#darshanupdates – Cini Shodha

Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನದ ದಿನಗಳೀಗ ಪರಪ್ಪನ ಅಗ್ರಹಾರದಲ್ಲಿ ಸರಿಯುತ್ತಿವೆ. ಒಂದು ಕಡೆಯಲ್ಲಿ ಆತನ ಅಭಿಮಾನಿಗಳೆಲ್ಲ ತಮ್ಮಿಷ್ಟದ ನಟ ದರ್ಶನ್ ಆದಷ್ಟು ಬೇಗನೆ ಈ ಕಳಂಕವನ್ನು ಕಳಚಿಕೊಂಡು ಬರಲೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಡಾ ಒಡೆಯದ ಹೋರಿಗಳಂತೆ ಕಂಡೋರ ಮೇಲೆರಗಿ ಹೋಗುತ್ತಿದ್ದ ಕೆಲ ವೀರಾಭಿಮಾನಿಗಳ ಆವುಟವೂ ಈಗ ತುಸು ತಗ್ಗಿದೆ. ಮತ್ತೊಂದು ದಿಕ್ಕಿನಿಂದ ಪತ್ನಿ ವಿಜಯಲಕ್ಷ್ಮಿ ಕೂಡಾ ತನ್ನ ಗಂಡನನ್ನು ಈ ಚಕ್ರವ್ಯೂಹದಿಂದ ಪಾರುಗಾಣಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತದಲ್ಲಿ ದರ್ಶನ್ ದುರಹಂಕಾರ ಕಂಡು ಕೆಂಡವಾಗಿರುವವರ ಎದೆಯಲ್ಲೂ ಈಗ ಆತ ತಲುಪಿಕೊಂಡಿರುವ ಸ್ಥಿತಿ ಕಂಡು ಮರುಕ ಮೂಡಿದೆ. ಆದರೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟೋ, ತಾನೇನು ಮಾಡಿದರೂ ಜಯಿಸಿಕೊಳ್ಳಬಲ್ಲನೆಂಬ ಅಹಮ್ಮಿಕೆಯಿಂದಲೋ ಮನುಷ್ಯ ಮಾಡೋ ತಪ್ಪಿದೆಯಲ್ಲಾ? ಅದು ನಾನಾವ ರೀತಿಯಲ್ಲಿ ಕಾಡದಿರೋದಿಲ್ಲ!

ಸದ್ಯದ ಮಟ್ಟಿಗೆ ದರ್ಶನ್ ಪಾಲಿಗೆ ಅಂಥಾ ಆಘಾತಗಳು ಒಂದರ ಹಿಂದೊಂದರಂತೆ ಬಂದೆರಗುತ್ತಿವೆ. ಮೊದಲ ಹಂತದಲ್ಲಿ ಜೈಲನ್ನೂ ಕೂಡಾ ಮಾವನ ಮನೆಯನ್ನಾಗಿಸಿಕೊಂಡಿದ್ದಾತ ದರ್ಶನ್. ಹೇಳಿಕೇಳಿ ಪರಪ್ಪನ ಅಗ್ರಹಾರದಲ್ಲಿ ಅಧಿಕಾರಿಗಳ ನೆರಳಲ್ಲಿಯೇ ದಂಧೆಗಳ ದುಖಾನು ತೆರೆದುಕೊಂಡಿದೆ. ಅಲ್ಲಿ ನೇರಾನೇರ ವ್ಯವಹಾರ ಕುದುರಿಸಿ ಹಾಯಾಗಿ ಅಡ್ಡಾಡಿಕೊಂಡಿದ್ದಾತ ದರ್ಶನ್. ಅತ್ತ ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಇತ್ತ ತನ್ನ ಗೆಣೆಕಾರ ದರ್ಶನ್ನನ ಪರಿಚಾರಿಕೆಗೆಂದೇ ಸೈಕಲ್ ರವಿ ಬೇಕರಿ ರಘು ಎಂಬೋ ರೌಡಿ ಎಲಿಮೆಂಟನ್ನು ಅಂದರ್ ಮಾಡಿದ್ದ. ಇವರೆಲ್ಲದ ದೇಖಾರೇಖಿಯಲ್ಲಿಮ ಒಂದು ಹಂತದ ವರೆಗೂ ದರ್ಶನ್ ಪಾಲಿಗೆ ಜೈಲೆಂಬುದೂ ಸ್ವರ್ಗವಾಗಿತ್ತು.

ಅದು ದರ್ಶನ್ ಮಾಡಿದ ಬಹು ದೊಡ್ಡ ತಪ್ಪು. ತನ್ನ ಕಡೆಯಿಂದ ಎಡವಟ್ಟಾಗಿದೆ. ಅದಕ್ಕಾಗಿ ಕಾನೂನಿನ ಏಟು ಬಿದ್ದಿದೆ. ಈ ಹಂ ತದಲ್ಲಿ ಶಿಕ್ಷೆಯ ಅವಧಿಯನ್ನು ಪ್ರಾಮಾಣಿಕವಾಗಿ ಎದುರಿಸಬೇಕೆಂಬ ಸಣ್ಣ ಖಬರೂ ಕೂಡಾ ದಾಸನ ಸನಿಹ ಸುಳಿದಿರಲಿಲ್ಲ. ಇಂಥಾ ಸ್ವೇಚ್ಛೆಯೇ ದೇಶವ್ಯಾಪಿ ಸುದ್ದಿಯಾಗಿ, ಬೇರೆ ಜೈಲಿಗೆ ಕಮಾನೆತ್ತಿಸಿಕೊಂಡಿದ್ದ ದರ್ಶನ್, ಬೇಲ್ ಪಡೆದು ಹೊರ ಬಂ ದ ನಂತರವೂ ಕೂಡಾ ಸೂಕ್ಷ್ಮವಾಗಿ ನಡೆದುಕೊಂಡಿರಲಿಲ್ಲ. ಇದೇ ಹೊತ್ತಿನಲ್ಲಿ ಅಭಿಮಾನಿಗಳೆನ್ನಿಸಿಕೊಂಡ ಕೆಲ ಅವಿವೇಕಿಗಳು ಅಕ್ಷರಶಃ ಗೂಂಡಾಗಳಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆರೆಯಲಾರಂಭಿಸಿದ್ದರು. ದರ್ಶನ್ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲಿಗೆ ಗದುಮಿಸಿಕೊಂಡಿದ್ದರ ಹಿಂದಿರೋದು ಇಂಥಾ ಸ್ವಯಂಕೃತಾಪರಾಧಗಳೇ.

ಈಗಂತೂ ಪರಪ್ಪನ ಅಗ್ರಹಾರದೊಳಗೆ ಎಲ್ಲವೂ ಬಿಗಿಯಾಗಿದೆ. ಅಲ್ಲಿ ಜೈಲಾಧಿಕಾರಿಯಾಗಿರೋ ಸುರೇಶನ ದುಂಡಾವರ್ತನೆಗಳ ಬಗ್ಗೆ `ಸಿನಿಶೋಧ’ ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು. ಅದಾದ ನಂತರ ದಯಾನಂದ್ ಜೈಲಾಧಿಕಾರಿಗಳ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ. ಮಾಲಿನಿ ಮೇಡಮ್ಮಿನ ಪರಿಚಾರಕರೆಲ್ಲ ಬಾಲ ಮುದುರಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ರೇಣುಕಾಸ್ವಾಮಿ ಕೊಲೆ ಕೇಸು ಇಡೀ ದೇಶದಲ್ಲೇ ಎರಡನೇ ಭಯಾನಕ ಪ್ರಕರಣವಾಗಿ ದಾಖಲಾಗಿದೆ. ನರ್ಸಿಂಗ್ ವಿದ್ಯಾರ್ಥಿನಿಯ ಭೀಕರ ರೇಪ್ ಮತ್ತು ಹತ್ಯೆ ಕೇಸು ಮೊದಲ ಸ್ಥಾನದಲ್ಲಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೂ ಕೂಡಾ ಮತ್ತೊಮ್ಮೆ ಫೋಕಸ್ ಮಾಡಿವೆ.

ಇನ್ನುಳಿದಂತೆ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಪರಿಯ ಬಗ್ಗೆ ನ್ಯಾಯಾಂಗ ವಲಯದಲ್ಲಿ ನಾನಾ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅದರಲ್ಲಿನ ಬಹುತೇಕ ಅಂಶಗಳು ದರ್ಶನ್ ಕೊರಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿರೋದನ್ನೇ ಬಲವಾಗಿ ಧ್ವನಿಸುತ್ತಿವೆ. ನ್ಯಾಯಾಂಗ ಈ ಪ್ರಕರಣದಲ್ಲಿ ಪ್ರಧಾನವಾಗಿ ಪರಿಗಣಿಸಬಹುದಾದ ಅಂಶಗಳೇ ಭಯಾನಕವಾಗಿವೆ. ಓರ್ವ ಮನುಷ್ಯನನ್ನು ಹೇಗೆಲ್ಲ ಹಿಂಸಿಸಬಾರದೋ, ಹಾಗೆಲ್ಲ ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬ ವಿಚಾರವೇ ಇಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಬಹುಶಃ ತನ್ನ ಶಿಷ್ಯನ ಸ್ಟೋನಿಬ್ರೂಕ್ಸ್ ಡ್ರಗ್ಸ್ ನಶೆ ಇಂಥಾ ಅನಾಹುತ ಸೃಷ್ಟಿಸುತ್ತದೆಂಬ ಸಣ್ಣ ಕಲ್ಪನೆಯೂ ದರ್ಶನ್‌ಗಿದ್ದಂತಿಲ್ಲ. ಸದ್ಯದ ಮಟ್ಟಿಗೆ ಮಾಡಿದ ಎಡವಟ್ಟನ್ನು ಕೋಟಿ ಸುರಿದರೂ ನೀಗಿಕೊಳ್ಳಲಾರದ ವಾಸ್ತವವೊಂದು ದರ್ಶನ್ ನಲುಗುವಂತೆ ಮಾಡಿದೆ. ಕಣ್ಣೆದುರೇ ನರಳಿ ಸತ್ತ ರೇಣುಕಾಸ್ವಾಮಿ ಕಂಬಿ ಹಿಂದಿರೋ ದಾಸನನ್ನು ಕ್ಷಣ ಕ್ಷಣವೂ ಕಂಗಾಲಾಗಿಸುತ್ತಿದ್ದಾನೆ. ಅದೆಲ್ಲದರ ಅಂತಿಮ ಫಲಿತಾಂಶ ಶೀಘ್ರದಲ್ಲಿಯೇ ಜಾಹೀರಾಗಲಿದೆ!

The post Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ! appeared first on Cini Shodha.

darshan controversy: ನಡೆದಿದೆಯಾ ಬಡಪಾಯಿಗಳನ್ನು ಬಲಿಹಾಕೋ ಷಡ್ಯಂತ್ರ?
ಕನ್ನಡ ಚಿತ್ರರಂಗದ ಮಟ್ಟಿಗೆ ಸೂಪರ್ ಸ್ಟಾರ್ ಆಗಿ ಮೆರೆದವನು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದುವರೆಗಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರೋ ದರ್ಶನ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಾತ. ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತಿದ್ದ ಈತ ಒಂದು ಹಂತದಲ್ಲಿ ಸ್ಫೂರ್ತಿಯಾಗಿ ಕಾಣಿಸುತ್ತಿದ್ದದ್ದು ಸುಳ್ಳಲ್ಲ. ನಾಲಗೆಯ ಮೇಲೆ, ವರ್ತನೆಗಳ ಮೇಲೆ ನಿಗಾ ವಹಿಸಿದ್ದರೆ ಸರ್ವರಿಗೂ ಸಾರ್ವಕಾಲಿಕ ಸ್ಫೂರ್ತಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಗೆಲುವು ಸಿಗುತ್ತಲೇ ಅಮರಿಕೊಳ್ಳುತ್ತಾ ಸಾಗಿದ ದುರಹಂಕಾರ, ಸಿಕ್ಕ ಸಿಕ್ಕಲ್ಲಿ ಮೇಯುವ ಬುದ್ಧಿ, ಸಾರ್ವಜನಿಕವಾಗಿಯೇ ಅಬ್ಬರಿಸಿ ಮೆರೆದಾಡೋ ದುಷ್ಟತನಗಳೆಲ್ಲವೂ ದರ್ಶನ್ ತಲುಪಿಕೊಂಡಿರುವ ಪ್ರಸ್ತುತ ಸ್ಥಿತಿಗೆ ಪ್ರಧಾನ ಕಾರಣವಾಗಿ ಗೋಚರಿಸುತ್ತವೆ.

ಸದ್ಯದ ಮಟ್ಟಿಗೆ ಹೇಳೋದಾದರೆ, ದರ್ಶನ್ ಅಕ್ಷರಶಃ ಅದುರಿ ಹೋಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪ್ರವೇಶಿಸಿದ ಘಳಿಗೆಗೂ, ಈವತ್ತಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ. ಕಾಸು ಚೆಲ್ಲುವ ಮೂಲಕ ಜೈಲೊಳಗೆ ವೈಭೋಗದಿಂದ ಬದುಕಿದ್ದ ದರ್ಶನ್ ಪಟಾಲಮ್ಮಿಗೆ ಹೆಜ್ಜೆ ಹೆಜ್ಜೆಗೂ ಆಘಾತಗಳು ಎದುರಾಗುತ್ತಿವೆ. ಇದೆಲ್ಲದರ ನಡುವೆಯೇ ಈ ಪ್ರಕರಣದ ಗಂಭೀರ ತಿರುವುಗಳ ಬಗ್ಗೆ, ಒಟ್ಟಾರೆ ಕೇಸಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರುಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್‌ಗೆ ಜೀವಾವಧಿ ಶಿಕ್ಷೆ ಖಚಿತ. ಕೊಂಚ ಆಚೀಚೆ ಆದರೆ ಮರಣದಂಡನೆ ವಿಧಿಸಿದರೂ ಅಚ್ಚರಿಯೇನಿಲ್ಲ ಎಂಬುದು ಅವರೆಲ್ಲರ ಮಾತಿನ ಸಾರ.

ಯಾವ ಶಿಕ್ಷೆಯಾದರೂ ಕೂಡಾ ದರ್ಶನ್ ಬದುಕು ಹಡಾಲೆದ್ದು ಹೋಗುತ್ತೆ. ಈ ಕಾರಣದಿಂದಲೇ ಕಾನೂನಾತ್ಮಕವಾಗಿಯೇ ದರ್ಶನ್ ಪವಿತ್ರಾ ಗೌಡಳ ಸಮೇತ ನುಣುಚಿಕೊಂಡು, ಅಭಿಮಾನಕ್ಕೆ ಕಟ್ಟು ಬಿದ್ದು ಕೊಲೆ ಕೇಸಿನಲ್ಲಿ ಭಾಗಿಯಾದವರಿಗೆ ಖೆಡ್ಡ ತೋಡುವ ಪ್ರಯತ್ನಗಳು ನಡೆಯುತ್ತಿವೆಯಾ? ಹೀಗೊಂದು ಗುಮಾನಿ ದಟ್ಟವಾಗಿಯೇ ಹಬ್ಬಿಕೊಳ್ಳುತ್ತಿದೆ. ಇತ್ತ ಪವಿತ್ರಾಳ ಗೆಳತಿಯೋರ್ವಳು ಆಕೆ ತಪ್ಪೇ ಮಾಡಿಲ್ಲ ಎಂಬರ್ಥದಲ್ಲಿ ಪರ ವಹಿಸಿಕೊಂಡು ಮಾತಾಡುತ್ತಿದ್ದಾಳೆ. ಖುದ್ದು ಸುಪ್ರೀಂ ಕೋರ್ಟು ಬೇಲ್ ಕ್ಯಾನ್ಸಲ್ ಮಾಡೋ ಮುನ್ನ ಒಂದಿಡೀ ಅವಘಡಕ್ಕೆ ಪವಿತ್ರಾಳೇ ಮೂಲಕ ಕಾರಣ ಅಂತ ಛಾಟಿ ಬೀಸಿತ್ತು. ಹಾಗಿದ್ದರೂ ಈ ಹೆಂಗಸು ತನ್ನ ಗೆಳತಿ ಪವಿತ್ರ ಅಮಾಉಯಕಿ ಎಂಬರ್ಥದಲ್ಲಿ ಮಾತಾಡಿದ್ದಾಳೆ. ಅಂತೂ ಈ ಕೇಸಿನಲ್ಲಿ ದರ್ಶನ ಸೆಳೆತಕ್ಕೆ ಸಿಕ್ಕು ಭಾಗಿಯಾದವರನ್ನು ತಗುಲಿಸಿ ಪಾರಾಗುವ ಪ್ರಯತ್ನವೊಂದು ದಾಸನ ಕಡೆಯಿಂದ ನಡೆಯುತ್ತಿದೆಯಾ? ಇದಕ್ಕೆ ನಿಖರ ಉತ್ತರ ಸದ್ಯದಲ್ಲಿಯೇ ಸಿಗಲಿದೆ!

The post darshan controversy: ನಡೆದಿದೆಯಾ ಬಡಪಾಯಿಗಳನ್ನು ಬಲಿಹಾಕೋ ಷಡ್ಯಂತ್ರ? appeared first on Cini Shodha.

pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!
ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ ಪ್ರಥಮನ ವಿರುದ್ಧ ಕೆಂಡ ಕಾರುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಥಮನೆಡೆಗಿನ ದರ್ಶನ್ ಅಭಿಮಾನಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಅವಿವೇಕಿ ಪ್ರಥಮ್ ಅದರ ಮೇಲೆ ಅಂಡು ಊರಿ ಕುಂಯ್ಯೋ ಅನ್ನಲಾರಂಭಿಸಿದ್ದಾನೆ!

ಅಷ್ಟಕ್ಕೂ ಈ ಪ್ರಥಮ್ ಅದೆಂಥಾ ಗಂಭೀರ ವಿಚಾರದ ಬಗ್‌ಗೆ ಮಾತಾಡಿದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರದಂಥಾ ವಾತಾವರಣವಿದೆ. ಕನಿಷ್ಟ ಓರ್ವ ಮನುಷ್ಯ ಕಾಪಿಟ್ಟುಕೊಳ್ಳಬೇಕಾದ ವ್ಯಕ್ತಿಗತ ಘನತೆ ಗೌರವಗಳನ್ನು ಈತ ಅದ್ಯಾವತ್ತೋ ಮಣ್ಣುಪಾಲು ಮಾಡಿಕೊಂಡಿದ್ದಾನೆ. ಇಂಥವನು ಅದ್ಯಾವುದೋ ಸಿನಿಮಾ ಅಂತೆಲ್ಲ ಹಂತ ಹಂತಗವಾಗಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾನೆ. ಹೇಗಾದರೂ ಸರಿ; ಸದಾ ಚಾಲ್ತಿಯಲ್ಲಿರಬೇಕೆಂಬ ಸೋಶಿಯಲ್ ಮೀಡಿಯಾ ಜಮಾನದ ಫಾರ್ಮುಲಾವನ್ನೀತ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿದ್ದಾನೆ. ಇಂಥಾ ಪ್ರಥಮನನ್ನು ಅದ್ಯಾವುದೋ ರೌಡಿ ಪಡೆ ಎತ್ತಾಕಿಕೊಂಡು ಹೋಗಿ ಅವಾಜು ಬಿಟ್ಟ ಹೊಸಾ ಕಥೆಯೊಂದನ್ನು ಲಾಯರ್ ಜಗದೀಶ್ ಜಾಹೀರು ಮಾಡುತ್ತಲೇ ಜನ ಸಹಜವಾಗಿಯೇ ಅವಾಕ್ಕಾಗಿ ಬಿಟ್ಟಿದ್ದರು.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ತಗುಲಿಕೊಂಡಾಗ ಆತನ ಅಭಿಮಾನಿಗಳ ಆವುಟ ಮೇರೆ ಮೀರಿತ್ತಲ್ಲಾ? ಆ ಘಳಿಗೆಯಲ್ಲಿ ಪ್ರಥಮ್ ಆಡಿದ್ದ ಕೆಲ ಮಾತುಗಳು ಸರಿ ಅನ್ನಿಸಿದ್ದಿದೆ. ಆ ಹೊತ್ತಿನಲ್ಲಿಯೇ ಪುಂಡಾಭಿಮಾನಿಗಳ ಕಡೆಯಿಂದ ಪ್ರಥಮ್‌ಗೆ ಒಂದಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಇದಕ್ಕೆ ಸರಿಯಾಗಿ ಲಾಯರ್ ಜಗದೀಶ್ ಜಾಹೀರು ಮಾಡಿದ ಆಡಿಯೋದಲ್ಲಿ ದರ್ಶನ್ ಬಗ್ಗೆ ಮಾತಾಡಿದ್ದರ ವಿರುದ್ಧವೇ ಪ್ರಥಮ್ ಎದೆಗೆ ರೌಡಿ ಪಟಾಲಮ್ಮು ಡ್ರ್ಯಾಗರ್ ಇಟ್ಟಿತ್ತೆಂಬ ವಿಚಾರ ಬಯಲಾಗಿತ್ತು. ಪುಣ್ಯಾತ್ಮ ಪ್ರಥಮ ಅಂಥಾ ಅರ್ಥ ಬರುವಂತೆ ಒಟ್ಟಾರೆ ಘಟನೆಯನ್ನು ಪಳಗಿಸಿಕೊಂಡಿದ್ದ. ದರ್ಶನ್ ಪಾಳೆಯ ಈ ಮಟ್ಟಕ್ಕೂ ಇಳಿದು ಬಿಟ್ಟಿತಾ? ಓರ್ವ ನಟನನ್ನು ವಿಮರ್ಶೆಗೊಳಪಡಿಸಿದರೆ ರೌಡಿಗಳ ಮೂಲಕ ಧಮಕಿ ಹಾಕಿಸುವ ವಾತಾವರಣ ಸೃಷ್ಟಿಯಾಗಿ ಬಿಟ್ಟಿತಾ? ಇಂಥಾದ್ದೊಂದು ಕಾಳಜಿಯಿಂದಲೇ ಲಾಯರ್ ಜಗದೀಶ್ ಆಡಿಯೋ ಬಿಡುಗಡೆ ಮಾಡಿದೇಟಿಗೆ, ಒಂದಷ್ಟು ಸಂಘಟನೆಗಳ ಮಂದಿಯೂ ಬೆಂಬಲಕ್ಕೆ ನಿಂತಿದ್ದರು.

ಒಂದು ಹಂತದಲ್ಲಿ ಖುದ್ದು ಜಗದೀಶ್ ಈ ಬಗ್ಗೆ ಪೊಲೀಸರಿಗೆ ದೂರು ಕೊಡುವ ಸಲಹೆ ನೀಡಿದ್ದರೂ ಒಳ್ಳೆ ಹುಡುಗ ಅದೇನೇನೋ ಕಥೆ ಹೊಡೆದಿದ್ದ. ಕಡೆಗೂ ಪ್ರಥಮ್ ಈ ಘಟನೆಯ ಸಂಬಂಧವಾಗಿ ದೂರು ದಾಖಲಿಸಿದ್ದಾನೆ. ಹಾಗೆ ದೂರು ಕೊಟ್ಟಾದ ನಂತರ ಈ ಬಗೆಗಿನ ತನಿಖೆಗೆ ಅನುವು ಮಾಡಿಕೊಟ್ಟು ಬಾಯಿ ಮುಚ್ಚಿಕೊಂಡಿದ್ದರೆ ಪ್ರಥಮನ ಮಾನ ಅಷ್ಟರ ಮಟ್ಟಿಗಾದರೂ ಉಳಿಯುತ್ತಿತ್ತು. ದೂರಿನ ನಂತರದಲ್ಲಿ ಈ ಫಟಿಂಗ ಆಸಾಮಿ ನಡೆಸುತ್ತಿರುವ ಹರತಾಳಗಳು, ಆತನ ಓತಾಪ್ರೋತ ಮಾತುಗಳನ್ನು ಕಂಡು ಆಸುಪಾಸಿನವರೇ ಹೌಹಾರಿದ್ದಾರೆ. ಇತ್ತ ಲಾಯರ್ ಜಗದೀಶ್ ಕೂಡಾ ಪ್ರಥಮನಿಗೆ ಮಹಾಮಂಗಳಾರತಿ ಮಾಡಿ ತನ್ನ ಬೆಂಬಲವಿಲ್ಲ ಅಂದರೆ, ಕೆಲ ಸಂಘಟನೆಗಳವರೂ ಕೂಡಾ ಒಳ್ಳೆ ಹುಡುಗನಿಗೆ ತಮ್ಮದೇ ರೀತಿಯಲ್ಲಿ ಕ್ಯಾಕರಿಸಿ ಉಗಿದದ್ದೂ ಆಗಿದೆ. ಇದೀಗ ತಾನೇ ಸೃಷ್ಟಿಸಿದ ಚಕ್ರವ್ಯೂಹದಲ್ಲಿ ಏಕಾಂಗಿಯಾಗುಳಿದಿರೋ ಪ್ರಥಮ ಅಕ್ಷರಶಃ ಕಂಗಾಲಾಗಿ ಬಿಟ್ಟಿದ್ದಾನೆ!

ನಿಜ, ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನ ಭೂಮಿಕೆಯಲ್ಲಿ ನಡೆದುಕೊಂಡ ರೀತಿಯನ್ನು, ಆತನ ಕಡೆಯಿಂದಾಗಿರೋ ಕೃತ್ಯವನ್ನು ಆತನ ಕೆಲ ತಲೆಮಾಸಿದ ಅಭಿಮಾನಿಗಳನ್ನು ಹೊರತಾಗಿ ಬೇರ್‍ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಭೂಮಿಕೆಯಲ್ಲಿ ಬಹುತೇಕರು ದರ್ಶನ್‌ನನ್ನು ವಿರೋಧಿಸಿದ್ದಾರೆ. ಈ ಕ್ಷಣಕ್ಕೂ ದರ್ಶನ್ ತನ್ನ ಅಭಿಮಾನಿ ಪಡೆಯನ್ನು ಗೂಂಡಾಗಳಂತೆ ರೂಪಿಸಿರುವ, ಅಂಥಾ ಭಂಡ ಅಭಿಮಾನಿಗಳು ಅದೆಂಥಾ ವಿಕೃತಿ ಮೆರೆದರೂ ತೆಪ್ಪಗಿರುವ ಗುಣಗಳ ಬಗ್ಗೆ ಪ್ರಜ್ಞಾವಂತರೊಳಗೊಂದು ಆಕ್ರೋಶವಿದೆ. ಹಾಗಂತ, ಈ ನೆಲೆಯಲ್ಲಿ ದರ್ಶನ್‌ನನ್ನು ವಿರೋಧಿಸುವ ಭರದಲ್ಲಿ ತೀರಾ ಕೀಳು ಮಟ್ಟಕ್ಕಿಳಿಯೋದೂ ಕೂಡಾ ಅಸಹ್ಯವೇ. ಒಳ್ಳೆ ಹುಡುಗ ಪ್ರಥಮ್ ಥೇಟು ಅಂಥಾ ಅಸಹ್ಯದ ಕೊಚ್ಚೆಗಿಳಿದಿದ್ದಾನೆ. ಇದೇ ಭೂಮಿಕೆಯಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ನೌಟಂಕಿ ನಾಟಕಗಳನ್ನೂ ಯಥೇಚ್ಛವಾಗಿ ಪ್ರದರ್ಶಿಸುತ್ತಿದ್ದಾನೆ.

ಹಾಗಾದರೆ, ಪ್ರಥಮ್ ಎದೆಗೆ ಡ್ರ್ಯಾಗರ್ ಇಟ್ಟ ಪ್ರಕರಣ ಕೂಡಾ ಆತ ಹೇಳುತ್ತಿರುವಂತೆ ನಡೆದಿರಲಿಕ್ಕಿಲ್ಲ ಅಂತೊಂದು ಅನುಮಾನ ಸಹಜವಾಗಿಯೇ ಕಾಡುತ್ತದೆ. ಈ ದಿಕ್ಕಿನಲ್ಲಿ ತಲಾಶಿಗಿಳಿದರೆ ಮತ್ತೊಂದು ಮಜವಾದ ವಾಸ್ತವ ಎದುರಾಗುತ್ತೆ. ಆವತ್ತು ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದ ಪ್ರಥಮ್ ಲೇಡಿ ಡಾನ್ ಅಂತ ಕರೆಸಿಕೊಳ್ಳುವ ಯಶಸ್ವಿನಿ ಅಂಡ್ ಟೀಮನ್ನು ಮುಖಾಮುಖಿಯಾಗಿದ್ದಾನೆ. ಅಷ್ಟಕ್ಕೂ ಈ ಯಶಸ್ವಿನಿ ಪ್ರಥಮನಿಗೆ ಹೊಸಾ ಪರಿಚಯವೇನಲ್ಲ. ಆಕೆಯ ಪಟಾಲಮ್ಮಿನಲ್ಲಿರುವ ದಾಸ ಎಂಬಾತನೂ ಸೇರಿದಂತೆ ಒಂದಷ್ಟು ಮಂದಿ ಪ್ರಥಮ್‌ಗೆ ಪರಿಚಿತರೇ. ಹಾಗೆ ನೋಡಿದರೆ, ರಾಜಕಾರಣಿಗಳಿಂದ ಮೊದಲ್ಗೊಂಡು, ರೌಡಿಗಳ ವರೆಗೆ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸೆಲ್ಫಿ ತೆಗೆದುಕೊಳ್ಳೋದರಲ್ಲಿ ಪ್ರಥಮ್ ನಿಸ್ಸೀಮ. ಇಂತಿಪ್ಪ ಪ್ರಥಮ್ ಆವತ್ತು ಯಶಸ್ವಿನಿಯೊಂದಿಗೆ ಲೋಕಾಭಿರಾಮವಾಗಿ ಹರಟುತ್ತಿದ್ದ. ಈ ಹಂತದಲ್ಲಿ ಯಶಸ್ವಿನಿ ತನ್ನೆದುರು ನಿಂತ ಎಲಿಮೆಂಟೊಂದನ್ನು ಪ್ರಥಮ್‌ಗೆ ಪರಿಚಯಿಸಿದ್ದಾಳೆ.

ಆತನನ್ನು ಬೇಕರಿ ರಘು ಅಂತ ಯಶಸ್ವಿನಿ ಪರಿಚಯಿಸುತ್ತಲೇ, ಸುಮ್ಮನೆ ಕೈ ಕುಲುಕಿ ಎದ್ದು ಬಂದಿದ್ದರೆ ಇಷ್ಟೆಲ್ಲ ಡ್ರಾಮಾ ನಡೆಯುತ್ತಲೇ ಇರಲಿಲ್ಲ. ಹೇಳಿಕೇಳಿ ಪ್ರಥಮನದ್ದು ಹರುಕುಬಾಯಿ. ಬೇಕರಿ ರಘು ಓರ್ವ ಕುಖ್ಯಾತ ರೌಡಿ ಶೀಟರ್ ಅಂತ ಅರಿವಿರದಷ್ಟು ಮುಗ್ಧನಂತೂ ಖಂಡಿತಾ ಅಲ್ಲ. ಆದರೂ ಯಶಸ್ವಿನಿ ಆತನನ್ನು ಪರಿಚಯಿಸುತ್ತಲೇ, `ಬೇಕರಿ ರಘು ಅಂತೀರಿ, ಬನ್ನು ಪಪ್ಸು, ಚಿಪ್ಸು ಏನೂ ತಂದಿಲ್ವಾ’ ಅಂತ ನಾಲಗೆ ಹರಿಯಬಿಟ್ಟಿದ್ದಾನೆ. ಇದರಿಂದ ಸುತ್ತಲಿದ್ದ ಹುಡುಗರೆದುರು ಪಾತಕಿ ಬೇಕರಿ ರಘುಗೆ ಸಹಜವಾಗಿಯೇ ಅವಮಾನವಾದಂತಾಗಿದೆ. ಆತ ಸಿಟ್ಟಿನಿಂದ ಕುದ್ದು ಹೋದವನೇ ಪ್ರಥಮನ ಕಾಲರು ಹಿಡಿದು `ಬೇಕರಿ ಐಟಮ್ಸ್ ಬೇಕಾ ನಿಂಗೆ ತರಿಸ್ತೀನಿರು ಮಗನೇ’ ಅಂದವನೇ ಹುಡುಗರಿಗೆ ಸನ್ನೆ ಮಾಡಿದ್ದಾನೆ. ಕಣ್ಣು ಮಿಟುಕಿಸೋದರೊಳಗೆ ತನ್ನೆದೆಗೆ ರಘು ಹಿರಿದಿದ್ದ ಡ್ರ್ಯಾಗರ್ ಕಂಡು ಫಟಿಂಗ ಪ್ರಥಮ ಸುಸ್ಸೂ ಮಾಡಿಕೊಳ್ಳುವ ಹಂತ ತಲುಪಿಬಿಟ್ಟಿದ್ದಾನೆ.  ಅಂದಹಾಗೆ, ಇಷ್ಟೆಲ್ಲ ಆಗುವಾಗ ಯಶಸ್ವಿನಿ ಪಾಳೆಯದ ಹುಡುಗ ದಾಸ ಕೂಡಾ ಸ್ಥಳದಲ್ಲಿದ್ದ!

ದಾಸನೊಂದಿಗೆ ಒಳ್ಳೆ ಹುಡುಗ ಪ್ರಥಮ್!

ಹೀಗೆ ತನ್ನ ಹುಡುಗರೆದುರು ಕಿಂಡಲ್ಲು ಮಾಡಿದ ಪ್ರಥಮನ ಮೇಲೆ ರಘು ಅದ್ಯಾವ ಪರಿ ಕೋಪಗೊಂಡಿದ್ದನೆಂದರೆ, ಡ್ರ್ಯಾಗರ್ ಎದೆಗೆ ಹಿಡಿದು ಬೈದಾಡಿದ್ದಾನೆ. ಅದೇ ಭರದಲ್ಲಿ ತನ್ನ ಬಾಸ್ ದರ್ಶನ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀಯಾ ಅಂತೆಲ್ಲ ಆವಾಜು ಬಿಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಮೊಬೈಲು ಹೊರತೆಗೆದ ಬೇಕರಿ ರಘು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆಗಿದ್ದ ತನ್ನ ಫೋಟೋಗಳನ್ನೂ ಪ್ರಥಮ್‌ಗೆ ತೋರಿಸಿದ್ದಾನೆ. ಇಲ್ಲಿ ಗಮನಿಸಲೇ ಬೇಕಾದ ಸಂಗತಿಯೆಂದರೆ, ಪ್ರಥಮ್ ಹೀಗೊಂದು ಯಡವಟ್ಟು ಮಾಡಿಕೊಳ್ಳದೇ ಇದ್ದಿದ್ದರೆ, ಈ ಹಕ್ಯಾಟವೇ ನಡೆಯುತ್ತಿರಲಿಲ್ಲ. ದರ್ಶನ್ ಹೆಸರಿನ ಪ್ರಸ್ತಾಪವೂ ಬರುತ್ತಿರಲಿಲ್ಲ. ಒಂದು ಹಂತದಲ್ಲಿ ಖುದ್ದು ದರ್ಶನ್ ತನ್ನ ವಿರುದ್ಧ ಮಾತಾಡಿದ ಕಾರಣಕ್ಕೆ ರೌಡಿ ಪಡೆ ಬಿಟ್ಟು ಆವಾಜು ಹಾಕಿಸಿದ್ದಾನೆಂದು ಬಿಂಬಿಸುವ ಪ್ರಯತ್ನವನ್ನು ಪ್ರಥಮ್ ನಡೆಸಿದ್ದ. ಆದರಿದು ಅವನ ಹರುಕುಬಾಯಿಯ ಪ್ರವರದಿಂದಾದ ಸ್ವಯಂಕೃತಾಪರಾಧವಾಗಿಯಷ್ಟೇ ಕಾಣಿಸುತ್ತದೆ.

ಹೀಗೆ ಪ್ರಥಮ್ ಹುಚ್ಚುತನದಿಂದ ಜುಟ್ಟು ಕೆದರಿಕೊಂಡ ಬೇಕರಿ ರಘು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ನಟೋರಿಯಸ್ ರೌಡಿ. ಆರಂಭದಲ್ಲಿ ಸ್ಲಂ ಭರತನ ಬೆಟಾಲಿಯನ್ನಿನೊಂದಿಗೆ ರಘು ಗುರುತಿಸಿಕೊಂಡಿದ್ದ. ಉತ್ತರ ಭಾರತ ಮೂಲದ ಲೈವ್ ಬ್ಯಾಂಡ್ ಹುಡುಗಿಯರ ಮೋಹಕ್ಕೆ ಬಿದ್ದಿದ್ದ ಈತ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಆ ಹಂತದಲ್ಲಿ ಅನಾಥ ಶಿಶುವಿನಂತಾಗಿದ್ದ ರಘು, ಒಂದಷ್ಟು ಸಮಯ ಅಂಡಲೆದವನು ಸೀದಾ ಹೋಗಿ ಲ್ಯಾಂಡ್ ಆಗಿದ್ದು ಮತ್ತೋರ್ವ ನಟೋರಿಯಸ್ ರೌಡಿ ಸೈಕಲ್ ರವಿಯ ಸಮ್ಮುಖದಲ್ಲಿ. ಈ ಸೈಕಲ್ಲು ಆರಂಭ ಕಾಲದಿಂದಲೂ ದರ್ಶನ್ ಪಾಳೆಯದಲ್ಲಿ ರೌಂಡು ಹೊಡೆಯುತ್ತಿದೆ. ಕೆಲ ಪಾರ್ಟಿಗಳಲ್ಲಿ ದಾಸನ ಜೊತೆಗಿರುತ್ತಿದ್ದ ಗುಳಿಗೆನ್ನೆಗೆ ಲೊಚಕ್ಕನೆ ಮುತ್ತಿಟ್ಟು ಸವಾಲಿ ನಡೆಸೋ ಖಯಾಲಿಯೂ ಸೈಕಲ್ಲಿಗಿದೆ ಅನ್ನುವವರಿದ್ದಾರೆ. ದರ್ಶನ್ ಅಭಿಮಾನಿ ಸಂಘಗಳ ಬೆನ್ನಿಗೆ ನಿಂತಿರೋದು ಇದೇ ಸೈಕಲ್ಲು!

ಸೈಕಲ್ಲಿನೊಂದಿಗೆ ಬೇಕರಿ

ಇಂಥಾ ಸೈಕಲ್ ರವಿ ಪಾಳೆಯದಲ್ಲಿದ್ದ ಬೇಕರಿ ರಘುವಿಗೂ ಕೂಡಾ ದರ್ಶನ್ ಕ್ರೇಜ್ ಇದ್ದೇ ಇತ್ತು. ಈ ನಡುವೆ ದರ್ಶನ್ ಏಕಾಏಕಿ ಎಡವಟ್ಟು ಮಾಡಿಕೊಂಡು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಹೊತ್ತಿಗೆಲ್ಲ ಸಿದ್ದಾಪುರ ಮಹೇಶನ ಹತ್ಯೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ. ನೋಡ ನೋಡುತ್ತಲೇ ದರ್ಶನ್ ಮತ್ತು ನಾಗನ ನಡುವೆ ಮೊಳೆತುಕೊಂಡಿದ್ದ ಸ್ನೇಹ, ಹೊರಗಿದ್ದ ಸೈಕಲ್ ರವಿಗೆ ಕರುಬು ಮೂಡಿಸಿತ್ತು. ಈ ಕಾರಣದಿಂದಲೇ ಸೈಕಲ್ ರವಿ ತನ್ನ ಶಿಷ್ಯ ಬೇಕರಿ ರಘುವನ್ನು ದಾಸನಿಗೆ ಜೈಲೊಳಗೆ ಉಪಚಾರ ಮಾಡುವುದಕ್ಕೆಂದೇ ಅಂದರ್ ಮಾಡಿಸಿದ್ದ. ಹೀಗೆ ದಾಸನ ದೇಖಾರೇಖಿ ನೋಡಿಕೊಳ್ಳುತ್ತಿದ್ದ ರಘು ಆ ಸಂದರ್ಭದಲ್ಲಿಯೇ ದರ್ಶನ್ ಜೊತೆ ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದ. ಇಂಥಾ ರಘು ಮೊನ್ನೆ ದಿನ ಪ್ರಥಮ್ ಗೆ ಆವಾಜು ಬಿಟ್ಟಿರೋದರ ಹಿಂದೆ ದರ್ಶನ್ ಪಾತ್ರವಿಲ್ಲ ಅನ್ನೋದು ಮೇಲುನೋಟಕ್ಕೇ ಅರ್ಥವಾಗುತ್ತೆ.

ಮಾಜೀ ರೌಡಿ ಶೀಟರ್ ಯಶಸ್ವಿನಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಬದಲಾದಂತೆ ಕಾಣಿಸಿಕೊಂಡಿದ್ದಳು. ನಟಿಯಾಗಿಯೂ ರೂಪಾಂತರಗೊಂಡಿದ್ದ ಆಕೆ ಸೂರಿ ಅಣ್ಣ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾಳೆ. ತಮಿಳಿನಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದಾಳೆ. ಇಂಥಾ ಯಶಸ್ವಿನಿಯ ಪಾಳೆಯದಲ್ಲಿ ಪ್ರಥಮನಂಥಾದ್ದೇ ಪ್ರಚಾರದ ಹುಚ್ಚು ಹೊಂದಿರುವ ಬುಲೆಟ್ ರಕ್ಷಕ್ ಕೂಡಾ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಆದರೆ, ಬೇಕರಿ ರಘು ಪ್ರಕರಣದಲ್ಲಿ ಆತ ಮೂಕ ಪ್ರೇಕ್ಷಕನಾಗಿದ್ದ. ಈ ಮರಿ ಬುಲೆಟ್ ಇದೆಯಲ್ಲಾ? ಇದೂ ಕೂಡಾ ತಲೆತಿರುಕ ಆಸಾಮಿಯೇ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಟಿಸಿದ ನಟರಿಗೂ ಇಲ್ಲದ ತಿಮಿರು, ಆಟಿಟ್ಯೂಡ್ ಈ ಎಳಸು ಕುನ್ನಿಗಿದೆ. ಅದ್ಯಾವುದೋ ಭರ್ಜರಿ ಬ್ಯಾಚುಲರ್ ಎಂಬ ಹಡಬೆ ಶೋ ಮೂಲಕ ಈತನ ಹುಚ್ಚು ಮತ್ತಷ್ಟು ಕೆದರಿಕೊಂಡಿದೆ. ಖುದ್ದು ರವಿಚಂದ್ರನ್ ಜಡ್ಜ್ ಆಗಿದ್ದ, ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದ ಈ ಶೋ ಹೈ ಫೈ ಹಾದರದ ಅಡ್ಡೆಯಂತಿದ್ದ ಬಗ್ಗೆ ಈ ಕ್ಷಣಕ್ಕೂ ಚರ್ಚೆಗಳಾಗುತ್ತಿವೆ.

ಈ ಪ್ರಥಮ್ ಮತ್ತು ರಕ್ಷಕ್ ಥರದ ಎಳಸು ಕುನ್ನಿಗಳು ಯಾವ ಕ್ಷಣದಲ್ಲಿಯಾದರೂ, ಯಾವ ರೂಪದಲ್ಲಾದರೂ ಸಮಾಜ ಕಂಟಕರಾಗಿ ಬಿಡುವ ಸಾಧ್ಯತೆಗಳಿದ್ದಾವೆ. ದುರಂತವೆಂದರೆ, ದರ್ಶನ್ ಅಭಿಮಾನಿಗಳಲ್ಲಿ ಕೆಲ ಮಂದಿಯೂ ಅದೇ ಸಾಲಿಗೆ ಸೇರಿಕೊಳ್ಳುತ್ತಾರೆ. ಪ್ರಥಮ್‌ಗೆ ಮೂದಲಿಸಿದಷ್ಟೇ ಸಲೀಸಾಗಿ ರಮ್ಯಾಳಂಥಾ ನಟಿಯರಿಗೂ ಪ್ರಹಾರ ನಡೆಸುತ್ತಾರೆ. ಸದ್ಯ ನಟಿ ರಮ್ಯಾ ತನ್ನ ವಿರುದ್ಧ ಕೆಟ್ಟಾಕೊಳಕು ಕಮೆಂಟು ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಗಮನೀಯ ಅಂಶವೆಂದರೆ, ಪ್ರಳಯಾಂತಕ ಪ್ರಥಮ್ ತಕ್ಷಣ ರಮ್ಯಾ ಸುತ್ತ ಹಬ್ಬಿಕೊಂಡಿದ್ದ ಬೆಂಬಲವನ್ನು ತನ್ನ ದಿಕ್ಕಿಗೆ ವರ್ಗಾಯಿಸಿಕೊಳ್ಳುವ ಆಟ ಕಟ್ಟಿದ್ದ. ಆದರೀಗ ಆತನ ಸುತ್ತಾ ಯಾರೆಂದರೆ ಯಾರೂ ಉಳಿದಿಲ್ಲ.

ಯಾರಾದರೂ ಹೇಗಿದ್ದೀಯಪ್ಪಾ ಪ್ರಥಮ್ ಅಂದರೆ, ಬೆಳಗೆದ್ದು ಹಲ್ಲುಜ್ಜಿ ಹೇತಿದ್ದರಿಂದ ಹಿಡಿದು, ಬೇಡದ ಪುರಾಣವನ್ನೆಲ್ಲ ಒದರೋ ಜಾಯಮಾನ ಪ್ರಥಮನದ್ದು. ಈ ಥರದ ಹುಚ್ಚು ಸಂತಾನಿಗರನ್ನು ಸೆಲೆಬ್ರಿಟಿಗಳಂತೆ ಬಿಂಬಿಸುವ ಟಿಆರ್‌ಪಿ ತೆವಲನ್ನು ಮಾಧ್ಯಮಗಳು ಬಿಡಬೇಕಿದೆ. ಅದೇ ಹೊತ್ತಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಪಿತಗುಡುತ್ತಿರುವ ವಿಕೃತರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸಿದರೆ ಯಾರೂ ಕೇಳೋರಿಲ್ಲ ಎಂಬ ಸದರ ಇವರೆಲ್ಲರಿಗಿದ್ದಂತಿದೆ. ಬಹುಶಃ ಪ್ರಥಮ್ ತಲೆ ನೆಟ್ಟಗಿರುವವನಂತಗೆ ವರ್ತಿಸಿದ್ದರೆ, ಆ ದಿಸೆಯಲ್ಲಿ ಅವನದ್ದೂ ಒಂದು ಪ್ರಾಮಾಣಿಕ ಪ್ರಯತ್ನವಾಗಿ ದಾಖಲಾಗುತ್ತಿತ್ತು. ಆದರೀಗ ಆ ಸಾಲಿನಲ್ಲಿ ರಮ್ಯಾ ಮುಂಚೂಣಿಯಲ್ಲಿದ್ದಾರೆ. ಗೃಹ ಸಚಿವ ಪರಮೇಶ್ವರ್‌ಗೆ ಸಾಮಾನ್ಯವಾಗಿ ಇಂಥಾ ವಿದ್ಯಮಾನಗಳೆಲ್ಲ ಗಮನಕ್ಕೆ ಬರೋದಿಲ್ಲ. ಆದರೂ ತುಸು ಪುರಸೊತ್ತು ಮಾಡಿಕೊಂಡು, ಸಾಮಾಜಿಕ ಜಾಲತಾಣದ ಭಯಾನಕ ಪಲ್ಲಟದ ಬಗ್ಗೆ ಗಮನ ಹರಿಸಬೇಕಿದೆ. ಹಾಗಂತ ಈ ನೆಲದ ಜನಸಾಮಾನ್ಯರು ಆಶಿಸುತ್ತಿದ್ದಾರೆ!

The post pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! appeared first on Cini Shodha.