prakashthuminad – Cini Shodha

Marriage Party Movie: ಇದು ಕರಾವಳಿ ಸೀಮೆಯ ಕಚಗುಳಿಯಿಡೋ ಕಥನ!
ಕರಾವಳಿಯ ಕಥೆ ಹೊಂದಿರುವ ಸಿನಿಮಾ ಎಂದರೇನೇ ಅಗೋಚರ ಸೆಳೆತವೊಂದು ಸಿನಿಮಾಸಕ್ತರ ನರನಾಡಿಗಳಿಗೆ ಹಬ್ಬಿಕೊಳ್ಳುತ್ತೆ. ಈ ಕಾರಣದಿಂದಲೇ ಆರಂಭದಿಂದಲೂ ಗಮನ ಸೆಳೆಯುತ್ತಾ ಬಂದಿದ್ದ ಚಿತ್ರ ಮ್ಯಾರೇಜ್ ಪಾರ್ಟಿ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎಂಬ ಸುಳಿವಿನೊಂದಿಗೆ ಮ್ಯಾರೇಜ್ ಪಾರ್ಟಿ ಒಂದಷ್ಟು ಸದ್ದು ಮಾಡಲಾರಂಭಿಸಿದೆ. ಈ ಮೂಲಕವೇ ಮ್ಯಾರೇಜ್ ಪಾರ್ಟಿಯ ಸುತ್ತ ಒಂದಷ್ಟು ಕುತೂಹಲ, ಚರ್ಚೆಗೂ ಚಾಲನೆ ಸಿಕ್ಕಂತಾಗಿದೆ.

ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ನಿರ್ಮಾಣ ಮಾಡಿರುವ ಸಿನಿಮಾ ಮ್ಯಾರೇಜ್ ಪಾರ್ಟಿ. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಎಂಬ ಸಿನಿಮಾವನ್ನು ನಿರ್ದೆಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಚಯನ್ ಶೆಟ್ಟಿ ಪಾಲಿಗೆ ಮ್ಯಾರೇಜ್ ಪಾರ್ಟಿ ಎರಡನೇ ಸಿನಿಮಾ. ಅಧಿಪತ್ರದ ಮೂಲಕವೇ ಭಿನ್ನ ಕಥೆಯೊಂದನ್ನು ಮುಟ್ಟಿದ್ದ ಚಯನ್, ಮ್ಯಾರೇಜ್ ಪಾರ್ಟಿಯ ಮೂಲಕ ಪಕ್ಕಾ ಫ್ಯಾಮಿಲಿ ಪ್ಯಾಕೇಜಿನಂಥಾ ಕಥನಕ್ಕೆ ಕೈಯಿಟ್ಟಿದ್ದಾರೆ. ಅದರ ಕೆಲಸ ಕಾರ್ಯಗಳೆಲ್ಲ ಪೂರ್ಣಗೊಂಡಿರುವ ಈ ಹೊತ್ತಿನಲ್ಲಿ ಫಸ್ಟ್ ಲುಕ್ ಪೋಸ್ಟರ್ ಅನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ.

ಕರಾವಳಿ ಭಾಗದ ಕಥೆ ಎಂದಾಕ್ಷಣವೇ ಸಿದ್ಧ ಸೂತ್ರದತ್ತ ಚಿತ್ತ ವಾಲಿಕೊಳ್ಳೋದು ಸಹಜ. ಭೂತ ಕೋಲ ಮುಂತಾದ ಕರಾವಳಿಯ ಅಸ್ಮಿತ್ತೆಯತ್ತಲೇ ಕಲ್ಪನೆ ಗಿರಕಿ ಹೊಡೆಯುತ್ತೆ. ಆದರೆ, ಚಯನ್ ಶೆಟ್ಟಿ ಹೇಳ ಹೊರಟಿರೋದು ಅದೆಲ್ಲದರಾಚೆಯ ಕಥೆಯನ್ನು. ಇಲ್ಲಿ ಮದುವೆಯೊಂದರ ಸುತ್ತ ಘಟಿಸುವ, ಕರಾವಳಿ ಗ್ರಾಮ್ಯ ಬದುಕನ್ನು ಸಮೃದ್ಧವಾಗಿ, ಸಮರ್ಥವಾಗಿ ಕಟ್ಟಿ ಕೊಟ್ಟಿರುವ ದೃಷ್ಯಗಳಿವೆ ಎಂಬುದನ್ನು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿತ್ತು. ಕರಾವಳಿ ಭಾಗದಲ್ಲಿ ಚಲಿಸುವ ಮಜವಾದ ಕಥೆಯೊಂದಿಗೆ, ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡು ನಿರ್ದೇಶಕರು ಈ ಸಿನಿಮಾವನ್ನು ರೂಪಿಸಿದ್ದಾರಂತೆ.

ದೊಡ್ಡ ಕ್ಯಾನ್ವಾಸ್ ಮತ್ತು ಚೆಮದದ ಪಾತ್ರಗಳೊಂದಿಗೆ ಚಯನ್ ಶೆಟ್ಟಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.

keywords: marriage party movie, sandalwood, kfi

The post Marriage Party Movie: ಇದು ಕರಾವಳಿ ಸೀಮೆಯ ಕಚಗುಳಿಯಿಡೋ ಕಥನ! appeared first on Cini Shodha.