heegideepicchar – Cini Shodha

sees kaddi movie review: ಜನಪ್ರಿಯ ಅಲೆಯ ನಡುವಲ್ಲೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ!
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಾನಾ ಪ್ರಯೋಗಾತ್ಮಕ ಪ್ರಯತ್ನಗಳಿಂದ, ಭಿನ್ನ ಧಾಟಿಯ ಸಿನಿಮಾಗಳಿಂದ ಶೃಂಗಾರಗೊಂಡಂತಿದೆ. ಇಂಥಾ ಬಗೆಬಗೆಯ ಸಿನಿಮಾಗಳ ಭರಾಟೆಯ ನಡುವಲ್ಲಿಯೂ ನಮ್ಮ ನಡುವೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನವೊಂದು ಸದಾ ಚಾಲ್ತಿಯಲ್ಲಿರುತ್ತೆ. ಕಥೆಯನ್ನೇ ಆತ್ಮವಾಗಿಸಿಕೊಂಡಿರುವ, ಆ ಮೂಲಕವೇ ಹೊಸಾ ಲೀಕವೊಂದನ್ನು ತಮ್ಮೆದುರು ತೆರೆದಿಡುವ ಸಿನಿಮಾಗಳಿಗಾಗಿ ಹಾತೊರೆಯುವ ಪ್ರೇಕ್ಷಕರ ಸಂಖ್ಯೆ ನಮ್ಮಲ್ಲಿ ಗಣನೀಯವಾಗಿದೆ. ಅಂಥಾ ಪ್ರೇಕ್ಷಕ ವರ್ಗದ ಮನಸೆಳೆಯಬಲ್ಲ ಕಂಟೆಂಟು ಹೊಂದಿರುವ ಸೀಸ್ ಕಡ್ಡಿ ಚಿತ್ರ ಈ ವಾರ ಬಿಡುಗಡೆಗೊಂಡಿದೆ.

ಇದು ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಸೀಸ್ ಕಡ್ಡಿಯ ಗುಣಲಕ್ಷಣಗಳನ್ನೇ ಐದು ಪಾತ್ರವಾಗಿಸಿಕೊಂಡು, ಆ ಮೂಲಕ ಐದು ಕಥನಗಳು ಗರಿಬಿಚ್ಚಿಕೊಳ್ಳುವ ಹೊಸತನದೊಂದಿಗೆ ಈ ಸಿನಿಮಾವನ್ನವರು ದೃಶ್ಯೀಕರಿಸಿದ್ದಾರೆ. ಈ ಹಿಂದೆಯೂ ಕೂಡಾ ಈ ಬಗೆಯ ಪ್ರಯೋಗಗಳು ನಡೆದಿರೋದು ನಿಜ. ಆದರೆ, ಅದೆಲ್ಲದರಾಚೆಗೆ ಹೊಸಾ ಗುಂಗಿಗೊಡ್ಡಿಕೊಳ್ಳುವಂತೆ ಈ ಕಥನವನ್ನು ನಿರೂಪಣೆ ಮಾಡಿರೋದು ಸೀಸ್ ಕಡ್ಡಿಯ ಹೆಚ್ಚುಗಾರಿಕೆ. ನಮಗೆಲ್ಲ ವಿಕ್ರಮ ಬೇತಾಳನ ಕಥೆಗಳು ಬಾಲ್ಯದ ಸಾಥಿಗಳಾಗಿವೆ. ನಮ್ಮೆಲ್ಲರ ಕಲ್ಪನಾ ಶಕ್ತಿಗೆ ಹೊಸಾ ಆವೇಗ ಸಿಕ್ಕಿದ್ದರ ಹಿಂದೆಯೂ ಇಂಥಾ ಕಥೆಗಳ ಋಣವಿದೆ. ಅಂಥಾದ್ದೊಂದು ಮಧುರಾನುಭೂತಿಯನ್ನು ಮತ್ತೆ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳಿಸುವ ಪ್ರಯತ್ನವೊಂದು ಇಲ್ಲಿ ನಡೆದಂತೆ ಭಾಸವಾಗುತ್ತದೆ.

ಇಲ್ಲಿ ನಾನಾ ಬಗೆಯ ಬದುಕಿನ ಬಿಡಿ ಬಿಡಿ ಚಿತ್ರಗಳಿದ್ದಾವೆ. ಕೊಂಚ ಎಚ್ಚರ ತಪ್ಪಿದರೂ ಚದುಲಿ ಚೆಲ್ಲಾಪಿಲ್ಲಿಯಾಗಬಲ್ಲ ಸಂಕೀರ್ಣ ಕಥೆಯನ್ನು ಒಂದು ಬಿಂದುವಿನಲ್ಲಿ ಹಿಡಿದಿಡುವಲ್ಲಿ, ಒಂದಷ್ಟು ಕೊರತೆಗಳನ್ನೂ ಸಹ್ಯವಾಗಿಸಿಕೊಂಡು ನೋಡಿಸಿಕೊಂಡು ಹೋಗುವಲ್ಲಿ ನಿರ್ದೇಶನದ ಅಸಲೀ ಕಸುಬುದಾರಿಕ ಕಣ್ಣಿಗೆ ಕಟ್ಟುತ್ತೆ. ಇಲ್ಲಿನ ಬಹುತೇಕ ಕಥನಗಳು ಮನಮುಟ್ಟುವಂತಿವೆ. ಕೆಲವೆಡೆಗಳಲ್ಲಿ ನಿಧಾನಗತಿ ಹಾದುಹೋದಂತೆ ಭಾಸವಾದರೂ ಕೂಡಾ, ಒಟ್ಟಾರೆ ಕಥೆಯ ಓಘ ಅದೆಲ್ಲವನ್ನೂ ಸರಿದೂಗಿಸಿಕೊಂಡು ಮುಂದುವರೆಯುತ್ತದೆ. ಯಾವ ಗೊಂದಲ, ಗೋಜಲುಗಳಿಗೂ ಎಡೆಯಿಲ್ಲದಂತೆ, ನೋಡುಗರೆಲ್ಲರಿಗೂ ಅವರವರ ಭಾವಕ್ಕೆ ತಕ್ಕಂತೆ ಕಾಡಬಲ್ಲ ಗುಣಗಳೊಂದಿಗೆ ರತನ್ ಗಂಗಾಧರ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

ಇಲ್ಲಿ ಸಿನಿಮಾ ಮಂದಿರದಾಚೆಗೂ ಗುಂಗಿನಂತೆ ಕಾಡುವ ಪಾತ್ರಗಳನ್ನು ಸೃಷ್ಟಿಸಿರೋದೇ ಪ್ಲಸ್ ಪಾಯಿಂಟ್. ಆಯಾ ಪಾತ್ರಗಳನ್ನು ಕಲಾವಿದರು ಪರಿಪೂರ್ಣವೆನ್ನಿಸುವಂತೆ ನಿಭಾಯಿಸಿರೋದು ಸೀಸ್ ಕಡ್ಡಿಯ ಅಸಲೀ ಶಕ್ತಿಯಂತೆ ಕಾಣಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ಇದು ಒಂದಷ್ಟು ಹೊಸಾ ಸಾಧ್ಯತೆಗಳ ಅನ್ವೇಷಣೆಯಲ್ಲಿ ಆವಿರ್ಭವಿಸಿದಂತಿರೋ ಚಿತ್ರ. ಆ ಮೂಲಕ ನಿರ್ಮಾಪಕ ಸಂಪತ್ ಶಿವಶಂಕರ್ ಅವರ ಸಿನಿಮಾ ಪ್ರೇಮವೂ ಸಾರ್ಥಕ್ಯ ಕಂಡಂತಾಗಿದೆ. ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿಯೂ ಈ ಸಿನಿಮಾ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬಗ್ಗೆ ಸುದ್ದಿಗಳು ಜಾಹೀರಾಗಿದ್ದವು. ಈಗಾಗಲೇ ಸಿನಿಮಾ ನೋಡಿದವರ ಮುಖದಲ್ಲಿ ಸೀಸ್ ಕಡ್ಡಿ ಅಂಥಾ ಅರ್ಹತೆ ಹೊಂದಿರುವ ಸಿನಿಮಾ ಎಂಬಂಥಾ ಛಾಯೆ ಕಾಣಿಸುತ್ತಿದೆ. ಅದರ ಅಸಲೀ ಸ್ವಾದವನ್ನು ಸಿನಿಮಾ ಮಂದಿರಗಳಲ್ಲಿಯೇ ಆಸ್ವಾದಿಸಿದರೊಳಿತು…

The post sees kaddi movie review: ಜನಪ್ರಿಯ ಅಲೆಯ ನಡುವಲ್ಲೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ! appeared first on Cini Shodha.

movie review: ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಶೆ…
ನವಿರುಪ್ರೇಮದ ಪಕಳೆಗಳನ್ನು ಪ್ರೇಕ್ಷಕರ ಮನಸಿಗಂಟಿಸುವ ಮೂಲಕವೇ ದೊಡ್ಡ ಗೆಲುವೊಂದರ ರೂವಾರಿಯಾಗಿದ್ದವರು ನಿರ್ದೇಶಕ (shashank) ಶಶಾಂಕ್. ಮೊಗ್ಗಿನ ಮನಸು (moggina manasu)  ಚಿತ್ರದ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದ ಅವರು, ಇದೀಗ `ಕೌಸಲ್ಯ ಸುಪ್ರಜಾ ರಾಮ’ (kousalya supraja rama) ಚಿತ್ರದ ಮೂಲಕ ಮ್ತೊಂದುಆಆಮದ ಕಥೆಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ನಾನಾ ರೀತಿಯಲ್ಲಿ ಸುದ್ದಿ ಮಾಡುತ್ತಾ, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಪ್ರೀಮಿಯರ್ ಶೋಗಳ ಮೂಲಕವೇ ಒಂದಷ್ಟು ಪಾಸಿಟಿವ್ ಘಮ ಪಸರಿಸಿದ್ದ ಕೌಸಲ್ಯ ಸುಪ್ರಜಾ ರಾಮ ತನ್ನ ಆಂತರ್ಯದ ಆಶಯದಂತೆಯೇ ಪ್ರೇಕ್ಷಕರನ್ನು ಆವರಿಸಿಕೊಳ್ಳುವಲ್ಲಿ ತಕ್ಕ ಮಟ್ಟಿಗೆ ಯಶ ಕಂಡಿದೆ!

ಶಶಾಂಕ್ ನಿರ್ದೇಶನದ ಚಿತ್ರವೆಂದ ಮೇಲೆ, ಅದು ಯಾವುದೇ ಜಾನರಿನದ್ದಾಗಿದ್ದರೂ ಕುಟುಂಬ ಸಮೇತವಾಗಿ ನೋಡಿಸಿಕೊಳ್ಳುವ ಗುಣ ಹೊಂದಿರುತ್ತದೆ. ಆ ನಂಬಿಕೆ ಕೌಸಲ್ಯ ಸುಪ್ರಜಾ ರಾಮ ಚಿತ್ರದ ಮೂಲಕವೂ ನಿಜವಾಯಿತಾ? ಟ್ರೈಲರ್‌ನಲ್ಲಿದ್ದ ಬಿಸುಪು ಒಂದಿಡೀ ಚಿತ್ರದಲ್ಲಿಯೂ ಅಡಕವಾಗಿದೆಯಾ? ಅಷ್ಟಕ್ಕೂ ಶಶಾಂಕ್ ಈ ಮೂಲಕ ಯಾವ ಥರದಲ್ಲಿ ಮ್ಯಾಜಿಕ್ ಮಾಡಿದ್ದಾರೆ? ಇಂಥಾ ಪ್ರಶ್ನಗಳನ್ನಿಟ್ಟುಕೊಂಡು ಸಿನಿಮಾ ಮಂದಿರ ಹೊಕ್ಕವರಿಗೆ ಒಂದಷ್ಟು ಕೊರತೆಗಳಾಚೆಗೂ ಮಧುರಾನುಭೂತಿ ನೀಡುವಲ್ಲಿ ಈ ಸಿನಿಮಾ ಗೆದ್ದಿದೆ. ಇದೀಗ ಚಿತ್ರರಂಗದಲ್ಲಿ ಬೇರೆಯದ್ದೇ ಧಾಟಿಯ ಭರಾಟೆ ಶುರುವಾಗಿದೆ. ಬಹುತೇಕರು ಆಕ್ಷನ್ ಗುಂಗಿಗೆ ಬಿದ್ದು, ಅದಕ್ಕೆ ತಕ್ಕುದಾದ ದೃಷ್ಯ ಹೊಸೆಯುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ಮತ್ತೊಂದು ದಿಕ್ಕಿನತ್ತ ಹೊರಳಿಕೊಳ್ಳಲು ಶಶಾಂಕ್ ಮನಸು ಮಾಡಿರೋದೇ ಮೆಚ್ಚಿಕೊಳ್ಳುವಂಥಾ ವಿಚಾರ. ಆದರೆ, ಅದು ನಿರೀಕ್ಷಿತ ಪ್ರಮಾಣದ ತುದಿ ಮುಟ್ಟಿಲ್ಲ ಅನ್ನೋದೇ ತಕರಾರು!

ಹಾಗೆ ನೋಡಿದರೆ, ಟ್ರೈಲರ್‌ನಲ್ಲಿ ಕಾಣಿಸಿದ್ದಕ್ಕೂ ಮಧ್ಯಂತರದವರೆಗೆ ತೆರೆದುಕೊಳ್ಳುವ ದೃಷ್ಯಗಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಗಂಡಸ್ತನದ ಅಹಮ್ಮಿಕೆಯನ್ನು ಅಪಾದಮಸ್ತಕ ಹೊದ್ದುಕೊಂಡ ತಂದೆ, ಅಂಥಾ ಅಹಮ್ಮಿಕೆಯನ್ನೆಲ್ಲ ಗಾಢವಾದ ಪ್ರೀತಿಯ ಮೂಲಕವೇ ತಣಿಸುವ ಸ್ವಭಾವದ ಅಮ್ಮ ಮತ್ತು ಅದಾಗತಾನೇ ಜಗತ್ತಿನತ್ತ ಕಣ್ತೆರೆಯುತ್ತಿರೋ ಮಗ… ಅಪ್ಪನೆಂಬೋ ಪುರುಷಹಂಕಾರದ ಮೂಟೆ, ತನ್ನ ಬುದ್ಧಿಯನ್ನೇ ಮಗನಿಗೂ ಧಾರೆಯೆರೆದು ಬೆಳೆಸುತ್ತಾನೆ. ಬುದ್ಧಿ ಬಲಿಯುವ ಮುನ್ನವೇ ಗಂಡಸ್ತನದ ತಿಮಿರು ಮೂಡಿಸಿಕೊಂಡು ಬೆಳೆಯುವ ಮಗನ ವ್ಯಕ್ತಿತ್ವಕ್ಕೂ ಅದು ಅನಾಯಾಸವಾಗಿ ಅಂಟಿಕೊಳ್ಳುತ್ತೆ. ಅದು ಕಾಲೇಜು ಹಂತ ದಾಟಿ, ಕೆಲಸ ಹಿಡಿದ ಮೇಲೂ ಮುಂದುವರೆಯುತ್ತೆ.

ಈ ನಡುವೆ ಕಾಲೇಜಿನಲ್ಲೇ ಗಂಡಸ್ತನದ ಕಿರೀಟ ಹೊತ್ತುಕೊಂಡಿದ್ದ ನಾಯಕನನ್ನು ಹುಡುಗಿಯೊಬ್ಬಳು ಮೋಹಿಸುತ್ತಾಳೆ. ಹೇಗೋ ಕೊಸರಾಡಿಕೊಂಡು ನಾಯಕನೂ ಲವ್ವಲ್ಲಿ ಬೀಳುತ್ತಾನೆ. ಪ್ರೀತಿಯಿರುವ ಜಾಗವನ್ನು ಒಣ ಅಹಮ್ಮಿಕೆ ಆಳಲು ಸಾಧ್ಯವಾಗೋದಿಲ್ಲ. ಈ ಮಾತಿಗೆ ತಕ್ಕುದಾಗಿ ಪ್ರೀತಿಯಲ್ಲಿ ಬಿರುಕು. ಅದರ ಫಲವಾಗಿ ಬ್ರೇಕಪ್ಪು. ಅಹಮ್ಮಿಕೆಯ ಒಡಲಲ್ಲೇ ಪ್ರೀತಿ ಸಾಕಿಕೊಂಡರೂ, ಅದನ್ನು ತೋರ್ಪಡಿಸಿಕೊಳ್ಳಲಾಗದ ಒಣ ಜಂಭ ನಾಯಕನ ಮನಸನ್ನಾವರಿಸುತ್ತೆ. ಆ ನಂತರ ನಡೆಯುವ ಘಟನಾವಳಿಗಳೇ ಈ ಸಿನಿಮಾದ ಜೀವಾಳ. ಅದಾದ ಬಳಿಕ ಸೆಂಟಿಮೆಂಟಿನ ಕಥನಗಳು, ಅನಿರೀಕ್ಷಿತ ತಿರುವುಗಳು ಮೂಡಿಕೊಳ್ಳುತ್ತವೆ. ಅವೆಲ್ಲವೂ ಅನಾಯಾಸವಾಗಿ ನೋಡಿಸಿಕೊಳ್ಳುತ್ತವೆ.

ಪುರುಷ ಘನತೆಯನ್ನು ನೆತ್ತಿ ಮೇಲಿಟ್ಟುಕೊಂಡು, ಹೆಣ್ಣನ್ನು ನಿಕೃಷ್ಟವಾಗಿ ಕಾಣೋ ನಾಯಕನಿಗೆ ಎಂಥಾ ಹುಡುಗಿ ಬಾಳ ಸಂಗಾತಿಯಾಗಿ ಸಿಗುತ್ತಾಳೆ? ಆ ನಂತರದಲ್ಲಿ ಎಂತೆಂಥಾ ವಿದ್ಯಮಾನಗಳು ಜರುಗುತ್ತವೆಂಬುದರಲ್ಲಿಯೇ ಈ ಚಿತ್ರದ ಆತ್ಮವಿದೆ. ಅದರೊಳಗೆ ಮನಸಿಗೆ ತಾಕುವ, ಬದುಕಲ್ಲಿ ಅಳವಡಿಸಿಕೊಳ್ಳಬೇಕೆನ್ನಿಸುವ ಒಂದಷ್ಟು ಪಲ್ಲಟಗಳೂ ಎದುರಾಗುತ್ತವೆ. ಡಾರ್ಲಿಂಗ್ ಕೃಷ್ಣ ಇಲ್ಲಿ ಭಿನ್ನ ಶೇಡಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕವರು ಯಾಯವನ್ನೂ ಸಲ್ಲಿಸಿದ್ದಾರೆ. ಬೃಂದಾ ಆಚಾರ್ಯ ತನ್ನ ಇಮೇಜಿಗೆ ತಕ್ಕಂತೆ ನಟಿಸಿದ್ದಾರೆ. ಇನ್ನುಳಿದಂತೆ, ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ನಟಿಸಿದ್ದಾಎಂಬುದನ್ನೇ ಚಿತ್ರತಂಡ ಮರೆಮಾಚಿಕೊಂಡು ಬಂದಿತ್ತು. ಆದರೆ, ಆಕೆಯ ಪಾತ್ರವೇ ಇಲ್ಲಿ ಮಹಾ ತಿರುವುಗಳನ್ನು ತಂದೊಡ್ಡುತ್ತದೆ. ಅದರ ಮೂಲಕವೇ ಕುಂಟುತ್ತಾ ಸಾಗೋ ಕಥೆಗೊಂದು ಓಘ ಕೊಡುತ್ತಾ, ಜೊತೆ ಜೊತೆಗೆ ಒಂದಷ್ಟು ಗಂಭೀರ ವಿಚಾರಗಳನ್ನೂ ಶಶಾಂಕ್ ದಾಟಿಸಿದ್ದಾರೆ. ಆ ಪಾತ್ರದ ಸುತ್ತಲೇ ಈ ಸಮಾಜಕ್ಕೆ, ಅಲ್ಲಿ ಹಾಸುಹೊಕ್ಕಾಗಿರುವ ಮನಸ್ಥಿತಿಗಳಿಗೆ ಕನ್ನಡಿಯನ್ನೂ ಹಿಡಿದಿದ್ದಾರೆ.

ಇನ್ನುಳಿದಂತೆ, ಕಾಲೇಜೂ ಸೇರಿದಂತೆ ಒಂದಷ್ಟು ದೃಷ್ಯಾವಳಿಗಳು ಅದೇಕೋ ಪೇಲವವೆನ್ನಿಸುತ್ತವೆ. ಮೊದಲಾರ್ಧಕ್ಕೆ ಇನ್ನಷ್ಟು ಆವೇಗವಿದ್ದಿದ್ದರೆ ಮತ್ತೊಂದಷ್ಟು ಮುದವಿರುತ್ತಿತ್ತು. ಇಂಥಾ ಮಿತಿಗಳಾಚೆಗೂ ಕೌಸಲ್ಯ ಸುಪ್ರಜಾ ರಾಮಾ ಈ ದಿನಮಾನದ ಮಟ್ಟಿಗೆ ಕೊಂಚ ಅಪರೂಪದ ಚಿತ್ರವಾಗಿ ಕಾಣಿಸುತ್ತದೆ. ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ನೋಡಿ ನಿಸೂರಾಗುವಂಥಾ ಅವಕಾಶವನ್ನೂ ಕಲ್ಪಿಸಿದೆ. ಶಶಾಂಕ್ ಕನ್ನಡ ಚಿತ್ರರಂಗದಲ್ಲಿ ಭಿನ್ನ ಪಥದ ಜಾಡು ಹಿಡಿದು ಹೊರಟಿರುವ ನಿರ್ದೇಶಕ. ಚಿತ್ರದಿಂದ ಚಿತ್ರಕ್ಕೆ ಅವರು ಪಕ್ವವಾಗುತ್ತಾ ಬಂದಿದ್ದಾರೆ. ಈ ಕಥೆ, ನಿರೂಪಣೆ, ಮತ್ತು ದೃಷ್ಯ ಕಟ್ಟುವ ಬಗೆಯಲ್ಲಿ ಒಂದಷ್ಟು ಪರಿಣಾಮಕಾರಿಯಾಗಿ ಆಲೋಚಿಸಿದ್ದರೆ, ಈ ಚಿತ್ರ ಮತ್ತೊಂದಷ್ಟು ಚೆಂದಗೆ ಮೂಡಿ ಬರುತ್ತಿತ್ತೇನೋ… ಒಟ್ಟಾರೆಯಾಗಿ ಕೌಸಲ್ಯ ಸುಪ್ರಜಾ ರಾಮ ಕುಟುಂಬ ಸಮೇತವಾಗಿ ಒಂದು ಸಲ ನೋಡಬಹುದಾದ ಚಿತ್ರ…

The post movie review: ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಶೆ… appeared first on Cini Shodha.

pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!
ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದ್ದ ಚಿತ್ರ (pinki elli) `ಪಿಂಕಿ ಎಲ್ಲಿ’. ಪೃಥ್ವಿ ಕೋಣನೂರು (prithvi konanur)  ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ವಿಶ್ವಾದ್ಯಂತ ಹೆಸರು ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾಗಳು ಪ್ರೇಕ್ಷಕರ ಪಾಲಿಗೆ ಮರೀಚಿಕೆಯಾಗುಳಿಯುತ್ತವೆ. ಆದರೆ, ಪಿಂಕಿ ಎಲ್ಲಿ ಚಿತ್ರವೀಗ ಸಿನಿಮಾ ಮಂದಿರಗಳಲ್ಲಿಯೂ ಬಿಡುಗಡೆಗೊಂಡಿದೆ. ಹಾಗೆ ಪ್ರೀತಿಯಿಂದ ಬಂದ ನೋಡಿದ್ದ ಪ್ರತಿಯೊಬ್ಬರ ನರನಾಡಿಗಳಿಗಿಳಿದು ಪಿಂಕಿ (pinki)  ಕಾಡಿದ್ದಾಳೆ. ಅಬ್ಬರವಿಲ್ಲದೆಯೇ ಆದ್ರ್ರಗೊಳಿಸುವ ಈ ಸಿನಿಮಾದ ಗುಣವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ.

ಇಲ್ಲಿ ಹಿನ್ನೆಲೆ ಸಂಗೀತದ ಆರ್ಭಟವಿಲ್ಲ, ಪಾತ್ರಗಳೂ ಕೂಡಾ ಸಹಜತೆಯ ಗೆರೆ ದಾಟಿ ವರ್ತಿಸುವುದಿಲ್ಲ, ಯಾವ ನಾಟಕೀಯತೆಗೂ ಇಲ್ಲಿ ಆಸ್ಪದವಿಲ್ಲ… ಹೀಗಿದ್ದರೂ ಒಂದು ಭರ್ಜರಿ ಸಸ್ಪೆನ್ಸ್ ಥ್ರಿಲ್ಲರ್ ಸೀನಿಮಾವನ್ನು ನಿವಾಳಿಸಿ ಎಸೆಯುವಂಥಾ ಅನುಭೂತಿಯೊಂದನ್ನು ಈ ಚಿತ್ರ ಮುಫತ್ತಾಗಿ ಕೊಟ್ಟು ಬಿಡುತ್ತದೆ. ಇಲ್ಲಿ ಪಾತ್ರವಾಗಿರೋ ಪ್ರತೀ ಜೀವಗಳ ಏರಿಳಿತಗಳೂ ಎದೆಗೆ ನಾಟುತ್ತವೆ. ಅಲ್ಲಿನ ವಿಷಾದ, ಕಣ್ಣಂಚು ದಾಟದ ದುಃಖ, ಭಾವಗಳೆಲ್ಲವೂ ಅನಾಯಾಸವಾಗಿ ನೋಡುಗರನ್ನು ದಾಟಿಕೊಳ್ಳುತ್ತದೆ. ಅಷ್ಟೊಂದು ಸಮರ್ಥವಾಗಿ ದೃಷ್ಯ ಕಟ್ಟುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು (pruthvi konanur) ಗೆದ್ದಿದಾರೆ.

ಬೆಂಗಳೂರಿನಂಥಾ ಮಹಾ ನಗರಗಳಲ್ಲಿನ ಬದುಕಿನ ಕ್ರಮವೇ ಬೇರೆ. ಮೇಲುನೋಟಕ್ಕೆ ಥಳುಕು ಬಳುಕುಗಳನ್ನಿಟ್ಟುಕೊಂಡಿರುವ ಇಂಥಾ ನಗರಗಳ ಗರ್ಭದಲ್ಲಿ ಘಾಸಿಗೊಂಡ ಬದುಕುಗಳು ಸಾಕಷ್ಟು ಅಸಂಖ್ಯೆಯಲ್ಲಿದ್ದಾವೆ. ಒಂದು ಕಾಲದಲ್ಲಿ ನಡೆದಿದ್ದಂಥಾ ಎಳೆಯನ್ನೇ ಇಟ್ಟುಕೊಂಡು ನಿರ್ದೇಶಕರಿಲ್ಲಿ ದೃಷ್ಯ ಕಟ್ಟಿದ್ದಾರೆ. ಮುರಿದು ಬಿದ್ದ ಸಂಸಾರ, ಗಂಡನಿಂದ ದೂರವಾಗಿ ಪುಟ್ಟ ಮಗುವಿನೊಂದಿಗೆ ಬದುಕು ಕಟ್ಟಿಕೊಳ್ಳಬಯಸೋ ಹೆಣ್ಣು ಮಗಳು. ಆ ಕೆಲಸದ ಅನಿವಾರ್ಯತೆಯಿಂದ ಹಸುಗೂಸು ಪಿಂಕಿಯನ್ನು ಕೆಲಸದಾಕೆಗೆ ಒಪ್ಪಿದಾಗ ನಡೆಯೋ ದಿಗ್ಭ್ರಮೆ ಮೂಡಿಸೋ ಘಟನಾವಳಿಗಳೇ ಇಡೀ ಸಿನಿಮಾದ ಸಾರ.

ಹೆತ್ತವರ ಮುನಿಸಿಗೆ ಸಿಕ್ಕ ಲೋಕವರಿಯದ ಕೂಸು ಭಿಕ್ಷಾಟನೆಗೆ ಬಳಕೆಯಾಗುತ್ತದೆ. ಅಲ್ಲಿಂದ ಅದು ಹೇಗೋ ನಾಪತ್ತೆಯಾದ ಆ ಮ ಗು ಮತ್ತೆ ಹೆತ್ತವರ ಮಡಿಲು ಸೇರುತ್ತಾ ಎಂಬ ಕುತೂಹಲಕ್ಕೆ ಈ ಸಿನಿಮಾದ ತುಂಬಾ ರೋಚಕ ಉತ್ತರ ಸಿಗುತ್ತದೆ. ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿದರೇನೇ ಚೆಂದ. ಇಲ್ಲಿ ಪರಿಸ್ಥಿತಿ ಅನಿವಾರ್ಯತೆಗೆ ಸಿಕ್ಕು ಘಟಿಸುವ ಘಟನಾವಳಿಗಳನ್ನು ನಿರ್ದೇಶಕರು ಕ್ರೈಂ ಎಂಬಂತೆ ವಿಜೃಂಭಿಸಿಲ್ಲ. ಅಂಥಾ ಅತಿಶಯಗಳು ಚಿತ್ರದುದ್ದಕ್ಕೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಅದೇ ಒದಿಡೀ ಸಿನಿಮಾದ ಹೆಚ್ಚುಗಾರಿಕೆ ಮತ್ತು ಗೆಲುವಿಗೆ ಕಾರಣ. ಮಗುವನ್ನು ಭಿಕ್ಷಾಟನೆಗೆ ಬಿಟ್ಟ ಮನೆಗೆಲಸದ ಹಂಗಸಿನ ಹಿಂದಿರುವ ಅನಿವಾರ್ಯತೆ, ಆ ಕೂಸು ಅಚಾನಕ್ಕಾಗಿ ಮಡಿಲಿಗೆ ಬಿದ್ದಾಗ ಅದನ್ನು ತನ್ನದೇ ಎಂಬಂತೆ ಬೆಳೆಸುವ ಉಮೇದು ಪ್ರದರ್ಶಿಸೋ ಕಸ ಗುಡಿಸೋ ಮಹಿಳೆಯ ತುಮುಲ… ಇಂಥಾ ಅದೆಷ್ಟೋ ಸೂಕ್ಷ್ಮಗನ್ನು ಕಣ್ಣಿಗೆ ಕಟ್ಟುವಂತೆ, ಎದೆಗೆ ಮುಟ್ಟುವಂತರೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

ಇನ್ನುಳಿದಂತೆ, ಇಲ್ಲಿನ ಪಾತ್ರಗಳನ್ನು ನಿರ್ವಹಿಸಿದವರೆಲ್ಲರೂ ಒಬ್ಬರಿಗೊಬ್ಬರು ಮಿಇಲೆಂಬಂತೆ ಕಾಣಿಸಕೊಂಡಿದ್ದಾರೆ. ನಟನೆಯ ಗಂಧ ಗಾಳಿ ಇಲ್ಲದಿದ್ದರೂ ಆ ಪಾತ್ರಗಳಿಗೆ ಜೀವ ತುಂಬಿದ ಮಹಿಳೆಯರು ಮತ್ತು ಮಗುವನ್ನು ಕಳೆದುಕೊಂಡ ತಾಯಿಯಾಗಿ ಕಾಣಿಸಿಕೊಂಡಿರುವ ಅಕ್ಷತಾ ಪಾಂಡವಪುರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣಗಳನ್ನು ಹೊಂದಿರುವ ಪಿಂಕಿ ಎಲ್ಲಿ ಒಂದು ಅಪರೂಪದ ಚಿತ್ರ. ಅದನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನೋಡುವ ಮೂಲಕ ಪ್ರೀತ್ಸಾಹಿಸಿದರೆ ಇಂಥಾ ಭಿನ್ನ ಪ್ರಯೋಗಗಳಿಗೆ ಅನುವು ಮಾಡಿ ಕೊಟ್ಟಂತಾಗುತ್ತದೆ. ಇಂಥಾದ್ದೊಂದು ಉತ್ಸಾಹವೀಗ ಪ್ರೇಕ್ಷಕರನ್ನು ಆವರಿಸಿಕೊಂಡಂತಿದೆ!

The post pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ! appeared first on Cini Shodha.