rajanikanth_halaivar171_lokeshkangarajan_cinishodha – Cini Shodha

rajanikanth new movie: ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚಲಣಿಯಾದ ರಜನಿ!
ಕಬಾಲಿ ಹೀನಾಯವಾಗಿ ಕವುಚಿಕೊಂಡ ನಂತರದಲ್ಲಿ ಕೊಂಚ ಮಂಕಾದಂತಿದ್ದವರು (rajanikanth)  ರಜನೀಕಾಂತ್. ಅಷ್ಟಕ್ಕೂ ಅದೊಂದು ಸೋಲಿನಿಂದ ಕಂಗಾಲಾಗುವ ಜಾಯಮಾನ ರಜನಿಯದ್ದಲ್ಲ. ಯಾಕೆಂದರೆ, ಅಂಥಾ ಅದೆಷ್ಟೋ ಏಳುಬೀಳುಗಳನ್ನು ದಾಟಿಕೊಂಡು, ಸೋಲಲನ್ನೂ ಗೆಲುವಿನ ಮೂಲಕ ಮೀರಿಕೊಳ್ಳುವ ಛಾತಿ ತಲೈವಾಗೆ ಸಿದ್ಧಿಸಿದೆ. ಆದರೆ, ಖಾಸಗೀ ಬದುಕಿನ ಹಳವಂಡಗಳು ಸೋಲಿನ ಸರಪಣಿಗೆ ಸುತ್ತಿಕೊಂಡಿದ್ದ ಕಾರಣದಿಂದ ರಜನಿ ಕೊಂಚ ಗಲಿಬಿಲಿಗೊಂಡಿದ್ದದ್ದು ಸತ್ಯ. ಆದರೀಗ ವಾತಾವರಣ ಬದಲಾಗಿದೆ; `ಜೈಲರ್’ (jailar movie) ಚಿತ್ರದ ಮೂಲಕ ಪುಷ್ಕಳ ಗೆಲುವು ಮತ್ತೆ ರಜನಿಯ ಖಾತೆಗೆ ಜಮೆಯಾಗಿದೆ. ಇದಾದ ಬೆನ್ನಿಗೇ ತಲೈವಾನ ಮುಂದಿನ ಸಿನಿಮಾದತ್ತ ಸಮಸ್ತ ಪ್ರೇಕ್ಷಕರ ಚಿತ್ತ ಕೀಲಿಸಿಕೊಂಡಿತ್ತು!

ಹಾಗೆ ನೋಡಿದರೆ, ಜೈಲರ್ ಸಿನಿಮಾದ ಹಿಂಚುಮುಂಚಲ್ಲಿಯೇ ಒಂದಷ್ಟು ಹೊಸಾ ಪ್ರಾಜೆಕ್ಟುಗಳ ಬಗ್ಗೆ ರಜನೀಕಾಂತ್ ತಲೆ ಕೆಡಿಸಿಕೊಂಡಿದ್ದರು. ಕಡೆಗೂ ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಅದರ ಫಲವಾಗಿಯೇ ಇದೀಗ ಲೋಕೇಶ್-ರಜನಿ ಕಾಂಬಿನೇಷನ್ನಿನ ಈ ಬಹು ನಿರೀಕ್ಷಿತ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಒಂದಷ್ಟು ಮಿತಿಗಳಾಚೆಗೂ, ಕಮರ್ಶಿಯಲ್ ಚೌಕಟ್ಟಿನಲ್ಲಿ ಆಟವಾಡಿ ಬಿಡುವ ಕಲೆಯಲ್ಲಿ ಲೋಕೇಶ್ ಪರಿಣಿತ. ಈ ಕಾರಣದಿಂದಲೇ ಬಹು ಕಾಲದಿಂದಲೂ ಲೋಕೇಶ್ ರಜನಿಗಾಗಿ ಸಿನಿಮಾ ಮಾಡಲೆಂಬ ಬಯಕೆಯೊಂದು ಅಭಿಮಾನಿ ಬಳಗದಲ್ಲಿ ಲಾಗಾಯ್ತಿನಿಂದಲೂ ಇದ್ದೇ ಇತ್ತು. ಅದಕ್ಕೀಗ ಚಾಲನೆ ಸಿಕ್ಕಿ ಬಿಟ್ಟಿದೆ.

ಚಿತ್ರದಿಂದ ಚಿತ್ರಕ್ಕೆ ಪಾತ್ರಗಳ ವಿಚಾರದಲ್ಲಿ ಭಿನ್ನತೆಯನ್ನು ಧ್ಯಾನಿಸುತ್ತಾ ಬಂದವರು ರಜನೀಕಾಂತ್. ಲೋಕೇಶ್ ಕನಗರಾಜ್ ನಿರ್ದೇಶನದ ಸರಿ ಸಿನಿಮಾದಲ್ಲಿ ರಜನೀ ಪ್ರೇಕ್ಷಕರನ್ನೆಲ್ಲ ಅಕ್ಷರಶಃ ಅಚ್ಚರಿಗೀಡು ಮಾಡಿಲಿದ್ದಾರೆ. ಸದ್ಯಕ್ಕೆ ರಜನೀ ಪಾತ್ರದ ಬಗ್ಗೆ ಹರಿದಾಡುತ್ತಿರುವ ಕೆಲ ಸಂಗತಿಗಳಿವೆಯಲ್ಲಾ? ಅವು ಅಭಿಮಾನಿ ಬಳಗವನ್ನೆಲ್ಲ ಸಾರಾಸಗಟಾಗಿ ಸೆಳೆದು ಬಿಡುವಂತಿವೆ. ಅದರನ್ವಯ ಹೇಳೋದಾದರೆ, ರಜನಿ ಇಲ್ಲಿ ಅಂತಾರಾಷ್ಟ್ರೀಯ ಗೋಲ್ಡ್ ಸ್ಮಗ್ಲಿಂಗ್ ಮಾಫೀಯಾ ಡಾನ್ ಆಗಿ ಮೆರೆಯಲಿದ್ದಾರೆ. ಈಗಾಗಲೇ ಪೋಸ್ಟರ್ ಒಂದರ ಮೂಲಯ ಇಂತಾದ್ದೊಂದು ಸುಳಿವು ಸ್ಪಷ್ಟವಾಗಿಯೇ ಜಾಹೀರಾಗಿದೆ.

ವಿಶೇಷವೆಂದರೆ, ರಜನಿ ಇಲ್ಲಿ ವಿಲನ್ ಶೇಡಿನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹೀರೋಯಿಸಮ್ಮಿಗಷ್ಟೇ ಕಟ್ಟುಬೀಳದೆ, ನಾನಾ ಥರದ ಪಾತ್ರ ಮಾಡಿರುವ ರಜನಿಯನ್ನು ವಿಲನ್ ಶೇಡಿನಲ್ಲಿ ನೋಡೋದು ಬಹುತೇಕ ಅಭಿಮಾನಿಗಳ ಬಯಕೆಯಾಗಿತ್ತು. ಅದು ಈ ಸಿನಿಮಾ ಮೂಲಕ ಕೈಗೂಡಲಿದೆ. ಖುದ್ದು ರಜನೀಕಾಂತ್ ಅತ್ಯಂತ ಇಷ್ಟಪಟ್ಟು ಲೋಕೇಶ್ ಕನಗರಾಜ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇದೀಗ ಒಂದು ಹಿನ್ನಡೆಯನ್ನು ಮಹಾ ಗೆಲುವಿನ ಮೂಲಕ ಮೀರಿಕೊಳ್ಳುವ ಅನಿವಾರ್ಯತೆ ಲೋಕೇಶ್ ಪಾಲಿಗಿದೆ. ಯಾಕೆಂದರೆ, ವಿಜಯ್ ನಟನೆಯ ಲಿಯೋ ಮೂಲಕ ಆತನಿಗೆ ಕೊಂಚ ನಿರಾಸೆಯಾಗಿದೆ. ಅದನ್ನು ದಾಟಿಕೊಳ್ಳುವ ಛಲದೊಂದಿಗೆ ಲೋಕೇಶ್ ಈ ಸಿನಿಮಾಕ್ಕೆ ಚಾಲನೆ ಕೊಟ್ಟಂತಿದೆ. ಇನ್ನು ಮುಂದೆ ಈ ಚಿತ್ರದ ದಿಕ್ಕಿನಿಂದ ಒಂದಷ್ಟು ಅಚ್ಚರಿಗಳು ಅಡಿಗಡಿಗೆ ಪ್ರೇಕ್ಷಕರನ್ನೆದುರಾಗಲಿದ್ದಾವೆ!

The post rajanikanth new movie: ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚಲಣಿಯಾದ ರಜನಿ! appeared first on Cini Shodha.