lovemocktai3 – Cini Shodha

Love Mocktail 3 Songs: ಬಿಡುಗಡೆಯಾಯ್ತು ಲವ್ ಮಾಕ್ಟೇಲ್3 ಲಿರಿಕಲ್ ವೀಡಿಯೋ ಸಾಂಗ್!
ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್೩ ಚಿತ್ರವನ್ನು ಆರಂಭಿಸಿದ ಘಳಿಗೆಯಿಂದಲೇ ಅದರ ಹಾಡುಗಳಿಗಾಗಿ ಕಾತರಿಸಿದ್ದವರ ಸಂಖ್ಯೆ ದೊಡ್ಡದಿದೆ. ಅಂಥಾ ನಿರೀಕ್ಷೆಗಳನ್ನ ಹುಸಿಗೊಳಿಸದಂತೆ ಎಚ್ಚರದಿಂದ, ಆಸ್ಥೆಯಿಂದ ಕೃಷ್ಣ ಈ ಸಿನಿಮಾ ಹಾಡುಗಳನ್ನು ರೂಪಿಸಿದ್ದಾರೆ. ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಹಾಡೊಂದು ಸೂಪರ್ ಹಿಟ್ ಆದ ಬೆನ್ನಲ್ಲಿಯೇ ಮತ್ತೊಂದು ಮಧುರವಾದ ಗೀತೆ ಬಿಡುಗಡೆಗೊಂಡಿದೆ. ಪ್ರೇಮಿಗಳ ದಿನದಂದೇ ಬಿಡುಗಡೆಗೊಂಡಿರೋ ಈ ಹಾಡೀಗ ಎಲ್ಲೆಡೆ ಗುನುಗಿಸಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡಿಂಗಿನಲ್ಲಿರೋ ಸದರಿ ಹಾಡಿನ ಮೂಲಕ ಲವ್ ಮಾಕ್ಟೇಲ್೩ ಬಗೆಗಿನ ಕೌತುಕ ಮತ್ತೊಂದು ಘಟ್ಟ ತಲುಪಿಕೊಂಡಿದೆ.

ಒಬ್ಬಂಟಿಯಾದೆ ನಾ ಎಂಬ ಶೀರ್ಷಿಕೆಯಿರೋ ಈ ಹಾಡು, ಪ್ರೇಮಿಗಳ ದಿನದಂದು ಸೃಷ್ಟಿಯಾಗಬಹುದಾದ ವಿರಹದ ಗಾಯಗಳೇ ಗಾನವಾದಂತೆ ಭಾಸವಾಗುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಪ್ರತೀ ಪ್ರೇಮವೂ ಫಲಿಸಬೇಕೆಂದೇನೂ ಇಲ್ಲ. ಒಂದು ವೇಳೆ ಹಾಗಾಗುವಂತಿದ್ದಿದ್ದರೆ ಬಹುಶಃ ಕ್ರಿಯಾಶೀಲ ಜಗತ್ತು ಈ ಪರಿಯಾಗಿ ಕಳೆಗಟ್ಟಲು ಸಾಧ್ಯವಾಗುತ್ತಿರಲಿಲ್ಲ. ಅಂಥಾ ಗಾಯಗಳನ್ನು ಹೊತ್ತು ತಿರುಗುವವರನ್ನೆಲ್ಲ ಮಡಿಲಿಗಿಟ್ಟುಕೊಂಡು ಸಂತೈಸುವ ಧಾಟಿಯಲ್ಲಿ ಈ ಹಾಡನ್ನು ರೂಪಿಸಲಾಗಿದೆ. ಇಂಥಾದ್ದೊಂದು ಭಾವುಕತೆಯ ಪರಾಗ ಮೆತ್ತಿಕೊಂಡಿರುವ ಕಾರಣದಿಂದಲೇ ಈ ಹಾಡು ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ.

ಲವ್ ಮಾಕ್ಟೇಲ್ ಮೊದಲ ಆವೃತ್ತಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದೀಗ ಇತಿಹಾಸ. ಆ ಸಿನಿಮಾದ ಒಟ್ಟಾರೆ ಗೆಲುವಿನಲ್ಲಿ ಹಾಡುಗಳ ಪಾಲು ಸಾಕಷ್ಟಿದೆ. ಪ್ರತೀ ಹಾಡುಗಳೂ ಎದೆಗಿಳಿಯುವಂತೆ ಹಾಡುಗಳನ್ನು ರೂಪಿಸುವಲ್ಲಿ ಡಾರ್ಲಿಂಗ್ ಕೃಷ್ಣ ವಿಶೇಷ ಆಸಕ್ತಿ ವಹಿಸಿದ್ದರು. ಎರಡನೇ ಆವೃತ್ತಿಯಲ್ಲಿಯೂ ಅದು ಮುಂದುವರೆದಿತ್ತು. ಇದೀಗ ಮೂರನೇ ಕಂತಿಗೂ ಅಂಥಾದ್ದೊಂದು ಆಸಕ್ತಿ ಅದೇ ತಾಜಾತನದೊಂದಿಗೆ ದಾಟಿಕೊಂಡಿದೆ. ರಾಘವೇಂದ್ರ ಕಾಮತ್ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿರುವ ನಕುಲ್ ಅಭಯಂಕರ್ ಅವರೇ ಈ ಹಾಡಿಗೆ ಧ್ವನಿಯಾಗಿದ್ದಾರೆ. ಬಿಡುಗಡೆಗೊಂಡು ದಿನದೊಪ್ಪತ್ತಿನಲ್ಲಿಯೇ ಸಿಗಲಾರಂಭಿಸಿರುವ ಮೆಚ್ಚುಗೆಗಳ ಮೂಲಕ ಈ ಹಾಡು ಈ ವರ್ಷದ ಹಿಟ್ ಲಿಸ್ಟಿಗೆ ದಾಖಲಾಗಿದೆ.

ಲವ್ ಮಾಕ್ಟೇಲ್೩ ಈ ಹಿಂದಿನ ಎರಡು ಆವೃತ್ತಿಗಳಿಗಿಂತಲೂ ಸಂಪೂರ್ಣವಾಗಿ ಭಿನ್ನವಾಗಿರಲಿದೆ ಎಂಬ ವಿಚಾರವನ್ನು ಡಾರ್ಲಿಂಗ್ ಕೃಷ್ಣ ಒತ್ತಿ ಹೇಳಿದ್ದಾರೆ. ಕಥೆ, ನಿರೂಪಣೆ ಮತ್ತು ನಿರ್ದೇಶನ ಎಲ್ಲದರಲ್ಲಿಯೂ ಪ್ರೇಕ್ಷಕರನ್ನು ಈ ಸಿನಿಮಾ ಚಕಿತಗೊಳಿಸುವ ಭರವಸೆಯೊಂದು ಕೃಷ್ಣಗಿದ್ದಂತಿದೆ. ಲವ್ ಮಾಕ್ಟೇಲ್೩ ಇದೇ ಏಪ್ರಿಲ್ ೧೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

keywords: love mocktail3, darling krishna, milana nagaraj

The post Love Mocktail 3 Songs: ಬಿಡುಗಡೆಯಾಯ್ತು ಲವ್ ಮಾಕ್ಟೇಲ್3 ಲಿರಿಕಲ್ ವೀಡಿಯೋ ಸಾಂಗ್! appeared first on Cini Shodha.