jailer2 – Cini Shodha

Jailer2 Release Date: ಪ್ಯಾನಿಂಡಿಯಾ ಮಟ್ಟದಲ್ಲಿ ಭಾರೀ ಕ್ರೇಜ್!
ತಲೈವಾ ರಜನೀಕಾಂತ್ ವೃತ್ತಿ ಬದುಕು ಅನೇಕ ಏರಿಳಿತಗಳನ್ನು ಕಂಡಿದೆ. ಅಂಥಾ ಸೋಲು ಗೆಲುವುಗಳನ್ನೆಲ್ಲ ಸಮಾನವಾಗಿ ಸಂಭಾಳಿಸಿಕೊಂಡು ಸಾಗಿ ಬಂದಿರುವ ರಜನಿ ಪಾಲಿಗೆ ಕಬಾಲಿಯ ಸೋಲು ಮಾತ್ರ ಭಯಾನಕ ಆಘಾತವಾಗಿ ಕಾಡಿ ಬಿಟ್ಟಿತ್ತು. ಅಂಥಾ ಸೋಲಿನ ಸುಳಿಯಿಂದ ತಲೈವಾನನ್ನು ಸಂಪೂರ್ಣವಾಗಿ ಪಾರುಗಾಣಿಸಿದ್ದ ಚಿತ್ರ ಜೈಲರ್. ಇದಾದ ನಂತರ ಆಯ್ಕೆಯ ವಿಚಾರದಲ್ಲಿ ಅತ್ಯಂತ ಎಚ್ಚರದ ಹೆಜ್ಜೆಯಿಟ್ಟಿರುವ ತಲೈವಾ, ಜೈಲರ್ ನಿರ್ದೇಶಕನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದರು. ಇದರನ್ವಯ ಶುರುವಾಗಿದ್ದ ಜೈಲರ್೨ ಇದೀಗ ಅಚಿತಿಮ ಘಟ್ಟ ತಲುಪಿಕೊಂಡಿದೆ. ಈಗಾಗಲೇ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ, ಬೇರೆಯದ್ದೇ ರೂಪುರೇಷೆಯೊಂದಿಗೆ ತೆರೆಗಾಣುವ ತಯಾರಿಯೂ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ತೆರೆಗಾಣುವ ನಿಖರ ದಿನಾಂಕ ಘೋಷಣೆಯಾಗಲಿದೆ.

ಈಗೊಂದೆರಡು ದಿನಗಳಿಂದೀಚೆಗೆ ಜೈಲರ್೨ ಬಿಡುಗಡೆ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಒಂದೆಡೆ ಅಭಿಮಾನಿ ಬಳಗ ಮಳೆಗಾಲ ಹಿಡಿಯುವ ಜೂನ್ ತಿಂಗಳ ಆರಂಭದಲ್ಲಿಯೇ ಜೈಲರ್ ಹಬ್ಬ ಶುರುವಾದೀತೆಂಬ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗೋ ಮಾತುಗಳೂ ಕೂಡಾ ಕೇಳಿ ಬರುತ್ತಿವೆ. ಹಾಗಾದರೆ ಸಿನಿಮಾ ತಂಡದ ಆಂತರ್ಯದಲ್ಲಿ ನಡೆಯುತ್ತಿರೋ ವಿದ್ಯಮಾನವೇನು ಅಂತ ನೋಡ ಹೋದರೆ, ಸರ್‌ಪ್ರೈಸ್ ಎಂಬಂತೆ ಜೂನ್ ತಿಂಗಳಿನಲ್ಲಿಯೇ ಈ ಚಿತ್ರವನ್ನು ತೆರೆಗಾಣಿಸಲು ತಯಾರಿ ನಡೆಯುತ್ತಿದೆ. ಈಗಾಗಲೇ ಅದಕ್ಕಾಗಿ ಚಿತ್ರತಂಡ ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿದೆ.

ಹಾಗೆ ನೋಡಿದರೆ, ಜೈಲರ್ ಚಿತ್ರ ಗೆಲ್ಲುತ್ತಲೇ ಲೆಕ್ಕವಿಡಲಾರದಷ್ಟು ಕಥೆಗಳು ತಲೈವಾ ಸುತ್ತ ಗಿಜಿಗುಟ್ಟಿದ್ದವು. ಯುವ ನಿರ್ದೇಶಕರಿಂಗ ಆರಂಭವಾಗಿ, ಘಟಾನುಘಟಿಗಳೇ ತಲೈವಾ ಕಾಲ್‌ಶೀಟ್‌ಗಾಗಿ ಸರತಿಯಲ್ಲಿ ನಿಂತಿದ್ದರು. ಅದೆಲ್ಲದರ ನಡುವೆ ರಜನೀಕಾಂತ್ ಒಲವು ತೋರಿಸಿದ್ದದ್ದು ನೆಲ್ಸನ್ ಕಥೆಯತ್ತ. ಜೈಲರ್ ಅನ್ನೇ ಮೀರಿಸುವಂಥಾ ಎರಡನೇ ಆವೃತ್ತಿಯ ಕಥೆ ಕಂಡು ಥ್ರಿಲ್ ಆಗಿಯೇ ರಜನೀಕಾಂತ್ ಈ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದರಂತೆ. ಈಗಂತೂ ತನ್ನ ನಿರೀಕ್ಷೆಗೂ ಮೀರಿದಂತೆ ಈ ಸಿನಿಮಾ ಮೂಡಿ ಬಂದಿರೋ ತೃಪ್ತಿ ರಜನಿಗಿದ್ದಂತಿದೆ. ಈ ಕಾರಣದಿಂದಲೇ ಸ್ವತಂತ್ರವಾಗಿ ವಿಶ್ವಮಟ್ಟದಲ್ಲಿ ತೆರೆಗಾಣಿಸುವ ನಿಟ್ಟಿನಲ್ಲಿ ನಿರ್ಮಾಪಕರ ಪ್ರಯತ್ನ ಚಾಲ್ತಿಯಲ್ಲಿದೆ. ಈಗ ಏನೇ ರೂಮರುಗಳು ಹಬ್ಬಿಕೊಂಡಿದ್ದರೂ ಜೂನ್ ತಿಂಗಳಲ್ಲಿ ಜೈಲರ್೨ ತೆರೆಗಾಣೋದು ಪಕ್ಕಾ ಎಂಬಂಥಾ ಮಾತುಗಳು ತಮಿಳು ಚಿತ್ರರಂಗದ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

The post Jailer2 Release Date: ಪ್ಯಾನಿಂಡಿಯಾ ಮಟ್ಟದಲ್ಲಿ ಭಾರೀ ಕ್ರೇಜ್! appeared first on Cini Shodha.

Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!
ಜೈಲರ್ ಚಿತ್ರದ ಭಾರೀ ಯಶಸ್ಸಿನ ನಂತರ ರಜನೀಕಾಂತ್ ಜೈಲರ್೨ನತ್ತ ಮುಖ ಮಾಡಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಗರಾಜನ್ ಪ್ರವರ ಕೇಳಿ, ಆತ ಸಿದ್ಧಪಡಿಸಿದ್ದ ಕಥೆಗೆ ನೋ ಅಂದ ನಂತರವೀಗ ತಲೈವಾ ಗಮನವೆಲ್ಲ ಜೈಲರ್೨ನತ್ತ ಕೇಂದ್ರೀಕರಿಸಿಕೊಂಡಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಾರಾಗಣದ ಆಯ್ಕೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಸಿನಿಮಾ ರಂಗದ ಘಟಾನುಘಟಿ ನಟ ನಟಿಯರೆಲ್ಲ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗಬಹುದಾ ಎಂಬಂತೆ ಆಸೆಗಣ್ಣಿನಿಂದ ಕಾಯಲಾರಂಭಿಸಿದ್ದಾರೆ. ಈ ನಡುವೆ ಜೈಲರ್೨ ಅಡ್ಡಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದರನ್ವಯ ಹೇಳೊದಾದರೆ, ಶಾರೂಖ್ ಖಾನ್ ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ನಿಭಾಯಿಸಲು ಒಪ್ಪಿಗೆ ಸೂಚಿಸಿದ್ದಾರೆ!

ಈಗ ಹಬ್ಬಿಕೊಂಡಿರೋ ಸುದ್ದಿಯನ್ನು ಆಧರಿಸಿ ಹೇಳುವುದಾದರೆ, ಶಾರೂಖ್ ಖಾನ್ ಜೈಲರ್೨ನ ಭಾಗವಾಗುತ್ತಿರೋ ಸುದ್ದಿ ರೂಮರ್ ಅಲ್ಲ. ಖುದ್ದು ರಜನೀಕಾಂತ್ ಈಗಾಗಲೇ ಶಾರೂಖ್ ಜೊತೆ ಮಾತಾಡಿದ್ದಾರೆ. ಆ ನಂತರವೇ ನಿರ್ದೇಶಕ ನೆಲ್ಸನ್ ಶಾರೂಖ್‌ಗೆ ಪಾತ್ರದ ಬಗ್ಗೆ ವಿವರಿಸಿ ಹೇಳಿದ್ದಾರೆ. ಶಾರೂಖ್ ಕೂಡಾ ಆ ಪಾತ್ರದ ಚಹರೆಯಿಒಂದಲೇ ಥ್ರಿಲ್ ಆಗಿ ರಜನಿಯೊಂದಿಗೆ ನಟಿಸಲು ಒಪ್ಪಿಕೊಂಡಿದ್ದಾರೆ. ಕಡಿಮೆ ಅವಧಿಯದ್ದೇ ಆದರೂ ಇಡೀ ಸಿನಿಮಾದ ಪ್ರಧಾನ ಆಕರ್ಷಣೆಯಾಗಿ, ತಿರುವ ನೀಡುವ ಪಾತ್ರವ ಆಗಿ ಶಾರೂಖ್ ಕಾಣಿಸಿಕೊಳ್ಳಲಿದ್ದಾರಂತೆ. ಮುಂದಿನ ವರ್ಷದ ಆರಂಭದಲ್ಲಿಯೇ ಶಾರೂಖ್ ಖಾನ್ ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

ರಜನೀಕಾಂತ್ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಅತಿಥಿಗಳಾಗಿ ನಟಿಸೋದೇನೂ ಹೊಸತಲ್ಲ. ಆದರೆ, ಶಾರೂಖ್ ಖಾನ್ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸುತ್ತಿರೋದು ಆತನ ಅಬಿಮಾನಿಗಳನ್ನು ಥ್ರಿಲ್ ಆಗಿಸಿದೆ. ಈ ಹಿಂದೆ ಕೂಲಿ ಚಿತ್ರದಲ್ಲಿ ಆಮೀರ್ ಖಾನ್ ಒಂದು ಪಾತ್ರದಲ್ಲಿ ನಟಿಸಿದ್ದರು. ಆದರೆ ಅದೇಕೋ ಆ ಪಾತ್ರ ಪಕ್ಕಾ ಕಾಮಿಡಿ ಪೀಸಿನಂತೆ ಕಾಣಿಸುವ ಮೂಲಕ ನಿರಾಸೆ ಮೂಡಿಸಿತ್ತು. ಖುದ್ದು ಆಮೀರ್ ಅಭಿಮಾನಿಗಳೇ ಆ ಪಾತ್ರವನ್ನು ನೋಡಿ ಕಂಗಾಲೆದ್ದಿದ್ದರು. ಆದರೆ, ಜೈಲರ್೨ನಲ್ಲಿ ಶಾರೂಖ್ ಪಾತ್ರ ಅಭಿಮಾನಿ ಬಳಗವನ್ನು ಖುಷಿಗೊಳಿಸವಂತಿರಲಿದೆಯಂತೆ. ಅಂದಹಾಗೆ, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ವಿನಾಯಗನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಶಿವರಾಜ್‌ಕುಮಾರ್‌ಗೂ ಚೆಂದದ ಪಾತ್ರ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜೈಲರ್2ನ ತಾರಾಗಣ ಭರ್ತಿಯಾಗಲಿದೆ.

The post Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್! appeared first on Cini Shodha.

Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ!
ಕಬಾಲಿ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್ ಮೂಲಕ ಪುಷ್ಕಳ ಗೆಲುವನ್ನು ಎದುರುಗೊಂಡಿದ್ದಾರೆ. ಅದರಲ್ಲಿನ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಬೇರೆ ಬೇರೆ ಭಾಷೆಗಳ ನಟರು ಜೈಲರ್ ಚಿತ್ರದ ಭಾಗವಾಗಿದ್ದರು. ಇಂಥವರೆಲ್ಲರ ಪಾತ್ರಗಳು ಪಡೆದುಕೊಂಡಿದ್ದ ಮೈಲೇಜು ಗಮನಿಸಿದ್ದ ತೆಲುಗು ಸ್ಟಾರ್ ಬಾಲಯ್ಯನ ಅಭಿಮಾನಿಗಳು, ತಮ್ಮ ನೆಚ್ಚಿನ ನಟನೂ ಈ ಸಿನಿಮಾ ಭಾಗವಾಗಿತ್ತೆಂಬ ಆಸೆ ವ್ಯಕ್ತಪಡಿಸಿದ್ದರು. ಖುದ್ದು ಬಾಲಯ್ಯನಿಗೇ ಅಂಥಾದ್ದೊಂದು ಬಯಕೆ ಮೂಡಿಕೊಂಡಿದ್ದರೂ ಅಚ್ಚರಿಯೇನಿಲ್ಲ. ವಿಶೇಷವೆಂದರೆ, ಜೈಲರ್೨ನಲ್ಲಿ ಖುದ್ದು ಈ ಸಿನಿಮಾ ನಿರ್ದೇಶಕರೇ ನಟಿಸುವಂತೆ ಕೇಳಿಕೊಂಡರೂ ನಂದಮೂರಿ ಬಾಲಕೃಷ್ಣ ಒಲ್ಲೆ ಅಂದಿದ್ದಾರೆ!

ನಿರ್ದೇಶಕ ನೆಲ್ಸನ್ ಜೈಲರ್೨ ಕಥೆ ಸಿದ್ಧಪಡಿಸುವಾಗಲೇ ಬಾಲಯ್ಯನಿಗಾಗಿ ಒಂದು ಪಾತ್ರವನ್ನು ಸೃಷ್ಟಿಸಿದ್ದರಂತೆ. ಅದು ಮೇಲು ನೋಟಕ್ಕೆ ಅತಿಥಿ ಪಾತ್ರದಂತೆ ಕಂಡರೂ ಕೂಡಾ ಖುದ್ದು ರಜನಿ ಪಾತ್ರಕ್ಕೇ ಸರಿಸಮನಾಗಿತ್ತಂತೆ. ಇಂಥಾದ್ದೊಂದು ಪಾತ್ರವನ್ನು ಸೃಷ್ಟಿ ಮಾಡಿದ್ದ ನೆಲ್ಸನ್‌ಗೆ, ಅದರ ಚಹರೆ ಕೇಳುತ್ತಲೇ ಬಾಲಯ್ಯ ಥ್ರಿಲ್ ಆಗಿ ಒಪ್ಪಿಗೆ ಸೂಚಿಸುತ್ತಾರೆಂಬ ವಿಶ್ವಾಸವಿತ್ತು. ಆದರೆ, ಬಾಲಯ್ಯನನ್ನು ಸಂಪರ್ಕಿಸಿದಾಗ ನೆಲ್ಸನ್‌ಗೆ ಆದದ್ದು ಅಕ್ಷರಶಃ ಆಘಾತ. ಯಾಕೆಂದರೆ, ತೀರಾ ನಿರ್ಲಿಪ್ತವಾಗಿ ಈ ಅವಕಾಶವನ್ನು ಎದುರುಗೊಂಡ ಬಾಲಯ್ಯ ಆರಂಭದಿಂದಲೇ ನಾನಾ ರೊಳ್ಳೆ ತೆಗೆದಿದ್ದರು. ಕಡೆಗೂ ತಾನು ತೆಲುಗು ಬಿಟ್ಟು ಮತ್ಯಾವ ಭಾಷೆಯಲ್ಲಿಯೂ ನಟಿಸೋದಿಲ್ಲ ಎಂಬಂಥಾ ನಿರ್ಧಾರ ಪ್ರಕಟಿಸಿ ಜೈಲರ್೨ ಅವಕಾಶವನ್ನು ಸಾರಾಸಗಟಾಗಿ ನಿರಾಕರಿಸಿರುವ ಸುದ್ದಿ ಬಂದಿದೆ.

ಯಾವ ಭಾಷೆಯ ಸೂಪರ್ ಸ್ಟಾರುಗಳೇ ಆಗಿದ್ದರೂ ಕೂಡಾ ರಜನಿ ಜೊತೆ ನಟಿಸುವ ಅವಕಾಶಕ್ಕಾಗಿ ಹಂಬಲಿಸುತ್ತಾರೆ. ಕನ್ನಡದ ಶಿವಣ್ಣ, ಉಪ್ಪಿ ನಟಿಸಿದ್ದು ಕೂಡಾ ಅಂಥಾ ಅದಮ್ಯ ಪ್ರೀತಿಯಿಂದಲೇ. ಆದರೆ ಈ ಬಾಲಯ್ಯ ವಿಕ್ಷಿಪ್ತ ನಟ. ಕಾಮಿಡಿಯಂಥಾ ಪಾತ್ರಗಳನ್ನು ಮಾಡುತ್ತಾ, ಬೇರೆ ಭಾಷೆದಗಳ ಪ್ರೇಕ್ಷಕರು ಲೇವಡಿಯಾಡುವಂಥಾ ಬಿಲ್ಡಪ್ಪುಗಳ ಮೂಲಕ ಚಾಲ್ತಿಯಲ್ಲಿರುವಾತ ಬಾಲಯ್ಯ. ಎಣ್ಣೆ ಏಟಲ್ಲಿ ಏನೇನೋ ಅಧ್ವಾನ ಮಾಡಿಕೊಳ್ಳುವ ಮೂಲಕವೂ ಈತ ಸುದ್ದಿಕೇಂದ್ರದಲ್ಲಿರುತ್ತಾನೆ. ಇಂಥಾ ಬಾಲಯ್ಯ ತಾನು ರಜನಿಯನ್ನೂ ಮೀರಿದ ಸೂಪರ್ ಸ್ಟಾರ್ ಎಂಬ ಭ್ರಮೆಯಲ್ಲಿರುವಂತಿದೆ. ಈ ಕಾರಣದಿಂದಲೇ ಜೈಲರ್೨ ಅವಕಾಸ ಬರುತ್ತಲೇ ಐವತ್ತು ಕೋಟಿ ಸಂಭಾವನೆ ಕೊಡುವಂತೆ ಬೇಡಿಕೆ ಇಡುವ ಮೂಲಕ ಸೀರಿಯಸ್ ಆಗಿಯೇ ಕಾಮಿಡಿ ಮಾಡಿದ್ದ. ಬಾಲಯ್ಯನ ಇಂಥಾ ದುರಹಂಕಾರದ ವರ್ತನೆಯಿಂದ ತಲೈವಾ ಅಭಿಮಾನಿಗಳು ಕೆಂಡವಾಗಿದ್ದಾರೆ!

The post Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ! appeared first on Cini Shodha.