director – Cini Shodha

director t n seetharam: ಸೀರಿಯಲ್ ಲೋಕದಲ್ಲಿ ಮತ್ತೆ ಮನ್ವಂತರ?
ಈವತ್ತಿಗೆ ಕನ್ನಡ ಕಿರುತೆ ಜಗತ್ತು ಪಕ್ಕಾ ಟಿಆರ್‌ಪಿ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಾ ಪ್ರೇಕ್ಷಕ ವಲಯದಲ್ಲೊಂದು ರೇಜಿಗೆ ಮೂಡಿಕೊಳ್ಳುವಂತೆ ಮಾಡಿದೆ. ಅಲ್ಲಿ ಅದರದ್ದೇ ಆದ ಆರ್ಥಿಕ ಲೆಕ್ಕಾಚಾರಗಳಿದ್ದಾವೆ. ಇಂಥಾ ವಹಿವಾಟುಗಳ ಅಬ್ಬರದಲ್ಲಿ ಕ್ರಿಯೇಟಿವಿಟಿ ಎಂಬುದು ಹೆಚ್ಚೂಕಮ್ಮಿ ಕಳೆದೇ ಹೋಗಿದೆ. ಕಥೆಯ ಹುಟ್ಟೂ ಕೂಡಾ ವಾಹಿನಿ ಮಂದಿಯ ಕೈಯಲ್ಲಿ ಸಿಕ್ಕು ನರಳುವಂಥಾ ಸ್ಥಿತಿ ಕಿರುತೆರೆ ಜಗತ್ತನ್ನು ಮೆಲ್ಲಗೆ ಪ್ರೇಕ್ಷಕರಿಂದ ವಿಮುಖಗೊಳ್ಳುವಂತೆ ಮಾಡುತ್ತಿದೆ. ಕಾಸು ಕೊಟ್ಟ ಮಂದಿಯ ಕೈಯಲ್ಲಿ ರಿಮೋಟು ಇದೆಯಾದರೂ, ಯಾವ ಚಾನೆಲ್ಲು ಬದಲಾಯಿಸಿದರೂ ಮತ್ತದೇ ರೋಧನೆ. ಇಂಥಾ ಹೊತ್ತಿನಲ್ಲಿ ಕಿರುತೆರೆ ಪ್ರೇಕ್ಷಕರು ಹೊರಳಿಕೊಳ್ಳೋದು ದಶಕಗಳ ಹಿಂದಿನ ಧಾರಾವಾಹಿಗಳ ಜಮಾನದತ್ತ!

ಅಂಥಾ ಕಿರುತೆರೆ ಜಗತ್ತಿನ ಸುವರ್ಣ ಯುಗವೊಂದರ ಭಾಗವಾಗಿದ್ದುಕೊಂಡೇ, ಕಿರುತೆ ಪ್ರೇಕ್ಷಕರ ಅಭಿರುಚಿಯನ್ನು ಹೆಚ್ಚುವಂತೆ ಮಾಡಿದ್ದವರು ಟಿ.ಎನ್ ಸೀತಾರಾಮ್. ಮಾಯಾಮೃಗ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸೀತಾರಾಮ್ ಅವರದ್ದು ಯಾವಾಗಲೂ ಭಿನ್ನ ಪಥ. ಈವತ್ತಿಗೂ ಅವರು ನಿರ್ದೇಶನ ಮಾಡಿದ ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನು ಹುಡುಕಿ ಹುಡುಕಿ ಕೇಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಹುಶಃ ಅದು ಕನ್ನಡ ಕಿರುತೆರೆ ಜಗತ್ತಿನ ಪಾಲಿಗೆ ಎಂದಿಗೂ ಘಮ ಕಳೆದುಕೊಳ್ಳದ ಗಂಧವಿದ್ದಂತೆ. ಸೀತಾರಾಮ್ ನಿರ್ದೇಶನದ ಸೀರಿಯಲ್ಲುಗಳ ಟೈಟಲ್ ಸಾಂಗ್ ಕೇಳಿದರೇನೇ ತೊಂಬತ್ತರ ದಶಕದ ಆಚೀಚಿನ ಅನಿರ್ವಚನೀಯ ಅನುಭವವೊಂದು ಎದೆತುಂಬಿಕೊಳ್ಳುತ್ತೆ.

ಹೀಗೆ ಧಾರಾವಾಹಿ ನಿರ್ದೇಶನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಟಿ.ಎನ್ ಸೀತಾರಾಮ್ ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಿಂದ ದೂರ ಸರಿದಿದ್ದಾರೆ. ಇಂಥಾ ಘಳಿಗೆಯಲ್ಲಿ ಅವರು ಮರಳಿ ಬರಬೇಕೆಂಬ ನಿರೀಕ್ಷೆಯಿಟ್ಟುಕೊಂಡವರ ಸಂಖ್ಯೆ ದೊಡ್ಡದಿದೆ. ಅಂಥವರಿಗೆಲ್ಲ ಸಿಹಿ ಸುದ್ದಿಯೊಂದನ್ನು ಖುದ್ದು ಅವರೇ ಹಂಚಿಕೊಂಡಿದ್ದಾರೆ. ಜಗತ್ತಿನ ಕೆಲ ಅಪರೂಪದ ಕಾದಂಬರಿಗಳನ್ನು ದೃಶ್ಯೀಕರಿಸಿ, ಎಪಿಸೋಡುಗಳ ರೂಪದಲ್ಲಿ ಭೂಮಿಕಾಶ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಳಿಸೋದಾಗಿ ಹೇಳಿಕೊಂಡಿದ್ದಾರೆ. ಕಾದಂಬರಿ ಯಾವ ದೇಶದ್ದೇ ಆದರೂ ಅದನ್ನು ಈ ನೆಲದ ಸೊಗಡಿಗೆ ಒಗ್ಗಿಸಿ ಧಾರಾವಾಹಿಯಾಗಿ ಚಿತ್ರೀಕರಿಸೋದಾಗಿ ಸೀತಾರಾಮ್ ಅವರು ಹೇಳಿಕೊಂಡಿದ್ದಾರೆ. ಅಂತೂ ಅವರು ಕಿರುತೆರೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದರೂ, ಯೂಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತೀರ್ಮಾನಿಸಿದಂತಿದೆ.

The post director t n seetharam: ಸೀರಿಯಲ್ ಲೋಕದಲ್ಲಿ ಮತ್ತೆ ಮನ್ವಂತರ? appeared first on Cini Shodha.

nelson dileep kumar: ಬೀಸ್ಟ್ ಊಸ್ಟ್ ಆದದ್ದಕ್ಕೆ ಕಾರಣವೇನು?
ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (nelson dileep kumar)  ಇದೀಗ ಮಹಾ ಗೆಲುವೊಂದರ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಜೈಲರ್ (jailer movie) ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ನಿನೊಂದಿಗೆ ವಾರಗಳನ್ನು ದಾಟಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿರುವ ಕ್ರೇಜ್ ಕಂಡು ರಜನೀಕಾಂತ್ (rajnikanth) ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ. ದೇಶವ್ಯಾಪಿ ಜೈಲರ್ ಹವಾ ಹಬ್ಬಿಕೊಂಡಿರುವ ಈ ಘಳಿಗೆಯಲ್ಲಿ ನಿರ್ದೇಶಕ ನೆಲ್ಸನ್ ನಿಜವಾದ ಹೀರೋನಂತೆ ಬಿಂಬಿತವಾಗಿದ್ದಾರೆ. ಇಂಥಾದ್ದೊಂದು ಗೆಲುವು ಎಂಥವರಿಗಾದರೂ ನಶೆಯೇರಿಸುತ್ತೆ. ನಡೆದು ಬಂದ ಹಾದಿಯತ್ತ ಕಡೆಗಣ್ಣಲೂ ನೋಡದೆ ಮೆರೆಯುವಂತೆ ಮಾಡುತ್ತದೆ. ಆದರೆ, ಇಂಥಾದ್ದೊಂದು ಸಮ್ಮೋಹಕ ಗೆಲುವಿಜ ಝಗಮಘದಲ್ಲಿ ನಿಂತಿದ್ದರೂ, ನಿರ್ದೇಶಕ ನೆಲ್ಸನ್ ಹಳೇ ಸೋಲೊಂದರ ನೆತ್ತಿ ನೇವರಿಸಿದ್ದಾರೆ. ಅದಕ್ಕೆ ಕಾರಣವಾದ ಅಂಶಗಳನ್ನು ತಡಕಾಡಿದ್ದಾರೆ!

ಇದು ಸ್ವಾರ್ಥದ ಜಗತ್ತು. ಇಲ್ಲಿ ಗೆಲುವಿಗೆ ಅಪ್ಪ ಅನ್ನಿಸಿಕೊಂಡು ಮೆರೆಯುವವರು ಸಾಕಷ್ಟಿದ್ದಾರೆ. ಆದರೆ ಅನಾಥವಾಗಿ ಬಿದ್ದ ಸೋಲನ್ನು ಎತ್ತಿ ಹೆಗಲಿಗಿಟ್ಟುಕೊಂಡು, ಇದು ನನ್ನದೇ ಅನ್ನುವಂಥಾ ಛಾತಿ ಇರುವವರು ಕಡಿಮೆ. ಅಂಥಾದ್ದೊಂದು ಅಪರೂಪದ ವ್ಯಕ್ತಿತ್ವವಾಗಿ ನೆಲ್ಸನ್ ಕಾಣಿಸುತ್ತಾರೆ. ಬೇರೆ ಯಾರೇ ಆಗಿದ್ದರೂ ಈ ಹೊತ್ತಿನಲ್ಲಿ ಬರೀ ಜೈಲರ್ ಗೆಲುವಿನ ಬಗ್ಗೆ ಮಾತಾಡುತ್ತಿದ್ದರು. ಆದರೆ, ನೆಲ್ಸನ್ ದಳಪತಿ ವಿಜಯ್ ಅಭಿನಯಿಸಿದ್ದ, ತಾನು ನಿರ್ದೇಶನ ಮಾಡಿದ್ದ ಬೀಸ್ಟ್ ಚಿತ್ರದ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಈ ಮೂಲಕ ತನ್ನನ್ನು ತಾನೇ ವಿಮರ್ಶೆಗೊಳಪಡಿಸಿಕೊಂಡಿದ್ದಾರೆ.

ಬೀಸ್ಟ್ ಗಾಗಿ ಬಹಳಷ್ಟು ಆಸ್ಥೆಯಿಂದ ನೆಲ್ಸನ್ ಕಾರ್ಯ ನಿರ್ವಹಿಸಿದ್ದರಂತೆ. ಕಥೆ ಮತ್ತು ಪಾತ್ರ ಸೃಷ್ಟಿಯನ್ನಂತೂ ಅತ್ಯಂತ ಜತನದಿಂದ ಮಾಡಿದ್ದರಂತೆ. ಆದರೆ ಕೋವಿಡ್ ಹಿಂಚುಮುಂಚಿನಲ್ಲಿದ್ದ ಕಾರಣದಿಂದ ಅಡಿಗಡಿಗೆ ಸವಾಲುಗಳೆದುರಾಗಿದ್ದವು. ಚಿತ್ರೀಕರಣದ ಹಂತದಿಂದಲೇ ಅಂಥಾದ್ದಕ್ಕೆಲ್ಲ ಎದೆಗೊಡುವಂಥಾ ಅನಿವಾರ್ಯತೆ ಬಂದೊದಗಿತ್ತು. ಆ ಬಳಿಕ ಬಿಡುಗಡೆಗೆ ತೀರ್ಮಾನಿಸಿದಾಗಲೂ ಕೂಡಾ ಕೆಜಿಎಫ್2 ಅಲೆಯ ಮುಂದೆ ಬೀಸ್ಟ್ ಮಂಕಾಗಿ ಬಿಟ್ಟಿತ್ತು. ಆರಂಭದಿಂದಲೇ ನೆಗೆಟಿವ್ ಅನಿಸಿಕೆಗಳು ಬರಲಾರಂಭಿಸಿದಾಗಲಂತೂ ನೆಲ್ಸನ್ ಒದ್ದಾಡುವಂತಾಗಿತ್ತಂತೆ. ಈವರೆಗಿನ ನಾಲಕ್ಕು ಸಿನಿಮಾಗಳ ಜರ್ನಿಯಲ್ಲಿ ನೆಲ್ಸನ್ ಗೆಲುವು ಕಂಡಿದ್ದಾರೆ. ಜೈಲರ್ ಅಂತೂ ಮಹಾ ಗೆಲುವಿನ ರೂವಾರಿಯಾಗಿದೆ. ಆದರೂ ಕೂಡಾ ನೆಲ್ಸನ್‍ರನ್ನು ಬೀಸ್ಟ್ ಚಿತ್ರದ ಹೀನಾಯ ಸೋಲಿನ ಕಹಿ ಕಾಡುತ್ತಿರುವಂತಿದೆ.

The post nelson dileep kumar: ಬೀಸ್ಟ್ ಊಸ್ಟ್ ಆದದ್ದಕ್ಕೆ ಕಾರಣವೇನು? appeared first on Cini Shodha.

director siddique: ಯಶಸ್ವೀ ನಿರ್ದೇಶಕ ಸಿದ್ಧಿಕಿ ಇನ್ನಿಲ್ಲ!
ಕನ್ನಡ ಚಿತ್ರರಂಗಕ್ಕೆ ಮತ್ತೆ ಸಾವಿನ ಸೂತಕ ಕವುಚಿಕೊಂಡಿದೆ. ಅಪ್ಪು (puneeth rajkumar) ಇನ್ನಿಲ್ಲವಾದ ನೋವು ಜಿನುಗುತ್ತಿರುವಾಗಲೇ, ಅವರ ಸೊಸೆ,  (vijay raghavendra) ವಿಜಯ ರಾಘವೇಂದ್ರರ ಮಡದಿ ಸ್ಪಂದನಾ (spandana) ಮತ್ತದೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹತ್ತಾರು ಪ್ರಶ್ನೆಗಳು ಉತ್ತರ ಕಾಣದೆ ಮೌನಮುಖಿಯಾಗಿವೆ. ಇದೇ ಹೊತ್ತಿನಲ್ಲಿ ಕೇರಳ ಮತ್ತು ತಮಿಳುನಾಡು ಚಿತ್ರರಂಗಕ್ಕೂ ಈಗ ಅಂಥಾದ್ದೇ ಒಂದು ಆಘಾತ ಎದುರಾಗಿಬಿಟ್ಟಿದೆ. ಮಲೆಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಅನೇಕ ಯಶಸ್ವೀ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ (director siddique) ಸಿದ್ಧಿಕಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೇರಳದಲ್ಲಿ ಜನಿಸಿ, ಹಲವಾರು ಕಷ್ಟ ಕೋಟಲೆಗಳನ್ನೆದುರಿಸಿ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದವರು ಸಿದ್ಧಿಕಿ. ಕಾಬೂಲಿವಾಲ, ಗಾಡ್‌ಫಾದರ್‌ನಂಥಾ ಎವರ್‌ಗ್ರೀನ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಸಿದ್ಧಿಕಿ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಈಗೊಂದಷ್ಟು ವರ್ಷಗಳಿಂದೀಚೆಗೆ ನೇಪಥ್ಯಕ್ಕೆ ಸರಿದಂತಿದ್ದ ಸಿದ್ಧಿಕಿಗೆ ನಿನ್ನೆ ದಿನ ಬೆಳಗಿನ ಹೊತ್ತಿಗೆಲ್ಲ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ವದ್ಯರು ಶತಪ್ರಯತ್ನ ನಡೆಸಿದರೂ ಕೂಡಾ ಉಪಯೋಗವಾಗಿರಲಿಲ್ಲ. ಸಿದ್ಧಿಕಿರಾತ್ರಿಯ ಹೊತ್ತಿಗೆಲ್ಲ ಉಸಿರು ನಿಲ್ಲಿಸಿದ್ದರು.

ಸಾಮಾನ್ಯ ಹುಡುಗನಾಗಿ, ಸಣ್ಣ ಸಣ್ಣ ಅವಕಾಶಗಳನ್ನು ಬಳಸಿಕೊಂಡೇ ಬೆಳೆದು ನಿಂತವು ಸಿದ್ಧಿಕಿ. ಅಂಥಾ ಪ್ರಯತ್ನದ ಫಲವಾಗಿಯೇ ೧೯೮೬ರಲ್ಲಿ ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್ ಚಿತ್ರಕ್ಕೆ ಚಿತ್ರಕಥೆ ಬರೆಯುವ ಅವಕಾಶ ಒದಗಿ ಬಂದಿತ್ತು. ಆ ಕಾಲಕ್ಕೆ ಹಿಟ್ ಆಗಿದ್ದ ಆ ಸಿನಿಮಾ ಸಿದ್ಧಿಕಿ ಪಾಲಿಗೆ ಹೊಸಾ ದಿಕ್ಕು ತೋರಿಸಿತ್ತು. ಆ ಬಳಿವೂ ಅದೇ ಹಾದಿಯಲ್ಲಿ ಮುಂದುವರೆದು ಬಂದಿದ್ದ ಸಿದ್ಧಿಕಿ, ೧೯೮೯ರಲ್ಲಿ ತೆರೆ ಕಂಡಿದ್ದ ರಾಮ್ ಜಿ ರಾವ್ ಸ್ಪೀಕಿಂಗ್ ಚಿತ್ರದ ಮೂಲಕ ಕನಸು ನನಸು ಮಾಡಿಕೊಂಡಿದ್ದರು. ಅದು ಅವರ ನಿರ್ದೇಶನದ ಮೊದಲ ಚಿತ್ರವಾಗಿ ದಾಖಲಾಗುತ್ತದೆ. ಆ ನಂತರ ತಮಿಳು, ತೆಲುಗು, ಹಿಂದಿಲ್ಲಿಯೂ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದ ಸಿದ್ಧಿಕಿ ಇನ್ನು ನೆನಪು ಮಾತ್ರ…

The post director siddique: ಯಶಸ್ವೀ ನಿರ್ದೇಶಕ ಸಿದ್ಧಿಕಿ ಇನ್ನಿಲ್ಲ! appeared first on Cini Shodha.

ambuja movie: ಮಹಿಳಾ ಪ್ರಧಾನ ಚಿತ್ರ ಮನಸಿಗೆ ಮುತ್ತಿಕ್ಕುವ ಮುನ್ಸೂಚನೆ!
ಒಂದು ಕಡೆಯಿಂದ ಚಿತ್ರರಂಗದ (filme industry) ಗರ್ಭದೊಳಗೆ ಅನಿಶ್ಚಿತ ವಾತಾವರಣವೊಂದು ಊಟೆಯೊಡೆಯುತ್ತಿದ್ದರೆ, ಮತ್ತೊಂದು ಮಗ್ಗುಲಿಂದ ಆಶಾದಾಯಕ ಬೆಳವಣಿಗೆಗಳು ಹರಳುಗಟ್ಟಿಕೊಳ್ಳುತ್ತಿವೆ. ಭಿನ್ನ ಆಲೋಚನೆ, ಪ್ರಯೋಗಾತ್ಮಕ ಗುಣಗಳ ಯುವ ಸಮೂಹವೊಂದು ಸದ್ದೇ ಇಲ್ಲದೆ ಕಾರ್ಯಪ್ರವೃತ್ತವಾಗಿದೆ. ಒಂದೆಡೆ ಸಿನಿಮಾ ಮಂದಿ ಜನಪ್ರಿಯ ಮಾದರಿಯೆಂಬೋ ಭ್ರಮೆಯ ಚುಂಗು ಹಿಡಿದು ಹೊರಟಿರುವಾಗಲೇ, ಮತ್ತೊಂದಷ್ಟು ಮಂದಿ ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು ಮುಂದಾಗುತ್ತಿದೆ. ಸದ್ಯದ ಮಟ್ಟಿಗೆ ಇಂಥಾ ಆಶಾದಾಯಕ ಬೆಳವಣಿಗೆಯ ಭಾಗವೆಂಬಂತೆ ಗೋಚರಿಸುತ್ತಿರುವ ಚಿತ್ರ (ambuja) `ಅಂಬುಜ’. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಅದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಕಂಡು ಯುವ ನಿರ್ದೇಶಕ (sreeni hanumatharaju) ಶ್ರೀನಿ ಹನುಮಂತರಾಜು ಖುಷಿಗೊಂಡಿದ್ದಾರೆ. ಅದು ಒಂದಿಡೀ ಚಿತ್ರತಂಡದ ಕಣ್ಣುಗಳಲ್ಲಿಯೂ ಪ್ರತಿಫಲಿಸುತ್ತಿದೆ!

ಅಷ್ಟಕ್ಕೂ ಅಂಬುಜ ಚಿತ್ರ ಆರಂಭ ಕಾಲದಿಂದಲೂ ನಾನಾ ಥರದಲ್ಲಿ ಸುದ್ದಿಯಾಗುತ್ತಲೇ ಬಂದಿದೆ. ಹಂತ ಹಂತವಾಗಿ ಅಂಬುಜಾ ಸುತ್ತ ಪ್ರೇಕ್ಷಕರ ಕಲ್ಪನೆಗಳು ಹಲವು ನಮೂನೆಗಳಲ್ಲಿ ಗರಿಬಿಚ್ಚಿಕೊಂಡಿವೆ. ಮೊದಮೊದಲು ಇದೊಂದು ಮಹಿಳಾ ಪ್ರಧಾನ ಸಿನಿಮಾವೆಂಬ ವಿಚಾರ ಹೊರಬಿದ್ದಿತ್ತು. ಅದಾದೇಟಿಗೆ ಆ ಜಾನರಿನ ಸುತ್ತ ಸಿದ್ಧ ಸೂತ್ರಗಳ ಕಲ್ಪನೆಗಳು ರಿದಾಡಿದ್ದವು. ಅದೆಲ್ಲದರ ನಡುವೆಯೇ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡ ಚಿತ್ರತಂಡ ಟ್ರೈಲರ್ ಲಾಂಚ್ ಮಾಡಿತು ನೋಡಿ? ಕಲ್ಪನೆಗಳ ಜಗವನ್ನು ಅಕ್ಷರಶಃ ಅಚ್ಚರಿಯೊಂದು ಆವರಿಸಿಕೊಂಡಿದೆ. ಯಾಕೆಂದರೆ, ಈ ಟ್ರೈಲರ್‍ನಲ್ಲಿ ಕಲಾತ್ಮಕ ಚೌಕಟ್ಟಿನಲ್ಲಿ ಬಂಧಿಯಾಗಬಹುದಿದ್ದ ಕಥಾ ವಸ್ತುವನ್ನು, ಪಕ್ಕಾ ಕಮರ್ಶಿಯಲ್ ಪಥದಲ್ಲಿ ನಿರೂಪಿಸಿರುವ ನಿಖರ ಸೂಚನೆಗಳು ಸಿಕ್ಕಿವೆ. ಅಲ್ಲಿಗೆ ಅಂಬುಜಾಗೆ ಆರಂಭಿಕ ಗೆಲುವೊಂದು ದಕ್ಕಿದಂತಾಗಿದೆ.

ಇಂಥಾದ್ದೊಂದು ಭಿನ್ನ ಬಗೆಯ ಸಿನಿಮಾ ಶುರುವಾತಿನ ಹಿಂದೆ ಒಂದಷ್ಟು ಸಮ್ಮೋಹಕ ಸಂಗತಿಗಳಿರುತ್ತವೆ. ಈ ಚಿತ್ರದ ಮಟ್ಟಿಗೆ ಹೇಳುವುದಾದರೆ, ಪ್ರಧಾನವಾಗಿ ಗಮನ ಸೆಳೆಯುವವರು ನಿರ್ದೇಶಕ ಶ್ರೀನಿ ಹನುಮಂತರಾಜು. ದಶಕಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವವರು ಶ್ರೀನಿ. ಮೊದಲ ಹೆಜ್ಜೆಯಲ್ಲಿಯೇ ಹೊಸತಿಗೆ ತೆರೆದುಕೊಳ್ಳುವ ತುಡಿತ ಹೊಂದಿದ್ದ ಅವರು ಓಂ ಪ್ರಕಾಶ್ ರಾವ್ ನಿರ್ದೇಶನದ ಎಕೆ 56 ಸಿನಿಮಾದಲ್ಲಿ ಒಂದಷ್ಟು ಕಾಲ ಕೆಲಸ ಮಾಡಿ, ಆ ನಂತರ ಅಶೋಕ್ ಕಶ್ಯಪ್ ನಿರ್ದೇಶನದ `ಪ್ರೀತಿಯಿಂದ’ ಎಂಬ ಧಾರಾವಾಹಿ ತಂಡ ಸೇರಿಕೊಂಡಿದ್ದರು. ಬಳಿಕ ಹೊಂ ಸ್ಟೇ ಅಂತೊಂದು ಬಹುಭಾಷಾ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಅನುಭವ ತುಂಬಿಕೊಂಡಿದ್ದರು.

ಇದೆಲ್ಲ ಆದ ಬಳಿಕ ಶ್ರೀನಿಯನ್ನು ಬರಮಾಡಿಕೊಂಡಿದ್ದು ಸಂಚಾರಿ ವಿಜಯ್ ನಟಿಸಿದ್ದ ಚಿತ್ರ `ರಿಕ್ತ’. ಅದರಲ್ಲಿ ಕೋ ಡೈರೆಕ್ಟರ್ ಕಂ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ ಶ್ರೀನಿ, ಮಹೇಶ್ ಬಾಬು ಅವರ ಕ್ರೇಜಿ ಬಾಯ್ ಚಿತ್ರದ ಭಾಗವಾಗಿಯೂ ಕೆಲಸ ಮಾಡಿದದರು. ಹೀಗೆ ನಿರ್ದೇಶನ ವಿಭಾಗವನ್ನು ಸರಿಕಟ್ಟಾಗಿ ಅರ್ಥೈಸಿಕೊಂಡಿದ್ದ ಶ್ರೀನಿ, ತಮ್ಮ ಜೀವಿತದ ಪ್ರಧಾನ ಗುರಿಯಂತಿದ್ದ ನಿರ್ದೇಶನದತ್ತ ಗಂಭೀರವಾಗಿ ಚಿತ್ತ ಹರಿಸಿದ್ದರು. ಅದೃ ಫಲವಾಗಿಯೇ 2018ರಲ್ಲಿ `ಕೆಲವು ದಿನಗಳ ನಂತರ’ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಶೀರ್ಷಿಕೆಯೇ ಧ್ವನಿಸುವಂತೆ ಸಾಕಷ್ಟು ಹೊಸತನಗಳನ್ನು ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ನಂತರದ ಅವಧಿಯಲ್ಲಿ ಮತ್ತೊಂದು ಭಿನ್ನ ಬಗೆಯ ಸಿನಿಮಾ ನಿರ್ದೇಶನ ಮಾಡುವ ಇರಾದೆಯಿಂದಿದ್ದ ಶ್ರೀನಿಗೆ ವರವಾಗಿ ಸಿಕ್ಕವರು ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್. ಸ್ವತಃ ಬರಹಗಾರರಾಗಿ, ಸಾಹಿತ್ಯಾಸಕ್ತಿಯನ್ನೂ ಹೊಂದಿದ್ದ ಕಾಶಿನಾಥ್ ಅದಾಗಲೇ ಕಥೆಯೊಂದನ್ನು ಬರೆದಿದ್ದರು. ಅದಕ್ಕೆ ಸಿನಿಮಾ ಫ್ರೇಮು ತೊಡಿಸಬೇಕೆಂಬ ಆಳದ ಆಸೆಯನ್ನೂ ಹೊಂದಿದ್ದರು. ಈ ಎರಡು ತುಡಿತಗಳ ಸಂಗಮದಿಂದ ಸೃಷ್ಟಿಯಾದ ಚಿತ್ರ ಅಂಬುಜ!

ಸಾಮಾನ್ಯವಾಗಿ, ಸತ್ಯಕಥೆ ಆಧಾರಿತ ಚಿತ್ರವನ್ನು ಮೂಲ ಸಂವೇದನೆಗಳು ಮುಕ್ಕಾಗದಂತೆ ದೃಷ್ಯಕ್ಕೆ ಅಳವಡಿಸುವುದೇ ಒಂದು ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಶ್ರೀನಿಯವರಲ್ಲಿದೆ. ಲವ್, ಕಾಮಿಡಿ, ಹಾರರ್ ಸೇರಿದಂತೆ ನಾನಾ ಅಂಶಗಳನ್ನೊಳಗೊಂಡಿರೋ ಅಂಬುಜಾ, ಹೊಸಾ ಜಗತ್ತೊಂದನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ ಎಂಬ ಗಾಢ ನಂಬುಗೆ ನಿರ್ದೇಶಕರಲ್ಲಿದೆ. ಚಿತ್ರೀಕರಣ ನಡೆದ ಸ್ಥಳ, ತಾಂತ್ರಿಕತೆ, ಕಥಾ ಹಂದರ ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ತುಂಬಿಕೊಂಡಿರೋ ಚಿತ್ರವಿದು. ಇದು ಖಂಡಿತವಾಗಿಯೂ ಪ್ರೇಕ್ಷಕರನ್ನು ಆವರಿಸಿಕೊಂಡು, ದೊಡ್ಡ ಗೆಲುವಿನ ರೂವಾರಿಯಾಗುತ್ತದೆಂಬ ನಂಬುಗೆ ಶ್ರೀನಿಯದ್ದು. ಅದು ಎಷ್ಟು ನಿಜವಾಗುತ್ತದೆ? ಪ್ರೇಕ್ಷಕರ ಪ್ರತಿಕ್ರಿಯೆ ಏನಿರುತ್ತದೆಂಬುದಕ್ಕೆ ವಾರದೊಪ್ಪತ್ತಿನಲ್ಲಿಯೇ ಉತ್ತರ ಸಿಗಲಿದೆ. ಅಂದಹಾಗೆ, ಈ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ…

The post ambuja movie: ಮಹಿಳಾ ಪ್ರಧಾನ ಚಿತ್ರ ಮನಸಿಗೆ ಮುತ್ತಿಕ್ಕುವ ಮುನ್ಸೂಚನೆ! appeared first on Cini Shodha.

kannada film industry: ಸಿನಿಮಾ ಮಂದಿ ಮಂಪರಿನಿಂದ ಹೊರಬರೋದು ಯಾವಾಗ?
ಈ ಹಿಂದೆ ದೇಶದ ರೈತರು ಪ್ರತಿಭಟನಾ ನಿರತರಾಗಿದ್ದಾಗ ಮೋದಿ (narendra modi) ಸರ್ಕಾರ ಅದನ್ನು ಹತ್ತಿಕ್ಕಲು ನಾನಾ ಸರ್ಕಸ್ಸುಗಳನ್ನು ನಡೆಸಿತ್ತು. ಆ ಹೋರಾಟದೊಂದಿಗೆ ಖಲಿಸ್ತಾನಿ ಉಗ್ರರು (khalistan terrorist) ಸೇರಿಕೊಂಡಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿಸುವ ಮೂಲಕ ಅನ್ನದಾತರ ಒಡಲ ಆಕ್ರೋಶವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದವು. ಆದರೆ, ಅಂಥಾ ಪ್ರತಿಭಟನೆ ನಡೆದ ಸಂದರ್ಭದಲ್ಲಿಯೂ ಅನ್ನ ತಿಂದು ಬದುಕೋ ಸಿನಿಮಾ ಮಂದಿ ಅನ್ನದಾತರ ಪರವಾಗಿ ನಿಲ್ಲುವ ಔದಾರ್ಯ ತೋರಿದ್ದು ವಿರಳ. ಇದೀಗ ಮೆಡಲ್ಲು ತಂದು ಕೊಟ್ಟ ದೇಶದ ಹೆಮ್ಮೆಯ ಮಹಿಳಾ ಕುಸ್ತಿ ಪಟುಗಳು ಭಾರತೀಯ ಕುಸ್ತಿ ಫೆಡರೇಷನ್ (wrestling federation of india) ಅಧ್ಯಕ್ಷ ಬ್ರಿಜ್ ಭೂಷಣ್ (brij bhushan sharan singh) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿಯೂ ಕೆಲವ ಕೆಲ ಮಂದಿಯನ್ನು ಹೊರತಾಗಿಸಿ, ಸಿನಿಮಾ ಮಂದಿ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಾರೆ!

ಇಂಥಾ ಹೊತ್ತಿನಲ್ಲಿ ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಸಿಂಪಲ್ ಸುನಿ (simple suni) ನೊಂದ ಮಹಿಳಾ ಕುಸ್ತಿ ಪಟುಗಳ ಪರವಾಗಿ ಧ್ವನಿಯೆತ್ತಿದ್ದಾರೆ. ದೇಶಕ್ಕೆ ಕೀರ್ತಿ ತಂದ ಕ್ರೀಡಾ ಪಟುಗಳನ್ನು ಈ ರೀತಿಯಾಗಿ ನೋಡಲು ಬೇಸರವಾಗುತ್ತದೆ. ಪರಿಸ್ಥಿತಿ ಇಷ್ಟು ಗಂಭೀರವಾದ ನಂತರವಾದರೂ ದೊಡ್ಡವರು ಹೋಗಿ ಮಾತುಕತೆ ನಡೆಸೋದೊಳಿತು. ಕೇಸು ಕೋರ್ಟ್‍ನಲ್ಲಿದೆ. ನ್ಯಾಯಾಂಗದ ಮೇಲ ನಂಬಿಕೆ ಇಡಬೇಕು. ಆದರೆ ಆತನ ಹಿನ್ನಕಲೆ ಗಮನಿಸಿದರೆ, ಕಾನೂನಿನ ಮೇಲೆಯೂ ಪ್ರಭಾವ ಬೀರಬಹುದು’ ಎಂಬರ್ಥದಲ್ಲಿ ಸುನುಇ ಟ್ವೀಟ್ ಮಾಡಿದ್ದಾರೆ. ಇಷ್ಟರ ಮಟ್ಟಿಗೆ ಸಾಮಾಜಿಕ ಕಾಳಜಿ ಹೊಂದಿರುವ ಸಿಂಪಲ್ ಸುನಿಯನ್ನು ಮೆಚ್ಚಿಕೊಳ್ಳಲೇ ಬೇಕು.

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಒಬ್ಬ ಮಹಾನ್ ಕ್ರಿಮಿನಲ್ ಎಂಬುದು ಈಗಾಗಲೇ ಇಡೀ ದೇಶಕ್ಕೆ ಗೊತ್ತಾಗಿದೆ. ಕೊಲೆ ಎಂಬುದು ಈತನಿಗೆ ಸಲೀಸು. ಒಂದು ವೇಳೆ ಈತ ಕಳಂಕರಹಿತನಾಗಿದ್ದರೆ, ಆತನ ಮೇಲೆ ಇಂಥಾ ಆರೋಪ ಕೇಳಿ ಬಂದಿದ್ದರೆ ಮೋದಿಯಮೌನಕ್ಕೊಂದು ಅರ್ಥ ಇರುತ್ತಿತು. ಆದರೆ ಕ್ರಿಮಿನಲ್ಲು ಬಿಜೆಪಿಯ ಪ್ರಭಾವಿ ಕುಳ ಎಂಬ ಮುಲಾಜಿಗೆ ಬಿದ್ದು ಇದೀ ಆಡಳಿತ ಯಂತ್ರ ನೊಂದ ಮಹಿಳಾ ಕುಸ್ತಿ ಪಟುಗಳ ವಿರುದ್ಧ ತಿರುಗಿ ಬಿದ್ದಿದೆ ಎಂದೇ ಎಲ್ಲರಿಗೂ ಅನಿಸಲಾರಂಭಿಸಿದೆ. ಒಂದು ವೇಳೆ ಅದು ಸತ್ಯವೇ ಆಗಿದ್ದರೆ, ಇನ್ನೂ ಕೂಡಾ ಮೌನ ಮುಂದುವರೆದರೆ ಅದು ಮೋದಿ ಸರ್ಕಾರಕ್ಕೆ ಎಂದೂ ಅಳಿಸಲಾರದಂಥಾ ಕಪ್ಪುಚುಕ್ಕೆಯಾಗೋದರಲ್ಲಿ ಯಾವ ಸಂದೇಹವೂ ಇಲ್ಲ!

The post kannada film industry: ಸಿನಿಮಾ ಮಂದಿ ಮಂಪರಿನಿಂದ ಹೊರಬರೋದು ಯಾವಾಗ? appeared first on Cini Shodha.