actorajith – Cini Shodha

Thala Ajith: ಸಿಟ್ಟು ಸೆಡವುಗಳ ಹಿಂದಿರೋದು ಎಂಥಾ ಮನಃಸ್ಥಿತಿ?
ಭಾರತೀಯ ಚಿತ್ರರಂಗ ಅನೇಕ ಮನಃಸ್ಥಿತಿಗಳ, ವಿಕ್ಷಿಪ್ತ ಅವತಾರಗಳ ನಟ ನಟಿಯರನ್ನು ಕಂಡಿದೆ. ಇಂಥವರ ಸಾರ್ವಜನಿಕ ವರ್ತನೆ, ಖಾಸಗೀ ಬದುಕಿನ ನಡವಳಿಕೆಗಳ ಬಗ್ಗೆ ಅನೇಕಾನೇಕ ದಂತಕಥೆಗಳೇ ಹುಟ್ಟಿಕೊಂಡಿವೆ. ಇಂಥಾ ಸಾಲಿನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವಾತ ತಲಾ ಅಜಿತ್. ತಮಿಳುನಾಡಿನ ಮಟ್ಟಿಗೆ ಅಜಿತ್ ಓರ್ವ ಸೂಪರ್ ಸ್ಟಾರ್. ತಮಿಳಿನ ಗಡಿ ದಾಟಿ ಎಲ್ಲೆಡೆ ಫ್ಯಾನ್ ಬೇಸ್ ಹೊಂದಿರೋ ಅಜಿತ್ ಯಾವತ್ತೂ ಅಭಿಮಾನಿ ಬಳಗವನ್ನು ಹಿಗ್ಗಲಿಸಿಕೊಳ್ಳುವ ಸರ್ಕಸ್ಸು ನಡೆಸಿಲ್ಲ. ಸ್ಟಾರ್‌ಡಂ ಅನ್ನು ಕಾಪಿಟ್ಟುಕೊಳ್ಳುವ ಸರ್ಕಸುಗಳಿಂದ ಅಜಿತ್ ಫರ್ಲಾಂಗುಗಟ್ಟಲೆ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಬಹುಶಃ ತನಗಾಗಿ ಯಾವ ಅಭಿಮಾನಿ ಸಂಘಗಳನ್ನೂ ಮಾಡಕೂಡದೆಂದ ಏಕೈಕ ನಟ ಅಜಿತ್. ಇಂಥಾ ನಟನೀಗ ದೂರ ದುಬೈನಲ್ಲಿ ತನ್ನನ್ನು ನೋಡ ಬಂದ ಅಭಿಮಾನಿಗಳನ್ನೇ ಗದರುವ ಮೂಲಕ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಅಜಿತ್‌ಗೆ ರೇಸ್ ಎಂಬುದು ಸಿನಿಮಾಗಿಂತಲೂ ತುಸು ಹೆಚ್ಚೇ ಹುಚ್ಚು. ಇತ್ತೀಚಿನ ದಿನಗಳಲ್ಲಿಯಂತೂ ಅಜಿತ್ ತನ್ನ ರೇಸಿಂಗ್ ಪ್ರಪಂಚದಲ್ಲಿ ಅಕ್ಷರಶಃ ಕಳೆದು ಹೋಗಿದ್ದಾರೆ. ಹೀಗೊಂದು ರೇಸಿಂಗ್ ಮೂಡಲ್ಲಿರುವಾಗಲೇ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಹಾಗಾದೇಟಿಗೆ ಥೇಟು ಜಮದಗ್ನಿಯಂತಾಡಿದ ಅಜಿತ್ ಸಹಜವಾಗಿ ನಡೆದುಕೊಳ್ಳಿ, ಇದು ಸಿನಿಮಾ ಮಂದಿರವಲ್ಲ ಎಂಬರ್ಥದಲ್ಲಿ ಸಿಡಿಮಿಡಿಗೊಂಡಿದ್ದಾರೆ. ಸಾಮಾನ್ಯವಾಗಿ ಅಜಿತ್ ಇಂಥಾ ಸಿಟ್ಟು ಪ್ರದರ್ಶಿದಾಗೆಲ್ಲ ತಮಿಳುನಾಡಿನಲ್ಲಿ ಅವರನ್ನು ವಿರೋಧಿಸುವ ಬಣದ್ ಮಂದಿ ಪುಕಾರೆಬ್ಬಿಸುತ್ತಾರೆ. ಇತ್ತೀಚೆಗೆ ಟ್ರೋಲುಗಳ ಮೂಲಕ ಅಜಿತ್‌ರನ್ನು ಟಾರ್ಗೆಟ್ ಮಾಡಿ ಸಂಭ್ರಮಿಸುತ್ತಾರೆ. ಇದೇ ಹೊತ್ತಿನಲ್ಲಿ ಸೂಪರ್ ಸ್ಟಾರ್ ಅಜಿತ್ ಹೀಗೇಕೆ ವರ್ತಿಸುತ್ತಾರೆ? ಓರ್ವ ಸೂಪರ್ ಸ್ಟಾರ್ ಆಗಿದ್ದುಕೊಂಡು ಯಾಕೆ ಅಂತರ್ಮುಖಿಯಂತೆ ತಮ್ಮದೇ ಜಗತ್ತಿನಲ್ಲಿ ಕಳೆದು ಹೋಗುತ್ತಾರೆ ಎಂಬ ಅನೇಕ ಪ್ರಶ್ನೆಗಳು ಸಿನಿಮಾಸಕ್ತರನ್ನು ಕಾಡುತ್ತಿದೆ.

thala ajith: ಪದೇ ಪದೇ ಆಸ್ಪತ್ರೆ ಭೇಟಿಯ ಹಿಂದಿದೆ ಅದೊಂದು ಭಯ!

ಬಹುಶಃ ಯಾವ ಸ್ಟಾರ್ ನಟರೂ ಕೂಡಾ ಇಂತಾದ್ದೊಂದು ಸನ್ಯಾಸದಂಥಾ ಮನಃಸ್ಥಿತಿಯನ್ನು ಹೊಂದಿರೋದಿಲ್ಲ. ಯಾಕೆಂದರೆ, ಎಲ್ಲ ಸೆಲೆಬ್ರ್ರಿಟಿಗಳನ್ನೂ ಕೂಡಾ ಅಭಿಮಾನಿಗಳ ಜಯಕಾರ, ಜಂಗುಳಿಯೆಂಬುದು ಉದ್ದೀಪಿಸುತ್ತದೆ. ಈ ಕ್ಷಣಕ್ಕೂ ಸ್ಟಾರ್ ನಟರನ್ನೆಲ್ಲ ಎಲ್ಲಿ ತನ್ನ ಫ್ಯಾನ್ ಬೇಸ್ ಕುಸಿದು ಬಿಡುತ್ತದೋ ಎಂಬ ಆತಂಕ ಕಾಡುತ್ತದೆ. ಆದರೆ, ಸೂಪರ್ ಸ್ಟಾರ್ ಅಜಿತ್ ಅಂತಾ ಮನಃಸ್ಥಿತಿಯನ್ನೇ ದಾಟಿಕೊಂಡಿದ್ದಾರೆ. ಹಾಗಂತ ನಟನಾಗಿ ಎತ್ತರಕ್ಕೇರಿದ ಮೇಲೆ ಆತನಲ್ಲಿ ಇಂಥಾ ಬದಲಾವಣೆಯಾದದ್ದಲ್ಲ. ಲಾಗಾಯ್ತಿನಿಂದಲೂ ಈತ ಇರುವುದೇ ಹೀಗೆ. ಹಾಗಿರೋದರಿಂದಲೇ ತನ್ನ ಅಭಿಮಾನಿ ಸಂಘಗಳನ್ನು ಮಾಡದಂತೆ ಸಾರ್ವಜನಿಕವಾಗಿಯೇ ಅಜಿತ್ ತಾಕೀತು ಮಾಡಿದ್ದರು. ಮೇಲುನೋಟಕ್ಕೆ ಅಜಿತ್ ವರ್ತನೆ ಅತಿರೇಕದಂತೆ ಕಾಣಬಹುದೇನೋ. ಆದರೆ, ಆಳದಲ್ಲಿ ಆತನೊಳಗೋರ್ವ ಶಾಂತ ಸ್ವಭಾವದ, ತೃಪ್ತ ಭಾವದ ಸಂತನಿದ್ದಾನೆಂಬಂತೆ ಭಾಸವಾಗುತ್ತೆ!

keywords: thala ajith, actor ajith

The post Thala Ajith: ಸಿಟ್ಟು ಸೆಡವುಗಳ ಹಿಂದಿರೋದು ಎಂಥಾ ಮನಃಸ್ಥಿತಿ? appeared first on Cini Shodha.