kajalkundar – Cini Shodha

Bilichukki Hallihakki Movie: ಅಮ್ಮನ ಪಾತ್ರದ ಬಗ್ಗೆ ಲಕ್ಷ್ಮಿ ಸಿದ್ದಯ್ಯ ತೆರೆದಿಟ್ಟ ಅಚ್ಚರಿ!
ಅದೆಂಥಾದ್ದೇ ಗೆಲುವಿನ ಅಲೆ ಏಳುತ್ತಿದ್ದರೂ ಕೂಡಾ ಭಿನ್ನ ಪ್ರಯತ್ನಗಳತ್ತ ಈ ನೆಲದ ಸಿನಿಮಾ ಪ್ರೇಕ್ಷಕರು ಸದಾ ಹಾತೊರೆಯುತ್ತಿರುತ್ತಾರೆ. ಅಂಥಾ ಸದಭಿರುಚಿಯ ಪ್ರೇಕ್ಷಕರ ಕಾರಣದಿಂದಲೇ ಅದೆಷ್ಟೋ ಸಿನಿಮಾಗಳು ಗೆದ್ದು ಬೀಗಿದ್ದಿದೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ವಿಶಿಷ್ಟ ಪ್ರಯತ್ನಗಳ ಗೆಲುವಿನ ಪ್ರಭೆಯಲ್ಲಿ ಮಿಂಚುತ್ತಿದೆ. ಆ ಸರಣಿಯಲ್ಲಿ ದಾಖಲಾಗಬಲ್ಲ ಆಶಾವಾದ ಹುಟ್ಟು ಹಾಕಿರುವ ಸಿನಿಮಾ ಬಿಳಿಚುಕ್ಕಿ ಹಳ್ಳಿಹಕ್ಕಿ. ಮಹೇಶ್ ಗೌಡ ಅವರು ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿ, ನಾಯಕನಾಗಿಯೂ ನಟಿಸಿರುವ ಈ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿರುವ ಲಕ್ಷ್ಮಿ ಸಿದ್ದಯ್ಯ ಒಟ್ಟಾರೆ ಸಿನಿಮಾ ಹಾಗೂ ಚಿತ್ರೀಕರಣದ ಅನುಭೂತಿಯನ್ನಿಲ್ಲಿ ತೆರೆದಿಟ್ಟಿದ್ದಾರೆ.

ಸೀರಿಯಲ್ ಲೋಕದಪಾಲಿಗೆ ಲಕ್ಷ್ಮಿ ಸಿದ್ದಯ್ಯ ಥರ ಥರದ ಪಾತ್ರಗಳ ಮೂಲಕ ಹೆಸರಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿರುವ ಇವರನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವೇನಿಲ್ಲ. ಇಂಥಾ ಲಕ್ಷ್ಮಿ ಪ್ರಧಾನವಾಗಿ ಗುರುತಿಸಿಕೊಂಡಿರೋದು, ಪ್ರೇಕ್ಷಕರಿಗೆ ಹತ್ತಿರಾಗಿರೋದು ಅಮ್ಮನ ಪಾತ್ರಗಳ ಮೂಲಕ. ನಿರ್ದೇಶಕ ಮಹೇಶ್ ಗೌಡ ಕೂಡಾ ಬಿಳಿಚುಕ್ಕಿ ಹಳ್ಳಿಹಕ್ಕಿಯ ತಾಯಿ ಪಾತ್ರಕ್ಕೆ ಆರಂಭದಲ್ಲಿಯೇ ಅವರನ್ನು ನಿಕ್ಕಿಯಾಗಿಸಿದ್ದರು. ಒಟ್ಟಾರೆ ಸಿನಿಮಾದ ಕಥೆ ಮತ್ತು ಆ ಪಾತ್ರದ ಚಹರೆಗಳನ್ನು ಗಮನಿಸಿದ ಲಕ್ಷ್ಮಿ ಅವರು ಮರುಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ. ಕಡೆಗೂ ಚಿತ್ರೀಕರಣ ಶುರುವಾಗಿ, ತಾಯ್ತನದ ಪುಳಕಗಳನ್ನು ಆವಾಹಿಸಿಕೊಂಡು ನಟಿಸಿದ ಲಕ್ಷ್ಮಿ ಅವರ ಪಾಲಿಗೆ ಇದು ತನ್ನ ವೃತ್ತಿ ಬದುಕಿನ ಮಹತ್ವದ ಚಿತ್ರವೆಂಬ ಭಾವ ಮೂಡಿಕೊಂಡಿದೆ.

ಲಕ್ಷ್ಮಿ ಅವರಿಲ್ಲಿ ನಾಯಕನ ತಾಯಿಯಾಗಿ ನಟಿಸಿದ್ದಾರೆ. ಇಲ್ಲಿ ಅವರ ಮಗನಿಗೆ ಎಳವೆಯಿಂದಲೇ ತೊನ್ನಿನ ಬಾಧೆಯಿರುತ್ತದೆ. ಆಸುಪಾಸಿನ ಮಂದಿ ಅದೇನೇ ಕುಹಕವಾಡಿದರೂ, ಅದು ತನ್ನ ಮಗನಿಗೆ ಘಾಸಿಗೊಳಿಸದಂತೆ ಮುಚ್ಚಟೆ ಮಾಡಿ ಕಾಪಿಡುವ ಪಾತ್ರವದು. ಯಾವ ಘಳಿಗೆಯಲ್ಲಿಯೂ ಮಗನನ್ನು ಕುಗ್ಗಲು ಬಿಡುದ ಆ ಪಾತ್ರ ಈ ಸಿನಿಮಾದ ಕೇಂದ್ರಬಿಂದು. ಇಡೀ ಚಿತ್ರದುದ್ದಕ್ಕೂ ಹಬ್ಬಿಕೊಂಡಿರುವ ಈ ಪಾತ್ರ ಲಕ್ಷ್ಮಿಯವರಲ್ಲಿ ವಿಶಿಷ್ಟ ಅನುಭೂತಿ ಮೂಡಿಸಿದೆ. ಖಂಡಿತವಾಗಿಯೂ ನೋಡಿಕದ ಪ್ರತಿಯೊಬ್ಬರಿಗೂ ಅದು ದಾಟಿಕೊಳ್ಳುತ್ತದೆ. ಇಂಥಾ ಚೆಂದದ ಪಾತ್ರಕ್ಕೆ ತನ್ನನ್ನೇ ಆಯ್ಕೆ ಮಾಡಿಕೊಂಡ ಮಹೇಶ್ ಗೌಡರ ಬಗ್ಗೆಯೂ ಅವರಲ್ಲೊಂದು ಅಕ್ಕರೆಯಿದೆ.

ಮಲೆನಾಡಿನ ಒಡಲಲ್ಲಿರುವ ಕೊಪ್ಪದ ಸುಂದರ ವಾತಾವರಣದಲ್ಲಿ ಈ ಪಾತ್ರವನ್ನು ಲಕ್ಷ್ಮಿ ಅವರು ಜೀವಿಸಿದ್ದಾರೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಮೂಡಿ ಬಂದಿದೆ ಎಂಬ ತುಂಬು ನಂಬಿಕೆಯೂ ಅವರಲ್ಲಿದೆ. ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ.

The post Bilichukki Hallihakki Movie: ಅಮ್ಮನ ಪಾತ್ರದ ಬಗ್ಗೆ ಲಕ್ಷ್ಮಿ ಸಿದ್ದಯ್ಯ ತೆರೆದಿಟ್ಟ ಅಚ್ಚರಿ! appeared first on Cini Shodha.

Bilichukki Hallihakki Movie: ಮೌನದಲ್ಲೇ ಮಾತು ಹೊಮ್ಮಿಸುವ ವಿಶಿಷ್ಟ ಪಾತ್ರ!
ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ಅದ್ದೂರಿಯಾಗಿ ತೆರೆಗಾಣುತ್ತಿದೆ. ಈಗಾಗಲೇ ಇದೊಂದು ಅತ್ಯಪರೂಪದ ಕಥಾನಕ ಹೊಂದಿರುವ ಸಿನಿಮಾ ಎಂಬ ವಿಚಾರ ಪ್ರೇಕ್ಷಕರಿಗೆ ಮನದಟ್ಟಾಗಿ ಬಿಟ್ಟಿದೆ. ವರ್ಷಗಟ್ಟಲೆ ಶ್ರಮ ವಹಿಸಿ ಈ ಸಿನಿಮಾದ ಕಥೆಯನ್ನು ಸಿದ್ಧಪಡಿಸಿರುವ ಮಹೇಶ್ ಗೌಡ, ಆಯಾ ಪಾತ್ರಗಳಿಗೆ ಒಗ್ಗುವಂಥಾ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಒಂದು ಹಂತದ ವರೆಗೂ ನಾಯಕಿ ಪಾತ್ರಕ್ಕೆ ಮಾತ್ರ ಯಾರೂ ಹೊಂದಾಣಿಕೆಯಾಗಿರಲಿಲ್ಲ. ಕಡೆಗೂ ನಾಯಕಿ ಪಾತ್ರಕ್ಕಾಗಿ ಆಡಿಷನ್ ಕರೆದಾಗ, ಅದರಲ್ಲಿ ಪಾಲ್ಗೊಂಡು ನಾಯಕಿಯಾಗೋ ಅವಕಾಶ ಗಿಟ್ಟಿಸಿಕೊಂಡವರು ಕರಾವಳಿ ಮೂಲದ ಹುಡುಗಿ ಕಾಜಲ್ ಕುಂದರ್!

ಇದು ಅತ್ಯಂತ ಸೂಕ್ಷ್ಮವಾದ ಕಥೆಯಹೊಂದನ್ನು ಪಕ್ಕಾ ಮನೋರಂಜನಾತ್ಮಕ ಅಂಶಗಳೊಂದಿಗೆ, ಕಮರ್ಶಿಯಲ್ ಪಥದಲ್ಲಿ ಅಣಿಗೊಂಡಿರುವ ಸಿನಿಮಾ. ಇದರ ನಾಯಕಿಯ ಪಾತ್ರವಂತೂ ಸೂಕ್ಷ್ಮವಾದ ಒಳತೋಟಿಗಳನ್ನು ಹೊಂದಿರುವಂಥಾದ್ದು. ಆ ಪಾತ್ರವನ್ನು ನಿರ್ವಹಿಸೋದು ಸಲೀಸಿನ ಸಂಗತಿಯಾಗಿರಲಿಲ್ಲ. ಭಾವನೆಗಳ ಮೂಲಕವೇ ಮಾತುಗಳನ್ನು ಮೀರಿ ಸಂವಹಿಸಬಲ್ಲ ಛಾತಿ ಅದನ್ನು ನಿರ್ವಹಿಸುವ ಕಲಾವಿದೆಗೆ ಅಗತ್ಯವಾಗಿ ಬೇಕಿತ್ತು. ಈ ಉದ್ದೇಶದಿಂದ ಆಡಿಷನ್ ಕರೆದ ವಿಚಾರ ತಿಳಿದಾಕ್ಷಣವೇ ಕಾಜಲ್ ಕುಂದರ್ ಅದರಲ್ಲಿ ಭಾಗಿಯಾಗಿದ್ದರು. ಅದಾಗಲೇ ಪೆಪೆಯಂಥಾ ಸಿನಿಮಾದಲ್ಲಿ ನಟಿಸಿದ್ದ ಅವರ ಪಾಲಿಗೆ ಆ ಸಿನಿಮಾಕ್ಕಿಂತಲೂ ಭಿನ್ನವಾದ ಪಾತ್ರ ಸಿಗಬೇಕೆಂಬ ಹಂಬಲವಿತ್ತು. ಬಿಳಿಚುಕ್ಕಿ ಹಳ್ಳಿಹಕ್ಕಿಯ ಪಾತ್ರ ಅದಕ್ಕೆ ತಕ್ಕುದಾಗಿರುವ ವಿಚಾರ ಮೊದಲ ಹಂತದಲ್ಲಿಯೇ ಕಾಜಲ್‌ಗೆ ಮನವರಿಕೆಯಾಗಿತ್ತು.

ಅದಾಗಲೇ ಪೆಪೆ ಎಂಬ ಸಿನಿಮಾದಲ್ಲಿ ನಟಿಸಿದ್ದ ಕಾಜಲ್‌ಗೆ ಅಲ್ಲಿ ಬೋಲ್ಡ್ ಆದ ಪಾತ್ರ ಸಿಕ್ಕಿತ್ತು. ಆದರೆ, ಬಿಳಿಚುಕ್ಕಿ ಹಳ್ಳಿಹಕ್ಕಿಯಲ್ಲಿ ಎದುರಾದದ್ದು ಅದಕ್ಕೆ ತದ್ವಿರುದ್ಧ ಗುಣ ಸ್ವಭಾವ ಹೊಂದಿರುವ ಪಾತ್ರ. ಇದಕ್ಕಾಗಿ ಆಡಿಷನ್ ಕೊಟ್ಟಿದ್ದ ಕಾಜಲ್‌ಗೆ ಎರಡ್ಮೂರು ದಿನ ಕಳೆದ ಮೇಲೆ ನಿರ್ದೇಶಕ ಮಹೇಶ್ ಗೌಡರು ಕರೆ ಮಾಡಿ ಆಯ್ಕೆಯಾಗಿರುವ ವಿಚಾಶರ ತಿಳಿಸಿದ್ದರಂತೆ. ಆ ನಂತರ ನಿರ್ದೇಶಕರು ಒಟ್ಟಾರೆ ಸಿನಿಮಾ ಕಥೆ ಮತ್ತು ನಾಯಕಿ ಪಾತ್ರದ ಬಗ್ಗೆ ವಿವರಿಸಿದಾಗಲೇ ಇದೊಂದು ವಿಶೇಷ ಕಾನ್ಸೆಪ್ಟಿನ ಕಥನ ಎಂಬ ವಿಚಾರ ಕಾಜಲ್‌ಗೆ ಅರಿವಾಗಿತ್ತಂತೆ. ಆ ಬಳಿಕ ತಿಂಗಳುಗಟ್ಟಲೆ ಕಾಜಲ್, ಕವಿತಾ ಎಂಬ ಪಾತ್ರವನ್ನು ಒಳಗಿಳಿಸಿಕೊಳ್ಳಲು ಕಸರತ್ತು ನಡೆಸಿದ್ದರು.

ಈ ಚಿತ್ರದ ನಾಯಕಿ ಪಾತ್ರಕ್ಕೆ ಡೈಲಾಗುಗಳು ಕಡಿಮೆ. ಭಾವನೆಗಳ ಮೂಲಕವೇ ಎಲ್ಲ ಮಾತುಗಳನ್ನೂ ಹೊಮ್ಮಿಸುವುದು ಕಾಜಲ್ ಪಾಲಿಗೆ ಸವಾಲಾಗಿತ್ತು. ನಿರ್ದೇಶಕರು, ಹಿರಿಯ ಕಲಾವಿದರು ಮತ್ತು ತನ್ನದೇ ರಂಗಭೂಮಿಯ ಅನುಭವಗಳಿಂದ ಈ ಪಾತ್ರಕ್ಕೆ ತೃಪ್ತಿದಾಯಕವಾಗಿ ಜೀವ ತುಂಬಿದ ಭರವಸೆ ಕಾಜಲ್‌ರದ್ದು. ಮೂಲರ್ತ ಮಂಗಳೂರಿನ ಹುಡುಗಿಯಾದರೂ ಕಾಜಲ್ ಹುಟ್ಟಿ ಬೆಳೆದದ್ದೆಲ್ಲವೂ ಮುಂಬೈನಲ್ಲಿಯೇ. ಅಲ್ಲಿಯೇ ಪದವಿ ಪೂರೈಸಿಕೊಂಡು, ತನ್ನಿಷ್ಟದ ನಟನೆಯತ್ತ ವಾಲಿಕೊಂಡ ಕಾಜಲ್, ಒಂದಷ್ಟು ಮರಾಠಿ ಮತ್ತು ಹಿಂದಿ ಸೀರಿಯಲ್ಲುಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದರ ನಡುವಲ್ಲಿಯೇ ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡು ನಟನೆಯಲ್ಲಿ ಪಳಗಿಕೊಂಡಿದ್ದಾರೆ.

ಹೀಗೆ ಬೇರೆ ಭಾಷೆಗಳಲ್ಲಿ ಬೆಳಕು ಕಾಣುತ್ತಲೇ ಬೇರುಗಳ ಸೆಳೆತಕ್ಕೀಡಾದ ಕಾಜಲ್, ಕರುನಾಡಿನಲ್ಲಿಯೇ ನಟಿಯಾಗಿ ನೆಲೆ ಕಂಡುಕೊಳ್ಳಲು ತೀರ್ಮಾನಿಸಿದ್ದರು. ಕಡೆಗೂ ಅವರಿಗೆ ಪೆಪೆ ಎಂಬ ಸಿನಿಮಾದಲ್ಲಿ ನಾಯಕಿಯಾಗೋ ಅವಕಾಶ ಸಿಕ್ಕಿತ್ತು. ಹರಹರ ಮಹಾದೇವ ಧಾರಾವಾಹಿಯಲ್ಲಿಯೂ ಆಕೆ ನಟಿಸಿದ್ದರು. ಈಗ್ಗೆ ಒಂದೂವರೆ ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿರುವ ಕಾಜಲ್ ಪಾಲಿಗೆ ಬಿಳಿಚುಕ್ಕಿ ಹಳ್ಳಿಹಕ್ಕಿಯ ಪಾತ್ರ ವರದಂತೆ ಸಿಕ್ಕಿದೆ. ಪಾತ್ರದ ಮೂಲಕವೇ ತನ್ನ ವೃತ್ತಿ ಬದುಕು ಮತ್ತಷ್ಟು ಪ್ರಜ್ವಲಿಸುವ ಗಾಢ ಭರವಸೆ ಅವರಿಗಿದೆ. ಇಂಥಾದ್ದೇ ಭಿನ್ನ ಪಾತ್ರಗಳ ಮೂಲಕ ಗುರುತಾಗುವ ಬಯಕೆ ಹೊಂದಿರುವ ಕಾಜಲ್ ಮುಂದಿನ ದಿನಗಳಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿಯೇ ನೆಲೆಗಾಣುವ ಆಕಾಂಕ್ಷೆಯಿಟ್ಟುಕೊಂಡಿದ್ದಾರೆ. ಅದು ಬಿಳಿಚುಕ್ಕಿ ಹಳ್ಳಿಹಕ್ಕಿಯ ಮೂಲಕವೇ ಸಾಕಾರಗೊಳ್ಳುವ ಲಕ್ಷಣಗಳು ಢಾಳಾಗಿ ಗೋಚರಿಸುತ್ತಿವೆ!

The post Bilichukki Hallihakki Movie: ಮೌನದಲ್ಲೇ ಮಾತು ಹೊಮ್ಮಿಸುವ ವಿಶಿಷ್ಟ ಪಾತ್ರ! appeared first on Cini Shodha.

Roaring Star Srimuruli: ಪವರ್ ಸ್ಟಾರ್ ಹಾದಿಯಲ್ಲಿ ಹೆಜ್ಜೆಯಿಟ್ಟ ರೋರಿಂಗ್ ಸ್ಟಾರ್!
ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಪ್ರಯತ್ನ ನಡೆದಾಗ ಸ್ಟಾರ್ ನಟರೆನ್ನಿಸಿಕೊಂಡವರು ಸಾಥ್ ಕೊಡುವದಿದೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪಿಆರ್‌ಕೆ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಸಬರಿಗೆ ಉತ್ತೇಜನ ನೀಡಲೆಂದೇವ ಶುರುವಿಟ್ಟುಕೊಂಡಿದ್ದವರು ಪುನೀತ್. ಆ ಬಳಿಕ ಆ ಬ್ಯಾನರಿನ ಮೂಲಕ ಹಲವಾರು ಸಿನಿಮಾಗಳಿಗೆ ಬೆನ್ನೆಲುಬಾಗಿದ್ದರು. ಸಿನಿಮಾ ಮಾಡಿ ಚಿತ್ರರಂಗದ ಚಕ್ರವ್ಯೂಹದಲ್ಲಿ ಕಂಗಾಲೆದ್ದು ನಿಂತವರಿಗೆ ನೆರವಾಗಿದ್ದರು. ಇದೀಗ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಕೂಡಾ ತಮ್ಮ ಮಾವನ ಹಾದಿಯಲ್ಲಿಯೇ ಹೆಜ್ಜೆಯೂರಿದ್ದಾರೆ; ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರು ನಿರ್ದೇಶನ, ನಿರ್ಮಾಣ ಮಾಡಿ, ನಾಯಕರಾಗಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರಕ್ಕೆ ಸಾಥ್ ಕೊಡುವ ಮೂಲಕ!

ವಿಟಿಲಿಗೋ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ ಸಿನಿಮಾ ಬಿಳಿಚುಕ್ಕಿ ಹಳ್ಳಿಹಕ್ಕಿ. ಗ್ರಾಮ್ಯ ಭಾಷೆಯಲ್ಲಿ ತೊನ್ನು ಎಂದು ಕರೆಸಿಕೊಳ್ಳುವ ಈ ಕಾಯಿಲೆಯಲ್ಲದ ಕಾಯಿಲೆಯ ಸುತ್ತ ಒಂದು ಸಿನಿಮಾ, ಕಮರ್ಶಿಯಲ್ ಹಾದಿಯಲ್ಲಿ ತಯಾರಾಗಿದೆ ಅನ್ನೋದೇ ಪ್ರಧಾನ ಆಕರ್ಷಣೆ. ಅಂಥಾದ್ದೇ ತೀವ್ರ ಸೆಳೆತದೊಂದಿಗೆ ಶ್ರೀಮುರುಳಿಯವರು ಚಿತ್ರತಂಡದೊಂದಿಗೆ ಕೆಲ ತುಣುಕುಗಳನ್ನು ನೋಡಿ ಥ್ರಿಲ್ ಆಗಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಯಾರೂ ಮುಟ್ಟದ ಕಥಾ ವಸ್ತುವನ್ನು ಒಡಲಲ್ಲಿಟ್ಟುಕೊಂಡ ಈ ಸಿನಿಮಾವನ್ನು ತಾವೇ ಅರ್ಪಿಸಿ, ಈ ತಂಡಕ್ಕೆ ಸಾಥ್ ಕೊಡುವ ನಿರ್ಧಾರ ಪ್ರಕಟಿಸಿದ್ದಾರೆ. ಭಿನ್ನವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡಕ್ಕಿದು ಬಿಡುಗಡೆಯ ಹೊಸ್ತಿಲಲ್ಲಿ ಸಿಕ್ಕಿರುವ ಬೂಸ್ಟರ್ ಡೋಸ್‌ನಂತಾಗಿದೆ.

ಮಹಿರಾ ಚಿತ್ರದ ಮೂಲಕ ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಹೇಶ್ ಗೌಡ ತಮ್ಮದೇ ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮಹೇಶ್ ಅವರು ಅತ್ಯಂತ ಕಾಳಜಿಯಿಂದ ಸೃಷ್ಟಿರುವ ಸದರಿ ಸಿನಿಮಾವನ್ನು ಪ್ರೆಸೆಂಟ್ ಮಾಡುವ ಮೂಲಕ ಶ್ರೀಮುರುಳಿ ಜೊತೆಯಾಗಿರುವುದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ಸಿಕ್ಕಂತಾಗಿದೆ. ಇಂಥಾದ್ದೊಂದು ಅಪರೂಪದ ಪ್ರಯತ್ನ ಮಾಡಿ, ನಿರ್ದೇಶನ, ನಿರ್ಮಾಣದ ಜವಾಬ್ದಾರಿಯೊಂದಿಗೆ ನಾಯಕನಾಗಿಯೂ ನಟಿಸಿರುವ ಮಹೇಶ್ ಗೌಡರಿಗೆ ಶ್ರೀಮುರುಳಿ ಪ್ರೀತಿಯಿಂದ ಅಭಿನಂದಿಸಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿ ಶ್ರೀಮುರುಳಿ ಚಿತ್ರವೊಂದನ್ನು ಅರ್ಪಿಸುವ ಮೂಲಕ ಜೊತೆಯಾಗಿದ್ದಾರೆ. ಈ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಯನ್ನೇ ಅನುಸರಿಸಿದ್ದಾರೆ…

The post Roaring Star Srimuruli: ಪವರ್ ಸ್ಟಾರ್ ಹಾದಿಯಲ್ಲಿ ಹೆಜ್ಜೆಯಿಟ್ಟ ರೋರಿಂಗ್ ಸ್ಟಾರ್! appeared first on Cini Shodha.

Mahira Movie: ಇದು ಮಹಿರಾ ನಿರ್ದೇಶಕರ ಭಿನ್ನ ಪ್ರಯತ್ನ!
ಈ ಹಿಂದೆ ಮಹಿರಾ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು ಮಹೇಶ್ ಗೌಡ. ಈವತ್ತಿಗೂ ಆ ಸಿನಿಮಾವನ್ನು ಕನ್ನಡದ ಸಿನಿಮಾಸಕ್ತರು ಆಗಾಗ ನೆನಪಿಸಿಕೊಳ್ಳುತ್ತಾರೆ. ಈ ಕಾರಣದಿಂದಲೇ ಅವರು ನಿರ್ದೇಶನ ಮಾಡಿ, ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಆರಂಭಿಕವಾಗಿಯೇ ಗಮನ ಸೆಳೆದುಕೊಂಡಿತ್ತು. ಆರಂಭಿಕವಾಗಿ ಜಾಹೀರಾಗಿದ್ದ ಒಂದಷ್ಟು ವಿಚಾರಗಳ ಮೂಲಕವೇ ಇಲ್ಲಿ ಮಹೇಶ್ ಭಿನ್ನ ಕಥಾನಕವೊಂದನ್ನು ಮುಟ್ಟಿದ್ದಾರೆಂಬ ಸ್ಪಷ್ಟ ಸೂಚನೆ ಸಿಕ್ಕಿತ್ತು. ಇದೀಗ ಪೋಸ್ಟರ್ ಒಂದರ ಮೂಲಕ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ!

ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಇದೇ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ. ಈಗಾಗಲೇ ಬಿಳಿಚುಕ್ಕಿ ಹಳ್ಳಿಹಕ್ಕಿಯ ಅಸಲೀ ಕಥಾನಕ ಏನಿರಬಹುದೆಂಬ ಕುತೂಹಲವೊಂದು ಮೂಡಿಕೊಂಡಿದೆ. ಈ ಬಗ್ಗೆ ಖುದ್ದು ನಿರ್ದೇಶಕರು ಒಂದಷ್ಟು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದು ಈ ಸಮಾಜದಲ್ಲಿ ಒಂದಷ್ಟು ಮಂದಿಯನ್ನು ಕಾಡುತ್ತಿರುವ ವಿಟಿಲಿಗೋ ಎಂಬ ಕಾಯಿಲೆಯಲ್ಲದ ಖಾಯಿಲೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಕಥನ. ಬಿಳಿತೊನ್ನು ಅಂತ ಕರೆಸಿಕೊಳ್ಳುವ ಈ ಬಾಧೆಗೀಡಾದವರು ಪಡುವ ಮಾನಸಿಕ ವೇದನೆಯಿದೆಯಲ್ಲಾ? ಅದು ಅವರಿಗೆ ಮಾತ್ರವೇ ಗೊತ್ತಿರಲು ಸಾಧ್ಯವೇನೋ…

ಮಹೇಶ್ ಗೌಡ ಅವರು ಅಂಥಾದ್ದೊಂದು ಖಾಯಿಲೆಯನ್ನೇ ಕೇಂದ್ರವಾಗಿಟ್ಟುಕೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ವಿಟಿಲಿಗೋ ಎಂಬ ಸಮಸ್ಯೆಯ ಕಥನ ಎಂದಾಕ್ಷಣ ಬೇರೆ ಧಾಟಿಯ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾ. ಸೂಕ್ಷ್ಮಾತಿ ಸೂಕ್ಷ್ಮ ಕಥನವಿದ್ದರೂ ಕೂಡಾ, ಮನೋರಂಜನೆಯನ್ನೇ ಮೂಲ ಧಾತುವಾಗಿಸಿಕೊಂಡು ಮಹೇಶ್ ಗೌಡ ಈ ಚಿತ್ರವನ್ನು ರೂಪಿಸಿದ್ದಾರಂತೆ. ಈ ಹಿಂದೆ ಮಹಿರಾ ಕೂಡಾ ತನ್ನೊಳಗಿನ ಹೊಸತನದ ಮೂಲಕ ಮೈಲಿಗಲ್ಲು ಸೃಷ್ಟಿಸಿತ್ತು. ಬಿಳಿಚುಕ್ಕಿ ಹಳ್ಳಿಹಕ್ಕಿ ಕೂಡಾ ಮತ್ತೊಂದು ಆಯಾಮದಲ್ಲಿ ಪ್ರೇಕ್ಷಕರನ್ನು ತಾಕುವ ಸಾಧ್ಯತೆಗಳಿದ್ದಾವೆ.

ಸ್ವತಃ ವಿಟಿಲಿಗೋ ಬಾಧೆಗೀಡಾಠಗಿರುವ ಮಹೇಶ್ ಗೌಡ ಅವರೇ ಇಲ್ಲಿನ ಪ್ರಧಾನ ಪಾತ್ರಕ್ಕೆ ಜೀವ ತುಂಬಿರುವುದು ವಿಶೇಷ. ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ ಇಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿರೋದು ವಿಶೇಷ. ಇಂಥಾದ್ದೊಂದು ವಿಶಿಷ್ಟವಾದ ಕಥೆಯನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ, ಭರಪೂರ ಮನೋರಂಜನಾತ್ಮಕ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆಯಂತೆ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಸಿನಿಮಾ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ!

The post Mahira Movie: ಇದು ಮಹಿರಾ ನಿರ್ದೇಶಕರ ಭಿನ್ನ ಪ್ರಯತ್ನ! appeared first on Cini Shodha.