akshathapandavapura – Cini Shodha

pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!
ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದ್ದ ಚಿತ್ರ (pinki elli) `ಪಿಂಕಿ ಎಲ್ಲಿ’. ಪೃಥ್ವಿ ಕೋಣನೂರು (prithvi konanur)  ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ವಿಶ್ವಾದ್ಯಂತ ಹೆಸರು ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾಗಳು ಪ್ರೇಕ್ಷಕರ ಪಾಲಿಗೆ ಮರೀಚಿಕೆಯಾಗುಳಿಯುತ್ತವೆ. ಆದರೆ, ಪಿಂಕಿ ಎಲ್ಲಿ ಚಿತ್ರವೀಗ ಸಿನಿಮಾ ಮಂದಿರಗಳಲ್ಲಿಯೂ ಬಿಡುಗಡೆಗೊಂಡಿದೆ. ಹಾಗೆ ಪ್ರೀತಿಯಿಂದ ಬಂದ ನೋಡಿದ್ದ ಪ್ರತಿಯೊಬ್ಬರ ನರನಾಡಿಗಳಿಗಿಳಿದು ಪಿಂಕಿ (pinki)  ಕಾಡಿದ್ದಾಳೆ. ಅಬ್ಬರವಿಲ್ಲದೆಯೇ ಆದ್ರ್ರಗೊಳಿಸುವ ಈ ಸಿನಿಮಾದ ಗುಣವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ.

ಇಲ್ಲಿ ಹಿನ್ನೆಲೆ ಸಂಗೀತದ ಆರ್ಭಟವಿಲ್ಲ, ಪಾತ್ರಗಳೂ ಕೂಡಾ ಸಹಜತೆಯ ಗೆರೆ ದಾಟಿ ವರ್ತಿಸುವುದಿಲ್ಲ, ಯಾವ ನಾಟಕೀಯತೆಗೂ ಇಲ್ಲಿ ಆಸ್ಪದವಿಲ್ಲ… ಹೀಗಿದ್ದರೂ ಒಂದು ಭರ್ಜರಿ ಸಸ್ಪೆನ್ಸ್ ಥ್ರಿಲ್ಲರ್ ಸೀನಿಮಾವನ್ನು ನಿವಾಳಿಸಿ ಎಸೆಯುವಂಥಾ ಅನುಭೂತಿಯೊಂದನ್ನು ಈ ಚಿತ್ರ ಮುಫತ್ತಾಗಿ ಕೊಟ್ಟು ಬಿಡುತ್ತದೆ. ಇಲ್ಲಿ ಪಾತ್ರವಾಗಿರೋ ಪ್ರತೀ ಜೀವಗಳ ಏರಿಳಿತಗಳೂ ಎದೆಗೆ ನಾಟುತ್ತವೆ. ಅಲ್ಲಿನ ವಿಷಾದ, ಕಣ್ಣಂಚು ದಾಟದ ದುಃಖ, ಭಾವಗಳೆಲ್ಲವೂ ಅನಾಯಾಸವಾಗಿ ನೋಡುಗರನ್ನು ದಾಟಿಕೊಳ್ಳುತ್ತದೆ. ಅಷ್ಟೊಂದು ಸಮರ್ಥವಾಗಿ ದೃಷ್ಯ ಕಟ್ಟುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು (pruthvi konanur) ಗೆದ್ದಿದಾರೆ.

ಬೆಂಗಳೂರಿನಂಥಾ ಮಹಾ ನಗರಗಳಲ್ಲಿನ ಬದುಕಿನ ಕ್ರಮವೇ ಬೇರೆ. ಮೇಲುನೋಟಕ್ಕೆ ಥಳುಕು ಬಳುಕುಗಳನ್ನಿಟ್ಟುಕೊಂಡಿರುವ ಇಂಥಾ ನಗರಗಳ ಗರ್ಭದಲ್ಲಿ ಘಾಸಿಗೊಂಡ ಬದುಕುಗಳು ಸಾಕಷ್ಟು ಅಸಂಖ್ಯೆಯಲ್ಲಿದ್ದಾವೆ. ಒಂದು ಕಾಲದಲ್ಲಿ ನಡೆದಿದ್ದಂಥಾ ಎಳೆಯನ್ನೇ ಇಟ್ಟುಕೊಂಡು ನಿರ್ದೇಶಕರಿಲ್ಲಿ ದೃಷ್ಯ ಕಟ್ಟಿದ್ದಾರೆ. ಮುರಿದು ಬಿದ್ದ ಸಂಸಾರ, ಗಂಡನಿಂದ ದೂರವಾಗಿ ಪುಟ್ಟ ಮಗುವಿನೊಂದಿಗೆ ಬದುಕು ಕಟ್ಟಿಕೊಳ್ಳಬಯಸೋ ಹೆಣ್ಣು ಮಗಳು. ಆ ಕೆಲಸದ ಅನಿವಾರ್ಯತೆಯಿಂದ ಹಸುಗೂಸು ಪಿಂಕಿಯನ್ನು ಕೆಲಸದಾಕೆಗೆ ಒಪ್ಪಿದಾಗ ನಡೆಯೋ ದಿಗ್ಭ್ರಮೆ ಮೂಡಿಸೋ ಘಟನಾವಳಿಗಳೇ ಇಡೀ ಸಿನಿಮಾದ ಸಾರ.

ಹೆತ್ತವರ ಮುನಿಸಿಗೆ ಸಿಕ್ಕ ಲೋಕವರಿಯದ ಕೂಸು ಭಿಕ್ಷಾಟನೆಗೆ ಬಳಕೆಯಾಗುತ್ತದೆ. ಅಲ್ಲಿಂದ ಅದು ಹೇಗೋ ನಾಪತ್ತೆಯಾದ ಆ ಮ ಗು ಮತ್ತೆ ಹೆತ್ತವರ ಮಡಿಲು ಸೇರುತ್ತಾ ಎಂಬ ಕುತೂಹಲಕ್ಕೆ ಈ ಸಿನಿಮಾದ ತುಂಬಾ ರೋಚಕ ಉತ್ತರ ಸಿಗುತ್ತದೆ. ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿದರೇನೇ ಚೆಂದ. ಇಲ್ಲಿ ಪರಿಸ್ಥಿತಿ ಅನಿವಾರ್ಯತೆಗೆ ಸಿಕ್ಕು ಘಟಿಸುವ ಘಟನಾವಳಿಗಳನ್ನು ನಿರ್ದೇಶಕರು ಕ್ರೈಂ ಎಂಬಂತೆ ವಿಜೃಂಭಿಸಿಲ್ಲ. ಅಂಥಾ ಅತಿಶಯಗಳು ಚಿತ್ರದುದ್ದಕ್ಕೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಅದೇ ಒದಿಡೀ ಸಿನಿಮಾದ ಹೆಚ್ಚುಗಾರಿಕೆ ಮತ್ತು ಗೆಲುವಿಗೆ ಕಾರಣ. ಮಗುವನ್ನು ಭಿಕ್ಷಾಟನೆಗೆ ಬಿಟ್ಟ ಮನೆಗೆಲಸದ ಹಂಗಸಿನ ಹಿಂದಿರುವ ಅನಿವಾರ್ಯತೆ, ಆ ಕೂಸು ಅಚಾನಕ್ಕಾಗಿ ಮಡಿಲಿಗೆ ಬಿದ್ದಾಗ ಅದನ್ನು ತನ್ನದೇ ಎಂಬಂತೆ ಬೆಳೆಸುವ ಉಮೇದು ಪ್ರದರ್ಶಿಸೋ ಕಸ ಗುಡಿಸೋ ಮಹಿಳೆಯ ತುಮುಲ… ಇಂಥಾ ಅದೆಷ್ಟೋ ಸೂಕ್ಷ್ಮಗನ್ನು ಕಣ್ಣಿಗೆ ಕಟ್ಟುವಂತೆ, ಎದೆಗೆ ಮುಟ್ಟುವಂತರೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

ಇನ್ನುಳಿದಂತೆ, ಇಲ್ಲಿನ ಪಾತ್ರಗಳನ್ನು ನಿರ್ವಹಿಸಿದವರೆಲ್ಲರೂ ಒಬ್ಬರಿಗೊಬ್ಬರು ಮಿಇಲೆಂಬಂತೆ ಕಾಣಿಸಕೊಂಡಿದ್ದಾರೆ. ನಟನೆಯ ಗಂಧ ಗಾಳಿ ಇಲ್ಲದಿದ್ದರೂ ಆ ಪಾತ್ರಗಳಿಗೆ ಜೀವ ತುಂಬಿದ ಮಹಿಳೆಯರು ಮತ್ತು ಮಗುವನ್ನು ಕಳೆದುಕೊಂಡ ತಾಯಿಯಾಗಿ ಕಾಣಿಸಿಕೊಂಡಿರುವ ಅಕ್ಷತಾ ಪಾಂಡವಪುರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣಗಳನ್ನು ಹೊಂದಿರುವ ಪಿಂಕಿ ಎಲ್ಲಿ ಒಂದು ಅಪರೂಪದ ಚಿತ್ರ. ಅದನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನೋಡುವ ಮೂಲಕ ಪ್ರೀತ್ಸಾಹಿಸಿದರೆ ಇಂಥಾ ಭಿನ್ನ ಪ್ರಯೋಗಗಳಿಗೆ ಅನುವು ಮಾಡಿ ಕೊಟ್ಟಂತಾಗುತ್ತದೆ. ಇಂಥಾದ್ದೊಂದು ಉತ್ಸಾಹವೀಗ ಪ್ರೇಕ್ಷಕರನ್ನು ಆವರಿಸಿಕೊಂಡಂತಿದೆ!

The post pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ! appeared first on Cini Shodha.

akshatha pandavapura: ಸವಾಲಿನ ಪಾತ್ರಗಳಿಗೆ ಹಾತೊರೆಯುವ ರಂಗಪ್ರತಿಭೆ!
ರಂಗಭೂಮಿ ಹಿನ್ನೆಲೆಯ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ (akshatha pandavapura) ಈಗೊಂದಷ್ಟು ಕಾಲದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಪಿಂಕಿ ಎಲ್ಲಿ’ (pinki elli) ಚಿತ್ರ. ಈಗಾಗಲೇ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ (akshatha pandavapura) ನಟನೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಈ ಪಾತ್ರದಿಂದಲೇ ಅಕ್ಷತಾರ ಕಲಾಬದುಕು ಮತ್ತಷ್ಟು ಕಳೆಗಟ್ಟಿಕೊಂಡಿದೆ. ಎಂಥಾ ಪಾತ್ರಕ್ಕಾದರ ಸೈ ಎಂಬಂಥಾ ಪ್ರತಿಭೆಯೊಂದಿಗೆ, ಸವಾಲಿನ ಪಾತ್ರಗಳನ್ನೇ ಬಯಸುತ್ತಾ ಬಂದಿರುವ ಅಕ್ಷತಾರನ್ನೀಗ ಪಿಂಕಿಯ ಧ್ಯಾನ ಸಂಪೂರ್ಣವಾಗಿ ಆವರಿಸಿಕೊಂಡಿದೆ.

ಸಾಮಾನ್ಯವಾಗಿ ರಂಗಭೂಮಿಯಲ್ಲಿ ತರಬೇತಿ ಪಡೆದುಕೊಂಡು, ಪಳಗಿಕೊಂಡವರೆಲ್ಲರ ಪ್ರಧಾನ ಉದ್ದೇಶ ಸಿನಿಮಾ ಆಗಿರುತ್ತೆ. ಅದರಲ್ಲಿಯೂ ಕಮರ್ಶಿಯಲ್ ಸಿನಿಮಾಗಳಲ್ಲಿ ಮಿರಮಿರನೆ ಮಿಂಚಬೇಕೆಂಬ ಬಯಕೆ ಬಹುತೇಕರನ್ನು ಆವರಿಸಿಕೊಂಡಿರುತ್ತದೆ. ಅಂಥಾದ್ದರಲ್ಲಿ ಪ್ರೇಕ್ಷಕರೆಲ್ಲ ಹೋದಲ್ಲಿ ಬಂದಲ್ಲಿ `ನೀವ್ಯಾಕೆ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸೋದಿಲ್ಲ?’ ಎಂಬಂಥಾ ಪ್ರಶ್ನೆ ಎಸೆದರೂ ಸವಾಲಿನ ಪಾತ್ರಗಳ ಧ್ಯಾನದಲ್ಲಿ ಮಗ್ನರಾಗಿರುವವರು (akshatha pandavapura)  ಅಕ್ಷತಾ ಪಾಂಡವಪುರ. ಹೆಚ್ಚಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವರಿಗೆ ಪಿಂಕಿ ಎಲ್ಲಿ ಚಿತ್ರದ ಮೂಲಕ ಒಂದೊಳ್ಳೆ ಪಾತ್ರವೇ ಒಲಿದು ಬಂದಿದೆ. ಆ ಪಾತ್ರ ತಂದೊಡ್ಡಿದ ಎಲ್ಲ ಸವಾಲುಗಳನ್ನೂ ಕ್ರಿಯಾಶೀಲತೆಯಿಂದ ಸ್ವೀಕರಿಸಿ, ಸಾಕಷ್ಟು ತಯಾರಿ ನಡೆಸಿಯೇ ಕಳೆದು ಹೋದ ಕೂಸು ಪಿಂಕಿಯ ತಾಯಿಯಾಗಿ ಅಕ್ಷತಾ ಮನೋಜ್ಞವಾಗಿ ನಟಿಸಿದ್ದಾರೆ.

ಅಷ್ಟಕ್ಕೂ ನಿರ್ದೇಶಕ ಪೃಥ್ವಿ ಕೋಣನೂರು ಈ ಪಾತ್ರ ಸೃಷ್ಟಿಸಿಯಾದ ನಂತರ ಅದಕ್ಕೊಪ್ಪುವ ನಟಿಗಾಗಿ ಹುಡುಕಾಡಿದ್ದರಂತೆ. ಅದಾಗಲೇ ಪಲ್ಲಟ ಚಿತ್ರದ ಮೂಲಕ ರಾಜ್ಯ ಪ್ರಶಸ್ತಿ ಗಳಿಸಿಕೊಂಡಿದ್ದ ಅಕ್ಷತಾರೇ ಅದಕ್ಕೆ ಸೂಕ್ತ ಎಂಬಂಥಾ ತೀರ್ಮಾನಕ್ಕೂ ಬಂದಿದ್ದರಂತೆ. ಹಾಗೆ ಈ ವಿಚಾರವನ್ನು ಅಕ್ಷತಾರ ಮುಂದಿಟ್ಟಿದ್ದ ಪೃಥ್ವಿ, ಒಂದಷ್ಟು ವಿಚಾರಗಳನ್ನು ಹೇಳುತ್ತಲೇ ಸೆಳೆದು ಬಿಟ್ಟಿತ್ತು. ಸಾಮಾನ್ಯವಾಗಿ ಯಾವುದೇ ಪಾತ್ರ ಬಂದರೂ ಅಕ್ಷತಾ ಸ್ಕ್ರಿಪ್ಟ್ ನೋಡದೆ ಒಪ್ಪಿಗೆ ಸೂಚಿಸುವವರಲ್ಲ. ಅದೇ ರೀತಿ ಪಿಂಕಿ ಎಲ್ಲಿ ಚಿತ್ರದ ಸ್ಕ್ರಿಪ್ಟ್ ಓದಿ ಅವರೊಳಗೆ ಉಳಿದುಕೊಂಡಿದ್ದದ್ದು ವರ್ಣಿಸಲು ಸಾಧ್ಯವಾಗದ ಥ್ರಿಲ್ ಮಾತ್ರ!

ಹಾಗಂತ, ಈಗ ತೆರೆಯ ಮೇಲೆ ನೋಡಿದರೆ ಸಹಜಾಭಿನಯ ಅನ್ನಿಸೋ ಆ ಪಾತ್ರ ಅಷ್ಟು ಸಲೀಸಿನದ್ದಲ್ಲ. ನಟನೆಯಲ್ಲಿ ಕಾಂಪ್ಲೆಕ್ಸ್ ಪ್ಲೇ ಮಾಡೋ ವಿಧಾನವನ್ನ ಕರಗತ ಮಾಡಬೇಕಿತ್ತು. ಅಕ್ಷತಾ ಪಾಲಿಗದು ಹೊಸತಾಗಿದ್ದರೂ ಆಸ್ಥೆಯಿಂದ ತಯಾರಿ ನಡೆಸಿದ ಫಲವಾಗಿಯೇ ಅವರು ಮನದುಂಬಿ ನಟಿಸಿದ್ದಾರೆ. ವಿಶ್ವ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಈ ಹಾದಿಯಲ್ಲಿ ನಿರ್ದೇಶಕ ಪೃಥ್ವಿ ಕೂಡಾ ಅಲ್ಲಲ್ಲಿ ಸಲಹೆ ಸೂಚನೆ ನೀಡುತ್ತಾ ಸಂಪೂರ್ಣ ಸಹಕಾರ ನೀಡಿದ್ದರಂತೆ. ಅದರ ಫಲವಾಗಿಯೇ ಬದುಕು ಪೂರ್ತಿ ನೆನಪಿಟ್ಟುಕೊಳ್ಳುವ, ಸದಾ ಕಾಲವೂ ಹೆಮ್ಮೆಯಾಗಿ ಉಳಿದು ಹೋಗುವ ಪಾತ್ರದಲ್ಲಿ ನಟಿಸಲು ಸಾಧ್ಯವಾಗಿದೆ ಎಂಬ ತೃಪ್ತ ಭಾವ ಅಕ್ಷತಾರಲ್ಲಿದೆ.

ಹೀಗೆ ಈವತ್ತಿಗೆ ಪಿಂಕಿ ಎಲ್ಲಿ ಚಿತ್ರ ಮೂಲಕ ಕರ್ನಾಟಕದ ಗಡಿ ದಾಟಿ, ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಅಕ್ಷತಾ ಖಂಡಿತವಾಗಿಯೂ ಅಪರೂಪದ ನಟಿ. ಮೇಲುಕೋಟೆಯ ಬಾಜಿನಲ್ಲಿರುವ ಪಾಂಡವಪುರದ ಅಪ್ಪಟ ಸಂಪ್ರದಾಯಸ್ಥ ರೈತಾಪಿ ಕುಟುಂದಿಂದ ಬಂದವರು ಅಕ್ಷತಾ. ಕಾಲೇಜು ದಿನಗಳ ಹೊತ್ತಿಗೆಲ್ಲ ತನ್ನ ಭವಿಷ್ಯವನ್ನು ರಂಗಭೂಮಿಯಲ್ಲಿಯೇ ಹೊಳಪಾಗಿಸಬೇಕೆಂಬ ಗಟಿ ನಿರ್ಧಾರಕ್ಕೆ ಬಂದಿದ್ದ ಅವರು, ಆ ನಂತರ ಆ ಹಾದಿಯಲ್ಲೇ ಹೆಜ್ಜೆಯಿರಿಸಿದ್ದರ ಹಿಂದೆ ಸಂಘರ್ಷದ ಗುರುತುಗಳಿವೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ನಟನೆಗಿಳಿಯುವುದು, ಅದನ್ನೇ ಬದುಕಿಗೂ ನೆಚ್ಚಿಕೊಳ್ಳುವುದೆಲ್ಲವೂ ಸವಾಲು. ಮೊದಲಿಗೆ ಆಪ್ತ ಜೀವಗಳ ಕಡೆಯಿಂದಲೇ ವಿರೋಧಗಳು ವ್ಯಕ್ತವಾಗುತ್ತವೆ. ಅದೆಲ್ಲವನ್ನೂ ದಾಟಿಕೊಂಡು ಅಕ್ಷತಾ ಪಾಂಡವಪುರ ಪರಿಪೂರ್ಣ ನಟಿಯಾಗಿ ರೂಪುಗೊಂಡಿದ್ದೇ ಒಂದು ಸೋಜುಗ!

ಕಾಲೇಜು ಮಗಿಯುತ್ತಲೇ ದೆಹಲಿಯ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆಯಲು ಹೊರಟು ನಿಂತ ಅಕ್ಷತಾ ಮನೆ ಮಂದಿಗೆ ಸುಳ್ಳು ಹೇಳಿ ತೆರಳಬೇಕಾಗಿ ಬಂದಿತ್ತು. ನಾಟಕ ಕಲಿಯಲು ಹೋಗುತ್ತೇನೆಂದರೆ ಖಂಡಿತಾ ಅಡ್ಡಗಾಲು ಹಾಕುತ್ತಾರೆಂದು ಗೊತ್ತಿದ್ದರಿಂದಲೇ ಅವರು ಶಿಕ್ಷಕ ತರಬೇತಿಗೆ ಹೋಗುತ್ತಿರೋದಾಗಿ ಸುಳ್ಳು ಹೇಳಿದ್ದರಂತೆ. ಹಾಗೆ ನಾಟಕ ಅಭಿನಯ ತರಬೇತಿಗೆ ತೆರಳಿ, ಎಲ್ಲವನ್ನೂ ಶ್ರದ್ಧೆಯಿಂದ ಕಲಿತು ಬಂದವರ ಮುಂದೆಯೂ ಸವಾಲುಗಳಿದ್ದವು. ಏನೇ ಬಂದರೂ ರಂಗಭೂಮಿಯ ನಂಟನ್ನು ಬಿಡಲೊಲ್ಲದ ಅಕ್ಷತಾ ಅಲ್ಲಿಯೇ ಸಕ್ರಿಯರಾದರು. ಹಲವಾರು ನಾಟಕಗಳಲ್ಲಿ ನಟಿಸುತ್ತಾ ಕಲಾ ಪ್ರೇಮಿಗಳ ಮನಗೆದ್ದರು.

ಆ ನಂತರ ಒಬ್ಬಳು ಎಂಬ ಏಕಾಂತ ನಾಟಕದ ಮೂಲಕ ಅಕ್ಷತಾ ಪಾಂಡವಪುರ ಹೆಸರುವಾಸಿಯಾಗಿ ಬಿಟ್ಟಿದ್ದರು. ಹೀಗೆ ಥರ ರದ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಸಾಗಿ ಬಂದಿದ್ದ ಅಕ್ಷತಾರಿಗೆ 2015ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಒದಗಿ ಬಂದಿತ್ತು. ಅದರಲ್ಲಿನ ನಟನೆಗಾಗಿ ರಾಜ್ಯ ಪ್ರಶಸ್ತಿಯೂ ಒಲಿದು ಬಂದಿತ್ತು. ಆ ಬಳಿಕ ಮತ್ತೆ ರಂಗಭೂಮಿ, ಪ್ರಯೋಗಳಿಗೆ ಒಡ್ಡಿಕೊಂಡಿದ್ದವರಿಗೆ, ಅಚ್ಚರಿದಾಯಕವಾಗಿ ಕೂಡಿ ಬಂದ ಅವಕಾಶ ಪಿಂಕಿ ಎಲ್ಲಿ ಚಿತ್ರದ್ದು. 2017ರ ಸುಮಾರಿಗೆ ಆರಂಭಗೊಂಡಿದ್ದ ಈ ಸಿನಿಮಾವೀಗ ವಶ್ವಟ್ಟಲ್ಲಿ ಹೇಗೆಲ್ಲ ಮಿರುಗಿದೆ, ಎಂತೆಂಥಾ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂಬುದೆಲ್ಲ ಕಣ್ಣ ಮುಂದಿನ ಸತ್ಯ.

ಹೀಗೆ ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ, ಪ್ರತಿಭಾನ್ವಿತ ನಟಿ ಅನ್ನಿಸಿಕೊಂಡಿದ್ದರೂ, ಅಕ್ಷತಾರ ಪ್ರಧಾನ ಆದ್ಯತೆ ರಂಗಭೂಮಿಯೇ. ಕಮರ್ಶಿಯಲ್ ಸಿನಿಮಾಗಳಲ್ಲಿ ಹಾಗೆ ಮಿಂಚಿ, ಅಬ್ಬರಿಸಿ ಮರೆಯಾಗೋ ಪಾತ್ರಗಳಿಗಿಂತ, ಪಿಂಕಿ ಎಲ್ಲಿ ಚಿತ್ರದಲ್ಲಿನ ಮನಸಲ್ಲುಳಿಯೋ ಪಾತ್ರಗಳೇ ಅವರ ಪ್ರಧಾನ ಆಧ್ಯತೆ. ಇದೀಗ ಚಾನಲ್ ಥಿಯೇಟರ್ಸ್ ಪಾಂಡವಪುರ ಎಂಬ ತಂಡ ಕಟ್ಟಿಕೊಂಡಿರುವ ಅಕ್ಷತಾರಿಗೆ ಏಕವ್ಯಕ್ತಿ ಶೋಗಳು, ಭಿನ್ನ ಪ್ರಯೋಗಗಳೆಂದರೆ ಅಚ್ಚುಮೆಚ್ಚು. ಇದೆಲ್ಲದರಾಚೆ ಬರವಣಿಗೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಅವರು `ಲೀಕ್ ಔಟ್’ ಎಂಬ ಕಥಾ ಸಂಕಲನವನ್ನೂ ಹೊರ ತಂದಿದ್ದಾರೆ. ಅದೇ ಕಥೆಗಳನ್ನಾಧರಿಸಿ, ಏಕಾಂಗಿಯಾಗಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ನಾಟಕ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಹೀಗೆ ಸಂಚರಿಸುತ್ತಾ, ಲೀಕ್ ಔಟ್ ನಾಟಕ ಪ್ರದರ್ಶನ ಮಾಡುತ್ತಾ ವಿಶಿಷ್ಟ ಅನುಭವದ ಗಣಿಯನ್ನೇ ಅಕ್ಷತಾ ತನ್ನದಾಗಿಸಿಕೊಂಡಿದ್ದಾರೆ. ಯಾವುದೇ ಸಹಾಯಧನ, ಅನುದಾನಗಳ ಮರ್ಜಿಗೆ ಬೀಳದೆ ಸ್ವತಂತ್ರವಾಗಿ ರಂಗ ಪ್ರಯತ್ನ ನಡೆಸುತ್ತಿರುವ ಅಕ್ಷತಾ ಸಾಹಸೀ ಹೆಣ್ಣುಮಗಳಾಗಿಯೂ ಕಾಣಿಸುತ್ತಾರೆ. ಇಂಥಾ ರಂಗಭೂಮಿಯ ಪ್ರತಿಭೆಯೀಗ ಪಿಂಕಿ ಎಲ್ಲಿ ಚಿತ್ರದ ಚೆಂದದ ಪಾತ್ರದ ಮೂಲಕ ಪ್ರೇಕ್ಷಕರನ್ನೆಲ್ಲ ಮುಖಾಮುಖಿಯಾಗುವ ಖುಷಿಯಲ್ಲಿದ್ದಾರೆ. ತನ್ನ ಪಾಲಿಗೆ ಹೊಸಾ ಕಲಿಕೆಗೆ ಅನುವು ಮಾಡಿಕೊಟ್ಟ, ಪ್ರಶಸ್ತಿ ತಂದುಕೊಟ್ಟ ಪಿಂಕಿ ಎಲ್ಲ ಬಗ್ಗೆ ಅಕ್ಷತಾರಿಗೆ ವಿಶೇಷ ಅಭಿಮಾನವಿದೆ. ಆ ಚಿತ್ರವನ್ನು, ತಮ್ಮ ಪಾತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆಂಬ ಸಹಜ ಕುತೂಹಲವೂ ಇದೆ. ಅದೆಲ್ಲದಕ್ಕೂ ಈ ವಾರ ಉತ್ತರ ಸಿಗಲಿದೆ.

The post akshatha pandavapura: ಸವಾಲಿನ ಪಾತ್ರಗಳಿಗೆ ಹಾತೊರೆಯುವ ರಂಗಪ್ರತಿಭೆ! appeared first on Cini Shodha.

pinki elli: ಕಥೆ ಹುಟ್ಟಿದ ಬಗೆಯೊಂದು ಅಚ್ಚರಿ!
ಈಗಾಗಲೇ ಗಡಿಗಳ ಮಿತಿ ಮೀರಿಕೊಂಡು ವಿಶ್ವಾದ್ಯಂತ ಸದ್ದು ಮಾಡಿರುವ ಚಿತ್ರ `ಪಿಂಕಿ ಎಲ್ಲಿ’. (pinki elli) ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಅಬ್ಬರ, ಸಿದ್ಧಸೂತ್ರಗಳ ಆಚೀಚೆ ಹೊರಳಲೊಲ್ಲದ ಕಮರ್ಶಿಯಲ್ ಕಂಟೆಂಟುಗಳ ಗೊಬ್ಬರಗಳ ಭರಾಟೆಯಲ್ಲಿ ಆಗಾಗ ಪಿಂಕಿ ಎಲ್ಲಿಯಂಥಾ ಸಿನಿಮಾಗಳ ತಂಗಾಳಿಯಂತೆ ಸುಳಿಯುತ್ತವೆ. ಸೀಮಿತ ಮಿತಿಗಳಾಚೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅದು ಯಾವುದೇ ಸಿನಿಮಾ ರಂಗಗಳ ಚಲನೆಗೊಂದು ಹೊಸಾ ಓಘ ಕೊಡುವ ಪ್ರಕ್ರಿಯೆ. (kannadafilmindusry) ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಅಂಥಾ ಹೊಸಾ ಹರಿವಿಗೆ ಕಾರಣವಾದ ಒಂದಷ್ಟು ಕ್ರಿಯಾಶೀಲ ಮನಸುಗಳಿವೆ. ಆ ಸಾಲಿನಲ್ಲಿ ಪಿಂಕಿ ಎಲ್ಲಿ (pinki elli)  ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು (prithvi konanur) ನಿಸ್ಸಂದೇಹವಾಗಿಯೂ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ…

ಬಹುಶಃ ಪಿಂಕಿ ಎಲ್ಲಿ (pinki elli) ಎಂಬೊಂದು ಚಿತ್ರ ಈ ಪರಿಯಾಗಿ ಸುದ್ದಿ ಮಾಡುತ್ತದೆ, ಕನ್ನಡ ಚಿತ್ರರಂಗದ ಘನತೆಯನ್ನು ವದೇಶಗಳಲ್ಲಿಯೂ ಫಳಗುಡುವಂತೆ ಮಾಡುತ್ತದೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಕ್ಕಿಲ್ಲ. ಆದರೆ, ಅತ್ಯಂತ ಆಸ್ಥೆಯಿಂದ ಮಾಡಿದ ಕೆಲಸ ನಿರೀಕ್ಷೆ ಮೀರಿ ಫಲ ಕೊಟ್ಟೇ ಕೊಡುತ್ತದೆಂಬ ಮಾತಿಗೆ ಪಿಂಕಿ ಎಲ್ಲಿ ಚಿತ್ರ ತಾಜಾ ಉದಾಹರಣೆಯಾಗಿ ನಿಲ್ಲುತ್ತದೆ. ಅದರ ಸಂಪೂರ್ಣ ಕೆಡಿಟ್ಟು ನಿರ್ದಶಕ ಪೃಥ್ವಿ ಕೋಣನೂರರಿಗೆ ಸಲ್ಲುತ್ತದೆ. ಹಾಗಾದರೆ, ಇಂಥಾದ್ದೊಂದು ವಾಸ್ತಿಕ ದೃಷ್ಯ ಕಾವ್ಯ ಹುಟ್ಟು ಪಡೆದದ್ದು ಹೇಗೆ? ಅದರ ತಯಾರಿಗಳು ಹೇಗಿದ್ದವು? ಈ ಭಿನ್ನ ಪಥದ ಯಾನದ ಶುರುವಾತು ಹೇಗಿತ್ತು? ಇಂಥಾ ನಾನಾ ಪ್ರಶ್ನೆಗಳಿಗೆಲ್ಲ ಖುದ್ದ ಪೃಥ್ವಿ ಕೋಣನೂರು (prithvi konanur) ಉತ್ತರ ನೀಡಿದ್ದಾರೆ. ಅವರು `ಸಿನಿ ಶೋಧದೊಂದಿಗೆ ಮನಬಿಚ್ಚಿ ಹಂಚಿಕೊಂಡ ಸಂಗತಿಗಳು ಇಲ್ಲಿವೆ…ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆ, ಸಾಹಿತ್ಯಗಳತ್ತ ಆಸಕ್ತಿ ಹೊಂದಿದ್ದ ಪೃಥ್ವಿ, ಆ ನಂತರದಲ್ಲಿ ಬದುಕಿನ ಅನಿವಾರ್ಯತೆಗೆ ಸಿಕ್ಕು ಐಟಿ ವಲಯದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಒಂದು ಮಟ್ಟಿಗೆ ತೃಪ್ತವೆಂಬಂಥಾ ಕೆಲಸ, ಕೈ ತುಂಬಾ ಸಂಬಳ… ಒಟ್ಟಾರೆ ಅದು ಬದುಕಿನಲ್ಲಿ ಸೆಟಲ್ ಆಗೋದೊಂದೇ ಮುಖ್ಯ ಎಂಬಂಥಾ ಮನಃಸ್ಥಿತಿಯವರಿಗದು ಅಕ್ಷರಶಃ ಕಂಫರ್ಟ್ ಜೋನ್. ಆದರೆ, ಕ್ರಿಯಾಶೀಲ ಮನಸುಗಳು ಅಂಥಾ ಸುರಕ್ಷಿತ ವಲಯದಲ್ಲಿ ಹೆಚ್ಚು ಕಾಲ ಉಸಿರಾಡೋದು ಕಷ್ಟ. ಅಂಥಾ ತುಮುಲಗಳನ್ನ ಕಂಡುಂಡ ಬಳಿಕ ಪೃಥ್ವಿ ಗಟ್ಟಿ ಮನಸು ಮಾಡಿ ತಮ್ಮ ಆಸಕ್ತಿಯ ಕ್ಷೇತ್ರವಾದ ಸಿನಿಮಾದತ್ತ ಹೊರಳಿಕೊಂಡಿದ್ದರು.

ಅವರೊಳಗಿದ್ದದ್ದು ಸಾದಾ ಕನಸುಗಳಾಗಿದ್ದರೆ ಗಾಂಧಿನಗರದ ಜಂಗುಳಿಯ ನಡುವೆ ಕಳೆದು ಹೋಗಿ ಬಿಡುತ್ತಿದ್ದರೇನೋ… ಆ ಎಚ್ಚರದಿದಲೇ ಬೇರೆ ದಾರಿಯತ್ತ ಹೊರಳಿಕೊಂಡಿದ್ದ ಪೃಥ್ವಿ `ಅಲೆಗಳು’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಮೂಲಕ ಭರಪೂರ ಮೆಚ್ಚುಗೆ ಗಳಿಸಿಕೊಂಡು `ರೈಲ್ವೇ ಚಿಲ್ಡ್ರನ್’ ಎಂಬ ಮತ್ತೊಂದು ಸಿನಿಮಾವನ್ನು ಕೂಡಾ ನಿರ್ದೇಶನ ಮಾಡಿದ್ದರು. ಅದರ ಕಥೆ, ಚಿತ್ರಕಥೆಗಳೆಲ್ಲವೂ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದವು. ಆ ಮೂಲಕವೇ ಪೃಥ್ವಿ ಅಪರೂಪದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಹೀಗೆ ಒಂದರ ಬೆನ್ನಿಗೊಂದರಂತೆ ಚೆಂದದ ಸಿನಿಮಾ ನಿರ್ದೇಶನ ಮಾಡಿದ್ದ ಪೃಥ್ವಿ ಪಾಲಿಗೆ ಮೂರನೇ ಹೆಜ್ಜೆ ಅಕ್ಷರಶಃ ಸವಾಲಿನದ್ದಾಗಿತ್ತು.

ಯಾಕೆಂದರೆ, ಹೀಗೆ ಆರಂಭದಿಂದಲೂ ಗಮನ ಸೆಳೆದ ನಿದೇಶಕರಪಲಿಗೆ ಹೊಸಾ ಯಾನವೆಂಬುದು ಬಲವಾದ ಜವಾಬ್ದಾರಿ ಹೊgರಿಸುತ್ತದೆ. ಆ ಎಚ್ಚರವನ್ನು ಎದೆಯಲಿಟ್ಟುಕೊಂಡೇ ಮತ್ತೊಂದು ಭಿನ್ನ ಕಥಾನಕದ ತಲಾಶಿನಲ್ಲಿರುವಾಗಲೇ ಪೃಥ್ವಿ ಕಣ್ಣಿಗೆ ವಾಸ್ತವಿಕವಾಗಿ ನಡೆದಿದ್ದೊಂದು ಘಟನೆ ಬಿದ್ದಿತ್ತು. ಸರಿಸುಮಾರು 2007-08ನೇ ಸಾಲಿನಲ್ಲಿ ನಡೆದಿದ್ದೊಂದು ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಜನ ಸಾಮಾನ್ಯರು ಹೀಗೂ ನಡೆಯಲು ಸಾಧ್ಯವೇ ಎಂಬಂತೆ ದಿಗ್ಭ್ರಾಂತರಾಗಿದ್ದರು. ಹಾಗಂತ ಆ ಸುದ್ದಿನ್ನಷ್ಟೇ ಇಟ್ಟುಕೊಂಡು ಸಿನಿಮಾ ರೂಪಿಸಲು ಸಾಧ್ಯವಿರಲಿಲ್. ಅದರ ಹಿಂಚುಮುಂಚಿನ ನಾನಾ ಪದರುಗಳನ್ನು ಕೆದಕಿ, ಒಂದಷ್ಟು ಫೀಲ್ಡ್ ವರ್ಕ್, ರಿಸರ್ಚ್ ನಡೆಸಬೇಕಿತ್ತು.

ಸಮಯ ಸಿಕ್ಕಾಗೆಲ್ಲ ಆ ಕಥೆಯನ್ನು ಕಾಡಿಸಿಕೊಂಡು, ತಯಾರಿ ನಡೆಸಿದ್ದ ಪೃಥ್ವಿ ವರ್ಷಾಂತರಗಳ ಕಲದ ಶ್ರಮ ಬಳಿಕ ಕಡೆಗೂ ಅದಕ್ಕೊಂದು ಸಿನಿಮಾ ರೂಪ ಕೊಟ್ಟಿದ್ದರು. ಹಾಗೆ ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದವರಿಗೆ ನಿರ್ಮಾಣ ಮಾಡಲು ಯಾರು ಮುಂದಾಗುತ್ತಾರೆಂಬ ಪ್ರಶ್ನೆ ಎದರಾಗಿತ್ತು. ಈ ಸಂಬಂಧವಾಗಿ ಕೃಷ್ಣೇಗೌಡರ ಬಳಿ ಮಾತಾಡುತ್ತಾ, ನಿರ್ಮಪಕರು ಯಾರಾದರೂ ಇದ್ದರೆ ತಿಳಿಸಿ ಎಂಬ ಪ್ರ್ತಾಪವಿಡುತ್ತಲೇ, ಕೃಷ್ಣೇಗೌಡರು ಬೇರೇನೂ ಯೋಚಿಸದೆ ಏಕಾಏಕಿ ತಾವೇ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಆ ಘಳಿಗೆಯಲ್ಲಿಯೇ ಅಮೂರ್ಥ ಕಥೆಯೊಂದನ್ನು ಒಡಲಲ್ಲಿಟ್ಟುಕೊಂಡಿದ್ದ ಪಿಂಕಿಗೆ ಉಸಿರು ಬಂದಂತಾಗಿತ್ತು!

ವಿಶೇಷವೆಂದರೆ, ಕೃಷ್ಣೇಗೌಡರುಪೂರ್ತಿ ಕಥೆಯನ್ನೇ ಕೇಳದೆ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರು. ಆ ಹಠಾತ್ ನಿರ್ಧಾರದ ಹಿಂದಿದ್ದದ್ದು ಪೃಥ್ವಿ ಮೇಲಿದ್ದ ನಂಬಿಕೆ. ಯಾಕೆಂದರೆ, ಅದಾಗಲೇ ಕೃಷ್ಣೇಗೌಡರು ಪೃಥ್ವಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರೈಲ್ವೇ ಚಿಲ್ಡ್ರನ್ ಚಿತ್ರವನ್ನು ನೋಡಿದ್ದರು. ಬಹುವಾಗಿ ಮೆಚ್ಚಿಕೊಂಡಿದ್ದರು. ಅಂಥಾ ಸಿನಿಮಾ ಮಾಡಿದ್ದ ಪೃಥ್ವಿ ಈ ಸಿನಿಮಾವನ್ನು ಕೂಡಾ ಚೆಂದಗೆ ಮಾಡುತ್ತಾರೆಂಬ ನಂಬಿಕೆಯೇ ಅವರನ್ನು ಅಂಥಾದ್ದೊಂದು ನಿರ್ಧಾರ ತಳೆಯುವಂತೆ ಮಾಡಿತ್ತು. ಕಡೆಗೂ ಪಿಂಕಿ ಎಲ್ಲಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ವ್ಯಾವಹಾರಿಕವಾಗಿಯೂ ಗಮನ ಸೆಳೆಯುತ್ತಲೇ, ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲು ಅಣಿಗೊಂಡಿದೆ. ಇದೆಲ್ಲವೂ ಸಾಧ್ಯವಾದ ತೃಪ್ತ ಭಾವವೊಂದೀಗ ನಿರ್ದೇಶಕರಲ್ಲಿದೆ.

ಪೃಥ್ವಿ ಪಾಲಿಗೆ ತಾರಾಗಣದ ಆಯ್ಕೆ ಕಾರ್ಯವೂ ಸವಾಲಿನದ್ದಾಗಿತ್ತು. ಇದರ ಪ್ರಧಾನ ಪಾತ್ರದಲ್ಲಿ ಯಾರು ನಟಿಸಬಹುದೆಂಬ ಆಲೋಚನೆಯಲ್ಲಿದ್ದಾಗ ಅವರ ಮನಸಲ್ಲಿ ಮೂಡಿದ್ದ ಮೊದಲ ಚಿತ್ರ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ. ಅದಕ್ಕೆ ಅಕ್ಷತಾ ಕೂಡಾ ತುಂಬು ಸಂತಸದಿಂದಲೇ ಒಪ್ಪಿಗೆ ಸೂಚಿಸಿದ್ದರು. ಇನ್ನುಳಿದಕೆಲ ಪಾತ್ರಗಳಿಗೆ ಪಳಗಿದ ಕಲಾವಿದರನ್ನು ಹಾಕಿಕೊಂಡರೆ ಅದರ ಅಸಲೀ ಅಂತಃಸತ್ವ ಮುಕ್ಕಾಗುತ್ತದೆಂಬ ಭಯ ನಿರ್ದೇಶಕರಿಗಿತ್ತು. ಕಡೆಗೂ ಸ್ಲಮ್ಮಿನಲ್ಲಿ ವಾಸಿಸುವ ಮಹಿಳೆಯರನ್ನು ಒಪ್ಪಿಸಿ ನಟಿಸುವಂತೆ ಮಾಡಿದ್ದರು. ಈ ಕಾರಣದಿಂದಲೇ ನಮ್ಮ ನಡುವೆಯೇ ಕಥೆ ಕದಲುತ್ತಿದೆಯೇನೋ ಎಂಬಂಥಾ ಫೀಲ್ ಮೂಡಿಸುವಷ್ಟು ಸಹಜವಾಗಿ ಈ ಸಿನಿಮಾ ಮೂಡಿ ಬಂದಿದೆಯೆಂಬ ಖುಷಿ ಪೃಥ್ವಿಗಿದೆ.

ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ತಾನು ಭಿನ್ನ ಎಂಬುದನ್ನು ಸಾಬೀತು ಪಡಿಸಿಕೊಂಡು ಬರುತ್ತಿರುವ ಪೃಥ್ವಿ ಕೋಣನೂರು ನಿಜಕ್ಕೂ ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕ. ಹೊಸತೇನೋ ಸೃಷ್ಟಿಸಬೇಕೆಂಬ ತಪನೆಯೊಂದನ್ನು ಸದಾ ಕಾಪಿಟ್ಟುಕೊಂಡಿರುವ ಪೃಥ್ವಿ ರಚಿಸಿದ್ದ ಮೊದಲ ಸ್ಕ್ರಿಫ್ಟ್ ಹಾಲಿವುಡ್ ಸಿನಿಮಾಗೆ ಆಪ್ಷನ್ ಆಗಿತ್ತು. ಅದು ಓರ್ವ ನಿರ್ದೇಶಕನಾಗಿಪೃವಿಯ ಅಸಲೀ ಕಸುವೆಂಥಾದ್ದು ಎಂಬುದಕ್ಕೊಂದು ಉದಾಹರಣೆ. ಇಂಥಾ ಪೃಥ್ವಿ ಪಿಂಕಿ ಎಲ್ಲಿಯ ಜೊತೆ ಜೊತೆಗೇ ಹದಿನಾರೆಂಟು ಎಂಬ ಮತ್ತೊಂದು ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಅದೂ ಕೂಡಾ ಅಂತಾರಾಷ್ಟರೀಯ ಮಟ್ಟದಲ್ಲಿ ಹವಾ ಸೃಷ್ಟಿಸಲು ಸಜ್ಜಾಗಿದೆ. ಕಮರ್ಶಿಯಲ್, ಆರ್ಟ್ ಮೂವಿ ಸೇರಿದಂತೆ ಪ್ರಾಕಾರ ಯಾವುದೇ ಇದ್ದರೂ ಅಲ್ಲಿ ಹೊಸತನದ ಹಾಜರಿ ಇರಬೇಕೆಂಬುದು ಪೃಥ್ವಿ ತುಡಿತ. ಅವರ ಕಡೆಯಿಂದ ಇನ್ನಷ್ಟು ಚೆಂದ ಸಿನಿಮಾಗಳು ಹೊರ ಬರಲೆಂಬುದು ನಮ್ಮ ಹಾರೈಕೆ…

The post pinki elli: ಕಥೆ ಹುಟ್ಟಿದ ಬಗೆಯೊಂದು ಅಚ್ಚರಿ! appeared first on Cini Shodha.

pinki elli: ವಿಶ್ವಾದ್ಯಂತ ಸದ್ದು ಮಾಡಿದ `ಪಿಂಕಿ ಎಲ್ಲಿ’ ಈ ವಾರ ನಿಮ್ಮ ಮುಂದೆ!
ಕಲಾತ್ಮಕ ಚೌಕಟ್ಟಿನ ಚಿತ್ರಗಳೆಲ್ಲ ಸೀಮಿತ ಚೌಕಟ್ಟಿನಲ್ಲಿಯೇ ಬಂಧಿಯಾಗಿ, ಪ್ರೇಕ್ಷಕರ ಕೈಗೆಟುಕದೆ ಮರೆಯಾಗುತ್ತವೆ ಅಂತೊಂದು ಆಪಾದನೆಯಿತ್ತು. ಅದು ಪ್ರಯೋಗಾತ್ಮಕ ಗುಣಗಳ ಸಿನಿಮಾಗಳನ್ನು ಕನವರಿಸುವ ಈ ನೆಲದ ಸದಭಿರುಚಿಯ ಪ್ರೇಕ್ಷಕರ ಮನದಾಳದ ಕೊರಗೂ ಹೌದು. ಗಿರೀಶ್ ಕಾಸರವಳ್ಳಿಯಂಥಾ (girish kasaravalli) ಅಸಾಧಾರಣ ನಿರ್ದೇಶಕರುಗಳೇ ಎಲ್ಲ ಪ್ರೇಕ್ಷಕರಿಗೂ ತಮ್ಮ ಸಿನಿಮಾಗಳನ್ನು ತಲುಪಿಸುವಲ್ಲಿ ಕೈ ಚಲ್ಲಿದ್ದಾರೆಂಬ ಮಾತೂ ಇದೆ. ಆದರೀಗ ಆ ಕೊರಗು, ಆಪಾದನೆಗಳನ್ನೆಲ್ಲ ಸುಳ್ಳಾಗಿಸುವಂತೆ ಪೃಥ್ವಿ ಕೋಣನೂರು (prithvi konanuru) ನಿರ್ದೇಶನದ `ಪಿಂಕಿ ಎಲ್ಲಿ?’ (pinki elli?) ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲು ಅಣಿಯಾಗಿದೆ. ಇದೇ ವಾರ ಅಂದರೆ, ಜೂನ್ 2ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

ಅಷ್ಟಕ್ಕೂ `ಪಿಂಕಿ ಎಲ್ಲಿ’ ಚಿತ್ರ ಸದ್ದು ಮಾಡಲು ಶುರುವಿಟ್ಟು ಒಂದಷ್ಟು ಕಾಲವೇ ಕಳೆದಿದೆ. ಬದುಕಿಗೆ ಹತ್ತಿರಾದ, ಆದ್ರ್ರಗೊಳಿಸುವ ಕಥಾ ಹಂದರದ ಸಿನಿಮಾ ಅದ್ಯಾವುದೇ ಮಾದರಿಯದ್ದಾಗಿದ್ದರೂ ತಾನೇತಾನಾಗಿ ಜನಮನ ಸೆಳೆಯುತ್ತೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ಚಿತ್ರ `ಪಿಂಕಿ ಎಲ್ಲಿ’. ಇದು ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವಾರು ಪ್ರಶಸ್ತಿಗಳಗೂ ಭಾಜನವಾಗಿದೆ. ಹೀಗೆ ಸದ್ದು ಮಾಡುತ್ತಿರೋ ಈ ಸಿನಿಮಾದ ಒಂದಷ್ಟು ಝಲಕ್ಕುಗಳು ಜಾಹೀರಾಗುತ್ತಲೇ ಅದನ್ನು ಪೂರ್ತಿಯಾಗಿ ಕಣ್ತುಂಬಿಕೊಳ್ಳಬೇಕೆಂಬ ತುಡಿತ ಕೂಡಾ ಪ್ರೇಕ್ಷಕರಲ್ಲಿ ತೀವ್ರವಾಗಿತ್ತು. ಅದು ದಿನದೊಪ್ಪತ್ತಿನಲ್ಲೇ ಸಾಕಾರಗೊಳ್ಳುತ್ತಿದೆ.

ಮನಸು ಮುರಿದುಕೊಂಡ ದಾಂಪತ್ಯ, ತನ್ನ ಅಬೋಧ ಮಗುವಿನೊಂದಿಗೆ ಪತ್ಯೇಕವಾಗಿ ಬದುಕಲಾರಂಭಿಸಿದ ಹೆಣ್ಣು ಮತ್ತು ಯಾಂತ್ರಿಕ ಬದುಕಿನ ಇಕ್ಕಳಕ್ಕೆ ಸಿಕ್ಕ ಅನೇಕ ಆಘಾತಕರ ಘಟನಾವಳಿಗಳ ಸುತ್ತ ಪಿಂಕಿ ಎಲ್ಲಿ ಚಿತ್ರದ ಕಥಾ ಹಂದರ ಸುತ್ತುತ್ತದೆ. ಸಹಜಾತಿ ಸಹಜವಾಗಿ ದೃಷ್ಯಗಳು ಕದಲಿದರೂ, ಒಂದು ಅಬ್ಬರದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಕ್ಕಿಂತಲೂ ಒಂದು ಕೈ ಮಿಗಿಲಾದ ಅನುಭೂತಿ ಕೊಡಮಾಡೋದು ಪಿಂಕಿಯ ಸ್ಪೆಷಾಲಿಟಿ. ಇಲ್ಲಿ ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತವಿಲ್ಲ. ಯಾವ ಪಾತ್ರಗಳೂ ವಿನಾಕಾರಣ ಅಬ್ಬರಿಸೋದಿಲ್ಲ. ಆದರೆ ಪ್ರತೀ ಪಾತ್ರಗಳ ಏರಿಳಿತಗಳೂ ಎದೆಗಿಳಿಯುತ್ತವೆ. ಅಲ್ಲಿನ ಪಲ್ಲಟಗಳು ಎದೆಗಿಳಿದು ಕಾಡುತ್ತವೆ. ಒಟ್ಟಾರೆಯಾಗಿ ಬೇರೆಯದ್ದೇ ತೆರನಾದ ಫೀಲ್ ಒಂದನ್ನು ಪ್ರೇಕ್ಕರೆಲ್ಲರಿಗೂ ಪಿಂಕಿ ಎಲ್ಲಿ ಚಿತ್ರ ದಕ್ಕಿಸೋದರಲ್ಲಿ ಯಾವ ಸಂದೇಹವೂ ಇಲ್ಲ.

ನಿರ್ದೇಶಕ ಪೃಥ್ವಿ ಅಂಥಾದ್ದೊಂದು ಅಮೋಘ ಪಥದಲ್ಲಿ ಒಂದಿಡೀ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಹಾಗೊಂದು ಗಟ್ಟಿತನ ಇಲ್ದೇ ಹೋಗಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಲೂರಿ ನಿಂತು, ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟು ಬಚಾಯಿಸಿಕೊಳ್ಳುವ ಭರವಸೆ ಮೂಡೋದೂ ಸಾಧ್ಯವಿರುತ್ತಿರಲಿಲ್ಲ. ಈ ಹಿಂದೆ ರೈಲ್ವೇ ಚಿಲ್ಡ್ರನ್ ಚಿತ್ರ ಮೂಲಕ ಅಗಾಧ ಪ್ರಮಾಣದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದವರು ನಿರ್ದೇಶಕ ಪೃಥ್ವಿ ಕೋಣನೂರು. ಅವರೀಗ ಹಲವಾರು ವರ್ಷಗಳ ಪರಿಶ್ರಮದ ಫಲವಾಗಿ ಪಿಂಕಿ ಎಲ್ಲ ಚಿತ್ರವನ್ನು ರೂಪಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಮಿಂಚಿದ್ದಾರೆ.

ಇನ್ನುಳಿದಂತೆ, ಪಿಂಕಿ ಎಲ್ಲಿ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವುದು ತಾರಾಗಣ. ಇದರ ಮುಖ್ಯಭೂಮಿಕೆಯಲ್ಲಿ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದೆ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ದೀಪಕ್ ಸುಬ್ರಮಣ್ಯ, ಪೃಥ್ವಿ ಕೋಣನೂರು ಕೂಡಾ ಪಾತ್ರಗಳಾಗಿದ್ದಾರೆ. ಅಭಿನಯದ ಗಂಧವಿಲ್ಲದ ಮಹಿಳೆಯರೂ ಕೂಡಾ ಮುಖ್ಯ ಪಾತ್ರಗಳಿಗೆ ಜೀವ ತುಂಬಿರುವುದು ಈ ಸಿನಿಮಾದ ಮತ್ತೊಂದು ಆಕರ್ಷಣೆ. ಅಕ್ಷತಾ ಯಾವುದೇ ಬಗೆಯ ಪಾತ್ರಗಳಿಗಾದರೂ ಸೈ ಅನ್ನುವಂಥಾ ಕಸುವಿರುವ ನಟಿ. ತನ್ನದೇ ರಂಗಭೂಮಿ ತಂಡ ಕಟ್ಟಿಕೊಂಡು ಸಕ್ರಿಯವಾಗಿದ್ದುಕೊಂಡೇ, ಲೀಕ್ ಔಟ್ ಎಂಬ ರಂಗ ಪ್ರಯೋಗದ ಮೂಲಕ ಅಚ್ಚರಿ ಹುಟಿಸಿರುವವರು ಅಕ್ಷತಾ ಪಾಂಡವಪುರ. ಅಂಥಾ ಕಲಾವಿದೆಗೇ ಸವಾಲಾಗುವ ಚಹರೆಯ ಪಾತ್ರವನ್ನಿಲ್ಲಿ ನಿರ್ದೇಶಕ ಪೃಥ್ವಿ ರೂಪಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡೇ ಅಕ್ಷತಾ ಆ ಪಾತ್ರವನ್ನು ಜೀವಿಸಿದ್ದಾರೆ. ಇದರೊಂದಿಗೆ ವಿಶ್ವ ಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ.

ಕೃಷ್ಣೇಗೌಡ, ನಿರ್ಮಾಪಕರು

ಇಂಥಾ ಅಪರೂಪದ ಚಿತ್ರ ಈ ಪರಿಯಾಗಿ ಗಮನ ಸೆಳೆದಿದೆಯಲ್ಲಾ? ಅದರ ಹಿಂದೆ ಹತ್ತಾರು ಮಂದಿಯ ಶ್ರಮ ಇರುವುದು ನಿಜ. ಆದರೆ ಅದೆಲ್ಲದಕ್ಕೂ ಪ್ರಧಾನ ಪ್ರೇರಣೆಯಾಗಿ ನಿಲ್ಲುವವರು ನಿರ್ಮಾಪಕರಾದ ಕೃಷ್ಣೇಗೌಡ. ಪರ್ಯಾಯ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡರು ನಟರಾಗಿ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಪ್ರಸಿದ್ಧರು. ರಂಗಭೂಮಿಯ ನಂಟಿನಿಂದ ಭಿನ್ನ ಅಭಿರುಚಿಯನ್ನು ರೂಢಿಸಿಕೊಂಡಿರುವ ಅವರು, ಆ ಬಲದಿಂದಲೇ ಪಿಂಕಿ ಎಲ್ಲಿ ಚಿತ್ರವ್ನು ನಿರ್ಮಾಣ ಮಾಡಿದ್ದಾರೆ. ವ್ಯಾವಹಾರಿಕ ದೃಷಿಕೋನದಾಚೆ ಇದನ್ನು ನಿರ್ಮಾಣ ಮಾಡಿದ್ದರೂ ಕೂಡಾ, ವ್ಯಾವಹಾರಿಕವಾಗಿಯೂ ಗೆಲುವಿನ ನಗೆ ಈ ಬೀರಿದ್ದಾರೆ. ಹೀಗೆ ಎಲ್ಲ ಬಗೆಯಲ್ಲಿಯೂ ವಿಶೇಷ ಅನ್ನಿಸಿಕೊಂಡಿರುವ ಪಿಂಕಿ ಎಲ್ಲಿ ಚಿತ್ರ ತೆರೆಗಾಣಲು ದಿನಗಣನೆ ಶುರುವಾಗಿದೆ…

The post pinki elli: ವಿಶ್ವಾದ್ಯಂತ ಸದ್ದು ಮಾಡಿದ `ಪಿಂಕಿ ಎಲ್ಲಿ’ ಈ ವಾರ ನಿಮ್ಮ ಮುಂದೆ! appeared first on Cini Shodha.