kajalagarwal – Cini Shodha

Rajasaab Movie: ರಾಜಾಸಾಬ್ ನಾಯಕಿಯರ ಮುಂದೆ ಗೊಂದಲದ ನಾಕಾಬಂಧಿ!
ಪ್ರಭಾಸ್ ನಾಯಕನಾಗಿ ನಟಿಸಿದ್ದ ರಾಜಾಸಾಬ್ ಚಿತ್ರ ಹೀನಾಯ ಸೋಲು ಕಂಡಿದೆ. ಪ್ರಭಾಸ್‌ನಂಥಾ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಅದೆಷ್ಟೇ ಕೆಟ್ಟದ್ದಾಗಿದ್ದರೂ ಕೂಡಾ ಒಂದು ಮಟ್ಟದ ಪ್ರದರ್ಶನ ಕಾಣುತ್ತವೆ. ನಿರ್ಮಾಪಕರು ಹೂಡಿದ ಕಾಸಿಗೇನೂ ಮೋಸವಾಗೋದಿಲ್ಲ. ಅಂಥಾ ಗೆಲುವು ಪ್ರಭಾಸ್ ಥರದ ನಟ ಪಾಲಿಗೆ ಗೆಲುವೇ ಅಲ್ಲ. ಯಾಕೆಂದರೆ, ರಾಜಾಸಾಬ್‌ನಂಥಾ ಚಿತ್ರಗಳು ಖುದ್ದು ಡಾರ್ಲಿಂಗ್ ಅಭಿಮಾನಿಗಳಿಗೇ ಹಿಡಿಸಿರೋದಿಲ್ಲ. ಬಾಹುಬಲಿ ಸರಣಿಯ ನಂತರ ಕಲ್ಕಿ ಮಾತ್ರವೇ ಅಭಿಮಾನಿಗಳನ್ನು ಒಂದು ಮಟ್ಟಿಗೆ ಸಂತೃಪ್ತಗೊಳಿಸಿತ್ತು. ರಾಜಾಸಾಬ್ ಸವಕಲು ಸರಕೆಂಬ ವಿಚಾರ ಸಿನಿಮಾ ವಲಯದಲ್ಲಿ ಶುರುವಾತಿನಿಂದಲೇ ಹಬ್ಬಿಕೊಂಡಿತ್ತು. ಆದರೆ, ಈ ಚಿತ್ರದ ಮೂಲಕ ತಮ್ಮ ವೃತ್ತಿ ಬದುಕು ಲಕಲಕಿಸುತ್ತದೆಂಬ ಭ್ರಮೆ ಹೊಂದಿದ್ದ ಮೂವರು ನಾಯಕಿಯರೀಗ ಅಕ್ಷರಶಃ ಕಂಗಾಲಾಗಿದ್ದಾರೆ!

ಅದೇನು ನಾಯಕಿಯರ ದಂಡು ನೆರೆದರೆ ಸಿನಿಮಾ ಗೆಲ್ಲುತ್ತದೆಂಬ ಮೂಢ ನಂಬಿಕೆಯೋ, ಮುಖದ ಚಹರೆಯನ್ನೇ ಬದಲಿಸಿಕೊಂಡಿದ್ದ ಪ್ರಭಾಸನ ಅವಸ್ಥೆಯನ್ನು ಮ್ಯಾನೇಜು ಮಾಡುವ ಬುದ್ಧಿವಂತಿಕೆಯೋ ಗೊತ್ತಿಲ್ಲ; ನಿರ್ದೇಶಕ ಮೂವರು ನಾಯಕಿಯರನ್ನು ಆಯ್ಕೆ ಮಾಡಿಕೊಂಡಿದ್ದ. ಮಾಲವಿಕಾ ಮೋಹನನ್, ಕಾಜಲ್ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಪ್ರಭಾಸ್ ಜೊತೆ ನಟಿಸಿದ್ದರು. ಪ್ರಭಾಸನ ವೃತ್ತಿ ಬದುಕು ಅದೆಷ್ಟೇ ಪಾತಾಳ ಕಂಡರೂ, ಆತನ ಜೊತೆ ನಾಯಕಿಯಾಗಿ ನಟಿಸೋ ಕ್ರೇಜ್ ಈ ಕ್ಷಣಕ್ಕೂ ಹಾಗೇ ಇದೆ. ಹೇಳಿಕೇಳಿ ರಾಜಾಸಾಬ್ ಬಿಗ್ ಬಜೆಟ್ ಚಿತ್ರವಾದ್ದರಿಂದ ದೊಡ್ಡ ಗೆಲುವು ಗ್ಯಾರೆಂಟಿ ಎಂದೇ ಈ ಮೂವರು ನಾಯಕಿಯರು ಅಂದುಕೊಂಡಿದ್ದರು. ಈ ಮೂವರೂ ಕೂಡಾ ವೃತ್ತಿ ಬದುಕಿನಲ್ಲಿ ಒಂದಷ್ಟು ಏರಿಳಿತಗಳನ್ನು ಅನುಭವಿಸಿದ್ದಾರೆ. ಈ ಕಾರಣದಿಂದಲೇ ರಾಜಾಸಾಬ್ ತೆರೆಗಂಡ ನಂತರ ಅವಕಾಶಗಳ ಹೆಬ್ಬಾಗಿಲೇ ತಮ್ಮ ಮುಂದೆ ತೆರೆದುಕೊಳ್ಳುತ್ತದೆಂಬ ಗಾಢ ನಂಬಿಕೆ ಈ ಮೂವರಲ್ಲಿಯೂ ಇದ್ದಂತಿತ್ತು.

ಆದರೆ, ರಾಜಾ ಸಾಬ್ ತೆರೆಗಂಡ ನಂತರ ಈ ಮೂವರು ಸುಂದರಿಯರು ತ್ರಿಶಂಕು ಸ್ಥಿತಿ ತಲುಪಿಕೊಂಡಿದ್ದಾರೆ. ಎಲ್ಲೆಡೆಗಳಲ್ಲಿಯೂ ನಕಾರಾತ್ಮಕ ವಿಚಾರಗಳೇ ಹಬ್ಬಿಕೊಳ್ಳುತ್ತಿವೆ. ಪ್ರಭಾಸ್‌ನಂಥಾ ಪ್ರಭಾಸ್ ಪಾತ್ರವೇ ಮಂಕಾಗಿರುವಾಗ ಇನ್ನು ನಾಯಕಿಯರು ಮಿಂಚಲು ಸಾಧ್ಯವೇ. ಟಾಲಿವುಡ್ಡಿನಲ್ಲಿ ಈಗ ಹಬ್ಬಿಕೊಂಡಿರುವ ವಿಚಾರಗಳನ್ನಾಧರಿಸಿ ಹೇಳೋದಾದರೆ, ಕಾಜಲ್ ಅಗರ್ವಾಲ್, ರಿದ್ಧಿ ಕುಮಾರ್ ಮತ್ತು ಮಾಲವಿಕಾ ರಾಜಾಸಾಬ್ ಚಿತ್ರೀಕರಣದ ಹಂತದಲ್ಲಿ ಬಂಷದಿದ್ದ ಒಂದಷ್ಟು ಅವಕಾಶಗಳನ್ನೇ ಕಡೆಗಣಿಸಿದ್ದಾರೆ. ಹೇಗೂ ರಾಜಾಸಾಬ್ ಗೆಲ್ಲುತ್ತೆ. ಆ ನಂತರ ಅವಕಾಶದ ಹೊಳೆಯೇ ಹರಿಯುತ್ತೆಂಬುದು ಅವರೆಲ್ಲರ ನಂಬಿಕೆಯಾಗಿತ್ತು. ಆದರೀಗ ಅಂಥಾ ನಂಬಿಕೆಯನ್ನು ರಾಜಾಸಾಬ್ ಛಿದ್ರಗೊಳಿಸಿದ್ದಾನೆ. ಅವಕಾಶ ಕೇಳಿಕೊಂಡು ಹೊರಡುವಂತಿಲ್ಲ; ಹೊಸದ್ಯಾವುದೂ ಹತ್ತಿರ ಸುಳಿಯುತ್ತಿಲ್ಲ… ಪ್ರಭಾಸ್ ನಂಥಾ ಸ್ಟಾರ್‌ಗಳ ಸಿನಿಮಾವೊಂದು ಸೋತರೆ ಅದೆಷ್ಟೋ ಮಂದಿಯ ಜೀವನ ಅಡಕತ್ತರಿಗೆ ಸಿಲುಕಿ ಬಿಡುತ್ತೆ!

keyword: rajasaab, malavika mohanan, riddi kumar, kajal agrwal, prabhas

The post Rajasaab Movie: ರಾಜಾಸಾಬ್ ನಾಯಕಿಯರ ಮುಂದೆ ಗೊಂದಲದ ನಾಕಾಬಂಧಿ! appeared first on Cini Shodha.