serial – Cini Shodha

director t n seetharam: ಸೀರಿಯಲ್ ಲೋಕದಲ್ಲಿ ಮತ್ತೆ ಮನ್ವಂತರ?
ಈವತ್ತಿಗೆ ಕನ್ನಡ ಕಿರುತೆ ಜಗತ್ತು ಪಕ್ಕಾ ಟಿಆರ್‌ಪಿ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಾ ಪ್ರೇಕ್ಷಕ ವಲಯದಲ್ಲೊಂದು ರೇಜಿಗೆ ಮೂಡಿಕೊಳ್ಳುವಂತೆ ಮಾಡಿದೆ. ಅಲ್ಲಿ ಅದರದ್ದೇ ಆದ ಆರ್ಥಿಕ ಲೆಕ್ಕಾಚಾರಗಳಿದ್ದಾವೆ. ಇಂಥಾ ವಹಿವಾಟುಗಳ ಅಬ್ಬರದಲ್ಲಿ ಕ್ರಿಯೇಟಿವಿಟಿ ಎಂಬುದು ಹೆಚ್ಚೂಕಮ್ಮಿ ಕಳೆದೇ ಹೋಗಿದೆ. ಕಥೆಯ ಹುಟ್ಟೂ ಕೂಡಾ ವಾಹಿನಿ ಮಂದಿಯ ಕೈಯಲ್ಲಿ ಸಿಕ್ಕು ನರಳುವಂಥಾ ಸ್ಥಿತಿ ಕಿರುತೆರೆ ಜಗತ್ತನ್ನು ಮೆಲ್ಲಗೆ ಪ್ರೇಕ್ಷಕರಿಂದ ವಿಮುಖಗೊಳ್ಳುವಂತೆ ಮಾಡುತ್ತಿದೆ. ಕಾಸು ಕೊಟ್ಟ ಮಂದಿಯ ಕೈಯಲ್ಲಿ ರಿಮೋಟು ಇದೆಯಾದರೂ, ಯಾವ ಚಾನೆಲ್ಲು ಬದಲಾಯಿಸಿದರೂ ಮತ್ತದೇ ರೋಧನೆ. ಇಂಥಾ ಹೊತ್ತಿನಲ್ಲಿ ಕಿರುತೆರೆ ಪ್ರೇಕ್ಷಕರು ಹೊರಳಿಕೊಳ್ಳೋದು ದಶಕಗಳ ಹಿಂದಿನ ಧಾರಾವಾಹಿಗಳ ಜಮಾನದತ್ತ!

ಅಂಥಾ ಕಿರುತೆರೆ ಜಗತ್ತಿನ ಸುವರ್ಣ ಯುಗವೊಂದರ ಭಾಗವಾಗಿದ್ದುಕೊಂಡೇ, ಕಿರುತೆ ಪ್ರೇಕ್ಷಕರ ಅಭಿರುಚಿಯನ್ನು ಹೆಚ್ಚುವಂತೆ ಮಾಡಿದ್ದವರು ಟಿ.ಎನ್ ಸೀತಾರಾಮ್. ಮಾಯಾಮೃಗ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸೀತಾರಾಮ್ ಅವರದ್ದು ಯಾವಾಗಲೂ ಭಿನ್ನ ಪಥ. ಈವತ್ತಿಗೂ ಅವರು ನಿರ್ದೇಶನ ಮಾಡಿದ ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನು ಹುಡುಕಿ ಹುಡುಕಿ ಕೇಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಹುಶಃ ಅದು ಕನ್ನಡ ಕಿರುತೆರೆ ಜಗತ್ತಿನ ಪಾಲಿಗೆ ಎಂದಿಗೂ ಘಮ ಕಳೆದುಕೊಳ್ಳದ ಗಂಧವಿದ್ದಂತೆ. ಸೀತಾರಾಮ್ ನಿರ್ದೇಶನದ ಸೀರಿಯಲ್ಲುಗಳ ಟೈಟಲ್ ಸಾಂಗ್ ಕೇಳಿದರೇನೇ ತೊಂಬತ್ತರ ದಶಕದ ಆಚೀಚಿನ ಅನಿರ್ವಚನೀಯ ಅನುಭವವೊಂದು ಎದೆತುಂಬಿಕೊಳ್ಳುತ್ತೆ.

ಹೀಗೆ ಧಾರಾವಾಹಿ ನಿರ್ದೇಶನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಟಿ.ಎನ್ ಸೀತಾರಾಮ್ ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಿಂದ ದೂರ ಸರಿದಿದ್ದಾರೆ. ಇಂಥಾ ಘಳಿಗೆಯಲ್ಲಿ ಅವರು ಮರಳಿ ಬರಬೇಕೆಂಬ ನಿರೀಕ್ಷೆಯಿಟ್ಟುಕೊಂಡವರ ಸಂಖ್ಯೆ ದೊಡ್ಡದಿದೆ. ಅಂಥವರಿಗೆಲ್ಲ ಸಿಹಿ ಸುದ್ದಿಯೊಂದನ್ನು ಖುದ್ದು ಅವರೇ ಹಂಚಿಕೊಂಡಿದ್ದಾರೆ. ಜಗತ್ತಿನ ಕೆಲ ಅಪರೂಪದ ಕಾದಂಬರಿಗಳನ್ನು ದೃಶ್ಯೀಕರಿಸಿ, ಎಪಿಸೋಡುಗಳ ರೂಪದಲ್ಲಿ ಭೂಮಿಕಾಶ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಳಿಸೋದಾಗಿ ಹೇಳಿಕೊಂಡಿದ್ದಾರೆ. ಕಾದಂಬರಿ ಯಾವ ದೇಶದ್ದೇ ಆದರೂ ಅದನ್ನು ಈ ನೆಲದ ಸೊಗಡಿಗೆ ಒಗ್ಗಿಸಿ ಧಾರಾವಾಹಿಯಾಗಿ ಚಿತ್ರೀಕರಿಸೋದಾಗಿ ಸೀತಾರಾಮ್ ಅವರು ಹೇಳಿಕೊಂಡಿದ್ದಾರೆ. ಅಂತೂ ಅವರು ಕಿರುತೆರೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದರೂ, ಯೂಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತೀರ್ಮಾನಿಸಿದಂತಿದೆ.

The post director t n seetharam: ಸೀರಿಯಲ್ ಲೋಕದಲ್ಲಿ ಮತ್ತೆ ಮನ್ವಂತರ? appeared first on Cini Shodha.

deepika das: ಸೋಶಿಯಲ್ ಮೀಡಿಯಾಗೆ ಸೀಮಿತವಾದರೇ ದೀಪಿಕಾ ದಾಸ್?
ಕಿರುತೆರೆಯಲ್ಲಿ ಒಂದು (serial) ಧಾರಾವಾಹಿ ಯಶಸ್ಸಿನ ಲಯ ಹಿಡಿದು ಬಿಟ್ಟರೆ ಸಾಕು; ಅದರ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡವರ ನಸೀಬೇ ಬದಲಾಗಿ ಬಿಡೋದಿದೆ. ಸಾಕಷ್ಟು ಮಂದಿ ಅಂಥಾ ಯಶಸ್ಸಿನ ಕಂದೀಲು, ಹಿರಿತೆರೆಯ ದಿಕ್ಕನ್ನು ಬೆಳಗಿ ಬಿಡುತ್ತದೆಂಬ ನಂಬಿಕೆ ಹೊಂದಿರುತ್ತಾರೆ. ಅದು ಕೆಲವೊಮ್ಮೆ ನಿಜವಾಗಿದೆ. ಹಲವಾರು ಬಾರಿ ಸುಳ್ಳಾಗಿದೆ. ಹಾಗೆ ನಿರೀಕ್ಷೆಯೆಲ್ಲ ಕಮರಿದ ಬಳಿಕ ಕೆಲ ನಟ ನಟಿಯರು ಗೊಂದಲದ ನಡುವೆಯೇ ಮಂಕಾಗೋದೂ ಇದೆ. ಆಯ್ಕೆಯ ಗೊಂದಲ, ಸಣ್ಣಗಿನ ಬಿಗುಮಾನಗಳೆಲ್ಲವೂ ಸೇರಿಕೊಂಡು ನೇಪಥ್ಯಕ್ಕೆ ಸರಿದವರ ಸಂಖ್ಯೆಯೂ ಸಾಕಷ್ಟಿದೆ. ಒಂದು ಕಾಲದಲ್ಲಿ (naagini serial) ನಾಗಿಣಿಯಾಗಿ ಬುಸುಗುಡುತ್ತಾ, ಕಿರುತೆರೆ ಪ್ರೇಕ್ಷಕರನ್ನೆಲ್ಲ ಅಪಾದಮಸ್ತಕ ಆವರಿಸಿಕೊಂಡಿದ್ದರಲ್ಲಾ ದೀಪಿಕಾ ದಾಸ್? (deepika das) ಆಕೆಯೂ ಅಂಥಾ ನೇಪಥ್ಯದ ಪಥದಲ್ಲಿದ್ದಾರಾ ಅಂತೊಂದು ಅನುಮಾನ ಖುದ್ದು ಅಭಿಮಾನಿಗಳನ್ನೇ ಕಾಡುತ್ತಿದೆ.

ಕೊಂಚ ಅಂತರ್ಮುಖಿಯಂತೆ ಕಾಣುತ್ತಾ, ಅಹಮ್ಮಿಕೆಯಂತೆ ಗೋಚರಿಸೋ ಪದರಿನೊಳಗೊಂದು ಮಮಕಾರವನ್ನು ಕಾಪಿಟ್ಟುಕೊಂಡಿರುವಾಕೆ ದೀಪಿಕಾ ದಾಸ್. ಬಿಗ್ ಬಾಸ್ ಶೋಗಳ ಮೂಲಕ ಆಕೆಯ ವ್ಯಕ್ತಿತ್ವದ ಮತ್ತೊಂದು ಮಜಲು ಪ್ರೇಕ್ಷಕರೆದುರು ಜಾಹೀರಾಗಿತ್ತು. ಹಾಗೆ ದೀಪಿಕಾ ಬಿಗ್ ಬಾಸ್ ಶೋಗೆ ಬಂದ ನಂತರದಲ್ಲಿ ಅವಕಾಶಗಳು ಸಾಲುಗಟ್ಟೋದೂ ಇದೆ. ಪ್ರತಿಭೆ ಸೇರಿದಂತೆ, ಎಲ್ಲವನ್ನೂ ಹೊಂದಿರುವ ದೀಪಿಕಾ ಕೂಡಾ ಬಿಗ್ ಬಾಸ್ ಬಳಿಕ ಮಿಂಚಬಹುದೆಂದು ಅಂದುಕೊಳ್ಳಲಾಗಿತ್ತು. ಆದರೆ, ಬರಬರುತ್ತಾ ಅದೂ ಸುಳ್ಳಾದಂತಿದೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ದೀಪಿಕಾ ಬರೀ ಸೋಶಿಯಲ್ ಮೀಡಿಯಾಗಳಿಗೆ ಮಾತ್ರವೇ ಸೀಮಿತವಾದಂತಿದೆ!

ಬಿಗ್ ಬಾಸ್ ಶೋನಿಂದ ಹೊರ ಬಂದ ನಂತರ ದೀಪಿಕಾ ಮತ್ತು ಸಹ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಸುತ್ತ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ಅವರಿಬ್ಬರು ಇನ್ನೇನು ಮದುವೆಯಾಗಿಯೇ ಬಿಡುತ್ತಾರೆಂಬರ್ಥದಲ್ಲಿಯೂ ಕಪೋಲಕಲ್ಪಿತ ಸುದ್ದಿಗಳು ಹರಿದಾಡಿದ್ದವು. ಅದರ ಹಿಂದೆ ಎಂಥಾ ಕಿಸುರಿದ್ದರೂ, ಅಂಥಾ ಅಂತೆಕಂತೆಗಳೇ ದೀಪಿಕಾಳು ಒದಷ್ಟು ಕಾಲ ಚಾಲ್ತಿಯಿಟ್ಟಿದ್ದಂತೂ ಸತ್ಯ. ಆ ನಂತರದಲ್ಲಿ ದೀಪಿಕಾ ಅಲ್ಲಿಲ್ಲಿ ರೌಂಡು ಹೊಡೆಯೋದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದೆಲ್ಲ ನಡೆಯುತ್ತಿದೆ. ಅದರ ಸುತ್ತ ಒಂದಷ್ಟು ಸುದ್ದಿಗಳೂ ಆಗುತ್ತಿವೆ. ಆದರೆ, ಆಕೆಯ ವೃತ್ತಿ ಬದುಕಿನ ದಿಕ್ಕು ದೆಸೆಗಳು ಮಾತ್ರ ಈ ಕ್ಷಣಕ್ಕೂ ಸ್ಪಷ್ಟವಿಲ್ಲ.

ಇದೆಲ್ಲವನ್ನೂ ನೋಡಿದರೆ, ದೀಪಿಕಾ ದಾಸ್ ಗೆ ಅವಕಾಶಗಳ ಕೊರತೆ ಕಾಡುತ್ತಿದೆಯಾ ಅಂತೊಂದು ಗುಮಾನಿ ಸಹಜವಾಗಿಯೇ ಕಾಡುತ್ತದೆ. ಒಂದು ಕೋನದಿಂದ ಅದರಲ್ಲಿ ಸತ್ಯವಿರುವಂತೆಯೂ ಭಾಸವಾಗುತ್ತದೆ. ಸಿನಿಮಾ ರಂಗದಲ್ಲಿ ನಾಯಕಿಯಾಗಿ, ಒಳ್ಳೆ ಪಾತ್ರಗಳಲ್ಲಿ ಮಿಂಚುವ ಅವಕಾಶಗಳ ದೀಪಿಕಾ ಮುಂದಿದದವು. ಆದರೆ ಅವ್ಯಾವುವೂ ಫಲಿಸಿದಂತಿಲ್ಲ. ಈ ಹಿಂದೆಯೂ ಒಂದಷ್ಟು ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದರು. ಆದರೆ, ಅವ್ಯಾವುವೂ ಬರಖತ್ತಾಗಿರಲಿಲ್ಲ. ಇದೀಗ ಮತ್ತೆಇರುತೆರೆಗೆ ಮರಳಲು ಆಕೆಗೆ ಇಷ್ಟವಾಗುತ್ತಿಲ್ಲ ಅನ್ನಿಸುತ್ತಿದೆ. ಈ ನಡುವೆ ಅಂತರಪಟ ಅಂತೊಂದು ಧಾರಾವಾಹಿಯಲ್ಲಿ ಆಕೆ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದೂ ಕೂಡಾ ನೋಡ ನೋಡುತ್ತಲೇ ಗಾಯಬ್ ಆಗಿದೆ. ಇದೆಲ್ಲ ಏನೇ ಇದ್ದರೂ ಕಿರುತೆರೆಯಲ್ಲಿ ಗೆದ್ದು ಬುಸುಗುಟ್ಟಿದ್ದ ನಾಗಿಣಿ, ಹಿರಿತೆರೆಯಲ್ಲಿಯೂ ಗೆಲುವಿನ ಹಾದಿ ಹಿಡಿಯುವಂತಾಗಲಿ ಎಂಬುದು ಅಭಿಮಾನಿಗಳ ಬಯಕೆ!

The post deepika das: ಸೋಶಿಯಲ್ ಮೀಡಿಯಾಗೆ ಸೀಮಿತವಾದರೇ ದೀಪಿಕಾ ದಾಸ್? appeared first on Cini Shodha.

supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!
ಕಿರುತೆರೆಯಿಂದ ಹಿರಿತೆರೆಗೆ (film industry) ಬಂದು ಮಿಂಚಿದ ನಾಯಕ, ನಾಯಕಿಯರದ್ದೊಂದು ದಂಡು ಕನ್ನಡ ಚಿತ್ರರಂಗದಲ್ಲಿದೆ. ಹಾಗೆ ನೋಡಿದರೆ, ಸಿನಿಮಾ ರಂಗಕ್ಕೆ ಹೆಜ್ಜೆಯಿಡುವವರೆಲ್ಲ ಕಿರುತೆರೆಯನ್ನು ಮೊದಲ ಮೆಟ್ಟಿಲೆಂದೇ ಪರಿಭಾವಿಸುತ್ತಾರೆ. ಹಾಗೆ ಧಾರಾವಾಹಿಗಳಲ್ಲಿ ನಟಿಸಿ ಒಂದಷ್ಟು ಹೆಸರು ಮಾಡುತ್ತಲೇ ಸಿನಿಮಾ ರಂಗಕ್ಕೆ ಅಡಿಯಿರಿಸೋದು ಮಾಮೂಲು. ಆದರೆ, ಸಿನಿಮಾ ರಂಗದಲ್ಲಿ ಅದೃಷ್ಟವೆಂಬುದು ಎಲ್ಲರಿಗೂ ಒಲಿದು ಬರೋದಿಲ್ಲ. ಕೆಲವೇ ಕೆಲ ಮಂದಿಯನ್ನು ಮಾತ್ರವೇ ಸಿನಿಮಾರಂಗ ಬರಸೆಳೆದು ಅಪ್ಪಿಕೊಳ್ಳುತ್ತೆ. ಅಂಥಾದ್ದೊಂದು ಬೆಚ್ಚಗಿನ ಅಪ್ಪುಗೆ ಪಡೆಯೋ ಎಲ್ಲ ಲಕ್ಷಣಗಳನ್ನೂ ಹೊಂದಿರುವಾಕೆ (supritha sathyanarayan) ಸುಪ್ರಿತಾ ಸತ್ಯನಾರಾಯಣ್. ಬಹುಶಃ ಈ ಹೆಸರು ಹೇಳಿದರೆ ಬಹುತೇಕರಿಗೀಕೆಯ ಗುರುತು ಹತ್ತೋದು ಕಷ್ಟ. (seetha vallabha) ಸೀತಾವಲ್ಲಭ ಧಾರಾವಾಹಿಯ ನಾಯಕಿ ಎಂದರೆ ಸಾದಾ ಸೀದಾ ಸ್ವರೂಪದ, ಸ್ನಿಗ್ಧ ಸೌಂದರ್ಯದ ಸುಪ್ರಿತಾ ತಮ್ಮ ಮನೆ ಮಗಳೆಂಬಂಥಾ ಭಾವ ಮೂಡಿಕೊಳ್ಳಬಹುದೇನೋ!

ಸೀತಾ ವಲ್ಲಭ ಧಾರಾವಾಹಿ ಒಂದಷ್ಟು ಕಂತುಗಳಲ್ಲಿ ಪ್ರಸಾರವಾಗಿತ್ತು. ಅದರ ನಾಯಕಿಯಾಗಿ, ಅನಾಥ ಭಾವ ಹೊದ್ದುಕೊಂಡ ಹುಡುಗಿಯಾಗಿ ನಟಿಸೋ ಮೂಲಕ ಸುಪ್ರಿತಾ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಳು. ಈ ಹುಡುಗಿ ನಟನೆಯಲ್ಲಿ ದೊಡ್ಡ ಮಟ್ಟಕ್ಕೇರುತ್ತಾಳೆಂಬಂಥಾ ಭರವಸೆ ಕೂಡಾ ಮೂಡಿಕೊಂಡಿತ್ತು. ಇದೆಲ್ಲದರ ನಡುವೆ ಆ ಧಾರಾವಾಹಿ ಅದೇಕೋ ಪ್ರಸಾರ ನಿಲ್ಲಿಸಿದ ನಂತರ ಕಿರುತೆರೆ ಪ್ರೇಕ್ಷಕರು ನಿಜಕ್ಕೂ ಈಕೆಯನ್ನು ಮಿಸ್ ಮಾಡಿಕೊಳ್ಳಲಾರಂಭಿಸಿದ್ದು ನಿಜ. ಇದೇ ಹೊತ್ತಲ್ಲಿ ಸದ್ದಿಲ್ಲದೆ ಹಿರಿತೆರೆ ಎಂಟ್ರಿಗೆ ಭೂಮಿಕೆ ಸಿದ್ಧಪಡಿಸಿಕೊಳ್ಳಲಾರಂಭಿಸಿದ್ದ ಸುಪ್ರಿತಾ, ಇದೀಗ ಶಾಲಿವಾಹನ ಶಕೆ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿತ್ತು. ಇದೀಗ ಆಕೆ ನಾಯಕಿಯಾಗಿರುವ ಮೆಲೋಡಿ ಡ್ರಾಮಾ ಎಂಬ ಮತ್ತೊಂದು ಚಿತ್ರ ಸದ್ದೇ ಇಲ್ಲದೆ ಬಿಡುಗಡೆಗೆ ಅಣಿಯಾಗಿದೆ!

ಸಾಮಾನ್ಯವಾಗಿ ಹೀಗೆ ಹಿರಿತೆರೆಗೆ ಆಗಮಿಸುವ ಪ್ರತೀ ನಟ ನಟಿಯರು ತಮ್ಮದೇ ಅಭಿರುಚಿಯ, ಡಿಫರೆಂಟಾದ ಪಾತ್ರವನ್ನು ಧ್ಯಾನಿಸುತ್ತಿರುತ್ತಾರೆ. ಅದು ದಕ್ಕುವುದು ಮಾತ್ರ ಅದೆಷ್ಟೋ ಗಾವುದದಷ್ಟು ಅವುಡುಗಚ್ಚಿ ಸಾಗಿದ ನಂತರವೇ. ಈ ವಿಚಾರದಲ್ಲಿ ಸುಪ್ರಿತಾ ನಿಜಕ್ಕೂ ಅದೃಷ್ಟವಂತೆ. ಯಾಕೆಂದರೆ, ಮೊದಲ ಹೆಜ್ಜೆಯಲ್ಲಿಯೇ ಭಿನ್ನವಾದ ಪಾತ್ರ ಆಕೆಗೆ ಸಿಕ್ಕಿದೆ. ಗಿರೀಶ್ ನಾಯಕನಾಗಿ ನಟಿಸಿ, ನಿರ್ದೇಶನ ಮಾಡುತ್ತಿರುವ ಶಾಲಿವಾಹನ ಶಕೆ ಚಿತ್ರದಲ್ಲಿ ಹಳ್ಳಿ ಹಿನ್ನೆಲೆಯ ಕಾಲೇಜು ಹುಡುಗಿಯಾಗಿ ಸುಪ್ರಿತಾ ನಟಿಸುತ್ತಿದ್ದಾಳಂತೆ. ಆ ಪಾತ್ರದ ಬಗ್ಗೆ ಆಕೆಯೇ ಮೋಹಗೊಂಡಿದ್ದಾಳೆ. ಯಡಿಯೂರು ಶೈಲಿಯ ಭಾμÉಯೊಂದಿಗೆ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳಲಿರೋದರ ಬಗ್ಗೆ ಥ್ರಿಲ್ ಆಗಿದ್ದಾಳೆ. ಅದರ ಬೆನ್ನಲ್ಲಿಯೇ ಸದ್ದು ಮಾಡುತ್ತಿರುವ ಮೆಲೋಡಿ ಡ್ರಾಮಾದಲ್ಲಿ ಸುಪ್ರಿತಾ ಬ್ಯಾಂಕ್ ಉದ್ಯೋಗಿಯಾಗಿ, ಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾಳೆ.

ಈ ಹಿಂದೆ ರುಗ್ಣ ಎಂಬ ಚಿತ್ರದಲ್ಲಿ ಬರಹಗಾರ್ತಿಯಾಗಿ ಕಂಗೊಳಿಸಿದ್ದ ಸುಪ್ರಿಯಾ ಪಾಲಿಗಿದು ಮೂರನೇ ಚಿತ್ರ. ನಿಜ ಜೀವನದಲ್ಲಿಯೂ ಬರವಣಿಗೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಸುಪ್ರಿಯಾ, ಅದುವೇ ಕಥೆಯನ್ನು ಆರಿಸಿಕೊಳ್ಳುವ ಭಿನ್ನ ಅಭಿರುಚಿಯನ್ನೂ ಕೊಡಮಾಡಿದೆ. ಮಹಿಳಾ ಕೇಂದ್ರಿತ ಪಾತ್ರಗಳು ಮಾತ್ರಚವಲ್ಲದೇ, ಎಲ್ಲ ಬಗೆಯ ಪಾತ್ರಗಳತ್ತಲೂ ಆಕ್ತಿ ಹೊಂದಿರುವ ಈ ಹುಡುಗಿ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೇ ದಟ್ಟವಾಗಿ ಗೋಚರಿಸುತ್ತಿವೆ. ಕೆಲವೇ ಕಂತುಗಳಷ್ಟು ಪ್ರಸಾರವಾಗಿದ್ದರೂ ಸೀತಾ ವಲ್ಲಭ ಧಾರಾವಾಹಿಯ ಮೂಲಕ ಮನಗೆದ್ದಿದ್ದ ಸುಪ್ರಿತಾಗೀಗ ಹಿರಿತೆರೆಯಲ್ಲಿಯೂ ಸುಗ್ಗಿ ಸಂಭ್ರಮ ಶುರುವಾಗಿದೆ!

The post supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ! appeared first on Cini Shodha.