sapthasagaradacheello – Cini Shodha

rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ?
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು. ಈಕೆ ಸಪ್ತಸಾಗರದಾಚೆಯ ನಂತರ ಸೀದಾ ತಮಿಳಿಗೆ ಹಾರಿ ವಿಜಯ್ ಸೇತುಪತಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಹಿನ್ನಡೆಯ ಹಿಂಚುಮುಂಚಲ್ಲಿಯೇ ಅಚ್ಚರಿದಾಯಕವಾಗಿ ಈ ಹುಡುಗಿಕಗೆ ದೊಡ್ಡ ದೊಡ್ಡ ಅವಕಾಶಗಳು ಒಲಿದು ಬರುತ್ತಿವೆ. ಇದೀಗ ರುಕ್ಮಿಣಿಗೆ ರಾಕಿ ಭಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿದೆ.

ರೆಟ್ರೋ ಶೈಲಿಯ ಟಾಕ್ಸಿಕ್ ಚಿತ್ರ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ಹುಮಾ ಖುರೇಶಿ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹತ್ವದ ಪಾತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಡುಕಾಟ ನಟೆಸುತ್ತಿದ್ದರು. ಕಡಸೆಗೂ ರಾಕಿ ಭಾಯ್ ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರುಕ್ಮಿಣಿ ಯಾವ ಥರದ ಪಾತ್ರದಲ್ಲಿ ನಟಿಸಲಿದ್ದಾರೆಂಬುದೂ ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.

ರುಕ್ಮಿಣಿ ವಸಂತ್ ಪಾಲಿಗೆ ಟಾಕ್ಸಿಕ್ ಮೂಲಕ ಎರಡನೇ ಪ್ಯಾನಿಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಂತಾಗಿದೆ. ಈಗಾಗಲೇ ಕಾಂತಾರ ಅಧ್ಯಾಯ ಒಂದರಲ್ಲಿಯೂ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಂತಾರಾ ಅಂತೂ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿ ಮಾಡೋದು ಪಕ್ಕಾ. ಅದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಕೂಡಾ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಲಕ್ಷಣಗಳಿದ್ದಾವೆ. ಈ ಎಲ್ಲವನ್ನೂ ನೋಡಿದರೆ ರುಕ್ಮಿಣಿ ವಸಂತ್ ನಿಸ್ಸಂದೇಹವಾಗಿಯೂ ಪ್ಯಾನಿಂಡಿಯಾ ಮಟ್ಟದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಹಾಗಂತ ಸಿನಿಮಾ ಪ್ರೇಮಿಗಳೇ ಅಭಿಪ್ರಾಯ ಪಡುತ್ತಿದ್ದಾರೆ.

The post rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ? appeared first on Cini Shodha.

rukmini vasanth: ಬಾಲಿವುಡ್ಡಿಗಿನ್ನು ದಾರಿ ದೂರವಿಲ್ಲ!
ಕನ್ನಡದ ಕೆಲ ನಟಿಯರ ಪಾಲಿಗೆ ಅದೃಷ್ಟವೆಂಬುದು ಒಲಿದು ಬರೋದೇ ಅಚ್ಚರಿ. ಒಂದು ಸಿನಿಮಾ ಹಿಟ್ ಆಗುತ್ತಲೇ ಕನ್ನಡದಲ್ಲೂ ಬ್ಯುಸಿಯಾಗಿ, ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಪಡೆದು ಮಿಂಚಿದ ಒಂದಷ್ಟು ನಟಿಯರಿದ್ದಾರೆ. ಇದೀಗ ಆ ಸಾಲಿಗೆ ರುಕ್ಮಿಣಿ ವಸಂತ್ ಕೂಡಾ ಸೇರ್ಪಡೆಯಾಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ನಟಿಯಾಗಿ ಆಗಮಿಸಿದ್ದವರು ರುಕ್ಮಿಣಿ. ಆರ್ಧ್ರ ಭಾವಗಳ ಆ ಪಾತ್ರವನ್ನು ಆಕೆ ಆವಾಹಿಸಿಕೊಂಡ ರೀತಿಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದರು. ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದ ರುಕ್ಮಿಣಿ ಮೊದಲ ಹೆಜ್ಜೆಯಲ್ಲಿಯೇ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರು. ಅಂಥಾದ್ದೊಂದು ಹಠಾತ್ ಗೆಲುವಿನ ಪ್ರಭೆಯಲ್ಲಿ ಮಿಂದೇಳುತ್ತಿರುವ ರುಕ್ಮಿಣಿಗೀಗ ಡಾರ್ಲಿಂಗ್ ಪ್ರಭಾಸ್ ಗೆ ನಾಯಕಿಯಾಗುವ ಅವಕಾಶ ಒಲಿದು ಬಂದಂತಿದೆ!

ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರಕ್ಕೆ ಈಕೆಯೇ ನಾಯಕಿ ಎಂಬಂಥಾ ಸುದ್ದಿ ಹಬ್ಬಿಕೊಂಡಿದೆ. ಅದರ ಬೆನ್ನಲ್ಲಿಯೇ ಪ್ರಶಾಂತ್ ನೀಲ್ ಮತ್ತು ಜ್ಯೂ ಎನ್ಟಿಆರ್ ಕಾಂಬಿನೇಷನ್ನಿನ ಸಿನಿಮಾಕ್ಕೂ ರುಕ್ಮಿಣಿ ನಾಯಕಿಯಾಗಲಿದ್ದಾರೆಂಬ ಸುದ್ದಿ ಹಬ್ಬಿಕೊಂಡಿದೆ. ಈ ಬಗೆಗಿನ ಅಧಿಕೃತ ಮಾಹಿತಿಗಳು ಹೊರಬಿದ್ದರೆ, ಖಂಡಿತವಾಗಿಯೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ರುಕ್ಮಿಣಿಯ ಶಖೆ ಶುರುವಾಯ್ತೆಂದೇ ಅರ್ಥ. ಬಹುಶಃ ಸಲೀಸಾಗಿ ಆಕೆ ರಶ್ಮಿಕಾ ಮಂದಣ್ಣ, ಶ್ರೀಲೀಲಾಳಂಥಾ ನಟಿಯರನ್ನು ಹಿಂದಿಕ್ಕಿ ಮಿಂಚುವಂತಾದರೂ ಅಚ್ಚರಿಯೇನಿಲ್ಲ. ಹಾಗಂತ ತೆಲುಗು ಸೇರಿದಂತೆ ಅನೇಕ ಭಾಷೆಯ ಚಿತ್ರರಂಗಗಳ ಮಂದಿಯೇ ಭವಿಷ್ಯ ನಿಡಿಯಲಾರಂಭಿಸಿದ್ದಾರೆ. ಅಂಥಾದ್ದೊಂದು ಮಟ್ಟ ಮುಟ್ಟಬಲ್ಲ ಛಾತಿ ಖಂಡಿತವಾಗಿಯೂ ಕನ್ನಡದ ಹುಡುಗಿ ರುಕ್ಮಿಣಿಗಿದ್ದೇ ಇದೆ.

ಹಾಗೆನೋಡಿದರೆ, ಈ ಹುಡುಗಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೂಡಿ ಬಂದಿದ್ದೇ ಅಚಾನಕ್ಕಗಿ. ಅದಾಗಲೇ ನಟಿಯಾಗಬೇಕೆಂಬ ಕನಸಿಟ್ಟುಕೊಂಡಿದ್ದ ರುಕ್ಮಿಣಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಿಗಾಗಿ ಆಡಿಷನ್ ನಡೆಸುತ್ತಿರುವ ವಿಚಾರ ಗಮನಕ್ಕೆ ಬಂದಿತ್ತು. ತುಸು ಅಳುಕಿನೊಂದಿಗೆ ಚಿತ್ರತಂಡವನ್ನು ಸಂಪರ್ಕಿಸಿದ್ದ ರುಕ್ಮಿಣಿ, ನಂತರ ಒಂದಷ್ಟು ಸ್ಪರ್ಧೆಯನ್ನು ದಾಟಿಕೊಂಡು ನಾಯಕಿಯಾಗಿ ಆಯ್ಕೆಯಾಗಿದ್ದರು. ಅದಕ್ಕೆ ತನ್ನ ಪ್ರತಿಭೆ ಮಾತ್ರವಲ್ಲದೇ ಅದೃಷ್ಟವೂ ಕಾರಣವೆಂಬ ಮನಃಸ್ಥಿತಿ ಹೊಂದಿರುವ ರುಕ್ಮಿಣಿಯೀಗ ತಮಿಳು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಅದೇ ಹೊತ್ತಿನಲ್ಲಿ ತೆಲುಗಿನಲ್ಲಿಯೂ ಒಂದಷ್ಟು ಅವಕಾಶಗಳು ಅರಸಿ ಬರಲಾರಂಭಿಸಿವೆ.

ಒಂದು ವೇಳೆ ಈಗ ತೆಲುಗು ಚಿತ್ರರಂಗದಲ್ಲಿ ಹಬ್ಬಿಕೊಂಡಿರುವ ಸುದ್ದಿಗಳು ನಿಜವಾದರೆ, ಖಂಡಿತವಾಗಿಯೂ ಅದು ರುಕ್ಮಿಣಿ ಪಾಲಿಗೆ ಜಾಕ್ ಪಾಟ್. ಅಲ್ಲಿಂದ ಬಾಲಿವುಡ್ ಎಂಟ್ರಿಗೆ ಹಾದಿ ಮತ್ತಷ್ಟು ಸಲೀಸಾಗುತ್ತದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್ಟಿಆರ್ ಗೆ ನಾಯಕಿಯಾಗಬೇಕೆಂದು ಬಾಲಿವುಡ್ ನಟಿಯರೇ ಪ್ರಯತ್ನ ಪಡುತ್ತಾರೆ. ಅಂಥಾದ್ದರಲ್ಲಿ ಆ ಅವಕಾಶ ರುಕ್ಮಿಣಿಗೆ ತಾನೇತಾನಾಗಿ ಒಲಿದು ಬಂದರೆ ಅದು ಅದೃಷ್ಟವಲ್ಲದೆ ಬೇರೇನಲ್ಲ. ಇಂಥಾ ಸುದ್ದಿಗಳ ಕೇಂದ್ರ ಬಿಂದುವಾಗಿರುವ ರುಕ್ಮಿಣಿ ವ್ಯಕ್ತಿಗತವಾಗಿಯೂ ಗಮನ ಸೆಳೆಯೋ ನಟಿ. ಥಳುಕು ಬಳುಕಿನ ಧಿಮಾಕುಗಳನ್ನು ಮೀರಿಕೊಂಡಂತಿರುವ ಈಕೆ ಒಂದಷ್ಟು ಸೂಕ್ಷ್ಮ ಮನಃಸ್ಥಿತಿಯಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಇಂಥಾ ಹುಡುಗಿ ಕನ್ನಡದಲ್ಲಿ ಸಕ್ರಿಯವಾಗಿದ್ದುಕೊಂಡೇ ಪರಭಾಷೆಗಳಲ್ಲೂ ಮಿಂಚಿದರೆ ಕನ್ನಡಗರೆಲ್ಲ ಖುಷಿ ಪಡದಿರಲು ಸಾಧ್ಯವೇ?

The post rukmini vasanth: ಬಾಲಿವುಡ್ಡಿಗಿನ್ನು ದಾರಿ ದೂರವಿಲ್ಲ! appeared first on Cini Shodha.

saptha sgagaradache ello review: ಮುಗಿದ ಮೇಲೂ ಮನಸಿಗಂಟುತ್ತೆ ಗಾಢ ಪ್ರೇಮದ ಪರಾಗ!
ಸಪ್ತ ಸಾಗರದಾಚೆ ಎಲ್ಲೋ (saptha sagaradache ello) ಎಂಬ ಗೋಪಾಕೃಷ್ಣ ಅಡಿಗರ (poet gopalakrishna adiga) ಕವಿತೆಯ ಸಾಲೊಂದು ಸಿನಿಮಾ ಶೀರ್ಷಿಕೆಯಾದಾಗಲೇ, ಸಿನಿಮಾ ಪ್ರೇಮಿಗಳ ಮನಸಲ್ಲಿ ಪುಳಕದ ಪತಂಗ ಸರಿದಾಡಲಾರಂಭಿಸಿತ್ತು. ಆ ಶೀರ್ಷಿಕೆಯಲ್ಲಿಯೇ ಒಟ್ಟಾರೆ ಕಥನದ ಭಾವ ತೀವ್ರತೆ, ಸೂಕ್ಷ್ಮವಂತಿಕೆ ಅನಾವರಣಗೊಂಡಿತ್ತು. ಹೇಳಿಕೇಳಿ ನೇರವಾಗಿ ಎದೆಗೆ ತಾಕುವ ಕಥೆಗಳನ್ನು ಮುಟ್ಟೋದರಲ್ಲಿ (director hemanth)  ನಿರ್ದೇಶಕ ಹೇಮಂತ್ ನಿಸ್ಸೀಮ. ಹಾಗಿರುವಾಗ, ಸಪ್ತ ಸಾಗರದಾಚೆ ಅಂದಾಜಿಸಲಾಗದ ಬೆರಗುಗಳಿವೆ ಎಂಬುದು ಬಹುತೇಕರಿಗೆ ಸ್ಪಷ್ಟವಾಗಿತ್ತು. ಆ ನಂತರ ಒಂದಷ್ಟು ಹೊಳಹುಗಳನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿತ್ತಲ್ಲಾ? ತಾನೇ ತಾನಾಗಿ ಈ ಚಿತ್ರದ ಬಗೆಗೆ ಕುತೂಹಲ ಕಾವೇರಿಕೊಳ್ಳಲಾರಂಭಿಸಿತ್ತು. (rkshith shetty) ರಕ್ಷಿತ್ ಮತ್ತು ರುಕ್ಮಿಣಿ ವಸಂತ್ ಕಾಂಬಿನೇಷನ್ನು, ಪ್ರತಿಭಾನ್ವಿತ ತಂಡದ ಸಾಹಚರ್ಯ ಯಾವ ರೀತಿಯಲ್ಲಿ ಮೋಡಿ ಮಾಡಿರಬಹುದೆಂಬ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ; ನೋಡುಗರ ಕಣ್ಣಂಚಿಗಿಳಿದ ಹನಿಗಳು, ಯಾವುದೇ ಬಿಲ್ಡಪ್ಪುಗಳ ಹಂಗಿಲ್ಲದೆ ತಲ್ಲಣಿಸುವಂತೆ ಮಾಡುವ ಮ್ಯಾಜಿಕ್ಕಿನ ಮೂಲಕ!

ಪ್ರೇಮವೆಂಬುದು ಸಿನಿಮಾ ಚೌಕಟ್ಟಿಗೆ ಯಾವತ್ತಿದ್ದರೂ ತಾಜಾತನದಿಂದಲೇ ಒಗ್ಗಿಕೊಳ್ಳುವ ಮಾಯೆ. ಪ್ರೇಮ ಕಥನದ ಚುಂಗು ಹಿಡಿದು ಹೊರಟವರ ಕ್ರಿಯಾಶೀಲತೆ, ಸ್ವಂತಿಕೆಯ ಮೇಲೆ ಅದರ ಪರಿಣಾಮ ನಿಂತಿರುತ್ತೆ. ಆ ನಿಟ್ಟಿನಲ್ಲಿ ಹೇಳೋದಾದರೆ, ನಿರ್ದೇಶಕ ಹೇಮಂತ್ ಈ ಚಿತ್ರವನ್ನು ಮೆಲುವಾಗಿ ಆವರಿಸಿಕೊಂಡು ಬಿಡುವ ದೃಷ್ಯಕಾವ್ಯವಾಗಿಸುವಲ್ಲಿ ಗೆದ್ದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಎರಡು ಭಾಗಗಳಲ್ಲಿ ತೆರೆಗಾಣುವ ಸುದ್ದಿ ಹೊರ ಬಿದ್ದಾಕ್ಷಣ ಇದು ಬೇಕಿತ್ತಾ ಎಂಬಂಥಾ ಪ್ರಶ್ನೆ ಹಲವರಲ್ಲಿ ಮೂಡಿಕೊಂಡಿತ್ತು. ಹಾಗೊಂದು ಪ್ರಶ್ನೆ ಮೂಡಿದ ಮನಸುಗಳಲ್ಲೇ, ಬಿ ಸೈಡ್ ಬಗ್ಗೆ ಕುತೂಹಲ ಮಿಸುಕಾಡುವಂತೆ ಮಾಡಿದೆ ಎಂದರೆ, ಸಪ್ತ ಸಾಗರದಾಚೆಯ ಬೆರಗುಗಳ ಬಗ್ಗೆ ಬೇರೇನೂ ವಿವರಿಸುವ ಅವಶ್ಯಕತೆಯಿಲ್ಲ.

ಇಲ್ಲಿರೋದು ಮಧ್ಯಮ ವರ್ಗದ ಎರಡು ಮನಸುಗಳ ನಡುವೆ ಪ್ರವಹಿಸುವ ಗಾಢ ಪ್ರೇಮ. ವಿನಾ ಕಾರಣ ರೊಮ್ಯಾಂಟಿಕ್ ಅಂಶಗಳನ್ನು ಬೆರೆಸದೆ, ಬಿಲ್ಡಪ್ಪುಗಳಲ್ಲಿ ದೃಷ್ಯಗಳನ್ನು ಮೆರೆಸದೆ ಸಹಾಜಾತಿ ಸಹಜವಾಗಿ ಭಾವನೆಗಳು ಇಲ್ಲಿ ಅನುರಣಿಸುತ್ತವೆ. ಸಿನಿಮಾ ಶುರುವಾಗುತ್ತಲೇ ನಾಯಕ ನಾಯಕಿಯ ಪ್ರೇಮ ಕಥೆ ತೆರೆದುಕೊಳ್ಳುತ್ತದೆ. ಆಕೆ ಕಡಲೂರಿನಿಂದ ಬಂದ ಹುಡುಗಿ. ಗಿಜಿಗುಡುವ ಊರಲ್ಲಿ ನಿಂತಿದ್ರೂ ಕಡನ್ನೇ ಧ್ಯಾನವಾಗಿಸಿಕೊಂಡವಳು. ಆತ ಬದುಕಿಗಾಗಿ ಒಂದು ವೃತ್ತಿ ಮಾಡುತ್ತಾ, ಶ್ರೀಮಂತಿಕೆಯ ವಾತಾವರಣದಲ್ಲಿದ್ದರೂ ಮಧ್ಯಮ ವರ್ಗದ ತಲ್ಲಣಗಳನ್ನು ಹಾಸಿ ಹೊದ್ದಂತಿರುವ ಹುಡುಗ. ಆದರೆ, ಆತನನ್ನು ಆವರಿಸಿಕೊಂಡ ಪ್ರೇಮ ಎಲ್ಲ ಮಿತಿಗಳನ್ನು ಮೀರಿ, ಅಸಾಧ್ಯವೆಂಬುದರತ್ತ ಕೈ ಚಾಚುವಂತೆ ಮಾಡುತ್ತೆ.

ಅದು ನೈಜ ಪ್ರೇಮಕ್ಕಿರುವ ನಿಜವಾದ ಶಕ್ತಿ. ಪ್ರೀತಿಸಿದ ಜೀವವನ್ನು ದಕ್ಕಿಸಿಕೊಳ್ಳಲು ಅದು ಎಂಥಾ ಸಾಹಸಕ್ಕೂ ಪ್ರೇರೇಪಿಸಿ ಬಿಡುತ್ತೆ. ಅದರ ಸೆಳವಿಗೆ ಸಿಕ್ಕು ಮಹತ್ತರವಾದನ್ನು ಸಾಧಿಸಿದವರಿದ್ದಾರೆ. ಸೋಲಿನ ಹುದುಲಿಂದಲೇ ಪುಟಿದೆದ್ದು ಗೆದ್ದವರೂ ಇದ್ದಾರೆ. ಅದೆಲ್ಲವೂ ಹೆಜ್ಜೆಯೂರುವ ಹಾದಿಯನ್ನ ಅವಲಂಬಿಸಿರುತ್ತೆ. ಇಲ್ಲಿ ನಾಯಕ ತನ್ನ ಜತ್ತಿನಂಥವಳ ಕನಸು ನನಸು ಮಾಡಲು ತುಳಿದ ಹಾದಿ ಯಾವುದು? ಅದು ಆತನನ್ನು ಯಾವ ತೀರಕ್ಕೆ ಕರೆದೊಯ್ದು ಬಿಡುತ್ತೆ? ಇಂಥಾ ಪ್ರಶ್ನೆಗಳಿಗೆ ಸಿಗಬಹುದಾದ ಉತ್ತರವೇ ಒಂದಿಡೀ ಸಿನಿಮಾದ ಸಾರ. ಅದು ಹಪುಗಳಾಚೆಗೂ ಕಳೆಗಟ್ಟಿಕೊಂಡಿದೆ ಎಂಬುದೇ ಸಪ್ತ ಸಾಗರದಾಚೆಯ ನಿಜವಾದ ಸಾರ್ಥಕತೆ.

ಇಲ್ಲಿ ಮಧ್ಯಮ ವರ್ಗದ ಕನವರಿಕೆಗಳಿಗೆ, ಶ್ರೀಮಂತಿಕೆಯ ಠೇಂಕಾರ, ಹುನ್ನಾರಗಳು ಮುಖಾಮುಖಿಯಾಗುತ್ತವೆ. ಸಂವೇದನೆ ಕಳೆದುಕೊಂಡು, ಯಾರನ್ನ ಪಣಕ್ಕಿಟ್ಟಾದರೂ ಕಂಟಕದಿಂದ ಪಾರಾಗುವ ಕಾಂಚಾಣದ ಮನಸಲತ್ತುಗಳು ಕಂಗಾಲಾಗಿಸುತ್ತವೆ. ಓರ್ವ ನಿರ್ದೇಶಕನಾಗಿ ಪ್ರತೀ ಸೂಕ್ಷ್ಮವನ್ನೂ ಪರಿಗಣಿಸಿ, ಈ ಸಿನಿಮಾವನ್ನು ರೂಪಿಸಿರುವ ನಿರ್ದೇಶಕರು ನಿಜಕ್ಕೂ ಅಚ್ಚರಿ ಮೂಡಿಸುತ್ತಾರೆ. ಮೊದಲಾರ್ಧದ ತುಂಬಾ ನಾಯಕ, ನಾಯಕಿಯ ನಡುವಿನ ಮಧುರ ಪ್ರೇಮದ ಕನವರಿಕೆಯಲ್ಲಿಯೇ ಸಾಗುತ್ತದೆ. ದೃಷ್ಯಗಳು ಸರಿಯುತ್ತ ಕುತೂಹಲ ಹರಳುಗಟ್ಟುತ್ತಾ, ದ್ವಿತೀಯಾರ್ಧ ದಾಟಿಕೊಂಡ ನಂತರ ಅದು ಅಕ್ಷರಶಃ ನಿಗಿನಿಗಿಸುತ್ತೆ. ಇತ್ತೀಚಿನ ದಿನಮಾನದಲ್ಲಿ ನಾಯಕ ನಾಯಕಿಯರ ಕೆಮಿಸ್ಟ್ರಿಯೊಂದಿಗೆ ಗೆದ್ದ ಪ್ರೇಮ ಕಥನಗಳು ವಿರಳ. ಆ ಸಾಲಿಗೆ ನಿಸ್ಸಂದೇಹವಾಗಿಯೂ ಸಪ್ತ ಸಾಗರಾದಾಚೆ ಎಲ್ಲೋ ಸೇರಿಕೊಳ್ಳುತ್ತೆ. ಕ್ಲೈಮ್ಯಾಕ್ಸಿನ ಹೊತ್ತಿಗೆಲ್ಲ ನಿರ್ದೇಶಕ ದುನಿಯಾ ಸೂರಿಯ ಫಾರ್ಮುಲಾಕ್ಕೆ ಪಕ್ಕಾದಂತೆ ಕಾಣಿಸುವ ನಿರ್ದೇಶಕರು, ಸೈಡ್ ಬಿಯ ತುಣುಕುಗಳ ಮೂಲಕ ಕುತೂಹಲವನ್ನು ಕಾಪಿಟ್ಟುಕೊಳ್ಳುತ್ತಾರೆ. ಮೊದಲ ಭಾಗ ನೋಡಿದವರಲ್ಲೆಲ್ಲ ಎರಡನೇ ಭಾಗ ನೋಡುವ ಉತ್ಕಟ ತುಡಿತವೊಂದು ಊಟೆಯೊಡೆಯುತ್ತೆ.

ಹೀಗೆ ಎರಡು ಭಾಗಗಳಲ್ಲಿ ಸಿನಿಮಾವೊಂದನ್ನು ರೂಪಿಸುವಾಗ ನಾನಾ ರೀತಿಯಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ಅದೆಲ್ಲವನ್ನೂ ನಿರ್ದೇಶಕರು ಲೀಲಾಜಾಲವಾಗಿಯೇ ನಿಭಾಯಿಸಿದ್ದಾರೆ. ನಟನೆಯ ವಿಚಾರಕ್ಕೆ ಬಂದರೆ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಪಾತ್ರದಲ್ಲಿಯೇ ಲೀನಾವಾದಂತೆ ಕಾಣುತ್ತಾರೆ. ಈ ಹುಡುಗಿ ರುಕ್ಮಿಣಿಯಂಥಾ ಪ್ರತೀ ಫ್ರೇಮಿನಲ್ಲಿಯೂ ಒಳಗಿಳಿಯುತ್ತಾಳೆ. ಹಾಗೆ ಪಾತ್ರಗಳೆಲ್ಲವನ್ನೂ ಪರಿಣಾಮಕಾರಿಯಾಗಿ ರೂಪಿಸಿದ ಫಾಯಿದೆ ನಿರ್ದೇಶಕರಿಗೂ ಸಲ್ಲುತ್ತದೆ. ಸೂಕ್ಷವಂತಿಕೆ ಇರುವ ಪ್ರೇಕ್ಷಕರನ್ನೆಲ್ಲ ಕ್ಷಣಾರ್ಧದಲ್ಲಿ ಆವರಿಸಿಕೊಳ್ಳುವ ಗುಣ ಹೊಂದಿರುವ ಈ ಸಿನಿಮಾ, ಭಿನ್ನ ಆಸಕ್ತಿಯ ನೋಡುಗರಿಗೂ ಸಲೀಸಾಗಿ ರುಚಿಸುತ್ತದೆ ಅನ್ನುವಂತಿಲ್ಲ. ಆದರೆ ಎಲ್ಲ ವರ್ಗದವರನ್ನೂ ಆವರಿಸಿಕೊಳ್ಳುವಂಥಾ ಭಾವತೀವ್ರತೆಯಂತೂ ಖಂಡಿತಾ ಇಲ್ಲಿದೆ. ಸಂಭಾಷಣೆಗೂ ಕೂಡಾ ಅಂಥಾದ್ದೊಂದು ಕಸುವಿದೆ.

ಹಾಗಾದರೆ, ಎಲ್ಲ ಕೋನಗಳಿಂದಲೂ ಸಪ್ತ ಸಾಗರದಾಚೆ ಎಲ್ಲೋ ಪರಿಪೂರ್ಣ ಚಿತ್ರವಾ? ಕೊರತೆಗಳಿಲ್ಲವಾ ಅಂತ ನೋಡ ಹೋದರೆ, ಒಂದಷ್ಟು ವಿಚಾರಗಳು ಗಮನಕ್ಕೆ ಬರುತ್ತವೆ. ಆ ಯಾದಿಯಲ್ಲಿ ದೊಡ್ಡ ಕೊರತೆಯಾಗಿ ಕಾಣಿಸೋದು ಹಾಡುಗಳು. ಈ ಸಿನಿಮಾದಲ್ಲಿ ಹಿಟ್ ಹಾಡುಗಳಿಲ್ಲ. ಈ ಬಗೆಯ ಸಿನಿಮಾಗಳ ಗೆಲುವಿನಲ್ಲಿ ಅದರ ಪಾಲೂ ಖಂಡಿತಾ ಇರುತ್ತದೆ. ಆದರೇಕೋ ಚರಣ್ ರಾಜ್ ಅದರತ್ತ ಗಮನ ಹರಿಸಿಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲವರು ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಕಾಸ್ಟ್ಯೂಮು, ಒಟ್ಟಾರೆ ಲುಕ್ಕಿನ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಪಾತ್ರವನ್ನು ಬೊಟ್ಟು ಮಾಡದಂತೆ ರೂಪಿಸುವಲ್ಲಿಯೂ ನಿರ್ದೇಶಕರು ಒಂದಷ್ಟು ಎಚ್ಚರ ತಪ್ಪಿದಂತೆ ಭಾಸವಾಗುತ್ತೆ. ಆದರೆ ಒಟ್ಟಾರೆ ಸಿನಿಮಾದ ಅಂದವೆಂಬುದು ಒಂದಷ್ಟು ತಪ್ಪುಗಳು ಮತ್ತು ಕೊರತೆಯನ್ನು ಮಾಫಿ ಮಾಡಿ, ದೃಷ್ಯಗಳಲ್ಲಿ ಲೀನವಾಗುವಂತೆ ಮಾಡಿ ಬಿಡುತ್ತದೆ. ಒಟ್ಟಾರೆಯಾಗಿ, ಇದು ಈ ಕಾಲಮಾನದ ಒಂದೊಳ್ಳೆ ಪ್ರೇಮ ಕಥಾನಕ. ಸಿನಿಮಾ ನೋಡಿಯಾದ ಮೇಲೂ ಗಾಢ ಪ್ರೇಮದ ಪರಾಗ ಮನಸಿಗಂಟಿಕೊಳ್ಳುತ್ತೆ. ಪ್ರೀತಿಯ ಕಿರುಬೆರಳು ಉಣುಚಿಕೊಂಡ ಕರುಳ ಸಂಕಟ ನಮ್ಮದೇ ಅನ್ನಿಸಿ ಬಿಡುತ್ತೆ. ಬಿ ಸೈಡ್ ನೋಡೋ ಹಂಬಲದೊಂದಿಗೆ, ಬೊಗಸೆಯ ತುಂಬಾ ಭಾವದ ಕಡಲೊಂದು ಭೋರ್ಗರೆದಂತೆ ಭಾಸವಾಗುತ್ತೆ. ಇದಕ್ಕಿಂತ ಸಾರ್ಥಕತೆ ಮತ್ತೇನಿದೆ?

The post saptha sgagaradache ello review: ಮುಗಿದ ಮೇಲೂ ಮನಸಿಗಂಟುತ್ತೆ ಗಾಢ ಪ್ರೇಮದ ಪರಾಗ! appeared first on Cini Shodha.

saptha sagaradache ello trailer review: ಬೆರಗಿನ ಕಡಲನ್ನು ಒಡಲಲ್ಲಿಟ್ಟುಕೊಂಡಿರೋ ಸುಳಿವು!
ಚಾರ್ಲಿಗೆ (charlie 777 movie) ಸಿಕ್ಕಿದ ಒಂದು ಮಟ್ಟದ ಗೆಲುವಿನ ನಂತರ (rakshith shetty) ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರ `ಸಪ್ತ ಸಾಗರದಾಚೆ ಎಲ್ಲೋ’. (saptha sagaradache ello) ಗೋಪಾಲಕೃಷ್ಣ ಅಡಿಗರ (gopalakrishna adiga) ಕವಿತೆಯೊಂದರ ಸಾಲುಗಳೇ ಸಿನಿಮಾ ಶೀರ್ಷಿಕೆಯಾದದ್ದನ್ನು ಕಂಡು ಆರಂಭದಲ್ಲಿಯೇ ಪ್ರೇಕ್ಷಕರು ರೋಮಾಂಚಿತರಾಗಿದ್ದು ನಿಜ. ಯಾಕೆಂದರೆ, ಅಡಿಗರು ಬರೆದಿದ್ದ ಆ ಕವಿತೆ ಹಾಡಾಗಿ, ತಲೆಮಾರುಗಳನ್ನು ದಾಟಿಕೊಂಡು ಈ ಕ್ಷಣಕ್ಕೂ ಮಾಡುತ್ತಿರುವ ಮೋಡಿ ನಿಜಕ್ಕೂ ಅದ್ಭುತ. ಅಂಥಾದ್ದೊಂದು ಸಾಲುಗಳನ್ನು ಶೀರ್ಷಿಕೆಯಾಗಿಸುವ ಮೂಲಕವೇ ಈ ಸಿನಿಮಾ ಆರಂಭಿಕ ಯಶ ದಕ್ಕಿಸಿಕೊಂಡಿದೆ. ಹಾಗೆ ಶೀರ್ಷಿಕೆಯ ಮೂಲಕ ಚಿಗಿತುಕೊಂಡಿದ್ದ ನಿರೀಕ್ಷೆಗಳನ್ನೆಲ್ಲ ಮತ್ತಷ್ಟು ಹೊಳಪುಗಟ್ಟಿಸುವಂಥಾ ಟ್ರೈಲರ್ (saptha sagaradache ello movie tariler) ಇದೀಗ ಬಿಡುಗಡೆಗೊಂಡಿದೆ!

ಈ ಟ್ರೈಲರ್ ಮೂಲಕ ರಕ್ಷಿತ್ ಶೆಟ್ಟಿ ಪ್ರೇಮದ ನವಿರು ಭಾವಗಳ ಚುಂಗು ಹಿಡಿದು ಹೊರಟಿರುವುದು ಸ್ಪಷ್ಟವಾಗಿದೆ. ಪ್ರೇಮದ ಜೊತೆ ಜೊತೆಗೆ ಬೇರೆತ್ತಲೋ ಹಬ್ಬಿಕೊಂಡ, ಕಡಲಿನಷ್ಟೇ ನಿಗೂಢವಾದ ಕಥನವೊಂದು ಇಲ್ಲಿದೆ ಎಂಬುದೂ ಕೂಡಾ ಈ ಟ್ರೈಲರ್ ಮೂಲಕ ಮನದಟ್ಟಾಗಿದೆ. ನಾಯಕಿ ರುಕ್ಮಿಣಿ ವಸಂತ್ ಧ್ವನಿಯಿಂದಲೇ ಮಂದ್ರವಾಗಿ ತೆರೆದುಕೊಳ್ಳುವ ಕಥನ ನಾನಾ ಭಾವಗಳ ಕಡಲಾಗಿ ಭೋರ್ಗರೆಯುತ್ತದೆ. ಸುಂದರ ದೃಷ್ಯಗಳು, ಚರಣ್ ರಾಜ್ ಅವರ ಸಮ್ಮೋಹಕ ಹಿನ್ನೆಲೆ ಸಂಗೀತದ ಮೂಲಕ ಇಲ್ಲಿನ ದೃಷ್ಯಗಳು ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚುತ್ತವೆ. ಇಲ್ಲಿರೋದು ಪ್ರೇಮ ಕಥೆ ಎಂಬುದನ್ನು ಮನದಟ್ಟು ಮಾಡಿಸುತ್ತಲೇ, ಅದಕ್ಕೊಂದಷ್ಟು ತಿರುವುಗಳೂ ಕೂಡಾ ತಟಿಕೆ ಹಾಕಿಕೊಳ್ಳುತ್ತವೆ.

ಖುದ್ದು ರಕ್ಷಿತ್ ಶೆಟ್ಟಿ `ಮನು ಮತ್ತು ಪ್ರಿಯಾಳ ಪ್ರಪಂಚದ ಸಣ್ಣ ಪರಿಚಯವಿದು’ ಎಂಬರ್ಥದ ಒಕ್ಕಣೆಯೊಂದಿಗೆ ಈ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮನು ಮತ್ತು ಪ್ರಿಯಾಳ ಪ್ರೇಮ ಪ್ರಪಂಚ ಮಾತ್ರವಲ್ಲದೇ, ಮತ್ತೊಂದಷ್ಟು ಆಘಾತ, ಒಳಸುಳಿ, ತಿರುವಿಗಳನ್ನೂ ಪರಿಣಾಕಾರಿಯಾಗಿ ದಾಟಿಸಲಾಗಿದೆ. ಹೇಮಂತ್ ರಾವ್ ಗಟ್ಟಿ ಕಥೆಯೊಂದರ ಮೂಲಕ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ, ಇದರಲ್ಲಿ ಗಹನವಾದುದೇನೋ ಇದೆ ಎಂಬಷ್ಟರ ಮಟ್ಟಿಗೆ ಈ ಟ್ರೈಲರ್ ಪ್ರೇಕ್ಷಕರ ಮನಸಲ್ಲಿ ರಿಜಿಸ್ಟರ್ ಆಗುವಂತಿದೆ. ಅಷ್ಟರಮಟ್ಟಿಗೆ ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ಪರಿಣಾಮಕಾರಿ ಎನ್ನಿಸಿಕೊಂಡಿದೆ.

ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ರಕ್ಷಿತ್ ಶೆಟ್ಟಿ ಒಂದು ಗೆಲುವಿನ ಮೂಲಕ ಮೈ ಕೊಡವಿಕೊಳ್ಳುವ ಅನಿವಾರ್ಯತೆಯ ಅಂಚಿನಲ್ಲಿದ್ದಾರೆ. ಅವನೇ ಶ್ರೀಮನ್ನಾರಾಯಣ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದ್ದರೂ ಕೂಡಾ, ಅದೇಕೋ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. 777 ಚಾರ್ಲಿ ಗೆಲುವು ರಕ್ಷಿತ್‍ರನ್ನು ಕೊಂಚ ನಿರಾಳವಾಗಿದೆ. ಸಪ್ತ ಸಾಗರದಾಚೆ ಎಲ್ಲೋ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ಶಪಥದೊಂದಿಗೆ ರಕ್ಷಿತ್ ಅಖಾಡಕ್ಕಿಳಿದಂತಿದೆ. ಅಂಥಾದ್ದೊಂದು ಕಸುವು ಸದರಿ ಟ್ರೈಲರ್ ಮೂಲಕ ಕಾಣಿಸಿದೆ.

The post saptha sagaradache ello trailer review: ಬೆರಗಿನ ಕಡಲನ್ನು ಒಡಲಲ್ಲಿಟ್ಟುಕೊಂಡಿರೋ ಸುಳಿವು! appeared first on Cini Shodha.