daisybopanna – Cini Shodha

daisy bopanna: ಆಕೆಯ ಗಾಳಿಪಟ ಹಾರಾಡಲೇ ಇಲ್ಲ!
ಹತ್ತಾರು ಸಿನಿಮಾಗಳಲ್ಲಿ ನಟಿಸಿ, ಕನ್ನಡದ ಪ್ರೇಕ್ಷಕರ ಮನಸೆಳೆದಿದ್ದ ಹುಡುಗಿ (daisy bopanna) ಡೈಸಿ ಬೋಪಣ್ಣ. ಅಷ್ಟಕ್ಕಕೂ ಕೊಡಗಿನಿಂದ ಬಂದು ಕನ್ನಡದಲ್ಲಿ ನೆಲೆ ಕಂಡುಕೊಂಡ ನಟಿಯರಿಗೇನೂ ಬರವಿಲ್ಲ. ಅಲ್ಲಿಂದ ಬಂದವರು ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಗಳಲ್ಲಿಯೂ ನಾಯಕಿಯರಾಗಿ ಮೆರೆದು ಉದಾಹರಣೆಗಳಿದ್ದಾವೆ. ಅದೇ ರೀತಿ ಇನ್ನೇನು ಈಕೆ ನಾಯಕಿಯಾಗಿ ನೆಲೆ ಕಂಡುಕೊಳ್ಳುತ್ತಾಳೆಂಬ ಭರವಸೆ ಮೂಡಿಸಿದ್ದವರೂ, ಏಕಾಏಕಿ ಗಾಯಬ್ ಆಗಿ ಬಿಡುವಂಥಾ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದಕ್ಕೊಂದು ಉದಾಹರಣೆಯಂತಿರುವಾಕೆ (daisy bopanna) ಡೈಸಿ ಬೋಪಣ್ಣ!

ಕಡಿಮೆಯೇನಲ್ಲ; ಸರಿಸುಮಾರು ಒಂದು ದಶಕಗಳಿಂದ ಡೈಸಿ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದು ಬಿಟ್ಟಿದ್ದಳು. ಇಲ್ಲಿ ಚಾಲ್ತಿಯಲ್ಲಿರುವವರಿಗೆ ಮಾತ್ರವೇ ಬೆಲೆ. ಕಣ್ಣಿಂದ ಮರೆಯಾದವರು ಮನಸಿಂದಲೂ ಮರೆಯಾಗೋದಕ್ಕೆ ಹೆಚ್ಚೇನು ಸಮಯ ಹಿಡಿಯುವುದಿಲ್ಲ. ಆದರೆ, ಮನಸಲ್ಲುಳಿಯುವಂಥಾ ಪಾತ್ರ ಮಾಡಿದ ಕೆಲ ನಟ ನಟಿಯರ ವಿಚಾದಲ್ಲಿ ಮಾತ್ರವೇ ಅದು ಸುಳ್ಳಾಗೋದಿದೆ. ಡೈಸಿ ಕೂಡಾ ಗಾಳಿಪಟ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಆದ್ರ್ರವಾದ ಪಾತ್ರಗಳಲ್ಲಿ ನಟಿಸಿದ್ದಳು. ಆ ಮೂಲಕ ಒಂದಷ್ಟು ಅಭಿಮನಿ ಬಳಗವನ್ನೂ ಹೊಂದಿದ್ದಳು. ಇಂಥಾ ಡೈಸಿ ಅಷ್ಟೊಂದು ಸುದೀರ್ಘ ಕಾಲ ಎಲ್ಲಿ ಮರೆಯಾಗಿದ್ದಾಳೆ, ಆಕೆ ಈಗೇನು ಮಾಡುತ್ತಿದ್ದಾಳೆ ಅಂತ ಒಂದಷ್ಟು ಮಂದಿಯಾದರೂ ಯೋಚಿಸುತ್ತಿರುವಾಗಲೇ, ಮರೆಯಾಗಿದ್ದ ಈ ಚೆಲುವೆಯೀಗ ಬಿಕಿನಿಯಲ್ಲಿ ಪ್ರತ್ಯಕ್ಷಳಾಗಿದ್ದಾಳೆ!

ಡೈಸಿ ಬೋಪಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿಯಲ್ಲಿರೋ ಹಾಟ್ ಫೋಟೋ ಹಾಕಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ. ಇದು ಆಕೆ ಮತ್ತೆ ಚಿತ್ರರಂಗಕ್ಕೆ ಮರಳುವ ಸೂಚನೆಯಾ? ಯಾವುದದೂ ಸಿನಿಮಾವನ್ನು ಒಪ್ಪಿಕೊಂಡಿದ್ದಾಳಾ ಎಂಬ ಪ್ರಶ್ನೆಗಳಿಗೆ ಈ ಕ್ಷಣಕ್ಕೆ ನಿಖರ ಉತ್ತರ ಸಿಗುವುದು ಕಷ್ಟ. ಆದರೆ, ಆಕೆಯ ವೃತ್ತಿ ಬದುಕಿನ ಗ್ರಾಫ್ ಅನ್ನು ಗಮನಿಸಿದರೆ, ಡೈಸಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದಳೆಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೂ ಡೈಸಿ ಇಷ್ಟೊಂದು ದೀರ್ಘ ಕಾಲ ನೇಪಥ್ಯಕ್ಕೆ ಸರಿದಿದ್ದಕೆ ಎಂಬ ಪ್ರಶ್ನೆಗೂ ಉತ್ತರಗಳಿಲ್ಲ. ಆ ಬಗ್ಗೆ ಡೈಸಿಯೇ ತುಟಿ ಬಿಚ್ಚಬೇಕಷ್ಟೇ.

ಸಾಆನ್ಯವಾಗಿ, ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಲೇ ಹೆಚ್ಚಿನ ನಟಿಯರು ಪರಭಾಷರೆಗೆ ಜಿಗಿಯುವ ಡೌಲು ಪ್ರದರ್ಶಿಸುತ್ತಾರೆ. ತಾನು ಬಹುಬೇಡಿಕೆಯ ನಟಿ ಅಂತ ಬಿಂಬಿಸಿಕೊಳ್ಳಲು ಹೆಣಗಾಡುತ್ತಾರೆ. ಆದರೆ, ಡೈಸಿ ಬೋಪಣ್ಣ ಕನ್ನಡತಿಯಾಗಿದ್ದರೂ, ಮೊದಲು ನಟಿಸಿದ್ದೇ `ಇಂಡ್ರು ಮುದಲ್’ ಎಂಬ ತಮಿಳು ಚಿತ್ರದಲ್ಲಿ. ರಂಗ ಎಸ್‍ಎಸ್‍ಎಲ್‍ಸಿ ಚಿತ್ರದ ಪುಟ್ಟ ಪಾತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದ ಡೈಸಿ, ಆನಂತರ ಬಿಂಬ , ಭಗವನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಳು. ಗಾಳಿಪಟ ಚಿತ್ರದ ಸೌಮ್ಯ ಎಂಬ ಪಾತ್ರ ಆಕೆಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು. ಆದರೆ ನಾಯಕಿಯಾಗಿ ಆಕೆಯ ಯಶಸ್ಸಿನ ಗಾಳಿಪಟ ಹಾರಾಡಲೇ ಇಲ. ಈ ನಡುವೆ ಮಲೆಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿಯೂನಟಿಸಿದ್ದ ಡೈಸಿ, 2012ರಲ್ಲಿ ತೆರೆಕಂಡಿದ್ದ ಕ್ರೇಜಿ ಲೋಕದಲ್ಲಿ ನಟಿಸಿದ್ದೇ ಕೊನೆ; ಆ ನಂತರ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಇದೀಗ ಬಿಕಿನಿಯಲ್ಲಿ ಕಾಣಿಸಿಕೊಂಡಿರೋ ಡೈಸಿ ರೀ ಎಂಟ್ರಿಗೆ ಮುಹರ್ತವಿಟ್ಟಿದ್ದಾಳಾ ಎಂಬ ಪ್ರಶ್ನೆಗೆ ಸದ್ಯದಲಿಯೇ ಉತ್ತರ ಸಿಗಲಿದೆ.

The post daisy bopanna: ಆಕೆಯ ಗಾಳಿಪಟ ಹಾರಾಡಲೇ ಇಲ್ಲ! appeared first on Cini Shodha.