#murdercase – Cini Shodha

pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!
ದರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ದರ್ಶನ್ ವೃತ್ತಿಬದುಕೇ ಅಡಕತ್ತರಿಗೆ ಸಿಲುಕಿದೆ. ಇನ್ನೊಂದಷ್ಟು ಹುಡುಗರ ಬದುಕೂ ಹಾಳಾಗಿದೆ. ಆದರೆ, ಅದಕ್ಕೆಲ್ಲ ಕಾರಣನಾದೆನಲ್ಲಾ ಎಂಬಂಥಾ ಪಶ್ಚಾತ್ತಾಪದ ಚೂರು ಪಸೆಯೂ ಪವಿತ್ರಾಳ ಮುಖದಲ್ಲಿ ಕಾಣಿಸಿಲ್ಲ!

ಅದೆಂಥಾ ದುಷ್ಟರೇ ಆಗಿದ್ದರೂ ಇಂಥಾ ಅನಾಹುತದ ಪರಿಣಾಮವೊಂದರ ಅಂಚಿನಲ್ಲಿ ನಿಂತಾದ ಪಶ್ಚಾತ್ತಾಪದಿಂದ ಮನಸು ಮುರುಟುತ್ತೆ. ಆದರೆ, ಈ ಪವಿತ್ರಾ ಗೌಡಳ ಮನಸಲ್ಲಿ ಅಂಥಾ ಮನುಷ್ಯತ್ವಕ್ಕೆ ಒಂದಿನಿತೂ ಜಾಗವಿದ್ದಂತಿಲ್ಲ. ಆರಂಭದಲ್ಲಿ ಜೈಲಿಗೆ ಹೋದಲ್ಲಿಂದ ಹಿಡಿದು, ಇದೀಗ ಮತ್ತೆ ಜೈಲುಪಾಲಾಗುವವರೆಗೂ ಈಕೆಯ ದುರಹಂಕಾರ ತುಸುವೂ ತಗ್ಗಿದಂತಿಲ್ಲ. ಅದೇನೋ ಸಾಧಿಸಿದವಳಂತೆ ಮೆರೆಯುತ್ತಾ ಬಂದಿರುವ ಈಕೆಗೆ ಬೇಲ್ ಮೇಲೆ ಹೊರ ಬಂದ ನಂತರದ ಶೋಕಿಗಳೇ ಮುಳುವಾಗಿವೆ. ಅದಕ್ಕೆ ಸರಿಯಾಗಿ ದರ್ಶನ್ ಕೂಡಾ ಒಳಗಿಂದೊಳಗೇ ಅಂಥಾ ಒಂದಷ್ಟು ಯಡವಟ್ಟು ಮಾಡಿಕೊಂಡಿದ್ದನಲ್ಲಾ? ಎಲ್ಲವೂ ಸೇರಿ ಇಡೀ ಪಟಾಲಮ್ಮೇ ಜೈಲುಪಾಲಾಗಿದೆ.

ಪವಿತ್ರಾ ಗೌಡ ಅದೆಂಥಾ ಅವಿವೇಕಿ ಎಂದರೆ, ಬೇಲ್ ಮೂಲಕ ಹೊರ ಬಂದವಳೇ ಮಾವನ ಮನೆಯಿಂದ ವಾಪಾಸಾದಷ್ಟೇ ನಿರಾಳವಾಗಿ ಬದುಕಲಾರಂಭಿಸಿದ್ದಳು. ಆಕೆಗೆ ಇನ್ನು ಜೈಲಿಗೆ ಹೋಗೋದಿಲ್ಲ ಎಂಬಂಥಾ ನಂಬಿಕೆಯಿತ್ತಾ? ಅದು ಇಷ್ಟು ವರ್ಷಗಳ ಕಾಲ ಬದುಕಿದ ಭಂಡ ಬಾಳು ಕರುಣಿಸಿದ ಸ್ವಭಾವವಾ ಗೊತ್ತಿಲ್ಲ. ಪವಿತ್ರಾ ಮತ್ತೆ ತನ್ನ ಉದ್ಯಮಕ್ಕೆ ಮರಳಿದಂತೆ ಪೋಸು ಕೊಡಲಾರಂಭಿಸಿದ್ದಳು. ಲಕಲಕಿಸುತ್ತಾ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಅಹಮ್ಮಿಕೆ ಪ್ರದರ್ಶಿಸಿದ್ದಳು. ತಪ್ಪೆಸಗಿದವರಿಗೆ ಇಷ್ಟರ ಮಟ್ಟಿಗೆ ತಿಮಿರಿರೋದನ್ನು ನ್ಯಾಯ ವ್ಯವಸ್ಥೆ ಗಮನಿಸದಿರಲು ಸಾಧ್ಯವೇ? ಈವತ್ತಿಗೆ ದರ್ಶನ್ ಮತ್ತೆ ಜೈಲು ಸೇರಿರೋದರ ಹಿಂದೆ ಇಂಥಾ ಅನೇಕ ಸೂಕ್ಷ್ಮಗಳಿದ್ದಾವೆ. ಸರ್ಕಾರದ ಪರ ವಕೀಲರಿಗೆ ವಾದಿಸಲು ಬೇಕಾದ ಅಷ್ಟೂ ಸರಕುಗಳನ್ನು ಪವಿತ್ರಾಳೇ ಖುದ್ದಾಗಿ ಸೃಷ್ಟಿಸಿ ಕೊಟ್ಟಂತಾಗಿದೆ!

ಯಾರು ಏನಾದರೂ ಅಂದುಕೊಳ್ಳಲಿ, ಯಾರ ಬದುಕಾದರೂ ಹಡಾಲೇದ್ದು ಹೋಗಲಿ; ತಾನು ಮಾತ್ರ ಹೈಫೈ ಬದುಕು ನಡೆಸಬೇಕೆಂಬ ಮನಃಸ್ಥಿತಿ ಪವಿತ್ರಾಳದ್ದು. ಆಕೆ ಜೀವದಂತೆ ಹಚ್ಚಿಕೊಂಡು ಪ್ರೀತಿಸಿ ಮದುವೆಯಾಗಿದ್ದ ಪತಿಯೇ ಕೈಯೆತ್ತಿದ್ದರ ಹಿಂದೆಯೂ ಅಂಥಾ ಮನಃಸ್ಥಿತಿಯ ಕಿಸುರಿದೆ. ದರ್ಶನ್ ಥರದ ಆನೆಯನ್ನು ನಾಜೂಕಾಗಿ ಪಳಗಿಸಿಕೊಂಡು, ಆತನ ಮನದನ್ನೆಯಾಗಿದ್ದರ ಹಿಂದೆಯೂ ಹೈಫೈ ಬದುಕಿನ ಆಕಾಂಕ್ಷೆಯೇ ಪ್ರಧಾನವಾಗಿರುವಂತೆ ಕಾಣಿಸುತ್ತದೆ. ದುರಂತವೆಂದರೆ ಮದವೇರಿ ತೊನೆಯುತ್ತಿದ್ದ ದಾಸನಿಗೆ ಇಂಥಾ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ಇರಲಿಲ್ಲ. ಬಹುಶಃ ತನಗೆ ಆಶ್ಲೀಲವಾಗಿ ಮೆಸೇಜು ಬಿಟ್ಟವನ ಹನನ ಮಾಡಿದ ಶಕ್ತಿ ತಾನೆಂಬ ಭ್ರಮೆ ಪವಿತ್ರಾಗಿದ್ದರೂ ಇದ್ದೀತು. ಹಾಗೊಂದು ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮ ಎಸೇಜು ಬಿಡುವವರನ್ನೆಲ್ಲ ಕೊಂದು ಕೆಡವಿದರೆ, ಬೀಳೋ ಹೆಣಗಳ ರಾಶಿಯಲ್ಲಿ ದರ್ಶನ್ ವೀರಾಭಿಮಾನಿಗಳದ್ದೇ ಮೆಜಾರಿಟಿ ಇರುತ್ತೆ. ಒಟ್ಟಾರೆಯಾಗಿ ಪವಿತ್ರಾಳ ಮೋಹದ ಬಲೆಗೆ ಸಿಕ್ಕ ದರ್ಶನ್ ಬಂಧಿಯಾಗಿದ್ದಾನೆ. ಓರ್ವ ಸ್ಟಾರ್ ನಟನಾಗಿ ಆತನ ಘನತೆ, ಗೌರವಗಳು ಅಕ್ಷರಶಃ ಮಣ್ಣುಪಾಲಾಗಿ ಬಿಟ್ಟಿವೆ!

The post pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ! appeared first on Cini Shodha.

darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ ನಡೆದುಕೊಂಡ ಜೈಲಾಧಿಕಾರಿಗಳಿಗೂ ಶಾಕ್ ಕೊಟ್ಟಿದೆ.

ಅವಳ್ಯಾರೋ ಪವಿತ್ರಾ ಗೌಡಳ ಮೋಹಕ್ಕೆ ಬಿದ್ದಿದ್ದ ದರ್ಶನ್ ಕೊಲೆಯ ಮೂಲಕ ರಕ್ತ ಮೆತ್ತಿಸಿಕೊಳ್ಳುವಾಗ ಕಾನೂನ ಎಂಬುದು ಈ ಪರಿಯಾಗಿ ಪ್ರಹಾರ ನಡೆಸುತ್ತೆ ಅಂದುಕೊಂಡಿರಲಿಕ್ಕಿಲ್ಲ. ಮಾಧ್ಯಮಗಳ ಮುಂದೆ ಎದೆಯುಬ್ಬಿಸಿ ಮಾತಾಡಿ ದಕ್ಕಿಸಿಕೊಂಡಷ್ಟೇ ಸಲೀಸಾಗಿ ಈ ಕೊಲೆ ಕೇಸಿಂದ ಹೊರಬರಬಹುದೆಂಬ ಗಾಢ ವಿಶ್ವಾಸ ಆತನಿಗಿದ್ದಂತಿತ್ತು. ಹಾಗಿಲ್ಲದೇ ಹೋಗಿದ್ದರೆ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ತಿಮಿರು ತೋರಿಸುತ್ತಿರಲಿಲ್ಲ; ಮುಚ್ಕೊಂಡು ಗಾಡಿ ಹತ್ತುತ್ತೀಯಾ ಅಥವಾ ನಾವೇ ಎಳಕೊಂಡು ಹೋಗ್ಬೇಕಾ ಅಂತ ಪೊಲೀಸ್ ಅಧಿಕಾರಿಯಿಂದಲೇ ಅನ್ನಿಒಸಿಕೊಳ್ಳುತ್ತಲೂ ಇರಲಿಲ್ಲ. ಈ ಕ್ಷಣಕ್ಕೆ ದರ್ಶನ್ ತಲುಪಿರೋ ಸ್ಥಿತಿಗೆ ಕಾರಣ ಏನೆಂಬುದನ್ನು ಅವಲೋಕಿಸಿದರೆ ತಿಮಿರು ಮತ್ತು ತಿಮಿರಿನ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ!

ತಿಂಗಳುಗಟ್ಟಲೆ ಜೈಲು ಪಾಲಾಗಿ ವಾಪಾಸಾದ ನಂತರವೂ ದರ್ಶನ್‌ಗೆ ಹಳೇ ತಿಮಿರು ಇಳಿದಂತೆ ಕಾಣುತ್ತಿರಲಿಲ್ಲ. ವಕೀಲರು ಒತ್ತಿ ಒತ್ತಿ ಹೇಳಿದ್ದ ವಿಚಾರಗಳನ್ನು ಕೇಳಿ ದಾಸನಿಗೆ ಸಹಜವಾಗಿಯೇ ಭಯ ಶುರುವಾಗಿತ್ತು. ಚೂರೇ ಚೂರು ಮಿಸುಜಕಾಡಿದರೂ ಕೂಡಾ ಮತ್ತೆ ಜೈಲು ಪಾಲಾಗುವ ಕಂಟಕ ಆತನನ್ನು ಕೊಂಚ ಹದ್ದುಬಸ್ತಿನಲ್ಲಿಟ್ಟಿತ್ತು. ಆದರೆ ಆತ ಸೆಲೆಬ್ರಿಟೀಸ್ ಅಂತ ಕರೆಯುತ್ತಾ ಕೊಬ್ಬಿಸಿದ್ದ ಕೆಲ ಹಡಬೇ ಅಭಿಮಾನಿಗಳಿದ್ದಾರಲ್ಲಾ? ಅಂಥಾ ಕುನ್ನಿಗಳನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಸಣ್ಣದೊಂದು ಪ್ರಯತ್ನವನ್ನೂ ದರ್ಶನ್ ನಡೆಸಿರಲಿಲ್ಲ. ಒಂದು ವೇಳೆ ಹಾಗೊಂದು ಕ್ರಮ ಕೈಗೊಂಡು ತೆಪ್ಪಗಿದ್ದಿದ್ದರೆ ಅಭಿಮಾನಿಗಳೆನ್ನಿಸಿಕೊಂಡಿರೋ ಕೆಲ ಗೂಂಡಾ ಮನಃಸ್ಥಿತಿಯ ಚಿಲ್ಟುಗಳು ಸೋಶಿಯಲ್ ಮೀಡಿಯಾ ಮೂಲಕ ಮೆರೆಯುತ್ತಿರಲಿಲ್ಲ.

ತಮ್ಮ ಬಾಸ್ ದರ್ಶನನನ್ನು ಯಾವ ಕಾನೂನುಗಳೂ ಏನೂ ಮಾಡಲು ಸಾಧ್ಯವಿಲ್ಲ ಎಂಬಂಥಾ ಭ್ರಮೆ ಅಭಿಮಾನಿ ಪಡೆಯನ್ನು ಆವರಿಸಿಕೊಂಡಿತ್ತು. ಅದೀಗ ಎರಡನೇ ಬಾರಿ ಕಳಚಿಕೊಂಡಿದೆ. ದರ್ಶನ್ ಅದೇನೇ ಪ್ರಯತ್ನ ಪಟ್ಟರೂ ಕೂಡಾ ಇನ್ನಾರು ತಿಂಗಳ ಕಾಲ ಜೈಲು ವಾಸ ಖಾಯಂ. ಈತನಿಗೆ ಈಗ ಬಂದೊದಗಿರೋ ಸ್ಥಿತಿಯ ಹಿಂದೆ ಆತನ ಅಭಿಮಾನಿಗಳೆನ್ನಿಸಿಕೊಂಡವರ ಪಾಲಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬೇಲ್ ಕ್ಯಾನ್ಸಲ್ ಮಾಡಬೇಕೆಂದು ಕೋರಿ ಸುಪ್ರೀಂ ಅಂಗಳದಲ್ಲಿ ದರ್ಶನ್ ಭವ್ಯವಿರುವಾಗಲೇ ಅಭಿಮಾನಿ ಬಳಗ ಗೂಂಡಾಗಿರಿಗಿಳಿದಿತ್ತು. ನಟಿ ರಮ್ಯಾ ವಿರುದ್ಧ ಕೆಟ್ಟಾಕೊಳಕು ಪ್ರಹಾರ ಮಾಡುವ ಮೂಲಕ ಕೇಸು ಜಡಿಸಿಕೊಂಡಿತ್ತು. ದರ್ಶನ್ ಯಾವ ರೀತಿ ಬದುಕುತ್ತಿದ್ದಾನೆ? ಆತನ ಅಭಿಮಾನಿಗಳು ಅದೆಷ್ಟು ಅನಾಹುತಕಾರಿಗಳಾಗಿದ್ದಾರೆ? ಕೊಂಚ ಯಾಮಾರಿದರೆ ದರ್ಶನ್ ಅಭಿಮಾನಿ ಪಡೆ ಕಟ್ಟಿಕೊಂಡು ಎಂಥಾ ಅನಾಹುತ ನಡೆಸಬಲ್ಲ? ಇಂಥಾ ದಿಕ್ಕುಗಳಲ್ಲಿ ನ್ಯಾಯಾಂಗ ಆಕಲೋಚಿಸಿಯೇ ಇಂಥಾದ್ದೊಂದು ಖಡಕ್ ಆದೇಶ ಕೊಟ್ಟಿರುವಂತಿದೆ.

ದರ್ಶನ್ ಅದೆಂಥಾ ಮುಠ್ಠಾಳನೆಂದರೆ, ತನ್ನ ಅಪಾರ ಅಭಿಮಾನಿ ಬಳಗವನ್ನು ತನ್ನ ಮಾತು ವರ್ತನೆದಗಳೇ ಪ್ರಭಾವಿಸುತ್ತವೆಂಬ ಸಣ್ಣ ಖಬರೂ ಆತನಿಗಿರಲಿಲ್ಲ. ಈ ಅವಿಕೇಕಿ ಎಣ್ಣೆ ಏಟಲ್ಲಿ ಬಡಬಡಿಸಿದ್ದನ್ನೇ ಕೆಲ ಅಭಿಮಾನಿಗಳು ಬದುಕಾಗಿಸಿಕೊಂಡಿದ್ದಾರೆ. ಅಂಥವರ ಮಾತು, ವರ್ತನೆ, ಭಾಷೆಗಳಲ್ಲಿ ಅದೇ ಛಾತಯೆ ಎದ್ದು ಕಾಣುತ್ತಿದೆ. ಈತ ಒಂದು ಹಂತದಲ್ಲಿ ಮಾಧ್ಯಮಗಳನ್ನು ಎದುರು ಹಾಕಿಕೊಂಡ. ಮೀಡಿಯಾ ತನ್ನ ಶಾಟಕ್ಕೆ ಸಮ ಎಂದ. ಈಗ ಅದೇ ದರ್ಶನ್ ಈ ನೆಲದ ಕಾನೂನು ಕಟ್ಟಳೆಗಳ ಮುಂದೆ ಶಾಟಕ್ಕಿಂತಲೂ ಕಡೆಯಾಗಿ ನಿಂತಿದ್ದಾನೆ. ಕೀರ್ತಿಯ ನಶೆ, ನೆತ್ತಿಗೇರಿ ಅಲ್ಲಿಯೇ ಪರ್ಮನೆಂಟಾಗಿ ನೆಲೆ ಕಂಡುಕೊಳ್ಳೋ ದುರಹಂಕಾರ ಎಂಥಾ ಅನಾಹುತ ಸೃಷ್ಟಿಸುತ್ತದೆಂಬುದಕ್ಕೆ ದರ್ಶನ್ ತಾಜಾ ಉದಾಹರಣೆಯಾಗಿ ಕಾಣಿಸುತ್ತಿದ್ದಾನೆ!

The post darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? appeared first on Cini Shodha.

darshan: ಕಾನೂನಿನ ಮುಂದೆ ಮಂಡಿಯೂರಿತು ಸ್ಟಾರ್ ಗಿರಿ!
ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತು, ಚಾಲೆಂಜಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದಾತ (challenging star darshan) ದರ್ಶನ್. ಝೀರೋ ಲೆವೆಲ್ಲಿನಿಂದ ಯಾವ ಎತ್ತರಕ್ಕೇರಬೇಕನ್ನೋದಕ್ಕೂ, ಆ ಎತ್ತರದಿಂದ ಎಂಥಾ ಪಾತಾಳಕ್ಕಿಳಿಯಬಹುದು ಅನ್ನೋದಕ್ಕೂ ಈತ ಪಕ್ಕಾ ರೋಲ್ ಮಾಡೆಲ್. (darshan) ದರ್ಶನ್ ಗೆ ಸಿಕ್ಕ ಗೆಲುವು, ಪ್ರೀತಿ ಸಾಮಾನ್ಯ ತೂಕದ್ದಲ್ಲ. ತಲೆ ನೆಟ್ಟಗಿರುವ ಯಾವನೇ ಆಗಿದ್ರೂ ಅದನ್ನು ಕಡೇತನಕ ಕೈತಪ್ಪದಂತೆ ಕಾಪಿಟ್ಟುಕೊಳ್ತಿದ್ರು. ಬಹುಶಃ ಬದುಕನ್ನ ನಾನಾ ವ್ಯಸನಗಳು, ಖಯಾಲಿಗಳ ಸೆಳವಿಗೆ ಸಿಗದಂತೆ ಎಚ್ಚರ ವಹಿಸಿದ್ದರೆ ದರ್ಶನ್ ಕೊಲೆಗಡುಕನ ಸ್ಥಾನದಲ್ಲಿ ನಿಲ್ಲುವ ಪ್ರಮೇಯವೇ ಬರುತ್ತಿರಲಿಲ್ಲ. ಬಾಕ್ಸ್ ಆಫೀಸ್ ಸುಲ್ತಾನ, (d boss) ಡಿ ಬಾಸ್ ಅಂತೆಲ್ಲ ತಲೆತುಂಬ ಭ್ರಮೆಗಳ ಕಸ ತುಂಬಿಕೊಂಡಿದ್ದಾತ ದರ್ಶನ್. ಈಗ ವಿಧಿಯೆಂಬ ವಿಧಿ ಆ ಕಸಗಳಿಗೆ ಕಿಡಿಸೋಕಿಸಿದೆ. ಇಷ್ಟೂ ವರ್ಷದ ಎಫರ್ಟು ಮಾನ ಮರ್ಯಾದೆಗಳ ಸಮೇತ ಬೂದಿಯಾಗಿದೆ!

ಎಂಥಾ ಕಚಡಾ ಕೆಲಸ ಮಾಡಿ ಬಂದರೂ ಜನ ಸಿನಿಮಾ ನೋಡಿ ಗೆಲ್ಲಿಸ್ತಾರೆಂಬ ತಿಮಿರು ದರ್ಶನನ ನೆತ್ತಿಗೇರಿ ನರ್ತನ ಶುರುವಿಟ್ಟುಕೊಂಡಿತ್ತು. ತನ್ನ ಫ್ಯಾನ್ ಬೇಸಿನ ಮುಂದೆ ರಾಜ್ಯ ಮುಖ್ಯಮಂತ್ರಿಗಳೂ ಮಂಕಾಗ್ತಾರೆಂಬಂಥಾ ಅಹಂ ಆತನನ್ನು ಅಪಾದಮಸ್ತಕ ಆವರಿಸಿಕೊಂಡಿತ್ತು. ಸಿಕ್ಕವರ ಮೇಲೆ ಹಲ್ಲೆ ನಡೆಸೋದು, ಎಣ್ಣೆ ಏಟಲ್ಲಿ ಆವಾಜು ಬಿಡೋದು ಈತನ ಪಾಲಿಗೆ ಮಾಮೂಲಾಗಿ ಹೋಗಿತ್ತು. ಇಂಥಾ ದುಂಡಾವರ್ತನೆಗಳಿಗೆ ನೇರವತಿಂಕೆಯ ಮುಸುಕು ಹಾಕಿ ಬಚಾವಾಗುವ ಕ್ರಿಮಿನಲ್ಲು ಬುದ್ಧಿಯನ್ನ ದಾಸ ಪ್ರದರ್ಶಿಸಲಾರಂಭಿಸಿದ್ದ. ತನ್ನ ವಿಕೃತ ಮನಃಸ್ಥಿತಿಗೆ ತಕ್ಕುದಾದೊಂದು ಅಭಿಮಾನಿ ಪಡೆ ಕಟ್ಟಿಕೊಂಡಿದ್ದ. ಅದನ್ನ ನಂಬಿಕೊಂಡು ತೊಡೆ ತಟ್ಟಲಾರಂಭಿಸಿದ್ದ ದರ್ಶನ್ ಈಗ ಖಡಕ್ ಖಾಕಿ ಪಡೆಯ ಮುಂದೆ ಕೆಕರುಮಕರಾಗಿ ಕೈಕಟ್ಟಿ ನಿಲ್ಲುವಂತಾಗಿದೆ.

ಪವಿತ್ರಾಗೆ ಅಶ್ಲೀಲ ಮೆಸೇಜು ಕಳಿಸಿದನೆಂದು ಬಡಪಾಯಿಯೊಬ್ಬನ ಜೀವ ತೆಗೆದನಲ್ಲಾ ದರ್ಶನ್? ಹಾಗೊಂದು ಅವಘಡ ನಡೆದ ಘಳಿಗೆಯಲ್ಲಿಯೂ ಸಲೀಸಾಗಿ ಬಚಾವಾಗಿ ಬಿಡುವ ಭರವಸೆಯಿತ್ತು. ಮೈಸೂರಿನ ಹೊಟೇಲಿನಲ್ಲಿ ಕಸರತ್ತು ನಡೆಸುತ್ತಿದ್ದವನ ಮುಂದೆ ಖಾಕಿ ಪಡೆ ಪ್ರತ್ಯಕ್ಷವಾದಾಗಲೂ ಆ ತಿಮಿರೇನು ಕಡಿಮೆಯಾಗಿರಲಿಲ್ಲ. ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಒಂದೇ ಒಂದು ಆವಾಜಿಗೆ ಚಾಲೆಂಜಿಂಗ್ ಸ್ಟಾರ್ ನ ದುರಹಂಕಾರ ತಲ್ಲಣಿಸಿ ಹೋಗಿತ್ತು. ಅಲ್ಲಿಂದಾಚೆಗೆ ಇದರಿಂದ ಪಾರಾಗಲು ನಾನಾ ರೀತಿಯ ಕಸರತ್ತು ನಡೆಸಿದ್ದ. ಕಡೆಗೂ ರಾತ್ರಿ ಪೊಲೀಸ್ ಠಾಣೆಯಲ್ಲಿ ಚಾಪೆ ಹಾಸಿಕೊಂಡು ಮಲಗುವ ಸ್ಥಿತಿ ಬಂದಾಗ ಬಹುಶಃ ಕಾನೂನಿನ ಮುಂದೆ ಬಾಸೂ ಒಂದೇ ಬೂಸಾವೂ ಒಂದೇ ಎಂಬ ದಿಗ್ಧರ್ಶನವಾಗಿರಬಹುದು!

ದರ್ಶನ್‍ಗೆ ಎಣ್ಣೆ, ಸಿಗರೇಟು ಸೇರಿದಂತೆ ಒಂದಷ್ಟು ಚಟಗಳಿರೋದು ಗುಟ್ಟಾಗುಳಿದಿಲ್ಲ. ಸಾಮಾನ್ಯವಾಗಿ ಇಂಥಾ ಅಡಿಕ್ಷನ್ನು ಸರಿಯಾದ ಸಮಯಕ್ಕೆ ಮಾಲು ಸಿಗದೇ ಹೋದಾಗ ಉಲ್ಬಣಿಸುತ್ತೆ. ಹಾಗೆ ರೊಚ್ಚಿಗೆದ್ದ ದರ್ಶನ್ ಪೊಲೀಸ್ ಅಧಿಕಾರಿಗಳ ಮುಂದೆ ಗಾಂಚಾಲಿ ತೋರಿಸಿದನಾ? ಈತನ ದುರಹಂಕಾರ ಕಂಡು ತಾಳ್ಮೆ ಕಳೆದುಕೊಂಡ ಅಧಿಕಾರಿಯೊಬ್ಬರು ರಪ್ಪನೆ ಕೆನ್ನೆಗೊಂದು ಬಿಗಿದು ಕೂರಿಸಿದರಾ? ಹಾಗೊಂದು ಸುದ್ದಿ ಸದ್ಯ ಹರಿದಾಡ್ತಿದೆ. ಪೊಲೀಸ್ ವ್ಯಾನಿನಲ್ಲಿ ಕುಂತ ದರ್ಶನ್ ಮುಖ ಕೊಂಚ ಬಾತುಕೊಂಡಂತೆ ಭಾಸವಾಗುತ್ತಿತ್ತು. ಅದು ಖಾಕಿ ಕೈಚಳಕವಾಗಿದ್ದರೂ ಅಚ್ಚರಿಯೇನಿಲ್ಲ. ಓರ್ವ ಸ್ಟಾರ್ ನಟ ಈ ಸ್ಥಿಗೆ ತಲುಪಿಕೊಳ್ಳುತ್ತಾನಂದ್ರೆ ಅದಕ್ಕಿಂತ ನೋವಿನ ಸಂಗತಿ ಬೇರ್ಯಾವುದಿದೆ?

The post darshan: ಕಾನೂನಿನ ಮುಂದೆ ಮಂಡಿಯೂರಿತು ಸ್ಟಾರ್ ಗಿರಿ! appeared first on Cini Shodha.