puppylove – Cini Shodha

hari santhosh: ಹರಿ ಸಂತೋಷ್‍ರ ಬಾಲಿವುಡ್ ಯಾನ!
ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ನಟ ನಟಿಯರ ಮನಸೊಳಗೆ ಬೇರೆ ಭಾಷೆಗಳಿಗೆ ಹಾರುವ ಕನಸು ನಟಿಗೆ ಮುರಿಯಲಾರಂಭಿಸುತ್ತೆ. ಒಂದಷ್ಟು ಮಂದಿ ಆ ಕನಸನ್ನು ಸಾಕಾರಗೊಳಿಸುವತ್ತ ಪ್ರಾಮಾಣಿಕ ಪ್ರಯತ್ನ ಹಾಕೋದಿದೆ. ಆದರೆ, ಯಶವೆಂಬುದು ದಕ್ಕುವುದು ಕೆಲವೇ ಕೆಲ ಮಂದಿಗೆ ಮಾತ್ರ. ಈ ವಿದ್ಯಮಾನದಾಚೆಗೆ, ನಿರ್ದೇಶಕರುಗಳು ಬೇರೆ ಭಾಷೆಗಳತ್ತ ಹೊರಳಿಕೊಳ್ಳೋದು ತೀರಾ ಅಪರೂಪ. ಅಂಥಾ ಅಪರೂಪದ ಸುದ್ದಿಯೊಂದಕ್ಕೆ ಯುವ ನಿರ್ದೇಶಕ ಹರಿ ಸಂತೋಷ್ ರೂವಾರಿಯಾಗಿದ್ದಾರೆ. ಅವರು ಬಾಲಿವುಡ್‍ಗೆ ಪಾದಾರ್ಪಣೆ ಮಾಡಿರುವ ವಿಚಾರ ಈ ಹಿಂದೆಯೇ ಜಾಹೀರಾಗಿತ್ತು. ಹೊಸಾ ವಿಚಾರವೆಂದರೆ, ಅವರು ನಿರ್ದೇಶನ ಮಾಡಿರುವ ಪಪ್ಪಿ ಲವ್ ಎಂಬ ಚಿತ್ರ ಕಂಪ್ಲೀಟಾಗಿದೆ. ಅದರ ನಾಯಕಿಯಾಗಿರುವಾಕೆ ಡೌಲು ರಾಣಿ ನಿಕ್ಕಿ ತಾಂಬೋಲಿ!

ಕನ್ನಡದ ಹರಿ ಸಂತೋಷ್ ಈ ಸಿನಿಮಾ ಮೂಲಕ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿರೋದೇನೋ ಖುಷಿಯ ವಿಚಾರವೇ. ಆದರೆ, ನಿಕ್ಕಿ ತಾಂಬೋಲಿ ಆ ಚಿತ್ರದ ನಾಯಕಿಯಾಗಿರೋದೇನೂ ಹೆಮ್ಮೆ ಪಡುವ ಸಂಗತಿಯಲ್ಲ. ಯಾಕೆಂದರೆ, ಆಕೆ ಸೀಮೆಗಿಲ್ಲದ ನಟಿಯೇನಲ್ಲ. ಅಷ್ಟಕ್ಕೂ ನಿಕ್ಕಿ ಬಿಗ್‍ಬಾಸ್ ಎಂಬ ಬೂಸಾ ಶೋನ ಹಿಂದಿ ಅವತರಣಿಕೆಯ ಪ್ರಾಡಕ್ಟು. ಬಿಗ್‍ಬಾಸ್ ಸೀಜನ್ 14ರ ಸ್ಪರ್ಧಿಯಾಗಿದ್ದ ಈಕೆ ಬಿಚ್ಚಮ್ಮಳಾಗಿ ಸದ್ದು ಮಾಡಿದ್ದೇ ಹೆಚ್ಚು. ಆ ನಂತರದಲ್ಲಿ ಖತ್ರೋನ್ ಕೆ ಖಿಲಾಡಿ ಎಂಬ ಮತ್ತೊಂದು ರಿಯಾಲಿಟಿ ಶೋನಲ್ಲಿಯೂ ನಿಕ್ಕಿ ಸ್ಪರ್ಧಿಯಾಗಿದ್ದಳು. ಹೀಗೆ ರಿಯಾಲಿಟಿ ಶೋಗಳ ಕೂಸಿನಂತೆ ಸುದ್ದಿಯಲ್ಲಿರುವ ಈಕೆ ನಟಿಯಾಗಿ ಗಮನ ಸೆಳೆಯುವಂಥವಳಲ್ಲ. ನಟನೆಯ ಗಂಧಗಾಳಿಯೂ ನಿಕ್ಕಿಗೆ ಪರಿಚಯವಿದ್ದಂತಿಲ್ಲ.

ಹರಿ ಸಂತೋಷ್ ಓಟಿಟಿಯನ್ನೇ ಗುರಿಯಾಗಿಸಿಕೊಂಡು ಪಪ್ಪಿ ಲವ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತನುಜ್ ಶಿರ್ವಾನಿ ನಾಯಕನಾಗಿ ನಟಿಸಿದ್ದರೆ, ನಿಕ್ಕಿ ತಾಂಬೋಲಿ ನಾಯಕಿಯಾಗಿ ಜೊತೆಯಾಗಿದ್ದಾಳೆ. ಈ ಸಿನಿಮಾದ ಪಾತ್ರಕ್ಕಾಗಿ ನಿಕ್ಕಿ ಶ್ಯಾನೆ ಶ್ರಮ ಪಟ್ಟು ತಯಾರಿ ನಡೆಸಿದ್ದಾಳಂತೆ. ಹಾಗಂತ ಅವಳೇ ಹೇಳಿಕೊಂಡಿದ್ದಾಳೆ. ಆದರೆ, ಆಕೆಯ ನಟನೆಯ ಬಗ್ಗೆ ಯಾರಿಗೇನು ಕುತೂಹಲವಿಲ್ಲ. ದೇಹ ಪ್ರದರ್ಶನಕ್ಕಷ್ಟೇ ತನ್ನ ಟ್ಯಾಲೆಂಟನ್ನು ಮೀಸಲಿಟ್ಟಿರುವ ಈಕೆ, ಈ ಹಿಂದೆ ಎಣ್ಣೆ ಏಟಿನಲ್ಲಿ ಆಕ್ಸಿಡೆಂಟ್ ಮಾಡಿ ತಗುಲಿಕೊಂಡಿದ್ದಳು. ಆ ಭೀಕರ ಅಪಘಾತದಲ್ಲಿ ಈಕೆಯ ಜೊತೆಯಿದ್ದ ಹುಡುಗಿ ಸತ್ತೇ ಹೋಗಿದ್ದಳು. ಆ ಕೇಸಿಂದ ಪ್ರಭಾವ ಬಳಸಿ ಹೊರ ಬಂದಿದ್ದ ನಿಕ್ಕಿಯೀಗ ನಟಿಯಾಗಿ ಸದ್ದು ಮಾಡ ಹೊರಟಿದ್ದಾಳೆ!

The post hari santhosh: ಹರಿ ಸಂತೋಷ್‍ರ ಬಾಲಿವುಡ್ ಯಾನ! appeared first on Cini Shodha.