mahanatichandana – Cini Shodha

Love Seasons Movie: ಸ್ಯಾಂಡಲ್ವುಡ್ಡಿಗೆ ಅಡಿಯಿರಿಸಿದ ಭರತನಾಟ್ಯ ಪಾರಂಗತೆ!
ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್ ಸೀಸನ್ಸ್ ಚಿತ್ರ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಹಾಡುಗಳ ಮೂಲಕ ಎಲ್ಲರನ್ನೂ ಮೆಲುವಾಗಿ ಆವರಿಸಿಕೊಂಡಿರೋ ಲವ್ ಸೀಸನ್ಸ್ ಮೂಲಕ ಪ್ರತಿಭಾನ್ವಿತ ಹೊಸಬರ ತಂಡವೊಂದು ಅತ್ಯುತ್ಸಾಹದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಣಿಯಾಗಿದೆ. ಮೇಲು ನೋಟಕ್ಕೆ ಈ ತಂಡದಲ್ಲಿರೋದು ಹೊಸಬರೆಂಬಂತೆ ಕಂಡರೂ ಕೂಡಾ, ಪ್ರತಿಯೊಬ್ಬರೂ ತಂತಮ್ಮ ಕನಸಿಗೆ ತಕ್ಕಂತೆ ವರ್ಷಗಟ್ಟಲೆ ತಯಾರಿ ನಡೆಸಿದ್ದಾರೆ. ನಾನಾ ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿಕೊಂಡಿದ್ದಾರೆ. ಆ ಸಾಲಿನಲ್ಲಿರುವಾಕೆ ಚಂದನಾ!

ಈ ಸಿನಿಮಾದ ನಾಯಕಿಯರಲ್ಲಿ ಒಬ್ಬರಾಗಿರುವ ಚಂದನಾ, ಮಹಾನಟಿ ಎಂಬ ರಿಯಾಲಿಟಿ ಶೋ ಮೂಲಕ ಕರ್ನಾಟಕಕ್ಕೆ ಚಿರಪರಿಚಿತವಾಗಿರುವವರು. ಮಹಾನಟಿಯಂಥಾ ವೇದಿಕೆಯಲ್ಲಿ ನಟಿಯಾಗಿ ಮಿಂಚಿದ್ದ ಚಂದನಾರ ಬಹುದೊಡ್ಡ ಕನಸೊಂದು ಲವ್ ಸೀಸನ್ಸ್ ಮೂಲಕ ಸಾಕಾರಗೊಂಡಿದೆ. ವ್ಯಾಸಂಗದ ಜೊತೆ ಜೊತೆಗೇ ನಟನೆಯತ್ತ ಗಮನ ಹರಿಸಿದ್ದ ಚಂದನಾ ಪಾಲಿಗೆ ಮಹಾನಟಿಯಂಥಾ ದೊಡ್ಡ ವೇದಿಕೆ ಸಿಕ್ಕಿ, ಆ ಮೂಲಕ ಒಂದಷ್ಟು ಪ್ರಸಿದ್ಧಿಯೂ ದಕ್ಕಿತ್ತು. ಅದಾದ ಬಳಿಕ ನಾಯಕಿಯಾಗೋ ಕನಸಿನ ಸಾಕರಕ್ಕಾಗಿ ಪ್ರಯತ್ನ ಪಡುತ್ತಿರುವಾಗಲೇ ವರವೆಂಬಂತೆ ಲವ್ ಸೀಸನ್ಸ್ ಚಿತ್ರದ ನಾಯಕಿಯಾಗೋ ಅವಕಾಶ ಕೂಡಿ ಬಂದಿತ್ತು.

ಒಟ್ಟಾರೆ ಕಥೆಯ ಗೌಪ್ಯತೆಯ ದೃಷ್ಟಿಯಿಂದ ಚಂದನಾ ನಿರ್ವಹಿಸಿರುವ ಪಾತ್ರದ ಬಗ್ಗೆ ಹೆಚ್ಚೇನೂ ಹೇಳಲಾಗದಿದ್ದರೂ, ಅದೊಂದು ವಿಭಿನ್ನವಾದ ಪಾತ್ರ ಮತ್ತು ಅದು ಪ್ರತೀ ಪ್ರೇಕ್ಷಕರಿಗೂ ಹಿಡಿಸುವಂಥಾ ಪಾತ್ರವೆಂಬ ತುಂಬು ನಂಬಿಕೆ ಚಂದನಾರದ್ದು. ಒಂದೊಳ್ಳೆ ತಂಡ, ಹೊಸಬರ ಹುಮ್ಮಸ್ಸು ಮತ್ತು ಚೆಂದದ ಕಥೆಯ ಮೂಲಕ ಲವ್ ಸೀಸನ್ಸ್ ಒಂದೊಳ್ಳೆ ಚಿತ್ರವಾಗಿ ರೂಪುಗೊಂಡಿದೆ ಎಂಬ ತೃಪ್ತ ಭಾವ ಹೊಂದಿರೋ ಚಂದನಾಗೆ, ಈ ಸಿನಿಮಾ ನಿರೀಕ್ಷಿತ ಗೆಲುವು ಕಾಣಲಿದೆ ಎಂಬ ಭರವಸೆಯಿದೆ. ಲವ್ ಸೀಸನ್ಸ್ ಮೂಲಕವೇ ತನ್ನ ಕನಸಿನ ಹಾದಿಯ ಹೆಬ್ಬಾಗಿಲು ತೆರೆದುಕೊಳ್ಳುತ್ತದೆಂಬ ಗಾಢ ನಂಬಿಕೆಯೂ ಅವರಲ್ಲಿದೆ. ಅದಕ್ಕೆ ಕಾರಣವಾಗಿರೋದು ಈ ಸಿನಿಮಾ ಮೂಡಿ ಬಂದಿರೋ ರೀತಿ ಮತ್ತು ಅದರಲ್ಲಿರುವ ಗಟ್ಟಿ ಕಥನ!

ಮೂಲತಃ ಬೆಂಗಳೂರಿನವರೇ ಆದ ಚಂದನಾರನ್ನು ಐದು ವರ್ಷವಿರುವಾಗಲೇ ಅಜ್ಜಿ ಒತ್ತಾಯಪೂರ್ವಕವಾಗಿ ಭರತನಾಟ್ಯ ಕಲಿಕೆಗೆ ಸೇರಿಸಿದ್ದರಂತೆ. ಆರಂಭದಲ್ಲಿ ಒಲ್ಲದ ಮನಸಿನಿಂದ ಭರತನಾಟ್ಯ ತರಗತಿಗೆ ಹೋಗುತ್ತಿದ್ದ ಚಂದನಾಗೆ, ಬರಬರುತ್ತಾ ಭರತನಾಟ್ಯದ ನಾನಾ ಆಯಾಮಗಳು ಬೆರಗು ಮೂಡಿಸಲಾರಂಭಿಸಿದ್ದವು. ಅಭಿನಯ ಕೂಡಾ ಭರತನಾಟ್ಯದ ಆತ್ಮವಾಗಿರೋದರಿಂದ, ಎಳವೆಯಿಂದಲೇ ನಟನೆ ಆಕೆಯನ್ನು ಬಹುವಾಗಿ ಆವರಿಸಿಕೊಳ್ಳಲಾರಂಭಿಸಿತ್ತು. ಭರತನಾಟ್ಯದಲ್ಲಿ ಪಳಗಿಕೊಳ್ಳುತ್ತಲೇ, ನಟಿಯಾಗಬೇಕೆಂಬ ಕನಸು ಕಾಣಲಾರಂಭಿಸಿದ್ದ ಚಂದನಾ, ಹತ್ತನೇ ತರಗತಿ ಮುಗಿಯುತ್ತಲೇ ರಂಗತಂಡಗಳೊಂದಿಗೆ ಸೇರಿಕೊಂಡು ಅಭಿನಯದ ಪಟ್ಟುಗಳನ್ನು ಕಲಿಯಲಾರಂಭಿಸಿದ್ದರು. ದ್ವಿತೀಯ ಪಿಯುಸಿ ಹಂತದಲ್ಲಿಯೇ ನಟಿಯಾಗೋ ಅವಕಾಶಕ್ಕಾಗಿ ಅರಸುತ್ತಿದ್ದವರಿಗೆ ಉದಯ ವಾಹಿನಿಯ ಕನ್ಯಾದಾನ ಎಂಬ ಧಾರಾವಾಹಿಯ ಪುಟ್ಟ ಪಾತ್ರವೊಂದರಲ್ಲಿ ನಟಿಸೋ ಅವಕಾಶ ಲಭಿಸಿತ್ತು.

ಆ ಮೂಲಕ ಮೊದಲ ಸಲ ಕಿರುತೆರೆಯಲ್ಲಿ ಬಣ್ಣಹಚ್ಚಿದ್ದ ಚಂದನಾಗೆ ನಿರ್ದೇಶಕ ನವೀನ್ ಸೋಮನಹಳ್ಳಿಯವರ ಮಾರ್ಗದರ್ಶನವೂ ಸಿಕ್ಕಿತ್ತು. ೨೦೨೪ರಲ್ಲಿ ಬಿಬಿಎ ವ್ಯಾಂಸಂಗ ಮಾಡುತ್ತಿರುವಾಗಲೇ ಮಹಾನಟಿ ಎಂಬ ರಿಯಾಲಿಟಿ ಶೋದ ಆಡಿಷನ್ ಕರೆಯಲಾಗಿತ್ತು. ಜೆಆರ್‌ಸಿ ಕಾಲೇಜಿನಲ್ಲಿ ನೂರಾರು ಆಕಾಂಕ್ಷಿಗಳ ಜೊತೆ ಆಡಿಷನ್ನಿನಲ್ಲಿ ಪಾಲ್ಗೊಂಡಿದ್ದ ಚಂದನಾಗೆ ಮಹಾನಟಿಯಾಗುವ ಅವಕಾಶ ಕೂಡಿ ಬಂದಿತ್ತು.

ಆ ಶೋನಲ್ಲಿ ತನ್ನ ನಟನಾ ಚಾತುರ್ಯದ ಮೂಲಕ ಗಮನ ಸೆಳೆಯುತ್ತಲೇ, ಮೆಚ್ಚುಗೆ ಗಳಿಸಿಕೊಂಡಿದ್ದ ಚಂದನಾ, ಆ ನಂತರ ಸಿನಿಮಾ ನಾಯಕಿಯಾಗುವ ಕನಸಿನತ್ತ ಗಂಭೀರವಾಗಿ ಹೊರಳಿಕೊಂಡಿದ್ದರು. ಆ ಹಾದಿಯಲ್ಲಿ ಅಚಾನಕ್ಕಾಗಿ ಎದುರುಗೊಂಡಿದ್ದದ್ದು ಲವ್ ಸೀಸನ್ಸ್ ಚಿತ್ರದ ನಾಯಕಿಯಾಗೋ ಸದವಕಾಶ. ಇಲ್ಲಿನ ವಿಭಿನ್ನ ಪಾತ್ರವನ್ನು ಶಕ್ತಿ ಮೀರಿ ಆವಾಹಿಸಿಕೊಂಡ ತೃಪ್ತಿ ಚಂದನಾರಲ್ಲಿದೆ. ಸದ್ಯಕ್ಕೆ ಲವ್ ಸೀಸನ್ಸ್ ನಡುವಲ್ಲಿಯೇ ಒಂದಷ್ಟು ಅವಕಾಶಗಳು ಈಕೆಯನ್ನು ಅರಸಿಕೊಂಡು ಬರುತ್ತಿವೆ. ಅದೆಲ್ಲವನ್ನೂ ಸಾವಧಾನದಿಂದ ಪರಾಮಾರ್ಶೆ ನಡೆಸಿ ನಿರ್ಧಾರ ತಳೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಾಯಕಿಯಾಗಿ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಳ್ಳುವುದರ ಜೊತೆಗೇ ಒಳ್ಳೆ ಕಥೆ, ಪಾತ್ರ ಸಿಕ್ಕರೆ ಕಿರುತೆರೆಯಲ್ಲಿಯೂ ಸಕ್ರಿಯರಾಗಿರುವ ಇರಾದೆಯೂ ಚಂದನಾರಲ್ಲಿದೆ. ಹೀಗೆ ಮಹಾನಟಿಯಾಗಿ ಹೆಸರು ಮಾಡಿ, ಹಿರಿತೆರೆಗೆ ಆಗಮಿಸಿರುವ ಚಂದನಾಗೆ ಲವ್ ಸೀಸನ್ಸ್ ವರವಾಗುವ ಲಕ್ಷಣಗಳೇ ಢಾಳಾಗಿವೆ!

keywords: mahanati chandana, chandana, actress, love seasons, sandalwood

The post Love Seasons Movie: ಸ್ಯಾಂಡಲ್ವುಡ್ಡಿಗೆ ಅಡಿಯಿರಿಸಿದ ಭರತನಾಟ್ಯ ಪಾರಂಗತೆ! appeared first on Cini Shodha.