriya, lokesh kanagaraj, vetrimaran, puri jagannath

The post Singam Suriya Upcoming Movie Updates: ಸಿಂಗಂ ಸೂರ್ಯನ ಕಂಡರೆ ನಿರ್ದೇಶಕರಿಗೆ ಭಯ! appeared first on Cini Shodha.

actor surya: ಅಪಾಯದಂಚಿನಲ್ಲಿದೆ ಸೂರ್ಯನ ವೃತ್ತಿ ಬದುಕು!
ಕೇವಲ ಹೀರೋ ಆಗಿ ಮಾತ್ರವಲ್ಲ; ಓರ್ವ ವ್ಯಕ್ತಿಯಾಗಿಯೂ ಗೌರವ ಮೂಡಿಸಬಲ್ಲ ವ್ಯಕ್ತಿತ್ವ ಹೊಂದಿರುವಾತ (actor suriya) ಸೂರ್ಯ. ಆತನ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ, ಸಾಮಾಜಿಕ ಕಳಕಳಿಯ ಬಗ್ಗೆ ಅಭಿಮಾನದಾಚೆಗೂ ಮೆಚ್ಚುಗೆ ಇದೆ. ಒಂದು ಸಿನಿಮಾಕ್ಕಾಗಿನ ಸಮರ್ಪಣಾ ಭಾವವಿದೆಯಲ್ಲಾ? ಅದರಲ್ಲೂ ಕೂಡಾ ಸೂರ್ಯನದ್ದು ಮಾದರಿ ನಡೆ. ಅದೆಲ್ಲದರ ಫಲವಾಗಿಯೇ ಸೂರ್ಯ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹೀಗೆ ದಕ್ಕಿದ ಸ್ಟಾರ್ ಗಿರಿಯನ್ನು ಪ್ರತೀ ಹಂತದಲ್ಲಿಯೂ ಸಂಭಾಳಿಸಿಕೊಂಡು ಹೋಗೋದೊಂದು ಕಲೆಯೂ ಹೌದು, ಸವಾಲೂ ಹೌದು. ಆ ಕ್ಷಣಕ್ಕೆ ತೆಗೆದುಕೊಳ್ಳುವ ನಿರ್ಧಾರವೇ ಎಲ್ಲವನ್ನೂ ನಿರ್ಧರಿಸಿ ಬಿಡುತ್ತದೆ. ಇಂಥಾ ನಿರ್ಧಾರ ಕೈಗೊಳ್ಳುವಲ್ಲಿ ಸೂರ್ಯ ಎಡವಿದರಾ? ಮುಲಾಜಿಗೆ ಬಿದ್ದು ಸಿನಿಮಾ ಒಪ್ಪಿಕೊಂಡು ಯಾಮಾರಿದರಾ? ಸದ್ಯ (kanguva movie) ಕಂಗುವಾ ಚಿತ್ರದ ಸೋಲಿನ ಭೂಮಿಕೆಯಲ್ಲಿ ಇಂಥಾ ಒಂದಷ್ಟು ಪ್ರಶ್ನೆಗಳು ಪಡಿಮೂಡಿಕೊಂಡಿವೆ!

ನಿಖರವಾಗಿ ಹೇಳೋದಾದರೆ, ಅಂಥಾದ್ದೊಂದು ತಪ್ಪು ನಿರ್ಧಾರವೇ ಕಂಗುವಾ ಚಿತ್ರದ ರೂಪದಲ್ಲಿ ಸೂರ್ಯ ಪಕ್ಕೆಗೆ ತಿವಿದು ಬಿಟ್ಟಿದೆ. ಜೈ ಭೀಮ್ ನಂಥಾ ಸಿನಿಮಾಗಳ ಮೂಲಕ ಸೂರ್ಯನ ಪ್ರಭೆ ಮತ್ತಷ್ಟು ಪ್ರಖರವಾಗಿತ್ತು. ಆದರೆ, ಆ ನಂತರದಲ್ಲಿ ಎಥರ್ಕುತುನಿಂದವನ್ ಮಹಾ ಸೋಲು ಕಂಡಿತ್ತು. ಇಂಥಾದ್ದೊಂದು ಸೋಲಿನ ನಂತರವಾದರೂ ಸೂರ್ಯ ಎಚ್ಚರಿಕೆಯಿಂದ ಮುಂದುವರೆದಿದ್ದರೆ ಬಹುಶಃ ಇಂಥಾ ಸೋಲಾಗುತ್ತಿರಲಿಲ್ಲ. ಅಷ್ಟಕ್ಕೂ ಕಂಗುವಾ ಚಿತ್ರದ ಬಗ್ಗೆ ಆರಂಭದಲ್ಲಿಯೇ ನಿರಾಶಾದಾಯಕ ವಾತಾವರಣ ಮೂಡಿಕೊಂಡಿತ್ತು. ಈ ಸಿನಿಮಾ ನಿರ್ದೇಶಕನ ಬಗ್ಗೆಯೇ ಯಾರಲ್ಲಿಯೂ ನಂಬಿಕೆ ಇರಲಿಲ್ಲ. ಆರಂಭದಲ್ಲಿಯೇ ಈ ಬಗೆಗಿನ ವಿಚಾರಗಳ ಹಬ್ಬಿಕೊಂಡಿದ್ದರೂ ಸೂರ್ಯ ತಲೆ ಕೆಡಿಸಿಕೊಳ್ಳದೆ ಮುಂದುವರೆದಿದ್ದರು. ಅದರ ಫಲವಾಗಿಯೇ, ಎಫರ್ಟು ಹಾಕಿದ್ದರೂ ಕೂಡಾ ಕಂಗುವಾ ಕಾಲೆತ್ತಿಕೊಂಡಿದೆ.

ಇಂಥಾ ಹೊತ್ತಿನಲ್ಲಿ ಸೂರ್ಯನ ನಿರ್ಧಾರಗಳಲ್ಲಿನ ಯಡವಟ್ಟುಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಅಷ್ಟಕ್ಕೂ ಈತ ಈ ಹಿಂದೆಯೂ ವೃತ್ತಿ ಬದುಕಲ್ಲಿ ಹೀಗೆಯೇ ಒಂದಷ್ಟು ಘಟ್ಟಗಳಲ್ಲಿ ಮುಗ್ಗರಿಸಿದ್ದಿದೆ. ಅದರಾಚೆಗೂ ಮತ್ತೊಂದು ಗೆಲುವಿನ ಮೂಲಕ ಸಾವರಿಸಿಕೊಂಡು ನಿಂತ ಉದಾಹರಣೆಗಳೂ ಇದ್ದಾವೆ. ಆದರೀಗ ಕಾಲವೆಂಬುದು ಹಿಂದಿನಂತಿಲ್ಲ. ಅದೆಂಥಾ ದೊಡ್ಡ ಸ್ಟಾರ್ ನಟನೇ ಆದರೂ ಸೋಲೊಂದರ ಸುನಾಮಿಯಲ್ಲಿ ವೃತ್ತಿಬದುಕಿನ ಭವಿಷ್ಯವೇ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಈ ನಡುವೆ ಸುಧಾ ಕೊಂಗಾರ ನಿರ್ದೇಶನದ ಚಿತ್ರವನ್ನು ಸೂರ್ಯ ಕೈ ಬಿಟ್ಟಿದ್ದಾರೆ. ಆ ಅವಕಾಶ ಶಿವಕಾರ್ತಿಕೇಯನ್ ಪಾಲಾಗಿದೆ. ಈ ಹಿಂದೆ ರಾಜಮೌಳಿ ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದ ಸೂರ್ಯ, ಆ ಬಗ್ಗೆ ಇತ್ತೀಚೆಗಷ್ಟೇ ಪಶ್ಚಾತ್ತಾಪದ ಮಾತುಗಳನ್ನಾಡಿದ್ದರು. ಕಂಗುವಾ ಸೋಲಿನಿಂದ ಆತ್ಮ ವಿಮರ್ಶೇ ಮಾಡಿಕೊಂಡುಜ, ಎಚ್ಚರದ ಹೆಜ್ಜೆ ಇಡದಿದ್ದರೆ ಸೂರ್ಯನ ಸ್ಟಾರ್ ಡಂಗೆ ಕಂಟಕವಾಗೋದು ಖರೇ!

The post actor surya: ಅಪಾಯದಂಚಿನಲ್ಲಿದೆ ಸೂರ್ಯನ ವೃತ್ತಿ ಬದುಕು! appeared first on Cini Shodha.

suriya: ಸಾಲು ಸಾಲು ಗೆಲುವಿನ ರೂವಾರಿಯಾಗೋ ಲಕ್ಷಣ!
ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ಫ್ಯಾನ್ ಬೇಸ್ ಹೊಂದಿರುವ ನಟ (suriya) ಸೂರ್ಯ. ತಮಿಳು ಚಿತ್ರರಂಗದ ಸ್ಟಾರ್ ಆಗಿದ್ದುಕೊಂಡು, ಇತರೇ ಭಾಷೆಗಳ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವ ಸೂರ್ಯ, ಇತ್ತೀಚಿನ ವರ್ಷಗಳಲ್ಲೇಕೋ ಮಂಕಾದಂತಿದ್ದರು. ಸೂರ್ಯನ ವೃತ್ತಿ ಬದುಕಿನ ಗ್ರಾಫ್ ಅನ್ನೊಮ್ಮೆ ಪರಾಮರ್ಶಿಸಿದರೆ, ಆತ ಅದೆಂಥಾ ನಟ ಎಂಬುದರ ಅರಿವಾಗುತ್ತದೆ. ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ಕಲೆ, ಹೀರೋಗಿರಿಯನ್ನು ಸಂಭಾಳಿಸಿಕೊಂಡು ಸಾಗುವ ಬಗೆಗಳೆಲ್ಲವೂ ಒಟ್ಟಾರೆ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಆ ನಿಟ್ಟಿನಲ್ಲಿ ಸೂರ್ಯನದ್ದು ಅನುಕರಣೀಯ ನಡೆ. ಹಾಗಿದ್ದರೂ ಕೂಡಾ ಈಗೊಂದಷ್ಟು ವರ್ಷಗಳಿಂದ ಆತನನ್ನು ಹಿನ್ನಡೆಯೆಂಬುದು ತಬ್ಬಿಕೊಂಡಂತಿತ್ತು. ಇದೀಗ ಸೂರ್ಯ ಮೈಕೊಡವಿಕೊಂಡು ನಿಂತಂತಿದೆ!

ಕೆಲ ವರ್ಷಗಳಿಂದ ಸಮ್ಮೋಹಕ ಅನ್ನಿಸುವ ಗೆಲುವಿಂದ ದೂರವಿದ್ದರಾದರೂ, ಸೂರ್ಯ ಒಂದಷ್ಟು ಪ್ರಯೋಗಗಳಿಗೆ ಕೈ ಹಚ್ಚಿದ್ದರು. ಆದ ಕಾರತಣ ಬಾಕ್ಸ್ ಆಫೀಸ್ ಹಂಗಾಮದಲ್ಲಿ ಮಿಂದೇಳುವ ಅವಕಾಶವನ್ನು ಅಭಿಮಾನಿ ಬಳಗ ಮಿಸ್ ಮಾಡಿಕೊಂಡಿತ್ತು. ಅದೆಲ್ಲವನ್ನು ದಾಟಿಕೊಂಡು ನಿಂತಿರುವ ಸೂರ್ಯ ಇದೀಗ ಸರಿಕಟ್ಟಾದ ತಂಡಗಳೋಂದಿಗೆ ಕೈ ಜೋಡಿಸಿದ್ದಾರೆ. ಸದ್ಯ ಸೂರ್ಯ ಬಿಗ್ ಬಜೆಟ್ಟಿನ ಕಂಗುವಾ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಅದೇ ಹೊತ್ತಿನಲ್ಲಿ ಸೊರರೈ ಪೋಟ್ರು ನಿರ್ದೇಶಕಿ ಸುಧಾ ಕೋಂಗಾರ ನಿರ್ದೇಶನದ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ. ಚಂದು ಮೊಂಡೇಟಿ ನಿರ್ದೇಸನದ ಚಿತ್ರದ ಮಾತುಕತೆಗಳೂ ಚಾಲ್ತಿಯಲ್ಲಿವೆ.

ಸೂರ್ಯ ಈ ಹಿಂದೆ ಸೊರೆರೈ ಪೋಟ್ರು ಮತ್ತು ಜೈ ಭೀಮ್ ನಂಥಾ ಸಿನಿಮಾಗಳಲ್ಲಿ ನಟಿಸಿದ್ದರು. ಅವೆರಡೂ ನಿಜಕ್ಕೂ ಅದ್ಭುತ ಸಿನಿಮಾಗಳೇ. ಆದರೆ ಅದೇಕೋ ಅವೆರಡೂ ಸಿನಿಮಾಗಳು ಸಹ ಓಟಿಟಿಯಲ್ಲಿ ಬಿಡುಗಡೆಗೊಂಡಿದ್ದವು. ಆ ನಂತರ ಸೂರ್ಯ ನಟಿಸಿದ್ದ ಚಿತ್ರ ಈಟಿ. ದೊಡ್ಡ ಮಟ್ಟದ ಹೈಪಿನೊಂದಿಗೆ ಬಹುಕಾಲದ ನಂತರ ಸಿನಿಮಾ ಮಂದಿರಗಳಲ್ಲಿ ಆ ಚಿತ್ರ ಬಿಡುಗಡೆಗೊಂಡಿತ್ತು. ಆದರೆ ಈಟಿಗೆ ಸವಾಲುಗಳನ್ನು ದಾಟಿಕೊಳ್ಳುವ ಕಸುವಿರಲೇ ಇಲ್ಲ. ಆ ಚಿತ್ರ ಸೂರ್ಯ ವೃತ್ತಿ ಬದುಕಿನ ಬಹುದೊಡ್ಡ ಸೋಲಾಗಿ ದಾಖಲಾಗಿತ್ತು. ಇದೀಗ ಅಂಥಾ ಸೋಲನ್ನೆಲ್ಲ ಜಯಿಸಿಕೊಳ್ಳುವ ಹುರುಪಿನೊಂದಿಗೆ ಸೂರ್ಯ ಅಖಾಡಕ್ಕಿಳಿದಂತಿದೆ. ಆ ಆವೇಗವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಸೂರ್ಯಾಭಿಮಾನಿಗಳಿಗೆ ಹಬ್ಬವಾಗೋದು ಗ್ಯಾರೆಂಟಿ!

The post suriya: ಸಾಲು ಸಾಲು ಗೆಲುವಿನ ರೂವಾರಿಯಾಗೋ ಲಕ್ಷಣ! appeared first on Cini Shodha.