#ravichandran – Cini Shodha

Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!
ಈಗೊಂದಷ್ಟು ವರ್ಷಗಳಿಂದೀಚೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳ ಮೂಲಕ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್. ಕಳೆದ ವರ್ಷ ರವಿಮಾಮನ ಈ ನವ ಯಾನದಲ್ಲಿಯೂ ಕೊಂಚ ಅಡೆತಡೆಗಳು ಎದುರಾದಂತೆ ಭಾಸವಾಗಿತ್ತು. ಕಡೆಗೂ ಅವರು ಮತ್ತೆ ಪ್ಯಾರ್ ಅಂತೊಂದು ಸಿನಿಮಾದ ಮೂಲಕ ನಟನೆಗೆ ಮರಳಿದ್ದಾರೆ. ಪ್ಯಾರ್ ಎಂಬುದು ರವಿಚಂದ್ರನ್ ಅವರ ಇಷ್ಟೂ ವರ್ಷಗಳ ಒಟ್ಟಾರೆ ಪಯಣದ ಅಸಲೀ ಕಸುವಿನಂಥಾದ್ದು. ಪ್ರೇಮದ ರಾಯಭಾರಿಯಂತೆ ಚಾಲ್ತಿಯಲ್ಲಿರುವ ರವಿಚಂದ್ರನ್, ಪ್ರಧಾನ ಪಾತ್ರವೊಂದರ ಮೂಲಕ ಹೊಸಬರ ತಾಜಾ ಕನಸಿಗೆ ಜೊತೆಯಾಗಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿರೋ ಪ್ಯಾರ್ ಚಿತ್ರದ ಹಾಡೊಂದೀಗ ಎಲ್ಲೆಡೆ ಗುನುಗುನಿಸಿಕೊಳ್ಳುವ ಮೂಲಕ ಗೆಲುವು ದಾಖಲಿಸಿದೆ!

ಹಾಡಿಗೆ ಸಿಕ್ಕಿರುವ ಯಶಸ್ಸಿನ ಸಂಭ್ರಮದೊಂದಿಗೆ ಮತ್ತೊಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರತಂಡ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹಾಡೊಂದರ ಮೂಲಕ ದಕ್ಕಿದ ಗೆಲುವಿನ ಸಂಭ್ರಮ ಮತ್ತು ಅದು ಸಿನಿಮಾ ವಿಚಾರದಲ್ಲಿಯೂ ಪ್ರತಿಫಲಿಸಲಿರುವ ಭರವಸೆಯೊಂದಿಗೆ ಚಿತ್ರತಂಡ ಗಮನ ಸೆಳೆದಿದೆ. ಒಂದೇ ಮಾತಲಿ ಹೇಳೋದಾದರೆ ಎಂಬ ಈ ಸಿನಿಮಾ ಹಾಡೀಗ ಟ್ರೆಂಡಿಂಗಿನಲ್ಲಿದೆ. ಇನ್ಸ್‌ಟಾ ರೀಲ್ಸ್ ಒಂದರಲ್ಲಿಯೇ ಮಿಲಿಯನ್ನುಗಟ್ಟಕಲೆ ವೀಕ್ಷಣೆ ಪಡೆದುಕೊಂಡಿದೆ. ಇಂಥಾದ್ದೊಂದು ಅಮೋಘ ಪ್ರತಿಕ್ರಿಯೆಯ ಮೂಲಕ ಸದರಿ ಹಾಡನ್ನು ರೂಪಿಸಲು ಪಟ್ಟ ಪ್ರಯತ್ನವೆಲ್ಲ ಸಾರ್ಥಕ್ಯ ಕಂಡಿದೆಯೆಂಬ ಧನ್ಯತಾ ಭಾವ ಚಿತ್ರತಂಡದಲ್ಲಿ ಹೊಮ್ಮುತ್ತಿತ್ತು.

Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

ಪಳನಿ ಸೇನಾಪತಿ ಸಂಗೀತದ ಈ ಹಾಡು ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣದಲ್ಲಿ ದೈಷ್ಯರೂಪ ಪಡೆದುಕೊಂಡಿದೆ. ಲಡಾಕ್ ಮುಂತಾದ ಸುಂದರ ಪರಿಸರದಲ್ಲಿ ವಾರಗಟ್ಟಲೆ ಶ್ರಮ ವಹಿಸಿ ಈ ಹಾಡನ್ನು ರೂಪಿಸಲಾಗಿದೆ. ಅಂದಹಾಗೆ ಈ ಸಿನಿಮಾವನ್ನು ಸುಪ್ರೀತ್ ನಿರ್ದೇಶನ ಮಾಡಿದ್ದಾರೆ. ಹೆಚ್.ಎಸ್ ನಾಗಶ್ರೀ ನಿರ್ಮಾಣ ಮಾಡಿದ್ದಾರೆ. ಎಶ್ವಿನ್ ಹಾಗೂ ಈಗ ಬಿಗ್ ಬಾಸ್ ಸ್ಪರ್ಧಿಯಾಗಿರುವ ರಾಶಿಕಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಪ್ರೇಮದ ಜೊತೆಗೆ ಮತ್ತೊಂದಷ್ಟು ಅಂಶಗಳನ್ನು ಅಡಕವಾಗಿಸಿಕೊಂಡಿರೋ ಕಥೆಯನ್ನು ಮೆಚ್ಚಿಕೊಂಡೇ ರವಿಚಂದ್ರನ್ ಈ ಸಿನಿಮಾ ಭಾಗವಾಗಲು ಒಲಪ್ಪಿಕೊಂಡಿದ್ದರಂತೆ. ಅವರಿಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಹಾಡಿನ ಯಶದ ಬಗ್ಗೆ ಖುಷಿ ಹಂಚಿಕೊಂಡಿರೋ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆ ದಿನಾಂಕ ಘೋಶಿಸಲಿದೆ.

keywords: pyaar movie, onde mathali helodadare, song, ravichandran, crazy star, sndalwood, kfi

The post Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್! appeared first on Cini Shodha.

junior movie review: ಗಣಿಗಳ್ಳನ ಮಗನ ಸಿನಿಮಾ ಹೀಗಿದೆ!
ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಿಲ್ಲ. ಇದು ಗೊತ್ತಿದ್ದರೂ ಕೂಡಾ ಬಳ್ಳಾರಿಯ ಗಣಿಗಳ್ಳ (gaalijanardhanreddy) ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು (kireeti) ನಾಯಕ ನಟನನ್ನಾಗಿ ನೆಲೆಗಾಣಿಸುವ ಕಸರತ್ತು ನಡೆಸಿದ್ದ. ಗಣಿಧೂಳಿನ ಬ್ಲಾಕ್ ಮನಿಯನ್ನು ತಂದು ಸುರಿದರೂ ಕೂಡಾ ರೆಡ್ಡಿಮಗನ (junior movie) ಜ್ಯೂನಿಯರ್ ಚಿತ್ರಕ್ಕೆ ಅಡಿಗಡಿಗೆ ಕಂಟಕ ಎದುರಾಗಿತ್ತು. ಕಡೆಗೂ ಇದೀಗ ಆ ಚಿತ್ರ ಬಿಡುಗಡೆಗೊಂಡಿದೆ. ಗಣಿ ಧೂಳಿಂದೆದ್ದು (mining mafia) ಬಂದ ಕೀಟವೀಗ ಸಿನಿಮಾ ಮಂದಿರದ ಹೆಬ್ಬಾಗಿಲಲ್ಲೇ ಲಗಾಟಿ ಹೊಡೆದಿದೆ.

ಹೇಳಿಕೇಳಿ (janardhan reddy) ಜನಾರ್ಧನ ರೆಡ್ಡಿ ನೆಲ ಬಗೆಯುತ್ತಾ ಏಕಾಏಕಿ ಕೋಟಿ ಕೋಟಿ ಗುಂಜಿಕೊಂಡವನು. ಇಂಥವನಿಗೆ ಓರ್ವ ನಟ ಸಿನಿಮಾ ರಂಗದಲ್ಲಿ ಸರ್ಕಸ್ಸು ನಡೆಸುತ್ತಾ, ಸ್ಟಾರ್ ನಟನಾಗಿ ನೆಲೆ ಕಾಣೋದು ಅದೆಷ್ಟು ಸುದೀರ್ಘವಾದ, ತ್ರಾಸದಾಯಕ ಪ್ರಯಾಣವೆಂಬ ಅರಿವಿರಲು ಸಾಧ್ಯವೇ? ಅಂಥಾದ್ದೊಂದು ಸೈರಣೆಯನ್ನು ಗಾಲಿ ರೆಡ್ಡಿಯಿಂದಾಗಲಿ, ಅವನ ಮಗ (kireeti) ಕಿರೀಟಿಯಿಂದಾಗಲಿ ನಿರೀಕ್ಷೆ ಮಾಡೋದೇ ಮುಠ್ಠಾಳತನ. ಇದನ್ನಿಲ್ಲಿ ಪ್ರಸ್ತಾಪಿಸುತ್ತಿರೋದಕ್ಕೆ ಕಾರಣ ಇಲ್ಲದಿಲ್ಲ. ಜ್ಯೂನಿಯರ್ ಸಿನಿಮಾ ನೋಡಿದ ಯಾರಿಗಾದರೂ ಒಂದೇ ಸಿನಿಮಾದಲ್ಲಿ ಕಿರೀಟಿಯನ್ನು ಸ್ಟಾರ್ ನಟನಾಗಿ ನೆಲೆಗಾಣಿಸುವ ಹಳವಂಡ ಕಣ್ಣಿಗೆ ರಾಚುತ್ತೆ.

ಹಾಗೆ ನೋಡಿದರೆ, ಇಲ್ಲಿ ಕೈಗೆತ್ತಿಕೊಂಡಿರುವ ಕಥೆ ಚೆನ್ನಾಗಿದೆ ಅಂತನ್ನಿಸಿದರೂ ಅದರಲ್ಲಿ ಹೊಸತನವೇನಿಲ್ಲ. ಯಾವ ಘಟ್ಟದಲ್ಲಿಯೂ ಕಥೆಯ ಭಾಗ ವಾಹ್ ಅನ್ನಿಸೋದಿಲ್ಲ. ಪಾತ್ರ ವರ್ಗ ಮತ್ತು ಕಲಾವಿದರು ಅದಕ್ಕೆ ಜೀವ ತುಂಬಿರುವ ರೀತಿಯನ್ನೂ ಮೆಚ್ಚಿಕೊಳ್ಳಬಹುದು. ಆದರೆ, ಕಿರೀಟಿಗೆ ಹಾಡು ಮಾತ್ರವಲ್ಲದೇ ಪ್ರತಿಯೊಂದಕ್ಕೂ ಬಿಲ್ಡಪ್ಪಿ ಕೊಡುವ ದರ್ದಿಗೆ ಬಿದ್ದಿರುವ ನಿರ್ದೇಶಕರು, ಕಥೆಯ ಮೂಲ ಸತ್ವದ ಕತ್ತು ಹಿಸುಕಿದ್ದಾರೆ. ಹಾಡುಗಳಲ್ಲಿ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿರುವ ಕಿರೀಟಿ, ನಟನೆ ಅಂತ ಬಂದಾಗ ಬಸವಳಿದಂತೆ ಕಾಣಿಸುತ್ತಾನೆ. ಗಣಿಗಳ್ಳ ರೆಡ್ಡಿ ಇದುವರೆಗೆ ಗೋರಿಕೊಂಡಿರುವ ಕಾಸನ್ನೆಲ್ಲ ಗುಡ್ಡೆ ಹಾಕಿದರೂ ಕೂಡಾ, ಕಿರೀಟಿ ನಟನಾಗಿ ಪಳಗೋದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

ಅಷ್ಟಕ್ಕೂ ಜನಾ ರೆಡ್ಡಿಯಂಥಾ ಬೇನಾಮಿ ಆಸ್ತಿ ಹೊಂದಿರೋ ಖದೀಮರ ಮಕ್ಕಳು ಹೇಗೆ ಬೇಕಾದರೂ ತಯಾರಿ ನಡೆಸಬಹುದು. ಕಿರೀಟಿ ಕೂಡಾ ನೃತ್ಯ ಸೇರಿದಂತೆ ಒಂದಷ್ಟು ಬಗೆಯಲ್ಲಿ ಶ್ರಮ ಹಾಕಿದ್ದಾನೆ. ಆ ಕಾರಣದಿಂದಲೇಬ ಜ್ಯೂನಿಯರ್ ಇದ್ದುದರಲ್ಲಿಯೇ ಒಂದಷ್ಟು ಸಹ್ಯವೆನಿಸುತ್ತೆ. ಅಷ್ಟರ ಮಟ್ಟಿಗೆ ರೆಡ್ಡಿಮಗ ಕಿರೀಟಿಯನ್ನು ಮೆಚ್ಚಿಕೊಳ್ಳಬಹುದು. ಇದೆಲ್ಲದರಾಚೆಗೆ ಗಣಿಗಳ್ಳನ ಪುತ್ರನ ಸಿನಿಮಾದ ಬಗ್ಗೆ ಬೇರೇನೂ ಹೇಳಲಾಗೋದಿಲ್ಲ. ಒಂದು ಕಾಲದಲ್ಲಿ ಹಡಬೆ ಕಾಸಿಂದ ಒಂದಿಡೀ ರಾಜಕೀಯವನ್ನು ಹಡಾಲೆಬ್ಬಿಸಿದ್ದವನು, ಅಳಿದುಳಿದಿದ್ದ ಮೌಲ್ಯಗಳನ್ನು ಗಣಿಧೂಳಿನಲ್ಲಿ ಉಸಿರುಗಟ್ಟಿಸಿದ್ದವನು ಗಾಲಿ ಜನಾರ್ಧನ ರೆಡ್ಡಿ. ಇಂಥವನ ಮಗ ಹೀರೋ ಆದರೆ ಅದು ಕೆಡುಕಾಗಿಯಷ್ಟೇ ಕಾಣಿಸಲು ಸಾಧ್ಯ!

The post junior movie review: ಗಣಿಗಳ್ಳನ ಮಗನ  ಸಿನಿಮಾ ಹೀಗಿದೆ! appeared first on Cini Shodha.