#rukmini – Cini Shodha

rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ?
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು. ಈಕೆ ಸಪ್ತಸಾಗರದಾಚೆಯ ನಂತರ ಸೀದಾ ತಮಿಳಿಗೆ ಹಾರಿ ವಿಜಯ್ ಸೇತುಪತಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಹಿನ್ನಡೆಯ ಹಿಂಚುಮುಂಚಲ್ಲಿಯೇ ಅಚ್ಚರಿದಾಯಕವಾಗಿ ಈ ಹುಡುಗಿಕಗೆ ದೊಡ್ಡ ದೊಡ್ಡ ಅವಕಾಶಗಳು ಒಲಿದು ಬರುತ್ತಿವೆ. ಇದೀಗ ರುಕ್ಮಿಣಿಗೆ ರಾಕಿ ಭಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿದೆ.

ರೆಟ್ರೋ ಶೈಲಿಯ ಟಾಕ್ಸಿಕ್ ಚಿತ್ರ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ಹುಮಾ ಖುರೇಶಿ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹತ್ವದ ಪಾತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಡುಕಾಟ ನಟೆಸುತ್ತಿದ್ದರು. ಕಡಸೆಗೂ ರಾಕಿ ಭಾಯ್ ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರುಕ್ಮಿಣಿ ಯಾವ ಥರದ ಪಾತ್ರದಲ್ಲಿ ನಟಿಸಲಿದ್ದಾರೆಂಬುದೂ ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.

ರುಕ್ಮಿಣಿ ವಸಂತ್ ಪಾಲಿಗೆ ಟಾಕ್ಸಿಕ್ ಮೂಲಕ ಎರಡನೇ ಪ್ಯಾನಿಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಂತಾಗಿದೆ. ಈಗಾಗಲೇ ಕಾಂತಾರ ಅಧ್ಯಾಯ ಒಂದರಲ್ಲಿಯೂ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಂತಾರಾ ಅಂತೂ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿ ಮಾಡೋದು ಪಕ್ಕಾ. ಅದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಕೂಡಾ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಲಕ್ಷಣಗಳಿದ್ದಾವೆ. ಈ ಎಲ್ಲವನ್ನೂ ನೋಡಿದರೆ ರುಕ್ಮಿಣಿ ವಸಂತ್ ನಿಸ್ಸಂದೇಹವಾಗಿಯೂ ಪ್ಯಾನಿಂಡಿಯಾ ಮಟ್ಟದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಹಾಗಂತ ಸಿನಿಮಾ ಪ್ರೇಮಿಗಳೇ ಅಭಿಪ್ರಾಯ ಪಡುತ್ತಿದ್ದಾರೆ.

The post rukmini vasanth: ಟಾಕ್ಸಿಕ್‌ನಲ್ಲಿ ರುಕ್ಮಿಣಿಯದ್ದು ಎಂಥಾ ಪಾತ್ರ? appeared first on Cini Shodha.

rukmini vasanth: ಬಾಲಿವುಡ್ಡಿಗಿನ್ನು ದಾರಿ ದೂರವಿಲ್ಲ!
ಕನ್ನಡದ ಕೆಲ ನಟಿಯರ ಪಾಲಿಗೆ ಅದೃಷ್ಟವೆಂಬುದು ಒಲಿದು ಬರೋದೇ ಅಚ್ಚರಿ. ಒಂದು ಸಿನಿಮಾ ಹಿಟ್ ಆಗುತ್ತಲೇ ಕನ್ನಡದಲ್ಲೂ ಬ್ಯುಸಿಯಾಗಿ, ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಪಡೆದು ಮಿಂಚಿದ ಒಂದಷ್ಟು ನಟಿಯರಿದ್ದಾರೆ. ಇದೀಗ ಆ ಸಾಲಿಗೆ ರುಕ್ಮಿಣಿ ವಸಂತ್ ಕೂಡಾ ಸೇರ್ಪಡೆಯಾಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ನಟಿಯಾಗಿ ಆಗಮಿಸಿದ್ದವರು ರುಕ್ಮಿಣಿ. ಆರ್ಧ್ರ ಭಾವಗಳ ಆ ಪಾತ್ರವನ್ನು ಆಕೆ ಆವಾಹಿಸಿಕೊಂಡ ರೀತಿಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದರು. ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದ ರುಕ್ಮಿಣಿ ಮೊದಲ ಹೆಜ್ಜೆಯಲ್ಲಿಯೇ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರು. ಅಂಥಾದ್ದೊಂದು ಹಠಾತ್ ಗೆಲುವಿನ ಪ್ರಭೆಯಲ್ಲಿ ಮಿಂದೇಳುತ್ತಿರುವ ರುಕ್ಮಿಣಿಗೀಗ ಡಾರ್ಲಿಂಗ್ ಪ್ರಭಾಸ್ ಗೆ ನಾಯಕಿಯಾಗುವ ಅವಕಾಶ ಒಲಿದು ಬಂದಂತಿದೆ!

ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರಕ್ಕೆ ಈಕೆಯೇ ನಾಯಕಿ ಎಂಬಂಥಾ ಸುದ್ದಿ ಹಬ್ಬಿಕೊಂಡಿದೆ. ಅದರ ಬೆನ್ನಲ್ಲಿಯೇ ಪ್ರಶಾಂತ್ ನೀಲ್ ಮತ್ತು ಜ್ಯೂ ಎನ್ಟಿಆರ್ ಕಾಂಬಿನೇಷನ್ನಿನ ಸಿನಿಮಾಕ್ಕೂ ರುಕ್ಮಿಣಿ ನಾಯಕಿಯಾಗಲಿದ್ದಾರೆಂಬ ಸುದ್ದಿ ಹಬ್ಬಿಕೊಂಡಿದೆ. ಈ ಬಗೆಗಿನ ಅಧಿಕೃತ ಮಾಹಿತಿಗಳು ಹೊರಬಿದ್ದರೆ, ಖಂಡಿತವಾಗಿಯೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ರುಕ್ಮಿಣಿಯ ಶಖೆ ಶುರುವಾಯ್ತೆಂದೇ ಅರ್ಥ. ಬಹುಶಃ ಸಲೀಸಾಗಿ ಆಕೆ ರಶ್ಮಿಕಾ ಮಂದಣ್ಣ, ಶ್ರೀಲೀಲಾಳಂಥಾ ನಟಿಯರನ್ನು ಹಿಂದಿಕ್ಕಿ ಮಿಂಚುವಂತಾದರೂ ಅಚ್ಚರಿಯೇನಿಲ್ಲ. ಹಾಗಂತ ತೆಲುಗು ಸೇರಿದಂತೆ ಅನೇಕ ಭಾಷೆಯ ಚಿತ್ರರಂಗಗಳ ಮಂದಿಯೇ ಭವಿಷ್ಯ ನಿಡಿಯಲಾರಂಭಿಸಿದ್ದಾರೆ. ಅಂಥಾದ್ದೊಂದು ಮಟ್ಟ ಮುಟ್ಟಬಲ್ಲ ಛಾತಿ ಖಂಡಿತವಾಗಿಯೂ ಕನ್ನಡದ ಹುಡುಗಿ ರುಕ್ಮಿಣಿಗಿದ್ದೇ ಇದೆ.

ಹಾಗೆನೋಡಿದರೆ, ಈ ಹುಡುಗಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೂಡಿ ಬಂದಿದ್ದೇ ಅಚಾನಕ್ಕಗಿ. ಅದಾಗಲೇ ನಟಿಯಾಗಬೇಕೆಂಬ ಕನಸಿಟ್ಟುಕೊಂಡಿದ್ದ ರುಕ್ಮಿಣಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಿಗಾಗಿ ಆಡಿಷನ್ ನಡೆಸುತ್ತಿರುವ ವಿಚಾರ ಗಮನಕ್ಕೆ ಬಂದಿತ್ತು. ತುಸು ಅಳುಕಿನೊಂದಿಗೆ ಚಿತ್ರತಂಡವನ್ನು ಸಂಪರ್ಕಿಸಿದ್ದ ರುಕ್ಮಿಣಿ, ನಂತರ ಒಂದಷ್ಟು ಸ್ಪರ್ಧೆಯನ್ನು ದಾಟಿಕೊಂಡು ನಾಯಕಿಯಾಗಿ ಆಯ್ಕೆಯಾಗಿದ್ದರು. ಅದಕ್ಕೆ ತನ್ನ ಪ್ರತಿಭೆ ಮಾತ್ರವಲ್ಲದೇ ಅದೃಷ್ಟವೂ ಕಾರಣವೆಂಬ ಮನಃಸ್ಥಿತಿ ಹೊಂದಿರುವ ರುಕ್ಮಿಣಿಯೀಗ ತಮಿಳು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಅದೇ ಹೊತ್ತಿನಲ್ಲಿ ತೆಲುಗಿನಲ್ಲಿಯೂ ಒಂದಷ್ಟು ಅವಕಾಶಗಳು ಅರಸಿ ಬರಲಾರಂಭಿಸಿವೆ.

ಒಂದು ವೇಳೆ ಈಗ ತೆಲುಗು ಚಿತ್ರರಂಗದಲ್ಲಿ ಹಬ್ಬಿಕೊಂಡಿರುವ ಸುದ್ದಿಗಳು ನಿಜವಾದರೆ, ಖಂಡಿತವಾಗಿಯೂ ಅದು ರುಕ್ಮಿಣಿ ಪಾಲಿಗೆ ಜಾಕ್ ಪಾಟ್. ಅಲ್ಲಿಂದ ಬಾಲಿವುಡ್ ಎಂಟ್ರಿಗೆ ಹಾದಿ ಮತ್ತಷ್ಟು ಸಲೀಸಾಗುತ್ತದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್ಟಿಆರ್ ಗೆ ನಾಯಕಿಯಾಗಬೇಕೆಂದು ಬಾಲಿವುಡ್ ನಟಿಯರೇ ಪ್ರಯತ್ನ ಪಡುತ್ತಾರೆ. ಅಂಥಾದ್ದರಲ್ಲಿ ಆ ಅವಕಾಶ ರುಕ್ಮಿಣಿಗೆ ತಾನೇತಾನಾಗಿ ಒಲಿದು ಬಂದರೆ ಅದು ಅದೃಷ್ಟವಲ್ಲದೆ ಬೇರೇನಲ್ಲ. ಇಂಥಾ ಸುದ್ದಿಗಳ ಕೇಂದ್ರ ಬಿಂದುವಾಗಿರುವ ರುಕ್ಮಿಣಿ ವ್ಯಕ್ತಿಗತವಾಗಿಯೂ ಗಮನ ಸೆಳೆಯೋ ನಟಿ. ಥಳುಕು ಬಳುಕಿನ ಧಿಮಾಕುಗಳನ್ನು ಮೀರಿಕೊಂಡಂತಿರುವ ಈಕೆ ಒಂದಷ್ಟು ಸೂಕ್ಷ್ಮ ಮನಃಸ್ಥಿತಿಯಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಇಂಥಾ ಹುಡುಗಿ ಕನ್ನಡದಲ್ಲಿ ಸಕ್ರಿಯವಾಗಿದ್ದುಕೊಂಡೇ ಪರಭಾಷೆಗಳಲ್ಲೂ ಮಿಂಚಿದರೆ ಕನ್ನಡಗರೆಲ್ಲ ಖುಷಿ ಪಡದಿರಲು ಸಾಧ್ಯವೇ?

The post rukmini vasanth: ಬಾಲಿವುಡ್ಡಿಗಿನ್ನು ದಾರಿ ದೂರವಿಲ್ಲ! appeared first on Cini Shodha.